advertise here

Search

ಒಂದೇ ಫ್ಯಾನಿಗೆ ಕೊರಳೊಡ್ಡಿದ ತಾಯಿ-ಮಗಳು


ರಾಜಧಾನಿ ಬೆಂಗಳೂರು ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಗಿದೆ.ಪ್ರೇಮ ವೈಫಲ್ಯಕ್ಕೆ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡರೆ ಕರುಳ ಕುಡಿಯನ್ನು ಕಳೆದುಕೊಂಡ ನೋವಿಗೆ ನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ವಿಪರ್ಯಾಸದ ಸಂಗತಿ ಏನೆಂದರೆ ಮಗಳು ಆತ್ಮಹತ್ಯೆ ಮಾಡಿಕೊಂಡ ಹಗ್ಗಕ್ಕೆ ತಾಯಿಯೂ  ಕೊರಳೊಡ್ಡಿದ್ದಾಳೆ.

ತಂದೆ ,ಬೆಂಗಳೂರಿನ ಪ್ರತಿಷ್ಟಿತ ಕಂಪೆನಿ ಯೊಂದ ರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಮನೆಯಲ್ಲಿ ಏನೂ ಸಮಸ್ಯೆ ಇರಲಿಲ್ಲ.ಕುಟುಂಬದಲ್ಲಿ ಅನ್ಯೋನ್ಯತೆ ಇತ್ತು.ಎಂದಿನಂತೆ ಕೆಲಸಕ್ಕೆ ತೆರಳಿದ್ದಾರೆ. ಬೆಳಗ್ಗೆ ಡೈನಿಂಗ್ ಟೇಬಲ್ ಗೆ ಬಂದು ಎಲ್ಲರನ್ನು ಕರೆಯುವುದು ಶ್ರೀಜಾರೆಡ್ಡಿ ವಾಡಿಕೆ ಆಗಿತ್ತು.ಆದರೆ ನಿನ್ನೆ ಬೆಳಗ್ಗೆ 8.30 ಆದರೂ ಶ್ರೀಜಾ ರೂಮಿನಿಂದ  ಹೊರಗೆ ಬಂದಿರಲಿಲ್ಲ,ಗಾಬರಿಗೊಂಡ ತಾಯಿ ರಚಿತಾ ರೆಡ್ಡಿ  ಬಾಗಿಲು ಬಡಿದಿದ್ದಾರೆ.ಆದರೆ  ಒಳಗಿಂದ ಯಾವುದೇ ಸುಳಿವು ದೊರೆತಿಲ್ಲ.ಗಾಬರಿಗೊಂಡು ಪತಿಗೆ ಫೋನಾಯಿಸಿದ್ದಾರೆ.

ಈ ನಡುವೆ ಆತಂಕಗೊಂಡ ತಾಯಿ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಹೃಯದ ಒಡೆದೋಗುವಂತ ಸನ್ನಿವೇಶ ನೋಡಿದ್ದಾರೆ.ಫ್ಯಾನಿಗೆ ನೇಣು ಬಿಗಿದುಕೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು.ಪಕ್ಕೆದಲ್ಲೆ ಡೆತ್ ನೋಟ್ ಇತ್ತು.ಆ ಡೆತ್ ನೋಟ್ ಓದಿದ್ದಾರೆ.ಅದು ತನ್ನ ಲವ್ವರ್ ಗೆ ಬರೆದ ಪತ್ರವಾಗಿತ್ತು.ನೀನೂ ತುಂಬಾ ಒಳ್ಳೆಯವನು.ನಿನ್ನ ಆತ್ಮ ಪರಿಶುದ್ಧವಾದುದು.ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ.ದಯವಿಟ್ಟು ನನ್ನ ಕ್ಷಮಿಸು..ನನ್ನ ಆತ್ಮಹತ್ಯೆಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು.

ALSO READ :  ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಅಂತ್ಯ: ಹೊಸ ಸರ್ಕಾರ ರಚನೆಗೆ ಸಿದ್ಧತೆ

ಮಗಳನ್ನು ಕಳೆದುಕೊಂಡ ನೋವು ತಡೆಯಲಾಗದೆ ತಾಯಿ ಕೂಡ ಅದೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಂಡತಿ ಕರೆ ಮಾಡಿದ್ದರಿಂದ ಗಾಬರಿಗೊಂಡ ಪತಿ ಮನೆಗೆ ಬಂದು ನೋಡಿದಾಗ ಹೆಂಡತಿ-ಮಗಳಿಬ್ಬರು ಒಂದೇ ಫ್ಯಾನಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿರುವುದು ಕಂಡುಬಂತು. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top