advertise here

Search

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…


ಬೆಂಗಳೂರು: ಸಾರಿಗೆ ಮುಷ್ಕರ ನಡೆಯೋದಾಗ್ಲಿ, ನಡೆದರೂ ಹೆಚ್ಚಿನ ಸಂಖ್ಯೆಯ ಸಾರಿಗೆ ಸಿಬ್ಬಂದಿ ಅದರಲ್ಲಿ ಪಾಲ್ಗೊಳ್ಳುವುದಾಗಲಿ ಬಹುತೇಕ ಡೌಟ್‌ ಎನಿಸ್ತದೆ.ಮುರಿದುಬಿದ್ದ ಮಾತುಕತೆ, ಹೈಕೋರ್ಟ್ ನ ಕಟ್ಟಪ್ಪಣೆ ಕೂಡ ಇದಕ್ಕೆ ಪ್ರಮುಖ.ಅದೆಲ್ಲವನ್ನು ಮೀರಿ  ಮಾತುಕತೆಯ ವೈಫಲ್ಯಕ್ಕೆ ಕಾರಣವಾಯಿತೆನ್ನಲಾದ ಸಂಗತಿಗಳು  ಸಾರಿಗೆ ಹೋರಾಟದ ಇತಿಹಾಸದಲ್ಲಿ ಅತ್ಯಂತ ಕೆಟ್ಟದಾಗಿ ನೆನಪಿಸಿಕೊಳ್ಳಬೇಕಾದ ಕ್ಷಣಗಳಾಗಿ ದಾಖಲಾಗಿ ಹೋದದ್ದು ಮಾತ್ರ ದೌರ್ಭಾಗ್ಯಪೂರ್ಣ.ಅಂದ್ಹಾಗೆ ಮಾತುಕತೆ ವೈಫಲ್ಯಕ್ಕೆ ಸರ್ಕಾರ ಕಾರಣವಾಗದೆ ಸಂಘಟನೆಗಳ ನಡುವಿನ ಬಿರುಕು-ಭಿನ್ನಾಭಿಪ್ರಾಯ-ಸಂಘರ್ಷವೇ ಕಾರಣವಾಗಿದ್ದು ದುರಂತ-ವಿಷಾದನೀಯ-ದೌರ್ಭಾಗ್ಯಪೂರ್ಣ.

ಸಾರಿಗೆ ಸಂಘಟನೆಗಳ ಎಲ್ಲಾ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಸಾರಿಗೆ ಹೋರಾಟಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ಮುಂದೆ ಸಂಘಟನೆಗಳ ಒಡಕು-ಭಿನ್ನಮತ-ಹೊಂದಾಣಿಕೆಯ ಕೊರತೆ ಬಟಾಬಯಲಾಗಿದೆ.ಸರ್ಕಾರವೇ ಒಂದ್‌ ಕ್ಷಣ ಸಾರಿಗೆ ಸಂಘಟನೆಗಳ ನಡುವೆ ತಲೆದೋರಿರುವ ಭಿನ್ನಮತಕ್ಕೆ ಆಶ್ಚರ್ಯ ವ್ಯಕ್ತಪಡಿಸಿದೆ. ಅವುಗಳ ನಡುವೆ ಇರುವ ಒಡಕನ್ನೇ ಮುಂದಿನ ದಿನಗಳಲ್ಲಿ ಪ್ರಬಲ ಅಸ್ತ್ರವಾಗಿಸಿಕೊಳ್ಳೊಕ್ಕೆ ಸಂಘಟನೆಗಳೇ ದಾರಿ ಮಾಡಿಕೊಟ್ಟಂತಾಗಿದೆ. ಮುಖ್ಯಮಂತ್ರಿ ಜತೆ ನಡೆದ ಸಭೆಯಲ್ಲಿ ಒಂದು ಸಂಘಟನೆ,ಇನ್ನೊಂದು ಸಂಘಟನೆ ಮೇಲೆ ಚಾಡಿ,ಭ್ರಷ್ಟಾಚಾರ-ಅಕ್ರಮದ ಆರೋಪ ಮಾಡಿದ್ದು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ.

