ನ್ಯೂಸ್ 18 ಕನ್ನಡ ಸುದ್ದಿ ಮನೆಯಲ್ಲಿ “ನೀರವ ಮೌನ-ನಿರಾಶೆ”- ಆತಂಕ: ಸಿಬ್ಬಂದಿಗೆ ತಪ್ಪಿದ ಪಾರ್ಟಿ ಸಂಭ್ರಮ..ಯಾಕೆ ಗೊತ್ತಾ,..?

ಬೆಂಗಳೂರು: ನ್ಯೂಸ್ 18 ಕನ್ನಡ(NEWS 18 KANNADA) ದ ಮನೆಯಲ್ಲಿದ್ದ ಸಂಭ್ರಮ ಮರೆಯಾಗಿದೆ.ಆದರೆ ಟಿವಿ9 (TV KANNADA ) ಮನೆಯಲ್ಲಿ ಅದೇ ಸ್ಥಿತಪ್ರಜ್ಞತೆ..( ಏಕೆಂದರೆ ಟಿವಿ9 ಬಳಗ ಕಳೆದ ವಾರದ ಟಿಆರ್ ಪಿ ರೇಸ್ ನಲ್ಲಿ ಹಿಂದೆ ಬಿದ್ದಾಗ ಸ್ವಲ್ಪ ವಿಚಲಿತವಾಗಿತ್ತಾದ್ರೂ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. .ಯಾಕಂದ್ರೆ ಇದೆಲ್ಲಾ ಟಿಆರ್ ಪಿ ಗೇಮ್ ಎನ್ನುವುದು ಮ್ಯಾನೇಜ್ಮೆಂಟ್ ಗೆ ಗೊತ್ತಿತ್ತಂತೆ..!) ಮತ್ತೆ ಲಯಕ್ಕೆ ಮರಳುವ ಆತ್ಮವಿಶ್ವಾಸ ಇದ್ದುದ್ದರಿಂದ ಟಿಆರ್ ಪಿ (TRP-TELE RATING POINT) ಯನ್ನೇನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎನ್ನಿಸುತ್ತೆ.ಅದು ಸತ್ಯ ಕೂಡ ಆಗಿದೆ.ಈ ಬಾರಿಯ ಟಿಆರ್ ಪಿ ರೇಸ್ ನಲ್ಲಿ ನ್ಯೂಸ್ 18 ಕನ್ನಡ ಬಳಗವನ್ನು ಟಿವಿ 9 ಹಿಂದಿಕ್ಕಿದೆ..ಹಾಗಂತ ಅಲ್ಲೇನು ಸಂಭ್ರಮ ಮನೆ ಮಾಡಿರಲಿಲ್ಲ. .ಆದರೆ ನ್ಯೂಸ್ 18 ಕನ್ನಡದ ಸುದ್ದಿ ಮನೆಯಲ್ಲಿ ನೀರವ ವಾತಾವರಣ ಮನೆ ಮಾಡಿದ್ದಂತೂ ಸತ್ಯ.

