
ಬೆಂಗಳೂರು:ಮಾದ್ಯಮ ಕ್ಷೇತ್ರದಲ್ಲಿ ಸಧ್ಯ ಚರ್ಚೆಯಲ್ಲಿರುವ ಅನೇಕ ವಿದ್ಯಾಮಾನಗಳಲ್ಲಿ ರಾಜ್ ಟಿವಿ ಪ್ರಮುಖವಾದುದು ರಾಜ್ ನ್ಯೂಸ್ ಕನ್ನಡದ್ದು.ಅನೇಕ ಕಾರಣಗಳಿಂದ ಹಿಂದಿದ್ದವರ ಕೈಲಿಂದ ಚಾನೆಲ್ ಮತ್ತೊಬ್ಬರ ಕೈ ಗೆ ಜಾರಿದೆ.ಅದರ ಸಾರಥಿ-ದಿಕ್ಸೂಚಿ ಎಲ್ಲವೂ ಕನ್ನಡದ ಹಿರಿಯ ಪತ್ರಕರ್ತ ಶ್ರೀಧರ್ ಎನ್ನಲಾಗ್ತಿದೆ. ತಮಿಳ್ನಾಡು ಮೂಲದ ರಾಜ್ ಟಿವಿ ಕರ್ನಾಟಕದಲ್ಲಿ ಚಾನೆಲ್ ಆರಂಭಿಸಿದಾಗಲೇ ಅದರ ಭವಿಷ್ಯ ನುಡಿಯಲಾಗಿತ್ತು.ಹಮೀದ್ ಪಾಳ್ಯ ಅವರಂಥವ್ರು ಚಾನೆಲ್ ಆರಂಭಿಸಿದರಾದ್ರೂ ಅದರ ಬಗ್ಗೆ ಅವರು ಗಮನ ಹರಿಸಿದ್ದು ಕಡಿಮೆ ಎನ್ನುವ ಮಾತುಗಳಿದ್ವು .ಹಾಗಾಗಿಯೇ ಕನ್ನಡದ ಚಾನೆಲ್ ಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಬೆಳೆಯೊಕ್ಕೆ ಅವಕಾಶಗಳಿದ್ದಾಗ್ಯೂ ರಾಜ್ ಕನ್ನಡ ಆರಕ್ಕೇರಲೂ ಇಲ್ಲ..ಮೂರಕ್ಕೆ ಇಳಿಯಲೂ ಇಲ್ಲ.ತೆವಳುತ್ತಾ ತೆವಳುತ್ತಲೇ ಸಾಗಿದ ರಾಜ್ ಟಿವಿಗೆ ಭವಿಷ್ಯವಿಲ್ಲ ಎಂದು ಮನಗಂಡ ಹಮೀದ್ ಪಾಳ್ಯ ಅವರ ಟೀಮ್ ಚಾನೆಲ್ ನಿಂದ ಹೊರಗೆ ಬರಬೇಕಾಯ್ತು.