ಸಾರಿಗೆ ಸಿಬ್ಬಂದಿಯ ವೇತನ ಪರಿಷ್ಕರಣೆ ಈಡೇರಿಸುವುದಿರಲಿ, ಕನಿಷ್ಟಕ್ಕೂ ಅದನ್ನು ಪರಿಗಣಿಸುವ ಕೆಲಸ ಸರ್ಕಾರ ಮಾಡಿಲ್ಲ.ಶೇಕಡಾ 25 ರಷ್ಟು ವೇತನ ಪರಿಷ್ಕರಣೆ ಮಾಡಲೇಬೇಕೆನ್ನುವುದು ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ನಾಯಕತ್ವದ ಸಂಘಟನೆಗಳ ಹಕ್ಕೊತ್ತಾಯವಾಗಿತ್ತು.ಜತೆಗೆ ಇತರೆ ಬೇಡಿಕೆ  ಈಡೇರಿಸಬೇಕೆನ್ನುವುದು ಬಲವಾದ ವಾದವಾಗಿತ್ತು.ವೇತನ ಪರಿಷ್ಕರಣೆ ಗಡುವು ಮುಗಿದು 4 ವರ್ಷಗಳಾಗಿರುವುದರಿಂದ ಸರ್ಕಾರವೇ ವಿನಮ್ರಪೂರ್ವಕವಾಗಿ ತಮಗೆ ಸ್ಪಂದಿಸಬಹುದೆನ್ನುವ ನಿರೀಕ್ಷೆಯಲ್ಲಿ ಸಿಎಂ ಸಭೆಗೆ ತೆರಳಿದ್ರು.

ಅನಂತಸುಬ್ಬರಾವ್‌ ಹಾಗೂ ಸಮಾನಮನಸ್ಕ ಸಂಘಟನೆಗಳ ಜತೆ ಸಭೆ ಮಾಡುತ್ತಾ ಅವರ ಅಹವಾಲುಗಳನ್ನು ಕೇಳುತ್ತಿದ್ದಂತೆ ಸ್ವಲ್ಪ ತಾಳ್ಮೆ ಕಳೆದುಕೊಂಡವರಂತೆ ಸಿಎಂ ಮಾತನಾಡಿದ್ದಾರೆ. ಅನಂತ ಸುಬ್ಬರಾವ್‌ ಬಣ ಕೂಡ ಎಂದಿನ ಧಾಟಿಯಲ್ಲೇ ಮಾತನಾಡಿದೆ. ನಿವೃತ್ತ ಐಎಎಸ್‌ ಅಧಿಕಾರಿ ಶ್ರೀನಿವಾಸಮೂರ್ತಿ ಸಮಿತಿ ಶಿಫಾರಸ್ಸಿನಂತೆ 14 ತಿಂಗಳ ಹಿಂಬಾಕಿ ಅಂದ್ರೆ 700 ಕೋಟಿ ಬಿಟ್ಟು ಬೇರೇನೋ ಬಿಡುಗಡೆ ಮಾಡಲಿಕ್ಕಾಗದು ಎಂದು ಕಡ್ಡಿ ಮುರಿದಂತೆ ಮಾತನಾಡಿಬಿಟ್ರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ.ಆದರೆ ಸಾರಿಗೆ ಸಿಬ್ಬಂದಿಯ ಬೇಡಿಕೆ ಇದ್ದುದು 38 ತಿಂಗಳ ಹಿಂಬಾಕಿ.ಆದರೆ ಆಗೊಲ್ಲ ಎಂದು ನೇರವಾಗಿ ಮಾತನಾಡಿ, ಮತ್ತೇನಾದ್ರೂ ಹೇಳೋದಿದೆಯಾ..? ನಿಮ್ಮ ಮಾತು ಮುಗಿದಿದ್ರೆ ಬೇರೆ ಸಂಘಟನೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ರಂತೆ.ಇದನ್ನು ನಿರೀಕ್ಷೆಯೇ ಮಾಡದಿದ್ದ ಸಂಘಟನೆಗಳು ,ನಮ್ಮ ವೇತನ ಪರಿಷ್ಕರಣೆ ಬೇಡಿಕೆ ಏನಾಯ್ತು ಎಂದಿದ್ಕೆ ಸಧ್ಯದ ಪರಿಸ್ಥಿತಿಯಲ್ಲಿ ಏನೂ ಮಾಡಲಿಕ್ಕೆ ಆಗೊಲ್ಲ.700 ಕೋಟಿ ಬಿಡುಗಡೆ ಮಾಡ್ತೇವೆ.ಅದು ಕೂಡ ಸೆಷನ್‌ ಮುಗಿದ ಮೇಲೆ..ನಮಸ್ಕಾರ ಎಂದು ಕೈ ಮುಗಿದುಬಿಟ್ರಂತೆ.ಇದನ್ನು ನೋಡಿ ಮುಜುಗರದೊಂದಿಗೆ ಅವಮಾನವೂ ಆಗಿದೆ.

