advertise here

Search

EXCLUSIVE..ತೆಲಂಗಾಣದ ನಂತರ ಉತ್ತರ ಪ್ರದೇಶ-ಆಂದ್ರಪ್ರದೇಶಗಳಲ್ಲೂ “ಶಕ್ತಿ” ಯೋಜನೆ ಅನುಷ್ಟಾನ..!


ಜನವರಿ ಮೊದಲ ವಾರದಲ್ಲಿ ಆಂದ್ರಪ್ರದೇಶ ಮತ್ತು ಫೆಬ್ರವರಿ 2ನೇ ವಾರದಲ್ಲಿ ಉತ್ತರ ಪ್ರದೇಶ ರಾಜ್ಯಗಳ ನಿಯೋಗ ಕರ್ನಾಟಕಕ್ಕೆ ಭೇಟಿ ಸಾಧ್ಯತೆ

ರಾಜ್ಯದ ಮಹಿಳೆಯರಿಗೆ ಕೊಟ್ಟ ಭರವಸೆಯಂತೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದ ಕರ್ನಾಟಕ ಸರ್ಕಾರ
ರಾಜ್ಯದ ಮಹಿಳೆಯರಿಗೆ ಕೊಟ್ಟ ಭರವಸೆಯಂತೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದ ಕರ್ನಾಟಕ ಸರ್ಕಾರ

ಬೆಂಗಳೂರು/ತೆಲಂಗಾಣ: ಕರ್ನಾಟಕ(KARNATAKA)ವನ್ನು ಅನೇಕ ವಿಚಾರಗಳಲ್ಲಿ ಕೆಟ್ಟದಾಗಿ ಬಿಂಬಿಸುವ ಪ್ರವೃತ್ತಿ ರಾಜಕೀಯದಲ್ಲಿ ನಡೆಯುತ್ತಲೇ ಬಂದಿದೆ.ಕರ್ನಾಟಕದಲ್ಲಿ ಜಾರಿಗೊಳಿಸಲಾದ “ಉಚಿತ”ಗಳಿಂದ ರಾಜ್ಯ ಬರ್ಬಾದ್ ಆಗಿದೆ.ಅಭಿವೃದ್ಧಿಗೆ ಹಣವಿಲ್ಲ ಎಂದು ಬಿಂಬಿಸಿ ಅದನ್ನು  ಚುನಾವಣೆ ವೇಳೆ ಅನೇಕ ರಾಜ್ಯಗಳಲ್ಲಿ ಬಿಜೆಪಿ ಸೇರಿದಂತೆ ಅನೇಕ ವಿಪಕ್ಷಗಳು ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿದ್ದವು.ಆದರೆ ತೆಲಂಗಾಣ(TELANGANA) ದಲ್ಲಿ ಕಾಂಗ್ರೆಸ್(CONGRESS) ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಘೋಷಿಸಿದ್ದ ಭರವಸೆಗಳನ್ನು  ಜಾರಿ ಮಾಡಿದ ಬೆನ್ನಲ್ಲೇ ಇನ್ನೆರೆಡು ಬಿಜೆಪಿ ಆಡಳಿತದ ರಾಜ್ಯಗಳು ಪ್ರಣಾಳಿಕೆ(MANIFESTO)ಯಲ್ಲಿ ಘೋಷಿಸಿದ್ದಂತೆ ತನ್ನ ಭರವಸೆ ಈಡೇರಿಸಲು ಮುಂದಾಗಿವೆ.ಅಂದ್ಹಾಗೆ ಆ ಎರಡು ರಾಜ್ಯಗಳು ಅಳವಡಿಸಿಕೊಳ್ಳಲು ಮುಂದಾಗಿರುವ ಕರ್ನಾಟಕದ ಮಾಡೆಲ್ಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ(FREE BUS TRAVEL FOR WOMEN)ದ ಶಕ್ತಿ ಯೋಜನೆ.

