advertise here

Search

“ಅರ್ಹ”ರನ್ನು ಕಡೆಗಣಿಸ್ತಾ ಚಂದನವನ ಕ್ರಿಟಿಕ್‌ ಅವಾರ್ಡ್ಸ್‌?!


ಚಂದನವನದಲ್ಲಿ ನೀಡಲಾಗುವ ವಿಮರ್ಷಕರ ಪ್ರಶಸ್ತಿಗೆ ವಿವಾದದ ಕಳಂಕ ತಟ್ಟಿದಂತಿದೆ. ಚಿತ್ರರಂಗದ ವಿದ್ಯಾಮಾನಗಳನ್ನು ದಶಕಗಳಿಂದಲೂ ಗಮನಿಸುತ್ತಾ,ಅದರ ಒಳಹೊರಗನ್ನು ನೇರ-ನಿಷ್ಟೂರ-ತೀಕ್ಷ್ಣವಾಗಿ  ವರದಿ ಮಾಡುತ್ತಿದ್ದ ಬಹುತೇಕ ಹಿರಿಯ ಸಿನಿ ಪತ್ರಕರ್ತರನ್ನೇ ಪಕ್ಕ ಕ್ಕಿಟ್ಟು ಆಯ್ದ ಕೆಲವರೇ ಪ್ರಶಸ್ತಿ ಆಯ್ಕೆ- ಪ್ರಧಾನ ಮಾಡಿ ಮುಗಿಸಿದ್ದಾರೆನ್ನುವ ಅಸಮಾಧಾನ ಸ್ಯಾಂಡಲ್ವುಡ್‌ ನಲ್ಲಿ  ಹೊಗೆಯಾಡತೊಡಗಿದೆ. ಚಂದನವನದ ಸಿನಿ ಪತ್ರಕರ್ತರ ಒಳಗೆ ಇಷ್ಟು ದಿನ ಕುದಿಯುತ್ತಿದ್ದ ಬಂಡಾಯ-ಮುನಿಸು-ವ್ಯತ್ಯಾಸಗಳು ಅದ್ಹೇಕೋ ಸ್ಪೋಟಗೊಳ್ಳುವ ಲಕ್ಷಣ ಗೋಚರಿಸುವಂತಿದೆ.

ಹೌದು..ಚಂದನವನದಲ್ಲಿ ಸಿನಿ ಪತ್ರಕರ್ತರೇ ಒಗ್ಗೂಡಿ,ಪ್ರತಿಭೆ-ಸಾಮ ರ್ಥ್ಯ ವುಳ್ಳ ಕಲಾವಿದರು-ತಂತ್ರಜ್ಞರಿಗೆ  ತೂಗಿ ಅಳೆದು ನೀಡುತ್ತಾ ಬಂದಿ ದ್ದ ಚಂದನವನ ಕ್ರಿಟಿಕ್‌ ಅವಾರ್ಡ್ಸ್‌ ಅಂದರೆ “ವಿಮರ್ಷಕರ ಪ್ರಶಸ್ತಿ” ಈ ಬಾರಿ ಅದೇಕೋ  ಗೊಂದಲದ ಗೂಡಾಗಿಬಿಟ್ಟಿದೆ ಅನ್ಸುತ್ತೆ..ಪ್ರಶಸ್ತಿ ಆಯ್ಕೆ ಹಿನ್ನಲೆಯಲ್ಲಿನ ಮಾನದಂಡಗಳೇ ಪ್ರಶ್ನೆಗೀಡಾಗಿದೆ. ಆಯ್ದ ಕೆಲವರು ,ಬಹುತೇಕ ಹಿರಿಯ ಸಿನಿ ಪತ್ರಕರ್ತರನ್ನು ವಿಶ್ವಾಸಕ್ಕೆ ಪಡೆಯದೆಯೇ ತಮ್ಮ ಮೂಗಿನ ನೇರಕ್ಕೆ  ನಿರ್ದರಿಸಿ ನೀಡಿದರೆನ್ನುವ ಅಪಸ್ವರ ಕೂಡ ಕೇಳಿಬಂದಿದೆ.ಹಾಗೆಯೇ ಚಿತ್ರರಂಗದಲ್ಲಿ ಗುರುತಿಸಬಲ್ಲ ಅಗಾಧಮಟ್ಟದ ಪ್ರತಿಭೆಗಳಿದ್ದರೂ ಅವುಗಳ ಅನ್ವೇಷಣೆ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ನಡೆದಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಕೆಲವರನ್ನು ಹೊಗಳುವ,ಅವರಿಂದ ಶಹಬ್ಬಾಸ್‌ ಗಿರಿ ಪಡೆಯುವ,ಅವರ ದೃಷ್ಟಿ ಸೆಳೆಯುವ ಸ ಸ್ವಾರ್ಥದ ಕಾರಣಗಳಿಗಷ್ಟೇ ಸೀಮಿತವಾಗಿ ನಡೆದುಬಿಡ್ತಾ ಎನ್ನುವ ಅನುಮಾನ ಕೂಡ ಕಾಡಿದೆ.