ನ್ಯೂಸ್ 18 ಕನ್ನಡ, ಟಿಆರ್ ಪಿ ರೇಸ್ ನಲ್ಲಿ ಟಿವಿ9 ಕನ್ನಡವನ್ನು ಹಿಂದಿಕ್ಕಿ ಸಂಭ್ರಮಿಸಿದ್ದಕ್ಕೆ ಕಾರಣವೂ ಇದೆ. ಏಕೆಂದರೆ ದಶಕಗಳಿಂದಲೂ ಇಡೀ ಕರ್ನಾಟಕ ದಾದ್ಯಂತ ನಂಬರ್ 1 ಸ್ಥಾನ( NUMBER ONE POSITION IN ALL OVER KARNATAKA FROM THE DECADES) ವನ್ನು ಅಬಾಧಿತಗೊಳಿಸಿಕೊಂಡು ಬಂದ ಚಾನೆಲ್ ಟಿವಿ9.ಅದನ್ನು ಹಿಂದಿಕ್ಕುವುದಿರಲಿ,ಆ ಆಲೋಚನೆ ಮಾಡುವುದು ಕೂಡ ಅಸಾಧ್ಯ ಎನ್ನುವ ವಾತಾವರಣವಿದೆ.ಅಂತದ್ದರಲ್ಲಿ ನ್ಯೂಸ್ 18 ಚಾನೆಲ್, ಟಿವಿ9 ಕನ್ನಡವನ್ನು ಹಿಂದಿಕ್ಕುತ್ತದೆ ಎಂದರೆ ಅದು ವಿಶೇಷವೇ ಸರಿ(ಆದರೆ ಈಗಲೂ ನ್ಯೂಸ್ 18 ಕನ್ನಡ ಅದ್ಹೇಗೆ ಟಿವಿ9 ಕನ್ನಡವನ್ನು ಹಿಂದಿಕ್ಕಿತೋ..? ಇದರಲ್ಲಿ ಏನಾದ್ರೂ ಬೇರೆಯದೇ ಗೇಮ್ ಏನಾದ್ರೂ ನಡೆದಿದೆಯಾ..? ಎನ್ನುವ ಮಾತುಗಳು ಕೇಳಿಬಂದಿವೆ.ಈ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಅಂಕಿಅಂಶಗಳನ್ನು ಕ್ರೋಢೀಕರಿಸಿ ಸಾಕ್ಷ್ಯ ಸಮೇತ ಶೀಘ್ರದಲ್ಲೇ ಸುದ್ದಿಯೊಂದನ್ನು ಪ್ರಕಟಿಸಲಿದೆ..ಆ ನಿಟ್ಟಿನಲ್ಲಿ ಸಂಶೋಧನೆ-ಅಂಕಿಅಂಶಗಳ ಕಲೆ ಹಾಕುವಿಕೆ ನಮ್ಮ ಬಳಗದಿಂದ ನಡೆಯುತ್ತಿದೆ.).ಆ ಕಾರಣಕ್ಕೆ ಸುದ್ದಿ ಮನೆಯಲ್ಲಿ ಸಂಭ್ರಮದ ವಾತಾವರಣವೇ ನಿರ್ಮಾಣವಾಗಿತ್ತು.ಅದರ ಯಾವುದೇ ಲ್ಯಾಂಡಿಂಗ್ ಪೇಜ್ ಓಪನ್ ಆದರೂ ಅದರದೇ ಆದ ಪೋಸ್ಟರ್ಸ್.ಅಡ್ವರ್ಟೈಸ್ಮೆಂಟ್ಸ್.ಸುದ್ದಿಗಳೇ ರಾರಾಜಿಸುತ್ತಿದ್ದವು.

ಆದರೆ ಸುದ್ದಿ ಸಮರ ಹಾಗೂ ಪೈಪೋಟಿಯಲ್ಲಿ ಟಿವಿ9 ಕನ್ನಡ ಎಂದಿನಂತೆ ತನ್ನ ಸ್ಥಾನ ಅಬಾಧಿತಗೊಳಿಸಿಕೊಂಡಿದೆ. ನ್ಯೂಸ್ 18 ಕನ್ನಡ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.ತನ್ನ ನಂಬರ್ 1 ನೇ ಸ್ಥಾನವನ್ನು ಅಬಾಧಿತಗೊಳಿಸಿಕೊಳ್ಳಬೇಕೆನ್ನುವ ಆಲೋಚನೆಯಲ್ಲಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗಿಲ್ಲ.ಸುದ್ದಿ ನೀಡುವ ಇಡೀ ಸ್ವರೂಪವನ್ನೇ ಬದಲಿಸಿಕೊಂಡರೂ ಅದು ಸಾಧ್ಯವಾಗಿಲ್ಲ.ಹಾಗಾಗಿ ಸುದ್ದಿಮನೆಯಲ್ಲಿ ಒಂದಷ್ಟು ಬೇಸರದ ವಾತಾವರಣ ಮುಂದುವರೆದಿದೆ.ಹಾಗಂತ ನ್ಯೂಸ್ 18 ಕನ್ನಡವನ್ನು ಹಿಂದಿಕ್ಕಿರುವ ಸಂಭ್ರಮವೇನೂ ಟಿವಿ9 ಕನ್ನಡದಲ್ಲಿಲ್ಲ..ಎಂದಿನಂತೆ ಎಲ್ಲಿ ಎಲ್ಲವೂ ಯಥಾಸ್ಥಿತಿಯಲ್ಲೇ ಮುಂದುವರೆದಿದೆ.
