advertise here

Search

“ನ್ಯೂಸ್‌” ಓದುವಾಗಲೇ “ಸುದ್ದಿಮನೆ”ಯಿಂದ ಆ “ಆಂಕರ್‌” ಹೊರನಡೆದಿದ್ದೇಕೆ ..!?


ಇದು ಸುದ್ದಿಮನೆಯೊಂದರಲ್ಲಿ ಇತ್ತೀಚೆಗೆ ನಡೆದಿರಬಹುದಾದ ವಿಚಿತ್ರ ಹಾಗೂ ಅಪರೂಪದ ಘಟನೆ.. ನ್ಯೂಸ್ ಬುಲೆಟಿನ್ ಮಾಡುವಾಗಲೇ ಆಂಕರ್ ವೊಬ್ಬ ಹೊರನಡೆದಿದ್ದಾನೆ.ಆತ ಕೆಲಸ ಮಾಡುತ್ತಿರುವ ಚಾನೆಲ್ ಹೆಚ್ಚೇನೂ ಪ್ರಚಲಿತದಲ್ಲಿಲ್ಲದ ಕಾರಣಕ್ಕೇನೋ ಅದು ದೊಡ್ಡಮಟ್ಟದ ಸುದ್ದಿಯಾಗಿಲ್ಲ.. ಆತನೇ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ನಡೆದಿದ್ದೇನು ಎನ್ನುವುದನ್ನು ವಿವರಿಸಿದ್ದಾನೆ. ಹಾಗೆಯೇ ತನ್ನ ನಿಲುವು- ನಿರ್ದಾರವನ್ನು ಗಟ್ಟಿದ್ವನಿಯಲ್ಲಿ ಸಮರ್ಥಿಸಿಕೊಂಡಿದ್ದಾನೆ. ಸುದ್ದಿಮನೆಗಳಲ್ಲಿ ನಡೆವ ಒಳ್ಳೆಯ ಮತ್ತು ಕೆಟ್ಟ ಬೆಳವಣಿಗೆ ಎರಡರ ಮೇಲೂ ಬೆಳಕು ಚೆಲ್ಲುವಂತ ಜವಾಬ್ದಾರಿಯುತ ಕೆಲಸ ಮಾಡುತ್ತಾ ಬಂದಿರುವ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಆ ಆಂಕರ್ ನ ನಡೆ ಹಾಗೂ ನಿರ್ದಾರ ಆಶ್ಚರ್ಯ ಹುಟ್ಟಿಸುವುದರ ಜತೆಗೆ ಸ್ವಲ್ಪ ವಿಚಿತ್ರ-ವಿಲಕ್ಷಣ ಎನಿಸಿದ್ದೂ ಸತ್ಯ..ಅದಕ್ಕಾಗಿಯೇ ಈ ವರದಿ.

ಕನ್ನಡದ ಸುದ್ದಿ ಚಾನೆಲ್ ಗಳಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತಲೇ ಇರುತ್ತವೆ.ಆದರೆ ಬಹುತೇಕ ನಾಲ್ಕು ಗೋಡೆಗಳ ನಡುವೆಯೇ ಮುಗಿದೋಗುತ್ತವೆ.ಹಾಗಾಗಿ ಸುದ್ದಿಯಾಗುವುದಿಲ್ಲ.( ಪ್ರತಿಷ್ಟಿತ ಚಾನೆಲ್ ಒಂದರಲ್ಲಿ ಸುದ್ದಿ ಓದಲಿಕ್ಕೆಂದು ಬಂದು ಕೂತಿದ್ದ ಸುದ್ದಿ ಸಂಪಾದಕರಾಗಿದ್ದರನ್ನೇ “ಗೆಟ್ ಔಟ್” ಎಂದು ಅಮಾನವೀಯವಾಗಿ ಹೇಳಿ ಕಳುಹಿಸಿದ್ದೂ ಇದೆ).ಆದರೂ ಅವರು ಅದನ್ನು ಬಹಿರಂಗಗೊಳಿಸಿರಲಿಲ್ಲ. ಅದಕ್ಕೆ ಹಲವು ಕಾರಣಗಳಿದ್ದಿರಬಹುದೇನೋ.? ಈ ಕ್ಷಣಕ್ಕೂ ಇಂಥಾ ಘಟನೆಗಳು ನಡೆಯುತ್ತಿಲ್ಲ ಎಂದೇನಲ್ಲ.ನಡೆಯುತ್ತಲಿವೆ..ಬುಲೆಟಿನ್-ಡಿಬೇಟ್ ಗೆ ಕೂರುವ ಆಂಕರ್ ಗಳಿಗೆ ಸಾಕಷ್ಟು ವಿಷಯಗಳನ್ನು ಹೇಳೊಕ್ಕೆ ಇಷ್ಟವಿಲ್ದಿದ್ದರೂ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗ್ತಿದೆ. ಹಾಗಾಗಿ ಅದನ್ನೆಲ್ಲಾ ನಾಲ್ಕು ಗೋಡೆಗಳ ನಡುವೆಯೇ ಅದುಮಿ ಹಾಕಲಾಗ್ತಿದೆ. ಹಾಗಾಗಿನೇ ಯಾವುದೂ ಸುದ್ದಿಯಾಗುತ್ತಿಲ್ಲ.