ಈ ಬಾರಿ ನಡೆದ ಕಾರ್ಯಕ್ರಮವೂ ಸೇರಿದಂತೆ ಕಳೆದ 7 ವರ್ಷ ಗಳಿಂದಲೂ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ‌ ಚಿತ್ರರಂಗದಲ್ಲಿ ಗಮನಾರ್ಹ ಸಾಧನೆ ಮಾಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡುವ ಸಂಪ್ರದಾಯ ಬೆಳೆಸಿಕೊಂಡು ಬಂದಿದೆ.ಆರಂಭದಿಂದ ಕೆಲ ವರ್ಷಗಳವರೆಗೆ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಗಳಿರಲಿಲ್ಲ.ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಸಂಭಾಳಿಸಿಕೊಂಡು ಹೋಗಲಾಗ್ತಿತ್ತು.ಆದರೆ ಈ ಬಾರಿಯ ಬೆಳವಣಿಗೆಗಳು ಮಾತ್ರ ಸಿನೆಮಾ ರಂಗದಲ್ಲಿರುವ ಅನೇಕ ಹಿರಿಯ ಪತ್ರಕರ್ತರ ಆಕ್ರೋಶ-ಅಸಮಾಧಾನಕ್ಕೆ ಕಾರಣವಾಗಿದೆ. ಚಿತ್ರರಂಗದಲ್ಲೇ ಮೈಲಿಗಲ್ಲಾಗುವಂಥ ಇಂಥ ದೊಡ್ಡದಾದ ಕಾರ್ಯಕ್ರಮಕ್ಕೆ  ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎನ್ನುವುದು ಒಂದು ಕಾರಣವಾದರೆ, ಪ್ರಶಸ್ತಿ  ಆಯ್ಕೆ ವಿಷಯದಲ್ಲಿ, ಅರ್ಹತೆ-ಸಾಮರ್ಥ್ಯಕ್ಕೆ ಮಣೆ ಹಾಕುವುದಕ್ಕಿಂತ ಕೆಲವರನ್ನು  ಓಲೈಸುವ- ಮೆಚ್ಚುಗೆ ಪಡೆಯುವ  ಉದ್ದೇಶಗಳಿವೆಯೇ  ಎನ್ನುವುದು ಇನ್ನೊಂದು ಕಾರಣ.