ಹಮೀದ್ ಪಾಳ್ಯ ಅವರನ್ನು ಬಿಟ್ಟು ಇನ್ನ್ಯಾರು ಎನ್ನುವ ಪ್ರಶ್ನೆ ಮೂಡಿದಾಗ ಅದಾಗಲೇ ವಿಜಯವಾಣಿ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿದ್ದ ಶಿವರುದ್ರಪ್ಪ ಹಾಗೂ ನ್ಯೂಸ್ 18 ಕನ್ನಡದ ಹಿರಿಯ ರಾಜಕೀಯ ವರದಿಗಾರರಾಗಿದ್ದ ಶ್ರೀನಿವಾಸ ಹಳಕಟ್ಟಿ ಎನ್ನುವ ಅನುಭವಿ ಪತ್ರಕರ್ತರು ರಾಜ್ ಟಿವಿ ಕನ್ನಡದ ಸಾರಥ್ಯ ವಹಿಸಿಕೊಳ್ಳಲು ಮುಂದಾದ್ರು.ವರದಿಗಾರಿಕೆ ಜತೆಗೆ ರಿಯಲ್ ಎಸ್ಪೇಟ್ ವ್ಯವಹಾರಸ್ಥರೂ ಆಗಿದ್ದ ಶಿವರುದ್ರಪ್ಪ ಬಂಡವಾಳ ಕ್ರೋಢೀಕರಿಸಿದ್ರೆ, ಸ್ನೇಹದ ಕಾರಣಕ್ಕೆ ಶ್ರೀನಿವಾಸ ಹಳಕಟ್ಟಿ ಪಾಲುದಾರರಾದ್ರುಇಬ್ಬರೂ ಪತ್ರಕರ್ತರೆ ಆಗಿದ್ದರಿಂದ ಚಾನೆಲ್ ಗೆ ಉತ್ತಮ ಭವಿಷ್ಯ ಸಿಗಬಹುದೆನ್ನುವ ನಿರೀಕ್ಷೆ ಮಾದ್ಯಮ ಕ್ಷೇತ್ರದಲ್ಲಿ ಮೂಡಿತ್ತು.ಆದರೆ ಅದು ಆಗಲಿಲ್ಲ ಎನ್ನುವುದು ದುರಾದೃಷ್ಟಕರ.
ಕೆಲವು ಕೋಟಿಗಳ ಲೆಕ್ಕದಲ್ಲಿ ಇಂತಿಷ್ಟು ವರ್ಷ ಚಾನೆಲ್ ನ್ನು ತಮಿಳ್ನಾಡಿನ ಮ್ಯಾನೇಜ್ಮೆಂಟ್ ನಿಂದ ಲೀಸ್ ಗೆ ಪಡೆದಿದ್ದರು. ರಾಜ್ ಟಿವಿ ನ್ಯೂಸ್ ನಷ್ಟಕ್ಕೆ ಸಿಲುಕಿದ್ದರೆ ರಾಜ್ ಮ್ಯೂಸಿಕ್ ಲಾಭದಲ್ಲಿತ್ತು. ನ್ಯೂಸ್ ನಲ್ಲಾಗುತ್ತಿದ್ದ ನಷ್ಟವನ್ನು ಮ್ಯೂಸಿಕ್ ನ ಲಾಭದಲ್ಲಿ ಸರಿದೂಗಿಸಿಕೊಂಡು ಹೋಗುವುದು ಅವರಿಬ್ಬರ ಐಡ್ಯಾ ಆಗಿತ್ತು.ಆರಂಭದಲ್ಲೇನೋ ಎಲ್ಲವೂ ಚೆನ್ನಾಗಿತ್ತು.ಆದರೆ ನಂತರದ ದಿನಗಳಲ್ಲಿ ಚಾನೆಲ್ ಸಂಕಷ್ಟಕ್ಕೆ ಸಿಲುಕುವ ಎಲ್ಲಾ ಲಕ್ಷಣ ಗೋಚರಿಸಲಾ ರಂಭಿಸ್ತು. ಹಾಗೆ ನೋಡಿದ್ರೆ ಚಾನೆಲ್ ಉದ್ದಾರವಾಗುವ ಲಕ್ಷಣಗಳು ಯಾವ ಹಂತದಲ್ಲಿಯೂ ಕಾಣಿಸಲೇ ಇಲ್ಲ.ಯಾರು ಯಾರೇನೇ ಮಾಡಿದ್ರೂ ಈ ಚಾನೆಲ್ ನ ಹಣೆಬರಹ ಇಷ್ಟೇ ಎನ್ನುವ ಮೆಸೇಜ್ ರವಾನೆಯಾಗಿಬಿಡ್ತು.ಸ್ವಂತ ಐಡ್ಯಾದಲ್ಲಿ ದುಡ್ಡು ಮಾಡಿಕೊಂಡವರು ಉದ್ದಾರವಾದ್ರು. ಆದ್ರೆ ಚಾನೆಲ್ ಮಾತ್ರ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಗೆ ತಲುಪಿಬಿಡ್ತು .

