advertise here

Search

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!


ಸಚಿವ್ರೇ..!ನಿಮ್ಮೆ ಕಾಳಜಿ ಇದ್ರೆ ಮೊದಲು ಹಾಗೆ ಮಾಡಿ…

ಬೆಂಗಳೂರು: ಅಪಘಾತಗಳ ಕಾರಣಕ್ಕೆ BMTC (bengaluru metopolitan transport corporatio)ಗೆ ಮೊದಲೆಲ್ಲಾ “ಕಿಲ್ಲರ್‌” ಎನ್ನುವ ಕಳಂಕ ಮೆಟ್ಟಿಕೊಳ್ತಿತ್ತು..ಅದನ್ನು ಸರಿಪಡಿಸುವ ಸಾಕಷ್ಟು ಕೆಲಸಗಳನ್ನು ನಿಗಮದ ಮಾಡಿದ ಕಾರಣಕ್ಕೇನೋ ಗೊತ್ತಿಲ್ಲ, ಅಪಘಾತಗಳ ಸಂಖ್ಯೆ ಕಡ್ಮೆಯಾಯ್ತು..ಸಾಯೋರ ಪ್ರಮಾಣ ವೂ ಕ್ಷೀಣಿಸ್ತು.ಆದರೆ ಕೆಲ ವರ್ಷಗಳ ಈಚೆಗೆ ನಡೀತಿರೋ ಅಪಘಾತಗಳು-ಅದಕ್ಕೆ ಕಾರಣವಾಗ್ತಿರುವ ಸಂಗತಿಗಳನ್ನು ಗಮನಿಸಿದ್ರೆ ಆತಂಕವಾಗುತ್ತೆ..ಕಿಲ್ಲರ್‌ ಎನ್ನುವ ಹಣೆಪಟ್ಟಿ ಮತ್ತೆ ಅಂಟಿಸಿಕೊಳ್ಳೊಕ್ಕೆ ನಿಗಮನೇ ಪ್ರಯತ್ನಿಸ್ತಿದೆಯಾ ಎನ್ನುವ ಶಂಕೆ ಕಾಡ್ತಿದೆ.ಇದಕ್ಕೆ ಕಾರಣ ಇವಿ ಬಸ್‌ ಗಳಿಂದಾಗುತ್ತಿರುವ ಅಪಘಾತ ಹಾಗೂ ಸಾಯುತ್ತಿರುವ ಪ್ರಯಾಣಿಕರ ಸಂಖ್ಯೆ.

ಬಿಎಂಟಿಸಿ ಅಂಗಳಕ್ಕೆ ಎಲೆಕ್ಟ್ರಿಕ್‌ ಬಸ್‌(e.V-electric bus) ಗಳು ಅದ್ಯಾವ ಘಳಿಗೆಯಲ್ಲಿ ಕಾಲಿಟ್ಟವೋ ಗೊತ್ತಿಲ್ಲ..ಸಂಸ್ಥೆಗಿದ್ದ ಹೆಸರೂ ಹಾಳಾಯ್ತು… ಲಾಭದಲ್ಲೂ ಇಳಿಕೆ ಆಯ್ತು.ಬಿಎಂಟಿಸಿ ಎಂದ್ರೆ ಪ್ರಯಾಣಿಕಸ್ನೇಹಿ ಎಂಬ ಹೆಗ್ಗಳಿಕೆ ಏನಿತ್ತು,ಅದು ಅಪಘಾತಗಳ ಕಾರಣಕ್ಕೆ ಯಮಸ್ವರೂಪಿ ಎಂದು ಬದಲಾಯ್ತು.

