advertise here

Search

“ಸುವರ್ಣ ನ್ಯೂಸ್‌” ನಲ್ಲಿ ಬದಲಾಗ್ತಿದೆಯೇ “ಹೊಣೆಗಾರಿಕೆ”ಯ ಹೆಗಲು..! ಅಜಿತ್‌ ಹನುಮಕ್ಕನವರ್‌ ಸ್ಥಾನಕ್ಕೆ ನೂತನ “ಸಾರಥಿ”…!


ಏಷ್ಯಾ ನೆಟ್‌ ಸುದ್ದಿ ಸಂಸ್ಥೆ(ASIANETNEWS)ಯ ಹೆಮ್ಮೆಯ ಕನ್ನಡದ ವಾಹಿನಿ ಸುವರ್ಣ ನ್ಯೂಸ್‌ (SUVARNA NEWS CHANNEL)ನಲ್ಲಿ ಬದಲಾವಣೆ ಗಾಳಿ ಜೋರಾಗಿ ಬೀಸಲಾರಂಭಿಸಿದೆಯೇ.?  ಬದಲಾವಣೆಯ ಹಿನ್ನಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಇಂತದ್ದೊಂದು ಅನುಮಾನ ಮೂಡಿಸುತ್ತವೆ..ಬಹುಷಃ 2026ರ ಹೊಸ ವರ್ಷವನ್ನು ಹೊಸ ಮುಖಗಳ ಮೂಲಕವೇ ಆರಂಭಿಸಲು ಚಾನೆಲ್‌ ನ ಆಡಳಿತ ನಿರ್ದರಿಸಿದಂತಿದೆ ಎನ್ನುವ ಮಾತುಗಳು ಅಲ್ಲಿಂದಲೇ ಕೇಳಿಬರಲಾರಂಭಿಸಿವೆ..ನೂತನ ಸಾರಥಿಯ ಹುಡುಕಾಟ ಬಹುತೇಕ ಮುಗಿದಿದೆ ಎನ್ನಲಾಗುತ್ತಿದ್ದು ಎಲ್ಲಾ ನಿರೀಕ್ಷೆಯಂತಾದ್ರೆ  ಸುದ್ದಿ ಸಂಪಾದಕ ಅಜಿತ್‌ ಹನುಮಕ್ಕನವರ್‌( AJITH HANUMAKKANAVAR) ಸ್ಥಾನದಲ್ಲಿ ಪಲ್ಲಟವಾದ್ರೂ ಆಶ್ಚರ್ಯವಿಲ್ಲವಂತೆ.

ಸುವರ್ಣ ನ್ಯೂಸ್‌ ಚಾನೆಲ್‌  ಬಗ್ಗೆ ಮತ್ತೆ ಬರೆಯಬೇಕಿದೆ.ಸುದ್ದಿ ಮನೆಯೊಳಗೆ ನಡೆಯುತ್ತಿದೆ ಎನ್ನಲಾದ ಭಾರೀ ಪ್ರಮಾಣದ ಬದಲಾವಣೆಗಳ ಕಾರಣಕ್ಕೆ ಮತ್ತೊಮ್ಮೆ ಬರೆಯಬೇಕಾಗಿಬಂದಿದೆಯಷ್ಟೆ. ಇತರೆ ಸುದ್ದಿ ಚಾನೆಲ್‌ ಗಳ ಪೈಪೋಟಿಯಲ್ಲಿ ತನಗಿಂತ ಭಾರೀ ಹಿಂದಿದ್ದ ಚಾನೆಲ್‌ ಗಳೇ ಇವತ್ತು ಸುವರ್ಣ ನ್ಯೂಸ್‌ ನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವುದು  ಮಾತೃಸಂಸ್ಥೆ ಏಷ್ಯಾ ನೆಟ್‌ ಮುಖ್ಯಸ್ಥ ಹಾಗೂ ಮಾಲೀಕರಾದ ಮಾದ್ಯಮ ದಿಗ್ಗಜ ರಾಜೀವ್‌ ಚಂದ್ರಶೇಖರ್‌ ನ್ನು ತೀವ್ರ ನಿರಾಶೆ-ಆಕ್ರೋಶಕ್ಕೆ ಈಡುಮಾಡಿದೆ ಎನ್ನುವ ಮಾತುಗಳಿವೆ.

