*ನನ್ನ ಅಮ್ಮನೇ ಹೋದ್ಮೇಲೆ ನಿಮ್ಮ ಸ್ಯಾಲರಿ ತಗಂಡ್ ಏನ್ ಮಾಡೋಣ ಬಿಡಿ ಸಾರ್..*
*ಅನ್ಯಾಯವಾಗಿ ನನ್ನ ಅಮ್ಮನನ್ನು ಕೊಂದ್ ಬಿಟ್ರಲ್ಲಾ ಸಾರ್..!?*
*ನ್ಯಾಯಯುತ ದ್ವನಿಯಲ್ಲಿ ಹಕ್ಕಿನ ವೇತನ ಕೇಳಿದ್ದಕ್ಕೆ ಗೇಟ್ ಪಾಸ್… ಸಂಬಳ ಕೊಡದೆ ಸತಾವಣೆ..*

ಬೆಂಗಳೂರು: ಈ ಸುದ್ದಿ ನಿಜಕ್ಕೂ ಎಂಥಾ ಕಲ್ಲು ಮನಸನ್ನು ಕರೆಗಿಸುತ್ತದೆ…ಸುದ್ದಿ ಮನೆಗಳಲ್ಲಿ ಕೆಲಸ ಮಾಡುವವರನ್ನು ಇಷ್ಟೊಂದು ತಾತ್ಸಾರದಿಂದ ನಡೆಸಿಕೊಳ್ಳಲಾಗುತ್ತಾ..? ತಮಗೆ ಬರಬೇಕಿರೋ ಸಂಬಳಕ್ಕೆ ದ್ವನಿ ಎತ್ತಿದ್ರೆ ಸಂಸ್ಥೆಯಿಂದಲೇ ಗೇಟ್ ಪಾಸ್ ಕೊಡಲಾಗುತ್ತಾ..? ಕೊನೆಗೆ ಅವರ ಕುಟುಂಬದವರ ಸಾವಿಗೂ ನೈತಿಕವಾಗಿ ಕಾರಣವಾಗುವಂತ ಸ್ಥಿತಿ ಸೃಷ್ಟಿಯಾಗುತ್ತಾ..?ಕನ್ನಡದ ಪ್ರತಿಷ್ಟಿತ ನ್ಯೂಸ್ ಚಾನೆಲ್ ವೊಂದರ ಮಹಿಳಾ ಸಿಬ್ಬಂದಿ ವಿಷಯದಲ್ಲಿ ಹೀಗೆಯೇ ಆಗಿದೆ.. ನನ್ನ ತಾಯಿ ಆಸ್ಪತ್ರೆಯಲ್ಲಿ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದಾಳೆ..ಆಕೆಯನ್ನು ಉಳಿಸಿಕೊಳ್ಳೊಕ್ಕೆ ನನಗೆ ಕೊಡಬೇಕಾದ ಸಂಬಳ ಕೊಟ್ಟು ಪುಣ್ಯ ಕಟ್ಕೊಳ್ಳಿ ಸರ್ ಎಂದು ಅಂಗಲಾಚಿದ್ರೂ ದಯೆ ಬಾರದೆ ಸಂಸ್ಥೆಯಿಂದಲೇ ಕಿಕ್ ಔಟ್ ಮಾಡಿ,ಆಕೆಯ ತಾಯಿಯ ಸಾವಿಗೂ ಕಾರಣವಾಗಿದೆ ಆ ನ್ಯೂಸ್ ಚಾನೆಲ್.
ಈ ಸುದ್ದಿಮನೆಗಳು,ಹೊರಜಗತ್ತಿಗೆ ಸುದ್ದಿ ಬಿತ್ತರಿಸುವ ಕೆಲಸಕ್ಕೆ ಸೀಮಿತವಾ..? ನೋ ಚಾನ್ಸ್… ಅಸಂಗತ-ಅಮಾನವೀಯ ಎನ್ನುವಂತ ಘಟನೆಗಳ ಕಾರಣಕ್ಕೂ ಆಗಾಗ ಸುದ್ದಿಯಾಗುತ್ತಿರುತ್ತವೆ. ಅಂತದ್ದೇ ಒಂದು ಕಾರಣಕ್ಕೆ ಕನ್ನಡದ ನ್ಯೂಸ್ ಚಾನೆಲ್ ಸುದ್ದಿಯಲ್ಲಿದೆ. ಎಂಥವ್ರ ಮನಸನ್ನು ಕ್ಷಣ ಕ್ಷೋಭೆಗೀಡು ಮಾಡುವಂಥ ಈ ಘಟನೆ ಮೇಲೆ ಕನ್ನಡ ಫ್ಲ್ಯಾಶ್ ನ್ಯೂಸ್ ಬೆಳಕು ಚೆಲ್ಲುತ್ತದೆ. ಅಂದ್ಹಾಗೆ ಈ ನ್ಯೂಸ್ ಚಾನೆಲ್ ನ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಸಂಪಾದಕೀಯ ಮಂಡಳಿಗೆ ಯಾವುದೇ ವೈಯುಕ್ತಿಕ ಬೇಸರವಿಲ್ಲ.ಆದ್ರೆ ಸಂಸ್ಥೆಯ ಮಹಿಳಾ ಉದ್ಯೋಗಿ ಯೋರ್ವರ ವಿಷಯದಲ್ಲಿ ನಡೆದುಕೊಂಡಿತೆನ್ನಲಾದ ರೀತಿಗೆ ಆಕ್ರೋಶ ಖಂಡಿತಾ ಇದೆ)