ಇದೆಲ್ಲದರ ನಡುವೆ ಶ್ರೀನಿವಾಸ ಹಳಕಟ್ಟಿ ಮತ್ತು ಶಿವರುದ್ರಪ್ಪ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಲಾರಂಭಿಸಿದವಂತೆ. ಚಾನೆಲ್ ನ ವಿವಿಧ ವಿಚಾರಗಳಲ್ಲಿ ಮನಸ್ತಾಪ-ಸಂಘರ್ಷ ಕಾಣಿಸಿಕೊಳ್ಳಲಾರಂಭಿಸಿದವಂತೆ.ಅದು ಕೊನೆಗೆ ಅವರಿಬ್ಬರ ನಡುವೆ ಚಾನೆಲ್ ವಿಚಾರದಲ್ಲಿ ಆಗಿದ್ದ ಒಪ್ಪಂದದಲ್ಲೂ ಬಿರುಕು ಸೃಷ್ಟಿಯಾಗಲು ಕಾರಣವಾಯಿತಂತೆ. ಮಾದ್ಯಮ ಕ್ಷೇತ್ರದಲ್ಲಿ ಇರುವ ಮಾತುಗಳ ಪ್ರಕಾರ ಶಿವರುದ್ರಪ್ಪ ಚಾನೆಲ್ ನಿಂದ ಶ್ರೀನಿವಾಸ ಹಳಕಟ್ಟಿ ಅವರನ್ನು ಹೊರದಬ್ಬಿದರಂತೆ.ಇಬ್ಬರು ಶರಂಪರ ಗಲಾಟೆ ಮಾಡಿಕೊಂಡ್ರಂತೆ. ಹಳಕಟ್ಟಿ ಇನ್ವಸ್ಟ್ ಮಾಡಿದ್ದ ಹಣವನ್ನೂ ಕೊಡದೆ ಶಿವರುದ್ರಪ್ಪ ಕೊಡಲೇ ಇಲ್ವಂತೆ. ಹಳಕಟ್ಟಿ ಅವರನ್ನು ತುಂಬಾ ಅವಮಾನವೀಯವಾಗಿ ನಡೆಸಿಕೊಂಡ್ರಂತೆ…ಈ ಎಲ್ಲಾ ಕಾರಣಗಳಿಂದಲೇ ಹಳಕಟ್ಟಿ ಚಾನೆಲ್ ನಿಂದ ಹೊರ ನಡೆದ್ರಂತೆ.ಇದಕ್ಕೆ ಶಿವರುದ್ರಪ್ಪ ತಲೆಕೆಡಿಸಿಕೊಳ್ಳಲೇ ಇಲ್ವಂತೆ…ಹೀಗೆ..ಹೀಗೆ ಅಲ್ಲಿನ ಬೆಳವಣಿಗೆಗಳ ಬಗ್ಗೆ ನಾನಾ ಪುಕಾರು-ಗುಲ್ಲೆದ್ದಿದ್ದು ನಿಜ.
