advertise here

Search

“ಕ್ಯಾಮೆರಾ”ದಿಂದ ಶಾಶ್ವತಕ್ಕೂ “ಔಟ್ ಆಫ್ ಫೋಕಸ್” ಆದ ಪತ್ರಿಕಾ ಛಾಯಾಗ್ರಾಹಕ “ಶಿವಮೊಗ್ಗ ನಂದನ್”


“ದೇಹದಿಂದ ಆತ್ಮ ಹೊರ ಹೋಗುವುದೆಂದರೆ ಫ್ರೇಮಿನಿಂದ ಫೋಟೋ ಹೊರ ಹೋದಂತೆ..”

ಹಿರಿಯ ಛಾಯಾಗ್ರಾಹಕ ಶಿವಮೊಗ್ಗ ನಂದನ್
ಹಿರಿಯ ಛಾಯಾಗ್ರಾಹಕ ಶಿವಮೊಗ್ಗ ನಂದನ್

ಶಿವಮೊಗ್ಗ ನಂದನ್ ಅವರ ಸಾವನ್ನು ನೆನೆದು ಹಿರಿಯ ಮಾದ್ಯಮ ಮಿತ್ರರಾದ ಶಿವಮೊಗ್ಗದ ಶಿ.ಜು ಪಾಷಾ ಬರೆದಿರುವ  ಈ ಕವಿಸಾಲು ನಂದನ್ ಅವರ ಸಂಪೂರ್ಣ ಬದುಕು-ವ್ಯಕ್ತಿತ್ವ-ವೃತ್ತಿಯನ್ನೇ ಬಿಂಬಿಸುತ್ತದೆ.

ಹೌದು…ಶಿವಮೊಗ್ಗ ಕಂಡ ಅತ್ಯದ್ಭುತ ಹಾಗೂ ಅಗಾಧ ಪ್ರತಿಭಾಶಾಲಿ ಛಾಯಾಗ್ರಾಹಕ ದೈಹಿಕವಾಗಿ ಫ್ರೇಮ್ ನಿಂದ ಔಟ್ ಆಫ್ ಫೋಕಸ್ ಆಗಿದ್ದಾರೆ.ಮತ್ತೆಂದೂ ಕ್ಯಾಮೆರಾ ಹಿಡಿಯಲಾರರು. ಕ್ಯಾಮೆರಾ ಧೂಳು ಹಿಡಿಯಬಹದು.ಆದರೆ ಅವರು ತೆಗೆದ ಲಕ್ಷಾಂತರು ಫೋಟೋಗಳು ನಂದನ್ ಅವರ ಇರುವಿಕೆಯನ್ನು ಜೀವಂತವಾಗಿಡಲಿವೆ..

ಶಿವಮೊಗ್ಗದಲ್ಲಿ ಕೇವಲ ಮಾದ್ಯಮದವರಿಗಷ್ಟೇ  ಅಲ್ಲ, ಪ್ರತಿಷ್ಟಿತ ವ್ಯಕ್ತಿಗಳು,ರಾಜಕಾರಣಿಗಳು ಹಾಗೂ ಜನಸಾಮಾನ್ಯರಿಗೆ ಅಚ್ಚುಮೆಚ್ಚಿನ ಛಾಯಾಗ್ರಾಹಕರಾಗಿದ್ದವರು ಶಿವಮೊಗ್ಗ ನಂದನ್. ಛಾಯಾಗ್ರಹಣ ದ ಜತೆಗೆ ಪರಿಸರ ಪ್ರೀತಿ, ಜೀವನಪ್ರೀತಿ ಎರಡನ್ನೂ ಇಟ್ಟುಕೊಂಡಿದ್ದ ಜೀವಪರ ವ್ಯಕ್ತಿ ನಂದನ್. ಎಲ್ಲರಿಗೂ ಬೇಕಾಗಿದ್ದ ಅತ್ಯಂತ ಪ್ರೀತಿಪಾತ್ರ ವ್ಯಕ್ತಿ ಇನ್ನು ಕೇವಲ ನೆನಪು ಎಂದರೆ.. ಜೀರ್ಣಿಸಿಕೊಳ್ಳುವುದು ತೀರಾ ಕಷ್ಟ.ಹೃದಯ ಹಿಂಡುವಂತದ್ದು. ಆದರೂ ಸಾವು ಎನ್ನುವುದು ಕಹಿ ವಾಸ್ತವ.ಅದನ್ನು ನಂಬಲೇಬೇಕಾದ ಸ್ಥಿತಿ  ನಂದನ್ ಅವರನ್ನು ಪ್ರೀತಿಸುತ್ತಿದ್ದ, ಗೌರವಿಸುತ್ತಿದ್ದವರದು.

