advertise here

Search

ಏನಾಗ್ತಿದೆ ಅರ್ನಾಬ್‌ ಮಹತ್ವಾಕಾಂಕ್ಷೆಯ “ರಿಪಬ್ಲಿಕ್‌ ಕನ್ನಡ”ದಲ್ಲಿ..!?  “ಅನಿಶ್ಚಿತತೆ”ಯ ಕಾರ್ಮೋಡ ಕವಿದಿರುವುದೇಕೆ..!?


ಕಾರ್ಯಒತ್ತಡಕ್ಕೆ ಸಿಲುಕಿ ತತ್ತರಿಸುತ್ತಿರುವ ಸಿಬ್ಬಂದಿ..?!-ಬೇರೆ ಚಾನೆಲ್‌ ಗಳಿಗೆ ಆಂಕರ್ಸ್‌,ರಿಪೋರ್ಟರ್ಸ್‌ ಗಳ ವಲಸೆ..!? -ಮುಖ್ಯಸ್ಥೆ ಶೋಭಾ ಸ್ಥಾನಕ್ಕೆ ಕುತ್ತು..!?

ಬೆಂಗಳೂರು: ರಾಷ್ಟ್ರೀಯವಾದಿ ಪತ್ರಕರ್ತ, ಜರ್ನಲಿಸಂನ ಗ್ರಾಮರನ್ನೇ ಬದಲಿಸಿದ ಮಾದ್ಯಮ ಜಗತ್ತಿನ ದಿಗ್ಗಜ ಅರ್ನಾಬ್‌ ಗೋಸ್ವಾಮಿ ಮಾಲೀಕತ್ವದ ರಿಪಬ್ಲಿಕ್‌ ಕನ್ನಡ ಮತ್ತೆ ಸುದ್ದಿಯಲ್ಲಿದೆ.ಆ ಚಾನೆಲ್‌ ಬಗ್ಗೆ ಮತ್ತೆ ಬರೆಯಲೇಬೇಕಾದ ಸನ್ನಿವೇಶ ಎದುರಾಗಿದೆ.ಇದಕ್ಕೆ ಕಾರಣ ಚಾನೆಲ್‌ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು.ಕೈ ತುಂಬಾ ಸಂಬಳ ಪಡೆಯುತ್ತಿದ್ದ ಆಂಕರ್ಸ್‌ ಮತ್ತು ರಿಪೋರ್ಟರ್ಸ್‌ ಗಳ ವಲಸೆ… ಚಾನೆಲ್‌ ನಲ್ಲಿ ಆವರಿಸಿರುವ ಅನಿಶ್ಚಿತತೆಯ ಕಾರ್ಮೋಡ..ಗಣನೀಯ ಪ್ರಮಾಣದಲ್ಲಿ ಆಗಿರುವ ಇಳಿಕೆಯಿಂದ ಇತರೆ ಸಿಬ್ಬಂದಿ ಮೇಲೆ ಸೃಷ್ಟಿಯಾಗಿರುವ ಕಾರ್ಯದ ಒತ್ತಡ..ಶಿಫ್ಟ್ ನೋಡದೆ ಕೆಲಸ ಮಾಡಬೇಕೆಂದು ಹೊರಡಿಸಲಾಗಿದೆ ಎನ್ನಲಾಗಿರುವ ಫರ್ಮಾನ್.ಒಂದ್ರೀತಿ ಮಾನಸಿಕವಾಗಿಯಷ್ಟೇ ಅಲ್ಲ ದೈಹಿಕವಾಗಿ ಬಳಲಿ ಬೆಂಡಾಗುತ್ತಿರುವ ಸಿಬ್ಬಂದಿ ಕಷ್ಟವೇ ಆಡಳಿತ ಮಂಡಳಿಗೆ ಅರ್ಥವಾಗುತ್ತಿಲ್ಲವಂತೆ.ಆದರೆ ದುರಂತ ಎಂದ್ರೆ ಏನ್‌ ಗೊತ್ತಾ..ಮ್ಯಾನೇಜ್ಮೆಂಟ್‌ ಲೆವಲ್  ನಲ್ಲಿ  ಚೆನ್ನಾಗಿರುವ ಕೆಲವರು ಮಾತ್ರ ಕೈ ತುಂಬಾ ಸಂಬಳ ಪಡೆದು ನೆಮ್ಮದಿಯಾಗಿ ಬಂದು ಹೋಗುತ್ತಿದ್ದಾರಂತೆ.ಇದು ಶಿಫ್ಟ್‌ ಎನ್ನದೆ ಕೆಲಸ ಮಾಡುತ್ತಿರುವ ಪ್ರಾಮಾಣಿಕ ಮಾದ್ಯಮಮಿತ್ರರನ್ನು ಅಸಮಾಧಾನ-ಆಕ್ರೋಶಕ್ಕೀಡುಮಾಡಿದೆ..ಅದು ಸಹಜ ಬಿಡಿ.

