advertise here

Search

“ರಿಪಬ್ಲಿಕ್ ಕನ್ನಡ”ದಲ್ಲಿ ಮತ್ತೆ  ಉದ್ಯೋಗ ಕಡಿತ..! ಮತ್ತಷ್ಟು ಉದ್ಯೋಗಿಗಳಿಗೂ  ಕೆಲಸ ಕಳೆದುಕೊಳ್ಳುವ ಆತಂಕ.!


ಬೆಂಗಳೂರು:ರಿಪಬ್ಲಿಕ್ ಕನ್ನಡ ನ್ಯೂಸ್ ಚಾನೆಲ್ ನಲ್ಲಿ  ಉದ್ಯೋಗಿಗಳ ಕೆಲಸ ಕಸಿದುಕೊಳ್ಳುವ  ಪರಂಪರೆ ಮುಂದುವರೆದಿದೆ ಯಂತೆ….ಶೋಭಾ ಮಳವಳ್ಳಿ, ಚಾನೆಲ್ ಮುಖ್ಯಸ್ಥೆಯಾಗಿ ಬಂದ ಮೇಲೆ ನಡೆದ ಮೊದಲ ಬೆಳವಣಿಗೆಯಿದು…ಹಾಗೆಂದು ಇದಕ್ಕೆ ಅವರನ್ನು ದೂಷಿಸುವುದು ನಮ್ಮಉದ್ದೇಶವಲ್ಲ.ಅದು  ಸರಿಯೂ ಅಲ್ಲ .ಅಂದ್ಹಾಗೆ  ಚಾನೆಲ್ ನಲ್ಲಿ ನಡೆದಿದೆ ಎನ್ನಲಾದ ಉದ್ಯೋಗ ಕಡಿತಕ್ಕೆ, ಮ್ಯಾನೇಜ್ಮೆಂಟ್  ಕೊಟ್ಟಿರುವ ಕಾರಣ ಅನಗತ್ಯ ಸಿಬ್ಬಂದಿಯ ಹೊರೆ.ಹೆಚ್ಚುವರಿ ಸಿಬ್ಬಂದಿಯನ್ನು  ಕಡಿತಗೊಳಿಸಲೇಬೇಕಾದ ಕಾರಣಕ್ಕೆ ಸುಮಾರು 10 ಜನರನ್ನು ತೆಗೆಯಲಾಗಿದೆ ಎನ್ನುವ ಸುದ್ದಿ ಬಂದಿದೆ..ಆದರೆ ಆಡಳಿತದ ದಿಢೀರ್ ನಿರ್ದಾರದಿಂದ ಕೆಲಸ ಕಳೆದುಕೊಂಡ ಸಿಬ್ಬಂದಿ ಶಾಕ್ ಗೆ ಒಳಗಾಗಿದ್ದಾರಂತೆ.ಬಹುಷಃ ಈ ಬೆಳವಣಿಗೆ ಶೋಭಾ ಅವರಿಗೂ ಆಶ್ವರ್ಯದೊಂದಿಗೆ ಅಘಾತ ಮೂಡಿಸಿದೆಯಂತೆ. ಚಾನೆಲ್ ನಲ್ಲಿ ನಡೆಯುತ್ತಿದೆ ಎನ್ನಲಾದ ಈ  ವಿದ್ಯಾಮಾನ ಇತರೆ ಸಿಬ್ಬಂದಿಯನ್ನೂ  ಚಿಂತಾಕ್ರಾಂತರನ್ನಾಗಿಸಿದೆಯಂತೆ.

