advertise here

Search

ಸಿಬಿಐ ತನಿಖೆ ಭೀತಿ: ಕೋರಮಂಗಲದಲ್ಲಿ ನಿವೃತ್ತ ಅಧಿಕಾರಿ ಪರಮೇಶ್ವರಯ್ಯ ಆತ್ಮಹತ್ಯೆ!

retired bbmp engineer suicide

ಬೆಂಗಳೂರು: ರಾಜಧಾನಿಯ ಐಷಾರಾಮಿ ಬಡಾವಣೆ ಕೋರಮಂಗಲದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಬಿಬಿಎಂಪಿಯ ಮಹದೇವಪುರ ವಲಯದ ನಿವೃತ್ತ ಮುಖ್ಯ ಎಂಜಿನಿಯರ್ ಪರಮೇಶ್ವರಯ್ಯ (63) ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಉದ್ಯಮಿ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ನಡೆದ ಈ ಘಟನೆ ರಾಜಧಾನಿಯಲ್ಲಿ ಸಂಚಲನ ಮೂಡಿಸಿದೆ.

ಈ ಸಾವಿನ ಹಿಂದೆ ಐದು ವರ್ಷಗಳ ಹಿಂದಿನ ಭ್ರಷ್ಟಾಚಾರದ ನಂಟಿದೆ. 2021ರಲ್ಲಿ ಬಿಬಿಎಂಪಿ ಗುತ್ತಿಗೆದಾರ ಅನಿಲ್ ಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ (IT) ದಾಳಿ ನಡೆಸಿತ್ತು. ಈ ವೇಳೆ ಪತ್ತೆಯಾದ ಒಂದು ಸೂಟ್‌ಕೇಸ್‌ನಲ್ಲಿ ಮೂರು ಬ್ಯಾಂಕ್ ಲಾಕರ್ ಕೀಗಳು, 1.35 ಲಕ್ಷ ನಗದು ಹಾಗೂ ಸುಮಾರು 276 ಗ್ರಾಂ ಚಿನ್ನಾಭರಣ ದೊರೆತಿತ್ತು. ವಿಚಾರಣೆ ವೇಳೆ ಅನಿಲ್ ಕುಮಾರ್, ಈ ಎಲ್ಲಾ ಸ್ವತ್ತುಗಳು ಪರಮೇಶ್ವರಯ್ಯ ಅವರಿಗೆ ಸೇರಿದ್ದು ಎಂದು ಸ್ಫೋಟಕ ಮಾಹಿತಿ ನೀಡಿದ್ದರು.

ಇದರ ಬೆನ್ನಲ್ಲೇ 2021ರ ಡಿಸೆಂಬರ್‌ನಲ್ಲಿ ಪರಮೇಶ್ವರಯ್ಯ ಅವರ ನಿವಾಸದ ಮೇಲೂ ಐಟಿ ದಾಳಿ ನಡೆದಿತ್ತು. ಆಗ ಪತ್ತೆಯಾದ ಬ್ಯಾಂಕ್ ಲಾಕರ್‌ಗಳಿಂದ ಬರೋಬ್ಬರಿ 86.35 ಲಕ್ಷ ನಗದು ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಆಘಾತಕಾರಿ ವಿಷಯವೆಂದರೆ, ಲಾಕರ್ ಬೇರೆಯವರ ಹೆಸರಲ್ಲಿದ್ದರೂ ಅದರ ಕೀ ಮಾತ್ರ ಪರಮೇಶ್ವರಯ್ಯ ಅವರ ಪತ್ನಿಯ ಬಳಿ ಇತ್ತು. ಈ ಹಣದ ಮೂಲದ ಬಗ್ಗೆ ವಿವರ ನೀಡಲು ಅವರು ವಿಫಲರಾಗಿದ್ದರು.

ALSO READ :  NCERT ಪಠ್ಯ ವಿವಾದ: ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಬೇಷರತ್ ಕ್ಷಮೆ

ಆಸ್ತಿ ಮೌಲ್ಯದಲ್ಲಿ ಭಾರಿ ಏರಿಕೆ:

ತನಿಖೆಯ ವೇಳೆ ಪರಮೇಶ್ವರಯ್ಯ ಅವರ ಆಸ್ತಿ ಹತ್ತು ವರ್ಷಗಳಲ್ಲಿ ಅಚ್ಚರಿಯ ರೀತಿಯಲ್ಲಿ ವೃದ್ಧಿಯಾಗಿರುವುದು ಕಂಡುಬಂದಿದೆ. 2012ರಲ್ಲಿ ಕೇವಲ 29.64 ಲಕ್ಷ ರೂಪಾಯಿ ಇದ್ದ ಇವರ ಆಸ್ತಿ ಮೌಲ್ಯ, 2021ರ ವೇಳೆಗೆ 5.85 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಬೆಂಗಳೂರು, ತುಮಕೂರು ಸೇರಿದಂತೆ ಕೋರಮಂಗಲದಂತಹ ಪ್ರದೇಶಗಳಲ್ಲಿ ದುಬಾರಿ ಸೈಟ್, ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳನ್ನು ಇವರು ಹೊಂದಿದ್ದರು.

ಇದನ್ನೂ ಓದಿ | ಶಿವಮೊಗ್ಗದ ಬಾಲಕ ಸಂಕೇತ್ ಮರ್ಡರ್-ಕ್ರಿಕೆಟ್ ಕಿರಿಕ್ಕೋ, ಜಾತಿ ದ್ವೇಷವೋ ?

ಈ ಅಕ್ರಮ ಆಸ್ತಿ ಗಳಿಕೆ ಸಂಬಂಧ ಜಾರಿ ನಿರ್ದೇಶನಾಲಯ (ED) ಕಳೆದ 20 ದಿನಗಳ ಹಿಂದಷ್ಟೇ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಅಲ್ಲದೆ, ಜನವರಿ 30, 2026 ರಂದು ಸಿಬಿಐ ಎಸಿಬಿ ವಿಭಾಗದಲ್ಲಿ ಭ್ರಷ್ಟಾಚಾರದಡಿ ಎಫ್‌ಐಆರ್ (FIR) ಕೂಡ ದಾಖಲಾಗಿತ್ತು. ಫೆಬ್ರವರಿ 25ರಂದು ಅಂದರೆ ಆತ್ಮಹತ್ಯೆ ಮಾಡಿಕೊಂಡ ದಿನವೇ ಅವರು ಶಾಂತಿನಗರದ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕಿತ್ತು. ಈ ಎಲ್ಲಾ ಕಾನೂನು ಸಂಕಷ್ಟಗಳು ಮತ್ತು ತನಿಖಾ ಸಂಸ್ಥೆಗಳ ಪ್ರಶ್ನೆಗಳಿಗೆ ಹೆದರಿ, ತೀವ್ರ ಖಿನ್ನತೆಗೆ ಒಳಗಾಗಿದ್ದ ಅವರು ಈ ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯ ಕೋರಮಂಗಲ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಮರಣ ಪತ್ರವೊಂದನ್ನು ವಶಪಡಿಸಿಕೊಂಡಿದ್ದಾರೆ.


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top