ಬೆಂಗಳೂರು:ಕ್ರೈಸ್ತ ಸಮುದಾಯ ವಿಶ್ವಕ್ಕೆ ಶಾಂತಿ ಸಾರುವ ಧರ್ಮವಾಗಿದೆ. ಎಲ್ಲ ಧರ್ಮ ಮತ್ತು ವರ್ಗದವರಿಗೆ ಮಕ್ಕಳ ಶಿಕ್ಷಣಕ್ಕೆ ಶಿಕ್ಷಣ ಸಂಸ್ಥೆಗಳನ್ನು ತೆರದು ವಿದ್ಯಾವಂತ ಸಮಾಜ ನಿರ್ಮಾಣಕ್ಕೆ ಕ್ರೈಸ್ತ ಸಮುದಾಯ ಅಪಾರ ಕೊಡುಗೆ ನೀಡಿದೆ.ಕ್ರೈಸ್ತರನ್ನು ಗುರುತಿಸುವ ಕೆಲಸವಾಗಬೇಕು ಎಂದು ಬೆಂಗಳೂರು ಕ್ರೈಸ್ತ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಡಾ||ಪೀಟರ್ ಮಚಾಡೊ ಆಶಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತ ಜಾಗೃತಿ ವೇದಿಕೆ ವತಿಯಿಂದ ಡಾಕ್ಟರೇಟ್ ಪಡೆದ 72 ಕ್ರೈಸ್ತ ಪದವೀಧರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತ ಜಾಗೃತಿ ವೇದಿಕೆ 15ವರ್ಷಗಳಿಂದ ಕ್ರೈಸ್ತ ಸಮುದಾಯ ಸಂಘಟನೆ ಮತ್ತು ಕ್ರೈಸ್ತ ಸಮುದಾಯದವರನ್ನು ಗುರುತಿಸುವ ಕೆಲಸ ಮಾಡುತ್ತಿರುವುದು ಆದರ್ಶಪ್ರಾಯ ಬೆಳವಣಿಗೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಐ.ಪಿ.ಎಸ್.ಅಧಿಕಾರಿ ಸಿ.ಬಿ.ರಿಶ್ವಂತ್ ಕ್ರೈಸ್ತ ಸಮುದಾಯದ ಡಾಕ್ಟರೇಟ್ ಪಡೆದವರಿಗೆ ಗುರುತಿಸಿ, ಸನ್ಮಾನ ಮಾಡುವುದು ಒಳ್ಳೆಯ ಕೆಲಸ, ಉತ್ತಮ ಕೆಲಸ ಮಾಡುವ ಎಲ್ಲ ಸಂಘದವರಿಗೆ ಅಭಿನಂದನೆಗಳು.
ಒಳ್ಳೆಯ ಕೆಲಸ ಮಾಡಲು ಒಬ್ಬರಿಂದ ಸಾಧ್ಯವಿಲ್ಲ, ಎಲ್ಲರು ಒಂದುಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬರ್ತಲೋಮ್ ರವರು , ಐ.ಪಿ.ಎಸ್.ಪೊಲೀಸ್ ಅಧಿಕಾರಿ ರಿಶ್ವಂತ್ , ಸಂಗೀತ ನಿರ್ದೇಶಕ, ನಟ ಸಾಧಕೋಕಿಲ, ಆರೋಗ್ಯಸ್ವಾಮಿ, ಶಿಕ್ಷಣ ತಜ್ಞೆ ಗ್ಲೋರಿ, ವಕೀಲರಾದ ಬಾಲರಾಜ್, ಸಮಾಜದ ಮುಖಂಡರಾದ ಕಿರೀಟಪ್ಪ, ಶಾಂತಪ್ಪ,ವೇದಿಕೆಯ ಯೇಸುದಾಸ್, ಅರುಳಪ್ಪ, ಸಗಾಯರಾಜ್ ಪ್ರಕಾಶ್ ಎ.ಜಿ ಪಾಲ್ಗೊಂಡಿದ್ದರು. ಇದೇ ವೇಳೆ ಸ್ಮರಣೆ ಸಂಚಿಕೆ ಬಿಡುಗಡೆ ಮಾಡಲಾಯಿತು. ಏಸುಕ್ರಿಸ್ತ ಕುರಿತು ಭಕ್ತಿಗೀತೆಗಳನ್ನು ಹಾಡಲಾಯಿತು.