ಟೌನ್ ಹಾಲ್ ಸುತ್ತಮುತ್ತಲಿರುವ ಕನ್ನಡದ ಆ ಪ್ರತಿಷ್ಟಿತ ಸುದ್ದಿವಾಹಿನಿಯ ಆಡಳಿತ ತನ್ನ ಮಹಿಳಾ ಸಿಬ್ಬಂದಿಯ ತಾಯಿಯನ್ನೇ ಬಲಿಪಡೆದ ಆರೋಪಕ್ಕೆ ಈಡಾಗಿದೆ. ತಾಯಿಯನ್ನು ಕಳೆದು ಕೊಂಡ ಆ ಮಹಿಳಾ ಉದ್ಯೋಗಿಯ ನಿಟ್ಟುಸಿರಿನ ಹಿಡಿಶಾಪಕ್ಕೆ ತುತ್ತಾಗಿದೆ.ತನ್ನ ಸಹದ್ಯೋಗಿ ಜತೆ ಚಾನೆಲ್ ನ ಆಡಳಿತ ನಡೆದುಕೊಂಡ ರೀತಿಗೆ ಅಲ್ಲಿನ ಸುದ್ದಿಮಿತ್ರರ ಕುಟುಂಬವೇ ಅಸಹ್ಯ ಪಟ್ಟಿದೆ. ಆ ಚಾನೆಲ್ ನಲ್ಲಿ ಸುದ್ದಿಯೇತರ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಆ ಯುವತಿ ಬಗ್ಗೆ ಚಾನೆಲ್ ನಲ್ಲಿ ಒಳ್ಳೆಯ ಮಾತುಗಳಿವೆ.ಹಾರ್ಡ್ ಅಂಡ್ ಪ್ರಾಮ್ಟ್ ವರ್ಕರ್.. ತನಗೆ ಕೊಟ್ಟ ಕೆಲಸವನ್ನು ಶೃದ್ದೆ ಮತ್ತು ಅಷ್ಟೇ ಅಚ್ಚುಕಟ್ಟಾಗಿ ಮಾಡುತ್ತಿದ್ದಾಕೆ.ಕೆಲಸದ ವಿಷಯದಲ್ಲಿ ಇನ್ನೊಬ್ಬರು ತನ್ನ ಕಡೆ ಬೊಟ್ಟು ಮಾಡಿ ತೋರಿಸುವಂತೆ ಮಾಡಿಕೊಂಡವಳೇ ಇಲ್ಲ.ನಡತೆ-ನಡುವಳಿಕೆಯಲ್ಲೂ ಸಭ್ಯಸ್ಥೆ..ಯಾರನ್ನೂ ಹೆಚ್ಚಾಗಿ ಹಚ್ಚಿಕೊಳ್ಳದೆ ತಾನಾಯ್ತು ತನ್ನ ಪಾಡಾಯ್ತೆಂಬ ನಿರ್ಲಿಪ್ತ ಮನಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಇಂಥಾ ಹೆಣ್ಮಗಳ ಬದುಕಿನಲ್ಲಿ ದೊಡ್ಡ ಬಿರುಗಾಳಿಯೇ ಎದ್ದುಬಿಡುತ್ತದೆ. ಬಹುಷಃ ಅಲ್ಲಿಂದಲೇ ಆಕೆಯ ಸಂಕಷ್ಟದ ದಿನಗಳು ಶುರುವಾದವು ಎನ್ನಿಸುತ್ತವೆ.

ಇದು ಸತ್ಯವೋ, ಕಾಕತಾಳಿಯೋ ಗೊತ್ತಿಲ್ಲ, ನಷ್ಟವನ್ನೇ ಕಾಣದಿದ್ದ ಆಕೆ ಕೆಲಸ ಮಾಡ್ತಿದ್ದ ಚಾನೆಲ್ ನ ಪರಿಸ್ತಿತಿ ಇತ್ತೀಚೆಗೇಕೋ ಹಳಿ ತಪ್ಪಿಬಿಟ್ಟಿದೆಯಂತೆ. ಇಂಥದ್ದೊಂದು ಆಪಾದನೆ ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯಿಂದಲೇ ಕೇಳಿಬರುತ್ತಿರುವುದು ಗಂಭೀರ ಹಾಗೂ ಗಮನಾರ್ಹ.ಆದರೆ ಕೆಲವು ಮೂಲಗಳ ಪ್ರಕಾರ, ಚಾನೆಲ್ ನಷ್ಟದಲ್ಲಿದೆ ಎನ್ನೋದು ಆಡಳಿತ ಮಂಡಳಿ ಯೇ ಸೃಷ್ಟಿಸಿರುವ ಅಂತೆಕಂತೆ. ರೆವಿನ್ಯೂನಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಆಗಿರಬಹುದೇ ಹೊರತು, ಆಡಳಿತ ವ್ಯವಸ್ಥೆ ಬಿಂಬಿಸುತ್ತಿರುವಂತೆ ಆತಂಕಕಾರಿಯಾಗೇನೂ ಇಲ್ಲವಂತೆ.ಪರಿಣಾಮ, ಪ್ರತಿ ತಿಂಗಳ 10 ರೊಳಗೆ ಸಿಬ್ಬಂದಿ ಕೈ ಸೇರುತ್ತಿದ್ದ ಸಂಬಳ ತಿಂಗಳುಗಳಾದ್ರೂ ಸಿಗದಂತ ಸ್ಥಿತಿ ನಿರ್ಮಾಣವಾಯ್ತು. ಇದನ್ನು ಕೇಳಿ ಸುಮ್ಮನಾದವರ ನಡುವೆ ಆ ಮಹಿಳಾ ಉದ್ಯೋಗಿ ಮಾತ್ರ ಸಿಡಿದೆದ್ದಿದ್ದಾಳೆ. ಕೆಲಸಕ್ಕೆ ಬರೋದೇ ತುತ್ತು ಚೀಲ ತುಂಬಿಕೊಳ್ಳೊಕ್ಕೆ…ನಮ್ಮನ್ನು ದುಡಿಸಿಕೊಳ್ಳುವ ನಿಮ್ಮಿಂದ ನಿರೀಕ್ಷಿಸೋದು ತಿಂಗಳ ಸಂಬಳ ಮಾತ್ರ.ಅದರಾಚೆ ನಿಮ್ಮ ದುಡಿಮೆ ಏನು ಎನ್ನುವುದು ನಮಗೆ ಅನಗತ್ಯ.ನಮಗೆ ಸಿಗಬೇಕಿರುವ ಸಂಬಳ ಕೊಡಿ ಎಂದು ದ್ವನಿ ಎತ್ತಲು ಆಕೆ ಮುಂದಾಗಿದ್ದಾಳೆ.ಪಾಪ..ಅದೇ ಆಕೆಯ ಕೆಲಸಕ್ಕೆ ಮುಳುವಾಗಿಬಿಡ್ತೇನೋ ಗೊತ್ತಿಲ್ಲ.
