
ಬೆಂಗಳೂರು: ಮತ್ತೊಮ್ಮೆ ನ್ಯೂಸ್ ಫಸ್ಟ್ ಬಗ್ಗೆ ಬರೆಯಬೇಕಾಗ್ತಿದೆ…ಅಲ್ಲಿ ಕೆಲಸ ಮಾಡ್ತಿರುವ ಮಾದ್ಯಮ ಸ್ನೇಹಿತರ ದೃಷ್ಟಿಯಲ್ಲಿ ಇದು ಒಂದ್ರೀತಿ ಪಾಸಿಟಿವ್ ಆದಂಥ ಸುದ್ದಿನೇ.(.ಅದನ್ನು ಬೇರೆ ರೀತಿ ಅರ್ಥೈಸುವಂತವರಿಗೆ ನಾವೇನು ಮಾಡ್ಲಿಕ್ಕಾಗೊಲ್ಲ ಬಿಡಿ). ಸಂಬಳ ಸಿಗದೆ ಕಷ್ಟದಲ್ಲಿರುವ ಸ್ನೇಹಿತರ ಪಾಲಿಗೆ ಇದೊಂದು ರೀತಿ ಚೇತೋಹಾರಿಯಾದ ವಿಚಾರ.ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಸಂಕಷ್ಟದಲ್ಲಿದೆ ಎಂದೇ ಬಿಂಬಿಸಲಾಗ್ತಿದ್ದ ಮ್ಯಾನೇಜ್ಮೆಂಟ್ ನ ಬವಣೆಯೂ ಈ ಮೂಲಕ ದೂರವಾಗಿದೆ ಎನ್ನುವುದು ಕೂಡ ಸಮಾಧಾನದ ವಿಚಾರ..ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಚಾನೆಲ್ ನ ಕೆಲವು ವಿಶ್ವಸನೀಯ ಮೂಲಗಳಿಂದ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸಂಕಷ್ಟದಲ್ಲಿದೆ ಎಂದು ಬಿಂಬಿಸಲಾಗುತ್ತಿರುವ ಚಾನೆಲ್ ಗೆ ಹೂಡಿಕೆದಾರರು ಕೊನೆಗೂ ಸಿಕ್ಕಿದ್ದಾರಂತೆ.ಹಾಸನ ಮೂಲದ ರಾಜಕಾರಣಿಯೊಬ್ಬರ ಸಂಬಂಧಿ ಚಾನೆಲ್ ಗೆ ಬಂಡವಾಳ ಹಾಕೊಕ್ಕೆ ಮುಂದೆ ಬಂದಿದ್ದಾರಂತೆ. ನಿಜಕ್ಕೂ ಹಾಗಾದಲ್ಲಿ ಅದಕ್ಕಿಂತ ದೊಡ್ಡದಾದ ಸಂತಸದ ವಿಚಾರ ಮತ್ತೊಂದಿರಲಾರದೇನೊ..?!
ರವಿಕುಮಾರ್ ಮತ್ತು ಮಾರುತಿ ಎನ್ನುವ ಮಾದ್ಯಮ ದಿಗ್ಗಜರ ದಿಟ್ಟ ನಾಯಕತ್ವ-ಮಾರ್ಗದರ್ಶನದಲ್ಲಿ ಮೂಡಿಬರುತ್ತಿರುವ ನ್ಯೂಸ್ ಫಸ್ಟ್ ಟಿಆರ್ ಪಿ ಪಟ್ಟಿಯ ಮಾಹಿತಿ ಪ್ರಕಾರವೇ ಟಾಪ್-5ರಲ್ಲಿ ಇತರೆ ಚಾನೆಲ್ ಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಬೆಳೆಯುತ್ತಿದೆ.ವೃತ್ತಿಪರ ಹಾಗು ಅನುಭವಿಗಳಿರುವ ಚಾನೆಲ್ ಕ್ಲುಪ್ತ ಸಮಯದಲ್ಲಿ ಜನಪ್ರಿಯತೆ ಪಡೆದಿರುವುದು ಕೂಡ ಅಷ್ಟೇ ಸತ್ಯ.ಎಲ್ಲವೂ ಚೆನ್ನಾಗಿ ನಡೆಯುವಾಗಲೇ ಚಾನೆಲ್ ಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು ಈಗಲೂ ಆಶ್ಚರ್ಯದ ಜತೆಗೆ ಶಂಕೆ ಮೂಡಿಸೋದು ಸತ್ಯ.ಇದು ಚಾನೆಲ್ ಮ್ಯಾನೇಜ್ಮೆಂಟ್ ನ ಆಂತರಿಕ ವಿಚಾರವಾದ್ರೂ ಅಲ್ಲಿ ಕೆಲಸ ಮಾಡ್ತಿರುವ ಮಾದ್ಯಮಮಿತ್ರರ ಬದುಕುಗಳ ಕಾರಣಕ್ಕೆ ಇದನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗ್ತದೆ.ಕನ್ನಡ ಫ್ಲ್ಯಾಶ್ ನ್ಯೂಸ್ ಇದರ ಬಗ್ಗೆ ಸುದ್ದಿ ಮಾಡುವುದರ ಮೂಲಕ ದ್ವನಿ ಎತ್ತಿದ್ದು ಕೂಡ ಇದೇ ಬದ್ಧತೆ ಕಾರಣಕ್ಕೆ.

