advertise here

Search

ವಿಕ್ಟೋರಿಯಾ(ನೆಫ್ರೋ) ಆಸ್ಪತ್ರೆಯ “ಯಮರೂಪಿ” ವೈದ್ಯರ ನಿರ್ಲಕ್ಷ್ಯಕ್ಕೆ ಜೀವಂತ “ಶವ” ವಾದ ರಂಜಿತ್..-4 ವರ್ಷ ಗಳಿಂದ ಲೂ “ಪ್ರಜ್ಞಾಹೀನ”-ರಾತ್ರೋರಾತ್ರಿ ಶಿಫ್ಟ್ ಗೆ ಡಾ.ಶಿವಲಿಂಗಯ್ಯ ಪ್ಲ್ಯಾನ್..!


ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫ್ರೋ ಯುರಾಲಜಿ( ಮೂತ್ರಕೋಶ ವಿಭಾಗ) ಸೆಕ್ಷನ್ ನ ಕೆಲವು ಹೊಣೆಗೇಡಿ ಹಾಗೂ ಮುಠ್ಠಾಳ ವೈದ್ಯರಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಯುವಕನೊಬ್ಬ ಜೀವಂತಶವವಾಗಿ ಆಸ್ಪತ್ರೆ ಬೆಡ್ ಮೇಲೆಯೇ ಚಿಕಿತ್ಸೆ ಪಡೆಯುತ್ತಿದ್ದಾನೆ.ಆತನನ್ನು ಶಿಫ್ಟ್ ಮಾಡಿ ಕೈ ತೊಳೆದುಕೊಳ್ಳಲು ಅಲ್ಲಿನ ನಿರ್ದೇಶಕ ಮಹಾಶಯ ಡಾ.ಶಿವಲಿಂಗಯ್ಯ ನೇತೃತ್ವದಲ್ಲಿನ ವೈದ್ಯರ ಟೀಮ್ ಪ್ಲ್ಯಾನ್ ಮಾಡಿಕೊಳ್ಳುತ್ತಲೇ ಬಂದಿತ್ತು.ಇದನ್ನು ಪತ್ತೆ ಹಚ್ಚಿದ ಸಂತ್ರಸ್ಥ ಯುವಕನ ಸಂಬಂಧಿಗಳು ಇಂದು ಆಸ್ಪತ್ರೆ ನಿರ್ದೆಶಕರ ಕಚೇರಿ ಎದುರೇ ಪ್ರತಿಭಟನೆ ನಡೆಸಿದರು.

ವೈದ್ಯರ ಮಹತ್ವ ಹಾಗೂ ಪ್ರಾಮುಖ್ಯತೆ ಸಾರುವ ವೈದ್ಯೋ ನಾರಾಯಣ ಹರಿ ಎನ್ನುವ ಮಾತಿಗೆ ಅಪಚಾರ ಎಸಗುವ ಘಟನೆಯಿದು.ಮೂತ್ರ ವಿಸರ್ಜನೆಯಲ್ಲಿ ಸಣ್ಣದೊಂದು ಸಮಸ್ಯೆಯಿದೆ ಎಂದು ರಾಮನಗರ ಮೂಲದ ರಂಜಿತ್ ಎನ್ನುವ ಆಗತಾನೇ ಮದುವೆಯಾಗಿದ್ದ ಯುವಕನೊಬ್ಬ ನಾಲ್ಕು ವರ್ಷಗಳ ಹಿಂದೆ ಯುರಾಲಜಿ ಸೆಕ್ಷನ್ ಗೆ ಬಂದಿದ್ದ.ಆಗ ಡಾ.ಕೇಶವಮೂರ್ತಿ ಎನ್ನುವವರು ನಿರ್ದೆಶಕರಾಗಿದ್ದರೆನ್ನುವ ಮಾತಿದೆ.