ಉದ್ಯೋಗಿಗಳು ಕೂಡ, ಸಂಸ್ಥೆ ನಷ್ಟದಲ್ಲಿದೆ ಎಂದು ಎಷ್ಟು ದಿನ, ತಮ್ಮ ಬವಣೆ-ಸಂಕಟ-ಸಂಕಷ್ಟಗಳನ್ನು ಸಂಸ್ಥೆಗಾಗಿ ಬಲಿಗೊಟ್ಟು ಕೆಲಸ ಮಾಡಲಿಕ್ಕಾಗುತ್ತೆ ಹೇಳಿ.? . ಒಂದು ಹಂತದವರೆಗೂ ಕಾದ ಆಕೆಯ ತಾಳ್ಮೆ ಕಟ್ಟೆ ಒಡೆದಿದೆ. ನೇರವಾಗಿ ಎಚ್ ಆರ್ ಅವರ ಬಳಿ ತೆರಳಿ ಸಾರ್ ನನ್ನ ಸಂಬಳ ಕೊಡಿ.ನನ್ನ ಅಮ್ಮನಿಗೆ ಹುಷಾರಿಲ್ಲ..ಆಸ್ಪತ್ರೆಯಲ್ಲಿದ್ದಾರೆ. ಟ್ರೀಟ್ಮೆಂಟ್ ಕೊಡಿಸ್ಲಿಕ್ಕೂ ಕಾಸಿಲ್ಲ.. ಸಂಬಳ ಕೊಟ್ಟು ಪುಣ್ಯ ಕಟ್ಕೊಳ್ಳಿ ಎಂದು ಕೇಳಿದ್ದಾಳೆ.ಹೀಗೆಯೇ ಮೂರ್ನಾಲ್ಕು ಬಾರಿ ಕೇಳಿರಬಹುದೇನೋ..? ಸಾಲದ್ದಕ್ಕೆ ತನ್ನ ಅಮ್ಮ ಆಸ್ಪತ್ರೆಯಲ್ಲಿ ಟ್ರೀಟ್ಮೆಂಡ್ ಪಡೆಯುತ್ತಿರುವ ವೀಡಿಯೋಗಳನ್ನೂ ಕಳುಹಿಸಿಕೊಟ್ಟಿದ್ದಳಂತೆ. ಇಷ್ಟಾದ್ರೂ ಎಚ್ ಆರ್ ವಿಭಾಗ, ಮನುಷ್ಯತ್ವವಿಲ್ಲದವರಂತೆ ವರ್ತಿಸಿದ್ದಾರಂತೆ ಆ ಎಚ್.ಆರ್. ಮ್ಯಾನೇಜ್ಮೆಂಟ್ ಗಮನಕ್ಕೆ ನಿಮ್ಮ ಸ್ಯಾಲರಿ ಬಗ್ಗೆ ಹೇಳಿದ್ದೇನೆ..ಆದ್ರೆ ಆ ಕಡೆಯಿಂದ ಸ್ಯಾಲರಿ ಕೊಡಿ ಎಂದು ಆರ್ಡರ್ ಬಂದಿಲ್ಲ ಎಂದು ಉಡಾಫೆತನದಿಂದ ರಿಯಾಕ್ಟ್ ಮಾಡಿದ್ದಾರಂತೆ.ಆಸ್ಪತ್ರೆಯಲ್ಲಿ ಜೀವನ್ಮರಣಗಳ ನಡುವೆ ಹೋರಾಡುತ್ತಿರುವ ತಾಯಿ ಉಳಿಸಿಕೊಳ್ಳಲು ಯಮನೊಂದಿಗೆ ಸಮರಕ್ಕಿಳಿದವಳಂತೆ ಪ್ರಯತ್ನಿಸುತ್ತಿದ್ದ ಆ ಹೆಣ್ಮಗಳಿಗೆ ಸಿಟ್ಟು-ಅಸಹನೆಗಿಂತ ಅಸಹ್ಯ ಮೂಡಿರಬಹುದೇನೋ.? ಏನೇ ಆದ್ರೂ ಮ್ಯಾನೇಜ್ಮೆಂಟ್ ನ ಮನಸು ಕರಗಲೇ ಇಲ್ವಂತೆ. ಆಗಲೇ ಆಕೆ ಕೆರಳಿ ಕೆಂಡವಾಗಿರೋದು.