ಆದರೆ ನ್ಯೂಸ್ 18 ಕನ್ನಡದ ಸುದ್ದಿಮನೆಯಲ್ಲಿ ಸಿಕ್ಕಾಪಟ್ಟೆ ಪ್ರೆಷರ್ ಕ್ರಿಯೇಟ್ ಆಗಿರುವುದಂತೂ ಸತ್ಯ.ಏಕೆಂದರೆ ಟಿವಿ9 ನಂಥ ಚಾನೆಲ್ ನ್ನು ಹಿಂದಿಕ್ಕಿದ ಮೇಲೆ(ಆರ್ಗಾನಿಕ್ ಆಗಿ ಹಿಂದಿಕ್ಕಿದ್ದೇ ಅದಲ್ಲಿ…?!) ಅದೇ ಯಥಾಸ್ತಿತಿ ಮುಂದುವರೆಸಿಕೊಂಡು ಹೋಗಲೇಬೇಕಾದ ಅನಿವಾರ್ಯತೆ ಚಾನೆಲ್ ಮೇಲಿದೆ.ಹಾಗಾಗಿನೇ ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ ಯಾವ್ದೇ ವಿಷಯದಲ್ಲಿ ನಾವು ಎರಡನೇ ಸ್ಥಾನಕ್ಕೆ ಇಳಿಯದಂತೆ ಎಚ್ಚರ ವಹಿಸಿ ಎಂದು ಬ್ಯೂರೋ ಹೆಡ್ ಗಳಿಗೆ ಫರ್ಮಾನ್ ಹೊರಡಿಸಿತ್ತಂತೆ ಮ್ಯಾನೇಜ್ಮೆಂಟ್.ಪಾಪ..ರಿಪೋರ್ಟರ್ಸ್ ಗಳು ಏನ್ ಮಾಡಬೇಕು..ಪೈಪೋಟಿಗೆ ಇಳಿದು ಸುದ್ದಿ ಮಾಡಲು ಪ್ರಾರಂಭಿಸಿದ್ರು. ಡೆಸ್ಕ್ -ಪ್ರೊಡಕ್ಷನ್ ಕೂಡ ಇದಕ್ಕೆ ಸಾಥ್ ಕೊಟ್ಟಿತ್ತು

ಮ್ಯಾನೇಜ್ಮೆಂಟ್ ಅಂದುಕೊಂಡಂತೆ ಬ್ರೇಕಿಂಗ್ ,ಎಕ್ಸ್ಕ್ಯೂಸಿವ್ ಗಳೆಲ್ಲಾ ಹೆಚ್ಚಾಗೇ ಬಂದವು.ಟಿವಿ9 ಬ್ರೇಕ್ ಮಾಡದ ಸುದ್ದಿಗಳನ್ನು ಬ್ರೇಕ್ ಮಾಡಿತು. ಮಾಡಿದ ಕೆಲಸವನ್ನು ನೋಡಿದಾಗ ಮತ್ತೆ ಈ ವಾರವೂ ನಾವೇ ನಂಬರ್ 1 ಆಗಿರುತ್ತೇವೆ ಎಂದುಕೊಂಡಿದ್ರು.ಆದರೆ ಲೆಕ್ಕಾಚಾರವೆಲ್ಲಾ ಉಲ್ಟಾ ಹೊಡೆಯಿತು. ಟಿವಿ9 ನ್ನು ಹಿಂದಿಕ್ಕಿದ ತಮ್ಮ ಅಭಿಯಾನ ಈ ವಾರವೂ ಮುಂದುವರೆಯುತ್ತದೆ ಎನ್ನುವ ನಂಬಿಕೆ-ನಿರೀಕ್ಷೆ ಎಲ್ಲವೂ ಹುಸಿಯಾಯ್ತು..