
ಬೆಂಗಳೂರು:ತಪ್ಪು ಯಾರೇ ಮಾಡಲಿ.. ಅದನ್ನು ಎಷ್ಟೇ ಪ್ರಭಾವಿಗಳೆನಿಸಿಕೊಂಡವರು ಮಾಡಲಿ, ಅದಕ್ಕೆ ಶಿಕ್ಷೆ ಆಗಲೇಬೇಕೆನ್ನುತ್ತದೆ ನಮ್ಮ ನೆಲದ ಕಾನೂನು. ಆದರೆ ಬೆಂಗಳೂರಿನ ಅತ್ಯಂತ “ಪ್ರಭಾವಿ” ವೈದ್ಯರೊಬ್ಬರ ವೈದ್ಯಕೀಯ “ಅಕ್ರಮ..! “ದ ವಿರುದ್ಧ ಸಮರ ಸಾರಿರುವ ಬೆಂಗಳೂರಿನ ಪತ್ರಿಕಾ ಸಂಪಾದಕನ ವಿಷಯದಲ್ಲಿ ಹಾಗೆ ಆಗಿಯೇ ಇಲ್ಲ. ವೈದ್ಯನ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸತ್ಯಕ್ಕೆ ಹತ್ತಿರವಾಗಿದ್ದರೂ ಧೀರ್ಘಾವಧಿಯಿಂದಲೂ ಅವರನ್ನು ರಕ್ಷಿಸುವ ಕೆಲಸ ನಡೆಯುತ್ತಲೇ ಬಂದಿದೆ. ಅಷ್ಟೇ ಅಲ್ಲ, ಕಾನೂನಾತ್ಮಕ ಸಮರ ಸಾರಿರುವ ಪತ್ರಿಕಾ ಸಂಪಾದಕನಿಗೆ ಆ ವೈದ್ಯನ ಬೆಂಬಲಿಗರೆಂದು ಹೇಳಿಕೊಂಡ ಕೆಲವ್ರು ಆಮಿಷ ಒಡ್ಡಿರುವ, ಒಪ್ಪದಾಗ ಜೀವಬೆದರಿಕೆ ಹಾಕಿರುವ ಪ್ರಸಂಗ ನಡೆದಿದೆ.ಈ ಬೆಳವಣಿಗೆಯಿಂದ ಸಂಪಾದಕನ ಕುಟುಂಬ ಜೀವಭಯ ಮತ್ತು ಆತಂಕಕ್ಕೆ ಒಳಗಾಗಿದೆ.

ಡಾ.ಮೋಹನ್ ಎನ್ ಎಸ್ ಅವರ ವೃತ್ತಿಪರತೆ ಬಗ್ಗೆ ನಮ್ಮ ಯಾವುದೇ ತಕರಾರಿಲ್ಲ.ಬೆನ್ನುಮೂಳೆ ವಿಷಯ ದಲ್ಲಿ ಅವರೊಬ್ಬ ತಜ್ಞ ವೈದ್ಯ ರಾ್ಗಿದ್ದು ಕಳೆದ 20 ವರ್ಷಗಳಿಂದಲೂ ನುರಿತ ವೈದ್ಯರಾಗಿ ಕೆಲಸ ಮಾಡುತ್ತಿ ದ್ದಾರೆ.ವೈದ್ಯಕೀಯ ವಲಯದಲ್ಲಿ ಅವರಿಗೆ ಒಳ್ಳೆಯ ಹೆಸರಿದೆ. ಅದು ನಮ್ಮ ಅರಿವಿಗೂ ಬಂದಿದೆ.ಅವರದೇ ಪ್ರೊಪೈಲ್ ನಲ್ಲಿ ಉಲ್ಲೇಖವಾಗಿರುವಂತೆ MBBS,MS(ORTHO)MC H(ORTHO)D.N.H.E ಡಿಗ್ರಿ ಗಳನ್ನು ಪಡೆದಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಗೋಲ್ಡ್ ಮೆಡಲ್ ಕೂಡ ಪಡೆದಿರುವ ಪ್ರತಿಭಾನ್ವಿತ.ಇಷ್ಟೆಲ್ಲಾ ಒಳ್ಳೆಯ ಅಂಶಗಳನ್ನು ಹೊಂದಿರುವ ವೈದ್ಯನೊಬ್ಬ ಸರ್ಕಾರ, ಸರ್ಕಾರಿ ವೈದ್ಯರಿಗೆಂದೇ ನಿಗಧಿಪಡಿಸಿರುವ ನಿಯಮಗಳನ್ನು ಪಾಲಿಸುವುದು ಕೂಡ ಸೂಕ್ತವಲ್ಲವೇ..? ಡಾ.