advertise here

Search

“ವರ್ಗಾವಣೆ” ಲೀಸ್ಟ್ ನಿಂದಲೇ ಹೆಸ್ರು ಡಿಲೀಟ್ ಮಾಡಿಸಿಕೊಂಡ್ ಬಿಟ್ರಾ ddpu ಮನೋಹರ್ ಕೊಳ್ಳಾ..?!


ಮಿನಿಸ್ಟರ್ಸ್ ಪ್ರಿಯಾಂಕ್ ಖರ್ಗೆ-ಮಧು ಬಂಗಾರಪ್ಪ ಹೆಸ್ರಲ್ಲೇ “ಅಬೇಧ್ಯ ಕೋಟೆ” ನಿರ್ಮಿಸಿಕೊಂಡಿದ್ದಾರಾ.. ಮನೋಹರ್ ಕೊಳ್ಳಾ..!?

ಬೆಂಗಳೂರು: ಮಾತೆತ್ತಿದ್ರೆ ನನಗೆ ಅವ್ರು ಗೊತ್ತು..ಇವ್ರು ಗೊತ್ತು… ಪ್ರಿಯಾಂಕ ಖರ್ಗೆ ನನ್ನ ಗಾಡ್ ಫಾದರ್..ಮಿನಿಸ್ಟರ್ ಮಧು ಬಂಗಾರಪ್ಪ ನನ್ ಜೇಬಲ್ಲಿದ್ದಾರೆ.,ಎಂದೆಲ್ಲಾ ಬಿಲ್ಡಪ್ ಕೊಟ್ಟಿಕೊಂಡು ಅಡ್ಡಾಡುತ್ತಿರುವ ಆಪಾದನೆ ಪದವಿಪೂರ್ವ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕ ಮನೋಹರ್ ಕೊಳ್ಳಾ ಅವರ ಮೇಲಿದೆ.ತಾನು ಹೇಳಿದ ಕೆಲಸವನ್ನು ಮಾಡುವ, ಝೀ ಹುಜೂರ್ ಎಂದ್ಹೇಳುವ ಬಕೆಟ್ ಗಿರಾಕಿಗಳನ್ನಷ್ಟೇ ಅಕ್ಕಪಕ್ಕ ಇಟ್ಟುಕೊಂಡಿರುವ ಬಗ್ಗೆ ಇಲಾಖೆ ತುಂಬಾ ಮಾತಿದೆ.ಇಂಥಾ ಮನೋಹರ್ ಕೊಳ್ಳಾ ಮಿನಿಸ್ಟೆರ್ ಮಧು ಬಂಗಾರಪ್ಪ ಅವರಿಗೆ ಅದೇನ್ ಮೋಡಿ ಮಾಡಿದ್ದಾರೋ ಗೊತ್ತಿಲ್ಲ, ಬಹುತೇಕ ಡಿಡಿಪಿಯುಗಳ ವರ್ಗಾವಣೆಯಾದ್ರೆ ತನ್ನ ಸ್ಥಾನವನ್ನು ಮಾತ್ರ ಭದ್ರ ಮಾಡಿಕೊಂಡಿದ್ದಾರೆ.ಅಲ್ಲದೇ ತನ್ನ ಸ್ಥಾನಕ್ಕೆ ಅವರಿಗಿಂತ ಎಲ್ಲಾ ರೀತಿಯಲ್ಲೂ ಅರ್ಹರು ಎಂದೇಳಲಾಗುತ್ತಿರುವ ಅಧಿಕಾರಿಯನ್ನು ಬಂದು ಕೂರಲಿಕ್ಕೆ ಬಿಟ್ಟಿಲ್ಲ ಎನ್ನುವುದು ಆಶ್ಚರ್ಯದ ಜತೆಗೆ ಆತಂಕಕಾರಿ ಕೂಡ.