ಸುದ್ದಿ ಮಾದ್ಯಮಗಳಲ್ಲಿ  ಉದ್ಯೋಗಭದ್ರತೆಯ ದೊಡ್ಡ ಸಮಸ್ಯೆ ಕಾಡಲಾರಂಭಿಸಿದೆ ಅನ್ನಿಸುತ್ತಿದೆ. ಅನೇಕ ಚಾನೆಲ್ ಗಳು ತಮ್ಮ ಸಿಬ್ಬಂದಿಗೆ ಸೋಡಾ ಚೀಟಿ ನೀಡುವ ಕೆಲಸ ಮಾಡುತ್ತಿವೆಯಂತೆ.. ಸಿಬ್ಬಂದಿ ಆಫೀಸ್ ಗೆ ಹೋಗೋದಷ್ಟೇ ಸತ್ಯ, ಎಚ್ ಆರ್ ಕಡೆಯಿಂದ ಯಾವಾಗ “ನಿಮ್ಮ ಅಗತ್ಯ ನಮ್ಮ ಸಂಸ್ಥೆಗಿಲ್ಲ..ನೀವಿನ್ನು ಹೊರಡಬಹುದು” ಎನ್ನುವ ಸಂದೇಶ ಬರುತ್ತೆಂದೂ ಹೇಳಕ್ಕು ಆಗುತ್ತಿಲ್ಲ.ಅಂದ್ಹಾಗೆ ಇದೆಲ್ಲಾ ಐಟಿಬಿಟಿಗಳಲ್ಲಿ ಸರ್ವೇಸಾಮಾನ್ಯವಾಗಿತ್ತು.ಆದರೆ ಇವತ್ತಿನ  ನ್ಯೂಸ್ ಚಾನೆಲ್ ಗಳಲ್ಲೂ ಇದು ಮಾಮೂಲಾಗಿಬಿಟ್ಟಿದೆ.ಯಾವಾಗಬೇಕಾದ್ರೂ ಕೆಲಸ ಕಳೆದುಕೊಂಡು ಚಾನೆಲ್ ಗಳಿಂದ ಹೊರಬೀಳಬಹುದಾದ ಸನ್ನಿವೇಶ ನಿರ್ಮಾಣವಾಗಿದೆ.ಇದಕ್ಕೆ ರಿಪಬ್ಲಿಕ್ ಕನ್ನಡದ ಸಿಬ್ಬಂದಿನೂ ಹೊರತಲ್ಲ ಎನ್ನಲಾಗ್ತಿದೆ.

ರಿಪಬ್ಲಿಕ್ ಕನ್ನಡ ನ್ಯೂಸ್ ಚಾನೆಲ್ ನಲ್ಲಿ ಉದ್ಯೋಗಕಡಿತ ಪರ್ವ ನಡೀತಲೇ ಇದೆ.ಇದೇನು ಹೊಸದಾದ ವಿಚಾರವೇನೂ ಅಲ್ಲ.ಕೆಲವು ಮೂಲಗಳ್ ಪ್ರಕಾರ ಈಗಾಗಲೇ ಸಾಕಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರಂತೆ. ಆ ಪೈಕಿ ಬೇರೆ ಸುದ್ದಿ ಸಂಸ್ಥೆಗಳಲ್ಲಿ ಕೆಲಸ ಪಡೆದುಕೊಂಡವರು ಕೇವಲ ಬೆರಳೆಣಿಕೆಯಷ್ಟು ಮಾತ್ರ.ಉಳಿದವರು ಕೆಲಸಕ್ಕಾಗಿ ಚಾತಕಪಕ್ಷಿಗಳಂತಾಗಿದ್ದಾರೆ.ಈ ಪರಿಸ್ತಿತಿ ಗಮನಿಸಿದಾಗ ಮಾದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಸಹದ್ಯೋಗಿ ಮಿತ್ರರ ಭವಿಷ್ಯದ ಬಗ್ಗೆ ಬಹುದೊಡ್ಡ ಚಿಂತೆ ಶುರುವಾಗುತ್ತದೆ.ಆದರೆ ಇದನ್ನು ಪ್ರಶ್ನಿಸಿ ಗದ್ದುಕೊಳ್ಳಬಲ್ಲ ಧೈರ್ಯ-ಎದೆಗಾರಿಕೆ-ಹೋರಾಟದ ಮನೋಭಾವ ಬಹುತೇಕರಲ್ಲಿ ಇಲ್ಲದಿರುವುದರಿಂದಲೇ, ಕೆಲಸ ಕಡಿತದಿಂದ ನಿರ್ದಯಿ,ಅಮಾನವೀಯ,ಹೇಸಿಗೆಯ ನಿರ್ದಾರಕ್ಕೆ ಮನ್ನಣೆ ಹಾಗೂ ಪುರಸ್ಕಾರ ದೊರೆಯುತ್ತಲೇ ಇವೆ.ಸಂಸ್ಥೆಗಳು ತಮ್ಮ ಧೋರಣೆ ಮುಂದುವರೆಸುತ್ತಲಿವೆ ಅಷ್ಟೇ.