“ಮರಳಿ ಗೂಡಿಗೆ ಸೋಮಣ್ಣ ಮಾಚಿಮಾಡ..! ಇಂತದ್ದೊಂದು ಸುದ್ದಿ ಕೂಡ ನ್ಯೂಸ್ ಫಸ್ಟ್ ನಲ್ಲಿ ಹರಿದಾಡುತ್ತಿದೆ. ಕನ್ನಡ ನ್ಯೂಸ್ ಚಾನೆಲ್ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ನಿರೂಪಣೆಯಿಂದಲೇ ಹೆಸರಾಗಿದ್ದ ಆಂಕರ್ ಸೋಮಣ್ಣ ಮಾಚಿಮಾಡ.ಅಪಾರ ಅಭಿಮಾನ ಬಳಗವೂ ಅವರಿಗಿದೆ.ನ್ಯೂಸ್ ಫಸ್ಟ್ ನ ಸ್ಟಾರ್ ಆಂಕರ್ ಎಂದೇ ಗುರುತಿಸಿಕೊಂಡಿ್ದ್ದ ಸೋಮಣ್ಣ ತೀವ್ರವಾಗಿ ಕಾಡಿದ ಅನಾರೋಗ್ಯದಿಂದಾಗಿ ಬಿಡುವು ಪಡೆದಿದ್ದರು.ಇದೀಗ ಅವರ ಆರೋಗ್ಯ ಸುಧಾರಿಸಿದೆ.ಗಣನೀಯವಾದ ಸುಧಾರಣೆ ಕಂಡುಬಂದಿದೆ ಎನ್ನಲಾಗ್ತಿದೆ.ನ್ಯೂಸ್ ಫಸ್ಟ್ ನಲ್ಲಿ ಅಂಕರ್ ಗಳ ಬಹುದೊಡ್ಡ ಕೊರತೆ ಕಾಡುತ್ತಿರುವ ವೇಳೆ ಸೋಮಣ್ಣ ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆಯಂತೆ.ಸೋಮಣ್ಣ ಕೂಡ ಕಮ್ ಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರಂತೆ.ಅಲ್ಲದೆ ಮಾರುತಿ-ರವಿಕುಮಾರ್ ಅವರ ಅತ್ಯಾಪ್ತ ಶಿಷ್ಯ ಎಂದೂ ಕರೆಯಿಸಿಕೊಂಡಿದ್ದಾರೆ.ಆಂಕರ್ ಗಳಿಲ್ಲದೆ ಸಂಕಷ್ಟದಲ್ಲಿರುವ ವೇಳೆ ತಮ್ಮ ಗುರುಗಳ ಮಾತಿಗೆ ಒಲ್ಲೆ ಎನ್ನೋದು ಕಷ್ಟ..ಹಾಗಾಗಿ ಅವರ ಆಮಂತ್ರಣವನ್ನು ಒಪ್ಪಿ ಚಾನೆಲ್ ಗೆ ಮರಳೊಕ್ಕೆ ಸೋಮಣ್ಣ ನಿರ್ದರಿಸಿದ್ದಾರೆನ್ನುವ ಮಾತುಗಳಿವೆ.ಎಲ್ಲವೂ ಅಂದುಕೊಂಡಂತೆ ಆದರೆ ಸೋಮಣ್ಣ ಮಾಚಿಮಾಡ ಚಾನೆಲ್ ಸ್ಕ್ರೀನ್ ನಲ್ಲಿ ಸ್ಟಾರ್ ಅಂಕರ್ ಆಗಿ ರಾರಾಜಿಸುವುದರಲ್ಲಿ ಅನುಮಾನವೇ ಇಲ್ಲ.