ಅಂದ್ಹಾಗೆ ಪ್ರಶಸ್ತಿ ಪಡೆದವರೆಲ್ಲಾ ಯೋಗ್ಯರಲ್ಲ ಎನ್ನೋದು ನಮ್ಮ ವಾದ ಅಲ್ಲವೇ ಅಲ್ಲ.ಸಾಕಷ್ಟು ಯೋಗ್ಯರನ್ನೇ ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗಿದೆ.ಆದರೆ ಕೆಲವರಿಗೆ ನೀಡಿರುವ ಪ್ರಶಸ್ತಿ ವಿಷಯದಲ್ಲಿ ಇದು ಖಂಡಿತಾ ಅಗತ್ಯವಿತ್ತಾ..? ಅವರಿಗಿಂತ ಬೇರೆಯವರನ್ನು ಆಯ್ಕೆ ಮಾಡಿ ದಿದ್ದರೆ ಹೆಚ್ಚು ಚೆನ್ನಾಗಿರುತ್ತಿತ್ತೇನೋ ಎನ್ನುವ ಪ್ರಶ್ನೆ ಮೂಡುವುದು ಸಹಜ.ಈ ಬೇಸರವನ್ನೇ ಅನೇಕ ಹಿರಿಯ ಸಿನಿ ಪತ್ರಕರ್ತರು ಕನ್ನಡ  ಫ್ಲ್ಯಾಶ್‌ ನ್ಯೂಸ್‌ ಜತೆ ಹಂಚಿಕೊಂಡಿದ್ದಾರೆ. ಅವರುಗಳ ಪ್ರಕಾರ ಎಲ್ಲಾ ಸಿನಿ ಪತ್ರಕರ್ತರ ಅಭಿಪ್ರಾಯ ಪಡೆದೇ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆದಿಲ್ಲ.ನಮ್ಮಲ್ಲಿ ಬಹುತೇಕ ಹಿರಿಯರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುವ ಮಾತು ಹಾಳಾಗಿ ಹೋಗಲಿ ಕನಿಷ್ಟ ಸೌಜನ್ಯಕ್ಕೂ   ನಮ್ಮನ್ನು ಮಾತನಾಡಿಸುವ ಕೆಲಸ ಮಾಡಿಲ್ಲ.ಆಯ್ದ ಕೆಲವರೇ ಸೇರಿಕೊಂಡು ಅವರವರೇ ಡಿಸೈಡ್‌ ಮಾಡಿಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಿ, ಪ್ರಧಾನ ಮಾಡಿದ್ದಾರೆ.ಈ ಎಲ್ಲಾ ಪ್ರಕ್ರಿಯೆ ಕೆಲವರ ನಡುವೆ ಮಾತ್ರ ನಡೆದಿದೆ. ಆದರೆ  ಸಿನಿ ಪತ್ರರ್ತರೆಲ್ಲಾ ಸೇರಿಕೊಂಡೇ ಈ ಪ್ರಶಸ್ತಿಗಳ ಆಯ್ಕೆ ಮತ್ತು ವಿತರಣೆ ಮಾಡಿದ್ದಾರೆ ಎನ್ನುವ ಸಂದೇಶ ಮಾತ್ರ ಸಾರ್ವಜನಿಕವಾಗಿ ರವಾನೆಯಾಗ್ತಿದೆ.ಇದ್ಯಾವ ನ್ಯಾಯ ಎನ್ನುವ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವು ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕಲಾವಿದರು-ತಂತ್ರಜ್ಞರ ಪಟ್ಟಿ ಗಮನಿಸಿದಾಗ ನಿಜಕ್ಕೂ ಇವರಿಗೆ ಪ್ರಶಸ್ತಿ ನೀಡುವ ಅಗತ್ಯವಿತ್ತೆ ಎಂದೆನಿಸುವುದು ಸಹಜ( ಅಂದ್ಹಾಗೆ ಇವರು ಪ್ರಶಸ್ತಿಗೇ ಅರ್ಹರಲ್ಲ ವೆನ್ನುವುದು  ಖಂಡಿತಾ ನಮ್ಮ ಅಭಿಪ್ರಾಯವಲ್ಲ .ಇವರಿಗಿಂತ ಹೆಚ್ಚು ಅರ್ಹರೆನಿಸಿಕೊಂಡ ಬೇರೆ ಪ್ರತಿಭಾನ್ವಿತರೂ ಚಿತ್ರರಂಗ ದಲ್ಲಿದ್ದರಲ್ವಾ.? ಅವರಿಗೆ ಈ ಪ್ರಶಸ್ತಿಗಳನ್ನು ನೀಡಿದಿದ್ದರೆ ಇನ್ನಷ್ಟು ಅರ್ಥಪೂರ್ಣವಾಗುತ್ತಿತ್ತೇನೋ  ಎನ್ನುವುದಷ್ಟೇ ನಮ್ಮ ವಾದ.)