ಮೋಹನ್ ಅವರ ವಿರುದ್ಧ ಕೇಳಿಬಂದಿ ರುವ ಆರೋಪ ಮತ್ತು ಪತ್ರಕರ್ತ ರಾಘವೇಂದ್ರಚಾರ್ ಸಾಕ್ಷ್ಯ ಸಮೇತ ಸಂಗ್ರಹಿಸಿರುವ ವಿಷಯ ಕೂಡ ಅವರು ನಿಯಾಮವಳಿ ಗಳನ್ನು ಉಲ್ಲಂಘಿಸಿರುವುದನ್ನು ಮೇಲ್ನೋಟಕ್ಕೆ ಸಾರಿ ಹೇಳುವಂತಿದೆ..
ಅಂದ್ಹಾಗೆ ಪ್ರಭಾವಿ ಹಾಗೂ ರಾಜಕೀಯ ಹಿನ್ನಲೆಯುಳ್ಳ ವೈದ್ಯನ ಬೆಂಬಲಿಗರೆಂದು ಕರೆದುಕೊಂಡವ ರಿಂದ ನಿರಂತರ ಕಿರುಕುಳ, ಆಮಿಷ,ಜೀವಬೆದರಿಕೆಗೆ ಒಳಗಾದ ಪತ್ರಿಕಾ ಸಂಪಾದಕ ಪೊಲೀಸ್ ಠಾಣೆ ಮೆಟ್ಟಿಲನ್ನೇರಿದ್ದಾರೆ.ತಮಗೆ ಭದ್ರತೆ ಹಾಗೂ ಕಾನೂನಿನ ರಕ್ಷಣೆ ಒದಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಮುಸ್ಸಂಜೆ ಸಮಯ ದಿನಪತ್ರಿಕೆ, ಪೊಲೀಸ್ ವಾಣಿ ಎನ್ನುವಂಥ ಪತ್ರಿಕೆಗಳ ಸಂಪಾದಕರೂ ಆಗಿರುವ ರಾಘವೇಂದ್ರಚಾರ್ ಪ್ರೆಸ್ ಕೌನ್ಸಿಲ್ ನ ಸಂಸ್ಥಾಪಕ ಅಧ್ಯಕ್ಷರೂ ಆಗಿರುತ್ತಾರೆ.ಅವರ ಮೇಲೆ ಬೆಂಗಳೂರಿನ ಪ್ರತಿಷ್ಟಿತ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಪ್ರತಿಷ್ಟಿತ ರಾಜಕೀಯ ಕುಟುಂಬ ಹಿನ್ನಲೆಯ ಪ್ರಭಾವಿ ವ್ಯಕ್ತಿಯಾಗಿರುವ ಡಾ.ಮೋಹನ್ ಅವರು ತಮ್ಮ ಬೆಂಬಲಿಗರನ್ನು ಬಿಟ್ಟು ಹೆದರಿಸುವ, ಬೆದರಿಸುವ, ಆಮಿಷ ಒಡ್ಡುವ,ತಮ್ಮ ವಿರುದ್ಧ ಮಾಡುತ್ತಿರುವ ಹೋರಾಟದಿಂದ ಹಿಂದಕ್ಕೆ ಸರಿಯು ವಂತೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆನ್ನುವುದು ಗಂಭೀರ ಆರೋಪ.ಇದಕ್ಕೆ ಸಂಬಂಧ ಪಟ್ಟಂತೆ ರಾಘವೇಂದ್ರಾಚಾರ್ ಅವರು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರನ್ನ ಕೂಡ ನೀಡಿರುತ್ತಾರೆ.ಆ ದೂರಿನ ಪ್ರತಿ ಕನ್ನಡ ಫ್ಲ್ಯಾಶ್ ಗೆ ಲಭ್ಯವಾಗಿದೆ.
ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ HOD,ಮತ್ತು PROFESSER ಆಗಿ ಕೆಲಸ ಮಾಡುತ್ತಿರು ವ ಡಾ.ಮೋಹನ್ ಎನ್ ಎಸ್ ಅವರು ಸರ್ಕಾರಿ ವೈದ್ಯರಿಗೆ ನಿಗಧಿಪಡಿಸಿರುವ ನಿಯಮಗಳನ್ನು ಉಲ್ಲಂಘಿಸುತ್ತಿರುವ ಆಪಾದನೆಗೆ ಸಿಲುಕಿದ್ದಾರೆ.ಸರ್ಕಾರಿ ವೈದ್ಯರು ಕೆಲಸ ಮಾಡಬೇಕಾಗಿರುವುದಕ್ಕೆ ನಿರ್ಧಿಷ್ಟ ನಿಯಮಗಳಿದ್ದರೂ ಅದ್ಯಾವುದನ್ನೂ ಪಾಲಿಸುತ್ತಿಲ್ಲ ಎನ್ನುವುದನ್ನು ಎಲ್ಲಾ ದಾಖಲೆ ಗಳ ಸಮೇತ ಕಲೆ ಹಾಕಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಂದ ಹಿಡಿದು ಸಂಬಂಧಪಟ್ಟ ಇಲಾಖೆಗಳ ಎಲ್ಲಾ ಪ್ರಮುಖರಿಗೂ ದೂರು ಕೊಟ್ಟಿರುತ್ತಾರೆ. ಸಂಜಯ್ ಗಾಂಧಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಮದನ್ ಬಲ್ಲಾಳ್ ಅವರಿಗೂ ದೂರು ಕೊಟ್ಟ ಹಿನ್ನಲೆ ಯಲ್ಲಿ ಡಾ.ಮೋಹನ್ ಅವರ ಮೇಲಿರುವ ಆಪಾದನೆಗಳ ಸತ್ಯಾಸತ್ಯತೆ ತಿಳಿಯಲು ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿರುವು ದಾಗಿ ಹೇಳಿದ್ದಾರಲ್ಲದೇ ಡಾ.,ಮೋಹನ್ ಅವರಿಗೆ ವಿವರಣೆ ಹಾಗೂ ಕಾರಣ ಕೇಳಿ ಎರಡು ನೊಟೀಸ್ ಗಳನ್ನು ಸರ್ವ್ ಮಾಡಿರುವುದಾಗಿ ಹೇಳಿದ್ದಾರೆ.


