advertise here

Search

ಶೇಕಡಾ 25 ಕೊಡ್ಲೇಬೇಕು…ಶೇಕಡಾ 8-10 ಕ್ಕೆ ನಾವ್ ರೆಡಿ…ಶೇಕಡಾ 12ಕ್ಕೆ ಫೈನಲ್ ಸಾಧ್ಯತೆಯಂತೆ..!?


ಬೆಂಗಳೂರು:ನಾಳೆಯಿಂದ ಸಾರಿಗೆ ಮುಷ್ಕರ ನಡೆಯುತ್ತಾ..? ಸಂಚಾರಿ ನಾಡಿ ಸಾರಿಗೆ ವ್ಯವಸ್ಥೆ ಸ್ಥಬ್ದವಾಗುತ್ತಾ..? 23 ಸಾವಿರ ಬಸ್ ಗಳು ರಸ್ತೆಗಿಳಿಯೊಲ್ವಾ..? 1.2 ಲಕ್ಷ ಸಿಬ್ಬಂದಿ ಕೆಲಸ ಮಾಡೊಲ್ವಾ… ಕೋಟ್ಯಾಂತರ ಗಳಿಕೆ ಖೋತವಾಗುತ್ತಾ..? ಇಷ್ಟೆಲ್ಲಾ ಪ್ರಶ್ನೆಗಳಿಗೆ ಇವತ್ತೆ ಸ್ಪಷ್ಟ ಚಿತ್ರಣ ದೊರೆಯಲಿದೆ.ಈ ನಡುವೆ ಶೇಕಡಾ 25 ರಷ್ಟು ವೇತನ ಪರಿಷ್ಕರಣೆ ಮಾಡಲೇಬೇಕೆನ್ನುವುದು ಸಾರಿಗೆ ಸಂಘಟನೆಗಳ ಬಿಗಿಪಟ್ಟಾಗಿದ್ರೆ ಶೇಕಡಾ 8 ರಿಂದ 10ಕ್ಕೆ ನಾವ್ ರೆಡಿ ಅನ್ತಿದೆಯಂತೆ ಸರ್ಕಾರ..ಇಂದು ಸಂಜೆ-ರಾತ್ರಿವರೆಗೆ ಜಗ್ಗಾಡಿ, ತೂಗಿ ಅಳೆದು ಶೇಕಡಾ 12-13 ಕ್ಕೆ ವೇತನ ಪರಿಷ್ಕರಣೆ ಫೈನಲ್ ಆಗಬಹುದು ಎನ್ನಲಾಗ್ತಿದೆ.ಅದಕ್ಕಿಂತ ಹೆಚ್ಚಾದ್ರೆ ಸಾರಿಗೆ ಸಿಬ್ಬಂದಿ ವಲಯದಲ್ಲಿ ಇವತ್ತೇ ದಸರಾ..ದೀಪಾವಳಿ ಸಂಭ್ರಮ.

ಹೌದು,…ಇವತ್ತೇ ಎಷ್ಟು ಪ್ರಮಾಣದ ವೇತನ ಪರಿಷ್ಕರಣೆ ಫೈನಲ್ ಆಗುತ್ತೆ ಎನ್ನುವುದು ಅಂತಿಮವಾಗಲಿದೆ.ಶೇಕಡಾ 25 ಕೊಡಲೇಬೇಕು ಎನ್ನುವುದು ಸಹಜವಾಗೇ ಸಾರಿಗೆ ಯೂನಿಯನ್ ಗಳ ಪಟ್ಟು.ಆದರೆ ಹದಗೆಟ್ಟ ಆರ್ಥಿಕ ಪರಿಸ್ತಿತಿಯಲ್ಲಿ ಇದು ದುಬಾರಿ ಆಯ್ತೆನ್ನುವುದು ಸರ್ಕಾರದ ವಾದ..ಶೇಕಡಾ 8 ರಿಂದ 10 ಕೊಡಲಿಕ್ಕೆ ನಾವು ಸಿದ್ದ…ನಮ್ಗೂ ಬೇಡ..ನಿಮ್ಗೂ ಬೇಡ ಎನ್ನುವುದಾದ್ರೆ ಶೇಕಡಾ 12 ರಿಂದ 13 ಓಕೆ ಎನ್ನುವ ಮನಸ್ತಿತಿಯಲ್ಲಿದೆಯಂತೆ ಸರ್ಕಾರ..ಇದು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತಿರುವ ಸಾರಿಗೆ ಮೂಲಗಳ ಮಾಹಿತಿ.