ಚಾನೆಲ್ ಗೆ ಹಣದ ಹರಿವು ಎಂದಿನಂತೆ ಬರುತ್ತಿದ್ದರೂ ಅದ್ಹೇಕೆ ಆರ್ಥಿಕ ಸಂಕಷ್ಟ ಎದುರಾಯಿತೋ ಎನ್ನುವುದು ಈಗಲೂ ಅಲ್ಲಿನ ಸಿಬ್ಬಂದಿಗೆ ಯಕ್ಷಪ್ರಶ್ನೆಯಂತೆ. ಹಾಗಾದ್ರೆ ಚಾನೆಲ್ ಗೆ ಬರುತ್ತಿದ್ದ ಹಣ ಎಲ್ಲೋಗ್ತಿದೆ ಎನ್ನುವುದರ ಬಗ್ಗೆ ಬೇರೆಯದೇ ಆದ ಕಥೆಗಳಿವೆ.ಅದರ ಚರ್ಚೆ ಇಲ್ಲಿ ಅಪ್ರಸ್ತುತ ಬಿಡಿ..ಆದರೆ ಸಿಬ್ಬಂದಿ ಹೇಳೋದು ಸರ್ ಅವ್ರ ಚಾನೆಲ್ ಅದರಿಂದ ಬರುವ ಹಣವನ್ನು ಏನ್ ಬೇಕಾದ್ರೂ ಮಾಡಿಕೊಳ್ಳಲಿ.ಅದು ಅವರ ವಿವೇಚನೆಗೆ ಬಿಟ್ಟ ವಿಚಾರ.ನಮ್ಮ ಪ್ರಶ್ನೆ ಇರೋದು ನಮಗೆ ನಮ್ಮ ಶ್ರಮದ ಸಂಬಳವನ್ನೇಕೆ ಕೊಡುತ್ತಿಲ್ಲ.? ನಮ್ಮ ಬದುಕುಗಳೊಂದಿಗೆ ಏಕೆ ಚೆಲ್ಲಾಟ ಆಡಲಾಗುತ್ತಿದೆ..? ಎನ್ನೋದಷ್ಟೇ.
ಅದು ಒಂದ್ ತಿಂಗಳಾದ್ರೆ ಪರ್ವಾಗಿಲ್ಲ,. ಎರಡ್ಮೂರು ತಿಂಗಳಾದ್ರೆ ನಾವೆಲ್ಲಿಗೆ ಹೋಗ್ಬೇಕು..ನಮ್ಮನ್ನು ನಂಬಿದವರನ್ನೇ ನು ಬೀದಿಪಾಲು ಮಾಡೋ್ದಾ..? ಎಂದು ಪ್ರಶ್ನಿಸ್ತಲೇ ಬಂದಿದ್ದಾರೆ.ಇದೆಲ್ಲಕ್ಕಿಂತ ಹೆಚ್ಚಾಗಿ ಸಂಬಳ ಕೇಳಿದ್ರೆ ಎಚ್ ಆರ್ ಅವ್ರನ್ನು ಕೇಳಿ ಅಂಥಾ ಮ್ಯಾನೇಜ್ಮೆಂಟ್ ಹೇಳ್ತದೆ..ಮ್ಯಾನೇಜ್ಮೆಂಟ್ ಅವರನ್ನು ಕೇಳಿದ್ರೆ ಎಚ್ ಆರ್ ಅವ್ರು ನಿಮಗೆ ಹೇಳ್ತಾರೆ ಎಂದು ಜವಾಬ್ದಾರಿಯನ್ನು ಪಾಸ್ ದಿ ಬಾಲ್ ರೀತಿ ಮಾಡ್ತಿದ್ದಾರೆಂದು ಕನ್ನಡ ಫ್ಲ್ಯಾಶ್ ನ್ಯೂಸ್ ಜತೆ ಅಳಲು ತೋಡಿಕೊಂಡವರು ಪಾಪ.!