ಪಬ್ಲಿಕ್ ಟಿವಿ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್ ಸಾವಿನ ಸುದ್ದಿಯನ್ನೇ ಅರಗಿಸಿಕೊಳ್ಳಲಾಗದ ಸಂದರ್ಭದಲ್ಲೇ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಅತ್ಯಂತ ಹಿರಿಯ ಛಾಯಾಗ್ರಾಹಕ ಶಿವಮೊಗ್ಗ ನಂದನ್ ತಮ್ಮ 57ರ ವಯಸ್ಸಿನಲ್ಲಿ ಇಹದ ಪಯಣ ಮುಗಿಸಿರುವ ಸುದ್ದಿ ಹೊರಬಿದ್ದಿದೆ.ಇದು ಪತ್ರಿಕಾಮಿತ್ರರನ್ನು ಮತ್ತಷ್ಟು ವಿಚಲಿತಗೊಳಿಸಿದೆ. ಅಂತದ್ದೇನು ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲದಿದ್ದ ನಂದನ್ ಗೆ ಹೃದಯಸ್ಥಂಭನವಾಗಿದೆ. ತಕ್ಷಣ ಅವರನ್ನು ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಶಿವಮೊಗ್ಗ ನಂದನ್ ಶಿವಮೊಗ್ಗ ಮಾದ್ಯಮ ಕಂಡ ಅತ್ಯಂತ ಹಿರಿಯ ಛಾಯಾಗ್ರಾಹಕ. ವೃತ್ತಿಯಲ್ಲಿ ಹಿರಿಯರಾಗಿದ್ದರೂ ಎಲ್ಲರೊಂದಿಗೆ ಸಮಾನಮನಸ್ಕರಾಗಿ ಬೆರೆಯುತ್ತಿದ್ದ ಸ್ನೇಹಜೀವಿ.ಅವರು ತೆಗೆಯುತ್ತಿದ್ದ ಫ್ರೇಮ್ ಗಳು ಎಂಥವರನ್ನು ನಿಬ್ಬೆರಗಾಗಿಸುತ್ತಿದ್ದವು.ಸುದ್ದಿಯ ಆಯಾಮವನ್ನೇ ಬದಲಿಸಿಬಿಡುತ್ತಿದ್ದವು. ಬಿಡುವಿದ್ದಾಗ ಕ್ಯಾಮೆರಾವನ್ನು ಹೆಗಲಿಗೆ ಹಾಕ್ಕೊಂಡು ನಾಪತ್ತೆ ಆಗಿಬಿಡುತ್ತಿದ್ದ ನಂದನ್ ಅತ್ಯದ್ಭುತ ದೃಶ್ಯಕಾವ್ಯದೊಂದಿಗೆ ಪ್ರತ್ಯಕ್ಷವಾಗಿಬಿಡುತ್ತಿದ್ದರು.ಬದುಕಿನಷ್ಟೇ ಕ್ಯಾಮೆರಾವನ್ನು ಪ್ರೀತಿಸುತ್ತಿದ್ದ ನಂದನ್ ಅವರು ಪ್ರತಿಯೊಂದು ಫೋಟೋವನ್ನು ಕೂಡ ಅತ್ಯಂತ ಪ್ರೀತಿ-ಶೃದ್ಧೆ ಹಾಗೂ  ಪ್ರಾಮಾಣಿಕತೆಯಿಂದಲೇ ಕ್ಲಿಕ್ಕಿಸುತ್ತಿದ್ದರು.

ಬೆಳೆಯುವ ಪತ್ರಕರ್ತರನ್ನು ಬೆನ್ತಟ್ಟಿ ಪ್ರೋತ್ಸಾಹಿಸುವ ಔದಾರ್ಯ ನಂದನ್ ಅವರಲ್ಲಿತ್ತು. ಯಾವುದಾದರೂ ಸುದ್ದಿಗಳಿಗೆ ಫೋಟೋಗಳ ಅಗತ್ಯವಿತ್ತೆನ್ನು ವುದನ್ನು ಹೇಳಿದರೆ ಯಾವುದೇ ಮುಜುಗರ ಮಾಡಿಕೊಳ್ಳದೆ ನೀಡಿದ ಸಮಯದೊಳಗೆ ಅದನ್ನು ನೀಡಿ ಅವರಿಂದ ಹಣವನ್ನಾಗಲಿ, ಸೌಜನ್ಯ(ಕೃಪೆ)ವನ್ನಾಗಲಿ ನಿರೀಕ್ಷಿಸುತ್ತಿರಲಿಲ್ಲ.ಉದಯೋನ್ಮುಖ ಬರಹಗಾರರ ಪಾಲಿನ ಡಾರ್ಲಿಂಗ್ ಆಗಿದ್ದರು ನಂದನ್.