ಶ್ರೀಯುತ ಮನೋಹರ್ ಕೊಳ್ಳಾ ಬೆಂಗಳೂರು ದಕ್ಷಿಣ ಜಿಲ್ಲೆ ಉಪನಿರ್ದೇಶಕರಾಗಿ ಬಂದ ಮೇಲೆ ಅನೇಕ ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ. ಕಚೇರಿಯಲ್ಲಿ ತಾನು ಹೇಳಿದ್ದೇ ನಡೆಯಬೇಕೆನ್ನುವ ಧೋರಣೆಯಿಂದ ಹಿಡಿದು ಅಲೆನ್ ಅಕ್ರಮ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಫರ್ಮಾನ್ ಹೊರಡಿಸಿದ ಬೆನ್ನಲ್ಲೇ ಯೂಟರ್ನ್ ಹೊಡೆದು ಅವರಿಗೆ ಸಹಕಾರ ನೀಡುವಂಥ ಮಟ್ಟದವರೆಗಿನ ಬೆಳವಣಿಗೆವರೆಗೂ ಅವರ ಬಗ್ಗೆ ಸಾಕಷ್ಟು ಆಪಾದನೆಗಳಿವೆ.ತಮ್ಮನ್ನು ಓಲೈಸುವ ಅಧಿಕಾರಿ ಸಿಬ್ಬಂದಿಯನ್ನಷ್ಟೆ ತನ್ನ ಸುತ್ತಮುತ್ತ ಇಟ್ಟುಕೊಳ್ಳುತ್ತಿದ್ದಾರೆನ್ನುವ ಮಾತುಗಳಿವೆ. ಕಾಲೇಜುಗಳವರ ವಿಚಾರದಲ್ಲೂ ಅಷ್ಟೆ ಮನೋಹರ್ ಕೊಳ್ಳಾ ಎಂದ್ರೆ ನಾನಾ ಕಾರಣಗಳಿಂದ ಅವ್ರ ಸಹವಾಸವೇ ಬೇಡ ಎಂದು ಅನೇಕ ಕಾಲೇಜ್ ಗಳ ಮ್ಯಾನೇಜ್ಮೆಂಟ್ ಗಳೇ ಮೂಗು ಮುರಿದುಕೊಂಡು ಮಾತನಾಡುತ್ತಾರೆ.

ಮೊನ್ನೆ ನಡೆದ ಡಿಡಿಪಿಯುಗಳ ವರ್ಗಾವಣೆ ವಿಚಾರವನ್ನೇ ತೆಗೆದುಕೊಳ್ಳಿ. ರಾಜ್ಯದ ಬಹುತೇಕ ಜಿಲ್ಲೆಗಳ ಡಿಡಿಪಿಯುಗಳ ವರ್ಗವಾಗುತ್ತೆ.ಆದರೆ ಕೊಳ್ಳಾ ಹೆಸರೇ ಆ ಪಟ್ಟಿಯಲ್ಲಿ ಇರಲಿಲ್ಲ.ಇದರರ್ಥ ಏನು.? ಹೇಳುತ್ತಾ ಹೋದರೆ ಇದಕ್ಕೆ ಇರುವ ಕಾರಣಗಳು ಹಲವಂತೆ.ಮಾತೆತ್ತಿದ್ರೆ ನಾನು ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರ ಬಲಗೈ ಭಂಟ ಎನ್ನುವುದನ್ನೇ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತಿದ್ದಾರೆನ್ನುವ ಮಾತುಗಳು ಬಲವಾಗಿ ಕೇಳಿಬಂದಿವೆ.ರಾಜ್ಯದಲ್ಲಿ ಯಾರ ಟ್ರಾನ್ಸ್ ಫರ್ ಬೇಕಾದ್ರೆ ಆಗಬಹುದು,ನನ್ನದು ಮಾತ್ರ ನೋ ಚಾನ್ಸ್ ಎಂದು ಅನೇಕರ ಬಳಿ ಹೇಳಿಕೊಂಡು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದರಂತೆ.ಅವರು ಹೇಳಿದಂತೆಯೇ ನಡೆದಾಗ ಡಿಪಾರ್ಟ್ಮೆಂಟೇ ಇವ್ರ ಕೆಪಾಸಿಟಿಯ ಬಗ್ಗೆ ಮಾತನಾಡಿಕೊಂಡಿತ್ತಂತೆ.