ಇಷ್ಟರ ನಡುವೆ ಡಾ.ಮೋಹನ್ ಅವರು ತಮ್ಮ ಮೇಲೆ ಕೇಳಿಬಂದಿರುವ ಆಪಾದನೆಗಳಿಂದ ಕೆಂಡಾ ಮಂಡಲಗೊಂಡಿ ದ್ದಾರೆ. ದೂರುದಾರರಾದ ರಾಘವೇಂದ್ರಾಚಾರ್ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರಾದ್ರೂ ಅದಕ್ಕೆ ರಾಘವೇಂದ್ರಾಚಾರ್ ಸೊಪ್ಪಾಕಿಲ್ಲ.ತನ್ನ ವಿರುದ್ಧ ಸರ್ಕಾರದ ಮಟ್ಟದಲ್ಲಿ ದೂರು ಕೊಟ್ಟು ಗೌರವ-ಘನತೆಗೆ ಧಕ್ಕೆ ತರುತ್ತಿದ್ದಾರೆನ್ನುವ ಕೋಪಕ್ಕೆ ಸಾಕಷ್ಟು ಸಂಘಟನೆಗಳನ್ನು ಮುಂದೆ ಬಿಟ್ಟು ಅವರಿಂದ ವಿಷಯವನ್ನು ಮುಚ್ಚಿಹಾಕುವ ಯತ್ನ ಮಾಡಿದ್ದಾರೆ.ತಮ್ಮನ್ನು ಕನ್ನಡ ಪರ ,ದಲಿತಪರ ಸಂಘಟನೆಗಳ ಮುಖಂಡರೆಂದು ಹೇಳಿಕೊಳ್ಳುವ ಅನೇಕರು ರಾಘವೇಂದ್ರಾಚಾರ್ ಅವರನ್ನು ಮನವೊಲಿಸುವ, ಪುಸಲಾಯಿಸುವ ಕೆಲಸ ಮಾಡಿದ್ದಾರೆ.ಆದರೆ ಅದಕ್ಕೆ ತಲೆಕೆಡಿಸಿ ಕೊಂಡಿಲ್ಲ.ಆನಂತರ ಬೆದರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದೀರಾ..? ವೈದ್ಯರನ್ನು ಹೆದರಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದೀರಾ..? ಎಂದು ಬೆದರಿಸುವ ಕೆಲಸ ಮಾಡಿದ್ದಾರಂತೆ. ಏನೋ ಮಾತನಾಡಿ ಸೆಟ್ಲ್ ಮೆಂಟ್ ಮಾಡಿಕೊಳ್ಳಿ…ಅವರ ತಂಟೆಗೆ ಮಾತ್ರ ಬರಬೇಡಿ ಎಂದು ಬೆದರಿಸುವ ರೀತಿಯಲ್ಲಿ ಎಚ್ಚರಿಸಿದ್ದಾರಂತೆ.

ಇದ್ಯಾವುದಕ್ಕೂ ಜಗ್ಗದ ಬಗ್ಗದ ರಾಘವೇಂದ್ರಾಚಾರ್ ತಮ್ಮ ಹೋರಾಟ ಮುಂದುವರೆಸುವ ರೀತಿಯಲ್ಲಿ ತಾವು ಕೊಟ್ಟ ದೂರಿನ ಹಿನ್ನಲೆಯಲ್ಲಿ ಕ್ರಮಗಳೇನಾಗಿದೆ ಎಂದು ವಿಚಾರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.ಈ ನಡುವೆ ನಿನ್ನೆ ಅಂದರೆ 10-10-2025 ರಂದು ಬೆಳ್ಳಂಬೆಳಗ್ಗೆ ಕೆಲವರು ರಾಮಮೂರ್ತಿ ನಗರದಲ್ಲಿರುವ ರಾಘವೇಂದ್ರ ಅವರ ಮನೆಗೇ ತೆರಳಿ., ಮೊದಲು ಆತ್ಮೀಯವಾಗಿ ಮಾತನಾ ಡಿದ್ದಾರೆ.ಪಟ್ಟುಬಿಡದಿದ್ದಾಗ ನಿಮ್ಮ ಡಿಮ್ಯಾಂಡ್ ಗಳೇನಿದ್ರೆ ಹೇಳಿ ಎಂದು ಜೇಬಿನಿಂದ 10,000 ತೆಗೆದು ಕೊಡಲು ಮುಂದಾಗಿದ್ದಾರೆ. ನಮ್ಮ ಉದ್ದೇಶ ಅದಲ್ಲವೇ ಅಲ್ಲ ಸಾರ್ ಎಂದು ಹೇಳಿದಾಗ ನಿಮಗೂ ವಯಸ್ಸಾದ ಅಮ್ಮ, ಹೆಂಡ್ತಿ, ಮಕ್ಕಳಿದ್ದಾರೆ ನೋಡಿ ಎಂದು ಬೆದರಿಸುವ ದಾಟಿಯಲ್ಲಿ ಮಾತನಾಡಿದ್ದಾರೆ.ಅದೆಲ್ಲವೂ ಅವರ ಮನೆಯಲ್ಲಿರುವ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ಎನ್ನಲಾಗಿದೆ.