ಟಿಆರ್‌ ಪಿ(TRP-TELERATINGPOINT)ಯಲ್ಲಿ ಹಿಂದೆ ಉಳಿದಿರುವ ಜತೆಗೆ ದಿನಕಳೆದಂತೆಲ್ಲಾ “ಬಿಳಿಯಾನೆ” ಯಂತಾಗುತ್ತಿರುವ ಸಂಸ್ಥೆಯ ನಿರ್ವಹಣೆಯೂ ಕಷ್ಟವಾಗುತ್ತಿದೆ ಎನ್ನುವ ಮಾತುಗಳಿವೆ( ಯಾವುದೇ ಮಾಲೀಕ ಬಿಲೇನಿಯರ್‌ ಆಗಿದ್ದರೂ ಒಂದು ಹಂತದವರೆಗೆ ಮಾತ್ರ ಹೊರೆಯನ್ನು ಸಹಿಸಿಕೊಳ್ಳಬಲ್ಲ. ಸುವರ್ಣ ಚಾನೆಲ್‌ ಪರಿಸ್ತಿತಿಯೂ ಹಾಗೆ ಇದೆಯಂತೆ ). ಜತೆಗೆ ಸುದ್ದಿ ಬಿತ್ತರಿಸುವ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ತಲೆ ದೋರುತ್ತಿರುವ ಸಮಸ್ಯೆ-ಗೊಂದಲ-ಪಕ್ಷಪಾತದಂಥ ಅಂಶಗಳಿಂದಲೂ ಆಡಳಿತ ಮಂಡಳಿ ವಿಚಲಿತವಾಗಿದೆಯಂತೆ.ಇದೆಲ್ಲವನ್ನು ಅವಲೋಕಿಸಿದ ಮೇಲೆಯೇ ಮ್ಯಾನೇಜ್ಮೆಂಟ್‌ ತೆಗೆದುಕೊಂಡ ನಿರ್ಣಯ ಸಮಗ್ರ ಬದಲಾವಣೆ ಅಂತೆ.

ಏಷಿಯಾ ನೆಟ್‌ ಉಸ್ತುವಾರಿ ಹೊತ್ತಿರುವ ಕೇರಳಾದ ಟೀಮ್‌ ಸುವರ್ಣ ನ್ಯೂಸ್‌ ನಲ್ಲಿ ಬದಲಾವಣಗಳಾಗಲೇಬೇಕು ಎನ್ನುವ ನಿಟ್ಟಿನಲ್ಲಿ ರಂಗಪ್ರವೇಶ ಮಾಡಿದೆಯಂತೆ.ಇದೇ ವುವಸ್ಥೆ ಮುಂದುವರೆದುಕೊಂಡು ಹೋದರೆ ಸಮಸ್ಯೆ ಗ್ಯಾರಂಟಿ ಎಂಬ ಆಲೋಚನೆಯಿಂದ ಆಗಬೇಕಾದ ಬದಲಾವಣೆಗಳಿಗೆ ಓಂಕಾರ ಹಾಡಲು ಶುರುಮಾಡಿದೆಯಂತೆ.ಅದರ ಪ್ರಕಾರ ಈಗಾಗಲೇ ಒಂದಷ್ಟು ಬದಲಾವಣೆ ಆಗಿದೆ.ಆದರೆ ಆಗಲೇಬೇಕಿರುವ ಬಹುದೊಡ್ಡ ಬದಲಾವಣೆಗೆ ಶೀಘ್ರವೇ ಕೈ ಹಾಕಲಿದೆ ಎನ್ನುವುದು ವರ್ತಮಾನ.

