advertise here

Search

“ಬ್ಲ್ಯಾಕ್ ಮೇಲ್” ಗೆ ಪ್ರಾಣತೆತ್ತನಾ ಪತ್ರಕರ್ತ..!ಕೊಲೆಯನ್ನು “ಆಕ್ಸಿಡೆಂಟ್” ಎಂದು ಕಥೆ ಕಟ್ಟಿದ್ದ “ಹಂತಕ”ರು..


ಬಾಗಲಕೋಟೆ: ಜನಶ್ರೀ ವಾಹಿನಿಯ ಉಸ್ತುವಾರಿ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಒಂದು ಕಚೇರಿಯನ್ನೂ ಮಾಡಿಕೊಂಡಿದ್ದ ಪತ್ರಕರ್ತನೊಬ್ಬ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಆರಂಭದಲ್ಲಿ ಇದನ್ನು ಅಪಘಾತ ಎಂದು ಬಿಂಬಿಸಲಾಗಿತ್ತಾದ್ರೂ ಬಾಗಲಕೋಟೆ ಪೊಲೀಸರ ಕಾರ್ಯಾಚರಣೆಯಿಂದ 24 ಗಂಟೆಯೊಳಗೆ ಹಂತಕರು ಸಿಕ್ಕಿಬಿದ್ದಿದ್ದಾರೆ.ಈ ಪ್ರಕರಣವನ್ನು ಬಾಗಲಕೋಟ  ಪೊಲೀಸರು 24 ಗಂಟೆಯೊಳಗೆ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಜಮಖಂಡಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪತ್ರಕರ್ತ ಬಸವರಾಜ ಕಾನಕೊಂಡ   ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು ಎಂದೇ ಹೇಳಲಾಗ್ತಿತ್ತು.ಆದ್ರೆ ಬಸವರಾಜ್ ಸತ್ತುಬಿದ್ದಿರುವ ಸ್ಥಿತಿಯ ಬಗ್ಗೆ ಅನುಮಾನಗೊಂಡು ತನಿಖೆ ಆರಂಭಿಸಿದ ಮೇಲೆ ಇದೊಂದು ವ್ಯವಸ್ತಿತ ಕೊಲೆ ಎಂದು ಗೊತ್ತಾಗಿದೆ.

ಅಕ್ಟೋಬರ್ .8ರ ಬುಧವಾರ ಗ್ರಾಮೀಣ ಠಾಣೆ ವ್ಯಾಪ್ತಿಯ ಬಂಡಿಗಣಿ ಕ್ರಾಸ್ ದಲ್ಲಿ ರಸ್ತೆ ಅಪಘಾತ ನಡೆದಿತ್ತು. ಅಪಘಾತದಲ್ಲಿ ಪತ್ರಕರ್ತ ಬಸವರಾಜ ಕಾನಕೊಂಡ ಸ್ಥಳದಲ್ಲೇ ಮೃತಪಟ್ಟಿದ್ದರು. ಪ್ರಕರಣದ ಜಾಡು ಹಿಡಿದು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಅನುಮಾನ ಉಂಟಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಆನಂತರವೇ  ಅಶ್ನಾಕ್ ಮುಲ್ಲಾ, ನಂದೀಶ್ವರ ಪವಾಡಿ ಮತ್ತು ಮಹೇಶ ಪವಾಡಿ  ಎನ್ನುವವರು ಕೊಲೆ ಮಾಡಿರುವುದು ದೃಢಪಟ್ಟಿದೆ.

ಮೊದಲು ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ತನಿಖೆಯ ಸಂದರ್ಭದಲ್ಲಿ ಹಲವು  ಅನುಮಾನ ಕಾಡಿದೆ. ತನಿಖೆ ತೀವ್ರಗೊಳಿಸಿದಾಗ ಢಿಕ್ಕಿ ಹೊಡೆದ ವಾಹನದ ಹಿನ್ನಲೆ ಪಡೆದು ಹೊರಟಾಗ ವಾಹನ   ಅಲ್ಪಾಕ್, ಸುಲೇಮಾನ್ ಮುಲ್ಲಾ ಎಂಬವರಿಗೆ ಸೇರಿದ್ದು ಎಂದು ಗೊತ್ತಾಗಿದೆ. ವಾಹನದ ಮಾಲಿಕ ಹಾಗೂ ಆತನ ಸಹಚರರಾದ ಹೊಸೂರು ನಿವಾಸಿಗಳಾದ ನಂದೀಶ್ವರ ಮಹಾದೇವ ಪವಾಡಿ ಮತ್ತು ಮಹೇಶ ಶಿಶೈಲ ಪವಾಡಿ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.ವಿಚಾರಣೆಯ ಸಮಯ, ಅಕ್ಷಾಕ ಸುಲೇಮಾನ್ ಮುಲ್ಲಾ ಸ್ವಯಂಪ್ರೇರಿತ ಮತ್ತು ವಿವರವಾದ ತಪ್ರೊಪ್ಪಿಗೆಯನ್ನು ನೀಡಿದ್ದು, ಮದರಖಂಡಿ ಗ್ರಾಮದ ಬಳಿ ಬಸವರಾಜ ಕಶನಗೊಂಡ ಅವರ ವಾಹನಕ್ಕೆ ಡಿಕ್ಕಿ ಹೊಡೆದು ಉದ್ದೇಶಪೂರ್ವಕವಾಗಿ ಸಾವಿಗೆ ಕಾರಣವಾಗಿದ್ದಾಗಿ ಒಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ALSO READ :  SAD DEMISE: ಕ್ರೈಂ ಪತ್ರಿಕೋದ್ಯಮದ "ಪದ-ಪಂಡಿತ" ಅಕ್ಷರಗಳಲ್ಲಿ ಲೀನ..