ಸುದ್ದಿ ಮನೆಯಲ್ಲಿ ಹಾಗಾಗಿನೇ ಟಿಆರ್ ಪಿ ಬಂದ ಗುರುವಾರದಂದು ನಿರಾಶೆ-ನಿಟ್ಟುಸಿರು-ಬೇಸರ-ಆತಂಕ ಎಲ್ಲವೂ ಮನೆ ಮಾಡಿತ್ತು. ಮ್ಯಾನೇಜ್ಮೆಂಟ್ ಇದನ್ನೇ ನೆವವಾಗಿಟ್ಟುಕೊಂಡು ಯಾರನ್ನು ಟಾರ್ಗೆಟ್ ಮಾಡ್ತದೆನ್ನುವ ಆತಂಕ ಬೇರೆ ಹಲವರನ್ನು ಕಾಡಿತ್ತು.ಆದರೆ ಸಧ್ಯಕ್ಕೆ ಅಂತದ್ದೇನೂ ಆಗಿಲ್ಲ.ಹಾಗಂತ ಆಗೊಲ್ಲ ಎಂದೇನಲ್ಲ..ಏಕೆಂದ್ರೆ ನ್ಯೂಸ್ 18 ನಂತ ಕಾರ್ಪೊರೇಟ್ ಕಂಪೆನಿಗಳಲ್ಲಿ ಹೈರ್ ಅಂಡ್ ಫೈರ್ ಎನ್ನೋದು ಕಾಮನ್ ಆದ ವಿಷಯ..ಅಲ್ಲಿನ ಮಾನದಂಡಗಳೇ ಬೇರೆ ರೀತಿಯಾಗಿ ವರ್ಕೌಟ್ ಆಗ್ತದೆನ್ನುವ ವಾಸ್ತವಿಕ ಸತ್ಯ ಅನೇಕರಿಗೆ ಗೊತ್ತಿಲ್ಲ.
ನ್ಯೂಸ್ 18 ಕನ್ನಡ ನಂಬರ್ 1 ಆದಾಗ ಮ್ಯಾನೇಜ್ಮೆಂಟ್ ಬಳಿ ಸಿಬ್ಬಂದಿ ಸೆಲಬ್ರೇಷನಲ್ ಪಾರ್ಟಿ ಕೇಳಿದ್ದರೆನ್ನುವ ಮಾತಿದೆ.ಮೊದಲೆಲ್ಲಾ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ ಪಾರ್ಟಿಯನ್ನು ಅದ್ದೂರಿಯಾಗಿ ನೀಡುತ್ತಿದ್ದ ಮ್ಯಾನೇಜ್ಮೆಂಟ್ ಈ ಬಾರಿ ಟಿಆರ್ ಪಿಯಲ್ಲಿ ಮೂರು ವಾರವೂ ನೀವೇ ಮೊದಲು ಬರುವಂತೆ ನೋಡಿಕೊಳ್ಳಿ..ಹಾಗೇನಾದ್ರೂ ಆದರೆ ಪಾರ್ಟಿ ಕನ್ಫರ್ಮ್ ಎಂದಿದ್ದಂತೆ.ಬಹುಷಃ ಅದು ಆಗಲಿಕ್ಕೂ ಸಾಧ್ಯವಿಲ್ಲ ಎನ್ನುವ ಕನ್ಫರ್ಮೇಷನ್ ಇದ್ದುದ್ದ ರಿಂದಲೇನೋ ಮ್ಯಾನೇಜ್ಮೆಂಟ್ ಹೀಗೆ ಹೇಳಿತ್ತು ಎನ್ನಿಸುತ್ತೆ. ಹಾಗಾಗಿನೇ ಟಿಆರ್ ಪಿ ಬಂದ ದಿನವೇ ಪಾರ್ಟಿನೂ ಇಲ್ಲ..ಮಣ್ಣೂ ಇಲ್ಲ ಎಂದುಕೊಂಡು ಅನೇಕರು ಮ್ಯಾನೇಜ್ಮೆಂಟ್ ಶಪಿಸಿಕೊಂಡಿದ್ದರೆನ್ನುವುದು ಕೂಡ ಸತ್ಯವಂತೆ.