ರಿಪಬ್ಲಿಕ್ ಕನ್ನಡದಂಥ ದೈತ್ಯ ಸಂಸ್ಥೆ ಎಷ್ಟೇ ಹರಸಾಹಸ ಮಾಡ್ತಿದ್ರೂ,ಏನೆಲ್ಲಾ ಸರ್ಕಸ್ ಮಾಡಿದ್ರೂ ಟಿಆರ್ ಪಿಯಲ್ಲಿ  ಹೇಳಿಕೊಳ್ಳುವಂಥ  ಪ್ರಗತಿಯನ್ನೇನು ಮಾಡ್ತಿಲ್ಲ.ಸುದ್ದಿ ಮಾದ್ಯಮದ ದಿಗ್ಗಜ ಅರ್ನಾಬ್ ಗೋಸ್ವಾಮಿ ಅವರಿಗೇನೇ ಕರ್ನಾಟಕದಲ್ಲಿ ರಿಪಬ್ಲಿಕ್ ಕನ್ನಡದ ಫರ್ಫಾಮೆನ್ಸ್  ಸಮಾಧಾನ-ತೃಪ್ತಿ ಕೊಟ್ಟಿಲ್ಲವಂತೆ.ಅವರು ಬಂದಾಗಲೆಲ್ಲಾ ಆ ಒಂದು ಬೇಸರವನ್ನು ವ್ಯಕ್ತಪಡಿಸಿ ದ್ದುಂಟು.ಈ ಕಾರಣಕ್ಕೇನೆ ಜಯಪ್ರಕಾಶ್ ಶೆಟ್ಟಿ ಅವರಾದಿಯಾಗಿ ಅನೇಕರ ಕೆಲಸವನ್ನು ಕಸಿದುಕೊಳ್ಳ ಲಾಗಿತ್ತಂತೆ…ಶೆಟ್ಟಿ ಸ್ಥಾನಕ್ಕೆ ಶೋಭಾ ಮಳವಳ್ಳಿ ಅವರನ್ನು ಭಾರೀ ನಿರೀಕ್ಷೆಗಳೊಂದಿಗೆ ಕರೆತರಲಾಗಿ ತ್ತು.. ಶೋಭಾ ಅವರಿಗೆ ಇದು ಹೊಸ ಜವಾಬ್ದಾರಿ ಆಗಿರುವುದರಿಂದ ದಿಢೀರನೇ ಮ್ಯಾಜಿಕ್ ಎಕ್ಸ್ ಪೆಕ್ಟ್  ಮಾಡಲಾಗೊಲ್ಲ..ಹಾಗೆ ನಿರೀಕ್ಷೆ ಕೂಡ ಮಾಡಬಾರದು.ಅದಕ್ಕೆ ಕಾಲಾವಕಾಶ ಕೂಡ ನೀಡಲಾಗಿದೆ ಎನ್ನುವ ಮಾತುಗಳಿವೆ.ಆದರೆ ಇದರ ನಡುವೆ ಉದ್ಯೋಗಿಗಳನ್ನು ತೆಗೆಯಲಾಗುತ್ತಿದೆ ಎನ್ನುವಂತದ್ದು  ಶೋಭಾ ಅವರಲ್ಲೂ ಅಲ್ಲಿನ ವ್ಯವಸ್ಥೆ ಬಗ್ಗೆ ಒಂದು ನಿಗಾ ಇರುವಂತೆ ಮಾಡಿರುವುದಂತೂ ಸತ್ಯ.