ಅದೆಷ್ಟೋ..( ನ್ಯೂಸ್ ಮಾಡಿದವ್ರ ಬಳಿನೇ ಸಂಬಳ ಪಡೆದುಕೊಳ್ಳಿ..ಅವರು ಸುದ್ದಿ ಮಾಡಿದಾಕ್ಷಣ ನಿಮಗೆ ಸಂಬಳ ಸಿಕ್ಕಿ ಬಿಡ್ತದೇನ್ರಿ ಎಂದು ನಮ್ಮ ವರದಿಯನ್ನು ಉಲ್ಲೇಖಿಸಿ ಅಲ್ಲಿನ ಮ್ಯಾನೇಜ್ಮೆಂಟ್ ಮಾತನಾಡಿದೆ ಎನ್ನುವ ಸುದ್ದಿಯಿದೆ.ಸಂಬಳ ಕೊಡಿಸ್ಲಿಕ್ಕೆ ಆಗದಿದ್ರೂ ಅಟ್ಲೀಸ್ಟ್ ಅಲ್ಲಿನ ಸಿಬ್ಬಂದಿಗೆ ಆಗುತ್ತಿರುವ ಅನ್ಯಾಯದ ಮೇಲೆ ಬೆಳಕು ಚೆಲ್ಲಿದವಲ್ವಾ ಎನ್ನುವ ಆತ್ಮತೃಪ್ತಿ ನಮಗಿದೆ ಬಿಡಿ).

ಸಂಬಳದ ವಿಚಾರದಲ್ಲಿ ಕಳೆದ ಒಂದೆರೆಡು ವರ್ಷಗಳಲ್ಲಿ ಆಗುತ್ತಲೇ ಇರುವ ಏರುಪೇರಿಗೆ ಬೇಸತ್ತು ಕೆಲಸ ಬಿಟ್ಟವರು ಅದೆಷ್ಟೋ ಅಂತೆ..ಈಗಲು ಸಂಬಳ ಕೊಟ್ಟರೆ ಸಾಕು ಬೇ್ರೆಚಾನೆಲ್ ಗಳಿಗೆ ವಲಸೆ ಹೋಗಲು ,ಚಾನೆಲ್ ಗಳ ಸಹವಾಸನೇ ಬೇಡ ಎಂದು ಝೂಟ್ ಹೇಳೊಕ್ಕೆ ಸಾಕಷ್ಟು ಮಂದಿ ಕಾದು ಕೂತಿದ್ದಾರಂತೆ.ಆದರೆ ಅದಕ್ಕೂ ಮ್ಯಾನೇಜ್ಮೆಂಟ್ ಅವಕಾಶ ಮಾಡಿಕೊಡ್ತಿಲ್ಲ ಎನ್ನುವ ಮಾತಿದೆ. ಮಾದ್ಯಮಗಳಲ್ಲಿ ಕೆಲಸ ಮಾಡುವ ಮಾದ್ಯಮಮಿತ್ರರು ಅನೇಕ ಸಂಸ್ಥೆಗಳಲ್ಲಿ ಈ ಕ್ಷಣಕ್ಕೂ ಸಂಬಳ ಸಿಗದೆ ಅನುಭವಿಸುತ್ತಿರುವ ಸಂಕಷ್ಟವನ್ನು ಚೆನ್ನಾಗಿ ತಿಳಿದಿದ್ರೂ ಸಂಬಳ ಕೊಡದೆ ರವಿಕುಮಾರ್-ಮಾರುತಿ ಸತಾಯಿಸುತ್ತಿದ್ದರೆ ಅದಕ್ಕಿಂತ ಅಪಮಾನಕರ ಹಾಗೂ ಅಮಾನವೀಯ ಸಂಗತಿ ಇನ್ನೊಂದಿರಲಾರದೇನೋ..?
