ಪತ್ರಿಕಾ “ಸಂಪಾದಕ”ನಿಗೆ ಪ್ರಭಾವಿ “ವೈದ್ಯ”ನ ಬೆಂಬಲಿಗ ರಿಂದ “ಜೀವಬೆದರಿಕೆ..! “-ಮನೆಗೆ ತೆರಳಿ “ಆಮಿಷ-ಅವಾಜ್”!  


ಬೆಂಗಳೂರು:ತಪ್ಪು ಯಾರೇ ಮಾಡಲಿ.. ಅದನ್ನು ಎಷ್ಟೇ ಪ್ರಭಾವಿಗಳೆನಿಸಿಕೊಂಡವರು ಮಾಡಲಿ, ಅದಕ್ಕೆ ಶಿಕ್ಷೆ ಆಗಲೇಬೇಕೆನ್ನುತ್ತದೆ ನಮ್ಮ ನೆಲದ ಕಾನೂನು. ಆದರೆ ಬೆಂಗಳೂರಿನ ಅತ್ಯಂತ “ಪ್ರಭಾವಿ” ವೈದ್ಯರೊಬ್ಬರ ವೈದ್ಯಕೀಯ “ಅಕ್ರಮ..! “ದ  ವಿರುದ್ಧ ಸಮರ ಸಾರಿರುವ ಬೆಂಗಳೂರಿನ ಪತ್ರಿಕಾ ಸಂಪಾದಕನ ವಿಷಯದಲ್ಲಿ ಹಾಗೆ ಆಗಿಯೇ ಇಲ್ಲ. ವೈದ್ಯನ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸತ್ಯಕ್ಕೆ ಹತ್ತಿರವಾಗಿದ್ದರೂ ಧೀರ್ಘಾವಧಿಯಿಂದಲೂ ಅವರನ್ನು ರಕ್ಷಿಸುವ ಕೆಲಸ ನಡೆಯುತ್ತಲೇ ಬಂದಿದೆ. ಅಷ್ಟೇ ಅಲ್ಲ, ಕಾನೂನಾತ್ಮಕ ಸಮರ ಸಾರಿರುವ ಪತ್ರಿಕಾ ಸಂಪಾದಕನಿಗೆ ಆ ವೈದ್ಯನ ಬೆಂಬಲಿಗರೆಂದು ಹೇಳಿಕೊಂಡ ಕೆಲವ್ರು ಆಮಿಷ ಒಡ್ಡಿರುವ, ಒಪ್ಪದಾಗ  ಜೀವಬೆದರಿಕೆ  ಹಾಕಿರುವ ಪ್ರಸಂಗ ನಡೆದಿದೆ.ಈ ಬೆಳವಣಿಗೆಯಿಂದ ಸಂಪಾದಕನ ಕುಟುಂಬ  ಜೀವಭಯ ಮತ್ತು ಆತಂಕಕ್ಕೆ ಒಳಗಾಗಿದೆ.

