advertise here

Search

ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚಾಕು ಇರಿತ..:ಕೃತ್ಯದ ಹಿಂದೆ DON ಬಿಷ್ಣೊಯ್ ಲಾರೆನ್ಸ್ ಕೈವಾಡ ಶಂಕೆ.!?


ಸೈಫ್ ಅಲಿ ಖಾನ್(SAIF ALI KHAN)
ಸೈಫ್ ಅಲಿ ಖಾನ್(SAIF ALI KHAN)
ಅಂಡರ್ ವರ್ಲ್ಡ್ ಡಾನ್  ಲಾರೆನ್ಸ್ ಬಿಷ್ಣೋಯ್
ಅಂಡರ್ ವರ್ಲ್ಡ್ ಡಾನ್  ಲಾರೆನ್ಸ್ ಬಿಷ್ಣೋಯ್

ಬಾಲಿವುಡ್(BOLLYWOOD) ಖ್ಯಾತ  ನಟ.ಛೋಟಾ ನವಾಬ್(CHOTA NAWAAB), ಸೈಫ್ ಅಲಿ ಖಾನ್(SAIF ALI KHAN)  ಗೆ ಅಪರಿಚಿತ ದುಷ್ಕರ್ಮಿಗಳು ಚಾಕು(STAB) ಇರಿದಿದ್ದಾರೆ. ಮುಂಬೈ(MUMBAI)ನ ಬಾಂದ್ರಾ(BAANDRA)ದಲ್ಲಿರುವ ಅವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ದರೋಡೆ ನಡೆಸಲು ಬಂದವರೇ ಈ ಕೃತ್ಯ ಎಸಗಿರಬಹುದೆಂದು ಹೇಳಲಾಗುತ್ತಿದೆ.ಪ್ರಕರಣದ ಸ್ವರೂಪ ಗಮನಿಸಿದ್ರೆ ಇದು ಕೇವಲ ದರೋಡೆಗೆ ಅಡ್ಡ ಬಂದ ಕಾರಣಕ್ಕೆ ಸಿಟ್ಟಿನಿಂದ ದುಷ್ಕರ್ಮಿಗಳು ಎಸಗಿರುವ ಕೃತ್ಯ ಎನಿಸದೆ ಗೊತ್ತಿದ್ದವರೇ ನಡೆಸಿರುವ ಕೃತ್ಯ ಎನ್ನುವ ಶಂಕೆ ಕೂಡ ವ್ಯಕ್ತವಾಗಿದೆ.ಸಧ್ಯಕ್ಕೆ ಮನೆಯಲ್ಲಿದ್ದ ಕೆಲಸದವರ  ಮೇಲೆ ಶಂಕೆ ವ್ಯಕ್ತವಾಗಿದ್ದು ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮದ್ಯರಾತ್ರಿ ಸುಮಾರು 2.30 ಕ್ಕೆ ಬಾಂದ್ರಾದಲ್ಲಿರುವ ಅವರ ಮನೆಗೆ ದರೋಡೆ ಮಾಡಲು ಕೆಲ ದುಷ್ಕರ್ಮಿಗಳು ನುಗ್ಗಿದ್ದಾರೆ. ಈ ವೇಳೆ, ಮನೆಯಲ್ಲಿದ್ದ ಸೈಫ್  ದರೋಡೆಕೋರನಿಗೆ ಪ್ರತಿರೋಧ ತೋರಿದ್ದಾರೆ.ಈ ವೇಳೆ ಅವರನ್ನು  ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ, ಸೈಫ್ ಕುತ್ತಿಗೆ, ಕೈ ಸೇರಿ 6 ಕಡೆ ಗಾಯವಾಗಿದೆ. 2 ಕಡೆ ಗಂಭೀರವಾಗಿ ಪೆಟ್ಟಾಗಿದೆ. ಹೆಚ್ಚು ರಕ್ತಸ್ರಾವ ಆಗಿರುವ ಹಿನ್ನೆಲೆ ಕೂಡಲೇ ನಟನನ್ನು ಲೀಲಾವತಿ( MUMBAI LEELAVATHI HOSPITAL) ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಕು ಇರಿತ ತುಂಬಾ ಗಂಭೀರ ಸ್ವರೂಪದ್ದಾಗಿರುವುದರಿಂದ  ಎರಡೂವರೆ ಗಂಟೆಗಳ ಕಾಲ ನಟನಿಗೆ ಆಪರೇಷನ್ ನಡೆದಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕರೀನಾ ಕಪೂರ್ ಮತ್ತು ಮಕ್ಕಳು ಸೇಫ್ ಆಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕೃಷ್ಣಮೃಗ
ಕೃಷ್ಣಮೃಗ