ಸುದ್ದಿ ಸಂಪಾದಕರ ಬದಲಾವಣೆ ಆಗಲೇಬೇಕೆನ್ನುವುದು ಕೇರಳಾ ಮ್ಯಾನೇಜ್ಮೆಂಟ್‌ ನ ಕಠಿಣ ನಿರ್ದಾರ ಎನ್ನಲಾಗುತ್ತಿದೆ.ಇದಕ್ಕೆ ಸಾಕಷ್ಟು ಕಾರಣಗಳೂ ಇವೆ. ಅಜಿತ್‌ ಹನುಮಕ್ಕನವರ್‌ ಅವರ ಸಿಗ್ನೇಚರ್‌ ಸ್ಲಾಟ್‌ ನ್ಯೂಸ್‌ ಅವರ್‌ ನ್ನು ಬಿಟ್ಟರೆ ಬೇರೆ ಯಾವುದೇ ಕಾರ್ಯಕ್ರಮದ ಬಗ್ಗೆಯೂ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುವುದು ಮೊದಲ ಆಪಾದನೆ.ದಿನೇ ದಿನೇ ಕುಸಿದು ಹೋಗುತ್ತಿರುವ ನ್ಯೂಸ್‌ ಕ್ವಾಲಿಟಿ ಸುಧಾರಿಸುವ ಕೆಲಸ ಮಾಡುತ್ತಿಲ್ಲ.ಇಳಿಮುಖವಾಗುತ್ತಿರುವ ಟಿಆರ್‌ ಪಿಯನ್ನು ಏರುಮುಖಗೊಳಿಸುವ ಸಣ್ಣ ಪ್ರಯತ್ನಗಳೂ ನಡೆಯುತ್ತಿಲ್ಲ ಎನ್ನುವುದು ಅವರ ವಿರುದ್ದದ ಗಂಭೀರ ಆಪಾದನೆ.

ಸುದ್ದಿಯ ಆಯ್ಕೆ ಮತ್ತು ನಿರೂಪಣೆ ವಿಚಾರದಲ್ಲಿ ನಿಪಕ್ಷಪಾತವಾಗಿರಬೇಕಿರುವುದು ಸುದ್ದಿ ಸಂಪಾದಕನ ಬದ್ಧತೆ.ಆದರೆ ಅಜಿತ್‌ ಆ ವಿಚಾರದಲ್ಲಿ ಸಂಪೂರ್ಣ ಎಡವಿದ್ದಾರೆ.ಅದು ಪ್ರಜ್ಞಾಪೂರ್ವಕವಾಗಿ ಅವರಿಂದಾಗುತ್ತಿರುವ ಪ್ರಮಾದವೆನ್ನುವುದನ್ನು , ಮ್ಯಾನೇಜ್ಮೆಂಟ್‌ ಕೆಲವು ಮೂಲಗಳಿಂದ ಪತ್ತೆ ಮಾಡಿದೆಯಂತೆ.ಧರ್ಮಸ್ಥಳದ ವಿಚಾರದಲ್ಲಿ ತಮ್ಮ ನಿಲುವು-ಧೋರಣೆಯನ್ನು ಬಲವಂತವಾಗಿ ಹೇರಲು ಪ್ರಯತ್ನಿಸಿದರೆನ್ನುವುದು ಕೂಡ ಅವರ ಮೇಲಿರುವ ಆಪಾದನೆಯಂತೆ. ಇದರಿಂದಾಗಿ ಬಹುದೊಡ್ಡ ಸುದ್ದಿ ವೀಕ್ಷಕರನ್ನು ಕಳೆದುಕೊಂಡಿತೆನ್ನುವುದು ಕೂಡ ಮ್ಯಾನೇಜ್ಮೆಂಟ್ ಗಮನಕ್ಕೆ ಬಂದಿದೆಯಂತೆ.

ಆಳುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಜತೆ ಸುದ್ದಿ ವಾಹಿನಿಗಳಿಗೆ ಏನೇ ವ್ಯತ್ಯಾಸಗಳಿದ್ದರೂ ಕಮರ್ಷಿಯಲ್‌ ( ಜಾಹಿರಾತು)ಕೊಡುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುವಂತ ಬೆಳವಣಿಗಳಿರುವುದಿಲ್ಲ.ಆದರೆ ಸುವರ್ಣ ನ್ಯೂಸ್‌ ನ ಇತಿಹಾಸದಲ್ಲಿ ಒಂದಷ್ಟು ಅವಧಿಗೆ ರಾಜಕೀಯ ಪಕ್ಷ ಮತ್ತು ಸರ್ಕಾರದಿಂದ ಬರುವ ಜಾಹಿರಾತು ವರಮಾನವೇ ನಿಂತುಹೋಗಿದ್ದು ಅಜಿತ್‌ ಅವರ ಕಾಲಘಟ್ಟದಲ್ಲಿ ಎನ್ನುವ ಆಪಾದನೆಯಿದೆಯಂತೆ.ಇದು ಮ್ಯಾನೇಜ್ಮೆಂಟ್‌ ನ ತಾಳ್ಮೆಯನ್ನು ಕೆಡಿಸಿಬಿಟ್ಟಿದೆಯಂತೆ.ಸರ್ಕಾರದ ವಿಚಾರದಲ್ಲೂ ಕೂಡ ವಿರೋಧಭಾಸದ ದೃಷ್ಟಿಯಲ್ಲೇ  ಸುದ್ದಿ ಪ್ರಸಾರವಾಗುವಂಥ ವ್ಯವಸ್ಥೆಯೊಂದನ್ನು ಸೃಷ್ಟಿಸಿಬಿಟ್ಟಿದ್ದಾರಂತೆ..ಹಾಗಾಗಿ ಅವರ ವಿರುದ್ಧ ಸಾಕಷ್ಟು ದೂರುಗಳು ರಾಜೀವ್‌ ಚಂದ್ರಶೇಖರ್‌ ಅವರ ಕಿವಿಗೂ ಬಿದ್ದಿವೆಯಂತೆ.

ALSO READ :  "ಅಧಿಕಾರಿ"ಗಳು ಕೆಲಸ ಬಿಟ್ಟು ರಸ್ತೆಗಿಳಿದ್ರೆ ಮಾತ್ರ "ಇವ್ರು" ಬಸ್ ಓಡಿಸೊಲ್ಲವಂತೆ!