ಪತ್ರಿಕಾ ಸಂಪಾದಕರ ಮನೆಗೆ ತೆರಳಿ ಜೀವಬೆದರಿಕೆ ರೀತಿಯ ವಾತಾವರಣ ಸೃಷ್ಟಿಸುವುದು ಸರಿಯಲ್ಲ.ಇದನ್ನು ಖಂಡಿಸು ತ್ತೇವೆ. ಇನ್ನು ಸರ್ಕಾರಿ ವೈದ್ಯನೊಬ್ಬ ನಿಯಮ ಮೀರಿ ನಡೆದುಕೊಳ್ಳುತ್ತಿರುವ ವಿಚಾರದ ವಿರುದ್ಧ ಪತ್ರ ಕರ್ತ ರಾಘವೇಂದ್ರಚಾರ್ ಇಲಾಖೆ ಮಟ್ಟದಲ್ಲಿ ಹೋರಾಡುತ್ತಿರುವುದನ್ನು ಪತ್ರಿಕಾ ಸಂಘಟನೆಗಳು ಸ್ವಾಗತಿಸಿವೆ,ಹೋರಾಟ ಹತ್ತಿಕ್ಕಲು ಡಾ.ಮೋಹನ್ ತಮ್ಮ ಬೆಂಬಲಿಗರನ್ನು ಬಳಸಿಕೊಂಡು ಕರೆ ಮಾಡಿಸು ವುದು, ಬೆದರಿಕೆ ಹಾಕಿಸುವುದು, ಹಣದ ಆಮಿಷ ಒಡ್ಡಿಸುವುದು, ಸಾಲದ್ದಕ್ಕೆ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮನೆಗೆ ಕಳುಹಿಸಿ ಬೆದರಿಸುವ ರೀತಿಯಲ್ಲಿ ಬೆಂಬಲಿಗರನ್ನು ಬಳಸಿಕೊಂಡಿದ್ದು ಸರಿಯಲ್ಲ.ಈ ಬೆಳವಣಿಗೆ ಯನ್ನು ಖಂಡಿಸುತ್ತೇವೆ,ರಾಘವೇಂದ್ರಚಾರ್ ಅವರು ತಪ್ಪು ಮಾಡಿದ್ದರೆ ಅವರ ವಿರುದ್ದ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಡಾ.ಮೋಹನ್ ಅವರಿಗೆ ಸಾಕಷ್ಟು ಅವಕಾಶಗಳಿವೆ.ಅದರ ವ್ಯಾಪ್ತಿಯಲ್ಲೇ ಅವರು ಪ್ರಯತ್ನ ಮಾಡಬಹುದಿತ್ತು.ಹಾಗೆ ಮಾಡದೆ ಬೆದರಿಸುವ,ಹೆದರಿಸುವ ಕೆಲಸಕ್ಕೆ ಮುಂದಾಗಿದ್ದು ವೈದ್ಯರಾಗಿ ಅವರ ಘನತೆ ಗೆ ಶೋಭೆ ತರುವಂತದ್ದಲ್ಲ.ಐಎಂಎ ಅಂಥ ಸಂಘಕ್ಕೆ ಈ ಬಗ್ಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು. ಪೊಲೀಸರು ರಾಘವೇಂದ್ರಚಾರ್ ಅವರಿಗಷ್ಟೇ ಅಲ್ಲ ಅವರ ಕುಟುಂಬಕ್ಕೆ ರಕ್ಷಣೆ ನೀಡ ಬೇಕು.ಡಾ.ಮೋಹನ್ ಅವರ ವಿರುದ್ಧ ನಿರ್ದಿಷ್ಟ ಸೆಕ್ಷನ್ ಗಳ ಅಡಿಯಲ್ಲಿ ಕೇಸ್ ಹಾಕಬೇಕೆಂದು ಪತ್ರಿಕಾ ಸಂಘಟನೆ ಗಳು ಒತ್ತಾಯಿಸಿವೆ.ಅಗತ್ಯ ಬಿದ್ದರೆ ಪೊಲೀಸ್ ಕಮಿಷನರ್ ಅವರನ್ನೂ ಭೇಟಿ ಮಾಡುವುದಾಗಿ ತಿಳಿಸಿವೆ.