ಅಂದ್ಹಾಗೆ ಪ್ರಭಾವಿ ಹಾಗೂ ರಾಜಕೀಯ ಹಿನ್ನಲೆಯುಳ್ಳ ವೈದ್ಯನ ಬೆಂಬಲಿಗರೆಂದು ಕರೆದುಕೊಂಡವ ರಿಂದ ನಿರಂತರ ಕಿರುಕುಳ, ಆಮಿಷ,ಜೀವಬೆದರಿಕೆಗೆ ಒಳಗಾದ ಪತ್ರಿಕಾ ಸಂಪಾದಕ ಪೊಲೀಸ್ ಠಾಣೆ ಮೆಟ್ಟಿಲನ್ನೇರಿದ್ದಾರೆ.ತಮಗೆ ಭದ್ರತೆ ಹಾಗೂ ಕಾನೂನಿನ ರಕ್ಷಣೆ ಒದಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಮುಸ್ಸಂಜೆ  ಸಮಯ ದಿನಪತ್ರಿಕೆ, ಪೊಲೀಸ್ ವಾಣಿ ಎನ್ನುವಂಥ ಪತ್ರಿಕೆಗಳ  ಸಂಪಾದಕರೂ ಆಗಿರುವ  ರಾಘವೇಂದ್ರಚಾರ್  ಪ್ರೆಸ್ ಕೌನ್ಸಿಲ್ ನ ಸಂಸ್ಥಾಪಕ ಅಧ್ಯಕ್ಷರೂ ಆಗಿರುತ್ತಾರೆ.ಅವರ ಮೇಲೆ  ಬೆಂಗಳೂರಿನ ಪ್ರತಿಷ್ಟಿತ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಪ್ರತಿಷ್ಟಿತ ರಾಜಕೀಯ ಕುಟುಂಬ ಹಿನ್ನಲೆಯ ಪ್ರಭಾವಿ ವ್ಯಕ್ತಿಯಾಗಿರುವ ಡಾ.ಮೋಹನ್ ಅವರು ತಮ್ಮ ಬೆಂಬಲಿಗರನ್ನು ಬಿಟ್ಟು ಹೆದರಿಸುವ, ಬೆದರಿಸುವ, ಆಮಿಷ ಒಡ್ಡುವ,ತಮ್ಮ ವಿರುದ್ಧ ಮಾಡುತ್ತಿರುವ ಹೋರಾಟದಿಂದ ಹಿಂದಕ್ಕೆ ಸರಿಯು ವಂತೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆನ್ನುವುದು ಗಂಭೀರ ಆರೋಪ.ಇದಕ್ಕೆ ಸಂಬಂಧ ಪಟ್ಟಂತೆ  ರಾಘವೇಂದ್ರಾಚಾರ್ ಅವರು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರನ್ನ ಕೂಡ ನೀಡಿರುತ್ತಾರೆ.ಆ ದೂರಿನ ಪ್ರತಿ ಕನ್ನಡ ಫ್ಲ್ಯಾಶ್ ಗೆ ಲಭ್ಯವಾಗಿದೆ.

ಬೆಂಗಳೂರಿನ  ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ HOD,ಮತ್ತು PROFESSER  ಆಗಿ ಕೆಲಸ ಮಾಡುತ್ತಿರು ವ ಡಾ.ಮೋಹನ್ ಎನ್ ಎಸ್  ಅವರು ಸರ್ಕಾರಿ ವೈದ್ಯರಿಗೆ ನಿಗಧಿಪಡಿಸಿರುವ  ನಿಯಮಗಳನ್ನು ಉಲ್ಲಂಘಿಸುತ್ತಿರುವ ಆಪಾದನೆಗೆ ಸಿಲುಕಿದ್ದಾರೆ.ಸರ್ಕಾರಿ ವೈದ್ಯರು ಕೆಲಸ ಮಾಡಬೇಕಾಗಿರುವುದಕ್ಕೆ ನಿರ್ಧಿಷ್ಟ ನಿಯಮಗಳಿದ್ದರೂ ಅದ್ಯಾವುದನ್ನೂ ಪಾಲಿಸುತ್ತಿಲ್ಲ ಎನ್ನುವುದನ್ನು ಎಲ್ಲಾ  ದಾಖಲೆ ಗಳ ಸಮೇತ ಕಲೆ ಹಾಕಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಂದ ಹಿಡಿದು ಸಂಬಂಧಪಟ್ಟ ಇಲಾಖೆಗಳ ಎಲ್ಲಾ ಪ್ರಮುಖರಿಗೂ ದೂರು ಕೊಟ್ಟಿರುತ್ತಾರೆ. ಸಂಜಯ್ ಗಾಂಧಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಮದನ್  ಬಲ್ಲಾಳ್ ಅವರಿಗೂ ದೂರು ಕೊಟ್ಟ ಹಿನ್ನಲೆ ಯಲ್ಲಿ ಡಾ.ಮೋಹನ್ ಅವರ ಮೇಲಿರುವ ಆಪಾದನೆಗಳ ಸತ್ಯಾಸತ್ಯತೆ ತಿಳಿಯಲು ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿರುವು ದಾಗಿ ಹೇಳಿದ್ದಾರಲ್ಲದೇ ಡಾ.,ಮೋಹನ್ ಅವರಿಗೆ ವಿವರಣೆ ಹಾಗೂ ಕಾರಣ ಕೇಳಿ ಎರಡು ನೊಟೀಸ್ ಗಳನ್ನು ಸರ್ವ್ ಮಾಡಿರುವುದಾಗಿ ಹೇಳಿದ್ದಾರೆ.