ಶಕ್ತಿ ಯೋಜನೆ ಜಾರಿ ಬೆನ್ನಲ್ಲಿ ಮಹಿಳಾ ಪ್ರಯಾಣಿಕರಿಂದ ಯೋಜನೆ ಬಗ್ಗೆ ಅಭಿಪ್ರಾಯ ಕಲೆ ಹಾಕುತ್ತುರುವ ಮುಖ್ಯಮಂತ್ರಿ ಸಿದ್ದರಾಮಯ್ಯ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್,ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಶಕ್ತಿ ಯೋಜನೆ ಜಾರಿ ಬೆನ್ನಲ್ಲಿ ಮಹಿಳಾ ಪ್ರಯಾಣಿಕರಿಂದ ಯೋಜನೆ ಬಗ್ಗೆ ಅಭಿಪ್ರಾಯ ಕಲೆ ಹಾಕುತ್ತುರುವ ಮುಖ್ಯಮಂತ್ರಿ ಸಿದ್ದರಾಮಯ್ಯ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್,ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಹೌದು..ಇದು ಕರ್ನಾಟಕದ ಮಟ್ಟಿಗೆ ಹೆಮ್ಮೆ ಪಡುವಂತ ಸಂಗತಿ.ಯಾರು ಏನೇ ಅನ್ನಲಿ..ಯಾರೇನೇ ಟೀಕೆ ಮಾಡಲಿ, ಇವತ್ತು ಉಚಿತ ಬಸ್ ವ್ಯವಸ್ಥೆಯಿಂದ ಕರ್ನಾಟಕದ ಬಹುತೇಕ ಮಹಿಳೆಯರು ಸಂತುಷ್ಟರಾಗಿದ್ದಾರೆ.ಮಹಿಳಾ ಮತದಾರರನ್ನು ಓಲೈಸುವಲ್ಲಿ ಕಾಂಗ್ರೆಸ್ ಕೂಡ ಸಫಲವಾಗಿದೆ.ಮಹಿಳಾ ವೋಟ್ ಬ್ಯಾಂಕ್ ನ್ನು ಗಟ್ಟಿ ಮಾಡಿಕೊಳ್ಳೊಕ್ಕೆ ಸಹಕಾರಿಯಾಯಿತು ಎನ್ನುವುದನ್ನು ಒಪ್ಪಲೇಬೇಕು.ಅನೇಕ ಬಾರಿ ವಿರೋಧಿಗಳು ಉಚಿತ ಬಸ್ ವ್ಯವಸ್ಥೆಯನ್ನು ಪ್ರಧಾನವಾಗಿಟ್ಟುಕೊಂಡು ಊಹಾಪೋಹ ಸೃಷ್ಟಿಸಿ ಜನರಲ್ಲಿ ಗೊಂದಲ ಮೂಡಿಸಲು ಯತ್ನಿಸಿದ್ರೂ ಸರ್ಕಾರ ಪ್ರತಿ ಬಾರಿಯೂ ಸಾಧ್ಯವೇ ಇಲ್ಲ ಎನ್ನುವ ಸ್ಪಷ್ಟನೆಯನ್ನು ಗಟ್ಟಿಧ್ವನಿಯಲ್ಲಿ ಪ್ರತಿಪಾದಿಸುತ್ತಲೇ ಬಂದಿದೆ.