ಆದರೆ ಈ ಆಂಕರ್ ವಿಷಯದಲ್ಲಿ ಹಾಗೆ ಆಗಲೇ ಇಲ್ಲ…ತಾನು ಓದುತ್ತಿದ್ದ ಬುಲೆಟಿನ್ ನ್ನು ಅರ್ದಕ್ಕೆ ನಿಲ್ಲಿಸಿ ಹೊರನಡೆದ ವಿಷಯವನ್ನು ಧೈರ್ಯವಾಗಿ ಹೇಳಿಕೊಂಡಿದ್ದಾನೆ.ತನಗಾಗ್ತಿದ್ದ ಮಾನಸಿಕ ತುಮುಲ-ತಳಮಳ ಮತ್ತು ಮುಜುಗರವನ್ನ ಬಹಿರಂಗಗೊಳಿಸಿದ್ದಾನೆ. ತನ್ನ ವೃತ್ತಿಪರ ಭವಿಷ್ಯಕ್ಕೆ ಏನಾಗಬಹುದೆನ್ನುವ ಆಲೋಚನೆಯನ್ನೂ ಮಾಡದೆ ಸತ್ಯವನ್ನು ಬಹಿರಂಗಪಡಿಸಿದ್ದಾನೆ. ಸುದ್ದಿಮನೆಯಲ್ಲಿ ಅನುಭವಿಸ್ತಿದ್ದ ಅಸಹನೀಯ ಭಾವನೆಗಳನ್ನು ಬಿಚ್ಚಿಟ್ಟಿದ್ದಾನೆ.ಎಷ್ಟೇ ಅವಮಾನ-ನೋವು-ಅಸಹನೀಯ ಎನ್ನುವಂತ ಅನುಭವಗಳಾದ್ರೂ ಅದನ್ನು ನುಂಗಿಕೊಂಡೇ ಇರುವಂತ ಬಹುತೇಕ ಆಂಕರ್ ಗಳ ನಡುವೆ ಯಾವುದೇ ಭಯ-ನಿರ್ಭಿಡೆಯಿಲ್ಲದೆ ಸತ್ಯವನ್ನು ಜಗಜ್ಜಾಹೀರುಗೊಳಿಸಿದ್ದಾನೆ.ಆತನ ಧೈರ್ಯ-ಸಾಹಸವನ್ನು ಮೆಚ್ಚುತ್ತಲೇ ಒಂದಷ್ಟು ವಿಚಾರಗಳ ಬಗ್ಗೆ ಗಮನಸೆಳೆಯಲು ಪ್ರಯತ್ನಿಸ್ತೇವೆ.

ಬುಲೆಟಿನ್ ಅರ್ಧದಲ್ಲೇ ಎದ್ದುನಡೆದ ಆಂಕರ್ ಹೆಸರು ಅಶ್ವದಿವಿತ್..ಇನ್ನೂ ಬಿಸಿರಕ್ತದ ಯುವಕ. ಮಾದ್ಯಮ ಕ್ಷೇತ್ರಕ್ಕೆ ಬಂದು ಹೆಚ್ಚೇನೂ ಸಮುಯವಾಗಿಲ್ಲ.ಒಂದೆರೆಡು ಚಾನೆಲ್ ಗಳಲ್ಲಿ ಕೆಲಸ ಮಾಡಿರಬಹುದೇನೋ..? ಹಿಂದಿನ ಚಾನೆಲ್ ಗಳಲ್ಲಿ ಯಾವ ಉದ್ದೇಶಕ್ಕೆ ಕೆಲಸ ಬಿಟ್ಟನೋ ಗೊತ್ತಿಲ್ಲ.ಅದು ಆತನ ವೈಯುಕ್ತಿಕ.ಆದರೆ ತಾನು ಕೆಲಸ ಮಾಡ್ತಿದ್ದ ಚಾನೆಲ್ ತನ್ನನ್ನು ತನಗೆ ಒಪ್ಪದ,ತನ್ನ ಮನಸಾಕ್ಷಿಗೆ ತದ್ವಿರುದ್ಧವಾದ ರೀತಿಯಲ್ಲಿ ಕೆಲಸ ಮಾಡಿಸಿಕೊಳ್ಳಲು ಯತ್ನಿಸಿದ ಕಾರಣಕ್ಕೆ ಅದನ್ನು ಧಿಕ್ಕರಿಸಿ ಬಂದೆ..ನನಗೆ ಯಾರ ಹಂಗೂ ಬೇಡ..ನಾನು ನನ್ನದೇ ಸ್ವಂತ ಯೂ ಟ್ಯೂಬ್ ಆರಂಭಿಸಿ,ಅದರಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳುತ್ತೇನೆ ಎಂದು ಧೈರ್ಯವಾಗಿ ಅಬ್ಬರಿಸಿದ್ದಾನೆ.ಆತನದು ಸಾಹಸವೋ.. ನಿಜವಾದ ಧೈರ್ಯವೋ… ಹುಚ್ಚಾಟೋ….ಆವೇಶವೋ….ಹುಂಭತನವೋ..ಒಂದೂ ಗೊತ್ತಾಗ್ತಿಲ್ಲ.

