advertise here

Search

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!


ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರೇ ಏನ್ ಮಾಡ್ತಿದಿರಾ..? ನಿಮ್ಮ ಇಲಾಖೆಯ ಅಧಿಕಾರಿಗಳ ಕೃಪಕಟಾಕ್ಷ-ಶ್ರೀರಕ್ಷೆಯಲ್ಲೇ ಮಟ್ಕಾ ದಂಧೆ ನಡೆಯುತ್ತಿದೆ…!ಅದಕ್ಕಾಗಿ ಸಾಲ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ..!? ಮನೆ ಮಠಗಳನ್ನು ಮಾರಿ,ಅದಕ್ಕಾಗಿ ಸಾಲ ಸೋಲ ಮಾಡಿಕೊಂಡು ಹೆಂಡ್ತಿ ಮಕ್ಕಳನ್ನು ಬೀದಿಗೆ ತರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎನ್ನುವ ಗಂಭೀರ ಆರೋಪವಿದೆ…! ಇಲ್ಲವೇ ಇಲ್ಲ ಎಂದು ತಾವು ವಾದಿಸುವುದಾದರೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ್ -ಕಾರ್ಗಲ್ ನಲ್ಲಿ ನಡೆಯುತ್ತಿರುವುದಾದರೂ ಏನು..? ಅದರ ದುರಂತ ಪರಿಣಾಮ ಎನ್ನುವಂತೆ ಇಂದು ಮದ್ಯಾಹ್ನ ಸಂಭವಿಸಿದ್ದಾದ್ರು ಏನು..? ತಾವೇನೋ ಸಾಗರವೂ ಸೇರಿದಂತೆ ಇಡೀ ಜಿಲ್ಲೆಯನ್ನು ಅಪರಾದಮುಕ್ತ ಜಿಲ್ಲೆಯನ್ನಾಗಿ ಮಾಡೊಕ್ಕೆ ಹೊರಟಿದ್ದೀರಿ.. ಆದ್ರೆ ಅದೇ ತಾಲೂಕಿನಲ್ಲಿ ಮಟ್ಕಾಕ್ಕಾಗಿ ಸಾಲ ಮಾಡಿಕೊಂಡಿದ್ದ ವ್ಯಸನಿಯೋರ್ವ ನೇಣು ಬಿ್ಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇದಕ್ಕೆ ಏನಂತೀರಾ..?

ಯೆಸ್..ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.ಆದರೆ ಕಾನೂನುಬಾಹಿರವಾದಂಥ ಕೆಲವು ಚಟುವಟಿಕೆಗಳು ನಡೆಯುತ್ತಿದ್ದರೂ ಆಯಾ ಲಿಮಿಟ್ಸ್ ನಲ್ಲಿರುವ ಪೊಲೀಸ್ ಅಧಿಕಾರಿಗಳು ಅದನ್ನು ತಡೆಯುವಲ್ಲಿ ವಿಫಲವಾಗುತ್ತಿದ್ದಾರೆ.ಅವರ ವೈಫಲ್ಯವೇ ಸಾಕಷ್ಟು ದುರಂತ ಹಾಗೂ ರಾದ್ದಾಂತಗಳಿಗೆ ಕಾರಣವಾಗುತ್ತಿದೆ.ಸಾಗರ ಜಿಲ್ಲೆಯ ವಿಶ್ವಪ್ರಸಿದ್ದ ಜೋಗದ್ ಜಲಪಾತವಿರುವ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾರ್ಗಲ್ ನಲ್ಲಿ ಮಟ್ಕಾ ದಂಧೆಗೆ ವ್ಯಸನಿಯೋರ್ವ ಬಲಿಯಾಗೊಕ್ಕೆ ಪೊಲೀಸ್ ವ್ಯವಸ್ಥೆಯ ವೈಫಲ್ಯವೇ ಕಾರಣವಾಯಿತಾ…? ಎಸ್ಪಿ ಮಿಥುನ್ ಕುಮಾರ್ ಅವರೇ ಉತ್ತರಿಸಬೇಕು.