ಇದೆಲ್ಲಾ ರಾಜಕೀಯವಾಯ್ತು ಬಿಡಿ..ನಿಜವಾದ ವಿಷಯಕ್ಕೆ ಬರೋಣ.ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿ ನೀಡಿದ್ದ ಭರವಸೆಯಂತೆ ಅದನ್ನು ನೆರವೇರಿಸಿತು.ಕರ್ನಾಟಕವನ್ನೇ ಮಾಡೆಲ್ ಆಗಿ ಇಟ್ಟುಕೊಂಡು ನೆರೆಯ ತೆಲಂಗಾಣ ರಾಜ್ಯದಲ್ಲಿ ಕರ್ನಾಟಕ ಮಾದರಿಯಲ್ಲೇ ಚುನಾವಣೆ ನಡೆಯುವ ಹೊತ್ತಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಘೋಷಣೆ ಮಾಡಿತ್ತು..ಅಂದುಕೊಂಡಂತೆಯೇ ಕಾಂಗ್ರೆಸ್ ಪ್ರಚಂಡ ಜಯಭೇರಿಯೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಸಿಎಂ ರೇವಂತ್ ರೆಡ್ಡಿ ಉಚಿತ ಬಸ್ ಪ್ರಯಾಣದ ಯೋಜನೆಗೆ ಚಾಲನೆ ನೀಡಿದ್ರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಕರ್ನಾಟಕದಂತೆ ತೆಲಂಗಾಣದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ಶಕ್ತಿ ಯೋಜನೆಯನ್ನು ಕಟ್ ಅಂಡ್ ಪೇಸ್ಟ್ ಮಾಡಲಾಯಿತು ಎಂದುಕೊಳ್ಳೋಣ..ಆದರೆ ಇದೀಗ ಕರ್ನಾಟಕದ ಶಕ್ತಿ ಯೋಜನೆಯನ್ನು ಮಾಡೆಲ್ ಆಗಿ ತೆಗೆದುಕೊ ಳ್ಳೊಕ್ಕೆ ಹೊರಟಿರುವ ಎರಡು ರಾಜ್ಯಗಳಲ್ಲೂ ಬಿಜೆಪಿಯ ಆಡಳಿತವಿದೆ.ಕಾಂಗ್ರೆಸ್ ನ್ನು ಪ್ರಬಲವಾಗಿ ವಿರೋಧಿಸುವವರೇ ಆ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.ಆ ರಾಜ್ಯಗಳೇ ಶಕ್ತಿ ಯೋಜನೆಯನ್ನು ಅಡಾಪ್ಟ್ ಮಾಡಿಕೊಳ್ಳೊಕ್ಕೆ ಹೊರಟಿವೆ ಎಂದ್ರೆ ಕರ್ನಾಟಕ ಹೆಮ್ಮೆ ಪಡಲೇಬೇಕು.

ALSO READ :  Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಂದ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಂದ
ಆಂದ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
ಆಂದ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಅಂದ್ಹಾಗೆ ಕರ್ನಾಟಕದ ಶಕ್ತಿ ಯೋಜನೆ ಜಾರಿ ಮಾಡಿಕೊಳ್ಳೊಕ್ಕೆ ಹೊರಟಿರುವ ಆ ಎರಡು ರಾಜ್ಯಗಳೇ ಆಂದ್ರಪ್ರದೇಶ(ANDHRAPRADESH) ಮತ್ತು ಉತ್ತರ ಪ್ರದೇಶ(UTTAR PRADESH) ಎನ್ನಲಾಗ್ತಿದೆ.ಸಾರಿಗೆ ಇಲಾಖೆ ಉನ್ನತ ಮೂಲಗಳ ಪ್ರಕಾರ ಚಂದ್ರಬಾಬು ನಾಯ್ಡು (CHANDRABABU NAIDU) ನೇತೃತ್ವದ ಆಂದ್ರಪ್ರದೇಶ ಮತ್ತು ಯೋಗಿ ಆದಿತ್ಯಾನಂದ (YOGI ADITHYANAND) ಅಧಿಕಾರದ ಉತ್ತರ ಪ್ರದೇಶಗಳಲ್ಲಿ ಕರ್ನಾಟಕದ ಶಕ್ತಿ ಯೋಜನೆ ಮಾದರಿಯಲ್ಲೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಜಾರಿ ಮಾಡಲು ಪ್ರಬಲವಾದ ಚಿಂತನೆ ನಡೆದಿದೆ ಯಂತೆ.ಒಂದು ಜನೋಪಯೋಗಿ ಯೋಜನೆ ಜಾರಿ ಮಾಡಲು ಪಕ್ಷಾತೀತವಾಗಿ ಸಲಹೆ-ಸಮಾಲೋಚನೆ-ಅಭಿಪ್ರಾಯ ಪಡೆಯುವುದರಲ್ಲಿ ತಪ್ಪೇನಿದೆ..ಮುಜುಗರವೇನಿದೆ ಎನ್ನುವ ನಿಲುವಿನಿಂದಾಗಿ ಆ ಎರಡು ರಾಜ್ಯಗಳೂ ಶಕ್ತಿ ಯೋಜನೆ ಜಾರಿ ಮಾಡೊಕ್ಕೆ ಹೊರಟಿವೆ ಎನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ (KANNADA FLASHNEWS) ಗೆ ದೊರೆತಿರುವ ಮಾಹಿತಿ.