ಅಂದ್ಹಾಗೆ ಕೆಲವು ಪ್ರಶಸ್ತಿಗಳನ್ನು ಉಲ್ಲೇಖಿಸಿ ಹಿರಿಯ ಪತ್ರಕರ್ತರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ….ಅತ್ಯುತ್ತಮ ಚೊಚ್ಚಲು ಚಿತ್ರದ ವಿಭಾಗದಲ್ಲಿ ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್  ಅವರ ಫೈರ್ ಪ್ಲೈ ಚಿತ್ರಕ್ಕೆ ಪ್ರಶಸ್ತಿ ದೊರೆತಿದೆ. ನಿವೇದಿತಾ ಅವರನ್ನು ಬಿಟ್ಟರೆ ಬೇರೆ ಯಾರೂ  ಈ ವಿಭಾಗದಲ್ಲಿ ಅರ್ಹರಿರಲಿಲ್ಲವೇ..? ನಿವೇದಿತಾಗೆ ಪ್ರಶಸ್ತಿ ನೀಡಲು ಬೇರೆಯದೇ ವೇದಿಕೆಗಳಿವೆಯಲ್ವಾ..? ಅಲ್ಲಿ ಅವರಿಗೆ ಪ್ರಶಸ್ತಿ ಸಿಗುತ್ತಿರಲಿಲ್ಲವೇ..? ಎಲ್ಲರೂ ಒಗ್ಗೂಡಿ ನಿವೇದಿತಾ ಅವರ ಹೆಸರನ್ನೇ ಅಂತಿಮಗೊಳಿಸಿದ್ದರ ಹಿಂದಿನ ಉದ್ದೇಶ ಆಕೆ ಶಿವರಾಜ್‌ ಕುಮಾರ್‌ ಅವರ ಪುತ್ರಿ ಎನ್ನೋದು ಮಾತ್ರವಾಗಿತ್ತಾ..? ಶಿವಣ್ಣನ ಮಗಳಿಗೆ ಪ್ರಶಸ್ತಿ ಕೊಟ್ಟರೆ ಅವರ ವಿಶ್ವಾಸಕ್ಕೆ ಪಾತ್ರವಾಗಬಹುದಲ್ವಾ ಎನ್ನುವ ಉದ್ದೇಶ ಇದ್ದಿತ್ತಾ..? ಈ ರೀತಿಯಾದ ವಿಶ್ಲೇಷಣೆ ನಡೆಯುತ್ತಿರುವುದು ಸುಳ್ಳಲ್ಲ..

ALSO READ :  ಸಿಬಿಐ ತನಿಖೆ ಭೀತಿ: ಕೋರಮಂಗಲದಲ್ಲಿ ನಿವೃತ್ತ ಅಧಿಕಾರಿ ಪರಮೇಶ್ವರಯ್ಯ ಆತ್ಮಹತ್ಯೆ!

ಇನ್ನು  ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಯನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರ  ಕಿರಿಟಿ ಅವರು ಜ್ಯೂನಿಯರ್ ಚಿತ್ರಕ್ಕಾಗಿ ಹಾಗೂ ಗುಬ್ಬಿ ಶಾಸಕ ಶ್ರೀನಿವಾಸ್‌ ಅವರ ಪುತ್ರ  ದುಷ್ಯಂತ್  ಅವರು ಗತ ವೈಭವ ಚಿತ್ರಕ್ಕಾಗಿ ಪಡೆದಿದ್ದಾರೆ.ಇವರನ್ನು ಬಿಟ್ಟರೆ ಬೇರೆ ಉದಯೋನ್ಮುಖ ಕಲಾವಿದರು ಇರಲಿಲ್ಲವೇ..? ಎನ್ನುವ ಪ್ರಶ್ನೆ ಸೃಷ್ಟಿ ಯಾಗಿದೆ.ಅವರಿಬ್ಬರ ತಂದೆ ರಾಜಕೀಯದಲ್ಲಿದ್ದಾರೆ.ಅವರನ್ನು ಓಲೈಸಲಿ ಕ್ಕಾಗಿಯೇ ಪ್ರಶಸ್ತಿಗೆ ಇವರಿಗಿಂತ ಅರ್ಹರಾದ ಎಷ್ಟೋ ಉದಯೋನ್ಮುಖ ರನ್ನು ಕೈ ಬಿಡಲಾಗಿದೆ ಎನ್ನುವ ವಿಶ್ಲೇಷಣೆ ಕೂಡ ಕೇಳಿಬರುತ್ತಿದೆ.