ಆದರೆ ನಾವೇನೆ ವಿಶ್ಲೇಷಣೆ ಮಾಡಿದ್ರೂ(ಏಕೆಂದರೆ ಶ್ರೀನಿವಾಸ ಹಳಿಕಟ್ಟಿ ನನಗೆ ತುಂಬಾ ಆತ್ಮೀಯವಾದ ಮಾದ್ಯಮ ಮಿತ್ರ-ಅವರ ಅತ್ಯದ್ಭುತ ಹಾಸ್ಯಪ್ರಜ್ನೆಯ ಬಗ್ಗೆಯೇ ಇನ್ನೊಮ್ಮೆ ಯಾವಾಗಲಾದ್ರೂ ಲೇಖನ ಬರೆಯುವೆ) . ಶಿವರುದ್ರಪ್ಪ ಮತ್ತು ಹಳಕಟ್ಟಿ ಅವರ ವ್ಯಾಪ್ತಿಯಿಂದ ರಾಜ್ ಟಿವಿ ಕನ್ನಡ ಕೈ ತಪ್ಪೊಕ್ಕೆ ನಿಜವಾದ ಕಾರಣ ಏನನ್ನೋದು ಅವರಿಬ್ಬರಿಗೇನೆ ಗೊತ್ತಿರೋದು..ಆದರೆ ಆ ಚಾನೆಲ್ ನೊಳಗೆ ಕೆಲ;ಸ ಮಾಡುತ್ತಿರುವ ಸಿಬ್ಬಂದಿಯ ಪ್ರಕಾರ ಕೆಲ ತಿಂಗಳಿಂದಲೂ ನಮಗೆ ಸಂಬಳ ಕೊಡದಿರುವುದರ ಬಗ್ಗೆ ಮಾರ್ಕೆಟ್ ನಲ್ಲಿ ನೆಗೆಟಿವ್ ಆದ ಕಾಮೆಂಟ್ ಬರ್ತಿರೋದನ್ನು ಚೆನ್ನೈ ಮ್ಯಾನೇಜ್ಮೆಂಟ್ ಗಮನಿಸಿ ಗರಂ ಆಗಿತ್ತಂ ತೆ.ಸಿಬ್ಬಂದಿಯನ್ನು ಕುಟುಂಬದವರಂತೆ ನೋಡಿಕೊಂಡಿರುವ ನಮಗೆ ಇದು ದೊಡ್ಡ ಅವಮಾನ ಹಾಗೂ ಅಘಾತ. ನಿಮಗೆ ಅನೇಕ ಸಲ ಎಚ್ಚರಿಕೆ ಕೊಟ್ಟಾಗ್ಯೂ ತಲೆಕೆಡಿಸಿಕೊಂಡಿಲ್ಲ.ಹಾಗಾಗಿ ನಿಮ್ಮ ಜತೆಗಿನ ಒಪ್ಪಂದವನ್ನು ಅವಧಿಗೆ ಮುನ್ನವೇ ಮುಕ್ತಾಯಗೊಳಿಸುತ್ತಿದ್ದೇವೆ.ನಿಮ್ಮ ಡೆಪಾಸಿಟ್ ನ 1 ಕೋಟಿ ನಮ್ಮ ಬಳಿ ಇದೆ.ಸ್ಯಾಲರಿಯನ್ನು ನೀವು ತೀರಿಸಿದ್ರೆ ಅದನ್ನು ವಾಪಸ್ ಮಾಡ್ತೇವೆ.ಇಲ್ಲದಿದ್ದರೆ ಅದರಲ್ಲೇ ಸ್ಯಾಲರಿ ಪಾವತಿಸಬೇಕಾಗ್ತದೆ ಎಂದು ತಿಳಿಸಿದೆಯಂತೆ.ಅದರ ಅನ್ವಯವೇ ಎಲ್ಲಾ ಸಿಬ್ಬಂದಿಗೆ ಸಂಬಳವನ್ನು ಮ್ಯಾನೇಜ್ಮೆಂಟೇ ಕೊಟ್ಟಿದೆಯಂತೆ.


