advertise here

Search

BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?


ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವ್ರ ಮೌನವನ್ನು ಬಿಎಂಟಿಸಿ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೋ..? ಅಥವಾ  ಅವರ ಒಳ್ಳೇತನಕ್ಕೆ ಬೆಲೆ ಕೊಡುತ್ತಿಲ್ಲವೋ..? ಅಥವಾ ಏನ್ ಮಾಡಿದ್ರೂ ಅವ್ರು ನಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಬಿಡು ಎನ್ನುವ ತಾತ್ಸಾರವೋ..? ಗೊತ್ತಿಲ್ಲ..ಬಿಎಂಟಿಸಿಯಲ್ಲಿ ಅಧಿಕಾರಿಗಳು ಆಡಿದ್ದೇ ಆಟ..ಹೂಡಿದ್ದೇ ಲಗ್ಗೆ..ಮಾಡಿದ್ದೇ ರೂಲ್ಸ್ ಎನ್ನುವಂತಾಗಿದೆ. .ಇದಕ್ಕೆ ಜ್ಬಲಂತ ಉದಾಹರಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೋಗಳು.

ಬಿಎಂಟಿಸಿ ಡಿಪೋ 34 ಕ್ಕೆ ಸಂಬಂಧಿಸಿದ್ದೆಂದು ಹೇಳಲಾಗ್ತಿರೋ ಒಂದಷ್ಟು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ವೀಡಿಯೋ ನೋಡಿದ ಎಂಥವರಿಗೂ ಬೇಸರವಾಗದೆ ಇರೊಲ್ಲ. ಮೇಲಾಧಿ ಕಾರಿಗಳ ದಬ್ಬಾಳಿಕೆ-ದೌರ್ಜನ್ಯ ಈ ಮಟ್ಟಿಗಿದೆಯಾ ಎನ್ನುವ ಆಕ್ರೋಶ ಮೂಡುವುದರ ಜತೆಗೆ ರಾಮಲಿಂಗಾರೆಡ್ಡಿ ಅವರು ಇಷ್ಟೊಂದು ಅನ್ಯಾಯ ಆಗುವಷ್ಟು ತಮ್ಮ ಇಲಾಖೆಯಲ್ಲಿ ಅಧಿಕಾರಿಗಳಿಗೆ ಸಲುಗೆ ಕೊಟ್ಟು ಬಿಟ್ರಾ ಎನ್ನುವ ಶಂಕೆ ಕಾಡುತ್ತದೆ.

ಫೋಟೋ ಮತ್ತು ವೀಡಿಯೋದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಡ್ಯೂಟಿಯಲ್ಲಿರುವ ಡ್ರೈವರ್ಸ್ ಕಂಡಕ್ಟರ್ಸ್ ದುಡಿದು ದಣಿದಿರುತ್ತಾರೆ.ಆ ಕೆಲಸ ಮಾಡೋದೇ ಕಷ್ಟವಾಗಿರುತ್ತದೆ.ಅಂತದ್ದರಲ್ಲಿ ಅವರಿಂದ ಬಸ್ ಗಳನ್ನು ಗುಡಿಸಿ, ಕ್ಲೀನ್ ಮಾಡಿಸೋದು ಎಂದ್ರೆ ಅದು ಅನ್ಯಾಯ-ಕ್ರೌರ್ಯಅಲ್ಲದೆ ಇನ್ನೇನು..ಡಿಪೋ 34 ರ ಡಿಪೋ ಮ್ಯಾನೇಜರ್ ತಮ್ಮ ಸಿಬ್ಬಂದಿಯಿಂದ ಮಾಡಿಸುತ್ತಿದ್ದಾರೆನ್ನಲಾಗುತ್ತಿರುವ ಕೆಲಸವೂ ಅದೇ.. ಡ್ರೈವರ್ಸ್-ಕಂಡಕ್ಟರ್ಸ್ ಗಳೇ ಬಸ್ ಗಳನ್ನು ಗುಡಿಸಿ,ಕ್ಲೀನ್ ಮಾಡುತ್ತಿರುವ ದೃಶ್ಯಗಳು ಸ್ಪಷ್ಟವಾಗಿದೆ.ಡಿಪೋಗಳಲ್ಲಿ ಆ ಕೆಲಸ ಮಾಡಲಿಕ್ಕೆಂದೇನೆ ಟೆಂಡರ್ ಕೊಡಲಾಗಿರುತ್ತದೆ..ಗುತ್ತಿಗೆ ಪಡೆದ ಏಜೆನ್ಸಿಯವನು ತನ್ನ ಸಿಬ್ಬಂದಿ ಮೂಲಕ ಆ ಕೆಲಸ ಮಾಡಿಸಬೇಕಿರುತ್ತದೆಯಲ್ಲವೇ..? ಎನ್ನುವ ಪ್ರಶ್ನೆ ಮೂಡಿದ್ರೆ, ಖಂಡಿತಾ ಹಾಗೆಯೇ ಮಾಡಬೇಕು..ಆದ್ರೆ ಅದನ್ನು ಡಿಪೋ ಮ್ಯಾನೇಜರ್ ಎನಿಸಿಕೊಂಡ ಜವಾಬ್ದಾರಿಯುತ ಅಧಿಕಾರಿ ಮಾಡಿಸುತ್ತಿಲ್ಲವಲ್ಲ ಎನ್ನುವುದೇ ದುರಾದೃಷ್ಟಕರ.