ಈ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಅಲ್ಲಿನ ಸುದ್ದಿಮಿತ್ರರನ್ನು ಮಾತನಾಡಿಸಲು ಪ್ರಯತ್ನಿಸಿದಾಗ ಅಯ್ಯೋ ಬಿಡಿ ಸರ್.ಈ ಕಾರ್ಪೊರೇಟ್ ಕಂಪೆನಿಗಳ ಹಣೇಬರಹವೇ ಇಷ್ಟು..ಇಲ್ಲಿ ಬರೀ ಕಾಂಪಿಟೇಷನ್.ಅವರು ಹಾಕಿದ್ದ ಕಂಡೀಷನ್ ಯಾವತ್ತೂ ಈಡೇರಲು ಸಾಧ್ಯವಿಲ್ಲ ಎನ್ನೋದು ಮ್ಯಾನೇಜ್ಮೆಂಟ್ ಗೆ ಗೊತ್ತಿತ್ತು.ಹಾಗಾಗಿನೇ ಹೀಗೊಂದು ಟಾಸ್ಕ್ ಕೊಡ್ತು..ನಮಗೂ ಗೊತ್ತಿತ್ತು.ಆಗೊಲ್ಲ ಎಂದು.ಆದರೆ ಅವ್ರು ಹಾಕಿದ ಪ್ರೆಷರ್ ನಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ನಮಗಿತ್ತು.ಹಾಗಾಗಿ ಮೈ ಪರಚಿಕೊಂಡು ಮಾಡಿದ್ವಿ..ಕೊನೆಗೂ ಟಿವಿ9 ನಂಬರ್ 1 ಆಯ್ತು.ನಮಗೆ ಪಾರ್ಟಿನೂ ಇಲ್ಲ..ಮಣ್ಣೂ ಇಲ್ಲ..ಈ ಬಗ್ಗೆ ಕೇಳೋ ಧೈರ್ಯನಾದ್ರೂ ಯಾರ್ ಮಾಡ್ತಾರೆ ಹೇಳಿ ಎಂದ್ರು..ಇದು ಸತ್ಯ ಎನಿಸಿತು..ಆದರೂ ನಂಬರ್ 1 ಸ್ಥಾನಕ್ಕೆ ಏರಿದ ಸನ್ನಿವೇಶದಲ್ಲಿ ಡೆಡಿಕೇಟಿವ್ ಆಗಿ ಕೆಲಸ ಮಾಡಿದವರಿಗೆ ಸಂತೋಷ ಕೂಟ ಏರ್ಪಡಿಸಬೇಕಿದ್ದುದು ಮ್ಯಾನೇಜ್ಮೆಂಟ್ ಧರ್ಮ ಆಗಿತ್ತು..ಆದರೆ ಅದನ್ನು ಕೊಡಿಸಲಿಲ್ಲ ಎನ್ನುವ ಬೇಸರ ಸಿಬ್ಬಂದಿಯಲ್ಲಿದ್ದಂತೆ ಕಾಣುತ್ತದೆ.