ALSO READ :  VETERAN ACTRESS LEELAVATHI HOSPITALISED..!ಹಿರಿಯ ನಟಿ ಲೀಲಾವತಿ ಸ್ಥಿತಿ ಗಂಭೀರ.!

ಇದಾದ ಬಳಿಕ ನಡೆದಿದ್ದೇ ಮತ್ತೊಂದು ಹೈಡ್ರಾಮ. ಸಾರಿಗೆ ಕೂಟದ ಚಂದ್ರಶೇಖರ್‌ ಮತ್ತು ಸಮಾನಮನಸ್ಕ ಸಂಘಟನೆಗಳನ್ನು ಕರೆಯಿಸಿಕೊಂಡು ಮಾತನಾಡಿದ್ದಾರೆ.ಈ ವೇಳೆ ಸಮಾನಕೆಲಸಕ್ಕೆ ಸಮಾನ ವೇತನ ಅಷ್ಟೇ ನಮ್ಮ ಬೇಡಿಕೆ.ವೇತನ ಪರಿಷ್ಕರಣೆಯಲ್ಲ ಎಂದಾಗ ಸ್ವಲ್ಪ ಆಶ್ಚರ್ಯವಾಗಿದೆ.ತಮ್ಮ ಬೇಡಿಕೆ ಬಗ್ಗೆ ಹೇಳೋದನ್ನು ಬಿಟ್ಟು ಅನಂತಸುಬ್ಬರಾವ್‌ ಬಣದ ವಿರುದ್ಧ ದಂಡಿ ಆರೋಪಗಳನ್ನೇ ಚಂದ್ರಶೇಖರ್‌ ಬಣ ಮಾಡಿದೆಯಂತೆ.ಅವ್ರು ಸಾರಿಗೆ ಸಿಬ್ಬಂದಿ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ದಂಧೆ ಮಾಡುತ್ತಾರೆ.ಹಣ ಮಾಡಿಕೊ‍ಳ್ಳುತ್ತಿದ್ದಾರೆ.ಆದರೆ ನಾವು ಅವರಂತೆ ಅಲ್ಲ, ನಾವು ಸರ್ಕಾರಕ್ಕೆ ಮುಜುಗರ-ನಷ್ಟವಾಗುವ ರೀತಿಯಲ್ಲಿ ಮುಷ್ಕರ ನಡೆಸಲು,ಅದಕ್ಕೆ ಬೆಂಬಲ ನೀಡಲು ಮುಂದಾಗಿಲ್ಲ.ನಾವು ಸರ್ಕಾರದ ಪರವಾಗಿದ್ದೇವೆ.ಅನಂತ ಸುಬ್ಬರಾವ್‌ ಬಣ ಮುಷ್ಕರ ನಡೆಸಿದ್ರೆ ನಾವು ನಿಮ್ಮ ಜತೆಗಿರಲು ಸಿದ್ದ.ನಾವು ಬಸ್‌ ಓಡಿಸ್ತೇವೆ ಎಂದಿದ್ದಾರಂತೆ.ಈ ಮಾತನ್ನ ಕೇಳಿ ಸಿದ್ದರಾಮಯ್ಯ ಅವರಿಗೆ ಅರ್ಥವಾಗಿದ್ದು ಈ ಸಂಘಟನೆಗಳ ನಡುವೆ ಇರುವ ಒಡಕನ್ನೇ ಮುಂದಿಟ್ಟುಕೊಂಡು ಮುಷ್ಕರವನ್ನು ವಿಫಲಗೊಳಿಸುವುದು ಸುಲಭ ಎನ್ನುವ ಸತ್ಯ.ಅವರೊಂದಿಗೆ ಏನೂ ಮಾತನಾಡದೆ ಹೋಗಿ, ಮತ್ತೆ ಹೇಳಿಕಳುಹಿಸ್ತೇವೆ ಎಂದು ಕಳುಹಿಸಿಕೊಟ್ಟಿದ್ದಾರೆ.