ಎಲ್ಲವೂ ನಿರೀಕ್ಷೆಯಂತಾದ್ರೆ  ಜನವರಿ 3 ರಂದು  ಆಂದ್ರಪ್ರದೇಶ ಸರ್ಕಾರದ ನಿಯೋಗ ಬೆಂಗಳೂರಿಗೆ ಭೇಟಿ ನೀಡಲಿದೆಯಂತೆ. ಕೆಲ ತಿಂಗಳುಗಳಲ್ಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಘೋಷಣೆಗೆ ಅನ್ವಯವಾಗುವಂತೆ ಇದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು ಸಾರಿಗೆ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳು-ಚುನಾಯಿತ ಪ್ರತಿನಿಧಿಗಳ ನಿಯೋಗ ಭೇಟಿ ಕೊಡುವ ಸಾಧ್ಯತೆಗಳಿವೆ. ಆಂದ್ರಪ್ರದೇಶ ಸರ್ಕಾರದ ನಿಯೋಗದ ಭೇಟಿ ನಂತರ ಫೆಬ್ರವರಿ 15ರ ಸುಮಾರಿಗೆ ಉತ್ತರ ಪ್ರದೇಶ ಸರ್ಕಾರದ ನಿಯೋಗ ಕೂಡ ಭೇಟಿ ಕೊಡುವ ಸಾಧ್ಯತೆಗಳಿವೆ ಎನ್ನುವ ಮಾತು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ತೆಲಂಗಾಣದ ನಂತರ ಆಂದ್ರಪ್ರದೇಶ,ಉತ್ತರ ಪ್ರದೇಶ ರಾಜ್ಯಗಳು ಕರ್ನಾಟಕದ ಶಕ್ತಿ ಯೋಜನೆಯನ್ನು ತಮ್ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ.ಉತ್ತಮವಾದ ಯಾವುದೇ  ಕೆಲಸವಿರಲಿ ಪಕ್ಷಾತೀತವಾಗಿ ಒಪ್ಪಿಕೊಂಡು ಅದನ್ನು ಆಯ್ಕೆ ಮಾಡಿಕೊಳ್ಳುವುದು ನಿಜಕ್ಕೂ ನಾಗರಿಕವಾದ ಬೆಳವಣಿಗೆ ಎನ್ನುವುದನ್ನು ಎರಡು ರಾಜ್ಯಗಳು ತೋರಿಸಿಕೊಟ್ಟಿವೆ. ಇದಾದ ಬಳಿಕ ಕರ್ನಾಟಕದ ಶಕ್ತಿ ಯೋಜನೆ ದೇಶದ ಇತರೆ ರಾಜ್ಯಗಳಲ್ಲೂ ಅನುಷ್ಟಾನಕ್ಕೆ ಬರುವ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎನ್ನುವ ಆತ್ಮವಿಶ್ವಾಸ ಕಾಂಗ್ರೆಸ್ ಸರ್ಕಾರದ್ದಾಗಿದೆ.

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ಯೋಜನೆಯೊಂದು ದೇಶದ ಇತರೆ ರಾಜ್ಯಗಳಲ್ಲಿ ಮಾದರಿಯಾಗಿ ಅನುಷ್ಟಾನಕ್ಕೆ ಬರುತ್ತಿದೆ ಎನ್ನುವುದನ್ನು ಶಕ್ತಿ ಯೋಜನೆ ಪ್ರೂವ್ ಮಾಡಿದೆ.ಇದರ ಶ್ರೇಯಸ್ಸು ಯೋಜನೆಯನ್ನು ಜಾರಿಗೆ ತಂದ ರಾಜ್ಯ ಸರ್ಕಾರ ಹಾಗೂ ಅದರ ಯಶಸ್ಸಿಗೆ ಕಾರಣರಾದ ರಾಜ್ಯದ ಮಹಿಳಾ ಸಂಕುಲಕ್ಕೆ ಸಲ್ಲುತ್ತದೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯೇ ಇಲ್ಲ.


Political News

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?

Sahyadri science College alumni meet: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಮಹಾಸಮಾಗಮಕ್ಕೆ ಮುಹೂರ್ತ ಫಿಕ್ಸ್

Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ

Scroll to Top