ಆತ ಕಷ್ಟದಲ್ಲಿದ್ದಾಗ ಚಾನೆಲ್ ಮಾಲೀಕ ಕೈ ಹಿಡಿದಿದ್ರಂತೆ..ಆಸ್ಮರಣೆಯೂ ಇಲ್ಲವಾಯ್ತಾ..? ಇವತ್ತೇನು ಆಂಕರ್ ದಿವಿತ್, ಚಾನೆಲ್ ನ ಸ್ಟೈಲ್ ಶೀಟ್ ತನ್ನ ಸಿದ್ದಾಂತಕ್ಕೆ-ಮಾನಸಿಕತೆಗೆ ಹೊಂದಲಿಲ್ಲ, ತನ್ನಿಂದ ತನ್ನ ಮನಸಾಕ್ಷಿಗೆ ಒಪ್ಪದ ಕೆಲಸ ಮಾಡಿಸಿಕೊಳ್ಳಲಾಗ್ತಿದೆ ಎಂದು ಜ್ನಾನೋದಯವಾದವನಂತೆ ಹೊರಬಂದಿದ್ದಾನೋ ಆ ಸಂಸ್ಥೆಯ ಮಾಲೀಕರೇ ಈತ ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದರೆನ್ನುವ ಮಾತಿದೆ.ಅದೇ ಚಾನೆಲ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಯೇ ಇದನ್ನು ಹೇಳಿ್ದ್ದಾರೆ. ಈತ ಈ ಹಿಂದೆ ಕೆಲಸ ಮಾಡುತ್ತಿದ್ದ ಸಂಸ್ಥೆಯನ್ನು ಬಿಟ್ಟು ಹೊರಬಂದಾಗ ಸಮಸ್ಯೆಯಲ್ಲಿದ್ದನಂತೆ.ಆಗ ಆತನಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದೇ ಇವರಂತೆ. ಪತ್ರಿಕೋದ್ಯಮದ ಬಗ್ಗೆ ಹೆಚ್ಚೇನು ಗೊತ್ತಿರದ ಮಾಲೀಕರು, ಈತನಿಗೆ ಸುದ್ದಿ ವಿಷಯದಲ್ಲಿ ಎಲ್ಲಾ ಆಯ್ಕೆ ಸ್ವಾತಂತ್ರ್ಯವನ್ನು ನೀಡಿದ್ದರಂತೆ.ಈತ ಯಾವ ಸುದ್ದಿ ಆಯ್ಕೆ ಮಾಡಿಕೊಂಡರೂ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲವಂತೆ.ಅಷ್ಟೊಂದು ಸ್ವಾತಂತ್ರ್ಯ ಕೊಟ್ಟ ಮಾಲೀಕನಿಗೆ ಸ್ವಲ್ಪವೂ ಸ್ವಾರ್ಥವಿರಬಾರದು ಎಂದರೆ ಹೇಗೆ..? ಸುದ್ದಿ ವಿಷಯದಲ್ಲಿ ತನ್ನದೊಂದಿಷ್ಟು ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡು ಎಂದ್ರೆ ತಪ್ಪೇನಿದೆ..? ಅಷ್ಟು ಸ್ವಾರ್ಥವೂ ಆತನಿಗಿರುವುದು ತಪ್ಪಾ..?

ಚಾನೆಲ್ ಗೆ ಬಂಡವಾಳ ಹೂಡಿ, ಪ್ರತಿ ತಿಂಗಳು ತಪ್ಪದೇ ಸಂಬಳ ಕೊಟ್ಟು ಸಿಬ್ಬಂದಿ ಕಲ್ಯಾಣ ಕಾಯುವ ಮಾಲೀಕನು ಹೇಳಿದ ಸುದ್ದಿಗಳ:ನ್ನು ಆಯ್ಕೆ ಮಾಡಿಕೊಂಡು ಅದರ ಬಗ್ಗೆ ಸ್ಟೋರಿ ಮಾಡಿದ್ರೆ ಕಳೆದುಕೊಳ್ಳುವುದೇನಿದೆ.? ಅವರೇನಾದ್ರೂ ಬೇರೆ ರೀತಿಯಲ್ಲಿ ಸುದ್ದಿ ಮಾಡು ಎಂದ್ರಾ..? ಒಂದಷ್ಟು ಸುದ್ದಿಗಳಿಗೆ ಆಧ್ತತೆ ಕೊಡಿ ಎಂದಿದ್ದು ಅಷ್ಟೇ..ಅದನ್ನೇ ದೊಡ್ಡದು ಮಾಡಿ ಸುದ್ದಿ ಮನೆಯಿಂದ ಹೊರ ನಡೆಯೋದು..ಹೊರಗೆ ಹೋಗಿ ಬಾಯಿಗೆ ಬಂದಂತೆ ಮಾತನಾಡುವುದು ಎಷ್ಟು ಸರಿ..? ಎಂದು ಚಾನೆಲ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಪ್ರಶ್ನಿಸಿದ್ದಾರೆ.ಕಷ್ಟಕ್ಕೆ ಸ್ಪಂದಿಸಿದ್ದನ್ನು ಆತ ಮರೆತುಬಿಟ್ಟ ಎನ್ನಿಸುತ್ತೆ.ಇಷ್ಟ್ ದಿನವೂ ಆತ ಮನಸಾಕ್ಷಿಗೆ ಒಪ್ಪುವಂಥ ರೀತಿಯಲ್ಲೇ ಕೆಲಸ ಮಾಡಿದ್ಬಾ,,? ಒಮ್ಮೆಯೂ ಅದನ್ನು ಮೀರಿ ನಡೆದುಕೊಳ್ಳಲಿಲ್ಲವೇ..? ಆತನ ಕೆಲಸದಲ್ಲಿಯೂ ನೂರು ತಪ್ಪು ಹುಡುಕಬಹುದಿತ್ತು ಸರ್..ಆದ್ರೆ ನಮ್ಮ ಮಾಲೀಕರು ಹಾಗೆ ಮಾಡಲಿಲ್ಲ…ಮಾಲೀಕನನ್ನು ಬಿಟ್ಟರೆ ಯಾರೂ ಚಾನೆಲ್ ಗೆ ಅನಿವಾರ್ಯವಲ್ಲ..ಇವತ್ತು ಆತ ..ನಾಳೆ ನಾವು..ಆದರೆ ಹೋಗುವಾಗ ಇಷ್ಟೊಂದು ರಂಪರಾಮಾಯಣ ಮಾಡಬೇಕಾದ ಅವಶ್ಯಕತೆಯಿತ್ತಾ..? ಆತನೇ ಮನಸಾಕ್ಷಿಯನ್ನ ಪ್ರಶ್ನಿಸಿಕೊಂಡು ನೋಡಲಿ ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ಸವಾಲೆಸೆದಿದ್ದಾರೆ. ಆಗಬಾರದ್ದು ಅಂತದ್ದೇನು ಆಯ್ತು..ಮಾಲೀಕ ಹೇಳಬಾರದ್ದೇನು ಹೇಳಿದ್ರು..!