ಅಜಿತ್‌ ಮನಸ್ಥಿತಿ ಬಹುತೇಕ  ಬಿಜೆಪಿ ಪರವಾಗಿದೆ ಎನ್ನುವುದು ಕೂಡ ಎಲ್ಲರಿಗೂ ಗೊತ್ತಿರುವುದೇ..ಅದು ವೈಯುಕ್ತಿಕ ನೆಲೆಗಟ್ಟಿನಲ್ಲಿದ್ದರೆ ಒಳ್ಳೇದಿತ್ತು.ಆದರೆ ಅದನ್ನು ಸುವರ್ಣ ವಾಹಿನಿಯ ತೆರೆಯಲ್ಲಿ ಬಹಿರಂಗವಾಗಿಯೇ ಜಗಜ್ಜಾಹೀರಾಗುವಂತೆ ಮಾಡುತ್ತಿದ್ದಾರೆ ಎನ್ನುವ ಬಹುದೊಡ್ಡ ಆಪಾದನೆಯಿದೆಯಂತೆ.ಇದೇ ವ್ಯವಸ್ಥೆಯಲ್ಲಿ ಬಹಳಷ್ಟು ಅವಧಿಗೆ ಮುಂದುವರೆಯಲು ಸಾಧ್ಯವಿಲ್ಲ..ಹಾಗಾಗಿ ಅಜಿತ್‌ ಅವರನ್ನು ಸುದ್ದಿ ಸಂಪಾದಕ ಸ್ಥಾನದಿಂದ ಕೆಳಗಿಳಿಸಿ ಅವರ ಸ್ಥಾನದಲ್ಲಿ ಬೇರೆಯವರನ್ನು ಪ್ರತಿಷ್ಟಾಪಿಸುವುದು ಸೂಕ್ತ ಎನ್ನುವ ನಿರ್ದಾರಕ್ಕೆ ಮ್ಯಾನೇಜ್ಮೆಂಟ್‌ ಬಂದಿದೆ ಎನ್ನುವ ಮಾತು ಸುವರ್ಣದ ಸುದ್ದಿಮನೆಯಿಂದಲೇ ಪಸರ್‌ ಆಗಿದೆ. ಈ ಬೆಳವಣಿಗೆಗಳಿಂದಾಗಿ ಅಜಿತ್‌ ಹನುಮಕ್ಕನವರ್‌ ಅವರ ಸ್ಥಾನಕ್ಕೆ ಬಹುದೊಡ್ಡ ಕುತ್ತು ಬಂದಿರುವುದಂತೂ ಸತ್ಯ ಅಂತೆ.ಸಧ್ಯಕ್ಕೆ ಅವರಿಗೆ ನೀಡಿದ್ದ ಎಲ್ಲಾ ಜವಾಬ್ದಾರಿಗಳನ್ನು ತಾತ್ಕಾಲಿಕವಾಗಿ ಕನ್ನಡ ಪ್ರಭ ಸಂಪಾದಕ ರವಿ ಹೆಗ್ಡೆ ಅವರಿಗೆ ನೀಡಲು ನಿರ್ದರಿಸಲಾಗಿದೆಯಂತೆ. ಅಜಿತ್‌ ಅವರ ಸ್ಥಾನಮಾನ ಏನಾಗಲಿದೆ ಎನ್ನುವುದು ಇನ್ನೂ ನಿರ್ದರಿತವಾಗಿಲ್ಲವಂತೆ.

ಅಜಿತ್‌ ಸ್ಥಾನಕ್ಕೆ ಇನ್ನ್ಯಾರು,.? ರೇಸ್‌ ನಲ್ಲಿ ಯಾರ್ಯಾರು..?ಅಜಿತ್‌ ಹನುಮಕ್ಕನವರ್‌ ಅವರ ಸ್ಥಾನಪಲ್ಲಟವಾದರೆ  ಸುವರ್ಣದ ಎಲ್ಲಾ ಸಮಸ್ಯೆ-ಗೊಂದಲ ಬಗೆಹರಿದುಬಿಡುತ್ತದಾ..? ಖಂಡಿತಾ ಇಲ್ಲ.ವೈಯುಕ್ತಿಕವಾಗಿ ಅಜಿತ್‌ ಏನೇ ಇದ್ದರೂ ಮಾತು-ನಿರೂಪಣೆ  ವಿಚಾರದಲ್ಲಿ ಅದ್ಭುತ ಎನ್ನುವುದರಲ್ಲಿ ಅನುಮಾನವೇ ಇಲ್ಲ.ಅಜಿತ್‌ ಅವರನ್ನು ಕೆಳಕ್ಕಿಳಿಸಿದ್ರೆ ಸುವರ್ಣದ ಸುದ್ದಿಯ ಗುಣಮಟ್ಟ ಹಾಗೂ  ಟಿಆರ್‌ಪಿ  ಎರಡನ್ನೂ ಸುಧಾರಿಸಬಲ್ಲ ಇನ್ನ್ಯಾರನ್ನು ತರಬಹುದು ಎನ್ನುವುದು ಮ್ಯಾನೇಜ್ಮೆಂಟ್‌ ಮುಂದಿರುವ ದೊಡ್ಡ ಸವಾಲು.ಯಾರನ್ನೇ ತಂದರೂ ಎಲ್ಲವೂ ದಿಢೀರ್‌ ಸುಧಾರಣೆ ಆಗುತ್ತದೆ ಎಂಬ ನಿರೀಕ್ಷೆ ಮೂರ್ಖತನ ಎನ್ನುವುದು ಮ್ಯಾನೇಜ್ಮೆಂಟ್‌ ಗೂ ಗೊತ್ತಿದೆ.ಹಾಗಾಗಿ ಫೇಸ್‌ ವ್ಯಾಲ್ಯೂ ಇರುವ ಒಬ್ಬ ಸಮರ್ಥನ(ಳ)ನ್ನು ತಂದು ಕೂರಿಸುವುದು ಅಂದುಕೊಂಡಷ್ಟು ಸಲೀಸಲ್ಲ ಎನ್ನುವುದು ಅವರಿಗೂ ಗೊತ್ತಿರುವುದರಿಂದ ಈಗಾಗಲೇ ಒಂದಷ್ಟು ಘಟಾನುಘಟಿಗಳನ್ನು ಸಂಪರ್ಕಿಸಲಾಗಿದೆ.ಅವರೊಂದಿಗೆ ಹಲವು ಸುತ್ತಿನ ಮಾತುಕತೆ ಕೂಡ ನಡೆದಿದೆಯಂತೆ.

