advertise here

Search

EXCLUSIVE.. ಹೊಸ ವರ್ಷದಂದೇ ಸರ್ಕಾರದಿಂದ 4 ಸಾರಿಗೆ ನಿಗಮಗಳಿಗೆ 2,000 ಕೋಟಿ ಬಂಪರ್ ಗಿಫ್ಟ್..


ವಾ. ಸಾರಿಗೆ-646 ಕೋಟಿ, ಕ.ರಾ.ರ.ಸಾ.ನಿಗಮ-623.80 ಕೋಟಿ, ಬೆಂ.ಮ.ಸಾ.ಸಂಸ್ಥೆ-589.20 ಕೋಟಿ, ಕ.ಕ.ರಾ.ರ.ಸಾರಿಗೆಗೆ 141 ಕೋಟಿ ಬಂಪರ್.

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಬಿಎಂಟಿಸಿ,ಕೆಎಸ್ ಆರ್ ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಸರ್ಕಾರ ಹೊಸ ವರ್ಷದ ಬಂಪರ್ ಗಿಫ್ಟ್ ನೀಡಿದೆ. 2025ನ್ನು ಸಂಭ್ರಮದಿಂದ ಆಚರಿಸಿಕೊಳ್ಳಲು ಅನುವಾಗುವಂತೆ ನಾಲ್ಕು ನಿಗಮಗಳಿಗೆ 2000 ಕೋಟಿ ಹಣ ಬಿಡುಗಡೆ ಮಾಡಿದೆ.ಈ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.ಪರಿಸ್ಥಿತಿ ಹೀಗೆಯೇ ಮುಂದುವ ರುದ್ರೆ ನಿಗಮಗಳ ಬಾಗಿಲು ಮುಚ್ಚಬೇಕಾಗುತ್ತದೆ ಎಂದು ವಿಪಕ್ಷಗಳಾದಿಯಾಗಿ ನಾಗರಿಕರು ಅಭಿಪ್ರಾಯಿಸಿದ್ದರು.ಆದರೆ ಸರ್ಕಾರ ಈ ವಾದವನ್ನು ತಳ್ಳಿ ಹಾಕುತ್ತಲೇ ಬರುತ್ತಿತ್ತಲ್ಲದೇ ಯಾವುದೇ ಕಾರಣಕ್ಕೂ ಸಾರಿಗೆ ಸಂಸ್ಥೆಗಳನ್ನು ಮುಳುಗಲು ಬಿಡುವುದಿಲ್ಲ ಎನ್ನುತ್ತಿತ್ತು.ಅಗತ್ಯ ಆರ್ಥಿಕ ನೆರವು ನೀಡುವುದಾಗಿಯೂ ಹೇಳಿತ್ತು.ಕೊಟ್ಟ ಮಾತಿನಂತೆ 2 ಸಾವಿರ ಕೋಟಿ ಹಣವನ್ನು  ಡಿಸೆಂಬರ್ 31 ರಂದೇ  ಬಿಡುಗಡೆ ಮಾಡಿ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿಗಳ ಕಚೇರಿಯಿಂದ ಪ್ರಕಟಣೆ ಹೊರಡಿಸಿದೆ.

ನಾಲ್ಕು ಸಾರಿಗೆ ನಿಗಮಗಳಿಗೆ ಅತ್ಯವಶ್ಯಕವಾಗಿ ಬೇಕಿರುವ ಭವಿಷ್ಯನಿಧಿ ಹಾಗೂ ಇಂಧನ ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ 2,000 ಕೋಟಿ ಹಣವನ್ನು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದೆ.ಪತ್ರಿಕಾ ಪ್ರಕಟಣೆಯಲ್ಲೇ ಇರುವಂತೆ ನವೆಂಬರ್-2024 ರ ಅಂತ್ಯದ ಹೋಲಿಕೆಯಲ್ಲಿ ಅನೇಕ ವಿಷಯಗಳಿಗೆ ಅನ್ವಯವಾಗುವಂತೆ ನಾಲ್ಕು ಸಂಸ್ಥೆಗಳ ಮೇಲೆ 6,330 ಕೋಟಿ ಆರ್ಥಿಕ ಹೊರೆ ಇತ್ತಂತೆ.