ರಿಪಬ್ಲಿಕ್‌ ಕನ್ನಡದ ಸ್ಥಿತಿ ಕನ್ನಡ ಸುದ್ದಿ ಜಗತ್ತಿನಲ್ಲಿ ತೀರಾ ಶೋಚನೀಯವಾಗಿದೆ ಎನ್ನುವ ಮಾತಿದೆ. ಆರಂಭದಲ್ಲಿ ಕೊಟ್ಟ ಬಿಲ್ಡಪ್‌ ನ್ನು ಮೆಂಟೇನ್‌ ಮಾಡಿಕೊಂಡು ಹೋಗುವಲ್ಲಿ ಪ್ಲಾಪ್‌ ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.ಒಳ ರಾಜಕೀಯಗಳಲ್ಲೇ ಮುಳುಗೋದ ಸಂಪಾದಕೀಯ ಮಂಡಳಿ ಮತ್ತು ಮ್ಯಾನೇಜ್ಮೆಂಟ್‌ ಗಳು  ಸದ್ದು ಮಾಡುವಂತ ಸುದ್ದಿಗಳ ಪ್ರಸಾರಕ್ಕೆ ಆಧ್ಯತೆ ಕೊಡಲೇ ಇಲ್ಲ. ವೃತ್ತಿಪರರನ್ನು ಆಯ್ಕೆ ಮಾಡಿಕೊಳ್ಳದೆ ಕೇವಲ ಅರಚಾಡುವ-ಕಿರುಚಾಡುವ ಆಂಕರ್ಸ್‌ ಗಳನ್ನೇ ಬಂಡವಾಳವಾಗಿ ಬಳಸಿಕೊಳ್ಳಲಾಯ್ತು.ಅದರ ಪರಿಣಾಮ ಏನಾಯ್ತು ಎನ್ನುವುದು ಇವತ್ತಿಗೆ ಜಗತ್ತಿನ ಮುಂದಿದೆ..

ಮಾದ್ಯಮ ಲೋಕದಲ್ಲಿ ಬೆಂಕಿ ಬಿರುಗಾಳಿ ಎನ್ನುವಂಥ, ಸೆನ್ಸೇಷನ್‌ ಕ್ರಿಯೇಟ್‌ ಮಾಡುವಂತ ಸುದ್ದಿಗಳೇ ರಿಪಬ್ಲಿಕ್‌ ಕನ್ನಡದಲ್ಲಿ ಪ್ರಸಾರವಾಗಲಿಲ್ಲ..ಇಂದಿಗೂ ಪ್ರಸಾರವಾಗುತ್ತಿಲ್ಲ ಎನ್ನುವ ಆಪಾದನೆಯಿದೆ. ಅರ್ನಾಬ್‌ ಗೋಸ್ವಾಮಿ ಚಾನೆಲ್‌ ಗೆ ಸುರಿಯುತ್ತಿರುವ ಕೋಟ್ಯಾಂತರ ಹಣಕ್ಕೆ ಫಲಶೃತಿ ಎನ್ನುವಂತ ರಿಸಲ್ಟೇ ಬರುತ್ತಿಲ್ಲ.ನಿಮಗೆ ಗೊತ್ತಿರಲಿ, ಸಣ್ಣಪುಟ್ಟ ಚಾನೆಲ್‌ ಗಳಲ್ಲಿ ಪ್ರಸಾರವಾಗುವ ಸುದ್ದಿಗಳೇ  ಸುದ್ದಿ ಜಗತ್ತಿನಲ್ಲಿ ಸದ್ದು ಮಾಡುವಾಗ ಅರ್ನಾಬ್‌ ಗೋಸ್ವಾಮಿ ಅಂಥ ಮಾದ್ಯಮ ದಿಗ್ಗಜನ ಕನಸಿನ ಕೂಸಾದ ರಿಪಬ್ಲಿಕ್‌ ಕನ್ನಡ ತೀರಾ ಸಾಕಷ್ಟು ಹಿಂದಕ್ಕೆ ಬಿದ್ದಿರುವುದು ದುರಂತ ಅಷ್ಟೇ ಅಲ್ಲ,ಪಾಪ, ಅರ್ನಾಬ್‌ ಅವರಂಥ ಮಾದ್ಯಮ ದಿಗ್ಗಜನ ಮಹತ್ವಾಕಾಂಕ್ಷೆ ಮತ್ತು ಕನಸಿನ ಗರ್ಭಪಾತ ಕೂಡ ಅಲ್ಲವೇ..?!