ಸಂಪಾದಕೀಯ ಸೇರಿದಂತೆ ಪ್ರೊಡಕ್ಷನ್,ಟೆಕ್ನಿಕಲ್ ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 10 ಜನರನ್ನು ಕೆಲಸದಿಂದ ತೆಗೆಯಲಾಗಿದೆಯಂತೆ.ಚಾನೆಲ್ ನ ಕೆಲವು ವಿಶ್ವಸನೀಯ ಮೂಲಗಳ  ಪ್ರಕಾರ ಅದು ಕಾಸ್ಟ್ ಕಟ್ಟಿಂಗ್ ಅಂತೆ.ಅಂದರೆ ಮ್ಯಾನೇಜ್ಮೆಂಟ್ ದೃಷ್ಟಿಯಲ್ಲ ಪ್ರಯೋಜನಕ್ಕಿಲ್ಲದ ಹುದ್ದೆಗಳಂತೆ. ಆರಂಭಿಸಿದಾಗಿನಿಂದ ಆರ್ಥಿಕವಾಗಿ ಹೇಳಿಕೊಳ್ಳುವಂತದ್ದೇನು ಪಡೆಯದ ಚಾನೆಲ್ ನಲ್ಲಿ ಹೆಚ್ಚಿನ ಸಿಬ್ಬಂದಿ ಮುಂದುವರೆಸುವುದರಿಂದ ನಷ್ಟ ಎಂದು ಭಾವಿಸಿ ಅವರಿಂದ ಕೆಲಸ ಕಸಿದುಕೊಳ್ಳಲಾಗಿದೆ ಯಂತೆ.ಮ್ಯಾನೇಜ್ಮೆಂಟ್ ಇದನ್ನು ಮೊದಲೇ ತಿಳಿಸಿಲ್ಲ.ಏಕಾಏಕಿ ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದ್ರೆ ಹೇಗೆ..? ನಾವೆಲ್ಲಿ ಹೋಗಿ ಸಾಯ್ಬೇಕು..ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೇ ಎಂದು ತಮ್ಮ ಆಪ್ತರ ಬಳಿ ದುಃಖ ತೋಡಿಕೊಂಡಿದ್ದಾರಂತೆ ಕೆಲಸ ಕಳೆದುಕೊಂಡವರು.

ALSO READ :  ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ "ಗೌಡ್ತಿ"ಯರು ಗರಂ: ಮಹಿಳಾ ಆಯೋಗಕ್ಕೆ ದೂರು

ಇದು ಕೇವಲ ರಿಪಬ್ಲಿಕ್ ಚಾನೆಲ್ ಕಥೆ ಮಾತ್ರವಲ್ಲ.ಕಾಸ್ಟ್ ಕಟ್ಟಿಂಗ್ ನೆವದಲ್ಲಿ ಉದ್ಯೋಗಿಗಳ ಭದ್ರತೆ ಗೇನೆ ಬೆಂಕಿ ಇಡುವುದು ಕಾಮನ್ ಆಗ್ಹೋಗಿದೆ.ಆದರೆ ಇದರಿಂದ ಎಂಥಾ ಗಂಭೀರ ಸ್ವರೂಪದ ಸಮಸ್ಯೆಗಳಾಗುತ್ತಿವೆ ಎನ್ನುವ ಪರಿವೇ ಮ್ಯಾನೇಜ್ಮೆಂಟ್ ಗಳಿಗೆ ಇಲ್ಲವಾಗಿದೆ.ಕೆಲಸ ಕಳೆದುಕೊಳ್ಳುವುದರ ಮೂಲಕ ಅವರ ಜೀವನವೇ ಅನಿಶ್ಚಿತತಗೆ ದೂಡಲ್ಪಡುತ್ತದೆ.ಬೇರೆ ಚಾನೆಲ್/ಪೇಪರ್ ಗಳು ಕೆಲಸ ಕೊಡಲು ಹಿಂದೇಟು ಹಾಕುತ್ತವೆ.ಸಮಾಜದಲ್ಲಿ ಉಳಿಸಿಕೊಂಡ ಸ್ಟೇಟಸ್ ಹಾಳಾಗಿ ಹೋಗ್ತದೆ.ರಿಪಬ್ಲಿಕ್ ಚಾನೆಲ್ ನಿಂದ ಹೊರಬಂದಿರುವ ಉದ್ಯೋಗಿಗಳ ಸ್ತಿತಿಯೂ ಬಹುತೇಕ ಹೀಗೆಯೇ ಆಗಲಿದೆ.