ಆ ಮಾತುಕತೆಯಲ್ಲಿ ಬಹುತೇಕ ಫೈನಲ್‌ ಆದವರ ಹೆಸರುಗಳು ಫ್ಲ್ಯಾಶ್‌ ನ್ಯೂಸ್‌ ಗಮನಕ್ಕೆ ಇದ್ದರೂ ಅದನ್ನು ಕೆಲವು ಕಾರಣಗಳಿಂದ ರಿವೀಲ್‌ ಮಾಡುತ್ತಿಲ್ಲ..ಆದರೆ ಮ್ಯಾನೇಜ್ಮೆಂಟ್‌ ಗೆ ಸೂಕ್ತ ಹಾಗೂ ಅರ್ಹ ಎನಿಸಿದ ಒಬ್ಬ ಹಿರಿಯ ಪತ್ರಕರ್ತರನ್ನು ಸುದ್ದಿ ಸಂಪಾದಕರ ಸ್ಥಾನಕ್ಕೆ ಅಂತಿಮಗೊಳಿಸಿದೆ ಎನ್ನುವ ಮಾತಿದೆ.ಅವರೇ ಇಂಗ್ಲೀಷ್‌ ಚಾನೆಲ್‌ ಗಳಲ್ಲಿ ಕೆಲಸ ಮಾಡಿ,ಕನ್ನಡಕ್ಕೂ ಕಾಲಿಟ್ಟು ಅಲ್ಲಿಯೂ ಮಿಂಚಿ,ಒಂದು ಚಾನೆಲ್‌ ನ ಮುಖ್ಯಸ್ಥರಾಗಿಯೂ ಕೆಲಸ ಮಾಡಿ ಅದಕ್ಕೆ ಒಂದು ಚಾರ್ಮ್‌ ತಂದುಕೊಟ್ಟ ಹಿರಿಯ ಉತ್ತರ ಕರ್ನಾಟಕ ಮೂಲದ ಪತ್ರಕರ್ತ ಎನ್ನಲಾಗುತ್ತಿದೆ.ಹಾಗಾಗಿ ಅವರೇ ಅಜಿತ್‌ ಅವರ ಸ್ಥಾನಕ್ಕೆ ಅಂತಿಮವಾದರೂ ಆಶ್ಚರ್ಯವಿಲ್ಲವಂತೆ.ಈ ನಿಟ್ಟಿನಲ್ಲಿ ಅವರ ಜತೆಗೆ ಅಂತಿಮ  ಮಾತುಕತೆ ಕೂಡ ಮುಗಿದಿದೆ ಎನ್ನಲಾಗುತ್ತಿದೆ.ಅನೌಪಚಾರಿಕವಾಗಿ ಎಲ್ಲಾ ಪ್ರಕ್ರಿಯೆ ಮುಗಿದಿದ್ದು ಎಲ್ಲವೂ ನಿರೀಕ್ಷೆಯಂತಾದ್ರೆ ಶೀಘ್ರವೇ ಆ ಘೋಷಣೆಯಾಗಿ ಅಧಿಕಾರ ವಹಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