ಪ್ರಶ್ನೆ ಕಾಡ್ತಿರೋದೇ ಅಲ್ಲಿ,ಇಷ್ಟ್ ದಿನಗಳೂ ಯಾವುದೇ ಸಮಸ್ಯೆ ಇಲ್ಲದಂತೆ ಕೆಲಸ ಮಾಡಿಕೊಂಡಿದ್ದ ಆಂಕರ್ ದಿವಿತ್, ಚಾನೆಲ್ ಸಹವಾಸನೇ ಬೇಡ ಎಂದ್ಹೇಳಿ ಹೊರಗೆನಡೆಯುತ್ತಾನೆ..ಸೋಶಿಯಲ್ ಮೀಡಿಯಾದಲ್ಲಿ ತನಗೆ ಅಪಮಾನವಾಯ್ತು ಎಂದು ಹೇಳುತ್ತಾನೆ ಎಂದ್ರೆ ಅವತ್ತು ಆಗಬಾರದ್ದು ಏನಾಯ್ತು.? ಮಾಲೀಕ ಅಂತದ್ದೇನು ಹೇಳಿದ..? ಆತನ ನೈತಿಕತೆ- ಸೈದ್ದಾಂತಿಕತೆಗೆ ಚ್ಯುತಿ ತರುವಂಥ ಅಸಂಬದ್ದವಾದ ಅಂತದ್ದೇನು ಹೇಳಿದ? ಆತನಿಗೆ ಇಷ್ಟವಿಲ್ಲದ ಯಾವುದನ್ನು ಪಾಲಿಸಲೇಬೇಕೆಂದು ಸೂಚಿಸಿದ..? ಎನ್ನುವ ಪ್ರಶ್ನೆ ಮೂಡುತ್ತವೆ.ಇದಕ್ಕೆ ಕಾರಣವೇನು ಎನ್ನುವುದು ನಿಖರವಾಗಿ ಗೊತ್ತಾಗಿಲ್ಲ.ಇದನ್ನು ಚಾನೆಲ್ ಸಹವಾಸವೇ ಬೇಡವೆಂದು ಹೊರನಡೆದ ನಿರೂಪಕ ಹೇಳ್ಬೇಕು..ಅಥವಾ ಆತ ಅಷ್ಡೊಂದು ನಿಷ್ಟೂರವಾಗಿ ಹೊರಹೋಗುವಂತೆ ಮಾಡಿದರೆನ್ನಲಾದ ಚಾನೆಲ್ ಮಾಲೀಕನೇ ಉತ್ತರಿಸಬೇಕು. ಏಕೆಂದರೆ ಬೇರೆಯದೇ ಆದ ರೀತಿಯಲ್ಲಿ ಸುದ್ದಿ ಮಾಡಬೇಕು ಎಂದಿದ್ದು, ನನ್ನ ಮನಸಾಕ್ಷಿಗೆ ತದ್ವಿರುದ್ದವಾಗಿತ್ತು .. ಹಾಗಾಗಿ ಹೊರಬಂದೆ ಎಂದಷ್ಟೇ ನಿರೂಪಕ ಹೇಳಿದ್ದನ್ನು ಬಿಟ್ಟರೆ ಕ್ಲಾರಿಟಿ ಸಿಗ್ತಿಲ್ಲ. ಸಾರ್ವಜನಿಕವಾಗಿ ಸ್ಪಷ್ಟಪಡಿಸಿದರೆ ಒಳ್ಳೇದು ಎನ್ನಿಸುತ್ತೆ.

ALSO READ :  "ಅವಮಾನ"ದಿಂದಲೇ "ರಿಪಬ್ಲಿಕ್ ಕನ್ನಡ"ದಿಂದ ಸ್ಟಾರ್ ಆಂಕರ್ ಜಯಪ್ರಕಾಶ್ ಶೆಟ್ಟಿ ಹೊರನಡೆದ್ರಾ.?!

ಇಷ್ಟ್ ವರ್ಷಗಳ ಜರ್ನಲಿಸಂನಲ್ಲಿ ನೈತಿಕತೆ-ಸೈದ್ಧಾಂತಿಕತೆ ಮೀರಿ ಕೆಲಸ ಮಾಡಿಯೇ ಇಲ್ವಾ..? ಈ ಬಗ್ಗೆ ಕೆಲವು ಮಾದ್ಯಮ ಸ್ನೇಹಿತರು ನಮ್ಮ ಬಳಿ ಕೇಳಿದಂಥ ಪ್ರಶ್ನೆಗಳಿವು.. ಮಾದ್ಯಮಗಳು ಸ್ವ ಹಿತಾಸಕ್ತಿಯಲ್ಲೇ ಕೆಲಸ ಮಾಡುತ್ತವೆ ಎನ್ನೋದು ಆತನಿಗೇನು ಗೊತ್ತಿರಲಿಲ್ವೇ..? ಇಷ್ಟ್ ವರ್ಷಗಳ ಜರ್ನಲಿಸಂನಲ್ಲಿ ಒಮ್ಮೆಯೂ ಈ ರೀತಿ ಅನ್ನಿಸಲಿಲ್ವಾ..? ಎಂದು ಅನೇಕರು ಪ್ರಶ್ನಿಸಿದ್ದಾರೆ.ಹಿಂದೆ ಮಾಡಿದ ಚಾನೆಲ್ ಗಳಲ್ಲಿ ಆತನ ಸ್ವಂತಿಕೆ-ಸ್ವಾಭಿಮಾನಕ್ಕೆ ಧಕ್ಕೆ ಯಾವತ್ತೂ ಬರಲಿಲ್ಲವೇ..? ಇಷ್ಟ್ ವರ್ಷದ ಜರ್ನಲಿಸಂನಲ್ಲಿ ಮೌಲ್ಯಾದೆರ್ಶಗಳ ಜತೆ ಯಾವತ್ತೂ ಹೊಂದಾಣಿಕೆ ಮಾಡಿಕೊಳ್ಳಲಿಲ್ಲವೇ..?ಇದೇ ಪ್ರಶ್ನೆಯನ್ನು ನಾವು ಆತನಿಗೆ ಕೇಳುತ್ತಿದ್ದೇವೆ.ಅದಕ್ಕೆ ಆತನ ಆತ್ಮಸಾಕ್ಷಿಯೇ ಉತ್ತರಿಸಬೇಕಿದೆಯಷ್ಟೆ.

