ಬೆಂಗಳೂರು:ಓದಿಕೊಳ್ಳಲಿಕ್ಕೆಂದು ದೂರ ದೂರಿಂದ ಬೆಂಗಳೂರಿಗೆ ಬಂದು ಪಿಜಿ-ಹಾಸ್ಟೆಲ್ ಗಳಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿನಿಯರಿಗೆ ಪಿಜಿ-ಹಾಸ್ಟೆಲ್ ಗಳು ಸೇಫಲ್ವಾ..? ಇಂತದ್ದೊಂದು ಅನುಮಾನ ಕಾಡ್ಲಿಕ್ಕೆ ಕಾರಣವಾಗಿರೋದು ರಾಜಧಾನಿ ಹೊರವಲಯದಲ್ಲಿ ನಡೆದಿರುವ ಕಾಲೇಜ್ ಸ್ಟೂಡೆಂಟ್ ಒಬ್ಬಳ ರೇ *ಪ್.. ತನ್ನ ಪಿಜಿಯಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿನಿ ಮೇಲೆ ಕಣ್ಣಾಕಿದ್ದ ಕಾಮಾಂಧ ಆಕೆಯನ್ನು ಪುಸಲಾಯಿಸಿ,ಒಪ್ಪದಿದ್ದಕ್ಕೆ ಕಿಡ್ನ್ಯಾಪ್ ರೀತಿ ಎತ್ತಾಕಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.



ಅಂದ್ಹಾಗೆ ಈ ಘಟನೆ ನಡೆದಿರುವುದು ಸೋಲದೆವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಪ್ರತಿಷಿತ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಕಾಲೇಜ್ ಗೆ ಹೊಂದಿಕೊಂಡಂತೆ ಇರುವ ಪಿಜಿ ಒಂದರಲ್ಲಿ ಬಾಡಿಗೆಯಲ್ಲಿದ್ದಳು.ಆಕೆಯ ಮೇಲೆ ಮೊದಲಿಂದಲೂ ಕಣ್ಣಾಕಿದ್ದ ಪಿಜಿ ಮಾಲೀಕ ಅಶ್ರಫ್ ,ಆಕೆಯನ್ನು ಮನವೊಲಿಸಿಕೊಳ್ಳಲು ಯತ್ನಿಸಿದ್ದನಂತೆ.ಆಕೆ ಅದಕ್ಕೆ ಸೊಪ್ಪಾಕದೆ ತಾನಾಯ್ತು ,ತನ್ನ ಓದಾಯ್ತು ಎಂದುಕೊಂಡಿದ್ದಳು.ಇದೇ ಆತನನ್ನು ವ್ಯಗ್ರಗೊಳಿಸಿತ್ತು.ಒಪ್ಪದಿದ್ರೆ ಅಪಹರಿಸಿಕೊಂಡಾದ್ರೂ ಹೋಗಿ ಆಕೆಯನ್ನು ಅನುಭವಿಸಬೇಕೆನ್ನುವ ದುರಾಲೋಚನೆಗೆ ಬಿದ್ದಿದ್ದಾನೆ.
ಅದಕ್ಕೊಂದು ಪ್ಲ್ಯಾನ್ ಮಾಡಿ,ಕಾಲೇಜ್ ಮುಗಿಸಿಕೊಂಡು ಪಿಜಿಗೆ ಬಂದಿದ್ದ ಆಕೆಯ ರೂಮಿಗೆ ನುಗ್ಗಿದ್ದಾನಂತೆ.ಆಕೆ ಗಾಬರಿಗೊಂಡಿದ್ದಾಳೆ.ಕಿರುಚದಂತೆ ಆಕೆಯನ್ನು ಬೆದರಿಸಿ ಆಕೆಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿ ರೇಪ್ ಮಾಡಿದ್ದಾನೆ.ತನ್ನ ಮೇಲೆ ಮಾಲೀಕ ನಡೆಸಿದ ಪೈಶಾಚಿಕ ಕೃತ್ಯದ ಹಿನ್ನಲೆಯಲ್ಲಿ ಮಾನಸಿಕವಾಗಿ ಘಾಸಿಗೊಂಡ ಯುವತಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.ಆಕೆಯ ದೂರಿನ ಅನ್ವಯ ಪೊಲೀಸರು ಕೇಸ್ ದಾಖಲಿಸಿಕೊಂಡು ರೇಪಿಸ್ಟ್ ಅಶ್ರಫ್ ನನ್ನು ಅರೆಸ್ಟ್ ಮಾಡಿದ್ದಾರೆ,ಮಾನಸಿಕವಾಗಿ ಅಘಾತಗೊಂಡ ಯುವತಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಸಮಾಲೋಚನೆ ನೀಡಲಾಗಿದೆ.ಯುವತಿಯ ಮೇಲಾದ ಪೈಶಾಚಿಕ ಕೃತ್ಯದಿಂದ ಪಿಜಿಯಲ್ಲಿರುವ ಯುವತಿಯರು ಆತಂಕಕ್ಕೆ ಒಳಗಾಗಿದ್ದಾರೆ.ನಾವು ಎಷ್ಟರ ಮಟ್ಟಿಗೆ ಸೇಫ್ ಎಂದು ಮಾತನಾಡಿಕೊಳ್ಳುತ್ತಿದ್ದಾರಂತೆ.