ಮ್ಯಾನೇಜ್ಮೆಂಟ್ ಕಿವಿಗೆ ಎಚ್ ಆರ್ ಎನಿಸಿಕೊಂಡಾತ ಅದೇನ್ ತುಂಬಿದ್ನೋ ಗೊತ್ತಿಲ್ಲ, ಆಕೆ ತಮ್ಮ ಮಾನ., ಮರ್ಯಾದೆ, ಘನತೆ, ಪ್ರತಿಷ್ಟೆಯೆಲ್ಲಾ ಮೂರು ಕಾಸಿಗೆ ಹರಾಜು ಹಾಕಿಬಿಟ್ಲು ಎಂಬ ಕೋಪಕ್ಕೆ, ಮುಖ್ಯಸ್ಥರೆನಿಸಿಕೊಂಡವ್ರು ಆಕೆಯನ್ನೇ ಕೆಲಸದಿಂದ ತೆಗೆದುಬಿಡೋಕ್ಕೆ ಸೂಚಿಸಿದ್ರಂತೆ. ಎಲ್ಲವನ್ನು ಡಿಸೈಡ್ ಮಾಡಿಕೊಂಡವಳಂತಿದ್ದ ಆಕೆ, ತನ್ನ ನೋವು-ಸಂಕಟ-ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ. ಜೀವಕ್ಕೆ ಜೀವವಾಗಿದ್ದ ಅಮ್ಮನ ಆರೈಕೆಯತ್ತ ಗಮನ ಹರಿಸಿದ್ದಾಳೆ.ಆದರೆ ಹಣ ಹೊಂದಿಸಲಾಗದೆ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾಳಂತೆ. ಈ ನಡುವೆ ಕೆಲ ದಿನಗಳ ನಂತರ ಆ ಮಹಿಳಾ ಉದ್ಯೋಗಿಯ ಅಕೌಂಟ್ ಗೆ ಸ್ಯಾಲರಿ ಹಾಕಿದ ಎಚ್ ಆರ್ ಕರೆ ಮಾಡಿ ನಿಮ್ಮ ಅಕೌಂಟ್ ಗೆ ಸ್ಯಾಲರಿ ಹಾಕಿದ್ದೇವೆ. ಚೆಕ್ ಮಾಡಿಕೊಳ್ಳಿ ಎಂದು ಹೇಳಿದ್ದಾರಂತೆ. ಆದರೆ ಆ ಕ್ಷಣ ಆ ಯುವತಿ ಕೊಟ್ಟ ಉತ್ತರ ಕೇಳಿ ವಿಚಲಿತನಾಗಿದ್ದಾನೆ.
ನನ್ನ ಜೀವವೇ ಆಗಿದ್ದ ನನ್ನಮ್ಮನೇ ಸತ್ತು ಹೋದ್ಲು ಸರ್.. ಜತೆಗಿರಬೇಕಾದ ಜೀವವೇ ದೂರವಾದ್ಮೇಲೆ ನಿಮ್ ಸ್ಯಾಲರಿ ಇಟ್ಕೊಂಡು ನಾನೇನ್ ಮಾಡ್ಲಿ..ನೀವು ಅವತ್ತು ಸಂಬಳ ಕೊಟ್ಟಿದಿದ್ದರೆ ನನ್ನಮ್ಮ ಉಳೀತಿದ್ಲು. ನನ್ನಮ್ಮನನ್ನು ಕಳೆದುಕೊಂಡ್ ಬಿಟ್ಟೆ..ಇದಕ್ಕೆ ನೀವೂ ಕಾರಣ, ನನ್ ಶಾಪ ನಿಮಗೆ ತಟ್ಟದೇ ಇರೊಲ್ಲ ಎಂದು ಗದ್ಗದಿತವಾಗಿದ್ದಾಳೆ. ಏನು ಹೇಳಬೇಕೆಂದು ಗೊತ್ತಾಗದೆ ಎಚ್ ಆರ್ ಗಂಟಲು ಒಣಗಿಹೋಗಿದೆ. ಮೇಡಮ್ ಐ ಆಮ್ ವೆರಿ ಸಾರಿ..ಆದ್ರೆ ಇದರಲ್ಲಿ ನನ್ನ ತಪ್ಪೇನಿಲ್ಲ..ಮ್ಯಾನೇಜ್ಮೆಂಟ್ ಅವರು ಸಂಬಳ ಹಾಕಿ ,ಇಂಥವರಿಗೆ ಹಾಕಿ ಎಂದ್ರೆ ಹಾಕೊಕ್ಕೆ ನನಗೇನು..ನನ್ನ ತಪ್ಪೇನು ಇಲ್ಲ..ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ..ಎಂದು ನೋವಿನಿಂದಲೇ ಮಾತನಾಡಿದ್ದಾನೆ.ಈಗ ಆ ಹೆಣ್ಮಗಳು ಮಾದ್ಯಮ ಕ್ಷೇತ್ರಕ್ಕೊಂದು ದೊಡ್ಡ ಹಿಡಿಶಾಪ ಹಾಕ್ಕೊಂಡು ಎಲ್ಲಿ ಜೀವನ ನಡೆಸುತ್ತಿದ್ದಾಳೋ ಗೊತ್ತಿಲ್ಲ.