ಅದೇನೇ ಆಗಲಿ  ಸುವರ್ಣ ನ್ಯೂಸ್‌ ನಲ್ಲಿ ನಡೆಯುತ್ತಿದೆ ಎನ್ನಲಾದ ಬೆಳವಣಿಗೆಗಳನ್ನು ಗಮನಿಸಿದಾಗ ಅಜಿತ್‌ ಹನುಮಕ್ಕನವರ್‌ ಯುಗ ಬಹುತೇಕ ಮುಗಿಯುವ ಸಾಧ್ಯತೆಗಳು ಗೋಚರಿಸುತ್ತವೆ.ಒಂದೊಮ್ಮೆ ಹಾಗಾದರೆ ಅಜಿತ್‌ ಅವರ ಮುಂದಿನ ಹಾದಿ ಏನಾಗಲಿದೆ ಎನ್ನುವುದು ಕೂಡ ಅಚ್ಚರಿ ಮೂಡಿಸಿದೆಯಂತೆ.. ಪಾತಾಳ ಮುಖಿಯಾಗಿರುವ ಅರ್ನಾಬ್‌  ಗೋಸ್ವಾಮಿ ಅವರ ರಿಪಬ್ಲಿಕ್‌ ಕನ್ನಡದತ್ತ ತೆರಳುತ್ತಾರಾ..? ಬೇರೆ ಚಾನೆಲ್‌ ಗಳತ್ತ ಮುಖ ಮಾಡ್ತಾರೋ..? ಅಥವಾ ಅವರಿಗೆ ಇರುವ ಪರಿಚಯಸ್ಥರ ಮೂಲಕ ಬಂಡವಾಳ ಹಾಕಿಸಿ ತಮ್ಮದೇ ಚಾನೆಲ್‌  ಮಾಡುತ್ತಾರಾ..? ಗೊತ್ತಿಲ್ಲ..ಆದರೆ ಒಂದಂತೂ ಸತ್ಯ,  ಅವರ ಸ್ಥಾನ ತೆರವಾದರೆ ಅವರ ಸ್ಥಾನಕ್ಕೆ ಮುಂಬರುವವರಿಗೆ ಸಾಲು ಸಾಲು ಸವಾಲುಗಳಂತೂ ಕಟ್ಟಿಟ್ಟ ಬುತ್ತಿ. ಅದರಲ್ಲಿ ಮೊದಲನೆಯದು ಸುವರ್ಣಕ್ಕೆ  ಗತವೈಭವ ಮರುಕಳಿಸಿಕೊಡುವುದು..ಅದು  ಅಂದುಕೊಂಡಷ್ಟಂತೂ  ಸಲೀಸು ಅಲ್ಲವೇ ಅಲ್ಲ..ಹಾಗಾಗಿ ಯಾರೇ ಬಂದರೂ ಅದು ಮುಳ್ಳಿನ ಆಸನವಾಗಿ ಕಾಡೋದಂತೂ ಸತ್ಯ.


Political News

BDA BIG SCAM: 524 ಕೋಟಿ ಬಿಡಿಎ ಅಕ್ರಮ:ತನಿಖೆಗೆ ಕ್ಯಾಪ್ಟನ್ ಮಣಿವಣ್ಣನ್ ರಿಂದ ಸಮಿತಿ ರಚನೆ, ಅಧಿಕಾರಿಗಳಿಗೆ “ಢವ ಢವ”..

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

Scroll to Top