ಹಾಗೆ ತಪಾಸಣೆಗೆಂದು ಬಂದ ರಂಜಿತ್ ಗೆ ಸರಿಯಾದ ರೀತಿಯಲ್ಲಿ ಸಲಹೆ ನೀಡಿ ಚಿಕಿತ್ಸೆ ನೀಡಿದಿದ್ದರೆ ಸಮಸ್ಯೆ ಆಗುತ್ತಲೇ ಇರಲಿಲ್ಲವೇನೋ..ಆದರೆ ಅಲ್ಲಿರುವ ಕೆಲವು ಹೊಣೆಗೇಡಿ-ಲಜ್ಜೆಗೇಡಿ ವೈದ್ಯರು ( ಯುರಾಲಜಿ ವಿಭಾಗದಲ್ಲಿ ನಿಜಕ್ಕೂ ಕೆಲವು ನುರಿತ-ಸಂಭಾವಿತ-ಮಾನವೀಯ ಕಾಳಜಿ ವೈದ್ಯರಿದ್ದಾರೆ) ಸೂಕ್ತ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಅನಸ್ತೇಷಿಯಾ ನೀಡುವಾಗ ಯಡವಟ್ಟಾದ ಪರಿಣಾಮ ಯುವಕನ ಆರೋಗ್ಯದಲ್ಲಿ ಏರುಪೇರಾಗಿದೆ. ನಮ್ಮ ಬುಡಕ್ಕೆ ಬರುತ್ತೆನ್ನುವ ಆತಂಕದಲ್ಲಿ ಚಿಕಿತ್ಸೆ ನೀಡುವುದರಲ್ಲೇನು ತಪ್ಪಾಗಿಲ್ಲ, ಯುವಕನ ದೇಹಸ್ತಿತಿ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ಕಥೆ ಕಟ್ಟಿದ್ದಾರೆ.

ರಂಜಿತ್ ಗೆ ಚಿಕಿತ್ಸೆ ನೀಡಿದ ಹೊಣೆಗೇಡಿ ವೈದ್ಯರುಗಳಿಂದಾಗಿ ಪಾಪ..ಬಾಳಿ ಬದುಕಬೇಕಾದ ರಂಜಿತ್ ಕೋಮಾಕ್ಕೆ ತೆರಳಿದ್ದಾನೆ.ಇದರಿಂದ ಗಾಬರಿಗೊಂಡ ಕುಟುಂಬ ಆಸ್ಪತ್ರೆ ವಿರುದ್ದ ತಿರುಗಿಬಿದ್ದರೂ ಪ್ರಯೋಜನವಾಗಿಲ್ಲ.ಮದುವೆಯಾಗಿ ಕೆಲವೇ ತಿಂಗಳಾಗಿದ್ದ ಆತ ಪಾಪ ಸಂಸಾರದ ಸುಖವನ್ನು ಕಾಣಲಿಲ್ಲ.ಕುಟುಂಬಕ್ಕೆ ದುಡಿಮೆ ಮೂಲವಾಗಿದ್ದ ಮಗನ ಸ್ತಿತಿ ಕಂಡು ಪೋಷಕರು ಕನಲಿ ಹೋಗಿದ್ದಾರೆ.ಆರಂಭದಲ್ಲಿ ಮಗನ ಚಿಕಿತ್ಸೆಗೆ ಕೈಲಿ ಇರೋದನ್ನೆಲ್ಲಾ ರಂಜಿತ್ ಕುಟುಂಬ ಕಳೆದುಕೊಂಡಿದೆ.ಈಗ ಚಿಕಿತ್ಸೆ ಕೊಡಲಿಕ್ಕೆ ಅವರ ಕೈಲಿ ಏನೂ ಉಳಿದಿಲ್ಲ.

ಮಗ ಮತ್ತೆ ಕಣ್ಣು ತೆರೆದು ಮಾತನಾಡಬಹುದು..ಮೊದಲಿನಂತೆ ಆಗಬಹುದು..ಕುಟುಂಬಕ್ಕೆ ಜೀವನಾಧಾರ ಮೂಲವಾಗಬಹುದು ಎಂದು ನಿರೀಕ್ಷೆ ಮಾಡುತ್ತಿದ್ದ ಕುಟುಂಬಕ್ಕೆ ಈಗ ಯಾವ ನಿರೀಕ್ಷೆಗಳು ಇಲ್ಲವಾಗಿದೆ.ಈ ನಡುವೆ ನಿರ್ದೇಶಕ ಡಾ.ಶಿವಲಿಂಗಯ್ಯ ಅಂಡ್ ಹಿಸ್ ಟೀಮ್ ಮನೆಯವರನ್ನು ಕರೆಯಿಸಿ ಇಲ್ಲಸಲ್ಲದ್ದನ್ನು ಹೇಳಿ ಆತನನ್ನು ಶಿಫ್ಟ್ ಮಾಡೊಕ್ಕೆ ಪ್ಲ್ಯಾನ್ ಮಾಡಿದ್ರಂತೆ.ಆದರೆ ಪೋಷಕರು ಸುತಾರಾಂ ಒಪ್ಪಿಲ್ಲ.ಈ ವಿಷಯದಲ್ಲಿ ಅನೇಕ ಬಾರಿ ಪೋಷಕರು ಮತ್ತು ಆಸ್ಪತ್ರೆ ಆಡಳಿತದ ನಡುವೆ ಗಲಾಟೆ ನಡೆದಿದೆ.ಇದರ ಭಾಗವಾಗಿ ಮತ್ತೊಂದು ಯತ್ನ ನಡೆದಿತ್ತು.ಆದರೆ ಕುಟುಂಬಸ್ಥರು ಆಗಮಿಸಿ ಶಿವಲಿಂಗಯ್ಯ ವಿರುದ್ಧ ಪ್ರತಿಭಟಿಸಿದ್ದಾರೆ.

