advertise here

Search

ಅಫ್ಘಾನಿಸ್ತಾನದ ಜನವಸತಿ ಪ್ರದೇಶಗಳ ಮೇಲೆ ಪಾಕಿಸ್ತಾನ ವಾಯುಪಡೆ ದಾಳಿ 

pakistan air force airstrike

ಕಾಬೂಲ್: ಅಂತರಾಷ್ಟ್ರೀಯ ಗಡಿನಿಯಮಗಳನ್ನು ಗಾಳಿಗೆ ತೂರಿದ ಪಾಕಿಸ್ತಾನ, ಕಳೆದ ರಾತ್ರಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ವಾಯುನೆಲೆಗಳ ಮೂಲಕ ಭೀಕರ ದಾಳಿ ನಡೆಸಿದೆ. ಪಾಕಿಸ್ತಾನ ವಾಯುಪಡೆಯ ಜೆಎಫ್-17 (JF-17) ಮತ್ತು ಎಫ್-16 (F-16) ಯುದ್ಧ ವಿಮಾನಗಳು ನಡೆಸಿದ ಈ ಬಾಂಬ್ ದಾಳಿಯಲ್ಲಿ 400ಕ್ಕೂ ಹೆಚ್ಚು ಅಮಾಯಕ ನಾಗರಿಕರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ನಡುರಾತ್ರಿಯಲ್ಲಿ ಮುಗಿಲು ಮುಟ್ಟಿದ ಕಿರುಚಾಟ

ಸೋಮವಾರ ರಾತ್ರಿ ಸುಮಾರು 9:30ರ ಸುಮಾರಿಗೆ ಕಾಬೂಲ್ ನಗರದ ಮೇಲೆ ಏಕಾಏಕಿ ಎರಗಿದ ಪಾಕಿಸ್ತಾನಿ ಯುದ್ಧ ವಿಮಾನಗಳು ಜನವಸತಿ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡಿವೆ. ಕಾಬೂಲ್ ವಿಮಾನ ನಿಲ್ದಾಣದ ಸಮೀಪವಿರುವ ಹಳೆಯ ನ್ಯಾಟೋ (NATO) ನೆಲೆಯಲ್ಲಿದ್ದ 2,000 ಹಾಸಿಗೆಗಳ ಬೃಹತ್ ಸರ್ಕಾರಿ ಆಸ್ಪತ್ರೆಯ ಮೇಲೆ ಬಾಂಬ್ ಹಾಕಲಾಗಿದ್ದು, ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ.

ಆಯಕಟ್ಟಿನ ಪ್ರದೇಶಗಳ ಮೇಲೆ ದಾಳಿ

ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಕಾಬೂಲ್‌ನ ಅತಿ ಸುರಕ್ಷಿತ ವಲಯಗಳೂ ಇದರಿಂದ ತಪ್ಪಿಸಿಕೊಂಡಿಲ್ಲ.

ALSO READ :  ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

*ಆಫ್ಘನ್ ಅಧ್ಯಕ್ಷೀಯ ಭವನದ ಸುತ್ತಮುತ್ತಲಿನ ವಸತಿ ಪ್ರದೇಶಗಳು ಧ್ವಂಸವಾಗಿವೆ.

*ರಕ್ಷಣಾ ಸಚಿವಾಲಯದ ಪಕ್ಕದ ಬಡಾವಣೆಗಳ ಮೇಲೆ ಬಾಂಬ್ ಸುರಿಮಳೆಗರೆಯಲಾಗಿದೆ.

*ಅಫ್ಘಾನಿಸ್ತಾನದ ಗುಪ್ತಚರ ಸಂಸ್ಥೆ ಜಿಡಿಐ ಪ್ರಧಾನ ಕಚೇರಿಯ ಸಮೀಪವಿರುವ ಮನೆಗಳ ಮೇಲೆ ದಾಳಿ ಮಾಡಲಾಗಿದೆ.