ರಿಪಬ್ಲಿಕ್‌ ಕನ್ನಡದ ಪರಿಸ್ತಿತಿ ಗಮನಿಸಿರುವ ಕೆಲ  ಮಾದ್ಯಮ ತಜ್ಞರು ಹೇಳುವಂತೆ ಇದೇ ವ್ಯವಸ್ಥೆಯಲ್ಲಿ ಮುಂದುವರೆದರೆ ರಿಪಬ್ಲಿಕ್‌ ಕನ್ನಡಕ್ಕೆ ಉಳಿವಿಲ್ಲವಂತೆ.ಏಕೆಂದರೆ ಅದರ ಅಸ್ಥಿತ್ವ ಅಷ್ಟೊಂದು ಗೊಂದಲಕಾರಿ ಹಾಗೂ ಅನಿಶ್ಚಿತವಾಗಿದೆಯಂತೆ.ಯಾವ ಸಮಯದಲ್ಲಿ ಯಾರಿಗೆ ಗೇಟ್‌ ಪಾಸ್‌ ಕೊಡಲಾಗುತ್ತದೆ ಎನ್ನುವುದನ್ನೇ ಊಹಿಸ್ಲಿಕ್ಕಾಗುತ್ತಿಲ್ಲವಂತೆ.ಸಿಬ್ಬಂದಿ ನಿತ್ಯ, ಭಯದಲ್ಲೇ ಬಂದು ಕೆಲಸ ಮಾಡುತ್ತಿದ್ದಾರಂತೆ. ಇದು ಒಂದ್‌ ರೀತಿ ಸಮಸ್ಯೆಯಾದ್ರೆ ಸಿಬ್ಬಂದಿ ಚಾನೆಲ್‌ ತೊರೆಯುವ ಬೆಳವಣಿಗೆಳಾ ಗುತ್ತಿವೆಯಂತೆ.ಇಲ್ಲಿ ಕೈ ತುಂಬಾ ಪಡೆಯುತ್ತಿದ್ದ ಸಂಬಳ  ಬಿಟ್ಟು ಅದಕ್ಕಿಂತ ಸಾಕಷ್ಟು ಕಡಿಮೆ ಇರುವ ವೇತನಕ್ಕೆ ಗುಳೆ ಹೋಗುತ್ತಿದ್ದಾರಂತೆ.ಏಕಪ್ಪಾ ಎಂದು ಕೇಳಿದ್ರೆ ಹೋಗಿ ಸರ್…ಸಂಬಳಕ್ಕಿಂತ ನೆಮ್ಮದಿ ಮುಖ್ಯ..ನಾನು ಇನ್ನೂ ಒಂದಷ್ಟು ವರ್ಷ ಬದುಕಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದೇನೆ..ಬೇಗ ಆರೋಗ್ಯ ಹಾಳು ಮಾಡಿಕೊಳ್ಳಲು..ಸಾಯಲು ಇಷ್ಟವಿಲ್ಲ..ಕಡಿಮೆ ಸಂಬಳವಾದ್ರೂ ಪರ್ವಾಗಿಲ್ಲ.ನಮಗೆ ನೆಮ್ಮದಿ ಬೇಕು ಸರ್‌ ಎಂದು ಹೇಳುವವರೇ ಹೆಚ್ಚಾಗಿದ್ದಾರಂತೆ.  

ಅರಚಾಡಿ-ಕಿರುಚಾಡಿದ ಆಂಕರ್ಸ್‌ ಗಳೆಲ್ಲಾ ಏನಾದ್ರು..ಎಲ್ಲಿ ಹೋದ್ರು..!?ತಮ್ಮ ಚರಿಶ್ಮಾ-ಖದರ್‌ ಮೂಲಕವೇ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುವ ಅರ್ನಾಬ್‌ ಗೋಸ್ವಾಮಿ ಮ್ಯಾಜಿಕ್‌ ಕನ್ನಡದಲ್ಲಿ ಮಾತ್ರ ವರ್ಕೌಟ್‌ ಆಗುತ್ತಿಲ್ಲ. ಏಕೆ ಎನ್ನುವುದೇ ದೊಡ್ಡ ಪ್ರಶ್ನೆ. ಲಕ್ಷಗಟ್ಟಲೇ ಸಂಬಳ ಕೊಟ್ಟು ದಂಡಿಗಟ್ಟಲೇ ಆಂಕರ್ಸ್‌ ಗಳನ್ನು ಕರೆದುಕೊಂಡು ಬಂದ್ರೂ ಪ್ರಯೋಜನವಾಗಲೇ ಇಲ್ಲರಿಪೋರ್ಟರ್ಸ್‌ ಗಳಿಲ್ಲದೆ ಕೇವಲ ಆಂಕರ್ಸ್‌ ಗಳನ್ನಿಟ್ಟುಕೊಂಡೇ ಏನನ್ನೋ ಸಾಧಿಸ್ತೇವೆ ಎಂದು ಹೊರಟ ರಿಪಬ್ಲಿಕ್‌ ಕನ್ನಡದ ಪ್ರಯತ್ನ ಕನ್ನಡ ವೀಕ್ಷಕರಿಗೆ ರುಚಿಸಲೂ ಇಲ್ಲ..ಇಷ್ಟವಾಗಲೂ ಇಲ್ಲ. ಕೇವಲ ಸುದ್ದಿಯಲ್ಲಿ ಏನೂ ಇಲ್ಲದಿದ್ದರೂ ಅದೇನೋ ಇದೆ ಎನ್ನುವುದನ್ನು ಅರಚಿದ್ರೆ-ಕಿರುಚಿದ್ರೆ-ಅಬ್ಬರಿಸಿದ್ರೆ ಜನ ನಂಬಿ ಬಿಡ್ತಾರೆನ್ನುವ ಭ್ರಮೆ ಕಳಚೊಕ್ಕೆ ಹೆಚ್ಚು ಸಮಯ ಬೇಕಾಗ್ಲೇ ಇಲ್ಲ.

