advertise here

Search

IAS‌ ಸಿಂಧೂ ಬಿ ರೂಪೇಶ್ ಎತ್ತಂಗಡಿ..!-ಕೇಂದ್ರ ಸೇವೆಗೆ ನಿಯೋಜನೆ…!


ಬೆಂಗಳೂರು: ಪಿಯು ಬೋರ್ಡ್ ನ ನಿರ್ದೇಶಕರಾಗಿದ್ದ ಮಹಿಳಾ ಐಎಎಸ್‌ ಅಧಿಕಾರಿ ಸಿಂಧೂ ಬಿ ರೂಪೇಶ್‌ ಅವರನ್ನು ದಿಢೀರ್‌ ವರ್ಗ ಮಾಡಲಾಗಿದೆ.ಇಲಾಖೆ ಯಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡುವ ಅವಕಾಶವಿದ್ದಾಗ್ಯೂ ನಿಷ್ಕ್ರೀಯವಾಗಿದ್ದರೆನ್ನುವ ಆಪಾದನೆ ಹೊತ್ತಿದ್ದ ಐಎಎಸ್ ಅಧಿಕಾರಿ ಸಿಂದೂ ಬಿ ರೂಪೇಶ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.ಸಿಂಧೂ ಅವರನ್ನು ಕೇಂದ್ರ ಸೇವೆಗೆ ನಿಯೋಜನೆ ಮಾಡಲಾಗಿದೆ ಎನ್ನಲಾಗ್ತಿದೆ.ಅಲ್ಲಿ ಅವರು 5 ವರ್ಷಗಳ ಕಾಲ ಕೆಲಸ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಸಿಂಧೂ ಬಿ ರೂಪೇಶ್ ಪಿಯು ಬೋರ್ಡ್ ಗೆ ಬಂದು ಹತ್ತಿರತ್ತಿರ 3 ವರ್ಷಗಳಾಗಿದ್ದವು.ಬೋರ್ಡ್ ಮಟ್ಟದಲ್ಲಿ ಮಾಡಲು ಸಾಕಷ್ಟು ಅವಕಾಶಗಳಿದ್ದವು, ಆದರೆ ಸಂಪೂರ್ಣ ನಿಷ್ಕ್ರೀಯರಾಗಿ ಕೆಲವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆನ್ನುವ ಆಪಾದನೆ ಕೇಳಿಬಂದಿತ್ತು. ಸರ್ಕಾರದ ಮಟ್ಟದಲ್ಲಿಯೂ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ದೂರು ನೀಡಲಾಗಿತ್ತಂತೆ.ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಅಂತಿಮವಾಗಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎನ್ನುವುದು ಇಲಾಖೆಯಲ್ಲೇ ಹರಿದಾಡುತ್ತಿರುವ ಸುದ್ದಿ.

ಕಾಲೇಜುಗಳ ವಿಚಾರದಲ್ಲಿ ನಡೆಯುತ್ತಿರುವ ವ್ಯಾಪಕ ಅಕ್ರಮ-ಅನ್ಯಾಯ-ಅವ್ಯವಹಾರ-ಹಗರಣಗಳ ಬಗ್ಗೆ ಸಾಲು ಸಾಲು ದೂರುಗಳು ಬಂದಿದ್ದರೂ ಸಿಂಧೂ ಅವರು ಅವುಗಳ ವಿರುದ್ಧ ಕ್ರಮ ಕೈಗೊಂಡಿದ್ದಕ್ಕಿಂತ ತನ್ನ ಕೆಳಹಂತದ ಅಧಿಕಾರಿಗಳಿಗೆ ಅದನ್ನು ವರ್ಗಾಯಿಸಿ ಕೈ ತೊಳೆದುಕೊಂಡಿದ್ದೇ ಹೆಚ್ಚಂತೆ.ಶೈಕ್ಷಣಿಕವಾಗಿ ಸಾಮಾಜಿಕ ನ್ಯಾಯ ಸಲ್ಲಿಸಬೇಕಿದ್ದರೂ ಕೆಲವರನ್ನು ಓಲೈಸುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದರೆನ್ನುವುದು ಅವರ ಮೇಲಿರುವ ಗಂಭೀರ ಆಪಾದನೆ. ಕಾಲೇಜುಗಳ ಅಕ್ರಮದ ಬಗ್ಗೆ ವ್ಯಾಪಕ ದೂರುಗಳಿದ್ದಾಗ್ಯೂ ಅವರು ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಆಸಕ್ತಿ ತೋರುತ್ತಿರಲಿಲ್ಲ ಎನ್ನುವ ಮಾತುಗಳಿವೆ.ಈ ಬಗ್ಗೆ ಏನೇ ಕೇಳಿದ್ರೂ ತಮ್ಮ ಕೆಳಹಂತದ ಅಧಿಕಾರಿಗಳತ್ತ ಬೊಟ್ಟು ಮಾಡಿ ತೋರಿಸುತ್ತಿದ್ದರು. ಇಲ್ಲವೇ ನಿರುತ್ತರರಾಗುತ್ತಿದ್ದರು.ಸದಾ ಒತ್ತಡದಲ್ಲೇ ಕೆಲಸ ಮಾಡುತ್ತಿದ್ದಂತೆ ತೋರುತ್ತಿದ್ದರು.ಅವರ ಮೇಲೆ ಅದ್ಯಾರ ಒತ್ತಡ ಇರುತ್ತಿತ್ತೋ ಎನ್ನುವುದು ಗೊತ್ತಾಗುತ್ತಿರಲಿಲ್ಲ.