ಇದನ್ನೂ ಓದಿ | ಜೋಗಿಯಿಂದ ‘ಕೆಡಿ’ತನಕ್ಕೆ ಜಾರಿದರೇ ಪ್ರೇಮ್? ‘ಸರ್ಸೆ’ ಹಾಡಿನ ಅಶ್ಲೀಲತೆಗೆ ಕನ್ನಡಿಗರ ಧಿಕ್ಕಾರ!

ನೂರಾರು ನಾಗರಿಕರ ಸಾವು

ಪ್ರಾಥಮಿಕ ವರದಿಗಳ ಪ್ರಕಾರ, ಈ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ನಾಗರಿಕರು ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಕಾಬೂಲ್‌ನ ಆಸ್ಪತ್ರೆಗಳು ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿವೆ. ಪಾಕಿಸ್ತಾನದ ಈ ಆಕ್ರಮಣಕಾರಿ ನಡೆಯು ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವನ್ನು ಅಧೋಗತಿಗೆ ತಳ್ಳಿದ್ದು, ಗಡಿಯಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.

ಪಾಕಿಸ್ತಾನದ ಈ ಕೃತ್ಯವನ್ನು ಅಂತರಾಷ್ಟ್ರೀಯ ಸಮುದಾಯ ತೀವ್ರವಾಗಿ ಖಂಡಿಸಿದ್ದು, ಇದು ಸಾರ್ವಭೌಮ ರಾಷ್ಟ್ರದ ಮೇಲಿನ ಅತಿಕ್ರಮಣ ಎಂದು ಕಿಡಿಕಾರಿದೆ.


Political News

RSS-RAW ಗೆ ಅಮೆರಿಕ ಶಾಕ್: ಟ್ರಂಪ್‌ಗೆ ಯುಎಸ್‌ ಆಯೋಗ ನೀಡಿದ ಶಿಫಾರಸಿನಲ್ಲಿ ಏನಿದೆ?

ಶಾಸಕರ ಪ್ರಶ್ನೆಗಳಿಗೆ ಬೆಲೆ ಇಲ್ಲವೇ? ಕರ್ತವ್ಯ ಲೋಪ ಎಸಗಿದ 3 ಅಧಿಕಾರಿಗಳು ಸಸ್ಪೆಂಡ್!

ರಾಜ್ಯಸಭೆಗೆ ಇಂದು ಹೈವೋಲ್ಟೇಜ್ ಎಲೆಕ್ಷನ್: 11 ಸ್ಥಾನಗಳಿಗಾಗಿ ಶಾಸಕರ ಹಣಾಹಣಿ!

ನೆಹರೂ ಬದುಕಿದ್ದರೆ ಕಾನ್ಶಿರಾಮ್ ಅವರನ್ನೇ ಸಿಎಂ ಮಾಡುತ್ತಿದ್ದರು: ರಾಹುಲ್ ಗಾಂಧಿ 

ನನ್ನ ದೇಹದಲ್ಲಿ ಪ್ರಾಣವಿರುವವರೆಗೂ ಜನರ ಸೇವೆ ಮಾಡುತ್ತೇನೆ : ಸಿದ್ದರಾಮಯ್ಯ

ಅಡುಗೆ ಅನಿಲ ಬಿಕ್ಕಟ್ಟು: ಬಿಜೆಪಿ ಸಂಸದರ ಮೌನ ಖಂಡಿಸಿ, ಸಂಸತ್ತಿನಲ್ಲಿ ಧ್ವನಿ ಎತ್ತಲು ಡಿಕೆಶಿ ಆಗ್ರಹ!

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ‘ಗ್ರೀನ್ ಸಿಗ್ನಲ್’ ಕೊಟ್ಟ ಇರಾನ್!

ಮಾರ್ಚ್ ಅಂತ್ಯಕ್ಕೆ ಕರ್ನಾಟಕದ ಗದ್ದುಗೆ ಬದಲಾವಣೆ ಪಕ್ಕಾ?! ಡಿಕೆಶಿಗೆ ಸಿಎಂ ಪಟ್ಟ ಕಟ್ಟಲು ಸಜ್ಜಾದ ಹೈಕಮಾಂಡ್!

Scroll to Top