ಕಳೆದ ಒಂದು ವರ್ಷದಲ್ಲಿ ಸಂಭವಿಸಿರುವ ಅಪಘಾತಗಳನ್ನೇ ಲೆಕ್ಕಕ್ಕೆ ತೆಗೆದುಕೊಂಡ್ರ 80ಕ್ಕೂ ಹೆಚ್ಚು ಜನರು ಇ.ವಿ ಬಸ್‌ ಗಳ ಅಪಘಾತದಲ್ಲಿ ಪ್ರಾಣ ತೆತ್ತಿರುವ ಬಗ್ಗೆ ದಾಖಲೆಗಳಿವೆ.ಈ ಎಲ್ಲಾ ಅಪಘಾತಗಳಿಗೂ ಚಾಲಕರ ನಿರ್ಲಕ್ಷ್ಯ-ಹೊಣೆಗೇಡಿತನ-ಅತಿವೇಗದ-ಅಜಾಗರೂಕತೆಯೇ ಕಾರಣ ಎನ್ನುವುದನ್ನು ಬಿಎಂಟಿಸಿ ನಿಗಮನೇ ಒಪ್ಪಿಕೊಳ್ಳಬೇಕಾಗ್ತದೆ.ಏಕೆಂದರೆ ಅಪಘಾತದ ನೈತಿಕ ಹೊಣೆ ಹೊರಬೇಕಿರುವುದು ಕೂಡ ನಿಗಮನೇ ಅಲ್ವಾ..?

ಮಾಲಿನ್ಯ ಕಡಿಮೆ ಮಾಡುವ ಜತೆಗೆ ಪ್ರಯಾಣಿಕರಿಗೆ ಆರಾಮದಾಯಕ ಸಂಚಾರ ಸಾಧ್ಯವಾಗಬೇಕೆನ್ನುವುದೇ ಎಲೆಕ್ಟ್ರಿಕ್‌ ಬಸ್‌ ಗಳನ್ನು ಪರಿಚಯಿಸಿದ್ದರ ಹಿಂದಿನ ಉದ್ದೇಶವಾಗಿತ್ತು.ಆದರೆ ಬಿಎಂಟಿಸಿನೇ ನೇರವಾಗಿ ಎಲೆಕ್ಟ್ರಿಕ್‌ ಬಸ್ ಗಳನ್ನು ತನ್ನ ಸ್ವಾಮ್ಯದಲ್ಲೇ ಸಂಚಾರಕ್ಕೆ ಬಿಡಬಹುದಿತ್ತು.ಆದರೆ ತಲೆಮಾಸಿದ ಯಾವ ತಜ್ಞರು ಸಲಹೆ ಕೊಟ್ಟರೋ ಗೊತ್ತಿಲ್ಲ, ತೀವ್ರ ವಿರೋಧದ ನಡುವೆ ಎಲೆಕ್ಟ್ರಿಕ್‌ ಬಸ್‌ ಗಳನ್ನು ರಸ್ತೆಗಿಳಿಸಲಾಯ್ತು.ಖಾಸಗಿ ಸಂಸ್ಥೆಯ ಡ್ರೈವರ್‌ ಮತ್ತು ಬಿಎಂಟಿಸಿ ಕಂಡಕ್ಟರ್‌ ಗಳ ಸಾರಥ್ಯದಲ್ಲಿ ಬಸ್‌ ಗಳ ಸಂಚಾರವೂ ಆರಂಭವಾಯ್ತು. ಗಳಿಕೆ ವಿಚಾರದಲ್ಲಿಯೂ ಬಿಎಂಟಿಸಿನೇ ಕೈಯಿಂದ ಪ್ರೈವೇಟ್‌ ಸಂಸ್ಥೆಗೆ ಹಣ ಕೊಡಬೇಕಾದ ಸ್ತಿತಿ ನಿರ್ಮಾಣ ವಾಗಿದ್ದು ಇವತ್ತಿಗೂ ಬಿಎಂಟಿಸಿ ಇತಿಹಾಸದಲ್ಲಿ ಅತೀ ದೊಡ್ಡ ದುರಂತ ಎಂದು  ವಿಶ್ಲೇಷಿಸಲಾಗ್ತಿದೆ.ಇದು ಸಚಿವ ರಾಮಲಿಂಗಾ ರೆಡ್ಡಿ ಅವರಿಗೂ ಗೊತ್ತಿದೆ.