ಅಶ್ವದಿವಿತ್ ನ ಮನಸ್ಥಿತಿ ಮತ್ತು ಕಾರ್ಯವೈಖರಿಯಲ್ಲೂ ಬದಲಾವಣೆ ಆಗಬೇಕಿದೆ..ಆಂಕರ್ ದಿವಿತ್‌ ಬಗ್ಗೆ ಹೆಚ್ಚಿಗೇನೂ ನಮ್ಮಲ್ಲಿ ಮಾಹಿತಿಯಿಲ್ಲ.ಆದರೆ ಅಲ್ಲೊಂದು ಇಲ್ಲೊಂದು ಎನ್ನುವಂತೆ ಈತನ ಬಗ್ಗೆ ಅಬಿಪ್ರಾಯಗಳನ್ನು ಕೇಳಿದ್ದೇವೆ,..ಹುಡುಗ ಪ್ರತಿಭಾವಂತ..ವಿಚಾರವಂತನೂ ಹೌದು..ಆದ್ರೆ ಪ್ರಬುದ್ಧತೆ ಬರೊಕ್ಕೆ ಬೇಕಾದಷ್ಟು ಅನುಭವವಿಲ್ಲ ಎನ್ನುವ ಮಾತಿದೆ. ಕೆಳ ಹಂತದಿಂದ ಕೆಲಸ ಮಾದ್ದು ಕಡಿಮೆಯಂತೆ.ಹಾಗೇನಾದ್ರೂ ಮಾಡಿದಿದ್ದರೆ ಮಾದ್ಯಮಗಳಲ್ಲಿನ ವಾಸ್ತವ ಚಿತ್ರಣ ಗೊತ್ತಿರುತ್ತಿತ್ತು.ಮಾತು ಚೆನ್ನಾಗಿ ಬರುತ್ತದೆನ್ನುವ ಕಾರಣಕ್ಕೆ ಒಮ್ಮಿಂದೊಮ್ಮಿಗೆ ದೊಡ್ಡಮಟ್ಟದ ಅವಕಾಶಗಳು ಸಿಕ್ಕಿದ್ದೇ ಯಡವಟ್ಟಾಯ್ತು ಎನ್ನಿಸುತ್ತೆ.ಅರಚೋದು..ಕಿರುಚೋದೇ ಪತ್ರಿಕೋದ್ಯಮ ಎಂದಿಕೊಂಡಿರುವ ಬಹುತೇಕ ಆಂಕರ್ ಗಳ ಸಾಲಿಗೆ ನಿಲ್ಲದೆ ವಿಭಿನ್ನವಾಗಿ ಈತ ಗುರುತಿಸಿಕೊಳ್ಳಬಹುದಿತ್ತು.ಅದಕ್ಕೆ ಆತನಿಗೆ ಅವಕಾಶವೂ ಇತ್ತು.ಆದರೆ ಯಾವಾಗ ತನ್ನನ್ನು ನಿಯಂತ್ರಿಸುವ ವ್ಯವಸ್ಥೆ ಇರುವುದಿಲ್ಲವೋ ಆಗ ಅಹಂ ಬ್ರಹ್ಮಾಸ್ಮಿ ಎನ್ನುವ ಮಟ್ಟಕ್ಕೆ ವ್ಯಕ್ತಿ ಬಂದುಬಿಡುತ್ತಾನಂತೆ.ಈತನ ವಿಚಾರದಲ್ಲಿಯೂ ಹಾಗೆಯೇ ಆಯ್ತಾ ಗೊತ್ತಿಲ್ಲ.ಆದರೆ ಟಿವಿ ಪರದೆ ಮೇಲೆ ಈತನ ಕೆಲವೊಂದು ಡಿಬೇಟ್-ಮಾತುಗಾರಿಕೆ ನೋಡಿದವರು ಹೇಳುವ ಪ್ರಕಾರ ತಾನು ಹೇಳಿದ್ದನ್ನೇ ಎಲ್ಲರೂ ಕೇಳಬೇಕೆನ್ನುವ ಮನಸ್ತಿತಿಯಲ್ಲಿದ್ದಂತೆ ತೋರುತ್ತದಂತೆ. ಡಿಬೇಟ್ ಗಳು , ವಿಚಾರಮಂಥನಕ್ಕೆ ವೇದಿಕೆ ಆಗಬೇಕೇ ಹೊರತು, ಅರಚಾಟ-ಕಿರುಚಾಟಕ್ಕಲ್ಲ..ಆದರೆ ಇವತ್ತಿನ ದುರಂತ ಎಂದ್ರೆ ಬಹುತೇಕ ಆಂಕರ್ ಗಳಿಗೆ ತಲೆಯಲ್ಲಿ ವಿಚಾರಗಳೇ ಇರೊಲ್ಲ..ಅರಚಾಡಿದ್ರೆ..ಕಿರುಚಾಡಿದ್ರೆ ಗುರುತಿಸಿಕೊಳ್ಳಬಹುದು.ವೈರಲ್ ಆಗಬಹುದು ಎಂಬ ಭ್ರಮೆಯಲ್ಲಿದ್ದಾರೆ.ಅದರಿಂದ ಹೊರಬಾರದಿದ್ದರೆ ಕೂಗುಮಾರಿಗಳಾಗ್ತಾರೆಯೇ ಹೊರತು, ಒಳ್ಳೆಯ ಆಂಕರ್ ಗಳಲ್ಲ..ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಷ್ಟೆ.