ಹೀಗೆ ಮ್ಯಾನೇಜ್ಮೆಂಟ್ ನ ಸತಾವಣೆಯಿಂದ ಬೇಸತ್ತಿದ್ದ ನೂರಾರು ಸಿಬ್ಬಂದಿಗೆ ನೆಮ್ಮದಿ ತರುವಂತ ವಿಷಯವೊಂದು ಚಾನೆಲ್ ನಲ್ಲೇ ಪಸರ್ ಆಗುತ್ತಿದೆ ಎನ್ನುವ ವರ್ತಮಾನ ತಿಳಿದುಬಂದಿದೆ. ಹೂಡಿಕೆದಾರರನ್ನು ಹುಡುಕುತ್ತಿದ್ದ ಮ್ಯಾನೇಜ್ಮೆಂಟ್ ನ ಶೋಧಕ್ಕೆ ಕೊನೆಗೂ ಫಲ ಸಿಕ್ಕಿದೆಯಂತೆ. ಚಾನೆಲ್ ಗೆ ಅತ್ಯವಶ್ಯಕವಾಗಿರುವ ಬಂಡವಾಳ ಹೂಡಿಕೆದಾರರನ್ನು ಹುಡುಕಲು ಮಾಡ್ತಿದ್ದ ಅನ್ವೇಷಣೆ ಕೊನೆಗೊಂಡಿದೆಯಂತೆ.ಹಾಸನ ಮೂಲದವರೆನ್ನಲಾಗುತ್ತಿರುವ ರಾಜಕಾರಣಿಯೊಬ್ಬರು ಬಂಡವಾಳ ಹೂಡೊಕ್ಕೆ ಮುಂದೆ ಬಂದಿದ್ದಾರಂತೆ.ಆದರೆ ಅದು ಎಷ್ಟರ ಪ್ರಮಾಣದಲ್ಲಿ, ಯಾವ ನಿಬಂಧನೆ-ಷರತ್ತುಗಳನ್ನು ಆಧರಿಸಿ ಎನ್ನುವ ಮಾಹಿತಿ ಸಧ್ಯಕ್ಕೆ ಲಭ್ಯವಾಗಿಲ್ಲ.

ಸುದ್ದಿ ಪ್ರಸಾರದ ವಿಷಯದಲ್ಲಿ ಒಂದೊಳ್ಳೆ ಚಾನೆಲ್ ಎನಿಸಿಕೊಂಡಿರುವುದು ಬಂಡವಾಳ ಹೂಡಿಕೆದಾರರಿಗೆ ಸಮಾಧಾನ ತಂದಿದೆಯಂತೆ,ಆ ಕಾರಣದಿಂದಲೇ ಬಂಡವಾಳ ತೊಡಗಿಸಲು ಒಪ್ಪಿಕೊಂಡಿದ್ದಾರಂತೆ.ಒಂದು ಮೂಲದ ಪ್ರಕಾರ ಚಾನೆಲ್ ನ ಶೇಕಡಾ 20 ರಷ್ಟು ಶೇರುಗಳನ್ನು ಅವರಿಗೆ ನೀಡಲು ಮ್ಯಾನೇಜ್ಮೆಂಟ್ ಒಪ್ಪಿಕೊಂಡಿದೆಯಂತೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಕೆಲವೇ ದಿನಗಳಲ್ಲಿ ಹೂಡಿಕೆದಾರರು ಚಾನೆಲ್ ನಲ್ಲಿ ಕಾಣಿಸಿಕೊಂಡರೂ ಆಶ್ವರ್ಯವಿಲ್ಲವಂತೆ.ಬಂಡವಾಳ ಹೂಡಿಕೆದಾರರು ಸಿಕ್ಕಿದ್ದಾರೆ ಎನ್ನುವ ವಿಷಯ,,ಅಂಧಕಾರದಲ್ಲಿದ್ದ ಮಾದ್ಯಮಮಿತ್ರರಿಗೆ ಬೆಳಕು ತೋರಿದಂತಾಗಿದೆ.ಅವರ ಮುಖಗಳಲ್ಲಿ ಮಂದಹಾಸ ಮೂಡಿಸ್ಲಿಕ್ಕೆ ಕಾರಣವಾಗಿದೆಯಂತೆ.ಹೊಸಬರು ಬಂದ ಮೇಲಾದ್ರೂ ಸಮಸ್ಯೆಗಳು ನೀಗಬಹುದು.. ಚಾನೆಲ್ ಒಳ್ಳೆ ಸ್ಥಿತಿ ತಲುಪಬಹುದು.ನಮಗೂ ನಿಯತವಾಗಿ ಸಂಬಳ-ಹೆಚ್ಚಳ ಆಗಬಹುದೆನ್ನುವುದಷ್ಟೆ ಮಾದ್ಯಮಸ್ನೇಹಿತರ ಅನಿಸಿಕೆ.