ಈ ಎರಡು ಪ್ರಮುಖ ಸಂಘಟನೆಗಳ ನಡುವೆ ಇರುವ ಒಡಕೇ ಸರ್ಕಾರಕ್ಕೆ ಮುಷ್ಕರವನ್ನು ವಿಫಲಗೊಳಿಸಲು ಪ್ರಬಲ ಅಸ್ತ್ರವಾಗಿದ್ದು ದುರಾದೃಷ್ಟಕರ. ಬೇಡಿಕೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಅನಂತ ಸುಬ್ಬರಾವ್‌ ಬಣದ ವಿರುದ್ದ ಆರೋಪ ಮಾಡಿ, ನಿಮ್ಮ ಜತೆ ನಾವಿದ್ದೇವೆ ಎಂದು ಹೇಳೊಕ್ಕೆ ಇವತ್ತಿನ ಸಭೆಯನ್ನು ಚಂದ್ರಶೇಖರ್‌ ಬಣ ವೇದಿಕೆ ಮಾಡಿಕೊಂಡಿದ್ದು ದುರಂತ.ಬಹುಷಃ ಎರಡೂ ಬಣಗಳು ತಮ್ಮ ನಡುವೆ ಏನೇ ವ್ಯತ್ಯಾಸಗಳಿದ್ದಾಗ್ಯೂ ನಮ್ಮ ಬೇಡಿಕೆ ಒಂದೇ  ಎಂದು ಪಟ್ಟನ್ನೇನಾದ್ರೂ ಹಿಡಿದಿದ್ರೆ ಸರ್ಕಾರ ಸ್ವಲ್ಪ ವಿಚಲಿತವಾಗಿ ಒಂದಷ್ಟು ಸಕಾರಾತ್ಮಕವಾಗಿಯಾದ್ರೂ ಪ್ರತಿಕ್ರಿಯಿಸುತ್ತಿತ್ತೋ ಏನೋ..ಹಾಗಾಗಿ 13 ತಿಂಗಳ ಹಿಂಬಾಕಿ ರೂಪದಲ್ಲಿ 700 ಕೋಟಿ ಬಿಟ್ಟರೆ ಬೇರೇನೂ ಸಾರಿಗೆ ಸಿಬ್ಬಂದಿಗೆ ದಕ್ಕಿಲ್ಲ.

ಬಹುಷಃ ಸಾರಿಗೆ ಹೋರಾಟಗಳ ಇತಿಹಾಸದಲ್ಲಿ ಇದನ್ನು ಅತ್ಯಂತ ಹೀನಾಯ ಸೋಲು ಎಂದು ವ್ಯಾಖ್ಯಾನಿಸಿದ್ರೂ ಆಶ್ವರ್ಯವಿಲ್ಲ.ನಾಳೆ ನಡೆಸಲು ಉದ್ದೇಶಿಸಿದ್ದ ಮುಷ್ಕರಕ್ಕೆ ದೊಡ್ಡ ಹಿನ್ನಡೆ ಆಗಿದೆ.ಜತೆಗೆ ಹೈಕೋರ್ಟ್‌ ಕೂಡ ನಾಳೆ ಒಂದು ದಿನ ಮುಷ್ಕರ ಮುಂದೂಡಿದೆ.ಇದನ್ನು ಮೀರಿಯೂ ಮುಷ್ಕರ ನಡೆಸಿದ್ರೆ ಅದು ನ್ಯಾಯಾಂಗ ನಿಂದನೆ ಆಗುತ್ತದೆ.ಕಾನೂನು ಎದುರಾಕಿಕೊಂಡು ಏನನ್ನೂ ಮಾಡುವ ಧೈರ್ಯದಲ್ಲಿ ಸಾರಿಗೆ ಸಿಬ್ಬಂದಿಯಿಲ್ಲ. ಒಂದು ವೇಳೆ ಮುಷ್ಕರ  ನಡೆಸಿದ್ರೂ ಸಾರಿಗೆ ಕೂಟದ ಚಂದ್ರಶೇಖರ್‌ ಹಾಗೂ ಅವರ ಬೆಂಬಲಿತ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ  ಸಾಕಷ್ಟು ಸಿಬ್ಬಂದಿ  ಮುಷ್ಕರದಲ್ಲಿ ಭಾಗಿಯಾಗುವ ಸಾಧ್ಯತೆ ಕಡಿಮೆ. ಹೆಚ್ಚೆಚ್ಚು ಸಂಖ್ಯೆಯ ಸಾರಿಗೆ ಸಿಬ್ಬಂದಿ ಮುಷ್ಕರದಲ್ಲಿ ದುಮುಕಿದ್ರೆ ಮಾತ್ರ ಹೋರಾಟ ಯಶಸ್ವಿಯಾಗಲು ಸಾಧ್ಯ..? ಅಲ್ಲವೇ..?    


Political News

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

Scroll to Top