ಕಿರುಚೋದು, ಅರಚೋದೇ ಇವತ್ತಿನ ಟ್ರೆಂಡ್‌ ಎಂದು ಸಾರಲು ಹೋದ ಬಹುತೇಕ ಆಂಕರ್ಸ್‌ ಗಳು ಹೇಳ ಹೆಸರಿಲ್ಲ ದಂತಾಗಿ ಹೋದ್ರು.ಅವರು ಇವತ್ತು ಎಲ್ಲೆಲ್ಲಿ ಇದ್ದಾರೆನ್ನುವುದೇ ಗೊತ್ತಿಲ್ಲ( ಆರಂಭದಲ್ಲಿದ್ದ ಆಂಕರ್ಸ್‌ ಗಳನ್ನು ಹುಡುಕಿದ್ರೆ ಸತ್ಯ ಗೊತ್ತಾಗುತ್ತೆ) ಘಟಾನುಘಟಿ ಆಂಕರ್ಸ್‌ ಗಳನ್ನು ಪರದೆ ಮೇಲೆ ಅಬ್ಬರಿಸೊಕ್ಕೆ ಬಿಟ್ಟರೂ ಅದರ ಪರಿಣಾಮ ಕೆಲ ತಿಂಗಳಲ್ಲೇ ಗೊತ್ತಾಯ್ತು…ತಪ್ಪು ಆಂಕರ್ಸ್‌ ಗಳದಲ್ಲ…ಅವರ ಅರಚಾಡುವ ಶೈಲಿಯದ್ದಲ್ಲ..ಬದಲಿಗೆ ಸುದ್ದಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕೆಂದು ನಿರ್ದರಿಸುವವರಲ್ಲಿನ ಲೋಪ-ದೋಷದ್ದೆನ್ನುವುದು ಗೊತ್ತಾಗೊಕ್ಕೆ ಹೆಚ್ಚು ದಿನಗಳು ಬೇಕಾಗ್ಲಿಲ್ಲ.

ಹೋಗಲಿ, ಸತ್ಯ ಗೊತ್ತಾದ ಮೇಲಾದ್ರೂ ಚಾನೆಲ್‌ ನಲ್ಲಿ ಸುಧಾರಣೆಗಳಾದ್ವಾ..? ಗುಣಮಟ್ಟ ಸುಧಾರಣೆಗೆ ಪೂರಕವಾಗುವ ನಿಟ್ಟಿನಲ್ಲಿ ಹೊಸ ಬೆಳವಣಿಗೆಗಳು ನಡೆದವಾ..? ಯಾರಿಗೆ ಯಾವ ಜವಾಬ್ದಾರಿ ವಹಿಸಿಕೊಟ್ಟರೆ ಚಾನೆಲ್‌ ನ ಗುಣಮಟ್ಟ ಸುಧಾರಣೆ ಆಗಬಹುದು..ವೀಕ್ಷಕರಿಗೆ ಸಹ್ಯ ಎನಿಸಬಹುದೆಂದು ಆಲೋಚಿಸಿ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಗಳಾದ್ರೂ ಆದವಾ..? ನೋ..ನೋ..ಇವತ್ತಿಗೂ ಚಾನೆಲ್‌ ನ ಆಡಳಿತ ಮಂಡಳಿ ಬಹುತೇಕ ವಿಷಯಗಳಲ್ಲಿ ದುಡುಕುವುದನ್ನೇ ಅಭ್ಯಾಸ ಮಾಡಿಕೊಂಡಿದೆ ಯಂತೆ. ಹೀಗೆ ಮಾಡಿದ್ರೆ ಹೀಗೇನೆ ಆಗೋದು ಎನ್ನುವ ಮಾಹಿತಿ ಇದ್ದಾಗ್ಯೂ ಅದನ್ನೇ ಪುನರಾವರ್ತನೆ ಮಾಡುತ್ತಿದೆಯಂತೆ.ಇದನ್ನು ಹೊರಗಿರುವವರು ಹೇಳುತ್ತಿಲ್ಲ.ಅಲ್ಲಿ ಜಡ್ಡುಗಟ್ಟಿದೆ ಎನ್ನಲಾಗುತ್ತಿರುವ ವ್ಯವಸ್ಥೆಯನ್ನು ಕಂಡು ಕಂಗಾಲಾಗಿ ಹೋಗಿರುವ, ಇಲ್ಲಿ ಉದ್ದಾರವಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಬೇಸತ್ತು ಹೋಗಿರುವ ಸಾಕಷ್ಟು ಸಿಬ್ಬಂದಿನೇ ಬೇಸರದ ನಿಟ್ಟುಸಿರಿನಲ್ಲಿ ಮಾತನಾಡುತ್ತಿದ್ದಾರೆ.