ಅಶ್ವದಿವಿತ್ ಪ್ರತಿಭಾವಂತ-ಬುದ್ದಿವಂತ..ವಿಚಾರವಂತನೂ ಇರಬಹುದು. ಒಳ್ಳೆಯ ಆಂಕರ್ ಆಗಿ ಬೆಳೆಯೊಕ್ಕೆ ಅವಕಾಶಗಳೂ ಇವೆ,ಆದರೆ ಪತ್ರಿಕೋದ್ಯಮದಲ್ಲಿ ಬೇಕಿರುವ ತಾಳ್ಮೆ-ಬಿಸಿರಕ್ತದ ನಿರೂಪಕನಿಗೆ ಸಂಯಮವೂ ಅಗತ್ಯವಿತ್ತೇನೋ .?ಹೌದು..ಒಂದಷ್ಟು ಸಂಯಮವನ್ನು ಆತ ಕಾಯ್ದುಕೊಳ್ಳಬೇಕಿತ್ತೇನೋ..ಅದು ಸಾಧ್ಯವೂ ಇತ್ತು.ಚಾನೆಲ್ ಗಳಲ್ಲಿ ಇದೆಲ್ಲವೂ ಸಹಜ ಕೂಡ.ಯಾವ ಚಾನೆಲ್ ನಲ್ಲೂ ಇರದಂಥ ವ್ಯವಸ್ಥೆಯೇನೂ ಇಲ್ಲಿರಲಿಲ್ಲ.ಎಲ್ಲಾ ಚಾನೆಲ್ ಗಳು ರಾಜ್ಯ- ರಾಷ್ಟ್ರ-ಜನರ ಹಿತಾಸಕ್ತಿಗಿಂತ ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡೋದು ಹೆಚ್ಚು.ಅವುಗಳ ಉಳಿವು-ಅಸ್ಥಿತ್ವದ ದೃಷ್ಟಿಯಿಂದ ಇದು ಅಗತ್ಯದಷ್ಟೇ ಅನಿವಾರ್ಯ ಸಹ.ಈ ವಿಷಯದಲ್ಲೂ ಆತನಿಗೇನೇ ನೋವು-ಬೇಸರವಿದ್ದರೂ ಅದನ್ನು ಏಕಾಏಕಿ ಬಹಿರಂಗಪಡಿಸೊಕ್ಕಿಂತ ಹೆಚ್ಚಾಗಿ ಸಾವಧಾನದಿಂದ ಕುಳಿತು ಆಲೋಚಿಸಬೇಕಿತ್ತೇನೋ.ಸಂಯಮದ ಕೊರತೆ ಇದ್ದಂತಿದೆ.

ಎಲ್ಲಕ್ಕೂ ರಾಜಿಮಾಡಿಕೊಂಡಿರು ಎಂದು ಪತ್ರಿಕೋದ್ಯಮ ಹೇಳೊಲ್ಲ..ಅದನ್ನು ಹ್ಯಾಂಡಲ್ ಮಾಡುವ ಚಾಕಚಕ್ಯತೆ ಬಗ್ಗೆಯೂ ಇದೇ ವೃತ್ತಿ ತಿಳಿಸೇಳುತ್ತದೆ.ಅಂದ್ಹಾಗೆ ಈ ಜ್ನಾನ ಅನಾಯಾಸವಾಗಿ ಸಿದ್ದಿಸುವಂತದ್ದಲ್ಲ..ಅದಕ್ಕೆ ತಾಳ್ಮೆ ಬೇಕು..ಅದಕ್ಕಾಗಿ ಕಾಯಬೇಕು ಅಷ್ಟೆ…ನಮಗೆ ಇಷ್ಟವಾಗದ..ನಮ್ಮ ಮನಸಿಗೆ ಹಿಡಿಸದ, ನಮ್ಮ ಆದರ್ಶ ಸಿದ್ದಾಂತಗಳಿಗೆ ಒಪ್ಪಿಗೆಯಾಗದ, ನಾವು ನಂಬಿದ ಮೌಲ್ಯಗಳು,ಅಳವಡಿಸಿಕೊಂಡ ರೀತಿನೀತಿಗಳಿಗೆ ತದ್ವಿರುದ್ಧವಾದ ಅನೇಕ ಘಟನೆಗಳು ನಡೆಯತ್ತಲೇ ಇರುತ್ತವೆ.ಅದನ್ನು ಹೇಗೆ ನಿಭಾಯಿಸಬೇಕೆನ್ನುವ ತಿಳಿವು ಇರಬೇಕಾಗುತ್ತದೆ ಅಷ್ಟೆ…ಯಾವುದನ್ನು ಹೇಗೆ..ಯಾವ ಸನ್ನಿವೇಶದಲ್ಲಿ ಟ್ಯಾಕಲ್ ಮಾಡಬೇಕೆನ್ನುವ ವಿವೇಚನೆ ನಮ್ಮಲ್ಲಿದ್ದರೆ ಎಲ್ಲವೂ ಅನಾಯಾಸ..ಇಂಥಾ ಸನ್ನಿವೇಶಗಳಿಂದ ವಿವಾದಕ್ಕೆ ಒಳಗಾಗುವುದು ಸಲೀಸು..ಅದರಿಂದ ದಿಢೀರ್ ಪ್ರಚಾರವೂ ಸಿಗಬಹುದು..ಒಂದಷ್ಟು ಪ್ರಶಂಸೆಯೂ ಸಿಗಬಹುದು..ಆದ್ರೆ ನೆನಪಿರಲಿ..ಅದೆಲ್ಲಾ ತಾತ್ಕಾಲಿಕ.ಅದನ್ನೆಲ್ಲಾ ಬೇಗ ಮರೆತುಬಿಡ್ತಾರೆ. ಮೆಮೋರಿ ತುಂಬಾ ಕಡಿಮೆ.ಅದನ್ನು ಬೇಗ ಮರೆತುಬಿಡ್ತಾರೆ.. ಇಲ್ಲಿ ಜತೆಗಿದ್ದವರೇ ದೂರವಾಗ್ತಾರೆ.. ಒಂಟಿಯನ್ನಾಗಿಸುತ್ತಾರೆ. ಅದರ ಬಗ್ಗೆ ಎಚ್ಚರದಿಂದ ಇರೋದು ಸೂಕ್ತ. ಈ ಎಲ್ಲಾ ಸೂಕ್ಷ್ಮಗಳನ್ನು ಗ್ರಹಿಸಿಕೊಂಡು ಮುನ್ನಡೆದರೆ ಬೆಳೆದು-ಭವಿಷ್ಯ ಕಟ್ಟಿಕೊಳ್ಳೋದು ಕಷ್ಟವಾಗದು..