ALSO READ :  BIG EXPOSE..."ಜೈಲ್‌ "ಗಳ "ಆಹಾರ ಗೋಲ್ಮಾಲ್‌" ..ಪ್ರತಿ ಖೈದಿಯ 3 ಹೊತ್ತಿನ ಊಟಕ್ಕೆ 85 ರೂ..! ರಾತ್ರಿ ಊಟಕ್ಕೂ-ಬೆಳಗಿನ ಟಿಫನ್‌ ಗೂ 14 ಗಂಟೆಗಳ ಅಂತರ..!ವಾರಕ್ಕೊಮ್ಮೆಯಷ್ಟೇ ಮಾಂಸಹಾರ..!

ಪಾಪ..ನಿಷ್ಪಾಪಿ..ಅಮಾಯಕ ಯುವಕ ರಂಜಿತ್ ಆಸ್ಪತ್ರೆಯಲ್ಲಿ ಇರುವವರೆಗೂ ತೊಂದರೆ ತಪ್ಪಿದ್ದಲ್ಲ ಎನ್ನುವುದು ಶಿವಲಿಂಗಯ್ಯಂಗೂ ಗೊತ್ತಿದೆ.ಹಾಗಾಗಿನೇ ರಾತ್ರೋರಾತ್ರಿ ಹೇಗೋ ಮನೆಯವರನ್ನು ಒಪ್ಪಿಸಿ ರಂಜಿತ್ ನನ್ನು ಶಿಫ್ಟ್ ಮಾಡೊಕ್ಕೆ ಶಿವಲಿಂಗಯ್ಯನೇ ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದಾರಂತೆ.ಆದರೆ ಇಷ್ಟ್ ವರ್ಷ ಮಗನ ಚಿಕಿತ್ಸೆಗೆ ಮಾಡಿದ ಖರ್ಚನ್ನು ಯಾರು ಕೊಡ್ತಾರೆ..? ಅಟ್ಲೀಸ್ಟ್ ಆ ಹಣವನ್ನಾದ್ರೂ ಕೊಟ್ಟರೆ ನಾವು ನಮ್ಮ ಮಗನನ್ನು ಕರೆದುಕೊಂಡು ಮನೆಯಲ್ಲಿ ಬದುಕಿರುವಷ್ಟು ದಿನ ಇಟ್ಟುಕೊಳ್ಳುತ್ತೇವೆ ಎಂಬ ಅಸಹಾಯಕ ಸ್ತಿತಿಗೆ ಪೋಷಕರು ಬಂದಿದ್ದಾರಂತೆ.ಆದರೆ ಹಣ ಕೊಡೊಕ್ಕೆ ಮಾತ್ರ ಶಿವಲಿಂಗಯ್ಯ ಸಿದ್ದರಿಲ್ಲ ಎನ್ನುವ ಮಾತುಗಳಿವೆ.ಇದು ನ್ಯಾಯನಾ..?

ಬಹುಷಃ ರಂಜಿತ್ ಎನ್ನುವ ಈ ಯುವಕನಿಗೆ ತೊಂದರೆಗಳಾಗಿ ಆತನ ಆರೋಗ್ಯದಲ್ಲಿ ಏರುಪೇರುಗಳಾದಾಗಲೇ ಸರಿಯಾದ ಚಿಕಿತ್ಸೆ ಕೊಟ್ಟಿದ್ದರೆ, ಸೂಕ್ತ ಕಾಳಜಿ ಪ್ರದರ್ಶಿಸಿದಿದ್ದರೆ ರಂಜಿತ್ ನನ್ನು ಉಳಿಸಬಹುದಿತ್ತೇನೋ..? ಆದರೆ ರಂಜಿತ್ ಗೆ ಸೂಕ್ತ ಚಿಕಿತ್ಸೆ ಕೊಡದೆ ನಿರ್ಲಕ್ಷ್ಯ ಮುಂದುವರೆಸಿದ್ದರಂತೆ.ಈಗಲೂ ಕೂಡ ಕಳೆದ ನಾಲ್ಕು ವರ್ಷಗಳ ಹಳೆಯ ಪೇಷೆಂಟಲ್ವಾ ಎನ್ನುವ ಕಾರಣದಿಂದ ಆತನನ್ನು ನಿಕೃಷ್ಟವಾಗಿ ನೋಡಲಾಗುತ್ತಿದೆಯಂತೆ.ಕಾಲಕಸದಂತೆ ಆತನನ್ನು ನೋಡಿಕೊಳ್ಳಲಾಗುತ್ತಿದೆಯಂತೆ.ಇದನ್ನು ನೋಡಿಯಾದ್ರೂ ಆತನನ್ನು ಮನೆಗೆ ಕರೆದುಕೊಂಡು ಹೋಗಬಹುದೆನ್ನುವ ಆಲೋಚನೆ ಡಾ.ಶಿವಲಿಂಗಯ್ಯ ಮತ್ತು ಅವರ ತಂಡದ್ದು ಎನ್ನಲಾಗ್ತಿದೆ.