ನಿಮಗೆ ಗೊತ್ತಿರಲಿ, ಸುದ್ದಿಮನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ರಕ್ತಬೆವರಿಂದಲೇ ಲಾಭ ಮಾಡಿಕೊಳ್ಳುವ ಕೆಲವು ನ್ಯೂಸ್ ಚಾನೆಲ್ ಗಳು ಅವರ ಸಂಕಷ್ಟಕ್ಕೆ ಸ್ಪಂದಿಸುವ ಮಾತು ಹಾಳಾಗಿ ಹೋಗ್ಲಿ ಅವರಿಗೆ ಸಿಗಬೇಕಾದ ಸಂಬಳ ಕೊಡ್ಲಿಕ್ಕೂ ನೂರಾರು ಸಬೂಬು ಹೇಳೋದು ಎಷ್ಟು ಸರಿ..? ಮೇಲ್ಕಂಡ ಪ್ರಕರಣದಲ್ಲಿ ಪಾಪ..ಆ ಉದ್ಯೋಗಿ ಕೇಳಿದ್ದೇನು..? ತಿಂಗಳ ಸಂಬಳ ಅಷ್ಟೇ ಅಲ್ವಾ..ಆಕೆ ಬೇರೆ ಏನನ್ನಾದ್ರೂ ಕೇಳಿದ್ಲಾ..? ಏರುದ್ವನಿಯಲ್ಲಿ ಸಂಬಳ ಕೇಳಿದ್ದೇ ಮಹಾಪರಾಧ..ನಮ್ಮ ಮಾನ ಕಳೆದುಬಿಟ್ಲು ಎಂದು ಆತುರಕ್ಕೆ ಬಿದ್ದು ಆಕೆಯನ್ನು ಕೆಲಸದಿಂದಲೇ ತೆಗೆದು ಹಾಕಿದ್ದು ಎಷ್ಟು ಸರಿ..? ಯಾವ ನ್ಯಾಯ…? ಅಮ್ಮ ಆಸ್ಪತ್ರೆಯಲ್ಲಿ ದ್ದಾರೆ. ಚಿಕಿತ್ಸೆಗೆ ಹಣ ಬೇಕು..ನನ್ನ ಸ್ಯಾಲರಿ ಕೊಟ್ಟರೆ ಉಪಕಾರವಾಗುತ್ತೆ ಎಂದು ಪರಿಪರಿಯಾಗಿ ಕೇಳಿಕೊಂಡಾಗ ಮನುಷ್ಯತ್ವ ಇದ್ದರೆ ಸ್ಯಾಲರಿ ಜತೆ ಇನ್ನಷ್ಟು ಸೇರಿಸಿ ಕೊಟ್ಟು ಪುಣ್ಯಾತ್ಮ-ಆಪದ್ಬಾಂಧವರಾಗಬಹುದಿತ್ತೇನೋ..?
ಆದರೆ ಕೆಲಸ ಕಸಿದುಕೊಂಡು,ಸಂಬಳವನ್ನು ಕೊಡದೆ ಆಕೆಯ ಅಮ್ಮನ ಸಾವಿಗೆ ಕಾರಣವಾಗಿಬಿಟ್ರು.. ಚಾನೆಲ್ ನ ಆಡಳಿತಕ್ಕೆ ಮೆತ್ತಿದ ಈ ಕಳಂಕ ಯಾವತ್ತೂ ದೂರವಾಗೊಲ್ಲ ಬಿಡಿ..ಮ್ಯಾನೇಜ್ಮೆಂಟ್ ಗಳು ಇಷ್ಟೊಂದು ಸಂವೇದನಾರಹಿತವಾಗಿಬಿಟ್ರೆ ಹೇಗೆ..ಸುದ್ದಿ ಮನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ನಾವು ಕೊಟ್ಟಷ್ಟನ್ನು ಪಡೆದು ನಮ್ಮ ಸನ್ನೆಗಳಲ್ಲಿ ಕೆಲಸ ಮಾಡುವ ಜೀತದಾಳುಗಳಂತೆ ಟ್ರೀಟ್ ಮಾಡಿಬಿಟ್ರೆ ಹೇಗೆ ಹೇಳಿ..? ಬಹುತೇಕ ಮಾದ್ಯಮಗಳಲ್ಲಿ ಹಿಂದಿನಿಂದ ಈಗಿನವರೆಗೂ ಇರುವ ಕೆಟ್ಟ-ದಾರುಣ-ಅಸಹ್ಯಕರ ವಾತಾವರಣವೇ ಅಂತದ್ದು..ಹಾಗಾಗಿನೇ ಇಲ್ಲೇ ಬದುಕು ಕಟ್ಟಿಕೊಳ್ಳೊಕ್ಕೆ ಬಣ್ಣ ಬಣ್ಣದ ಕನಸುಗಳನ್ನಿಟ್ಟುಕೊಂಡು ಅತ್ಯುತ್ಸಾಹದಿಂದ ಬರುವ ನೂರಾರು ಯುವ ಮಾದ್ಯಮ ಮಿತ್ರರು,ಕ್ರೌರ್ಯ-ದೌರ್ಜನ್ಯಕ್ಕೆ ಹೆದರಿ,ಹಾದಿ ಮದ್ಯದಲ್ಲೇ ಭ್ರಮನಿರಸನಕ್ಕೆ ಒಳಗಾಗಿ, ಮಾದ್ಯಮಗಳನ್ನೇ ತೊರೆಯುತ್ತಿದ್ದಾರೆ.ಪತ್ರಿಕೋದ್ಯಮ ಎದುರಿಸುತ್ತಿರುವ ಗಂಭೀರ-ಆತಂಕಕಾರಿ ಸಮಸ್ಯೆ ಇದು..