ತಮಗಾಗದವರನ್ನು ಟಾರ್ಗೆಟ್ ಮಾಡಿ ಅವರಿಂದ ಎಲ್ಲಾ ಸ್ಥಾನಮಾನ,.ಕೆಲಸ ಕಿತ್ತುಕೊಳ್ಳುವ ದ್ವೇಷ –ಪ್ರತಿಕಾರದ ಮನಸ್ಥಿತಿ ಕೊಳ್ಳಾ ಅವರಲ್ಲಿದೆ ಎನ್ನುವ ಆಪಾದನೆಯಿದೆ.ತಾನು ಹೇಳಿದ್ದೇ ಆಗಬೇಕು..ತನ್ನ ಗಮನಕ್ಕೆ ಬಾರದೆ ಒಂದು ಸಣ್ಣ ಪೇಪರ್ ತುಂಡು ಕೂಡ ಎಲ್ಲೂ ಲೀಕ್ ಆಗಬಾರದು ಎನ್ನುವ ಫರ್ಮಾನ್ ಕೂಡ ಹೊರಡಿಸಿದ್ದಾರಂತೆ. ಆರ್ ಟಿ ಯ ನಲ್ಲಿ ಮಾಹಿತಿ ಕೇಳುವವರಿಗೂ ಅಷ್ಟೇ ಅಂತೆ, ಮಾಹಿತಿ ಕೊಡುವ ಮುನ್ನ ಅದನ್ನು ಕೊಡಬೇಕೋ..ಬೇಡವೋ ಎನ್ನುವುದನ್ನು ಡಿಸೈಡ್ ಮಾಡೋದು ಮಾಹಿತಿ ಹಕ್ಕು ಕಾಯ್ದೆಯ ನಿಯಮಗಳಲ್ಲವಂತೆ,ಈ ಮಹಾನುಭಾವ ಕೊಳ್ಳಾ ಅವರಂತೆ. ಮಾಹಿತಿ ಕೊಡುವ ವಿಚಾರದಲ್ಲೂ ಅಷ್ಟೇ ಅಂತೆ. ಸಾಹೇಬ್ರು ಮೂಡ್ ನಲ್ಲಿದ್ದರೆ ಮಾಹಿತಿ..ಇಲ್ಲಾಂದ್ರೆ ಇಲ್ಲವಂತೆ.ಏಕೆ ಎಂದು ಕೇಳಿದ್ರೆ ಇದು ನನ್ನ ಆಫೀಸ್..ಇಲ್ಲಿ ನಾನೇ ಬಾಸ್…ನನ್ನನ್ನು ಪ್ರಶ್ನಿಸೊಕ್ಕೆ ನೀವ್ಯಾರು ಎಂಬ ಉತ್ತರ ಸಿದ್ದವಿಟ್ಟುಕೊಂಡಿರುತ್ತಾರಂತೆ. ನಮ್ಮ ಅನುಭವದಲ್ಲಿ ಇಂಥಾ ಡಿಡಿಪಿಯು ಅನ್ನು ನೋಡಿಯೇ ಇಲ್ಲ ಎಂದು ಇಡೀ ಡಿಪಾರ್ಟ್ಮೆಂಟೇ ಹೇಳುತ್ತಿದೆ ಎಂದ್ರೆ ಮನೋಹರ್ ಕೊಳ್ಳಾ ಅವರ ಹವಾ ಹೇಗಿರಬಹುದೆನ್ನುವುದನ್ನು ಅಂದಾಜಿಸಬಹುದು.