ನಿಮಗೆ ಅಚ್ಚರಿ ಹಾಗೂ ವಿಚಿತ್ರ ಎನಿಸುವ ವಿಷಯ ಹೇಳ್ತೇವೆ ಕೇಳಿ.. ನ್ಯೂಸ್ 18 ಕನ್ನಡ ಎನ್ನುವ ಚಾನೆಲ್ ಟಿವಿ9 ಕನ್ನಡವನ್ನು ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆದಿದೆ ಎನ್ನುವ ಸುದ್ದಿ ವೀಕ್ಷಕರಿಗೇನೆ ಗೊತ್ತಿಲ್ಲ. ಟಿಆರ್ ಪಿ ಎನ್ನುವ ಮಾನದಂಡದ ಬಗ್ಗೆ ತಲೆಕೆಡಿಸಿಕೊಂಡ ಮಾದ್ಯಮಗಳಿಗೆ ಮಾತ್ರ ಇದು ಗೊತ್ತು.ಆದರೆ ಕರ್ನಾಟಕದ ಮಂದಿ ಇದರ ಬಗ್ಗೆ ತಲೆಕೆಡಿಸಿಕೊಂಡಿಯೂ ಇಲ್ಲ.ಅವರಿಗೆ ಇವತ್ತು ಮಾತ್ರ ಅಲ್ಲ, ಮುಂದೆಯೂ ಕೂಡ ಟಿವಿ9 ಕನ್ನಡವೇ ನಂಬರ್ ಒನ್.ಅದರಲ್ಲಿ ಬಂದರೇನೇ ಸತ್ಯ ಎನ್ನುವ ಭಾವನೆ ಇರುತ್ತದೆ.ಏಕೆಂದರೆ ಟಿವಿ9 ಕನ್ನಡ ಕರ್ನಾಟಕ ವೀಕ್ಷಕರ ಮನದಾಳದಲ್ಲಿ ಹಾಗೆ ಕೂತು ಬಿಟ್ಟಿದೆ.ಅದನ್ನು ಅಳಿಸಿ ಹಾಕುವುದು ಅಷ್ಟು ಸಲೀಸಲ್ಲ..ಹಾಗೆ ಸುಲಭವೂ ಕೂಡ..ಪರಿಸ್ತಿತಿ ಹೀಗಿರುವಲ್ಲಿ ನ್ಯೂಸ್ 18 ಕನ್ನಡ ಟಿವಿ9 ಕನ್ನಡವನ್ನು ಬೀಟ್ ಮಾಡಿತು ಎನ್ನುವ ಸುದ್ದಿಯನ್ನು ಕರ್ನಾಟಕದ ವೀಕ್ಷಕರು ಗಂಭೀರವಾಗಿ ಪರಿಗಣಿಸಲೇ ಇಲ್ಲ..ಇದಕ್ಕಿಂತ ಹೆಚ್ಚು ವಿಚಿತ್ರ ಎಂದರೆ ಕನ್ನಡ ಫ್ಲ್ಯಾಶ್ ನ್ಯೂಸ್ ಒಂದಷ್ಟು ಸುದ್ದಿ ವೀಕ್ಷಕರನ್ನು ಈ ಬಗ್ಗೆ ಪ್ರಶ್ನಿಸಿದಾಗ,ಟಿವಿ9 ಕನ್ನಡವನ್ನು ಬೀಟ್ ಮಾಡುವುದೆಂದರೆ ಅದು ಸಾಧ್ಯನಾ.? ಅದನ್ನು ನಾವ್ ನಂಬಬೇಕಾ..? ಅದು ಕೂಡ ನ್ಯೂಸ್ 18 ಕನ್ನಡ ಎನ್ನುವ ಚಾನೆಲ್ ಬೀಟ್ ಮಾಡಿದೆ ಎನ್ನುವುದನ್ನು ನಾವ್ ಒಪ್ಪಬೇಕಾ..? ಸಾಧ್ಯವೇ ಇಲ್ಲ..!