ALSO READ :  "ಅಡ್ಡಮತದಾನ"ಕ್ಕೆ ಕೋಟ್ಯಾಂತರ ಆಮಿಷ: ಮೈತ್ರಿ ಅಭ್ಯರ್ಥಿ ಸೇರಿ ನಾಲ್ವರ ವಿರುದ್ಧ FIR

ಬಿ.ಎಸ್ ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ, ಡಿ.ಎಚ್ ಶಂಕರಮೂರ್ತಿ, ಎಸ್ ಬಂಗಾರಪ್ಪ..ಜೆ.ಎಚ್ ಪಟೇಲ್ ಹೀಗೆ ಶಿವಮೊಗ್ಗ ರಾಜಕಾರಣದ ಘಟಾನುಘಟಿ ರಾಜಕಾರಣಿಗಳೇ ಊಹಿಸಲಿಕ್ಕಾಗದ ಭಂಗಿಗಳ ಲ್ಲಿ ಫೋಟೋಗಳನ್ನು ತೆಗೆದು ಅವರಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ದರು ಇದೇ ನಂದನ್.ಅವರು ತೆಗೆದುಕೊಟ್ಟ ಫೋಟೋಗಳೇ ಇವತ್ತಿಗೂ ಆ ರಾಜಕಾರಣಿಗಳ ಐಕಾನಿಕ್ ಫೋಟೋಗಳಾಗಿ ರಾರಾಜಿಸುತ್ತಿವೆ. ಹಾಗಾಗಿ ಎಲ್ಲಾ ರಾಜಕಾರಣಿಗಳು ತಮ್ಮ ವಿಭಿನ್ನ ಭಾವಭಂಗಿಗಳ ಫೋಟೋಗೆ ಇವರನ್ನೇ ಮುಗಿಬೀಳುತ್ತಿದ್ದರು.

ಛಾಯಾಗ್ರಹಣವನ್ನು ಬದುಕನ್ನಾಗಿಸಿಕೊಂಡಿದ್ದ ನಂದನ್  ಪ್ರಾಣಿ-ಪಕ್ಷಿ ಪ್ರೀತಿಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದರು.ಅಪ್ಪಟ ಉರಗಪ್ರೇಮಿಯಾಗಿದ್ದರು.ಬಿಡುವಿದ್ದಾಗಲೆಲ್ಲಾ ಸ್ಟಿಕ್ಕನ್ನು ಹಿಡಿದುಕೊಂಡು ಅಪಾಯದಲ್ಲಿರುವ ಹಾವುಗಳನ್ನು ಹಿಡಿದು ಅದನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟುಬಿಡುವ ಕೆಲಸ ಮಾಡುತ್ತಿದ್ದರು.ವನ್ಯಜೀವಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.ಅವರು ಜೀವಮಾನದಲ್ಲಿ ತೆಗೆದ ಎಷ್ಟೋ ಫೋಟೋಗಳು ಇವತ್ತಿಗೂ ಇಲಾಖೆಯ ಫ್ರೇಮ್ ನ್ನು ಆಲಂಕರಿಸಿವೆ.