ಭರವಸೆ ಮೂಡಿಸಿದ್ದ ರಿಪಬ್ಲಿಕ್‌  ನಿರಾಶೆ ಮೂಡಿಸಿದ್ದೇಕೆ..?! ಇಳಿ ಹಾದಿಯತ್ತ ರಿಪಬ್ಲಿಕ್‌ ಕನ್ನಡ ಬರುತ್ತಿದೆ ಎಂಬ ಸುದ್ದಿ ಹೊರಬಿದ್ದಾಗಲೇ, ಕನ್ನಡ ಸುದ್ದಿ ವಾಹಿನಿ ಜಗತ್ತಿನಲ್ಲಿ ತನ್ನದೊಂದು ಡಿಫರೆಂಟ್‌ ಚರಿಶ್ಮಾ..ಚಾರ್ಮ್..ಖದರ್.ಉಳಿಸಿಕೊಳ್ಳಬಹುದೆಂದೇ ನಿರೀಕ್ಷಿಸಲಾಗಿತ್ತು. ದೆಹಲಿ, ಮುಂಬೈ, ಪ.ಬಂಗಾಳದಲ್ಲಿ ರಿಪಬ್ಲಿಕ್‌ ಚಾನೆಲ್‌ ನ್ನು ಕಂಗೊಳಿಸಿದ ರೇಂಜ್‌ ನಲ್ಲೇ ಕರ್ನಾಟಕ ದಲ್ಲೂ ಒಂದು ಜಾದೂ ಆಗಬಹುದೆಂದೇ ಹೇಳಲಾಗ್ತಿತ್ತು.ಕನ್ನಡ ನ್ಯೂಸ್‌ ಚಾನೆಲ್‌ ಗಳ ಸಾಲಿನಲ್ಲಿ ಟಾಪ್‌ 3 ಲೆವಲ್‌ ನಲ್ಲಿ ಗುರುತಿಸಿಕೊಳ್ಳಬಹುದೆಂದೆಲ್ಲಾ ಅಂದಾಜಿಸಲಾಗಿತ್ತು.ಆದರೆ ಅಂದುಕೊಂಡಿದ್ದು ಆಗಲೇ ಇಲ್ಲ.ಇವತ್ತಿಗೂ ಒಂದು ಗಟ್ಟಿತನದ ಟಿಆರ್‌ ಪಿಯನ್ನು  ಒಂದಷ್ಟು ಕಾಲದವರೆಗಾದ್ರೂ ಉಳಿಸಿಕೊಂಡು ಹೋಗುವ ತಾಕತ್ತು ಕೂಡ ಚಾನೆಲ್‌ ಗೆ ಇಲ್ಲವಾದಂತಿದೆ. ಅಂದುಕೊಂಡಿದ್ದು ಆಗುತ್ತಿಲ್ಲ..ಹೀಗೆಯೇ ಆದರೆ ಚಾನೆಲ್‌ ಮುಚ್ಚಬೇಕಾಗ್ತದೆ ಎಂದು ಆಡಳಿತ ಮಂಡಳಿ ಅನೇಕ ಬಾರಿ ಎಚ್ಚರಿಕೆ ಕೊಟ್ಟರೂ ಪ್ರಯೋಜನವಾಗಿಲ್ಲವಂತೆ..ಕೆಲಸ ಮಾಡುವ ಸಿಬ್ಬಂದಿ ಕಥೆಯಂತೂ ಹೇಳತೀರದಷ್ಟು ಶೋಚನೀಯವಾಗಿದೆಯಂತೆ.

ALSO READ :  CONTROVERSY RISE ABOUT "PRESS CLUB HONOUR"..!? ವಿವಾದ-ಗೊಂದಲದ ಗೂಡಾದ "ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ":ಪ್ರಶಸ್ತಿಗೆ ರಾಜಕೀಯದ ಸೋಂಕು ಬೇಕಾ..?

ರಿಪಬ್ಲಿಕ್‌ ಕನ್ನಡದ ವೈಫಲ್ಯಕ್ಕೆ ಮೊದಲು  ಸಂಪಾದಕೀಯ ಮಂಡಳಿಯನ್ನೇ ದೂಷಿಸಬೇಕಾಗುತ್ತದೆ. ಅದು ಸಹಜ ಕೂಡ. ಚಾನೆಲ್‌ ನ್ನು ರೂಪಿಸುವ ಹೊಣೆಗಾರಿಕೆ ಇವರ ಮೇಲಿರುವುದರಿಂದ ನಿರೀಕ್ಷೆಗಳು ಇರುವುದು ಸಹಜ.ಹಾಗೆ ನೋಡಿದ್ರೆ ಶೋಭಾ ಮಳವಳ್ಳಿ ಅವರೇ ಇವತ್ತಿನ ದುಸ್ಥಿತಿಯ ಹೊಣೆ ಹೊರ ಬೇಕಾಗುತ್ತದೆ.ಮುಂದಿನ ದಿನಗಳಲ್ಲಿ ಅವರು ಕೆಲ ಕಾರಣಗಳಿಂದಾಗಿ ಚಾನೆಲ್‌ ನಿಂದ ಹೊರಬರಬೇಕಾದ ಸ್ಥಿತಿ ನಿರ್ಮಾಣವಾದ್ರೆ ( ಹಾಗೆ ಆಗುವುದು ಬೇಡ..ಪಾಪ..ಅವರು ಕೂಡ ತಮ್ಮ ಪರಿಶ್ರಮವನ್ನೆಲ್ಲಾ ಒಗ್ಗೂಡಿಸಿ ಏನೋ ಒಂದು ಪ್ರಯತ್ನ ಮಾಡುತ್ತಿದ್ದಾರೆ..ಆದರೆ ಅದು ಅನೇಕ ಕಾರಣಗಳಿಂದ ಆಗುತ್ತಿಲ್ಲ ಅಷ್ಟೆ..?!) ಅದಕ್ಕೆ ಅವರೇ ಹೊಣೆ ಆಗಬೇಕಾಗುತ್ತದೆ. ಕೊಟ್ಟ ಅಧಿಕಾರ ಮತ್ತು ಕಾಲಾವಕಾಶವನ್ನು ಅವರು ಸದ್ಭಳಕೆ ಮಾಡಿಕೊಳ್ಳಲಿಲ್ಲ ಎನ್ನುವ ದೊಡ್ಡ ಹಣೆಪಟ್ಟಿ ಹೊತ್ತೇ ಅವರು ಹೊರ ಬರಬೇಕಾಗುತ್ತದೆ.ಇದು ಅವರಿಗೂ ಗೊತ್ತು.