ಒಂದ್ವೇಳೆ ಪಬ್ಲಿಕ್ ಟಿವಿ ಅಥವಾ ಸುವರ್ಣ ನ್ಯೂಸ್ ಗಳೇನಾದ್ರೂ ಟಿವಿ9 ಬೀಟ್ ಮಾಡಿದ್ವು ಎಂದ್ರೂ ಒಪ್ಪಬಹುದು.ಏಕೆಂದರೆ ಅವುಗಳ ಕೆಪಾಸಿಟಿ ನಾವು ನೋಡಿದ್ದೇವೆ..ಅದನ್ನು ಬಿಟ್ಟು ನ್ಯೂಸ್ 18 ಕನ್ನಡ ಹಾಗೊಂದು ಸಾಧನೆ ಮಾಡಿದೆ ಎಂದರೆ ನಂಬಲಿಕ್ಕೆ ಆಗೊಲ್ಲ ಎಂದು ಹೇಳಿದವರೇ ಹೆಚ್ಚು..ಟಿಆರ್ ಪಿ ಉಲ್ಲೇಖಿಸಿದ್ರೆ ಅದೆಲ್ಲಾ ನಾವ್ ನೋಡಿದೀವಿ ಬಿಡಿ ಸರ್..ಹಿಂದೊಮ್ಮೆ ಟಿಆರ್ ಪಿ ನೀಡುವುದರಲ್ಲಿ ಆದಂಥ ಬಹುದೊಡ್ಡ ವಚನೆ ಬಗ್ಗೆ ಕೇಳಿದ್ದೇವೆ..ಟಿಆರ್ ಪಿಯನ್ನೂ ಟ್ಯಾಂಪರಿಂಗ್ ಮಾಡಬಹುದಂತೆ…ನಿಮಗೆ ಗೊತ್ತಿಲ್ವಾ…? ಎಂದು ನಮ್ಮನ್ನೇ ಪ್ರಶ್ನಿಸಿದರು.ಆಗ ಅನ್ನಿಸಿದ ಸತ್ಯ ಏನ್ ಗೊತ್ತಾ..? ಕನ್ನಡದ ವೀಕ್ಷಕರು ಮೂರ್ಖರಲ್ಲ,ದಡ್ಡರಂತೂ ಅಲ್ಲವೇ ಅಲ್ಲ..ಅವರು ಕೂಡ ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಿರುತ್ತಾರೆ.ಟಿಆರ್ ಪಿ ವಿಚಾರದಲ್ಲಿ ನ್ಯೂಸ್ 18 ಕನ್ನಡ ಚಾನೆಲ್ ಟಿವಿ9 ಕನ್ನಡವನ್ನು ಹಿಂದಿಕ್ಕಿದೆ ಎಂದರೆ ಟಿಆರ್ ಪಿಯಲ್ಲೇ ಏನೋ ದೋಖಾ ನಡೆದಿರಬೇಕು ಬಿಡಿ ಸರ್ ಎಂದು ಪ್ರಶ್ನಿಸ್ತಾರೆ ಎಂದರೆ ಅವರಿಗೂ ಇದರಲ್ಲಿ ಏನೋ ಸಂಥಿಂಗ್ ಅಗಿರಬಹುದೆನ್ನುವ ಶಂಕೆ ಇದೆ ಎನ್ನುವಂತಾಯ್ತಲ್ವಾ..?
ಇದರ ಬಗ್ಗೆ ಹೇಳುತ್ತಾ ಹೋದರೆ ಒಂದು ಕಾದಂಬರಿಯನ್ನೇ ಬರೆಯಬಹುದೇನೋ..? ಏಕೆಂದರೆ ಟಿಆರ್ ಪಿ ವಿಚಾರ ಎನ್ನುವುದು ಜನರಿಗೆ ಲೆಕ್ಕಕ್ಕೇ ಇಲ್ಲ.ಅವರು ಇದರ ಬಗ್ಗೆ ತಲೆಕೆಡಿಸಿಕೊಡಿಯೂ ಇಲ್ಲ.ಸುವರ್ಣ ಮತ್ತು ಪಬ್ಲಿಕ್ ಟಿವಿಗಳೇನಾದ್ರೂ ಟಿವಿ9 ಕನ್ನಡವನ್ನು ಹಿಂದಿಕ್ಕಿದ್ರೂ ಹಿಂದಿಕ್ಕಬಹುದು.ಆದರೆ ನ್ಯೂಸ್ 18 ಕನ್ನಡದಿಂದಂತೂ ಇದು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಜನ ಮಾತನಾಡುತ್ತಿದ್ದಾರೆಂದರೆ ಟಿಆರ್ ಪಿ ವಿಚಾರದಲ್ಲೇ ಏನೋ ಗಡ್ ಬಡ್ ಆಗ್ತಿದೆ ಎನ್ನುವ ಅನುಮಾನ ಕಾಡೋದು ಸತ್ಯ..ಇದರ ಬಗ್ಗೆ ತನಿಖೆ ನಡೆಯಬೇಕಾದ ಅಗತ್ಯವಿದೆ ಎನ್ನಿಸುತ್ತದೆ.ಆದರೆ ತನಿಖೆಗೆ ಆಗ್ರಹಿಸುವವರು ಯಾರು ಎನ್ನುವುದೇ ಪ್ರಶ್ನೆ.