ಇದು ಘಟನೆಯಿಂದ ಮನಸನ್ನು ಭಾರಮಾಡಿಕೊಂಡ ಕೆಲವು ಮಾದ್ಯಮಮಿತ್ರರ ಕಳವಳದಿಂದ ಬೆಳಕಿಗೆ ಬಂದ ಸುದ್ದಿ..ಆದರೆ ಸುದ್ದಿನೇ ಆಗದ ಇನ್ನೆಷ್ಟೋ, ಇಂಥ ಘಟನೆಗಳು ಚಾನೆಲ್ ಗಳಲ್ಲಿ ನಡೆಯುತ್ತಿರಬಹು ದಲ್ವಾ,? ಹೊರಜಗತ್ತಿಗೆ ಗೊತ್ತಾಗದಂತೆ ಅವನ್ನು ಸಮಾಧಿ ಮಾಡುತ್ತಿರಬಹುದಲ್ವಾ.? ಖಂಡಿತಾ ಹಾಗೆ ನಡೆಯುತ್ತಿರಬಹುದು..ಸಂಸ್ಥೆ ಲಾಭದಿಂದ ತುಂಬಿ ತುಳುಕುತ್ತಿರಲಿ..ನಷ್ಟಕ್ಕೆ ಸಿಲುಕಿ ತತ್ತರಿಸುತ್ತಿರಲಿ ಬದ್ಧತೆ-ನಿಷ್ಟೆ-ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿರುವ ಬಹುಪಾಲು ಸಿಬ್ಬಂದಿಯ ನಿರೀಕ್ಷೆ-ಅಪೇಕ್ಷೆ ತಿಂಗಳ ಸಂಬಳ ಮಾತ್ರ.ಅದರಾಚೆ ಅವರು ಏನಕ್ಕೂ ತಲೆಕೆಡಿಸಿಕೊಳ್ಳುವುದೇ ಅಲ್ಲ..ಅದು ಅವರಿಗೆ ಅನಗತ್ಯ ಕೂಡ.ಆದ್ರೆ ಬದುಕು ಕಟ್ಟಿಕೊಳ್ಳೊಕ್ಕೆ, ನೂರಾರು ಕಿಲೋಮೀಟರ್ ನಷ್ಟು ದೂರದ ಊರುಗಳಿಂದ, ಸ್ವಂತದವರನ್ನೆಲ್ಲಾ ತೊರೆದು, ಗೊತ್ತು ಗುರಿಯಿಲ್ಲದ ಬೆಂಗಳೂರಿನಂಥ ಊರಿಗೆ ಬರುವ ಯುವ ಮಾದ್ಯಮ ಮಿತ್ರರನ್ನು ಸಂಸ್ಥೆಗಳ ಆಡಳಿತ, ಮನುಷ್ಯರಂತೆ ದುಡಿಸಿಕೊಳ್ಳಲಿ..ನಡೆಸಿಕೊಳ್ಳಲಿ..
ಎಚ್ ಆರ್ ಎನಿಸಿಕೊಂಡಾತ ಮ್ಯಾನೇಜ್ಮೆಂಟ್ ಕಿವಿಗೆ ಅದೇನ್ ತುಂಬಿದ್ನೋ ಏನೋ ಗೊತ್ತಿಲ್ಲ.. ತಮ್ಮ ಮಾನ.,ಮರ್ಯಾದೆ, ಘನತೆಪ್ರತಿಷ್ಟೆಯೆಲ್ಲಾ ಆಕೆ ಮೂರು ಕಾಸಿಗೆ ಹರಾಜು ಹಾಕಿಬಿಟ್ಲು ಎನ್ನುವ ಸಿಟ್ಟು ಅಸಹನೆಗೆ ಮ್ಯಾನೇಜ್ಮೆಂಟ್ ಆ ಯುವತಿಯನ್ನೇ ಕೆಲಸದಿಂದ ತೆಗೆದುಬಿಡುತ್ತಂತೆ.ಹೋಗುವ ಮುನ್ನ ನೋವು-ಸಂಕಟ-ಆಕ್ರೋಶದಿಂದ ಕುದಿಯುತ್ತಿದ್ದ ಆಕೆ ಕೂಡ ಸರಿಯಾಗೇ ಝಾಡಿಸಿ ತೆರಳಿದ್ದಾಳೆ.ಜೀವಕ್ಕೆ ಜೀವವಾಗಿದ್ದ ಅಮ್ಮನ ಆರೈಕೆಯತ್ತ ಗಮನ ಹರಿಸಿದ್ದಾಳೆ.ಕೆಲ ದಿನಗಳ ನಂತರ ಪವಾಡ ಎನ್ನುವ ರೀತಿಯಲ್ಲಿ ಮ್ಯಾನೇಜ್ಮೆಂಟ್ ಗೆ ಜ್ಞಾನೋದಯವಾಗಿರಬೇಕು.ಆ ಮಹಿಳಾ ಉದ್ಯೋಗಿಯ ಅಕೌಂಟ್ ಗೆ ಸ್ಯಾಲರಿ ಹಾಕಿದೆ. ಏನೋ ಮಹಾನ್ ಉಪಕಾರ ಮಾಡಿದವರಂತೆ ಎಚ್ ಆರ್ ನೋಡಮ್ಮ ನಿನ್ನ ಸ್ಯಾಲರಿ ಹಾಕಿದ್ದೇವೆ. ಚೆಕ್ ಮಾಡಿಕೋ ಎಂದು ಹೇಳಿದ್ದಾರಂತೆ.ಆದರೆ ಆ ಯುವತಿಯಿಂದ ಅಂತದ್ದೊಂದು ಉತ್ತರ ಬರಬಹುದೆನ್ನುವ ಅಂದಾಜನ್ನು ಬಹುಷಃ ಆ ಎಚ್ ಆರ್ ಮಾಡಿರಲಿಲ್ಲ ಎಂದೆನಿಸುತ್ತೆ.