ಒತ್ತಡದಲ್ಲಿ ನಲುಗಿ ಹೋಗುತ್ತಿದ್ದಾರಾ ಸಿಬ್ಬಂದಿ..!? :ರಿಪಬ್ಲಿಕ್‌ ಕನ್ನಡದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೇ ಹೇಳುವಂತೆ ಅಲ್ಲಿನ  ಸ್ಥಿತಿ ತೀರಾ ಶೋಚ ನೀಯವಾಗಿದೆಯಂತೆ. ದೊಡ್ಡ ಮಟ್ಟದ ಪ್ರೆಷರ್‌ ನಲ್ಲಿ ಕೆಲಸ ಮಾಡಲೇಬೇಕಂತೆ.ಯೋಗ್ಯತೆ-ಅರ್ಹತ-ಅನುಭವಕ್ಕೆ ತಕ್ಕಂತ ಸಂಬಳಗಳಿಲ್ಲವಂತೆ..ಯೋಗ್ಯರನ್ನು ಮೂಲೆಗುಂಪು ಮಾಡಿ, ಹೊಗಳುಭಟ್ಟರನ್ನು-ಜಾತಿವಾದಿಗಳನ್ನು ಓಲೈಸುವ ಕೆಲಸ ನಡೆಯುತ್ತಿದೆಯಂತೆ. ಹಳೇ ಚಾನೆಲ್‌ ಗಳಿಂದ ಬಂದ ಸೀನಿಯರ್ಸ್‌ ಗಳು ನಿದ್ದೆಊಟ ಬಿಟ್ಟು ಶಿಫ್ಟ್‌ ಗಳೆನ್ನದೆ ಕೆಲಸ ಮಾಡುತ್ತಿದ್ದರೂ ಅವರಿಗೆ ಓಬಿರಾಯನ ಕಾಲದ ಸಂಬಳವನ್ನೇ ಕೊಡಲಾಗುತ್ತಿದೆಯಂತೆ.ಯಾರನ್ನೋ ಬಕೆಟ್‌ ಹಿಡಿದು..ಯಾರನ್ನೋ ಓಲೈಸಿ ಕೆಲಸ ಪಡೆಯುವವರಿಗೆ ದೊಡ್ಡಮಟ್ಟದ ಸಂಬಳ ನೀಡಲಾಗುತ್ತದೆಯಂತೆ. ಸಿಬ್ಬಂದಿ ನಡುವೆಯೇ  ಸಾಕಷ್ಟು ಸಮಸ್ಯೆ-ಸಂಘರ್ಷ ಸೃಷ್ಟಿಸುವ ಕೆಲಸವನ್ನು ಅಲ್ಲಿರುವ ಕೆಲವ್ರು ಮಾಡುತ್ತಿದ್ದಾರೆನ್ನುವುದು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ ಅಲ್ಲಿನವರಿಂದಲೇ ಸಿಕ್ಕಿರುವ ಮಾಹಿತಿ.