ಬೀದಿಯಲ್ಲಿ ಹೋಗುತ್ತಿದ್ದ ಗ್ರಹಚಾರ ಮನೆಗೇ ಬಂತಲ್ಲಪ್ಪಾ..ಇದರಿಂದ ಭವಿಷ್ಯದಲ್ಲಿ ಮುಂದೇನೋ ಘಟಿಸುವ ಲಕ್ಷಣ ಕಾಣಿಸುತ್ತಿ ದೆ ಎಂಬ ಸೂಕ್ಷ್ಮ ರಾಘವೇಂದ್ರಗೆ ತಿಳಿದುಬಂದಿದೆ. ತಮ್ಮ ವಲಯದಲ್ಲಿ ರುವ ಪತ್ರಿಕಾಮಿತ್ರರು ಹಾಗೂ ಆತ್ಮೀಯರಾದ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿ ಸಲಹೆ ಪಡೆದಾಗ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡುವಂತೆ ಸಲಹೆ ನೀಡಿದ್ದಾರೆ. ನಿನ್ನೆ ಸಂಜೆಯೇ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ರಾಘವೇಂದ್ರ ದೂರು ಕೊಟ್ಟಿದ್ದಾರೆ. ಡಾ.ಮೋಹನ್ ಅವರ ಆತ್ಮೀಯರು, ಬೆಂಬಲಿಗರು ,.ಸಂಘಟನೆಗಳ ಮುಖಂಡರು ಎನಿಸಿ ಕೊಂಡವರು ತಮ್ಮ ಮೇಲೆ ಹೇರಿದ ಒತ್ತಡ, ಬಲವಂತ, ಜೀವ ಬೆದರಿಕೆ ಹಾಕಿದ ಎಲ್ಲಾ ಸಂಗತಿಗಳನ್ನ ಆಧರಿಸಿ ದೂರು ನೀಡಿದ್ದಾರೆ. ಪೊಲೀಸರು ದೂರನ್ನು ದಾಖಲಿಸಿಕೊಂಡು ಮುಂದಿನ ಕ್ರಮದಲ್ಲಿ ನಿರತವಾಗಿದ್ದಾರೆ.

ನಿರ್ದೇಶಕ ಡಾ.ಬಲ್ಲಾಳ್ ಸತ್ಯದ ಪರ ಬ್ಯಾಟ್ ಬೀಸಬೇಕು.. ಡಾ.ಮೋಹನ್ ಪರ ಅಲ್ಲ..ಸಂಜಯ್ ಗಾಂಧಿ ಆಸ್ಪತ್ರೆಯ ನಿರ್ದೇಶಕರಾಗಿರುವ ಡಾ.ಮದನ್ ಬಲ್ಲಾಳ್ ಅವರು ಜವಾಬ್ದಾರಿಯುತ ನಿರ್ದೇಶಕರಾಗಿ ಮೇಲ್ಕಂಡ ಪ್ರಕರಣದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಡಾ,ಮೋಹನ್ ಅವರ ವಿರುದ್ದ ಕೊಟ್ಟ ದೂರಿನ ಹಿನ್ನಲೆಯಲ್ಲಿ ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಸಬೇಕೇ ವಿನಃ ದೂರುದಾರರು, ಮಾದ್ಯಮಗಳು ಮೋಹನ್ ಅವರ ಬಗ್ಗೆ ಸ್ಪಷ್ಟನೆ ಕೇಳಿ ಕರೆ ಮಾಡಿದಾಕ್ಷಣ ಆ ಮಾಹಿತಿಗಳನ್ನು ಸೋರಿಕೆ ಮಾಡುವುದು ಸರಿಯಲ್ಲ. ರಾಘವೇಂದ್ರಚಾರ್ ಮತ್ತು ಮಾದ್ಯಮಗಳು ಈ ಬಗ್ಗೆ ವಿವರಣೆ ಕೇಳಿ ಕರೆ ಮಾಡಿದ್ದನ್ನು ಅವರು ಮೋಹನ್ ಅವರಿಗೆ ಹೇಳದೆ ಇದ್ದಿದ್ದರೆ ರಾಘವೇಂದ್ರ ಅವರನ್ನು ಹೆದರಿಸುವ- ಬೆದರಿಸುವ,ಆಮಿಷ ಒಡ್ಡುವ ಕೆಲಸಗಳಾಗುತ್ತಿರಲಿಲ್ಲವೇನೋ..? ಒಬ್ಬ ನಿರ್ದೇಶಕರಾಗಿ ಇನ್ನು ಮುಂದಾದ್ರೂ ಬಲ್ಲಾಳ್ ಅವರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಲಿ ಅಷ್ಟೆ…
ಡಾ.ಮೋಹನ್ ಅವರು ಸರ್ಕಾರಿ ವೈದ್ಯರಾಗಿ ಸರ್ಕಾರ ಫ್ರೇಮ್ ಮಾಡಿರುವ ನಿಯಮಗಳನ್ನು ಸರಿಯಾಗಿ ಪಾಲಿಸದೆ ತಪ್ಪು ಎಸಗಿ ರುವುದಕ್ಕೆ ಎಲ್ಲಾ ಸಾಕ್ಷ್ಯಗಳು ರಾಘವೇಂದ್ರ ತಮ್ಮ ಬಳಿ ಇದೆ ಎಂದು ಹೇಳಿದ್ದಾರೆ. ಆಗಿರುವ ತಪ್ಪನ್ನು ಇಲಾಖೆಯ ನಿಯಮಗಳ ಅನ್ವಯವೇ ಸರಿಪಡಿಸಿಕೊಂಡು ಸರಿಯಾದ ಮಾರ್ಗದಲ್ಲಿ ನಡೆಯಲು ಅವಕಾಶಗಳಿದ್ದಾಗ್ಯೂ ತನಗೆ ಅವಮಾನವಾಗಿದೆ.ತನ್ನ ಗೌರವ-ಘನತೆಗೆ ಧಕ್ಕೆ ಉಂಟಾಗಿದೆ ಎನ್ನುವ ಉದ್ದಟತನದಲ್ಲಿ ಅವರಿವರನ್ನು ಬಿಟ್ಟು ಹೆದರಿಸುವುದು,ಆಮಿಷ ಒಡ್ಡಿಸುವುದು, ಮನೆಗೆ ಕಳುಹಿಸಿ ತನ್ನ ಬಗ್ಗೆಭಯಪಟ್ಟುವಂತೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಇಲ್ಲಿ ಕಾಡುತ್ತಿರುವ ಪ್ರಶ್ನೆ.