ALSO READ :  ಮಹತ್ವಾಕಾಂಕ್ಷಿ `ಕಾವೇರಿ 5ನೇ ಹಂತದ ಯೋಜನೆ' ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್

ಎಲ್ಲಾ ಡಿಪೋಗಳಂತೆ ಘಟಕ -34 ರಲ್ಲಿಯೂ ಸಂಸ್ಥೆಯ ವಾಹನಗಳ ಸ್ವಚ್ಛತೆಗೆ ಟೆಂಡರ್ ಮುಖಾಂತರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿರುತ್ತದೆ. ಆದರೆ ಸಂಸ್ಥೆಯ ಗೌರವ-ಘನತೆಗೆ ಚ್ಯುತಿ ಬರುವಂತೆ ಇಂದಿನ ಘಟಕ ವ್ಯವಸ್ಥಾಪಕರು ಅಧಿಕಾರದ ದುರುಪಯೋಗ ಪಡಿಸಿಕೊಂಡು ಸಂಸ್ಥೆಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎನ್ನುವುದು ಅವರ ಮೇಲಿರುವ ಆರೋಪ.

ಘಟಕದ ಹಿರಿಯ ಚಾಲನಾ ಸಿಬ್ಬಂದಿ ಹಾಗೂ ಕಿರಿಯ ಸಿಬ್ಬಂದಿಗಳ ಮೇಲೆ ದಬ್ಬಾಳಿಕೆ ನಡೆಸಿ,ಅವರ ಮೇಲೆ ಒತ್ತಡ ಹೇರಿ ಬಸ್ಸು ಗಳನ್ನು ಸ್ವಚಗೊಳಿಸುತ್ತಿದ್ದಾರೆ ಎನ್ನುವ ಆಪಾದನೆ ಕೇಳಿ ಬಂದಿದೆ.

ಹಾಗಾದರೆ ಟೆಂಡರ್ ಮುಖಾಂತರ ಗುತ್ತಿಗೆ ಆಧಾರದ ಮೇಲೆ ಪಾಸ್ ಮಾಡುತ್ತಿದ್ದಂತಹ ಬಿಲ್ ಗಳ ಹಣ ಎಲ್ಲಿ ಹೋಯಿತು..?ಅದು  ಘಟಕ ವ್ಯವಸ್ಥಾಪಕರ ಜೇಬು ಸೇರುತ್ತಿದೆಯೇ ಎಂಬುದರ ಬಗ್ಗೆ ಅನುಮಾನಗಳು ಕಾಡುತ್ತಿವೆ.

ಇದರ ಬಗ್ಗೆ ಘಟಕದ ಸೆಕ್ಯೂರಿಟಿ ವಿಜಿಲೆನ್ಸ್ ಯಾಕೆ ರಿಪೋರ್ಟ್ ನೀಡುತ್ತಿಲ್ಲ ಎಂಬ ಶಂಕೆ ಕಾಡುತ್ತಿದೆ.ಟೆಂಡರ್ ಕೊಟ್ಟ ಹೊರತಾಗಿಯೂ ಕೆಳ ಹಂತದ ಸಿಬ್ಬಂದಿ ಮೂಲಕ ಇಂಥಾ ಕೆಲಸ ಮಾಡಿಸುತ್ತಿರುವ ಡಿಪೋ ಮ್ಯಾನೇಜರ್ ವಿರುದ್ದ ಕ್ರಮ ಕೈಗೊಳ್ಳಬೇಕೆನ್ನುವ ಕೂಗು ಕೇಳಿಬರುತ್ತಿದೆ.ಸಚಿವ ರಾಮಲಿಂಗಾರೆಡ್ಡಿ ಇದನ್ನು ನೋಡಿಕೊಂಡು ಸುಮ್ಮನಿರುತ್ತಾರಾ..? ಅಥವಾ ಕ್ರಮಕ್ಕೆ ಆದೇಶಿಸ್ತಾರಾ ಕಾದುನೋಡಬೇಕಿದೆ.

BMTC STAFF THEMSELVES CLEANS THE BUSES..!?…ಬಿಎಂಟಿಸಿ ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್..ಸ್ವಚ್ಚತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು..?


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top