ಇದರ ನಡುವೆಯೇ ರಾಜ್ ಟಿವಿಯ ಉಸ್ತುವಾರಿ ಹಿರಿಯ ಪತ್ರಕರ್ತ ಶ್ರೀಧರ್ ಅವರ ತೆಕ್ಕೆಗೆ ಸೇರಿದೆ.ಶ್ರೀಧರ್ ಅವರ ಬಗ್ಗೆ ಹೆಚ್ಚಿಗೇನು ಹೇಳಬೇಕಿಲ್ಲ.ಈಟಿವಿ-ಉದಯ ಟಿವಿಗಳೇ ಕನ್ನಡ ಮಾದ್ಯಮ ಲೋಕದಲ್ಲಿ ಅಬ್ಬರಿಸುತ್ತಿದ್ದಾಗ ಉದಯ ನ್ಯೂಸ್ ನಲ್ಲಿ ಆಯಕಟ್ಟಿನ ಹುದ್ದೆಯಲ್ಲಿದ್ದವರು ಶ್ರೀಧರ್.ರಾಜಕೀಯಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಹರಿತವಾದ ವಿಶ್ಲೇಷಣೆ ಮಾಡುತ್ತಿದ್ದವರು.ದೊಡ್ಡ ದೊಡ್ಡ ರಾಜಕಾರಣಿಗಳ ಜತೆಗೆ ಅತ್ಯಾಪ್ತತೆ ಇದೆ.ಸಲಿಗೆಯಿದೆ. ಮಾದ್ಯಮ ಲೋಕದಲ್ಲೂ ಅಷ್ಟೇ ಅಜಾತಶತೃ ಎಂದು ಕರೆಯಿಸಿಕೊಂಡವರು.ಉದಯ ಟಿವಿಯಿಂದ ಹೊರ ಬಂದಮೇಲೆ ದೊಡ್ಡ ದೊಡ್ಡ ಚಾನೆಲ್ ಗಳಲ್ಲಿ ಮುಖ್ಯಸ್ಥರಾಗಿ ಕೆಲಸದ ಆಹ್ವಾನ ಬಂದಾಗ್ಲೂ ಅದ್ಯಾಕೋ ಬೇಡ ಎನ್ನುವ ನಿರ್ಲಿಪ್ತತೆ ಪ್ರದರ್ಶಿಸಿದ್ರು. ಇವರು ಓಕೆ ಎಂದಿದ್ದರೆ ಇವರನ್ನು ನಂಬಿಕೊಂಡು ಬಂಡವಾಳ ಹೂಡೊಕ್ಕೆ ರಾಜಕಾರಣಿಗಳು ಸಿದ್ದವಾಗಿದ್ರೂ ಅವಕಾಶ ಬಳಸಿಕೊಳ್ಳಲಿಲ್ಲ.
ಇವರದೇ ನೇತೃತ್ವದಲ್ಲಿ ಚಾನೆಲ್ ಆರಂಭಿಸಲು ಅನೇಕರು ಸಿದ್ದವಿದ್ದರೂ ತಲೆಕೆಡಿಸಿಕೊಳ್ಳದಿದ್ದ ಶ್ರೀಧರ್ ಹಾಗೊಮ್ಮೆ..ಹೀಗೊಮ್ಮೆ ದಿಢೀರ್ ಎಚ್ಚೆತ್ತುಕೊಂಡವರಂತೆ ಚಾನೆಲ್ ಶುರು ಮಾಡ್ಬೇಕು ಕಣ್ರೋ..ರೆಡಿಯಾಗ್ರೊ ಎಂದ್ಹೇಳಿ ಅನೇಕರಲ್ಲಿ ಉತ್ಸಾಹ -ನಿರೀಕ್ಷೆ ಮೂಡಿಸಿದ್ರು.ಆದರೆ ಅವ್ರೇ ಸುಮ್ಮನಾಗ್ತಿದ್ರು.ಇದು ಅವರ ಬಗ್ಗೆ ಈಯಪ್ಪ ಎಲ್ಲಾ ಕೆಪಾಸಿಟಿ ಇದ್ರೂ ಚಾನೆಲ್ ಮಾಡುವ ಮನಸ್ತಿತಿಯಲ್ಲಿಲ್ಲ ಬಿಡ್ರಪ್ಪಾ ಎಂದು ಮಾತಾಡಿಕೊಳ್ಳುವಂತೆ ಮಾಡಿತ್ತು.