advertise here

Search

ಕಾನೂನು ವಿವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರು ಅರೆಸ್ಟ್..


ಬೆಂಗಳೂರು/ಹುಬ್ಬಳ್ಳಿ: ಪರೀಕ್ಷೆಗೂ ಮೊದಲೇ ಕಾನೂನು ವಿವಿಯ ಪ್ರಶ್ನೆ‌ಪತ್ರಿಕೆ ಸೋರಿಕೆ ಕೇಸ್ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಜನವರಿ 23 ರಂದು ನಡೆದ ಕರ್ನಾಟಕ‌ ರಾಜ್ಯ ಕಾನೂನು‌ ವಿಶ್ವವಿದ್ಯಾಲಯದ ಪ್ರಶ್ನೆ‌ಪತ್ರಿಕೆ ಸೋರಿಕೆ ಮಾಡಲಾಗಿದ್ದ ಪ್ರಕರಣ ಸಂಬಂಧ ಜಗದೀಶ್, ವರುಣ್ ಕುಮಾರ್ ಹಾಗು ಡಾ.ನಾಗರಾಜ್ ಎನ್ನುವವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಆನೇಕಲ್ , ಚಿಂತಾಮಣಿ ಮತ್ತು ಕೋಲಾರ ಮೂಲದವರು ಎನ್ನಲಾಗಿದೆ…

ಪರೀಕ್ಷೆಗೂ ಮೊದಲೇ ವಾಟ್ಸಾಫ್ ನಲ್ಲಿ ಪ್ರಶ್ನೆ‌ಪತ್ರಿಕೆ ಹರಿದಾಡಿತ್ತೆನ್ನಲಾಗಿದ್ದು ಟೆಲಿಗ್ರಾಂ ಗ್ರೂಪ್ ಮೂಲಕ ಎಲ್ ಎಲ್ ಬಿ ಕಾಂಟ್ರಾಕ್ಟ್ ಲಾ- ೧ ಪ್ರಶ್ನೆಪ್ರತ್ರಿಕೆಯನ್ನ ಸೋರಿಕೆ ಮಾಡಲಾಗಿತ್ತು. ಕೆ ಎಸ್ ಎಲ್ ಯು ನೋಟ್ಸ್ ಟೆಲಿಗ್ರಾಂ ಗ್ರೂಪ್ ಮೂಲಕ ಪತ್ರಿಕೆಯನ್ನ ಸೋರಿಕೆ ಮಾಡಿ ಹಣ ಗಳಿಕೆ ಮಾಡುವ ಪ್ಲ್ಯಾನ್ ನಲ್ಲಿ ಜನವರಿ 23 ರ ಪರೀಕ್ಷೆಯ ಪ್ರಶ್ನೆ‌ಪತ್ರಿಕೆ ಸೋರಿಕೆ ಮಾಡಿದ್ದಾರೆ ಎಂದು ಸೈಬರ್ ಕ್ರೈಂ‌ಪೊಲೀಸ್ ಠಾಣೆಗೆ ಚೆರ್ಮನ್ ಡಾ ವಿಶ್ವನಾಥ್ ಅವರು ದೂರು ನೀಡಿದ್ದರು.ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಬಂಧಿತರ ಶಾಮೀಲಾತಿ ಬಯಲಾಗಿದ್ದು ಮೂವರನ್ನು ಬಂಧಿಸಲಾಗಿದೆ.

ALSO READ :  ಬೆಂಗಳೂರು ವೀಡಿಯೋ ಜರ್ನಲಿಸ್ಟ್ ಗಳ ಫೋಟೋಗ್ರಫಿ ಜಾಕೆಟ್ ಅನಾವರಣ..

ಮರು ಪರೀಕ್ಷೆ ಆಗುತ್ತಾ..? ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುತ್ತಾ ಎನ್ನುವ ಆತಂಕ ಶುರುವಾಗಿದೆ.ಆದರೆ ಈವರೆಗೂ ವಿವಿ ಇದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡದ ಹಿನ್ನಲೆಯಲ್ಲಿ ಮರುಪರೀಕ್ಷೆ ನಡೆಯುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top