ಇಂಥಾ ಬೆಳವಣಿಗೆಗಳು ಸಾರ್ವಜನಿಕವಾಗಿ ಎಂಥಾ ಸಂದೇಶ ಕೊಡ್ತವೆ:ಆತುರಕ್ಕೆ ಬಿದ್ದು ಆಂಕರ್ ಅಶ್ವದಿವಿತ್ ಮಾಡಿದ ಆ ಒಂದು ವೀಡಿಯೋ ಮಾದ್ಯಮ ಲೋಕದಲ್ಲಿ ಸಂಚಲನ ಮೂಡಿಸಿರಬಹುದೇನೋ.ಆದರೆ ಸಾರ್ವಜನಿಕವಾಗಿ ಮಾದ್ಯಮಗಳ ಬಗ್ಗೆ ಏನೆಲ್ಲಾ ಅಭಿಪ್ರಾಯ ವ್ಯಕ್ತವಾಗಬಹಬುದೆನ್ನುವುದು ಕೂಡ ಚಿಂತಿಸತಕ್ಕ ಮಾತು.. ಮಾದ್ಯಮಗಳ ಬಗ್ಗೆ ಸಾರ್ವಜನಿಕವಾಗಿ ಮೊದಲೇ ಒಳ್ಳೆಯ ಅಭಿಪ್ತಾಯಗಳಿಲ್ಲ. ಆಂಕರ್ ಗಳ ಬಗ್ಗೆಯಾಗಲಿ,ರಿಪೋರ್ಟರ್ಸ್ ಗಳ ಬಗ್ಗೆಯಾಗಲಿ ಹೇಳಿಕೊಳ್ಳುವಂತ ಒಳ್ಳೆಯ ಮಾತುಗಳಿಲ್ಲ.ಮಾದ್ಯಮಗಳನ್ನು ಕಾಲೆಳೆಯೊಕ್ಕೆ ಟೀಕಾಕಾರರು ಅವಕಾಶಗಳನ್ನು ಕಾಯುತ್ತಿರುತ್ತಾರೆ.ಅಂತದ್ದರಲ್ಲಿ ಮತ್ತೊಂದು ಅಸ್ತ್ರವಾಗಿ ಈ ವೀಡಿಯೋ ಸಿಕ್ಕರೆ ಹೇಗೆಲ್ಲಾ ಟ್ರೋಲ್ ಆಗಬಹುದೆನ್ನುವುದನ್ನು ಊಹಿಸಿಕೊಂಡ್ರೂ ಭಯವಾಗುತ್ತೆ.ಇದು ಈತನಿಗೂ ಗೊತ್ತಿಲ್ಲ ಎಂದೇನಲ್ಲ..ಆದರೆ ಆ ಕ್ಷಣದ ಸಿಟ್ಟನ್ನು ತಣಿಸಿಕೊಳ್ಳಲು ಇಂತದ್ದೊಂದು ನಿರ್ದಾರ ತೆಗೆದುಕೊಡ ಎಂದು ಕಾಣುತ್ತೆ..ಆದರೆ ಇದರಿಂದ ಆತ ಕಲಿಯಬೇಕಾದ ಪಾಠ ಬಹಳಷ್ಟಿದೆ. ಮಾದ್ಯಮದಲ್ಲೇ ಭವಿಷ್ಯ ಕಂಡುಕೊಳ್ಳಬೇಕೆನ್ನುವ ಇರಾದೆಯಿದ್ದಲ್ಲಿ ತನ್ನ ಇತಿಮಿತಿಗಳನ್ನು ಅರ್ಥ ಮಾಡಿಕೊಳ್ಳೋದು ಒಳ್ಳೇದೆನಿಸುತ್ತದೆ.

ಏಕೆಂದರೆ ಆತ ಮಾಡಿದ್ದು ಆತನ ನೈತಿಕತೆ ಮತ್ತು ಸೈದ್ಧಾಂತಿಕತೆ ದೃಷ್ಟಿಯಿಂದ ಸರಿಯಾದ ಕ್ರಮವೇ ಆಗಿರಬಹುದು.ಆದ್ರೆ ಇಂಥವರನ್ನು ಸಂಪೂರ್ಣ ಕಲುಷಿತಗೊಂಡಿರುವ ಇಂದಿನ ಮಾದ್ಯಮದ ಕಣ್ನುಗಳು ನೋಡುವುದೇ ಬೇರೆ ದೃಷ್ಟಿಯಿಂದ..ಆತನನ್ನು ದೂವಿಡುವ ಪ್ರಯತ್ನಗಳೇ ಹೆಚ್ಚಾಗಬಹುದು..ಆತನಿಗೆಷ್ಟೇ ಸಾಮರ್ಥ್ಯ ಇದ್ದರೂ ಬೇರೆ ಮಾದ್ಯಮಗಳು ಕೆಲಸಕ್ಕೆ ತೆಗೆದುಕೊಳ್ಳಲು ಹಿಂದೇಟು ಹಾಹಬಹುದೇನೋ..? ಆತನೊಂದಿಗೆ ಗುರುತಿಸಿಕೊಂಡ್ರೆ ನಮಗೂ ತೊಂದರೆ ಕಟ್ಟಿಟ್ಟುಬುತ್ತಿ ಎನ್ನುವ ಕಾರಣಕ್ಕೆ ಮಾದ್ಯಮಮಿತ್ರರೇ ಆತನಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಬಹುದೇನೋ..? ಏಕೆಂದರೆ ಈ ಜಗತ್ತಿನಲ್ಲಿ ಸುಳ್ಳಿಗೆ ಸಾವಿರ ಸ್ನೇಹಿತರು…ಆದರೆ ಸತ್ಯ ಮಾತ್ರ ಸದಾ ಒಂಟಿ ಎನ್ನುವ ಗಾಧೆಯಂತೆ ಸತ್ಯದ ಪರ ನಿಲ್ಲುವವರು ತುಂಬಾ ಕಡಿಮೆ. ಎಲ್ಲವನ್ನು ಮೆಟ್ಟಿನಿಂತು ಗೆಲ್ಲಬಲ್ಲೆ ಎನ್ನುವ ಧೈರ್ಯ-ಆತ್ಮವಿಶ್ವಾಸವಿದ್ದರೆ ಇದಕ್ಕೆಲ್ಲಾ ಹೆದರದೆ ಮುನ್ನಗ್ಬಬಹುದು..ಆತನನ್ನು ಒಂದಷ್ಟು ಸತ್ಯವಂತರಾದರೂ ಹಿಂಬಾಲಿಸಿಯಾರು..? ಅಲ್ವಾ..!

