advertise here

Search

“ಮಾರ್ಕೆಟ್ ಶೇರ್” ನಲ್ಲಿ ನ್ಯೂಸ್ 18 ಕನ್ನಡ ಸ್ಥಾನ ನಂ. 1 “ಅಬಾಧಿತ” ವಾಗಿದ್ರೂ “ಟಿಆರ್ ಪಿ”ಯಲ್ಲಿ ಟಿವಿ9 ನಂ.1..!


ಬೆಂಗಳೂರು: ನ್ಯೂಸ್ 18 ಕನ್ನಡವನ್ನು ಟಿವಿ9 ಬೀಟ್ ಮಾಡಿ ನಂಬರ್ 1 ಸ್ಥಾನ ಪಡೆದಿದೆ ಎನ್ನುವ ಸುದ್ದಿ ಬರೆದ ಮೇಲೆ ಸಾಕಷ್ಟು ಕರೆಗಳು ಬರಲಾರಂಭಿಸಿವೆ.ಈ ಪೈಕಿ ಕೆಲವು ನಾವು ಬರೆದಿದ್ದೇ ತಪ್ಪು ಎಂದು ಬಿಂಬಿಸುವ ಪ್ರಯತ್ನ ಮಾಡಿದ್ರೆ ಇನ್ನು ಕೆಲವು ಟಿಆರ್ ಪಿ ಹಾಗು ಮಾರ್ಕೆಟ್ ಶೇ್ರ್ ಎನ್ನುವ ಎರಡು ಪರಿಕಲ್ಪನೆಗಳ ನಡುವೆ ಇರುವ ವ್ಯತ್ಯಾಸವನ್ನು ಮನದಟ್ಟು ಮಾಡಿಕೊಡುವ ಸಲಹೆ-ಮಾರ್ಗದರ್ಶನ ನೀಡುವಂತಿತ್ತು.ಎರಡು ಅಭಿಪ್ರಾಯಗಳನ್ನು ಸ್ವಾಗತಿಸುತ್ತಾ ಲೇಖನದ ಬಗ್ಗೆ ಸ್ಪಷ್ಟನೆ ನೀಡಬಯಸುತ್ತೇವೆ.

ಎರಡು ಆಯಾಮಗಳಲ್ಲಿ ಚಾನೆಲ್ ನ ರೀಚ್ ಹಾಗು ಪ್ರಸಾರದ ತೀವ್ರತೆಯನ್ನು ಅಳೆಯುವ ಕೆಲಸ ನಡೆಯುತ್ತದೆ.ಒಂದು ವೀಕ್ಷಕರನ್ನು ಚಾನೆಲ್ ಯಾವ ಮಟ್ಟದಲ್ಲಿ ರೀಚ್ ಆಗಿದೆ ಎನ್ನುವುದನ್ನು ಅಳೆಯುವ ಟಿಆರ್ ಪಿ ಎನ್ನುವುದು ಒಂದಾದ್ರೆ ಇನ್ನೊಂದು ವಾಣಿಜ್ಯದ ದೃಷ್ಟಿಯಲ್ಲಿ ಪರಿಗಣಿಸಲಾಗುವ ಮಾರ್ಕೆಟ್ ಶೇರ್ ಎನ್ನುವುದು.( ಪ್ರತಿಯೊಂದು ಚಾನೆಲ್ ಗೆ ಈ ಎರಡು ಅಂಶಗಳೂ ಮುಖ್ಯವೇ,,.? ಯಾವುದನ್ನೂ ನಿರ್ಲಕ್ಷ್ಯಿಸಲಾಗದು..ನಿರ್ಲಕ್ಷ್ಯಿಸಲೂಬಾರದು.)