ಬೇರೆ ಚಾನೆಲ್‌ ಗಳತ್ತ ಆಂಕರ್ಸ್-ರಿಪೋರ್ಟರ್ಸ್‌ ವಲಸೆ..!? :  ರಿಪಬ್ಲಿಕ್‌ ಕನ್ನಡದಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಥೆ ಕೇಳಿದ್ರೆ ಅಯ್ಯೋ ಎನಿಸುತ್ತದೆ.ಸುದ್ದಿ ಮನೆಯೆಂದರೆ ಅದರ ಒತ್ತಡ ಹೇಗಿರುತ್ತೆ ಎನ್ನುವುದು ನಮಗೂ ಗೊತ್ತು.ಆದರೆ ಇರೋ ಕಡಿಮೆ ಸಿಬ್ಬಂದಿಯನ್ನೇ ಹಿಂಡಿ ಹಿಪ್ಪೆ ಮಾಡುವ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದರೆ ಅದು ಪ್ರಶ್ನಾರ್ಹ. ಸಂಪಾದಕೀಯ ವಿಭಾಗದಲ್ಲಿ ಬಹುತೇಕ ಸಿಬ್ಬಂದಿ ಕೊರತೆ ಇದೆ ಎನ್ನಲಾಗುತ್ತಿದೆ.ಏರೇಳು ಜನ ಕೆಲಸ ಮಾಡುವ ಬ್ಯೂರೋದಲ್ಲಿ ಎರಡ್ಮೂರು ರಿಪೋರ್ಟರ್‌ ಗಳು ಕೆಲಸ ಮಾಡುತ್ತಿದ್ದಾರಂತೆ. ಬೆಳಗ್ಗೆ ಬಂದರೆ ಮುಗೀತು ಎಷ್ಟು ಗಂಟೆಗೆ ಅವರ ಕೆಲಸ ಮುಗಿಯುತ್ತೆ ಎನ್ನುವುದು ಗ್ಯಾರಂಟಿ ಇಲ್ಲವಂತೆ.ಇದರ ಬಗ್ಗೆ ಕೊತ ಕೊತ ಕುದಿಯುತ್ತಿದ್ದರೂ ಅದನ್ನು ಪ್ರಶ್ನಿಸುವಂಗಿಲ್ಲ..ಪ್ರಶ್ನೆ ಮಾಡಿದರೆ ಏನಾಗುತ್ತೆ ಎನ್ನುವುದು ಗೊತ್ತಿದೆ.ಎಲ್ಲದೇ ಬೇರೆ ಚಾನೆಲ್‌ ಗಳಲ್ಲೂ ಕೆಲಸ ಸಿಗದ ಸ್ಥಿತಿ ಇರುವುದರಿಂದ ಎಷ್ಟೇ ವೃತ್ತಿಸಂಬಂಧಿ ಕ್ರೌರ್ಯ-ದೌರ್ಜನ್ಯಗಳಾದ್ರೂ ಅದನ್ನು ಸಹಿಸಿಕೊಳ್ಳಬೇಕಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಮುಂದೆ ಅಳಲು ತೋಡಿಕೊಂಡಿದ್ದಾರೆ.ಇನ್ನೊಂದೆಡೆ ಸಾಕಷ್ಟು ರಿಪೋರ್ಟರ್ಸ್‌ ಹಾಗೂ ಆಂಕರ್ಸ್‌ ಗಳು ಕೂಡ ಬೇರೆ ಚಾನೆಲ್‌ ಗೆ ಹೋಗಿರುವುದರಿಂದ ಫೇಸ್‌ ಆಫ್‌ ದಿ ಚಾನೆಲ್‌ ಎನ್ನುವುದೇ ರಿಪಬ್ಲಿಕ್‌ ಗೆ ಇಲ್ಲವಾಗಿದೆಯಂತೆ.

ರಿಪಬ್ಲಿಕ್‌ ನಲ್ಲಿ ನಡೆಯದ ಶೋಭಾ ಜಾದು..?! :ಚಾನೆಲ್‌ ನಲ್ಲಿ ಏನೇ ಆದ್ರೂ ಅಟ್‌ ದಿ ಟೈಮ್‌ ಆಫ್‌ ಫೈನಲ್‌ ಡೇ ಅದರ ಹೊಣೆ ಹೊರಬೇಕಿರುವುದು ಚಾನೆಲ್‌ ನ ಮುಖ್ಯಸ್ಥರು..ಶೋಭಾ ಮಳವಳ್ಳಿ ಇದರ ಹೊಣೆ ಹೊರಬೇಕಾಗಿದೆ. ರಿಪಬ್ಲಿಕ್‌ ಕನ್ನಡದಲ್ಲಿ ಸಿಕ್ಕ ಅವಕಾಶಕ್ಕಾಗಿ ಸುವರ್ಣ ನ್ಯೂಸ್‌ ನಿಂದ ವಲಸೆ ಬಂದ ಶೋಭಾ ಇವತ್ತು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆನ್ನುವುದನ್ನು ಅವರ ಚಡಪಡಿಕೆ ಕಂಡ ಕೆಲವರೇ ಹೇಳಿಕೊಂಡಿದ್ದಾರೆ. ಶೋಭಾ ಒಳ್ಳೆಯ ಕೆಲಸಗಾರ್ತಿ..ಸುದ್ದಿಮನೆಯ ಸೂಕ್ಷ್ಮಗಳನ್ನು ಅರಿತ ಬದ್ಧತೆಯುಳ್ಳ ಪತ್ರಕರ್ತೆ..ಆದರೆ ರಿಪಬ್ಲಿಕ್‌ ಕನ್ನಡದಲ್ಲಿ ಏನೂ ಮಾಡಲಾಗುತ್ತಿಲ್ಲ ಎನ್ನುವುದೇ ವಿಪರ್ಯಾಸ. ಹೊಸ ತೆರನಾದ ಪ್ರಯೋಗಗಳಿಗೆ ಚಾನೆಲ್‌ ತೆರೆದುಕೊಳ್ಳಬೇಕಿದ್ದರೂ ಅಂಥ ಪ್ರಯತ್ನಗಳಾಗುತ್ತಿಲ್ಲ ಎನ್ನುವ ಬೇಸರವೂ ಅವರಲ್ಲಿದೆಯಂತೆ.