ಈಗಾಗಲೇ ವಿಧಾನಸೌಧದ ಕೊಠಡಿ 113 ರಲ್ಲಿ ಸಿಎಂ ಸಿದ್ದರಾಮಯ್ಯ, ಸಾರಿಗೆ ಯೂನಿಯನ್ ಗಳ ಪದಾಧಿಕಾರಿಗಳ ಜತೆ ಸಭೆ ಮಾಡುತ್ತಿದ್ದಾರೆ.ಎರಡು ಸುತ್ತಿನಲ್ಲಿ ಮಾತುಕತೆ ನಡೆಯಲಿದೆ.ಮೊದಲ ಸುತ್ತಿನಲ್ಲಿ ಜಂಟಿ ಕ್ರಿಯಾಸಮಿತಿಯ ಅನಂತ ಸುಬ್ಬರಾವ್ ಹಾಗೂ ಸಮಾನಮನಸ್ಕ ಸಂಘಟನೆ್ಗಳ ಜತೆ ಮಾತುಕತೆ ನಡೆಯಲಿದೆ.ನಂತರ ಬಿಎಂಎಸ್. ಸಾರಿಗೆ ಕೂಟದ ಜತೆ ಮಾತುಕತೆ ನಡೆಸಲಿದ್ದಾರೆ.ಒಂದು ಸುತ್ತಿನಲ್ಲೇ ನಿರ್ದಾರ ಆಗಿಬಿಡುತ್ತೆ ಎಂದೇಳಲು ಆಗೋದೆ ಇಲ್ಲ.ಆದರೆ ಎಲ್ಲರನ್ನು ಒಂದೇ ಕೂಡಿ ಕೂರಿಸಿ ಮೀಟಿಂಗ್ ಮಾಡುತ್ತಿದ್ದ ಸರ್ಕಾರ ಪಾರ್ ದಿ ಫಸ್ಟ್ ಟೈಮ್ ಉಲ್ಲಂಘಿಸಿದೆ ಎಂದೇ ಹೇಳಲಾಗುತ್ತಿದೆ.ಸರ್ಕಾರದ ಈ ನಡೆ ಬಗ್ಗೆಯೂ ಅನುಮಾನ-ಆಶ್ವರ್ಯ ಮೂಡಿದೆ.

ALSO READ :  ಜ್ಞಾನದ ಹಣತೆ ಹಚ್ಚಿದರು, ಜೀವರಾಶಿ ಸಂಪಾದಲೆ: ಬೀರೂರಿನ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ

ಮದ್ಯಾಹ್ನದ ಹೊತ್ತಿಗೆ ಮೀಟಿಂಗ್ ಮುಗಿಯಬಹುದು.ಸಭೆಯಲ್ಲಿ ಸಾರಿಗೆ ಮುಖಂಡರನ್ನು ಮನವೊಲಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಬಹುದು.ಅದಕ್ಕೆ ಸಾಥ್ ಕೊಡಲಿದ್ದಾರೆ ರಾಮಲಿಂಗಾರೆಡ್ಡಿ.ಸರ್ಕಾರದ ಸಧ್ಯದ ಆರ್ಥಿಕ ಪರಿಸ್ತಿತಿಯನ್ನು ಸಿದ್ರಾಮಯ್ಯ ಅವರೇ ಮನವರಿಕೆ ಮಾಡಿಕೊಡುತ್ತಿದ್ದಾರೆ.ಆದರೆ ಎಲ್ಲರ ಹಿತಾಸಕ್ತಿಗೆ ಸಾರಿಗೆ ಸಿಬ್ಬಂದಿಯ ಹಿತವನ್ನು ಬಲಿಗೊಡುವುದನ್ನು ನಾವು ಒಪ್ಪುವುದಿಲ್ಲ.ನಾಲ್ಕು ವರ್ಷ ಕಾದಿದ್ದೇವೆ.ಆದರೆ ನಮಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ.ನಮ್ಮ ಸಹನೆ-ತಾಳ್ಮೆ ಕಟ್ಟೆ ಒಡೆದಿದೆ,ಇನ್ನು ಸಹಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ.ನಮ್ಮ ಪಾಲಿನ ಸವಲತ್ತನ್ನು ನಮಗೆ ನೀಡಿ ಎಂದು ಸರ್ಕಾರಕ್ಕೆ ಪುನರ್ ಮನನ ಮಾಡಿಕೊಡುವ ಕೆಲಸ ಸಭೆಯಲ್ಲಿ ನಡೆಯುತ್ತಿದೆಯಂತೆ.