”ನನ್ನಮ್ಮನೇ ಸತ್ತು ಹೋದ್ಲು ಸರ್.. ಜತೆಗಿರಬೇಕಾದ ಜೀವವೇ ದೂರವಾದ್ಮೇಲೆ ನಿಮ್ ಸ್ಯಾಲರಿ ಇಟ್ಕೊಂಡು ನಾನೇನ್ ಮಾಡ್ಲಿ..ನೀವು ಅವತ್ತು ಸಂಬಳ ಕೊಟ್ಟಿದಿದ್ದರೆ ನನ್ನಮ್ಮ ಉಳೀತಿದ್ಲು. ನನ್ನಮ್ಮನನ್ನು ಕಳೆದುಕೊಂಡ್ ಬಿಟ್ಟೆ..ನೀವೂ ಇದಕ್ಕೆ ಕಾರಣ ಆಗ್ತೀರಾ..ನನ್ ಶಾಪ ನಿಮಗೆ ತಟ್ಟದೇ ಇರೊಲ್ಲ” ಎನ್ನುವ ಲಹರಿಯಲ್ಲಿ ಗದ್ಗದಿತವಾಗಿ ಮಾತನಾಡಿದ್ದಾಳೆ. ಏನು ಹೇಳಬೇಕೆಂದು ಗೊತ್ತಾಗದೆ ಎಚ್ ಆರ್ ಗಂಟಲು ಒಣಗಿಹೋಗಿದೆ.ಮೇಡಮ್ ಐ ಆಮ್ ವೆರಿ ಸಾರಿ..ಆದ್ರೆ ಇದರಲ್ಲಿ ನನ್ನ ತಪ್ಪೇನಿಲ್ಲ..ಮ್ಯಾನೇಜ್ಮೆಂಟ್ ಅವರು ಸಂಬಳ ಹಾಕಿ ,ಇಂಥವರಿಗೆ ಹಾಕಿ ಎಂದ್ರೆ ಹಾಕೊಕ್ಕೆ ನನಗೇನು..ನನ್ನ ತಪ್ಪೇನು ಇಲ್ಲ..ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ..ಎಂದು ನೋವಿನಿಂದಲೇ ಮಾತನಾಡಿದ್ದಾನೆ.
ಸುದ್ದಿಮನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ರಕ್ತಬೆವರಿಂದಲೇ ಲಾಭ ಮಾಡಿಕೊಳ್ಳುವ ನ್ಯೂಸ್ ಚಾನೆಲ್ ಗಳು ಅವರ ಸಂಕಷ್ಟಕ್ಕೆ ಸ್ಪಂದಿಸುವ ಮಾತು ಹಾಳಾಗಿ ಹೋಗ್ಲಿ ಅವರಿಗೆ ಸಿಗಬೇಕಾದ ಸಂಬಳ ಕೊಡ್ಲಿಕ್ಕೂ ನೂರಾರು ಸಬೂಬು ಹೇಳೋದು ಎಷ್ಟು ಸರಿ..? ಮೇಲ್ಕಂಡ ಪ್ರಕರಣದಲ್ಲಿ ಪಾಪ..ಆ ಮಹಿಳಾ ಉದ್ಯೋಗಿ ಕೇಳಿದ್ದೇನು..? ತಿಂಗಳ ಸಂಬಳ ಅಷ್ಟೇ ಅಲ್ವಾ..ಆಕೆ ಬೇರೆ ಏನನ್ನಾದ್ರೂ ಕೇಳಿದ್ಲಾ..? ಏರುದ್ವನಿಯಲ್ಲಿ ಸಂಬಳ ಕೇಳಿದ್ದೇ ಮಹಾಪರಾಧ..ನಮ್ಮ ಮಾನ ಕಳೆದುಬಿಟ್ಲು ಎಂದು ಆತುರಕ್ಕೆ ಬಿದ್ದು ಆಕೆಯನ್ನು ಕೆಲಸದಿಂದಲೇ ತೆಗೆದು ಹಾಕಿದ್ದು ಎಷ್ಟು ಸರಿ..? ಯಾವ ನ್ಯಾಯ…? ಅಮ್ಮ ಆಸ್ಪತ್ರೆಯಲ್ಲಿ ದ್ದಾರೆ. ಚಿಕಿತ್ಸೆಗೆ ಹಣ ಬೇಕು..ನನ್ನ ಸ್ಯಾಲರಿ ಕೊಟ್ಟರೆ ಉಪಕಾರವಾಗುತ್ತೆ ಎಂದು ಪರಿಪರಿಯಾಗಿ ಕೇಳಿಕೊಂಡಾಗ ಮನುಷ್ಯತ್ವ ಇದ್ದರೆ ಸ್ಯಾಲರಿ ಜತೆ ಇನ್ನಷ್ಟು ಸೇರಿಸಿ ಕೊಟ್ಟು ಪುಣ್ಯಾತ್ಮ-ಆಪದ್ಬಾಂಧವರಾಗಬಹುದಿತ್ತೇನೋ..?