ಶಾಲಾ ಕಾಲೇಜುಗಳ ಅಕ್ರಮದ ವಿರುದ್ಧ ದ್ವನಿ ಎತ್ತುವವರೇ ಕಡಿಮೆ..ಅಂಥದ್ದರಲ್ಲಿ ನಾವು ಎಲ್ಲಾ ದಾಖಲೆಗಳನ್ನು ಕ್ರೋಢೀಕರಿಸಿ ಕೊಟ್ಟರೂ ಮೇಡಮ್ ಯಾವುದೇ ರೀತಿಯಲ್ಲೂ ಕ್ರಮ ಕೈಗೊಳ್ಳುತ್ತಿರಲಿಲ್ಲ.ಯಾಕೆ ಎಂದು ಕೇಳಿದ್ರೆ ಅದಕ್ಕೆ ಉತ್ತರವೇ ಇರುತ್ತಿರಲಿಲ್ಲ.ಕೊನೆ ಕೊನೆಗೆ ಮೇಡಮ್ ಅವರ ಮನಸ್ಥಿತಿ ಹೇಗಾಗಿತ್ತು ಎಂದರೆ ನಮ್ಮನ್ನು ತಮ್ಮ ಕಚೇರಿಯೊಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ.ಅವರ ಆಪ್ತರ ಬಳಿ ನಾವೇನಾದ್ರೂ ಬಂದ್ರೆ ಒಳಗೆ ಬಿಡಬೇಡಿ ಎಂದ್ಹೇಳುತ್ತಿದ್ದರು.ಇವರೇಕೆ ಹೀಗೆ ಮಾಡುತ್ತಿದ್ದಾರೆ ಎಂದು ಬೇಸರವಾಗುತ್ತಿತ್ತು.

ಓರ್ವ ಐಎಎಸ್ ಅಧಿಕಾರಿ ಅವ್ಯವಸ್ಥೆ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ನಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಏಕೆ ಎಂದು ಪ್ರಶ್ನೆ ಮೂಡುತ್ತಿತ್ತು.ಆದ್ರೆ ನಮಗೆ ನಂತರ ತಿಳಿದುಬಂದಿದ್ದೇನೆಂದರೆ ಮೇಡಮ್ ಅವರು ಸಾಕಷ್ಟು ಒತ್ತಡಗಳಿಗೆ ಸಿಲುಕಿ ಕೆಲಸ ಮಾಡುತ್ತಿದ್ದಾರೆಂದು.ಅಂಥಾ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರೆ ಒತ್ತಡವೆಲ್ಲಾ ಸಾಮಾನ್ಯ.ಅದರೆ ನ್ಯಾಯಸಮ್ಮತವಾಗಿ ಕೆಲಸ ಮಾಡಲು ಇರುವ ಅವಕಾಶಗಳ ಅನ್ವಯ ಕೆಲಸ ಮಾಡಬೇಕಿತ್ತು ಅಲ್ವಾ ಎಂದೆನಿಸುತ್ತಿತ್ತು.ಸಿಂಧೂ ಮೇಡಮ್ ಅವರ ಬಗ್ಗೆ ಸಾಕಷ್ಟು ಒಳ್ಳೆಯ ಅಧಿಕಾರಿ ಎಂದು ಕೇಳಿಪಟ್ಟಿದ್ದೆ.ಆದರೆ ಇಲ್ಲಿಗೆ ಬಂದ ಮೇಲೆ ಅವರು ಕೆಲಸ ಮಾಡಿದ ರೀತಿ ನೋಡಿ ನಿರಾಶೆ-ಬೇಸರವಾಯಿತು.ಯಾವಾಗ ಹೋಗ್ತಾರಪ್ಪಾ ಎಂದೆನಿಸಿದ್ದು ಕೂಡ ಸುಳ್ಳಲ್ಲ ಎನ್ನುತ್ತಾರೆ ಪಾಠಶಾಲೆ ಶೈಕ್ಷಣಿಕ ಸೇವಾ ಸಂಸ್ಥೆ ಸಂಚಾಲಕ ಗಂಗಾಧರ್.

