ಬೆಂಗಳೂರು: ಕಳೆದ ಹತ್ತು ವರ್ಷಗಳ ಹಿಂದೆ ರಾಜಧಾನಿ ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.ನಗರದ ಎಂಜಿ ರಸ್ತೆಯಲ್ಲಿ ಬಾಯ್ ಫ್ರೆಂಡ್ ಕುತ್ತಿಗೆಗೆ ಚಾಕು ಇಟ್ಟು ಯುವತಿ ಅತ್ಯಾಚಾರ ಮಾಡಿದ್ದವರಿಗೆ 57ನೇ ಸಿಸಿಹೆಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.2014 ಏಪ್ರಿಲ್ 11 ನೇ ತಾರೀಖು ಅಂದರೆ ಹತ್ತು ವರ್ಷಗಳ ಹಿಂದೆ ನಡೆದಿದ್ದ ಘಟನೆ ಕುರಿತಾಗಿ ನಡೆದ ವಾದ -ಪ್ರತಿವಾದಗಳನ್ನೆಲ್ಲಾ ಕ್ರೋಢಿಕರಿಸಿ ಅಂತಿಮವಾಗಿ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ನಡೆದಿದ್ದೇನು? 2014 ಏಪ್ರಿಲ್ 11 ರ ಮದ್ಯರಾತ್ರಿ ಪ್ರೇಮಿಗಳಿಬ್ಬರು ಎಂಜಿ ರೋಡ್ ನಲ್ಲಿ ಡಿನ್ನರ್ ಮುಗಿಸಿ ಕಾರಿನಲ್ಲಿ ಕುಳಿತಿದ್ರು.ಪ್ರೇಮಿಗಳಿಬ್ಬರು ಕಾರಿನಲ್ಲಿದ್ದುದನ್ನು ಗಮನಿಸಿದ್ದ ಶೇಕ್ ಹೈದರ್, ಸೈಯದ್ ಶಫಿಕ್, ಮಹಮ್ಮಸ್ ಹಫೀಜ್, ಶೋಯಬ್ @ ಶೇಖ್ ಕಲ್ವಾನ್ ಎನ್ನುವ ಕಾಮುಕರ ದಂಡು ಕಾರನ್ನು ಸುತ್ತುವರಿದು ಹೆದರಿಸಿ ಬೆದರಿಸಿ ಅವರ ಕಾರು ಹತ್ತಿದ್ರು. ಅವರ ಜತೆಯಲ್ಲಿದ್ದ ಇನ್ನೊಬ್ಬ ಮಹಮ್ಮದ್ ಇಸಾಕ್ ಕಾರನ್ನ ಫಾಲೋ ಮಾಡಿದ್ದ.ಆ ರಾತ್ರಿಯಿಡಿ ಸಂತ್ರಸ್ತೆಯಿದ್ದ ಕಾರಿನಲ್ಲೇ ಪುಲಕೇಶಿ ನಗರ ಸುತ್ತಾಡಿ ದ್ದ ಕಾಮುಕರು ಯುವತಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡಿದ್ರು.
ಕೊನೆಗೆ ಕಾಮುಕರ ಗುಂಪಿನ ನಾಯಕ ಶೇಕ್ ಹೈದರ್ ಸಂತ್ರಸ್ತೆಯ ಸ್ನೇಹಿತನನ್ನ ಕಾರಿನಿಂದ ಇಳಿಸಿದ್ದ,ಸೈಯದ್ ಶಫಿಕ್, ಹಫೀಜ್, ಶೋಯಬ್ ಆ ಯುವಕನ ಕುತ್ತಿಗೆಗೆ ಚಾಕು ಹಿಡಿದು ಕೊಂಡಿದ್ದರು. ಇತ್ತ ಯುವತಿ ಜೊತೆಗೆ ಕಾರಿನಲ್ಲಿ ಶೇಕ್ ಹೈದರ್ ನಾನು ಹೇಳಿದ ಹಾಗೆ ಕೇಳದಿದ್ರೆ ನಿನ್ನ ಹುಡುಗನನ್ನ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದ ನಂತರ ಯುವತಿ ಮೇಲೆ ಮೃಗೀಯವಾಗಿ ವರ್ತಿಸಿ ಗ್ಯಾಂಗ್ ರೇಪ್ ಮಾಡಿದ್ದರು.
ಯುವತಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ವಿಷಯವನ್ನು ಬಹಿರಂಗಪಡಿಸದ ಬಾರದು ಎಂದರೆ 50 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದರು. ಹಣ ನೀಡದಿದ್ದಾಗ ಹುಡುಗನ ಕೈಯಲ್ಲಿದ್ದ ವಾಚ್ ನ ಕಿತ್ತುಕೊಂಡು ಹೋಗಿದ್ರು. ಈ ಘಟನೆ ಸಂಬಂಧ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೊದಲಿಗೆ ಅಂದಿನ ಇನ್ಸ್ಪೆಕ್ಟರ್ ಸರಿಯಾದ ಸೆಕ್ಷನ್ ಹಾಕಿಲ್ಲ ಅಂತ ಇನ್ಸ್ಪೆಕ್ಟರ್ ಸಸ್ಪೆಂಡ್ ಕೂಡ ಆಗಿದ್ರು. ಇದಾದ ನಂತರ ಅಂದಿನ ಪುಲಕೇಶಿ ನಗರ ಉಪವಿಭಾಗ ಎಸಿಪಿ ನೂರುಲ್ಲ ಶರೀಫ್ ತನಿಖೆ ನಡೆಸಿ ನ್ಯಾಯಲಯಕ್ಕೆ ಐವರು ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ರು.
ಚಾರ್ಜ್ ಶೀಟ್ ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಪ್ ಆಗಿದ್ದಕ್ಕೆ ಬಲವಾದ ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿತ್ತು.ಆ ಪೈಕಿ ಕಾರಿನಲ್ಲಿ ಸಿಕ್ಕ ಆರೋಪಿಯ ತಲೆಕೂದಲು ಮತ್ತು ವೀರ್ಯದ ಕರುಹುಗಳು ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿತ್ತು.ಆದರೆ ದುರಾದೃಷ್ಟವಶಾತ್ ಸಾಕಷ್ಟು ರಾಜಕೀಯ ಪ್ರಭಾವ ಹೊಂದಿದ್ದ ಆರೋಪಿಗಳು ನಾನಾ ರೀತಿಯಲ್ಲಿ ಪ್ರಕರಣದ ತನಿಖೆ ಮೇಲೆ ಒತ್ತಡ ಹೇರುವ ಕೆಲಸ ಮಾಡಿದ್ದರು.ಆದರೆ ಯಾವುದಕ್ಕೂ ಮಣಿಯದೆ ಪೊಲೀಸ್ರು ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಪೈಕಿ ನ್ಯಾಯಾಲಯ ಎ-1 ಆರೋಪಿ ಶೇಕ್ ಹೈದರ್ ಗೆ ಜೀವಾವಧಿ ಶಿಕ್ಷೆ 31 ಸಾವಿರ ದಂಡ,ಎ-2 ಆರೋಪಿ ಸೈಯದ್ ಶಫಿಕ್ 10ವರ್ಷ ಸಜೆ 23 ಸಾವಿರ ದಂಡ, ಎ-3 ಆರೋಪಿ ಮೊಹಮ್ಮದ್ ಹಫೀಜ್ ಗೆ 3,500₹ ದಂಡಎ-4 ಆರೋಪಿ ಶೋಯಬ್ ಗೆ 1 ವರ್ಷ ಸಜೆ ಹಾಗೂ 3,500₹ದಂಡ ಎ-5 ಆರೋಪಿ ಮಹಮ್ಮದ್ ಇಸಾಕ್ ಗೆ 6 ತಿಂಗಳ ಸಜೆ ಹಾಗೂ 3000 ದಂಡ ವಿಧಿಸಿ 57ನೇ ಸಿಸಿಹೆಚ್ ನ್ಯಾಯಾಲಯ ತೀರ್ಪು ನೀಡಿದೆ.ಮೇಲ್ಕಂಡ ತೀರ್ಪು ನ್ಯಾಯಾಲಯದ ಬಗ್ಗೆ ಜನರ ನಂಬಿಕೆ-ವಿಶ್ವಾಸವನ್ನು ಅಧಿಕಗೊಳಿಸಿದೆ