ಎಲ್ಲರೊಂದಿಗೂ ಚೆನ್ನಾಗಿದ್ದ ಸೈಫ್ ಯಾರ ಜತೆಯೂ ಶತೃತ್ವ ಕಟ್ಟಿಕೊಂಡಿರಲಿಲ್ಲ.ಹೀಗಿರುವಾಗ ಇಷ್ಟೊಂದು ಗಂಭೀರ ಸ್ವರೂಪದ ಹಲ್ಲೆ ನಡೆದಿರುವುದು ಅಚ್ಚರಿ ಜತೆಗೆ ಅಘಾತವನ್ನುಂಟುಮಾಡಿದೆ. 7 ತಂಡಗಳನ್ನು ರಚಿಸಿರುವ ಪೊಲೀಸರು ತಮ್ಮದೇ ಆದ ಆಲೋಚನಾಕ್ರಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.ಅವರ ಅನುಮಾನ ಮೊದಲು ಮನೆಯ ಕೆಲಸದವರ ಮೇಲಿದ್ದು ಅದರ ಪತ್ತೆಗಾಗಿ ಅವರನ್ನು ವಶಕ್ಕೆ ಪಡೆದು ಮೊಬೈಲ್ ನ ಅಂಕಿಅಂಶಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ALSO READ :  ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬಹುತೇಕ ಮಾದ್ಯಮಗಳು ಎಡವಿದ್ದೆಲ್ಲಿ?! ಪೂರ್ವಾಗ್ರಹಕ್ಕೆ ಒಳಗಾಗಿದ್ದೆಲ್ಲಿ!? ಕೋರ್ಟ್‌ ಗಳಾಗಿದ್ದೆಲ್ಲಿ.?!

ಇದರ ಜತೆಗೆ ಪೊಲೀಸರನ್ನು ಕಾಡುತ್ತಿರುವ ಮತ್ತೊಂದು ಶಂಕೆ ಎಂದರೆ ಈ ಕೃತ್ಯದ ಹಿಂದೆ ಅಂಡರ್ ವರ್ಲ್ಡ್ ಡಾನ್  ಲಾರೆನ್ಸ್ ಬಿಷ್ಣೋಯ್(LAWRENCE BISHNOI) ಕೈವಾಡ ಇರಬಹುದಾ ಎನ್ನುವುದು. ಏಕಂದರೆ  ಕೃಷ್ಣಮೃಗವನ್ನು ದೇವರೆಂದು ಪೂಜಿಸುವ ಬುಡಕಟ್ಟು ಸಮುದಾಯಕ್ಕೆ ಸೇರಿದ ಲಾರೆನ್ಸ್ 1998ರಲ್ಲಿ ಸಲ್ಮಾನ್ ಖಾನ್ ಹಾಗೂ ಬಾಲಿವುಡ್​ನ ಇತರ ನಟರು ಹಮ್ ಸಾಥ್ ಸಾಥ್ ಹೈ ಸಿನಿಮಾ ಚಿತ್ರೀಕರಣಕ್ಕೆ ರಾಜಸ್ಥಾನಕ್ಕೆ ಹೋದಾಗ ಅಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿ ಕೊಂದಿದ್ದರು.

ನಟ ಸಲ್ಮಾನ್ ಖಾನ್ ನನ್ನು ಇದೇ ಕಾರಣಕ್ಕೆ ಮುಗಿಸುತ್ತೇನೆಂದು ಅಬ್ಬರಿಸಿದ್ದ ಲಾರೆನ್ಸ್ ಬಿಷ್ಣೊಯ್ ತನ್ನ ಲೀಸ್ಟ್ ನಲ್ಲಿ ಇನ್ನಿಬ್ಬರು ಖಾನ್ ಗಳಿದ್ದಾರೆ ಎಂದಿದ್ದ. ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯಾಡಿದ್ದ ತಂಡದಲ್ಲಿ ಸೈಫ್ ಅಲಿಖಾನ್ ಕೂಡ ಇದ್ದರೆನ್ನುವುದು ಜಗಜ್ಜಾಹೀರಾಗಿತ್ತು.ಅದೇ ದ್ವೇಷದ ಭಾವನೆಯಿಂದ ಬಿಷ್ಣೊಯ್ ಸೈಫ್ ರನ್ನು ಮುಗಿಸಲು ಈ ಕೃತ್ಯ ಎಸಗಿದ್ನಾ ಎನ್ನುವ ಶಂಕೆ ಕಾಡುತ್ತಿದೆ.ಸಧ್ಯಕ್ಕೆ ಇದೇ ಕಾರಣಕ್ಕೆ ಹೀಗೆ ಆಗಿದೆ ಎನ್ನುವ ಸ್ಪಷ್ಟನೆಗೆ ಬರಲಿಕ್ಕಾಗದು.ಹಾಗಾಗಿ ಎಲ್ಲಾ ಆಯಾಮಗಳಲ್ಲು ತನಿಖೆ ನಡೆಸಲಿದ್ದೇವೆ ಎಂದು ಮುಂಬೈ ಪೊಲೀಸ್ ಕಮಿಷನರ್ ಮಾದ್ಯಮಗಳಿಗೆ ತಿಳಿಸಿದ್ದಾರೆ.ಒಂದು ವೇಳೆ ಈ ಕೃತ್ಯವನ್ನು ಲಾರೆನ್ಸ್ ಬಿಷ್ಣೋಯ್ ತನ್ನ ಭಂಟರ ಮೂಲಕ ನಡೆಸಿದ್ದಾನೆನ್ನುವುದೇ ಖಚಿತವಾದಲ್ಲಿ ದೊಡ್ಡ ಮಟ್ಟದ ಆತಂಕ ಬಾಲಿವುಡ್ ಚಿತ್ರರಂಗಕ್ಕೆ ಆವರಿಸುವುದರಲ್ಲಿ ಅನುಮಾನವೇ ಇಲ್ಲ.


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top