ಹಾಗೆಯೇ  ಅತ್ಯುತ್ತಮ ಗಾಯಕಿ ವಿಭಾಗದಲ್ಲಿ ನಟ ಸುದೀಪ್‌ ಅವರ ಮಗಳಾದ  ಸಾನ್ವಿ ಸುದೀಪ್ ಅವರನ್ನು  ಆಕೆ ಹಾಡಿದ  ಮಾರ್ಕ್ ಚಿತ್ರದ ಮಸ್ತ್‌ ಮಲೈಕಾ ಹಾಡಿಗಾಗಿ ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗಿದೆ.ಮ್ಯೂಸಿಕ್‌ ಅಬ್ಬರದಲ್ಲೇ ಕಳೆದೋಗುವ ಹಾಡಿನಲ್ಲಿ ಆಕೆಯ ದ್ವನಿ ಕೇಳಕ್ಕೆ ಸಿಗೋದೇ ಒಂದೆರೆಡು ನಿಮಿಷಕ್ಕಷ್ಟೆ..ಅಷ್ಟಕ್ಕೇನೆ ಆಕೆಯನ್ನು ಅತ್ಯುತ್ತಮ ಗಾಯಕಿ ಪ್ರಶಸ್ತಿಗೆ ಆಯ್ಕೆ ಮಾಡುವುದು ಅಷ್ಟೇನೂ ಸಮಂಜಸವಲ್ಲ ಎನ್ನುವುದು ಅನೇಕರ ಅಭಿಪ್ರಾಯ. ಅದರಂತೆಯೇ ಕಾಂತರಾ-1ರ  ಕಾರಣಕ್ಕೆ ಈಗಾಗಲೇ ಪ್ರಶಸ್ತಿಗಳ ಭಾರ ದಲ್ಲಿ ನಲುಗಿ ಹೋಗಿರುವ ರಿಷಬ್‌ ಶೆಟ್ಟಿ ಅವರನ್ನು ಮತ್ತೆ   ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದರ ಬಗ್ಗೆಯೂ ಆಕ್ಷೆಪವಿದೆ. ಅತ್ಯುತ್ತಮ ಚಿತ್ರ ಪ್ರಶಸ್ತಿಯೂ ಅದರ ಮುಡಿಗೇರಿದೆ.ಹಾಗೆಯೇ ಅತ್ಯುತ್ತಮ ನಟಿ  ಪ್ರಶಸ್ತಿ ಆಶಿಕಾ ರಂಗನಾಥ್  ಅವರ ಗತ ವೈಭವಕ್ಕೆ ಸಂದಾಯವಾಗಿರುವುದು ಕೂಡ ಅನೇಕರಿಗೆ ಸಮಾಧಾನ ತಂದಿಲ್ಲ.ಗತವೈಭವಕ್ಕಿಂತ ಅತ್ಯುತ್ತಮವಾದ ಇನ್ನೂ ಎಷ್ಟೋ ಚಿತ್ರಗಳಿದ್ವಲ್ಲ ಎನ್ನುವುದು ಅನೇಕರ ವಾದ.