ಇದಿ್ಷ್ಟೇ ಅಲ್ಲ ರಿಪಬ್ಲಿಕ್ ಕನ್ನಡ ಚಾನೆಲ್ ನಲ್ಲಿ ಅಭದ್ರತೆಯ ಆತಂಕದ ವಾತಾವರಣವೇ ನಿರ್ಮಾಣವಾಗಿದೆಯಂತೆ.ಅವತ್ತು ಡ್ಯೂಟಿಗೆ ಬಂದವರು ಏನೂ  ಆತಂಕವಿಲ್ಲದೆ ಹೋದರೆ ಅದೇ ಸಮಾಧಾನವಂತೆ.ಆದರೆ ನಾಳೆ ಏನಾಗುತ್ತೆ ಎನ್ನುವುದಕ್ಕೆ ಮಾತ್ರ ಖಾತ್ರಿ ಇಲ್ಲವಂತೆ. ಕನ್ನಡ ಫ್ಲ್ಯಾಶ್  ನ್ಯೂಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಕೆಲಸ ಕಳೆದುಕೊಳ್ಳಲಿರುವ ಇನ್ನೊಂದಿಷ್ಟು ಉದ್ಯೋಗಿಗಳ ಲೀಸ್ಟ ಕೂಡ ಸಿದ್ದವಾಗಿದೆಯಂತೆ.ಇದು ಉದ್ಯೋಗಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆಯಂತೆ. ಹೀಗೆಯೇ ಮುಂದುವರುದ್ರೆ ಚಾನೆಲ್ ನ ಸ್ತಿತಿ ಏನಾಗಬಹುದು ನೀವೇ ಆಲೋಚಿಸಿ ನೋಡಿ..ಈಗಾಗಲೇ ಫೀಲ್ಡ್ ನಲ್ಲಿ ಯಾವ್ ಚಾನೆಲ್ ಗೆ ಬೇಕಾದ್ರೂ ಹೋಗ್ತೇವೆ..ಆದರೆ ರಿಪಬ್ಲಿಕ್ ಕನ್ನಡದ ಸಹವಾಸ ಮಾತ್ರ ಬೇಡಪ್ಪೋ ಬೇಡ ಎನ್ನುವಂತಾಗಿದೆಯಂತೆ.ಇದು ಒಳ್ಳೆಯ ಬೆಳವಣಿಗೆಯಂತೂ ಖಂಡಿತಾ ಅಲ್ಲ..

ಚಾನೆಲ್ ನ ಟಿಆರ್ ಪಿ ದೃಷ್ಟಿಯಿಂದ ಏನೆಲ್ಲಾ ಕ್ರಮ ಕೈಗೊಳ್ಳಲು ಸಾಧ್ಯವಿದೆಯೋ ಆ ಎಲ್ಲಾ ಆಯ್ಕೆ ಹಾಗೂ ನಿರ್ದಾರದ ಸ್ವಾತಂತ್ರ್ಯವನ್ನು ಶೋಭಾ ಅವರಿಗೇನೋ ನೀಡಲಾಗಿದೆ.ಅದಕ್ಕಾಗಿ ಅವರು ಹೆಚ್ಚುವರಿಯಾಗಿಯೂ ಒಂದಷ್ಟು ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಕೆಲಸ ಕೊಡಬಹುದು.ಆದರೆ ಹಾಗೆ ಮಾಡುವುದಕ್ಕಾಗಿ ಚಾನೆಲ್ ಆರಂಭವಾದಾಗಿನಿಂದ ಇರುವ ಸಿಬ್ಬಂದಿ ಕೆಲಸ ಕಸಿದುಕೊಂಡು ಅವರಹೊಟ್ಟೆಗೆ ಹೊಡೆಯುವ  ಕೆಲಸಗಳೇಕೆ ಆಗಬೇಕು  ಎನ್ನುವುದಷ್ಟೇ  ನಮ್ಮ ಪ್ರಶ್ನೆ.