ರಾಜ್ಯ ಸರ್ಕಾರದಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಬಿಡುಗಡೆಯಾಗಿರುವ 2,000 ಕೋಟಿ ಹಣಕಾಸಿನ ವಿವರ
ರಾಜ್ಯ ಸರ್ಕಾರದಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಬಿಡುಗಡೆಯಾಗಿರುವ 2,000 ಕೋಟಿ ಹಣಕಾಸಿನ ವಿವರ

ನವೆಂಬರ್ ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಪಾವತಿ ಮಾಡಲು ಒಟ್ಟು 5227.46 ಕೋಟಿ ಅವಶ್ಯಕತೆ ಇದೆ ಇದರಲ್ಲಿ ಮುಖ್ಯವಾಗಿ ಭವಿಷ್ಯ ನಿಧಿ ಬಾಕಿ ಮೊತ್ತ 2901.53 ಕೋಟಿ ಹಾಗೂ ಇಂಧನದ ಬಾಕಿ ಮೊತ್ತ 827.37 ಕೋಟಿ ಹೀಗೆ 3728.90 ಕೋಟಿ ಸಾಲದ ಅವಶ್ಯಕತೆ ಇರುತ್ತದೆ.ನಿಗಮಗಳು ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಹಾಗೂ ಶಾಸನಬದ್ಧವಾಗಿ ಸಿಬ್ಬಂದಿಗೆ  ಪಾವತಿಸಬೇಕಿರುವ ಭವಿಷ್ಯ ನಿಧಿ ಹಾಗೂ ಇಂಧನದ ಬಾಕಿ ಪಾವತಿಸಲು 3728.90 ಕೋಟಿ ಸಾಲದ ಅವಶ್ಯಕತೆ ಇದೆ ಎಂದು ತಿಳಿಸಿದೆ.

ALSO READ :  3 ಸಾರಿಗೆ ನಿಗಮಗಳ ನೂತನ ಅಧ್ಯಕ್ಷರಿಗೆ ನೂರು ಸವಾಲು...-ದಾರಿ ತುಂಬೆಲ್ಲಾ ಮುಳ್ಳು...-ಅವ್ಯವಸ್ಥೆ ಸರಿಯಾದರೆ ಮಾತ್ರ ಉದ್ದಾರ...-ಶ್ರಮಿಕರ ಬದುಕೂ ಹಸನು...

ಸದರಿ ಸಾಲದ ಮರುಪಾವತಿಗೆ ತಗಲುವ ಅಸಲು ಮತ್ತು ಬಡ್ಡಿ ಮೊತ್ತವನ್ನು ಸರ್ಕಾರವೇ ಭರಿಸುವಂತೆ ಮನವಿ ಮಾಡಲಾಗಿತ್ತು.ಇದರ ಅನ್ವಯ ನಾಲ್ಕು ನಿಗಮ ಸಂಸ್ಥೆಗಳಿಗೆ ಸರ್ಕಾರದ “ಸರ್ವಿಸ್ ಲೋನ್” ಅನ್ನು ಪಡೆಯಲು ಅನುಮತಿ ನೀಡಲಾಗಿದೆ.ಇದರನ್ವಯ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಿಗೆ  ನವೆಂಬರ್ 2024 ರ ಅಂತ್ಯಕ್ಕೆ ಬಾಕಿ ಉಳಿಸಿಕೊಂಡಿರುವ ಸಾಲ ಪಾವತಿಸಲು ನಿರ್ದರಿಸಿ 2,00 ಕೋಟಿ ಹಣವನ್ನು ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.

2,000 ಕೋಟಿ ಹಣದ ಪೈಕಿ  ಅತೀ ಹೆಚ್ಚಿನ ಪಾಲನ್ನು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪಡೆದುಕೊಂಡಿದೆ. ವಾಯುವ್ಯ ಸಾರಿಗೆಗೆ  646 ಕೋಟಿ ಹಣಕಾಸಿನ ನೆರವು ದೊರೆತಿದ್ದರೆ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 623.80 ಕೋಟಿ ಬಿಡುಗಡೆ ಮಾಡಲಾಗಿದೆ.ಇನ್ನು  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 589.20  ಕೋಟಿ ಹಾಗೂ   ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 141 ಕೋಟಿ ಹಣಕಾಸಿನ ನೆರವು ದೊರೆತಿದೆ.


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top