ಇನ್ನೂ ಕಿರಿಯ ವಯಸ್ಸಿನವಳಾದ ಶಿವಣ್ಣನ ಪುತ್ರಿ ನಿವೇದಿತಾಗಿಂತ ಬೇರೆಯದೇ ಆಯ್ಕೆಯನ್ನು ಜ್ಯೂರಿ ಮಾಡಬಹುದಿತ್ತೇನೋ..?  ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರ  ಕಿರಿಟಿ ,ಗುಬ್ಬಿ ಶಾಸಕ ಶ್ರೀನಿವಾಸ್‌ ಪುತ್ರ  ದುಷ್ಯಂತ್ ಹೇಳಹೆಸರಿಲ್ಲದಂತಾಗಿರುವಾಗ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕಿತ್ತೆ..? ನಟ ಸುದೀಪ್‌ ಮಗಳಾದ  ಸಾನ್ವಿ ಹಾಡಿಗಿಂತ ಅತ್ಯುತ್ತಮವಾದ ಇನ್ನೊಂದು ಹಾಡು ೨೦೨೫ ರ ಕಾಲಘಟ್ಟದಲ್ಲಿ ಬರಲೇ ಇಲ್ವೇ..? ಬಹುತೇಕ ಎಲ್ಲಾ ರೀತಿಯ ಪ್ರಶಸ್ತಿ ಬಾಚಿಕೊಂಡಿರುವ  ಕಾಂತರಾ ಚಾಪ್ಟರ್‌-1 ಹಾಗೂ ಅದರ ನಿರ್ದೇಶಕ  ರಿಷಬ್ ಶೆಟ್ಟಿಅವರಿಗೆ ಪುನಃ   ಪ್ರಶಸ್ತಿ ಕೊಡಬೇಕಿತ್ತಾ..? ಅವರಿಗೇ ಬ್ಯಾಕ್‌ ಟು ಬ್ಯಾಕ್‌ ಪ್ರಶಸ್ತಿ ಕೊಡುತ್ತಾ ಹೋದರೆ ಅತ್ಯುತ್ತಮವಾದ ಎಷ್ಟೋ ಬೇರೆ ಚಿತ್ರಗಳ ಕಥೆ ಏನಾಗಬೇಕು..?ಹೇಳಿ ಎಂದು ಹಿರಿಯ ಸಿನಿ ಪತ್ರಕರ್ತರು ಪ್ರಶ್ನಿಸಿದ್ದಾರೆ.