ಏಕಂದ್ರೆ ಅವರ ವ್ಯಾಪ್ತಿಗೊಳಪಡುವ ಸಾಗರ  ತಾಲೂಕಿನ ಜೋಗ್ ಕಾರ್ಗಲ್ ನಲ್ಲಿ ಮಟ್ಕಾಕ್ಕೆ ವ್ಯಸನಿಯಾಗಿದ್ದ ಉಮೇಶ್ ಅಲಿಯಾಸ್ ಬಂಗಾರಪ್ಪ ಎಂಬಾತ ಸಾಲದ ಕಿರುಕುಳಕ್ಕೆ ಬೇಸತ್ತು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತಾನು ಗಳಿಸಿದ್ದನ್ನೆಲ್ಲಾ ಮಟ್ಕಾಕ್ಕೆ ಸುರಿದು ಬರಿಗೈಯಾಗಿದ್ದ ಆತನಿಗೆ ಸಾಲಗಾರರು ಪೀಡಿಸಲು ಶುರುಮಾಡಿದ್ದಾರೆ. ಮಟ್ಕಾದಿಂದ ಕಳೆದುಕೊಂಡು ಬೇಸತ್ತಿದ್ದ ಆತ ಸಾಲಗಾರರ ಕಿರುಕುಳದಿಂದ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮಟ್ಕಾಕ್ಕಾಗಿ ಮಾಡಿದ ಸಾಲವೇ ಆತನ ಸಾವಿಗೆ ಕಾರಣವಾಯಿತು ಎನ್ನುವುದಾದರೆ ಕಾರ್ಗಲ್ ನಲ್ಲಿ ಮಟ್ಕಾ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವುದು ಕೂಡ ಸತ್ಯವಲ್ಲವೇ..? ಅದನ್ನು ತಡೆಯುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎನ್ನುವುದು ಕೂಡ ನಿಜವಲ್ಲವೇ..? ಹೇಳಿ ಎಸ್ಪಿ ಮಿಥುನ್ ಅವರೇ.

ಜೋಗ ಕಾರ್ಗಲ್ ನ ಪೊಲೀಸರು ಮೈ ಮರೆತಿದ್ದಾರೋ..ಅಥವಾ ಆ ದಂಧೆಗಳಿಂದಲೇ ಮಾಮೂಲು-ಸಂಥಿಂಗ್-ಕಿಕ್ ಬ್ಯಾಕ್-ಪರ್ಸಂಟೇಜ್ ಪ್ರಸಾದ ಪಡೆದುಕೊಳ್ಳುತ್ತಿದ್ದಾರೋ ಗೊತ್ತಿಲ್ಲ ಎನ್ನುವ ಅನುಮಾನವನ್ನು ಇಂಥಾ ದುರಂತಗಳು ಸೃಷ್ಟಿಸುತ್ತವೆ.ಪೊಲೀಸರು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದರೆ ಮಟ್ಕಾ ಕಾರ್ಗಲ್ ತುಂಬೆಲ್ಲಾ ವ್ಯಾಪಕಗೊಳ್ಳೊಕ್ಕೆ ಸಾಧ್ಯವಾಗ್ತಿತ್ತಾ..? ಮಟ್ಕಾಕ್ಕಾಗಿ ಜನ ಸಾಲ ಮಾಡಿಕೊಳ್ಳುವ ಪರಿಸ್ತಿತಿ ಎದುರಾಗುತ್ತಿತ್ತಾ..? ಕೊನೆಗೆ ಮಟ್ಕಾಕ್ಕೆ ಮಾಡಿಕೊಂಡ ಸಾಲ ತೀರಿಸಲಾಗದೆ ಬಂಗಾರಪ್ಪನಂಥ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರಾ..? ಇದಕ್ಕೆ ಪೊಲೀಸರೇ ಉತ್ತರಿಸಬೇಕು.