ನ್ಯೂಸ್ 18 ಕನ್ನಡದಲ್ಲಿ ಕೆಲಸ ಮಾಡುವ  ಹಿರಿಯ ಸುದ್ದಿಮಿತ್ರರೊಬ್ಬರು ಕಳುಹಿಸಿಕೊಟ್ಟ ರಿಪೋರ್ಟ್ ಮಾರ್ಕೆಟ್ ಶೇರ್ ಗೆ ಸಂಬಂಧಿಸಿದ್ದು.46ನೇ ವಾರದಲ್ಲಿ ಟಿವಿ9 32937 ರೇಟ್ ಪಡೆದಿದ್ದರೆ ನ್ಯೂಸ್ 18 ಕನ್ನಡ 33,757 ರೇಟಿಂಗ್ ಪಡೆದಿದೆ.ಅಂದರೆ ಇವರೆರಡರ ನಡುವಿನ ವ್ಯತ್ಯಾಸ 630 ಪಾಯಿಂಟ್ಸ್.ಇನ್ನು ಈ ವಾರದ ಅಂದ್ರೆ 47 ವಾರದ ಮಾರ್ಕೆಟ್ ಶೇರ್ ನಲ್ಲಿ  ಟಿವಿ9 34137 ರೇಟ್ ಪಡೆದಿದ್ದರೆ ನ್ಯೂಸ್ 18 ಕನ್ನಡ 34,3877 ರೇಟಿಂಗ್ ಪಡೆದಿದೆ.ಅಂದರೆ ಇವರೆರಡರ ನಡುವಿನ ವ್ಯತ್ಯಾಸ ಕಳೆದ ಬಾರಿಗಿಂತ ಹೆಚ್ಚು ಅಂದ್ರೆ 1199 ಪಾಯಿಂಟ್ಸ್.ಈ ವಿಷಯದಲ್ಲಿ ಟಿವಿ9 ಹಿಂದಿಕ್ಕಿದ ನ್ಯೂಸ್ 18ನ ನಂಬರ್ 1 ಸ್ಥಾನ ಅಬಾದಿತವಾಗಿದೆ.

ALSO READ :  ಪತ್ರಕರ್ತನಿಂದಲೇ ಪತ್ರಕರ್ತನ ಮೇಲೆ ಎಣ್ಣೆ ಏಟಲ್ಲಿ ಕೊಲೆ ಯತ್ನ..!ಬದುಕುಳಿದಿದ್ದೇ ಪವಾಡ..?

ಆದರೆ ವೀಕ್ಷಕರನ್ನು ರೀಚ್ ಆಗುವ ಪ್ರಕ್ರಿಯೆಯನ್ನು ಅಳೆಯಲಾಗುವ ಟಿಆರ್ ಪಿ ಎನ್ನುವ ಮಾನದಂಡದ ಹೋಲಿಕೆಯಲ್ಲಿ ಟಿವಿ9 ಕಳೆದ ಬಾರಿಯು ನಂಬರ್ 1 ಇತ್ತು.ಹಾಗೆಯೇ ಈ ಬಾರಿಯೂ ನಂಬರ್ 1 ಇದೆ.ಕರ್ನಾಟಕದ ಪೈಕಿ46ನೇ ವಾರದಲ್ಲಿ ಟಿವಿ9 ಕನ್ನಡದ ರೇಟಿಂಗ್ 91 ಇದ್ದರೆ ನ್ಯೂಸ್ 18 ಕನ್ನಡ 82 ಪಾಯಿಂಗ್ ಇತ್ತು.47ನೇ ವಾರದಲ್ಲಿ ಟಿವಿ9 ಕನ್ನಡ 96 ಪಾಯಿಂಟ್ ಪಡೆದಿದ್ದರೆ ನ್ಯೂಸ್ 18 ಕನ್ನಡ 81 ಪಾಯಿಂಟ್ ಪಡೆದಿತ್ತು.ಬೆಂಗಳೂರು ನಗರ ಪ್ರದೇಶದಲ್ಲಿ ಗಳಿಕೆ ಸ್ವಲ್ಪ ಕುಸಿತ ಕಂಡ್ರೂ ಟಿವಿ9 ನಂಬರ್ 1 ಸ್ಥಾನದಲ್ಲಿತ್ತು.10 ಲಕ್ಷ ಜನಸಂಖ್ಯೆ ಇರುವ ಪ್ರದೇಶಗಳಲ್ಲಿಯೂ ಇವೆರೆಡರ ನಡುವೆ ಸ್ವಲ್ಪ ಮಟ್ಟದ ಅಂತರವಿತ್ತು.ಗ್ರಾಮೀಣ ಪ್ರದೇಶದಲ್ಲಿ  ಎರಡು ಚಾನೆಲ್ ಗಳ ನಡುವೆ ಸಮಬಲದ ಪೈಪೋಟಿ ಇತ್ತು.ಅಂದರೆ 46ನೇ ವಾರದಲ್ಲಿ 80 ಪಾಯಿಂಟ್ ಪಡೆದಿದ್ದವು.ಆದರೆ 47ನೇ ವಾರದಲ್ಲಿ ಟಿವಿ9 ಕನ್ನಡ ನ್ಯೂಸ್ 18 ಕನ್ನಡಕ್ಕಿಂತ ಸ್ವಲ್ಪ ಅಂತರದ ಮುನ್ನಡೆ ಪಡೆದಿತ್ತು.