ಹಾದಿ ತಪ್ಪುತ್ತಿದೆಯಾ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ..?! ಸಿನಿ ವಿಮರ್ಷಕರ ಪ್ರಶಸ್ತಿಗಳ ವಿಷಯದಲ್ಲಿ ಸೃಷ್ಟಿಯಾಗಿರುವ ಗೊಂದಲ,ವಿವಾದ,ವಿರೋಧ,ಆಕ್ಷೇಪ, ಅಸಮಾಧಾನ, ಬೇಸರಗಳನ್ನೆಲ್ಲಾ ಗಮನಿಸಿದಾಗ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಎಲ್ಲೋ ಎಡವಿಬಿಟ್ಟಿತಾ ಎಂದೆನಿಸೋದು ಸತ್ಯ..? ಅದರ  ಆಯ್ಕೆ ಮಾನದಂಡ ಯಾವುದೋ ಹಿತಾಸಕ್ತಿಗೆ  ಬಲಿಯಾಗೋಯ್ತಾ..? ಎಂದೆನಿಸದೆ ಇರದು. ಚಂದನವನದಲ್ಲಿ ಬಹಳಷ್ಟು ಹಿರಿಯ ಪತ್ರಕರ್ತರಿದ್ದ ಹೊರತಾಗ್ಯೂ ಅವರಲ್ಲಿ ಬಹುತೇಕರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ, ಅವರ ವಿಶ್ವಾಸವನ್ನೂ ಗಳಿಸಿಕೊಳ್ಳದೆ ಕೆಲವರೇ ಒಂದು ಕಡೆ ಕುಳಿತು ಕೆಲ ಕ್ಷಣಗಳಲ್ಲೇ ಪ್ರಶಸ್ತಿ ಪಟ್ಟಿಯನ್ನು ಸಿದ್ದಪಡಿಸುತ್ತಾರೆಂದರೆ ಇದರ ಹಿಂದಿನ ಉದ್ದೇಶವೇನೆನ್ನುವುದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಕೆಲವರು ಮಾಡುವ ಕೆಲಸದಿಂದ ಆಗುವ ಪರಿಣಾಮವನ್ನು ಇಡೀ ಸಿನಿಪತ್ರಕರ್ತರ ಸಮುದಾಯ ಎದುರಿಸಬೇಕಾಗುತ್ತಿದೆ. ಕೋತಿ ತಿಂದು ಮೇಕೆ ಬಾಯಿಗೆ ಒರೆಸಿತು ಎನ್ನುವ ಗಾಧೆಯಂತಾಗಿದೆ ನಮ್ಮ ಸ್ಥಿತಿ ಎಂದು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಜತೆ ಅನೇಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪ್ರಶಸ್ತಿ ಕಾರ್ಯಕ್ರಮ ಕೇವಲ ವ್ಯಾಪಾರೀಕರಣವಾಗುತ್ತಿದೆಯಾ..?! ಈ ಬಾರಿಯ ಕಾರ್ಯಕ್ರಮ ಸುಮಾರು ೧ ಕೋಟಿಯಷ್ಟು ವೆಚ್ಚದಲ್ಲಿ ಅದ್ದೂರಿಯಾಗಿ ನಡೆದಿದೆ.ಅಂಬರ್‌ ಸ್ಟೋನ್‌ ಎನ್ನುವ ದಿಗ್ಗಜ ಸಂಸ್ಥೆ ಸೇರಿದಂತೆ ೨೦ಕ್ಕೂ ಹೆಚ್ಚು ಕಂಪೆನಿಗಳು ಇದಕ್ಕೆ ಪ್ರಾಯೋಜಕತ್ವ ಒದಗಿಸುತ್ತವೆ.ಸಿನಿ ಪತ್ರಕರ್ತರ ಮೇಲಿನ ವಿಶ್ವಾಸ-ನಂಬಿಕೆಯಿಂದ ಚಿತ್ರರಂಗದ ಬಹುತೇಕ ಕಲಾವಿದರು-ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ.ಆದರೆ ಈ ಬಾರಿಯ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಖ್ಯೆ ಕಳೆದ ಬಾರಿಗಿಂತ ತುಂಬಾ ಕ್ಷೀಣಿಸಿತ್ತೆನ್ನುವ ಮಾತಿದೆ.ಇದಕ್ಕೆ ಕಾರಣ ಪ್ರಶಸ್ತಿ ನೀಡುವ ಝ್ಯೂರಿಯಲ್ಲಿರುವ ಕೆಲವರ ಧೋರಣೆ ಅಂತೆ.ಕಳೆದ ೭ ವರ್ಷಗಳಿಂದಲೂ ಘನತೆ-ಗಾಂಭೀರ್ಯತೆ ಉಳಿಸಿ ಕೊಂಡು ಬಂದಿರುವ ಪ್ರಶಸ್ತಿಯ ಪ್ರತಿಷ್ಟೆ,  ಕೆಲವರ ವ್ಯಾಪಾರೀ ಮನಸ್ತಿತಿಯಿಂದ, ದೊಡ್ಡವರೆನಿಸಿಕೊಂಡವರನ್ನು ಓಲೈಸಿ ಮೈಲೇಜ್‌ ಪಡೆಯುವ ಸ್ವಾರ್ಥದ ಕಾರಣಕ್ಕೆ  ಹಾಳಾಗ್ತಿದೆಯಲ್ಲ ಎನ್ನುವುದು ಅನೇಕ ಹಿರಿಯ ಸಿನಿ ಪತ್ರಕರ್ತರ ಅಳಲು ಹಾಗೂ ಕೊರಗಂತೆ. ಬೇರೆಯವರು ಮಾಡುವ ತಪ್ಪು-ದೋಷವನ್ನು ತಿದ್ದುವ ಪತ್ರಕರ್ತರೇ, ಖುದ್ದು ಲೋಪವೆಸಗಿದರೆ ತಿದ್ದುವವರು ಯಾರು ಅಲ್ವಾ..?!


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top