ALSO READ :  BBMP ನೌಕರರ ಸಂಘಕ್ಕೆ ಮಹತ್ವದ ಗೆಲುವು:ಅಧ್ಯಕ್ಷ ಅಮೃತರಾಜ್ ಗೆ 10 ಲಕ್ಷ ಮಾನನಷ್ಟ ನೀಡುವಂತೆ ನೌಕರ ಮಾಯಣ್ಣಗೆ ಆದೇಶ..

ಜೋಗ್-ಕಾರ್ಗಲ್ ವ್ಯಾಪ್ತಿಯಲ್ಲಿ ಪೊಲೀಸರ ಎದುರಿನಲ್ಲೇ ಮಟ್ಕಾ ರಾಜಾರೋಷವಾಗಿ ನಡೆಯೊಕ್ಕೆ ಪ್ರಮುಖ ಕಾರಣವೇ ಸಾಗರ ಎಮ್ಮೆಲ್ಲೆ ಗೋಪಾಲಕೃಷ್ಣ ಬೇಳೂರು ಎನ್ನಲಾಗುತ್ತಿದೆ.ಏಕೆಂದರೆ ಕಾರ್ಗಲ್ ನಲ್ಲಿ ಮಟ್ಕಾದ ಕಿಂಗ್ ಪಿನ್ನೇ ಲಿಂಗಮನಕ್ಕಿ ಶ್ರೀಧರ ಎನ್ನಲಾಗ್ತಿದೆ.ಈತ ಗೋಪಾಲಕೃಷ್ಣ ಬೇಳೂರು ಅವರ ಅತ್ಯಾಪ್ತ ಎನ್ನಲಾಗ್ತಿದೆ.ಆತ ಅವರ ಆಪ್ತನೋ..ಶಿಷ್ಯಕೋಟಿಯಲ್ಲಿ ಒಬ್ಬನೋ ಎನ್ನುವುದನ್ನು ಕೂಡ ಬೇಳೂರು ಅವ್ರೇ ಹೇಳಬೇಕು.ಆದರೆ ಸಾಗರದಂಥ ಸಂಭಾವಿತರ ನಗರದಲ್ಲಿ ಮಟ್ಕಾ ಜೀವಗಳನ್ನು ಬಲಿಪಡೆಯುವ ಮಟ್ಟಕ್ಕೆ ಯಮಸ್ವರೂಪಿ ಆಗಿರುವುದು ಬೇಳೂರು ಅವರಿಗೆ ಶೋಭೆ ತರುವಂತ ಸಂಗತಿಯಲ್ಲ.

ಇನ್ನು ಕನ್ನಡ ಪ್ಲ್ಯಾಶ್ ನ್ಯೂಸ್ ಗೆ ಸಿಕ್ಕಿರುವ ವಿಶ್ವಸನೀಯ ಮೂಲಗಳ ಮಾಹಿತಿ ಪ್ರಕಾರ ಸಾಗರ ಜಿಲ್ಲೆಯ ಜೋಗ್ ಕಾರ್​ಗಲ್ ನಲ್ಲಿ ಮಟ್ಕಾ ದಂಧೆ ವ್ಯಾಪಕವಾಗಿ, ರಾಜಾರೋಷವಾಗಿ, ಯಾರ ಭಯವೂ ಇಲ್ಲದಂತೆ ನಡೆಯುತ್ತಿರುವುದಕ್ಕೆ ಮುಖ್ಯ ಕಾರಣಕರ್ತರೇ ಸ್ಥಳೀಯವಾಗಿ ದೊಡ್ಡ ಮಟ್ಟದಲ್ಲಿ ಬೆಳೆದುನಿಂತಿರುವ ರಾಜೇಂದ್ರ ಅಲಿಯಾಸ್ ವಿರಾಟ್ ಬಾಬು ಎಂಬಾತನಂತೆರ.ಜತೆಗೆ ಬೀಡಾ ರಾಜೇಂದ್ರ, ಬೀಡಾ ಮಂಜ, ಅಕ್ಕಿಸಣ್ಣಪ್ಪ ಎಂಬುವರು ಕೂಡ ದಂಧೆಯ ಹಿಂದಿದ್ದಾರಂತೆ. ಇಲ್ಲಿನ ಶಾಂತಿ ಬಾರ್ ನ ಮಾಲೀಕ ಎನ್ನಲಾಗ್ತಿರುವ  ಶಿವಪ್ರಸಾದ್ ಮೇಲೂ ಮಟ್ಕಾ ದಂಧೆಯ ರೂವಾರಿಗಳೆನ್ನುವ  ಗಂಭೀರ ಆಪಾದನೆ ಕೇಳಿಬಂದಿದೆ.ಆದರೆ ಇದೆಲ್ಲ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಪೊಲೀಸರು ಇವರೆಲ್ಲರನ್ನು ವಿಚಾರಣೆಗೊಳಪಡಿಸಿ ಸತ್ಯ ಕಕ್ಕಿಸಿದಲ್ಲಿ ಮಾತ್ರ ಗೊತ್ತಾಗಲಿದೆ.ಆದರೆ ಪೊಲೀಸರ ಮೇಲೆಯೇ ದಂಧೆಗೆ ಶ್ರೀರಕ್ಷೆ-ಬೆಂಗಾವಲಾಗಿರುವ ಆಪಾದನೆ ಕೇಳಿಬಂದಿದೆ.ಹಾಗಾಗಿ ಯಾರನ್ನು ಯಾರು ವಿಚಾರಣೆಗೊಳಪಡಿಸಬೇಕು ಎನ್ನುವುದೆ ದೊಡ್ಡ ಪ್ರಶ್ನೆಯಾಗಿದೆ.

