advertise here

Search

ದಾವೂದ್ ದಾರಿಯಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಶ್ನೋಯಿ!


ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣದ ಹೊಣೆ ಹೊತ್ತಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಶ್ನೋಯಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾದಿಯಲ್ಲಿ ಸಾಗುತ್ತಿದ್ದು, 11 ರಾಜ್ಯಗಳಲ್ಲಿ 700 ಶೂಟರ್ ಗಳನ್ನು ಹೊಂದಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ (ಎನ್ ಐಎ) 16 ಗ್ಯಾಂಗ್ ಸ್ಟರ್ ಗಳ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಿಕೊಂಡಿದೆ.

ಪಂಜಾಬ್ ನಲ್ಲಿ ಖ್ಯಾತ ಗಾಯಕನ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೂ ಆಗಿರುವ ಲಾರೆನ್ಸ್ ಬಿಶ್ನೋಯಿ ದಾವೂದ್ ಇಬ್ರಾಹಿಂನ ಡಿ ಕಂಪನಿ ಮಾದರಿಯಲ್ಲಿ ದೇಶಾದ್ಯಂತ ತನ್ನ ಕಂಬಂಧ ಹಸ್ತ ವಿಸ್ತರಿಸುತ್ತಿದ್ದಾನೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.

ಸಣ್ಣ ಅಪರಾಧಗಳನ್ನು ಮಾಡುವ ಯುವಕರನ್ನು ಬಳಸಿಕೊಂಡು 90ರ ದಶಕದಲ್ಲಿ ದಾವೂದ್ ಇಬ್ರಾಹಿಂ ಹೇಗೆ ಭೂಗತ ಲೋಕದ ಮೇಲೆ ಹಿಡಿತ ಸಾಧಿಸಿದ ಅದೇ ಮಾದರಿಯಲ್ಲಿ ಲಾರೆನ್ಸ್ ಬಿಶ್ನೋಯಿ ತನ್ನ ಅಪರಾಧ ಕೃತ್ಯಗಳನ್ನು ಸಂಘಟಿತವಾಗಿ ಬೆಳೆಸುತ್ತಿದ್ದಾನೆ.

ALSO READ :  ಜಾತಿ ಪ್ರಮಾಣ ಪತ್ರದ ಬಗೆಗಿನ ಗೊಂದಲ ನಿವಾರಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ!

ಬಿಶ್ನೋಯಿ 11 ರಾಜ್ಯಗಳಲ್ಲಿ 700 ಶೂಟರ್ ಗಳನ್ನು ಹೊಂದಿದ್ದು, ಇದರಲ್ಲಿ 300 ಮಂದಿ ಪಂಜಾಬ್ ನಲ್ಲಿಯೇ ಇದ್ದಾರೆ. ಹರಿಯಾಣ, ರಾಜಸ್ಥಾನ, ದೆಹಲಿಯಲ್ಲಿ ಅತೀ ಹೆಚ್ಚು ಸಂಪರ್ಕಗಳನ್ನು ಹೊಂದಿದ್ದು, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಉತ್ತರಪ್ರದೇಶಗಳಲ್ಲೂ ಪ್ರಭಾವ ಹೊಂದಿದ್ದಾನೆ ಎಂದು ಎಫ್ ಐಆರ್ ನಲ್ಲಿ ವಿವರಿಸಲಾಗಿದೆ.

2021ರಲ್ಲಿ ಬೆದರಿಕೆಗಳ ಮೂಲಕ ಕೋಟ್ಯಂತರ ರೂಪಾಯಿ ಗಳಿಸಿರುವ ಬಿಶ್ನೋಯಿ ಗ್ಯಾಂಗ್ ಹವಾಲಾ ಮೂಲಕ ವಿದೇಶಕ್ಕೆ ರವಾನೆ ಮಾಡುತ್ತಿದೆ. ಇದರಿಂದ ಕೆನಡಾದಲ್ಲಿ ಕೂಡ ಈತ `ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿದ್ದಾನೆ.

ಬಡತನದಲ್ಲಿರುವ ಸಣ್ಣಪುಟ್ಟ ಅಪರಾಧಗಳಲ್ಲಿ ಸಿಕ್ಕಿಬಿದ್ದ ಯುವಕರೇ ಈತನ ಪರ ದಾಳಿ ಅಥವಾ ಕೊಲೆ ಮಾಡುವ ಆಯುಧಗಳಾಗಿದ್ದು, ಇವರು ಗುಜುರಿ, ಹೋಟೆಲ್ ಸೇರಿದಂತೆ ಸಣ್ಣಪುಟ್ಟ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದು, ಆದೇಶ ಬರುತ್ತಿದ್ದಂತೆ ಸಕ್ರಿಯವಾಗುತ್ತಾರೆ.


Political News

ಜನಸಾಮಾನ್ಯರಿಗೆ ಕ್ಯೂ.. ಶಾಸಕರಿಗೆ ವಿಐಪಿ ವ್ಯೂ! ಇದು ‘ಹಸ್ತ’ ಸರ್ಕಾರದ ಅಸಲಿ ಮುಖವೇ?

ಪೆಟ್ರೋಲ್-ಡೀಸೆಲ್ ಶಾಕ್ ನಡುವೆ ಕೇಂದ್ರದ ಮಾಸ್ಟರ್ ಪ್ಲಾನ್: ಅಬಕಾರಿ ಸುಂಕ ₹10 ಕಡಿತ

ಬೆಂಗಳೂರು ಕೇಂದ್ರ ಬಜೆಟ್ 2026: ಕಾಂಕ್ರೀಟ್ ಕಾಡಿಗೆ ‘ಮಾನವೀಯ’ ಸ್ಪರ್ಶ!

ಬೆಂಗಳೂರು ಪೂರ್ವ ಬಜೆಟ್ 2026-27: ಮೂಲಸೌಕರ್ಯದ ಜೊತೆ ‘ಕಲ್ಯಾಣ’ ಮಂತ್ರ; ಬಡವರ ಮನೆಗೆ ಪಾಲಿಕೆ ಆಸರೆ!

ಕರಾವಳಿಗೆ ಬಂತು ‘ಅನಿಲ’ ಸಂಜೀವಿನಿ: ಮಂಗಳೂರು ಬಂದರಿಗೆ 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿ!

ಸಾರಿಗೆ ನೌಕರರಿಗೆ ‘ದ್ರೋಹ’ದ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಆನಂದ್!

ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ರಷ್ಯಾದಿಂದ ‘ಡಬಲ್’ ತೈಲ ಆಮದು!

ಪಂಚ ಗ್ಯಾರಂಟಿ ಹೆಸರಲ್ಲಿ ಕೋಟಿ ಕೋಟಿ ಪೋಲು: ಇದು ಅನುಷ್ಠಾನವೋ ಅಥವಾ ಲೂಟಿಯೋ?

Scroll to Top