ಇದೆಲ್ಲದರ ನಡುವೆಯೇ ಚಾನೆಲ್ ನಿಂದ ಗುಳೆ ಹೋಗಲು ಸಿದ್ದವಾಗಿರುವವರ ಸಂಖ್ಯೆಯೂ ಹೆಚ್ಚಾಗ್ತಿದೆಯಂತೆ. ಬಾಕಿ ಸಂಬಳ ಸಿಕ್ಕರೆ ಸಾಕು ಸಾಕಷ್ಟು ಮಿತ್ರರು ಚಾನೆಲ್ ಗೊಂದು ಶರಣು ಹೊಡೆದು ಹೋಗಲು ಸಿದ್ದರಾ್ಗಿದ್ದಾರೆನ್ನುವ ಮಾತಿದೆ.ಹಾಗೇನಾದ್ರೂ ಆದರೆ ಸಿಬ್ಬಂದಿ ಸಮಸ್ಯೆ ಎದುರಾಬಹುದು..ಆದ್ರೆ ಇದರ ಬಗ್ಗೆ ರವಿಕುಮಾರ್-ಮಾರುತಿ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣ್ತಿಲ್ಲವಂತೆ.ಈಗಾ್ಗಲೇ ಅನೇಕ ಸಿಬ್ಬಂದಿ ದೊಡ್ಡ ದೊಡ್ಡ ಚಾನೆಲ್ ಗಳಿಗೆ ಇಂಟರ್ ವ್ಯೂ ಕೊಟ್ಟಿದ್ದಾರಂತೆ.ಕೆಲವರಿಗೆ ಕೆಲಸವೂ ಸಿಕ್ಕಿದೆಯಂತೆ.ಅವರೆಲ್ಲರು ಸಂಬಳ ಸಿಗೋದನ್ನೇ ಕಾಯುತ್ತಿದ್ದಾರಂತೆ,ಸಂಬಳ ಸಿಗ್ತಿದ್ದಂತೆ ಝೂಟ್ ಹೇಳೋದು ಕನ್ಫರ್ಮ್ ಎನ್ನಲಾಗ್ತಿದೆ.
ಈ ಬೆಳವಣಿಗೆಗಳು ಚಾನೆಲ್ ನ ದೃಷ್ಟಿಯಿಂದ ಸರಿಯಲ್ಲ ಎನ್ನುವುದು ಪ್ರತಿಯೊಬ್ಬರಿಂದ ಕೇಳಿಬಂದಿರುವ ಮಾತು..ಚಾನೆಲ್ ಒಳ್ಳೆಯ ಸ್ತಿತಿಯಲ್ಲಿ ನಡೆಯುತ್ತಿರುವಾಗ ಅದನ್ನು ಮುನ್ನಡೆಸಿಕೊಂಡು ಹೋಗುವುದರ ಜತೆಗೆ ಸಿಬ್ಬಂದಿಗೆ ಸಂಬಳ ಕೊಡಬೇಕಾಗಿರುವ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗ್ತದೆ.ಅದರಲ್ಲಿ ಮ್ಯಾನೇಜ್ಮೆಂಟ್ ಎಡವಿದೆ ಎನ್ನುವುದು ಸ್ಪಷ್ಟ.ಇದೆಲ್ಲಕ್ಕೂ ಮುಖ್ಯ ಕಾರಣ, ಹಣಕಾಸಿನ ಮುಗ್ಗಟ್ಟು ಎಂದೇನು ಹೇಳಲಾಗ್ತಿದೆ ಅದನ್ನು ನಿವಾರಿಸ್ಲಿಕ್ಕೆ ಹೂಡಿಕೆದಾರರು ಸಿಕ್ಕಿದ್ದಾರೆನ್ನುವುದು ನಿಜಕ್ಕೂ ಸಂತೋಷದ ವಿಷಯ..ಅದೆಲ್ಲಾ ಆದಷ್ಟು ಶೀಘ್ರವಾಗಿ ಆಗಲಿ..ಸಮಸ್ಯೆ ಬೇಗ ಬಗೆಹರಿದು ನ್ಯೂಸ್ ಫಸ್ಟ್ ಮೊದಲಿದ್ದ ಸ್ಥಿತಿಗೆ ಮರಳಲಿ ಎನ್ನುವುದೇ ಕನ್ನಡ ಫ್ಲ್ಯಾಶ್ ನ್ಯೂಸ್ ನ ಆಶಯ ಹಾಗೂ ಹಾರೈಕೆ.