ವಿಶ್ವವಿಖ್ಯಾತ ಜೋಗ್ ಜಲಪಾತ ನೋಡಲು ಬರುವ ಪ್ರವಾಸಿಗರು ಇಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಗೆ ಬೆಚ್ಚಿಬಿದ್ದಿದ್ದಾರಂತೆ.ಪ್ರೇಮಿಗಳನ್ನು ಸುಲಿಗೆ ಮಾಡುವವರ ಸಂಖ್ಯೆಯೂ ಇಲ್ಲಿ ವ್ಯಾಪಕವಾಗಿದೆಯಂತೆ.ಇನ್ನು ಇಸ್ಪೀಟ್-ಮಟ್ಕಾ ದಂಧೆಯಂತೂ ಎಗ್ಗಿಲ್ಲದೆ ನಡೆಯುತ್ತಿದೆಯಂತೆ.ಈ ದಂಧೆಕೋರರ ಹೆಡೆಮುರಿ ಕಟ್ಟಬೇಕಾದ ಪೊಲೀಸರ ಬಗ್ಗೆಯೇ ಜನರಿಗೆ ನಂಬಿಕೆ ಇಲ್ಲವಾಗಿ ಹೋಗಿದೆ.ಶಿವಮೊಗ್ಗ ಜಿಲ್ಲೆ ಅಪರಾಧಮುಕ್ತ ಜಿಲ್ಲೆಯಾಗಬೇಕು..ಮಾದರಿ ಜಿಲ್ಲೆಯಾಗಬೇಕು ಎಂಬೆಲ್ಲಾ ಕನಸು-ಮಹತ್ವಾಕಾಂಕ್ಷೆ ಹೊಂದಿರುವ  ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಅವರ ಉದ್ದೇಶ-ಆಶಯವನ್ನು ಸಮಾಧಿ ಮಾಡುವ ಕೆಲಸವನ್ನು ಅವರ ಇಲಾಖೆ ಅಧಿಕಾರಿ ಸಿಬ್ಬಂದಿಯೇ ಮಾಡಿದ್ರೆ ಹೇಗೆ..? ಬಹುಷಃ ಪರಿಸ್ತಿತಿ ಸರಿ ಮಾಡಲು ಖುದ್ದು ಮಿಥುನ್ ಕುಮಾರ್ ಅವರೇ ಪೀಲ್ಡ್ ಗೆ ಇಳಿಯಬೇಕಾಗುತ್ತದೆ ಎನ್ನಿಸುತ್ತೆ.


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top