ಇಷ್ಟರ ನಡುವೆ ಡಾ.ಮೋಹನ್ ಅವರು ತಮ್ಮ ಮೇಲೆ ಕೇಳಿಬಂದಿರುವ ಆಪಾದನೆಗಳಿಂದ ಕೆಂಡಾ ಮಂಡಲಗೊಂಡಿ ದ್ದಾರೆ. ದೂರುದಾರರಾದ ರಾಘವೇಂದ್ರಾಚಾರ್ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರಾದ್ರೂ ಅದಕ್ಕೆ ರಾಘವೇಂದ್ರಾಚಾರ್ ಸೊಪ್ಪಾಕಿಲ್ಲ.ತನ್ನ ವಿರುದ್ಧ ಸರ್ಕಾರದ ಮಟ್ಟದಲ್ಲಿ ದೂರು ಕೊಟ್ಟು ಗೌರವ-ಘನತೆಗೆ ಧಕ್ಕೆ ತರುತ್ತಿದ್ದಾರೆನ್ನುವ ಕೋಪಕ್ಕೆ ಸಾಕಷ್ಟು ಸಂಘಟನೆಗಳನ್ನು ಮುಂದೆ ಬಿಟ್ಟು ಅವರಿಂದ ವಿಷಯವನ್ನು ಮುಚ್ಚಿಹಾಕುವ ಯತ್ನ ಮಾಡಿದ್ದಾರೆ.ತಮ್ಮನ್ನು ಕನ್ನಡ ಪರ ,ದಲಿತಪರ ಸಂಘಟನೆಗಳ ಮುಖಂಡರೆಂದು ಹೇಳಿಕೊಳ್ಳುವ ಅನೇಕರು ರಾಘವೇಂದ್ರಾಚಾರ್ ಅವರನ್ನು ಮನವೊಲಿಸುವ, ಪುಸಲಾಯಿಸುವ ಕೆಲಸ ಮಾಡಿದ್ದಾರೆ.ಆದರೆ ಅದಕ್ಕೆ ತಲೆಕೆಡಿಸಿ ಕೊಂಡಿಲ್ಲ.ಆನಂತರ ಬೆದರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದೀರಾ..? ವೈದ್ಯರನ್ನು ಹೆದರಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದೀರಾ..? ಎಂದು ಬೆದರಿಸುವ ಕೆಲಸ ಮಾಡಿದ್ದಾರಂತೆ. ಏನೋ ಮಾತನಾಡಿ ಸೆಟ್ಲ್ ಮೆಂಟ್ ಮಾಡಿಕೊಳ್ಳಿ…ಅವರ ತಂಟೆಗೆ ಮಾತ್ರ ಬರಬೇಡಿ ಎಂದು ಬೆದರಿಸುವ ರೀತಿಯಲ್ಲಿ ಎಚ್ಚರಿಸಿದ್ದಾರಂತೆ.