ಇದರ ನಡುವೆಯೇ ಪ್ರಜಾ ಟಿವಿ ಸೇರಿದಂತೆ ಇನ್ನು ಕೆಲವು ಚಾನೆಲ್ ಗಳಿಗೆ ಹೋಗಿ ನೋಡಿಕೊಂಡು ಬಂದಿದ್ದೂ ಆಯ್ತು..ಆದ್ರೆ ಶ್ರೀಧರ್ ಮಾತ್ರ ಮನಸ್ಸು ಮಾಡಲೇ ಇಲ್ಲ..ಆದ್ರೆ ಈಗ ಫೀನಿಕ್ಸ್ ನಂತೆ ಮೈ ಕೊಡವಿ ನಿಂತಂತೆ ಕಾಣ್ತಿದೆ. ರಾಜ್ ಟಿವಿಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆನ್ನುವ ಸುದ್ದಿ ಬಲವಾಗಿ ಕೇಳಿಬರ್ತಿದೆ. ಅವರ ಜತೆ ಮಾದ್ಯಮದಲ್ಲಿ ಒಡನಾಡಿದ, ಅವರೊಂದಿಗೆ ಕೆಲಸ ಮಾಡಿದ ನಂಬಿಗಸ್ಥರ ಪಡೆಯೇ ಇದೆ.ಅವರಲ್ಲಿ ಕೆಲವರನ್ನು ಆಯ್ದುಕೊಂಡು ತಂಡ ಮಾಡಿ, ರಾಜ್ ಟಿವಿಯಲ್ಲಿ ಹಾಲಿ ಕೆಲಸ ಮಾಡ್ತಿರುವ ಯಾರೊಬ್ಬರನ್ನು ಕೆಲಸದಿಂದ ತೆಗೆಯದೆ ಅವರೊಂದಿಗೆ ಕೆಲಸ ಮಾಡುವ ನಿರ್ದಾರ ಹಾಗು ಪ್ಲ್ಯಾನ್ ಮಾಡಿಕೊಂಡಿದ್ದಾರೆನ್ನುವ ಮಾತುಗಳಿವೆ.
ಮಾದ್ಯಮ ಕ್ಷೇತ್ರದಲ್ಲಿ ಎಲ್ಲರೊಂದಿಗೆ ಅತ್ಯಾಪ್ತತೆ ಹೊಂದಿರುವ ಪತ್ರಕರ್ತ ಎನ್ನುವ ಹೆಗ್ಗಳಿಕೆ ಜತೆಗೆ ಎಲ್ಲರನ್ನು ಪ್ರೀತಿ-ವಿಶ್ಬಾಸದೊಂದಿಗೆ ಕೊಂಡೊಯ್ಯುವ ಕೆಪಾಸಿಟಿ ಇರುವ ಶ್ರೀಧರ್ ಅವರ ತೆ್ಕ್ಕೆ್ಗೆ ರಾಜ್ ಟಿವಿ ಕನ್ನಡ ಸೇರಿದೆ ಎನ್ನುವ ಕನ್ನಡ ಫ್ಲ್ಯಾಶ್ ನ್ಯೂಸ್ ಬಳಗಕ್ಕೆ ಅತೀವ ಆನಂದ ತಂದಿದೆ.ಅವರ ಮುಂದಾಳತ್ವದಲ್ಲಿ ಚಾನೆಲ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ..ರಾಜ್ ಟಿವಿ ಕನ್ನಡದ ಬಗ್ಗೆ ಮಾದ್ಯಮ ಲೋಕದಲ್ಲಿ ಇರುವ ಕಳಂಕ ದೂರವಾಗಲಿ..ಅಲ್ಲಿರುವ ಮಾದ್ಯಮ ಮಿತ್ರರ ವೃತ್ತಿ ಹಾಗು ಬದುಕಿನ ಮಟ್ಟ ಸುಧಾರಿಸಲಿ ಎನ್ನುವುದೇ ನಮ್ಮ ಮನವಿ ಹಾಗು ಆರೈಕೆ ಕೂಡ…ಶ್ರೀಧರ್ ಹಾಗೂ ಅವರನ್ನು ಸೇರಿಕೊಳ್ಳುವ ಮಾದ್ಯಮ ಮಿತ್ರರ ತಂಡಕ್ಕೆ ಆಲ್ ದಿ ಬೆಸ್ಟ್..