ಇದೆಲ್ಲದರ ಜತೆಗೆ ನಂದನ್  ಪಾಲಿಗೆ ಒಂದು ಹಂತದಲ್ಲಿ ಪ್ಲಸ್ ಹಾಗೆಯೇ ಇನ್ನೊಂದು ಹಂತದಲ್ಲಿ ಮೈನೆಸ್ ಎನಿಸುವಂತೆ ಇದ್ದಿದ್ದು ಅವರ ಮುನಿಸು-ಸಿಟ್ಟು.ತನ್ನ ಮುಂದೆ ಯಾರಿಂದಲೇ ತಪ್ಪಾದರೂ ಅದನ್ನು ನೇರಾನೇರ ಖಂಡಿಸುತ್ತಿದ್ದ ನಿಷ್ಟೂರ ಮನಸ್ಥಿತಿಯ ವ್ಯಕ್ತಿಯಾಗಿದ್ದರು.ಅದೆಷ್ಟೋ ರಾಜಕಾರಣಿಗಳ ನ್ನು,ಗಣ್ಯರನ್ನು ವೇದಿಕೆಯಲ್ಲೇ ಬೈಯ್ದು ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿ ಬಂದ ನಿದರ್ಶನಗಳು ಎಷ್ಟೋ ಇವೆ.ಈ ಕಾರಣಕ್ಕೆ ಹಲವರು ಅವರನ್ನು ಮೆಚ್ಚಿಕೊಂಡರೆ ಬಹುತೇಕರು ಅವರನ್ನು ವಿರೋಧಿಸಿದ್ದೂ ಇದೆ.ಆದ್ರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮನಸಿಗೆ ಅನ್ನಿಸಿದ್ದನ್ನು ಮಾಡುತ್ತಿದ್ದರು ನಂದನ್.

ಇಂಥಾ ನಂದನ್ ಹೃದಯಸ್ಥಂಭನಕ್ಕೆ ಬಲಿಯಾಗಿದ್ದಾರೆ.ಅವರ ಸಾವು ನಿಜಕ್ಕೂ ದೊಡ್ಡ ಮಟ್ಟದ ನಷ್ಟ.ಒಬ್ಬ ಅತ್ಯದ್ಭುತ ಹಾಗೂ ಕ್ರಿಯಾಶೀಲ ಛಾಯಾಗ್ರಾಹಕ ನನ್ನು ಕಳೆದುಕೊಂಡಂತಾಗಿದೆ.ಅವರ ಸಾವನ್ನೇ ಉಲ್ಲೇಖಿಸಿ ಹಿರಿಯ ಮಾದ್ಯಮ ಮಿತ್ರರಾದ ಶಿ.ಜು ಪಾಷಾ ಬರೆದಿರುವ ಕಿರುಕವನ ಅರ್ಥಪೂರ್ಣವೆನಿಸುತ್ತದೆ.

ಚಿತ್ರದುರ್ಗದ ಮಾದ್ಯಮ ಮಿತ್ರ  ಮಹೇಶ್ ಬಾಬು ಶಿವಮೊಗ್ಗದಲ್ಲಿ ಸುವರ್ಣ ನ್ಯೂಸ್ ನಲ್ಲಿ ಕೆಲಸ ಮಾಡುವಾಗ ನಂದನ್ ಜತೆಗಿನ ಒಡನಾಟವನ್ನು ಹೀಗೆ ವಿವರಿಸಿದ್ದಾನೆ.

“ದೇಣಿಗೆ ಸಂಗ್ರಹದ ಡಬ್ಬ ಕೈಯಲ್ಲಿ ಹಿಡಿದಿದ್ದ ಕೈತುಂಬಾ ಚೈನು,ಉಂಗುರ ಇದ್ದಿದ್ದನ್ನು  ಹಾಗೂ ಸ್ಮಶಾನದ ಕಾಂಪೌಂಡ್ ಮೇಲೆ ನಿವೇಶನ ಮಾರಾಟಕ್ಕಿವೆ ಎಂಬ ಚಿತ್ರ..ಹೀಗೆ ಅನೇಕ ಸೂಕ್ಷ್ಮತೆ,ವ್ಯವಸ್ಥೆ ಬಿಂಬಿಸುವ ಫೋಟೋಗಳಲ್ಲಿ ಸದಾ ಜೀವಂತ ಇರುತ್ತಾರೆ ನಂದನ್”

ಹಾಗೆಯೇ ನಂದನ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ವಕೀಲ ಹಾಗೂ ಪ್ರಗತಿಪರ  ಹೋರಾಟಗಾರ ಕೆ.ಪಿ ಶ್ರೀಪಾಲ್ ಅವರು ನಂದನ್ “ ತೆಗೆದ ಚಿತ್ರಗಳು,ಉಳಿಸಿದ ಮರಗಳು ಹಾಗೂ ಅವುಗಳ ಬಗ್ಗೆ  ತೋರಿದ ಪ್ರೀತಿ-ಕಾಳಜಿಯಲ್ಲಿ ಚಿರಾಯು”ವಾಗಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.


Political News

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

Scroll to Top