ಆರೋಪಿಗಳು ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಬಸವರಾಜ್ ಅವರನ್ನು ಸುಲಿಗೆ ಮಾಡಲು ಯತ್ನಿಸುತ್ತಿದ್ದನಂತ.ಹಣ ಬೇಕೆಂದಾಗಲೆಲ್ಲಾ ಅವರನ್ನು ಬ್ಲಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದನಂತೆ.ಆರಂಭದಲ್ಲಿ ಆತನಿಗೆ ಹಣವನ್ನೂ ಕೊಟ್ಟಿದ್ದಾರಂತೆ.ಆದರೆ ಆತನ ಪೀಡಿಸುವಿಕೆ ಹೆಚ್ಚಾದಾಗ ಆತನನ್ನು ಮುಗಿಸುವ ಪ್ಲ್ಯಾನ್ ಮಾಡಿದ್ದಾರ.ಇದರ ಭಾಗವಾಗಿ ಬೆಂಗಳೂರಿನಲ್ಲಿದ್ದ ಆತನನ್ನು   ತೇರದಾಳದ ಸಣ್ಣ ಹೊಟೇಲ್ ನಲ್ಲಿ ಚರ್ಚೆಗೆಂದು ಕರೆಸಲಾಗಿತ್ತು. ಪರಿಚಯಸ್ತರಾಗಿದ್ದ ರಾಘವೇಂದ್ರ ತೇಲಿ ಎಂಬವರ ಮಧ್ಯಸ್ಥಿಕೆಯಲ್ಲಿ ಸಭೆ ನಡೆಸಿ ಚರ್ಚೆ ಮುಗಿಸಿಕೊಂಡು ಅಶ್ನಾಕ್ ಸ್ಥಳದಿಂದ ಹೊರಟು ಹೋಗಿದ್ದ. ಉಳಿದವರು ಅಲ್ಲೇ ಊಟಕ್ಕೆ ಕುಳಿತರು ಎನ್ನಲಾಗಿದೆ.

ಊಟ ಮುಗಿಸಿ ಅಲ್ಲಿಂದ ಬಸವರಾಜ ತನ್ನ ಸ್ಕೂಟಿ ವಾಹನದಲ್ಲಿ ಜಮಖಂಡಿಯತ್ತ ಪ್ರಯಾಣ ಬೆಳೆಸಿದ್ದ. ಅಶ್ನಾಕ್ ಸಹಚರರಾದ ಸಂದೀಶ್ವರ ಹಾಗೂ ಮಹೇಶ ಬಸವರಾಜನನ್ನು ಹಿಂಬಾಲಿಸುತ್ತ ಬಂಡಿಗಣಿ ಕ್ರಾಸ್ ಹತ್ತಿರ ಪಿಕಪ್ ವಾಹನದೊಂದಿಗೆ ಕಾಯುತ್ತಿದ್ದ ಅಸ್ಪಾಕ್ ನಿರಂತರ ಮಾಹಿತಿ ನೀಡುತ್ತಿದ್ದರು. ಪೂರ್ವ ನಿಯೋಜನೆಯಂತೆ ಹತ್ತಿರಕ್ಕೆ ಬಂದ ಬಸವರಾಜನನ್ನು ಹಿಂಬಾಲಿಸುತ್ತ ಬಂಡಿಗಣಿ ಕ್ರಾಸ್ ಹತ್ತಿರ ಪಿಕಪ್ ವಾಹನದೊಂದಿಗೆ ಕಾಯುತ್ತಿದ್ದ ಅಶ್ನಾಕ್ ನಿರಂತರ ಮಾಹಿತಿ ನೀಡುತ್ತಿದ್ದರು. ಪೂರ್ವ ನಿಯೋಜನೆಯಂತೆ ಹತ್ತಿರಕ್ಕೆ ಬಂದ ಬಸವರಾಜನ ವಾಹನಕ್ಕೆ ರಾಂಗ್ ರೂಟ್ ನಲ್ಲಿ ವೇಗವಾಗಿ ಬಂದು ಡಿಕ್ಕಿ ಹೊಡೆದು ಅಪಘಾತ ಎಂಬಂತೆ ಸೃಷ್ಟಿಸಲಾಗಿತ್ತು. ಯುಸುಫುಲ್ಲಾನ ಸಹಾಯದಿಂದ ಪಿಕಪ್ ವಾಹನವನ್ನು ಮುಚ್ಚಿಡಲಾಗಿತ್ತು.ಡಿಜಿಟಲ್ ಪುರಾವೆಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ವಿಧಿವಿಜ್ಞಾನ ಸುಳಿವುಗಳಿಂದ ದೃಢೀಕರಿಸಲ್ಪಟ್ಟ ತಪ್ರೊಪ್ಪಿಗೆ ಆಧಾರದ ಮೇಲೆ, ಪ್ರಕರಣವನ್ನು ರಸ್ತೆ ಅಪಘಾತದಿಂದ ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Political News

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

Scroll to Top