advertise here

Search

ಸಾರಿಗೆ ಮುಷ್ಕರ ಎಫೆಕ್ಟ್-ನೂರಾರು ಸಿಬ್ಬಂದಿಗೆ ಶಿಸ್ತುಕ್ರಮದ ನೊಟೀಸ್‌ ಜಾರಿ-ಅಮಾನತ್ತು ಪಕ್ಕಾ..!


ಬೆಂಗಳೂರು: ಏನ್‌ ಆಗಬಾರದು ಎಂದುಕೊಂಡಿದ್ವೋ..ಏನ್‌ ಆಗುತ್ತೆ ಎಂದು ಅಂದಾಜಿಸಲಾಗಿತ್ತೋ ಅದೇ ಆಗೋಗಿದೆ.ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡವರ ವಿರುದ್ಧ ಶಿಸ್ತುಕ್ರಮ ಜಾರಿಯಾಗಬಹುದು ಎನ್ನುವ ಅಂದಾಜನ್ನೇನು ಮಾಡಲಾಗಿತ್ತೋ ಅದರ ಪ್ರಕಾರವೇ ಆಗೋಗಿದೆ.ಕಳೆದ ಬಾರಿ ಮುಷ್ಕರದಲ್ಲಿ ಪಾಲ್ಗೊಂಡವರ ವಿರುದ್ದ ಏನೆಲ್ಲಾ ಶಿಸ್ತುಕ್ರಮ ಜಾರಿ ಮಾಡಲಾಗಿತ್ತೋ ಅದೇ ಮಾದರಿಯಲ್ಲಿ ಸರ್ಕಾರ ಮುಷ್ಕರದಲ್ಲಿ ಭಾಗಿಯಾದ ಎಲ್ಲರಿಗೂ ಶಿಸ್ತುಕ್ರಮದ ನೊಟೀಸ್‌ ಜಾರಿ ಮಾಡಿದೆ.ಇದರ ಮುಂದುವರೆದ ಭಾಗವಾಗಿ ಮುಷ್ಕರದಲ್ಲಿ ಭಾಗಿಯಾದ ಎಲ್ಲರೂ ಅಮಾನತ್ತು ಆಗುವುದು ಪಕ್ಕಾ ಎನ್ನುವಂತಾಗಿದೆ.

ಸಾರಿಗೆ ಮುಷ್ಕರ ನಡೆಸದಂತೆ ಹೈ ಕೋರ್ಟ್‌ ಮುಷ್ಕರಕ್ಕೆ ನಿರ್ದರಿಸಿದ ದಿನದಂದೇ ಸೂಚನೆ ಕೊಡಲಾಗಿತ್ತು.ಇದರ ಅನ್ವಯ ಯಾವೊಬ್ಬ ಸಿಬ್ಬಂದಿ ಕೂಡ ಮುಷ್ಕರದಲ್ಲಿ ಭಾಗವಹಿಸಬಾರದಿತ್ತು.ಆದರೆ ಸಂಘಟನೆಗಳ ಮಾತು ಕೇಳಿ ಎಲ್ಲರೂ ಮುಷ್ಕರದಲ್ಲಿ ಭಾಗಿಯಾಗಿದ್ದರು.ಕೋರ್ಟ್‌ ಆದೇಶ ಇದ್ದ ಹೊರತಾಗ್ಯೂ ಮುಷ್ಕರದಲ್ಲಿ ಭಾಗಿಯಾಗಿದ್ದು ನ್ಯಾಯಾಲಯವನ್ನು ಕೆಂಡಾಮಂಡಲಗೊಳಿಸಿತ್ತು.

ತನ್ನ ಆಕ್ರೋಶವನ್ನು ವಿಚಾರಣೆ ವೇಳೆ ವ್ಯಕ್ತಪಡಿಸಿತ್ತು ಕೂಡ.ನಿನ್ನೆಯೇ ಇದರ ಬಗ್ಗೆ ಹೈಕೋರ್ಟ್‌ ಗೆ ಎಚ್ಚರಿಕೆ ನೀಡಿತ್ತಲ್ಲದೇ ಅವರ ವಿರುದ್ದ ಏನ್‌ ಬೇಕಾದ್ರೂ ಕ್ರಮ ಕೈಗೊಳ್ಳುವುದಕ್ಕೆ ನೀವು ಸ್ವತಂತ್ರರಿದ್ದೀರಿ ಎಂದು ಹೇಳಿತ್ತು.