ಸಮಗ್ರವಾಗಿ ನೋಡುವುದಾದ್ರೆ ಟಿಆರ್ ಪಿ ಪಟ್ಟಿಯಲ್ಲಿ ಟಿವಿ9 ಕನ್ನಡ ಮೊದಲ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ನ್ಯೂಸ್ 18 ಕನ್ನಡ ತುಂಬಾ ಹಿಂದಿದೆ ಎನ್ನಲಾಗದಿದ್ರೂ ವ್ಯತ್ಯಾಸ ಗಮನಾರ್ಹವಾಗಿದೆ.ಇದನ್ನು ಮ್ಯಾನೇಜ್ಮೆಂಟ್ ಗಂಭೀರವಾಗಿ ತೆಗೆದುಕೊಂಡು ಸಂಪಾದಕೀಯಕ್ಕೆ ವಾರ್ನ್ ಮಾಡಿದೆ ಎನ್ನುವ ಮಾತಿದೆ.ಆದರೆ ಅದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಮಾತ್ರ ಗೊತ್ತಿಲ್ಲ.ಆದ್ರೆ ಕಳೆದ ವಾರವಿಡಿ ಸಂಭ್ರಮದಲ್ಲಿದ್ದ ನ್ಯೂಸ್ 18 ಕನ್ನಡ ಸಿಬ್ಬಂದಿಗೆ ಒಂದು ಔತಣ ಕೂಟ ಮಿಸ್ ಆದದ್ದಂತೂ ಬೇಸರದ ಸಂಗತಿ..ಟಿವಿ 9 ಕನ್ನಡವನ್ನು ಮುಂದೆಂದಾದ್ರೂ ಹಿಂದಿಕ್ಕಿದ ವೇಳೆ ಯಲ್ಲಾದ್ರೂ ಕಂಡೀಷನ್ ಹಾಕೋದನ್ನು ಬಿಟ್ಟು ಆಗಲಾದ್ರೂ ಮಾತು ಉಳಿಸಿಕೊಳ್ಳಲಿ..ಏಕೆಂದರೆ ಮೂರು ವಾರ ಅಥವಾ ಅದಕ್ಕಿಂತ ಹೆಚ್ಚು ದಿನ ನಿರಂತರವಾಗಿ ನಾವೇ ನಂಬರ್ ಒನ್ ನಲ್ಲಿರಬೇಕು ಎನ್ನುವುದು ಸಾಧ್ಯವೇ ಇಲ್ಲ..ಇದು ವಾಸ್ತವ,,ಇದು ನ್ಯೂಸ್ 18 ಕನ್ನಡ ಮ್ಯಾನೇಜ್ಮೆಂಟ್ ಗೂ ಗೊತ್ತಿದೆ.ಏಕೆ ಆಗೊಲ್ಲ ಎನ್ನುವ ಕಾರಣವೂ ಅದೇ ಮ್ಯಾನೇಜ್ಮೆಂಟ್ ಗೆ ಗೊತ್ತಿದೆ.