ಬಿಸಿರಕ್ತದ ನಿರೂಪಕನಿಗೆ ಸಂಯಮವೂ ಅಗತ್ಯವಿತ್ತೇನೋ..?!ಅಶ್ವದಿವಿತ್ ಪ್ರತಿಭಾವಂತ-ಬುದ್ದಿವಂತ..ವಿಚಾರವಂತನೂ ಇರಬಹುದು. ಒಳ್ಳೆಯ ಆಂಕರ್ ಆಗಿ ಬೆಳೆಯೊಕ್ಕೆ ಅವಕಾಶ ಗಳೂ ಇವೆ,ಆದರೆ ಪತ್ರಿಕೋದ್ಯಮದಲ್ಲಿ ಬೇಕಿರುವ ತಾಳ್ಮೆ-ಸಂಯಮದ ಕೊರತೆ ಇದ್ದಂತಿದೆ.ಎಲ್ಲಕ್ಕೂ ರಾಜಿಮಾಡಿಕೊಂಡಿರು ಎಂದು ಪತ್ರಿಕೋದ್ಯಮ ಹೇಳೊಲ್ಲ..ಅದನ್ನು ಹ್ಯಾಂಡಲ್ ಮಾಡುವ ಚಾಕಚಕ್ಯತೆ ಬಗ್ಗೆಯೂ ಇದೇ ವೃತ್ತಿ ತಿಳಿಸೇಳುತ್ತದೆ.ಅಂದ್ಹಾಗೆ ಈ ಜ್ನಾನ ಅನಾಯಾಸವಾಗಿ ಸಿದ್ದಿಸುವಂತದ್ದಲ್ಲ..ಅದಕ್ಕೆ ತಾಳ್ಮೆ ಬೇಕು..ಅದಕ್ಕಾಗಿ ಕಾಯಬೇಕು ಅಷ್ಟೆ…ನಮಗೆ ಇಷ್ಟವಾಗದ..ನಮ್ಮ ಮನಸಿಗೆ ಹಿಡಿಸದ, ನಮ್ಮ ಆದರ್ಶ ಸಿದ್ದಾಂತಗಳಿಗೆ ಒಪ್ಪಿಗೆಯಾಗದ, ನಾವು ನಂಬಿದ ಮೌಲ್ಯಗಳು,ಅಳವಡಿಸಿಕೊಂಡ ರೀತಿನೀತಿಗಳಿಗೆ ತದ್ವಿರುದ್ಧವಾದ ಅನೇಕ ಘಟನೆಗಳು ನಡೆಯತ್ತಲೇ ಇರುತ್ತವೆ.ಅದನ್ನು ಹೇಗೆ ನಿಭಾಯಿಸಬೇಕೆನ್ನುವ ತಿಳಿವು ಇರಬೇಕಾಗುತ್ತದೆ ಅಷ್ಟೆ…ಯಾವುದನ್ನು ಹೇಗೆ..ಯಾವ ಸನ್ನಿವೇಶದಲ್ಲಿ ಟ್ಯಾಕಲ್ ಮಾಡಬೇಕೆನ್ನುವ ವಿವೇಚನೆ ನಮ್ಮಲ್ಲಿದ್ದರೆ ಎಲ್ಲವೂ ಅನಾಯಾಸ..ಇಂಥಾ ಸನ್ನಿವೇಶಗಳಿಂದ ವಿವಾದಕ್ಕೆ ಒಳಗಾಗುವುದು ಸಲೀಸು..ಅದರಿಂದ ದಿಢೀರ್ ಪ್ರಚಾರವೂ ಸಿಗಬಹುದು..ಒಂದಷ್ಟು ಪ್ರಶಂಸೆಯೂ ಸಿಗಬಹುದು..ಆದ್ರೆ ನೆನಪಿರಲಿ..ಅದೆಲ್ಲಾ ತಾತ್ಕಾಲಿಕ.ಅದನ್ನೆಲ್ಲಾ ಬೇಗ ಮರೆತುಬಿಡ್ತಾರೆ. ಮೆಮೋರಿ ತುಂಬಾ ಕಡಿಮೆ.ಅದನ್ನು ಬೇಗ ಮರೆತುಬಿಡ್ತಾರೆ.. ಇಲ್ಲಿ ಜತೆಗಿದ್ದವರೇ ದೂರವಾಗ್ತಾರೆ.. ಒಂಟಿಯನ್ನಾಗಿಸುತ್ತಾರೆ. ಅದರ ಬಗ್ಗೆ ಎಚ್ಚರದಿಂದ ಇರೋದು ಸೂಕ್ತ. ಈ ಎಲ್ಲಾ ಸೂಕ್ಷ್ಮಗಳನ್ನು ಗ್ರಹಿಸಿಕೊಂಡು ಮುನ್ನಡೆದರೆ ಬೆಳೆದು-ಭವಿಷ್ಯ ಕಟ್ಟಿಕೊಳ್ಳೋದು ಕಷ್ಟವಾಗದು.ಇದನ್ನು ಸಲಹೆಯಾಗಿ ತೆಗೆದುಕೊಳ್ಳುತ್ತಾನೋ..ಅಥವಾ ಇನ್ನ್ಯಾವ ದೃಷ್ಟಿಕೋನದಲ್ಲಿ ತೆಗೆದುಕೊಳ್ಳುತ್ತಾನೋ,ಅದು ಆತನ ವಿವೇಚನೆಗೆ ಬಿಟ್ಟ ವಿಚಾರ.


Political News

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

Scroll to Top