ALSO READ :  3 ಸಾರಿಗೆ ನಿಗಮಗಳ ನೂತನ ಅಧ್ಯಕ್ಷರಿಗೆ ನೂರು ಸವಾಲು...-ದಾರಿ ತುಂಬೆಲ್ಲಾ ಮುಳ್ಳು...-ಅವ್ಯವಸ್ಥೆ ಸರಿಯಾದರೆ ಮಾತ್ರ ಉದ್ದಾರ...-ಶ್ರಮಿಕರ ಬದುಕೂ ಹಸನು...

ಬಿಎಂಟಿಸಿ ಮೂಲಗಳ ಪ್ರಕಾರವೇ ಸರಿಸುಮಾರು 80ರಷ್ಟು ಅಪಘಾತಗಳು ಇವಿ ಬಸ್‌ ಗಳಿಂದ ನಡೆದಿದೆಯಂತೆ.ಅದರಲ್ಲಿ ಪ್ರಾಣತೆತ್ತವರು ಬಹುತೇಕ ಡ್ರೈವರ್ ಗಳ ಹೊಣೆಗೇಡಿತನದಿಂದ ಎನ್ನುವುದು ದುರಾದೃಷ್ಟಕರ.ಅದೇ ಬಸ್‌ ಗಳನ್ನು ಬಿಎಂಟಿಸಿಯ ಟ್ರೈನ್ಡ್‌ ಡ್ರೈವರ್‌ ಗಳು ಚಾಲನೆ ಮಾಡಿದಿದ್ದರೆ ಅಷ್ಟೊಂದು ಪ್ರಮಾಣದ ಅಪಘಾತಗಳೂ ಆಗ್ತಿರಲಿಲ್ಲ…ಅಷ್ಟೊಂದು ಅಮಾಯಕರು ಕೂಡ ಪ್ರಾಣ ಕಳೆದುಕೊಳ್ತಿರಲಿಲ್ವೇನೋ ಎಂದೆನಿಸುವುದು ಸಹಜ.

ಇವಿ ಬಸ್‌ ಗಳನ್ನು ಚಾಲನೆ ಮಾಡುತ್ತಿರುವ ಡ್ರೈವರ್‌ ಗಳು ಎಷ್ಟರ ಮಟ್ಟಿಗೆ ಸಮರ್ಥರಿದ್ದಾರೆ..ಅರ್ಹರಿದ್ದಾರೆ ಎನ್ನುವುದನ್ನು ಪರೀಕ್ಷಿಸುವ ಒಂದು ಮಾನದಂಡವೇ ಬಿಎಂಟಿಸಿಯಲ್ಲಿ ಇಲ್ಲ ಎನ್ನಲಾಗ್ತದೆ.ಆ ಡ್ರೈವರ್‌ ಗಳನ್ನು ಪೂರೈಸುವ  ಔಟ್‌ ಸೋರ್ಸಿಂಗ್‌ ಸಂಸ್ಥೆಯವ್ರು ಡ್ರೈವರ್‌ ನ ಸಮರ್ಥ-ಅರ್ಹತೆಗೆ ತಕ್ಕ ದಾಖಲೆಗಳನ್ನು-ಪ್ರಮಾಣ ಪತ್ರಗಳನ್ನು ಪರಿಶೀಲಿಸುತ್ತಾರೆನ್ನುವುದು ಕೂಡ ಅನುಮಾನವೇ..ಒಂದ್ವೇಳೆ ಸಮರ್ಥವಾಗಿಲ್ಲದವರನ್ನು ಕಳುಹಿಸಿದ್ರೆ ಅದನ್ನು ಪರೀಕ್ಷಿಸಿ-ದೃಢಪಟ್ಟ ನಂತರವೇ ಅವರನ್ನು ನೇಮಿಸಿಕೊಳ್ಳುವ ಕೆಲಸವನ್ನಾದ್ರೂ ಬಿಎಂಟಿಸಿ ಮಾಡಬೇಕಲ್ಲವಾ..? ಇಷ್ಟೆಲ್ಲಾ ಅಪಘಾತಗಳು ಆಗುತ್ತಿರುವುದನ್ನು ಗಮನಿಸಿದ್ರೆ ಇದೆಲ್ಲವನ್ನು ಬಿಎಂಟಿಸಿಯಲ್ಲಿ ಅದಕ್ಕೆಂದೇ ಇರಬಹುದಾದ ವಿಭಾಗ ಮಾಡುತ್ತಿಲ್ಲವೇನೋ ಎಂದೆನಿಸುತ್ತದೆ..