ALSO READ :  ಕಾವೇರಿ-5 ನೇ ಹಂತದ ಯೋಜನೆ ಮಾಡಿದ್ದು ಬಿಜೆಪಿ, ಹೆಸರು ತೆಗೆದುಕೊಳ್ಳುತ್ತಿರುವುದು ಕಾಂಗ್ರೆಸ್‌: ಆರ್‌.ಅಶೋಕ

ಕೆಲವು ಮೂಲಗಳ ಪ್ರಕಾರ ಸಿಂಧೂ ಅವರು ದಕ್ಷ ಹಾಗೂ ಪ್ರಾಮಾಣಿಕರಾಗಿದ್ದರೂ ಅವರನ್ನು ನಿಯಂತ್ರಿಸುವ ಶಕ್ತಿಗಳು ಅವರು ಕೆಲಸ ಮಾಡುತ್ತಿದ್ದ ಇಲಾಖೆಯಲ್ಲೇ ಇದ್ದರೆನ್ನುವ ಮಾತುಗಳಿವೆ.ಹಾಗೆ ಅವರನ್ನು ನಿಯಂತ್ರಿಸುತ್ತಿದ್ದವರಲ್ಲಿ ಕೆಎಎಸ್ ಅಧಿಕಾರಿಯೋರ್ವರು ಇದ್ದರೆನ್ನುವ ಮಾತಿದೆ.ಸಿಂಧೂ ಅವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದರೂ ಸಿಂಧೂ ಅವರಿಗೇನೆ ಸಲಹೆ-ಅಭಿಪ್ರಾಯ ಕೊಡುವ ಮಟ್ಟದಲ್ಲಿ ಆ ಅಧಿಕಾರಿ ಪ್ರಭಾವ ಬೀರಿದ್ದರಂತೆ.ಮೇಡಮ್ ಏನೇ ನಿರ್ದಾರ ಕೈಗೊಳ್ಳಬೇಕು ಎಂದರೂ ತನ್ನದೇ ಸಲಹೆ ಪಡೆಯುವಂತೆ ಆವರಿಸಿಕೊಂಡಿದ್ದರಂತೆ.ಗೊತ್ತಿದ್ದೋ ಗೊತ್ತಿಲ್ಲದೆಯೋ ಮೇಡಮ್ ಆ ಅಧಿಕಾರಿಯನ್ನು ಅತಿಯಾಗಿ ಅವಲಂಭಿಸಿದ್ದರಂತೆ. ಉತ್ತಮ ಕೆಲಸ ಮಾಡೊಕ್ಕೆ ಸಾಕಷ್ಟು ಅವಕಾಶಗಳಿದ್ದಾಗ್ಯೂ ಅದ್ಯಾವುದನ್ನು ಮಾಡದೆ ನಿಷ್ಕ್ರೀಯವಾಗಿ ಉಳಿಯುವುದಕ್ಕೆ ಕಾರಣವೇ ಆ ಅಧಿಕಾರಿ ಎಂದು ಇಡೀ ಕ್ಯಾಂಪಸ್ ಮಾತನಾಡಿಕೊಳ್ಳುತ್ತಿತ್ತು.

ಅದೇನೇ ಇರಲಿ, ಸಿಂಧೂ ರೂಪೇಶ್ ಅವರು ಪಿಯು ಬೋರ್ಡ್ ಗೆ ಬಂದಾಗ ಸಾಕಷ್ಟು ನಿರೀಕ್ಷೆಗಳು ಇದ್ದವು,.ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಕೂಡ ಆರಂಭದಲ್ಲಿ ಕೆಲಸ ಮಾಡಿದ್ರು.ಆದರೆ ಅದೇಕೋ ನಂತರದಲ್ಲಿ ಆ ಉತ್ಸಾಹವೇ ಕಡಿಮೆ ಆಗುತ್ತಾ ಬಂತು.ಕೊನೆ ಕೊನೆಗಂತೂ ಇವ್ರೇನಾ ಆ ಸಿಂಧೂ ರೂಪೇಶ್ ಎನ್ನುವ ಶಂಕೆ ಕಾಡಲಾರಂಭಿಸಿತ್ತು.ಅವರ ಕಾರ್ಯವೈಖರಿ ಬಗ್ಗೆ ದಂಡಿ ದಂಡಿ ದೂರುಗಳು ಸಲ್ಲಿಕೆಯಾದವು.ಕೆಲವು ಮೂಲಗಳ ಪ್ರಕಾರ ಸಿಂಧೂ ಬಿ ರೂಪೇಶ್ ಅವರೇ ವರ್ಗಾವಣೆ ಬೇಕೆಂದು ಪತ್ರ ಬರೆದಿದ್ದರೆನ್ನಲಾಗ್ತಿದೆ.ಆದರೆ ಅದು ಎಷ್ಟರ ಮಟ್ಟಿಗೆ ಸರಿ ಎನ್ನುವುದರ ಬಗ್ಗೆ ಖಚಿತತೆ ಇಲ್ಲ.ಅವರ ಮೇಲಿನ ದೂರುಗಳಿಗೋ,ಅಥವಾ ಅವರೇ ಮನವಿ ಮಾಡಿಕೊಂಡ ಮೇರೆಗೋ ಸಿಂಧೂ ಅವರನ್ನು ಕೇಂದ್ರ ಸೇವೆಗೆ ವರ್ಗಾವಣೆ ಮಾಡಲಾಗಿದೆ. ಅವರ ವರ್ಗಾವಣೆಯಿಂದ ಕೆಲವರಿಗೆ ಸಂತಸವಾಗಿದ್ದರೆ ಕೆಲವರಿಗೆ ಬೇಸರ ತಂದಿರುವುದು ಕೂಡ ಸತ್ಯ.


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top