ಇದ್ಯಾವುದಕ್ಕೂ ಜಗ್ಗದ ಬಗ್ಗದ ರಾಘವೇಂದ್ರಾಚಾರ್ ತಮ್ಮ ಹೋರಾಟ ಮುಂದುವರೆಸುವ ರೀತಿಯಲ್ಲಿ  ತಾವು ಕೊಟ್ಟ ದೂರಿನ ಹಿನ್ನಲೆಯಲ್ಲಿ ಕ್ರಮಗಳೇನಾಗಿದೆ ಎಂದು ವಿಚಾರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.ಈ ನಡುವೆ ನಿನ್ನೆ ಅಂದರೆ 10-10-2025 ರಂದು ಬೆಳ್ಳಂಬೆಳಗ್ಗೆ ಕೆಲವರು ರಾಮಮೂರ್ತಿ ನಗರದಲ್ಲಿರುವ ರಾಘವೇಂದ್ರ ಅವರ ಮನೆಗೇ ತೆರಳಿ., ಮೊದಲು ಆತ್ಮೀಯವಾಗಿ ಮಾತನಾ ಡಿದ್ದಾರೆ.ಪಟ್ಟುಬಿಡದಿದ್ದಾಗ ನಿಮ್ಮ ಡಿಮ್ಯಾಂಡ್ ಗಳೇನಿದ್ರೆ ಹೇಳಿ ಎಂದು ಜೇಬಿನಿಂದ 10,000 ತೆಗೆದು ಕೊಡಲು ಮುಂದಾಗಿದ್ದಾರೆ. ನಮ್ಮ ಉದ್ದೇಶ ಅದಲ್ಲವೇ ಅಲ್ಲ ಸಾರ್ ಎಂದು ಹೇಳಿದಾಗ ನಿಮಗೂ ವಯಸ್ಸಾದ ಅಮ್ಮ, ಹೆಂಡ್ತಿ, ಮಕ್ಕಳಿದ್ದಾರೆ ನೋಡಿ ಎಂದು ಬೆದರಿಸುವ ದಾಟಿಯಲ್ಲಿ ಮಾತನಾಡಿದ್ದಾರೆ.ಅದೆಲ್ಲವೂ ಅವರ ಮನೆಯಲ್ಲಿರುವ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ಎನ್ನಲಾಗಿದೆ.

ALSO READ :  ಕಾವೇರಿ-5 ನೇ ಹಂತದ ಯೋಜನೆ ಮಾಡಿದ್ದು ಬಿಜೆಪಿ, ಹೆಸರು ತೆಗೆದುಕೊಳ್ಳುತ್ತಿರುವುದು ಕಾಂಗ್ರೆಸ್‌: ಆರ್‌.ಅಶೋಕ

ಬೀದಿಯಲ್ಲಿ ಹೋಗುತ್ತಿದ್ದ ಗ್ರಹಚಾರ ಮನೆಗೇ ಬಂತಲ್ಲಪ್ಪಾ..ಇದರಿಂದ ಭವಿಷ್ಯದಲ್ಲಿ ಮುಂದೇನೋ ಘಟಿಸುವ ಲಕ್ಷಣ ಕಾಣಿಸುತ್ತಿ ದೆ ಎಂಬ ಸೂಕ್ಷ್ಮ ರಾಘವೇಂದ್ರಗೆ ತಿಳಿದುಬಂದಿದೆ.  ತಮ್ಮ ವಲಯದಲ್ಲಿ ರುವ  ಪತ್ರಿಕಾಮಿತ್ರರು ಹಾಗೂ ಆತ್ಮೀಯರಾದ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿ ಸಲಹೆ ಪಡೆದಾಗ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡುವಂತೆ ಸಲಹೆ ನೀಡಿದ್ದಾರೆ. ನಿನ್ನೆ ಸಂಜೆಯೇ ರಾಮಮೂರ್ತಿ ನಗರ  ಪೊಲೀಸ್ ಠಾಣೆಗೆ ರಾಘವೇಂದ್ರ ದೂರು ಕೊಟ್ಟಿದ್ದಾರೆ. ಡಾ.ಮೋಹನ್ ಅವರ ಆತ್ಮೀಯರು, ಬೆಂಬಲಿಗರು ,.ಸಂಘಟನೆಗಳ ಮುಖಂಡರು ಎನಿಸಿ ಕೊಂಡವರು ತಮ್ಮ ಮೇಲೆ ಹೇರಿದ ಒತ್ತಡ, ಬಲವಂತ, ಜೀವ ಬೆದರಿಕೆ ಹಾಕಿದ ಎಲ್ಲಾ ಸಂಗತಿಗಳನ್ನ ಆಧರಿಸಿ ದೂರು ನೀಡಿದ್ದಾರೆ.  ಪೊಲೀಸರು ದೂರನ್ನು ದಾಖಲಿಸಿಕೊಂಡು ಮುಂದಿನ ಕ್ರಮದಲ್ಲಿ ನಿರತವಾಗಿದ್ದಾರೆ.