ಒಂದಲ್ಲಾ ಎರಡಲ್ಲ ಕಳೆದ ನಾಲ್ಕು ವರ್ಷಗಳಿಂದಲೂ ಬಾಳಿ ಬದುಕಬೇಕಾದ ಯುವಕ ರಂಜಿತ್ ನನ್ನು ಜೀವಂತಶವವಾಗಿ ಆಸ್ಪತ್ರೆ ಹಾಸಿಗೆ ಮೇಲೆ ನರಳುವಂತೆ ಮಾಡಿರುವುದು ಅದೇ ಇಲಾಖೆಯ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಗಮನಕ್ಕೆ ಇಲ್ಲವೆಂದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ.ಈ ವಿಷಯ ತಿಳಿದರೂ ಡಾ.ಶಿವಲಿಂಗಯ್ಯ ಮತ್ತು ಅವರ ತಂಡದವರ ವಿರುದ್ದ ಏನೂ ಕ್ರಮ ಜಾರಿಯಾಗೊಲ್ಲ ಎಂದ್ರೆ ಇಂಥಾ ಸಚಿವರು ನಿಜಕ್ಕೂ ಬೇಕಾ..? ಎಂಬ ಪ್ರಶ್ನೆ ಸೃಷ್ಟಿಯಾಗುತ್ತದೆ. ಮಾಡಿದ ತಪ್ಪನ್ನು ಸರಿಪಡಿಸಿಕೊಡಲಿಕ್ಕಾಗದೆ ಯುವಕ ರಂಜಿತ್ ನನ್ನು ಶಿಫ್ಟ್ ಮಾಡಿ ಕೈ ತೊಳೆದುಕೊಳ್ಳಲು ಆ ಆಸ್ಪತ್ರೆಯ ನಿರ್ದೇಶಕ ಡಾ.ಶಿವಲಿಂಗಯ್ಯ ಪ್ಲ್ಯಾನ್ ಮಾಡ್ತಾರೆಂದರೆ ಇದು ಅಮಾನವೀಯತೆ ಅಷ್ಟೇ ಅಲ್ಲ..ಹೇಸಿಗೆ ಕೂಡ..ಥೂ..ನಿಮ್ ಜನ್ಮಕ್ಕೆ..


Political News

ವಿಕ್ಟೋರಿಯಾ(ನೆಫ್ರೋ) ಆಸ್ಪತ್ರೆಯ “ಯಮರೂಪಿ” ವೈದ್ಯರ ನಿರ್ಲಕ್ಷ್ಯಕ್ಕೆ ಜೀವಂತ “ಶವ” ವಾದ ರಂಜಿತ್..-4 ವರ್ಷ ಗಳಿಂದ ಲೂ “ಪ್ರಜ್ಞಾಹೀನ”-ರಾತ್ರೋರಾತ್ರಿ ಶಿಫ್ಟ್ ಗೆ ಡಾ.ಶಿವಲಿಂಗಯ್ಯ ಪ್ಲ್ಯಾನ್..!

“ಧರ್ಮಪತ್ನಿ”ಯ ಕಂಪೆನಿ ವಿರುದ್ಧ “ಭ್ರಷ್ಟಾಚಾರ”ದ ಆರೋಪ..ಸುವರ್ಣನ್ಯೂಸ್‌ ಸಂಪಾದಕ ಅಜಿತ್‌ ಹನುಮಕ್ಕನವರ್‌  ಗೆ  “ಮುಜುಗರ”..!?

ಬಿಎಂಟಿಸಿ ಸಿಬ್ಬಂದಿಗೆ “ಹಬ್ಬದ ರಜೆ” ಯಲ್ಲಿ ಘೋರ ಅನ್ಯಾಯ..!?

BDA BIG SCAM: 524 ಕೋಟಿ ಬಿಡಿಎ ಅಕ್ರಮ:ತನಿಖೆಗೆ ಕ್ಯಾಪ್ಟನ್ ಮಣಿವಣ್ಣನ್ ರಿಂದ ಸಮಿತಿ ರಚನೆ, ಅಧಿಕಾರಿಗಳಿಗೆ “ಢವ ಢವ”..

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

Scroll to Top