ಇಷ್ಟೊಂದು ಪ್ರಮಾಣದ ಅಪಘಾತ-ಸಾವು ನೋವು ಸಂಭವಿಸುತ್ತಿರುವ ಸನ್ನಿವೇಶ ದಲ್ಲಿ ಇ.ವಿ ಬಸ್‌ ಗಳನ್ನು ಉಳಿಸಿಕೊಳ್ಳುವುದು ಸರಿನಾ..? ಎನ್ನುವ ಪ್ರಶ್ನೆ ಕಾಡುತ್ತಿದೆ.ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮುಂದೆಯೇ ಈ ಒಂದು ಪ್ರಶ್ನೆಯನ್ನು ಪ್ರಯಾಣಿಕರು ಇಟ್ಟಿದ್ದಾರೆ.ಎಲ್ಲವನ್ನು ಕೊಟ್ಟರೂ  ಸರಿಯಾಗಿ ಕೆಲಸ ಮಾಡದೆ ಅಪಘಾತ-ಸಾವು ನೋವಿಗೆ ಕಾರಣವಾಗುತ್ತಿರುವ ಇವಿ  ಡ್ರೈವರ್‌  ಗಳ ಕಾರಣಕ್ಕೆ ಕಿಲ್ಲರ್‌ ಡ್ರೈವರ್ಸ್‌ ಎನ್ನುವ ಕಳಂಕ ನಮಗೆ ಮೆಟ್ಟುತ್ತಿದೆ.ನಮ್ಮನ್ನು ಸಮಾಜದಲ್ಲಿ ಕೆಟ್ಟದಾಗಿ ನೋಡುವಂತಾಗಿದೆ ಎಂದು ಬಿಎಂಟಿಸಿಯ ಅನೇಕ ಡ್ರೈವರ್ಸ್‌ ಗಳೇ ಅಳಲು ತೋಡಿಕೊಂಡಿದ್ದಾರೆ.ಬಹುಷಃ ಇದು ಕೂಡ ಸಚಿವರಿಗೆ ಸರಿ ಎನ್ನಿಸಿರಬೇಕು.. ಹಾಗಾಗಿನೇ ಇವಿ ಬಸ್‌ ಗಳನ್ನು ಉಳಿಸಿಕೊಂಡು ಅಲ್ಲಿನ ಡ್ರೈವರ್‌ ಗಳನ್ನು ವಾಪಸ್‌ ಕಳುಹಿಸಿದ್ರೆ ಹೇಗೆ ಎನ್ನುವ ನಿಟ್ಟಿನಲ್ಲಿ ಚರ್ಚೆಗಳು ಆರಂಭವಾಗಿವೆ ಎಂದ್ಹೇಳಲಾಗುತ್ತಿದೆ.

ಸಚಿವ ರಾಮಲಿಂಗಾರೆಡ್ಡಿ ಅವರೇ ನಿಗಮದ ಅಧಿಕಾರಿಗಳ ಜತೆ ಚರ್ಚೆ-ಸಮಾಲೋಚನೆ ನಡೆಸಿ ಇವಿ ಬಸ್‌ ಗಳು ಮಾಲಿನ್ಯ ಕಡಿಮೆ ಮಾಡಿವೆ ಎನ್ನುವ ಕಾರಣಕ್ಕೆ ಇರಲಿ..ಆದ್ರೆ ಕಿಲ್ಲರ್‌ ಎನ್ನುವ ಹಣೆಪಟ್ಟಿ ತಂದಿರುವ ಡ್ರೈವರ್ಸ್‌ ಗಳನ್ನು ಉಳಿಸಿಕೊಳ್ಳೋದು ಬೇಡ..ನಮ್ಮಡ್ರೈವರ್‌ ಗಳನ್ನೇ ಬಳಸಿಕೊಳ್ಳೋಣ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ. ಇದನ್ನು ಬಿಎಂಟಿಸಿ ಆಡಳಿತ ವರ್ಗ ಕೂಡ ಸ್ವಾಗತಿಸಿದೆ ಎನ್ನಲಾಗ್ತಿದೆ.ಬಿಎಂಟಿಸಿ ಕ್ಯಾಂಪಸ್‌ ನೊಳಗೆ ಪ್ರೈವೇಟ್‌ ನವ್ರ ಪ್ರವೇಶವಾದ ದಿನವೇ ಅದನ್ನು ಖಂಡಿಸಿದ್ದ ಬಿಎಂಟಿಸಿ ಡ್ರೈವರ್‌ ಗಳೂ ಕೂಡ ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.ನಮ್ಮ ಕೈಗೆ ಇ.ವಿ ಬಸ್‌ ಗಳನ್ನು ಕೊಟ್ಟು ನೋಡಿ, ಪ್ರಯಾಣಿಕ ಸ್ನೇಹಿ ಎನ್ನುವ ಹೆಸರನ್ನು ಉಳಿಸ್ತೇವೆ..ಕಿಲ್ಲರ್‌ ಎನ್ನುವ ಕಳಂಕವನ್ನು ಅಳಿಸ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳ್ತಿದಾರೆ. ಸಚಿವರ ಆಲೋಚನೆ,  ಕೇವಲ ಚಿಂತನೆಯಾಗೇ ಉಳಿಯದೆ ಕಾರ್ಯರೂಪಕ್ಕೆ ಬರಲಿ ಎನ್ನುವುದು ಡ್ರೈವರ್‌ ಗಳ ಆಶಯ.

ಒಟ್ಟಿನಲ್ಲಿ ಎಲ್ಲವೂ ಅಂದುಕೊಂಡಂತಾದ್ರೆ ಇವಿ ಬಸ್‌ ಗಳನ್ನು ಚಾಲನೆ ಮಾಡುತ್ತಿರುವ ಖಾಸಗಿ ಡ್ರೈವರ್‌ ಗಳ ದರ್ಬಾರ್‌ ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ..ಬಿಎಂಟಿಸಿ ಡ್ರೈವರ್‌ ಗಳು ಆ ಸ್ಥಾನ ಅಲಂಕರಿಸಬಹುದು..ಆದಷ್ಟು ಬೇಗ ಅದು ಘೋಷಣೆಯಾದ್ರೆ ಇ.ವಿ ಬಸ್‌ ಗಳ ಸಂಚಾರದಿಂದ ವಿಮುಖವಾಗಿದ್ದ ಸಾಕಷ್ಟು ಪ್ರಯಾಣಿಕರು ಮತ್ತೆ ಬಸ್‌ ಗಳನ್ನೇರುವ ದಿನಗಳು ದೂರವಿಲ್ಲ ಎನ್ನಿಸುತ್ತದೆ. ಹೌದಲ್ವಾ..!


Political News

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

Scroll to Top