ಆದರೆ ಕೆಲಸ ಕಸಿದುಕೊಂಡು,ಸಂಬಳವನ್ನು ಕೊಡದೆ ಆಕೆಯ ಅಮ್ಮನ ಸಾವಿಗೆ ಕಾರಣವಾಗಿಬಿಟ್ರು..ಚಾನೆಲ್ ನ ಆಡಳಿತಕ್ಕೆ ಮೆತ್ತಿದ ಈ ಕಳಂಕ ಯಾವತ್ತೂ ದೂರವಾಗೊಲ್ಲ ಬಿಡಿ..ಮ್ಯಾನೇಜ್ಮೆಂಟ್ ಗಳು ಇಷ್ಟೊಂದು ಸಂವೇದನಾರಹಿತವಾಗಿಬಿಟ್ರೆ ಹೇಗೆ..ಸುದ್ದಿ ಮನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ನಾವು ಕೊಟ್ಟಷ್ಟನ್ನು ಪಡೆದು ನಮ್ಮ ಸನ್ನೆಗಳಲ್ಲಿ ಕೆಲಸ ಮಾಡುವ ಜೀತದಾಳುಗಳಂತೆ ಟ್ರೀಟ್ ಮಾಡಿಬಿಟ್ರೆ ಹೇಗೆ ಹೇಳಿ..? ಬಹುತೇಕ ಮಾದ್ಯಮಗಳಲ್ಲಿ ಹಿಂದಿನಿಂದ ಈಗಿನವರೆಗೂ ಇರುವ ಕೆಟ್ಟ-ದಾರುಣ-ಅಸಹ್ಯಕರ ವಾತಾವರಣವೇ ಅಂತದ್ದು..ಹಾಗಾಗಿನೇ ಇಲ್ಲೇ ಬದುಕು ಕಟ್ಟಿಕೊಳ್ಳೊಕ್ಕೆ ಬಣ್ಣ ಬಣ್ಣದ ಕನಸುಗಳನ್ನಿಟ್ಟುಕೊಂಡು ಅತ್ಯುತ್ಸಾಹದಿಂದ ಬರುವ ನೂರಾರು ಯುವ ಮಾದ್ಯಮ ಮಿತ್ರರು,ಕ್ರೌರ್ಯ-ದೌರ್ಜನ್ಯಕ್ಕೆ ಹೆದರಿ,ಹಾದಿ ಮದ್ಯದಲ್ಲೇ ಭ್ರಮನಿರಸನಕ್ಕೆ ಒಳಗಾಗಿ, ಮಾದ್ಯಮಗಳನ್ನೇ ತೊರೆಯುತ್ತಿದ್ದಾರೆ.ಪತ್ರಿಕೋದ್ಯಮ ಎದುರಿಸುತ್ತಿರುವ ಗಂಭೀರ-ಆತಂಕಕಾರಿ ಸಮಸ್ಯೆ ಇದು..
ಇದು ಘಟನೆಯಿಂದ ಮನಸನ್ನು ಭಾರಮಾಡಿಕೊಂಡ ಕೆಲವು ಮಾದ್ಯಮಮಿತ್ರರ ಕಳವಳದಿಂದ ಬೆಳಕಿಗೆ ಬಂದ ಸುದ್ದಿ..ಆದರೆ ಸುದ್ದಿನೇ ಆಗದ ಇನ್ನೆಷ್ಟೋ, ಇಂಥ ಘಟನೆಗಳು ಚಾನೆಲ್ ಗಳಲ್ಲಿ ನಡೆಯುತ್ತಿರಬಹು ದಲ್ವಾ,? ಹೊರಜಗತ್ತಿಗೆ ಗೊತ್ತಾಗದಂತೆ ಅವನ್ನು ಸಮಾಧಿ ಮಾಡುತ್ತಿರಬಹುದಲ್ವಾ.? ಖಂಡಿತಾ ಹಾಗೆ ನಡೆಯುತ್ತಿರಬಹುದು..ಸಂಸ್ಥೆ ಲಾಭದಿಂದ ತುಂಬಿ ತುಳುಕುತ್ತಿರಲಿ..ನಷ್ಟಕ್ಕೆ ಸಿಲುಕಿ ತತ್ತರಿಸುತ್ತಿರಲಿ ಬದ್ಧತೆ-ನಿಷ್ಟೆ-ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿರುವ ಬಹುಪಾಲು ಸಿಬ್ಬಂದಿಯ ನಿರೀಕ್ಷೆ-ಅಪೇಕ್ಷೆ ತಿಂಗಳ ಸಂಬಳ ಮಾತ್ರ.ಅದರಾಚೆ ಅವರು ಏನಕ್ಕೂ ತಲೆಕೆಡಿಸಿಕೊಳ್ಳುವುದೇ ಅಲ್ಲ..ಅದು ಅವರಿಗೆ ಅನಗತ್ಯ ಕೂಡ.ಆದ್ರೆ ಬದುಕು ಕಟ್ಟಿಕೊಳ್ಳೊಕ್ಕೆ, ನೂರಾರು ಕಿಲೋಮೀಟರ್ ನಷ್ಟು ದೂರದ ಊರುಗಳಿಂದ, ಸ್ವಂತದವರನ್ನೆಲ್ಲಾ ತೊರೆದು, ಗೊತ್ತು ಗುರಿಯಿಲ್ಲದ ಬೆಂಗಳೂರಿನಂಥ ಊರಿಗೆ ಬರುವ ಯುವ ಮಾದ್ಯಮ ಮಿತ್ರರನ್ನು ಸಂಸ್ಥೆಗಳ ಆಡಳಿತ, ಮನುಷ್ಯರಂತೆ ದುಡಿಸಿಕೊಳ್ಳಲಿ..ನಡೆಸಿಕೊಳ್ಳಲಿ..