ಚಾನೆಲ್‌ ನ ಟಿಆರ್‌ ಪಿಯಲ್ಲಿ ಹೇಳಿಕೊಳ್ಳುವಂತ ಗಮನಾರ್ಹ ಬದಲಾವಣೆಗಳೇನೂ ಆಗುತ್ತಿಲ್ಲವಂತೆ. ತಾನೇ ಎಲ್ಲಾ..ತನಗಿಂತ ಯಾರೂ ಬುದ್ದಿವಂತರಿಲ್ಲ ಎನ್ನುವ ಅಹಂ ಮನಸ್ತಿತಿಯ ಕೆಲವರು ಅವರ ಹಿಡಿತಕ್ಕೆ ಸಿಕ್ಕುತ್ತಿಲ್ಲವಂತೆ. ಚಾನೆಲ್‌ ನ ಕೆಲವರಿಂದ ನಿರೀಕ್ಷಿತ ಮಟ್ಟದ ಸಹಕಾರ ಸಿಗುತ್ತಿಲ್ಲವಂತೆ.ಈ ಎಲ್ಲಾ ಕಾರಣಗಳಿಂದಾಗಿ ಶೋಭಾ ಏನೂ ಮಾಡದ ಸ್ಥಿತಿಯಲ್ಲಿದ್ದಾರಂತೆ.ಮ್ಯಾನೇಜ್ಮೆಂಟ್‌ ಕೂಡ ಅವರ ವಿಷಯದಲ್ಲಿ ತೃಪ್ತಿಕರವಾಗಿಲ್ಲ ಎನ್ನುವ ಮಾತಿದೆ.ದಿಢೀರ್‌ ಬೆಳವಣಿಗೆಗಳಲ್ಲಿ ಅವರನ್ನು ಬದಲಿಸಿದರೂ ಆಶ್ವರ್ಯವಿಲ್ಲವಂತೆ. ಒಂದು ವೇಳೆ ಹಾಗಾದಲ್ಲಿ, ಸುವರ್ಣ ನ್ಯೂಸ್‌ ನ ಸುದ್ದಿಗಳ ಆಯ್ಕೆ-ಪರಿಣಾಮಕಾರಿ ಪ್ರಸಾರ-ಮತ್ತು ಟಿಆರ್‌ ಪಿ ಹೆಚ್ಚಳದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ,ಶೋಭಾ  ರಿಪಬ್ಲಿಕ್‌ ಕನ್ನಡವನ್ನು ಬೇರೆ ಚಾನೆಲ್‌ ಗಳ ಪೈಪೋಟಿಯಲ್ಲಿ ಸ್ಪರ್ದಾತ್ಮಕಗೊಳಿಸುವಲ್ಲಿ ವಿಫಲವಾದರೆನ್ನುವ ಅಪವಾದವೇ ಸಾಕು, ಪತ್ರಿಕೋದ್ಯಮದಲ್ಲಿ ಅವರು ಮೂಲೆಗುಂಪಾಗಲು.ಇಂತದ್ದೊಂದು ಅಪಾಯದ ಮುನ್ಸೂಚನೆಗಳು ಖುದ್ದು ಅವರನ್ನೇ ಕಾಡುತ್ತಿದ್ದರೂ ಆಶ್ವರ್ಯವಿಲ್ಲ.

ಹೀಗೆ ಖುದ್ದು ಅರ್ನಾಬ್‌ ಬಂದು ಕೂತರೂ ರಿಪಬ್ಲಿಕ್‌ ಕನ್ನಡವನ್ನು ಸ್ಪರ್ದಾತ್ಮಕಗೊಳಿಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗಿನ ಸ್ಥಿತಿ ಚಾನೆಲ್‌ ಗೆ ಎದುರಾಗಿದೆ.ಏನೋ ಅಂದುಕೊಂಡು ಕನ್ನಡದಲ್ಲಿ ಆರಂಭಿಸಿ ದ ಚಾನೆಲ್‌ ನಿರೀಕ್ಷೆಯನ್ನೇ ಬುಡಮೇಲು ಮಾಡುತ್ತಿರುವುದು ಖುದ್ದು ಗೋಸ್ವಾಮಿ ಬಳಗವನ್ನೇ ವಿಚಲಿತಗೊಳಿಸಿದೆ.ಹೀಗೆಯೇ ಮುಂದುವರೆದರೆ ಚಾನೆಲ್‌ ಮುನ್ನಡೆಸಲಾಗದು..ಕ್ಲೋಸ್‌ ಮಾಡಬೇಕಾಗ್ತದೆ ಎನ್ನುವ ಚೇತಾವನಿ ಕೊಟ್ಟರೂ ಪ್ರಯೋಜನವಾಗಿಲ್ಲವಂತೆ. ನಿಜಕ್ಕೂ ಅಲ್ಲಾಗುತ್ತಿರುವ ಸಮಸ್ಯೆ ಏನು ಎನ್ನುವುದೇ ಗೊತ್ತಾಗುತ್ತಿಲ್ಲವಂತೆ..ಆದರೆ ರಿಪಬ್ಲಿಕ್‌ ಕನ್ನಡದ ಭವಿಷ್ಯ ಕರ್ನಾಟಕದ ಸುದ್ದಿ ಮಾದ್ಯಮ ಕ್ಷೇತ್ರದಲ್ಲಿ ಡೋಲಾಯಮಾನವಾಗಿರುವುದಂತೂ ಸತ್ಯ..ಅನಿಶ್ಚಿತತೆಯ ಕಾರ್ಮೋಡ ಸರಿದ್ರೆ ಅದನ್ನೇ ನಂ ಬಿಕೊಂಡಿರುವ ನೂರಾರು ಮಾದ್ಯಮಮಿತ್ರರ ಜೀವನಗಳು ಹಸನಾಗುತ್ತದೆ..


Political News

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

Scroll to Top