ALSO READ :  ಸಿ.ಪಿ. ಯೋಗೇಶ್ವರ್ ಹೆಸರು ಫೈನಲ್ ಆದ ಮೇಲೂ, ಡಿಕೆಶಿ ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿದ್ದೇಕೆ..?!

ಇಂಥಾ ಮನೋಹರ್ ಕೊಳ್ಳಾ ಅವರು ತಮ್ಮ ಸ್ಥಾನಕ್ಕೆ ಬರಲಿದ್ದ ಪಾಲಾಕ್ಷಪ್ಪ( ಬಳ್ಳಾರಿಯಲ್ಲಿ ಸರ್ಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು) ಎನ್ನುವವರಿಗಿದ್ದ ಅವಕಾಶವನ್ನು ತಪ್ಪಿಸಿದ್ದಾರಂತೆ.ಇಲಾಖೆಯ ಮೂಲಗಳು ಹೇಳುವ ಪ್ರಕಾರವೇ ಬೆಂಗಳೂರು ದಕ್ಷಿಣ ಜಿಲ್ಲೆಗೆ  ಡಿಡಿಪಿಯು ಆಗಿ  ಬರಬೇಕಿದ್ದುದು ಪಾಲಾಕ್ಷಪ್ಪ ಅವರಂತೆ.ಆದರೆ ಇದಕ್ಕೆ ಮನೋಹರ್ ಕೊಳ್ಳ ಅವಕಾಶ ಮಾಡಿಕೊಡಲಿಲ್ಲವಂತೆ.ಅವರೇ ಹೇಳಿಕೊಳ್ಳುವಂತೆ ತಮ್ಮ ಗಾಡ್ ಫಾದರ್ ಮೂಲಕ ಪಾಲಾಕ್ಷಪ್ಪ ಅವರ ಆಗಮನಕ್ಕೆ ಕೊಕ್ಕೆ ಹಾಕಿಸಿದರಂತೆ. ತಮ್ಮ ಅರ್ಹತೆ-ಸಾಮರ್ಥ್ಯದಂಥ ಮಾನದಂಡ ಗಳನ್ನಷ್ಟೇ ನಂಬಿಕೊಂಡು ಕೆಲಸ ಮಾಡುವ  ಪಾಲಾಕ್ಷಪ್ಪ ಅವರು ಯಾವುದೇ ಬೇರೆ ಮಾರ್ಗ ಬಳಸದೆ ಸರ್ಕಾರದ ಆದೇಶದಂತೆ ಬೆಂಗಳೂರು ಉತ್ತರ ಜಿಲ್ಲೆ ಡಿಡಿಪಿಯು ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಅವರಿಗಿರುವ ಆತಂಕ ಬೆಂಗಳೂರು ಉತ್ತರ ವಿಭಾಗದಲ್ಲಿನ ಆಡಳಿತಾತ್ಮಕ ವಿಚಾರಗಳಲ್ಲು ಕೊಳ್ಳಾ ಹಸ್ತಕ್ಷೇಪ ಮಾಡ್ತಾರಾ ಎನ್ನೋದು.ಆದರೆ ಅದು ಖಂಡಿತಾ ಆಗೊಲ್ಲ ಎಂದಂತೂ ಹೇಳಲಿಕ್ಕೆ ಆಗೊಲ್ಲ.ಏಕಂದ್ರೆ ಹಿಂದಿದ್ದವರ ವಿಷಯದಲ್ಲಿ ಕೊಳ್ಳಾ ತಮ್ಮ ಇತಿಮಿತಿಗಳನ್ನು ಮೀರಿ ಕೆಲಸ ಮಾಡಿದ್ದರೆನ್ನುವ ಮಾತುಗಳಿವೆ.