ಜನರಿಗೆ ಅರ್ಥವಾಗದ ಮಾರುಕಟ್ಟೆ ವ್ಯಾಪ್ತಿಯ ವಿಚಾರದಲ್ಲಿ ನ್ಯೂಸ್ 18 ಕನ್ನಡ ಕಳೆದ ವಾರದಷ್ಟೆ ಈವಾರವೂ ಮುನ್ನಡೆ ಪಡೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಆದರೆ ವೀಕ್ಷಕರನ್ನು ರೀಚ್ ಆಗುವ ವಿಚಾರದಲ್ಲಿ ನ್ಯೂಸ್ 18 ಕನ್ನಡ ವ್ಯಾಪಕ ಪೈಪೋಟಿ ನೀಡುತ್ತಿದ್ದರೂ ನಂಬರ್ 1 ಸ್ಥಾನ ಪಡೆಯಲು ಸಾಧ್ಯವಾಗಿಲ್ಲ ಎನ್ನುವುದನ್ನು ಟಿಆರ್ ಪಿ ರಿಪೋರ್ಟ್ ಮೂಲಕವೇ ಎಲ್ಲರ ಮುಂದಿಡಲು ಪ್ರಯತ್ನಿಸಿದ್ದೇವೆ. ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಎಲ್ಲಾ ಮಾದ್ಯಮಗಳು ಸಮ..ಯಾರೂ ದೊಡ್ಡವರಲ್ಲ..ಯಾರೂ ಸಣ್ಣವರಲ್ಲ… ಸಾಧನೆ ಮಾಡಿದರೆ ಅದನ್ನು ಎತ್ತಿ ಹಿಡಿಯುತ್ತೇವೆ, ಪ್ರಮಾದಗಳಾದಾಗಲೂ ಅದನ್ನು ವರದಿ ಮಾಡುತ್ತೇವೆ..ನಿಷ್ಪಕ್ಷಪಾತವಾಗಿ ವರದಿಮಾಡುವ ಬದ್ಧತೆ ನಮ್ಮದು..


Political News

ಬಿಎಂಟಿಸಿ ಸಿಬ್ಬಂದಿಗೆ “ಹಬ್ಬದ ರಜೆ” ಯಲ್ಲಿ ಘೋರ ಅನ್ಯಾಯ..!?

BDA BIG SCAM: 524 ಕೋಟಿ ಬಿಡಿಎ ಅಕ್ರಮ:ತನಿಖೆಗೆ ಕ್ಯಾಪ್ಟನ್ ಮಣಿವಣ್ಣನ್ ರಿಂದ ಸಮಿತಿ ರಚನೆ, ಅಧಿಕಾರಿಗಳಿಗೆ “ಢವ ಢವ”..

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

Scroll to Top