advertise here

Search

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ


ಬೆಂಗಳೂರು:ನಾಳೆ ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶಿಸಿದೆ. ಸಾರಿಗೆ ಮುಷ್ಕರ ಸಂಬಂಧ  ಇಂದು ನಡೆದ ವಿಚಾರಣೆ ವೇಳೆ  ಕೋರ್ಟ್ ಈ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ಎಂಜಿಎಸ್ ಕಮಲ್ ರ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ. ಅರ್ಜಿದಾರರ ಪರ ವಕೀಲೆ ದೀಕ್ಷಾ ಅಮೃತೇಶ್ ವಾದ  ಮಂಡಿಸಿದ್ರೆ.  ಸರ್ಕಾರದ ಪರ ನಿಲೋಫರ್ ಅಕ್ಬರ್ ವಾದ ಮಂಡಿಸಿದರು.

ಕೊರೊನಾ‌ ಸಂಧರ್ಭದಲ್ಲಿ ಸರ್ಕಾರ ಹಲವು ಸಿಬ್ಬಂದಿಯನ್ನ ವಜಾಗೊಳಿಸಿದೆ..ಬಹುತೇಕರನ್ನ ಪುನಃ ಸೇವೆಗೆ ಮರು ನೇಮಕ ಮಾಡಿಲ್ಲ.. ಹೀಗಾಗಿ ಬಾಕಿ ವೇತನ‌ ನೀಡುವ ಪ್ರಶ್ನೆ ಬರಲ್ಲ..ಇದು ಅರ್ಜಿದಾರರ ಪ್ರಾಮಾಣಿಕತೆಗೆ ಸಂಬಂಧಿಸಿದ ವಿಚಾರ.. ಅರ್ಜಿದಾರರ ಕಳಕಳಿಯನ್ನ ನೀವು ನೋಡಬೇಕು.. ಸರ್ಕಾರ ಇನ್ನೊಬ್ಬರ ಹೆಗಲ ಮೇಲೆ ಇಟ್ಟು ಶೂಟ್ ಮಾಡಲಾಗದು.. ಜುಲೈ 15ರಂದು ಪ್ರತಿಭಟನಾಕಾರರು ನೊಟೀಸ್ ನೀಡಿದ್ದಾರೆ.. ಈ ಹೊತ್ತಿಗಾಗಲೇ ನೀವು ಕ್ರಮ ಕೈಗೊಳ್ಳಬೇಕಿತ್ತು..ಸರ್ಕಾರಕ್ಕೆ ವಿಭಾಗೀಯ ಪೀಠ ಪ್ರಶ್ನೆ.. ಕೈಗಾರಿಕಾ ನ್ಯಾಯ ಮಂಡಳಿಯಲ್ಲಿ ಸಂಧಾನ ಸಭೆ ನಡೆದಿತ್ತು.. ಹಣಕಾಸು ನೆರವಿನ ವಿಚಾರದ ಬಗ್ಗೆ ಸರ್ಕಾರದ ಸಲಹೆ ಕೇಳಬೇಕು ಎಂದು ತಿಳಿಸಲಾಗಿತ್ತು..ಮುಖ್ಯಮಂತ್ರಿಗಳು ಬೆಳಗ್ಗೆಯಿಂದ ನಿರಂತರವಾಗಿ ಸಭೆ ನಡೆಸ್ತಿದ್ದಾರೆ ಎಂದು  ಸಾರಿಗೆ ಪರ ವಕೀಲರು ವಾದ ಮಂಡಿಸಿದರು

ALSO READ :  EXCLUSIVE:ಹೊಸ ರೂಪ-ವಿನ್ಯಾಸ ದ ಏಷ್ಯಾನೆಟ್‌ "ಸುವರ್ಣ"ಕ್ಕೆ ಇವರೇ ಆ ನೂತನ "ಸಾರ‍ಥಿ"..!

ವಜಾಗೊಳಿಸಿದ್ದ ಬಹುತೇಕ ಸಿಬ್ಬಂದಿಯನ್ನ ಮರು ನೇಮಕ ಮಾಡಲಾಗಿದೆ..ವೇತನ ಪರಿಷ್ಕರಣೆ ಕೇಳ್ತಿದ್ದಾರೆ, ಇದು ಸಾಧ್ಯವೇ ಇಲ್ಲಾ.. ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ನಡೆಯುತ್ತೆ.. 2020ರಲ್ಲಿ ವೇತನ ಪರಿಷ್ಕರಣೆ ಆಗಿತ್ತು.. ಕೋವಿಡ್ ಕಾರಣದಿಂದ ನಂತರ ವೇತನ ಪರಿಷ್ಕರಣೆ ಆಗಿಲ್ಲ.. ಮುಖ್ಯಮಂತ್ರಿಗಳ ಜೊತೆ ಸಭೆ ನಡೆಯುತ್ತಿದೆ.. ಸಂಘಟನೆಗಳು ಸಾರಿಗೆ ಸೇವೆ ಮುಷ್ಕರಕ್ಕೆ ಅವಕಾಶ ಮಾಡಿಕೊಡಬಾರದು.. ಅಗತ್ಯ ಸೇವೆಯನ್ನ ಸಾಮಾನ್ಯ ಜನ ಬಳಸುತ್ತಾರೆ.. ಅವರಿಗೆ ಹಾನಿಯಾಗಬಾರದು ಎಂದು ವಾದಿಸಿದರು.

ಈ ಹಿನ್ನಲೆಯಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ ಒಂದು ದಿನ ಮಾತ್ರ ಮುಷ್ಕರ ಮುಂದೂಡುವಂತೆ ಆದೇಶಿಸಿತು.ಆದರೆ ಎರಡು‌ ದಿನ ಮುಂದೂಡುವಂತೆ ಸಾರಿಗೆ ಇಲಾಖೆ ಪರ ವಕೀಲರು ಮನವಿ ಮಾಡಿದ್ರೂ, ಸಿಎಂ ಸಭೆ ಹಿನ್ನಲೆಯಲ್ಲಿ ಒಂದು ದಿನ ವಿಚಾರಣೆ ಮುಂದೂಡಲಾಗ್ತಿದೆ ಎಂದು ಅಭಿಪ್ರಾಯಿಸಿತು.


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top