ಅದೇನೇ ಇರಲಿ, ಮನೋಹರ್ ಕೊಳ್ಳಾ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ವರ್ಗಾವಣೆಯಿಂದ ತಪ್ಪಿಸಿಕೊಳ್ಳೊಕ್ಕೆ ಅದೇನ್ ಕರಾಮತ್ತು ಮಾಡಿದ್ದಾರೋ ಅವರಿಗೇ ಗೊತ್ತು.ಆದರೆ ಇಡೀ ಕಚೇರಿಯಲ್ಲಿ ತಮಗೆ ಜಿ ಹುಝೂರ್  ಎನ್ನುವವರನ್ನು ಮಾತ್ರ ಬಲಕ್ಕೆ-ಎಡಕ್ಕೆ ಇಟ್ಟುಕೊಂಡಿ ದ್ದಾರಂತೆ.ತಮ್ಮ ಕಚೇರಿಯಲ್ಲಿ ನಡೆಯುವಂತ ಯಾವುದೆ ವಿಚಾರಗಳ ಒಂದು ಸಣ್ಣ ಸೂಕ್ಷ್ಮವೂ ಹೊರ ಜಗತ್ತಿಗೆ ಗೊತ್ತಾಗಾದಂತೆ ಗಡಿರೇಖೆಯೊಂದನ್ನು ಎಳೆದುಬಿಟ್ಟಿದ್ದಾರಂತೆ.ಅದನ್ನು ಪಾಲಿಸುವಾತರಿಗೆ ಮಾತ್ರ ತಮ್ಮಲ್ಲಿ ಕೆಲಸ ಮಾಡುವ ಅವಕಾಶ, ಮೀರಿದವರಿಗೆ ವರ್ಗಾವಣೆ ಶಿಕ್ಷೆ ಫಿಕ್ಸ್ ಮಾಡಿಬಿಟ್ಟಿ ದ್ದಾರೆನ್ನುವ ಮಾತುಗಳಿವೆ.ಕೊಳ್ಳಾ ಅವರ ಧೋರಣೆ-ವರ್ತನೆ ಹಾಗು ಮನಸ್ತಿತಿ ಪಿಯು ಬೋರ್ಡ್ ನಲ್ಲಿರುವ ಅನೇಕರನ್ನು ನಖಶಿಖಾಂತ ಉರಿಸಿದ್ರೂ ಸಾಹೇಬ್ರು ಪದೇ ಪದೇ ಟ್ರಂಪ್ ಕಾರ್ಡ್ ಆಗಿ ಬಳಸುತ್ತಾರೆನ್ನಲಾಗುವ ಮಿನಿಸ್ಟರ್ ಮಧು ಬಂಗಾರಪ್ಪ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ಹೆದರಿಕೊಂಡು ಸುಮ್ಮನಾಗಿದ್ದಾರೆ.


Political News

“ವರ್ಗಾವಣೆ” ಲೀಸ್ಟ್ ನಿಂದಲೇ ಹೆಸ್ರು ಡಿಲೀಟ್ ಮಾಡಿಸಿಕೊಂಡ್ ಬಿಟ್ರಾ ddpu ಮನೋಹರ್ ಕೊಳ್ಳಾ..?!

“ಬಿಕ್ಲ ಶಿವು” ಮರ್ಡರ್‌-MLA ಭೈರತಿ ಬಸವರಾಜ್‌ ರಾಜಕೀಯ ಭವಿಷ್ಯ ಅತಂತ್ರ.!?

ರಾಷ್ಟ್ರವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ಕ್ಯಾನ್ಸರ್..!?

ಎಲೆನ್ (allen) ಅಕ್ರಮದ ಸಕ್ರಮಕ್ಕೆ ಮುಂದಾಯ್ತಾ ಶಿಕ್ಷಣ ಇಲಾಖೆ..? ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ  ಡಿಡಿಪಿಯು(ddpu) ಮನೋಹರ್  ಕೊಳ್ಳಾ “ಯೂ ಟರ್ನ್” ಹಿಂದಿದ್ಯಾ “ಮೆಗಾ ಪ್ಲ್ಯಾನ್”-“ಬಿಗ್ ಡೀಲ್”..!?

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

Scroll to Top