ಮೊದಲೇ ಸಾರಿಗೆ ಸಿಬ್ಬಂದಿ ಮೇಲೆ ಕೆಂಡಾಮಂಡಲವಾಗಿದ್ದ ಆಡಳಿತ ಮಂಡಳಿ ಸಿಕ್ಕಿದ್ದೇ ಚಾನ್ಸ್‌ ಎನ್ನುವಂತೆ ಹೈಕೋರ್ಟ್‌ ಆದೇಶ ಹೊರಬೀಳುತ್ತಿದ್ದಂತೆ ಮುಷ್ಕರದಲ್ಲಿ ಭಾಗಿಯಾದ ಎಲ್ಲಾ ಸಿಬ್ಬಂದಿಗೂ ನೊಟೀಸ್‌ ಜಾರಿ ಮಾಡಿದೆ.ವಾಟ್ಸಪ್‌ ಗಳಲ್ಲೇ ನೊಟೀಸ್‌ ಕಳುಹಿಸಿಕೊಡಲಾಗಿದೆ.ಇದರಲ್ಲಿ ಹೈಕೋರ್ಟ್‌ ಆದೇಶವಿದ್ದಾಗ್ಯೂ ತಾವೇಕೆ ಮುಷ್ಕರದಲ್ಲಿ ಭಾಗಿಯಾಗಿದ್ರಿ.ಇದು ನ್ಯಾಯಾಂಗ ನಿಂದನೆಯಲ್ಲವೇ..? ತಮ್ಮ ವಿರುದ್ಧ ಏಕೆ ಕ್ರಮಕೈಗೊಳ್ಳಬಾರದು ಎಂದು ತಿಳಿಸಿದೆ.

ALSO READ :  "ಮಾಧ್ಯಮ"ಗಳ ತಾಕತ್ತಿಗೆ ಸಾಣೆ ಹಿಡಿದ "ಸುಜಾತಾಭಟ್‌ ಪ್ರಹಸನ"

ಅಪಾದನಾ ಪತ್ರದಲ್ಲಿ ನಿಯಮ ೨೩ ರ ಅಡಿಯಲ್ಲಿ ತಮ್ಮ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದೆ.ಇದು ಸ್ಪಷ್ಟವಾಗಿ ಮುಷ್ಕರದಲ್ಲಿ ಭಾಗಿಯಾಗಿದವರನ್ನು ಅಮಾನತ್ತುಗೊಳಿಸುವ ಉದ್ದೆಶವನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಹೈ ಕೋರ್ಟ್‌ ಆದೇಶವಿದ್ದಾಗ್ಯೂ ಮುಷ್ಕರದಲ್ಲಿ ಭಾಗಿಯಾದ ಬಹುತೇಕರಿಗೆ ಆಪಾದನಾ ಪತ್ರಗಳು ವಾಟ್ಸಪ್‌ ಮೂಲಕ ತಲುಪಿದೆ.

ಇದರಿಂದ ಎಲ್ಲಾ ಸಿಬ್ಬಂದಿ ಅಮಾನತ್ತಾಗುವ ಸಾಧ್ಯತೆಯಿದೆ.ಇದನ್ನು ತೆರವು ಮಾಡಲು ಮತ್ತೆ ಅವರೆಲ್ಲಾ ಹೈಕೋರ್ಟ್‌ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಕೇವಲ ಸಿಬ್ಬಂದಿಗಲ್ಲ ಸಾರಿಗೆ ಸಂಘಟನೆಗಳ ಮುಖಂಡರಿಗೂ ಕೂಡ ನೊಟೀಸ್‌ ಜಾರಿ ಮಾಡಲಾಗಿದೆ. ಸಾರಿಗೆ ಸಿಬ್ಬಂದಿಗೆ ಆಗಿದೆ ಎನ್ನಲಾಗಿರುವ ಈ ಅನ್ಯಾಯವನ್ನು ಸಾರಿಗೆ ಯೂನಿಯನ್‌ ಗಳು ಹೇಗೆ ಸರಿಪಡಿಸುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top