ಶೋಭಾ ಅವರಲ್ಲಿ ಕನ್ನಡ ಫ್ಲ್ಯಾಶ್ ನ್ಯೂಸ್ ಮಾದ್ಯಮದ ಮೂಲಕ ಅನೇಕ ಸಿಬ್ಬಂದಿ ಮಾಡಿಕೊಂಡಿರುವ ಮನವಿ/ವಿನಂತಿ ಏನಂದರೆ ಈ ಕೆಲಸವನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ನಮ್ಮನ್ನು ಕೈ ಬಿಡಬೇಡಿ..ತಪ್ಪುಗಳೇನೇ ಆದ್ರೂ ಅದನ್ನು ತಿಳಿಸಿ,ತಿದ್ದಿಕೊಂಡು ಸರಿಯಾಗ್ತೇವೆ,ಹಾಗೆ ಮಾಡದೆ ಕೆಲಸ ಮಾತ್ರ ಕಸಿದುಕೊಳ್ಳಬೇಡಿ ಮೇಡಮ್ ಎಂದು ಅನೇಕರು ಮನವಿ ಮಾಡಿದ್ದಾರೆ. ಬಹುಷಃ ಈ ಕೂಗು-ಅಹವಾಲು-ಬಿನ್ನಹ ಶೋಭಾ ಮೇಡಮ್ ಅವರಿಗೆ ಕೇಳಿಸುತ್ತಾ..ಕೇಳಿದ್ರೇ ಸಾಕು, ರಿಪಬ್ಲಿಕ್ ಸಿಬ್ಬಂದಿಯ ಜೀವನಕ್ಕೆ ಭದ್ರತೆ ಸಿಕ್ಕಂಗಾಗುತ್ತದೆ.

ಮ್ಯಾನೇಜ್ಮೆಂಟ್ ನಿರ್ದಾರಗಳಲ್ಲಿ ಶೋಭಾ ಅವರಿಗೆ ತಲೆ ಹಾಕಲು ಅಧಿಕಾರ ಇಲ್ಲದಿರಬಹುದು. ಅದು ನಮಗೂ ಗೊತ್ತಿದೆ..ತಾಂತ್ರಿಕವಾಗಿ ಅದು ಸತ್ಯ..ಒಪ್ಪಿಕೊಳ್ಳೋಣ.  ಹಾಗಂತ  ಉದ್ಯೋಗಿಗಳನ್ನು ಹೊರೆಯ ನೆವದಲ್ಲಿ ಟಾರ್ಗೆಟ್ ಮಾಡುವುದನ್ನು ತಪ್ಪಿಸಲು ಪ್ರಯತ್ನ ಮಾಡುವುದರಲ್ಲಿ ತಪ್ಪೇನೂ ಇಲ್ಲ.. ಶೋಭಾ ಅವರಿಂದ ಉದ್ಯೋಗಿಗಳು ಈ ನಿರೀಕ್ಷೆ ಮಾಡುತ್ತಿರೋದು  ಮಾನವೀಯತೆ ದೃಷ್ಟಿಯಿಂದ ಅಷ್ಟೇ..


Political News

ಎಲೆನ್ (allen) ಅಕ್ರಮದ ಸಕ್ರಮಕ್ಕೆ ಮುಂದಾಯ್ತಾ ಶಿಕ್ಷಣ ಇಲಾಖೆ..? ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ  ಡಿಡಿಪಿಯು(ddpu) ಮನೋಹರ್  ಕೊಳ್ಳಾ “ಯೂ ಟರ್ನ್” ಹಿಂದಿದ್ಯಾ “ಮೆಗಾ ಪ್ಲ್ಯಾನ್”-“ಬಿಗ್ ಡೀಲ್”..!?

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

Scroll to Top