ಡಾ.ಮೋಹನ್ ಅವರು ಸರ್ಕಾರಿ ವೈದ್ಯರಾಗಿ ಸರ್ಕಾರ ಫ್ರೇಮ್ ಮಾಡಿರುವ ನಿಯಮಗಳನ್ನು ಸರಿಯಾಗಿ ಪಾಲಿಸದೆ ತಪ್ಪು ಎಸಗಿ ರುವುದಕ್ಕೆ ಎಲ್ಲಾ ಸಾಕ್ಷ್ಯಗಳು ರಾಘವೇಂದ್ರ ತಮ್ಮ ಬಳಿ ಇದೆ ಎಂದು ಹೇಳಿದ್ದಾರೆ. ಆಗಿರುವ ತಪ್ಪನ್ನು ಇಲಾಖೆಯ ನಿಯಮಗಳ ಅನ್ವಯವೇ ಸರಿಪಡಿಸಿಕೊಂಡು ಸರಿಯಾದ ಮಾರ್ಗದಲ್ಲಿ ನಡೆಯಲು ಅವಕಾಶಗಳಿದ್ದಾಗ್ಯೂ ತನಗೆ ಅವಮಾನವಾಗಿದೆ.ತನ್ನ ಗೌರವ-ಘನತೆಗೆ ಧಕ್ಕೆ ಉಂಟಾಗಿದೆ ಎನ್ನುವ ಉದ್ದಟತನದಲ್ಲಿ ಅವರಿವರನ್ನು ಬಿಟ್ಟು ಹೆದರಿಸುವುದು,ಆಮಿಷ ಒಡ್ಡಿಸುವುದು, ಮನೆಗೆ ಕಳುಹಿಸಿ ತನ್ನ ಬಗ್ಗೆಭಯಪಟ್ಟುವಂತೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಇಲ್ಲಿ ಕಾಡುತ್ತಿರುವ ಪ್ರಶ್ನೆ.

ಒಂದು ವೇಳೆ ರಾಘವೇಂದ್ರಚಾರ್ ಅವರು ಡಾ.ಮೋಹನ್ ಅವರ ಲೋಪಗಳನ್ನೇ ಅಸ್ತ್ರವಾಗಿಟ್ಟು ಕೊಂಡು ಹೆದರಿಸುವ-ಬೆದರಿಸುವ-ಹಣಕ್ಕೆ ಡಿಮ್ಯಾಂಡ್ ಇಡುವ ಕೆಲಸಗಳನ್ನು ಮಾಡಿದ್ದರೆ ಅದನ್ನು ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನೆ ಮಾಡುವ,ಅದಕ್ಕೆ ತಕ್ಷಶಿಕ್ಷೆ ನೀಡಿಸುವ ಅವಕಾಶ ಮೋಹನ್ ಅವರಿಗಿದೆ.ಹಾಗೇನಾದ್ರೂ ನಾನು ಮಾಡಿರುವುದು ಸಾಬೀತಾದ್ರೆ,ಒಂದೇ ಒಂದು ಸಾಕ್ಷ್ಯ ನೀಡಿದ್ರೆ ನಾನು ಎಂಥಾ ಶಿಕ್ಷೆ ಎದುರಿಸ್ಲಿಕ್ಕೂ ಸಿದ್ದ ಎಂದು ರಾಘವೇಂದ್ರ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ.ವಿಷಯ ಹೀಗಿರುವಾಗ ಡಾ.ಮೋಹನ್ ಅವರು ಓರ್ವ ಜವಾಬ್ದಾರಿಯುತ ವೈದ್ಯರಾಗಿ ಪತ್ರಿಕಾ ಸಂಪಾದಕರ ಮೇಲೆ ಹೀಗೆ ಮುಗಿ ಬೀಳುವುದು ಎಷ್ಟು ಸರಿ ಎನ್ನುವುದು ಪತ್ರಿಕಾವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆ.


Leave a Comment