ಸರ್ಕಾರ ತನ್ನದೇ ವಾದ ಒಡ್ಡಿದರೆ ಸಾರಿಗೆ ಯೂನಿಯನ್ ಗಳು ತಮ್ಮದೇ ಆದ ನಿಲುವನ್ನು ಪ್ರತಿಪಾದಿಸುತ್ತಿವೆ. ಈ ಬಾರಿ ಸುಧಾರಿಸಿಕೊಳ್ಳಿ, ಮುಂದಿನ ದಿನಗಳಲ್ಲಿ ನಿಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವುದಕ್ಕೆ ನಾವು ಬದ್ಧ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆನ್ನಲಾಗಿದೆ.ಆದರೆ ಅನಂತ ಸುಬ್ಬರಾವ್ ಅವರ ಸಿಂಡಿಕೇಟ್ ಇದಕ್ಕೆ ಸುತಾರಾಂ ಒಪ್ಪುತ್ತಿಲ್ಲ.ಶೇಕಡಾ 20 ಕೊಡಲೇಬೇಕು.ಇಲ್ಲದಿದ್ದರೆ ಮುಷ್ಕರ ಮಾಡ್ತೇವೆ,ನಿಮ್ಮ ಕೈಲಿ ಏನಾಗುತ್ತೋ ಅದನ್ನು ಮಾಡಿಕೊಳ್ಳಿ..ನಾವ್ ಏನ್ ಮಾಡಬೇಕೋ ಮಾಡ್ತೇವೆ.ಎಲ್ಲಕ್ಕೂ ಸಿದ್ದರಾಗೇ ಬಂದಿದ್ದೇವೆ ಎಂದು ಖಡಕ್ ಆಗಿ ತಮ್ಮ ವಾದ ಮಂಡಿಸಿದ್ದಾರೆ. ಇದಕ್ಕೆ ಸ್ವಲ್ಪ ವಿಚಲಿತವಾದಂತೆ ಕಂಡ ಸಿದ್ದರಾಮಯ್ಯ, ಮನವೊಲಿಕೆಗೆ ತಮ್ಮದೇ ಆದ ರೀತಿಯ ಪ್ರಯತ್ನ ಮುಂದುವರೆಸಿದ್ದಾರೆ.

ಸಾರಿಗೆ ಯೂನಿಯನ್ ಗಳ ಜತೆಗಿನ ಮಾತುಕತೆ ಇವತ್ತು ರಾತ್ರಿವರೆಗು ಮುಂದುವರೆಯಬಹುದು ಎನ್ನಲಾಗಿದೆ.ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಮುಷ್ಕರದ ನಿರ್ದಾರದಿಂದ ಹಿಂದಕ್ಕೆ ಸರಿಯದಿರಲು ಯೂನಿಯನ್ ಗಳು ನಿರ್ದರಿಸಿವೆ.ಅಂತಿಮವಾಗಿ ಇವರ ನಡುವಿನ ಮಾತುಕತೆ ಯಾವ ನಿರ್ದಾರಕ್ಕೆ ಬಂದು ನಿಲ್ಲಲಿವೆ ಎನ್ನುವುದರ ಮೇಲೆ ನಾಳೆ ಮುಷ್ಕರ ನಡೆಯುತ್ತೋ ಬಿಡುತ್ತೋ ಎನ್ನುವುದು ನಿರ್ದರಿತವಾ್ಗಿದೆ.1 ಲಕ್ಷದ 20 ಸಾವಿರ ಸಾರಿಗೆ ಸಿಬ್ಬಂದಿ ಈ ಅಂತಿಮ ನಿರ್ದಾರಕ್ಕಾಗಿ ಕಾದು ಕುಂತಿದ್ದಾರೆ.


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top