ಡಾ.ಮೋಹನ್ ಯಾರು..ಅವರ ಕುರಿತಾದ ರೋಚಕ-ಸ್ಪೋಟಕ ಮಾಹಿತಿಗಳಿವೆ ನಿರೀಕ್ಷಿಸಿ..… ಅಷ್ಟಕ್ಕೂ ಡಾ.ಮೋಹನ್ ಎನ್,ಎಸ್ ಮಾಡಿದ್ದೇನು..? ಅವರ ಮೇಲಿರುವ ಆಪಾದನೆ ಏನು..? ಅವರು ಯಾವೆ ಲ್ಲಾ ರೀತಿಯಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ..? ಆ ನಿಯಮಗಳ ಉಲ್ಲಂಘನೆಗೆ ಪೂರಕವಾಗಿ ರಾಘವೇಂದ್ರ ಚಾರ್ ಕಲೆ ಹಾಕಿರುವ ಸಾಕ್ಷ್ಯಗಳೇನು..?ಆ ಸಾಕ್ಷ್ಯಗಳಲ್ಲಿ ಏನೇನಿದೆ..? ಅದರಿಂದ ಮೋಹನ್ ಅವರ ಕರಿಯರ್ ಗೆ ಎಷ್ಟರ ಮಟ್ಟಿಗೆ ತೊಂದರೆ ಆಗಬಲ್ಲದು..?ಅದೆಲ್ಲಕ್ಕಿಂತ ಹೆಚ್ಚಾಗಿ ಡಾ.ಮೋಹನ್ ಯಾರು..? ತಮ್ಮನ್ನು ಪ್ರಭಾವಿ ಕುಟುಂಬದ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿರುವ ಅವರ ಹಿನ್ನಲೆಯೇನು..? ಯಾವ ಪ್ರಭಾವಿ ಕುಟುಂಬಕ್ಕೆ ಅವರು ಸೇರಿದ್ದಾರೆ..? ಅದನ್ನೇ ಹೇಗೆ ಅಸ್ತ್ರವಾಗಿ ಬಳಸಿಕೊಂಡು ಇಷ್ಟು ವರ್ಷ ಅಕ್ರಮದಲ್ಲೇ ಮುಂದುವರೆದುಕೊಂಡು ಬಂದಿದ್ದಾರೆ.? ಈ ಎಲ್ಲಾ ರೋಚಕ ವಿಷಯಗಳ ಸ್ಪೋಟಕ ಮಾಹಿತಿಗಳನ್ನು ಸಾಕ್ಷ್ಯ ಸಮೇತ ಶೀಘ್ರವೇ ನಿಮ್ಮ ಮುಂದಿಡಲಿದ್ದೇವೆ..ನಿರೀಕ್ಷಿಸಿ..

ಒಂದು ವೇಳೆ ರಾಘವೇಂದ್ರಚಾರ್ ಅವರು ಡಾ.ಮೋಹನ್ ಅವರ ಲೋಪಗಳನ್ನೇ ಅಸ್ತ್ರವಾಗಿಟ್ಟು ಕೊಂಡು ಹೆದರಿಸುವ-ಬೆದರಿಸುವ-ಹಣಕ್ಕೆ ಡಿಮ್ಯಾಂಡ್ ಇಡುವ ಕೆಲಸಗಳನ್ನು ಮಾಡಿದ್ದರೆ ಅದನ್ನು ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನೆ ಮಾಡುವ,ಅದಕ್ಕೆ ತಕ್ಷಶಿಕ್ಷೆ ನೀಡಿಸುವ ಅವಕಾಶ ಮೋಹನ್ ಅವರಿಗಿದೆ.ಹಾಗೇನಾದ್ರೂ ನಾನು ಮಾಡಿರುವುದು ಸಾಬೀತಾದ್ರೆ,ಒಂದೇ ಒಂದು ಸಾಕ್ಷ್ಯ ನೀಡಿದ್ರೆ ನಾನು ಎಂಥಾ ಶಿಕ್ಷೆ ಎದುರಿಸ್ಲಿಕ್ಕೂ ಸಿದ್ದ ಎಂದು ರಾಘವೇಂದ್ರ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ.ವಿಷಯ ಹೀಗಿರುವಾಗ ಡಾ.ಮೋಹನ್ ಅವರು ಓರ್ವ ಜವಾಬ್ದಾರಿಯುತ ವೈದ್ಯರಾಗಿ ಪತ್ರಿಕಾ ಸಂಪಾದಕರ ಮೇಲೆ ಹೀಗೆ ಮುಗಿ ಬೀಳುವುದು ಎಷ್ಟು ಸರಿ ಎನ್ನುವುದು ಪತ್ರಿಕಾವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆ.