advertise here

Search

ಬಿಎಂಟಿಸಿ ಸಿಬ್ಬಂದಿಗೆ “ಹಬ್ಬದ ರಜೆ” ಯಲ್ಲಿ ಘೋರ ಅನ್ಯಾಯ..!?


ಇಂತದ್ದೊಂದು ವ್ಯವಸ್ಥೆ ಬಿಎಂಟಿಸಿಯಲ್ಲಿ ಇದೆ ಎಂದು ಕೇಳಿಯೇ ಮೈ ಉರಿದು ಹೋಗುತ್ತೆ..ಕಾಲ ಬದಲಾಗುತ್ತಿದ್ದರೂ ಇನ್ನೂ ಹೊಸತನಕ್ಕೆ ಇಲ್ಲಿನ ಆಡಳಿತ ತೆರೆದುಕೊಂಡಿಲ್ಲ ಎಂದ್ರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ ಎನ್ನಿಸುತ್ತೆ.ಅಂದ್ಹಾಗೆ ಈ ಕೆಟ್ಟ ವ್ಯವಸ್ಥೆಯ ಮಾಹಿತಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಇಲ್ಲ ಎಂದರೆ  ಕ್ಷಮಿಸಿ ಬಿಡಬಹುದೇನೋ..? ಆದರೆ ಒಂದ್ವೇಳೆ  ಮಾಹಿತಿ ಇದ್ದಾಗ್ಯೂ ಇದನ್ನು ರದ್ದು ಮಾಡದೆ ಇರುವುದೇ ಸತ್ಯವಾದರೆ ಅವರ ನಿಲುವು-ಧೋರಣೆಗೂ ನಮ್ಮ ವಿರೋಧವಿದೆ.

ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರೋರು ಅಲ್ಲಿನ ಆಡಳಿತಕ್ಕೆ ಮನುಷ್ಯರೆಂದು ಅನ್ನಿಸಿಯೇ ಇಲ್ಲವೇನೋ ಅನ್ನಿಸುತ್ತೆ.ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಬಹುತೇಕ ವಿಚಾರಗಳಲ್ಲಿ ತಮ್ಮದೇ ಆಯ್ಕೆಯ ಸ್ವಾತಂತ್ರ್ಯವಿರುತ್ತದೆ.ಆದರೆ ಬಿಎಂಟಿಸಿಯಲ್ಲಿ ಮಾತ್ರ ಆ ಆಯ್ಕೆಯ ಸ್ವಾತಂತ್ರ್ಯವನ್ನೇ ಅವರಿಂದ ಕಸಿದುಕೊಳ್ಳಲಾಗಿದೆ.ಅಂತದ್ದೊಂದು ಸ್ಪೋಟಕ ಸಂಗತಿ ಮೇಲೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಬೆಳಕು ಚೆಲ್ಲುತ್ತಿದೆ.

ಎಲ್ಲರಂತೆ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಸಿಬ್ಬಂದಿಗೆ ಅದರಲ್ಲೂ ಡ್ರೈವರ್ಸ್-ಕಂಡಕ್ಟರ್ಸ್‌ ಗಳಿಗೆ ತಮ್ಮ ತಮ್ಮ ಹಬ್ಬ ಆಚರಿಸಿಕೊಳ್ಳುವ ಸ್ವಾತಂತ್ರ್ಯವಿದೆ ಅಲ್ವೇ.. ಹೌದು ಎಂದು ಹೇಳುವವರೇ ಅಚ್ಚರಿ-ಗಾಬರಿಗೊಳ್ಳುವ ಕೆಟ್ಟ ಹಾಗೂ ವಿಚಿತ್ರ ವ್ಯವಸ್ಥೆ ಅಲ್ಲಿ ಆಚರಣೆಯಲ್ಲಿದೆ.ಅದೇ ಆಧ್ಯತೆ ರಜೆಯಲ್ಲಿನ ಬಹುದೊಡ್ಡ ಅನ್ಯಾಯ,

ನೀವು ಇದನ್ನು ಕೇಳಿದ್ರೆ ಬಹುಷಃ ಆಶ್ಚರ್ಯ ಪಡಬಹುದೇನೋ..? ಬಿಎಂಟಿಸಿಯಲ್ಲಿ ಡ್ರೈವರ್ಸ್-ಕಂಡಕ್ಟರ್ಸ್‌ ಗಳು ಅವರ ಹಬ್ಬಗಳನ್ನು ಅಚರಿಸಿಕೊಳ್ಳಲಿಕ್ಕೆ ಸಿಗುವ ಅವಕಾಶಗಳೇ ಕಡ್ಮೆಯಂತೆ.ಇದನ್ನು ನಾವು ಹೇಳುತ್ತಿಲ್ಲ.ದಾಖಲೆಗಳೇ ಇದನ್ನು ಸಾರಿ ಹೇಳುತ್ತವೆ. ಹಿಂದೂ ಧರ್ಮಿಯರಿಗೆ ಅವರ ಹಬ್ಬಗಳನ್ನು ಆಚರಿಸಿಕೊಳ್ಳೊಕ್ಕೆ ಅವಕಾಶಗಳೇ ಸಿಗುತ್ತಿಲ್ಲ ಎನ್ನುವುದಕ್ಕೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ ಸಿಕ್ಕಿರುವ ದಾಖಲೆಗಳೇ ಸಾಕ್ಷಿ. ಹಬ್ಬ ಹರಿದಿನಗಳಲ್ಲೂ ಡ್ಯೂಟಿ ಮಾಡಬೇಕಾದ ಪರಿಸ್ತಿತಿಯಲ್ಲಿ ಸಿಬ್ಬಂದಿಯಿದ್ದಾರೆ.

ಇದು ಕೇವಲ ಹಿಂದೂ ಧರ್ಮದ ಸಿಬ್ಬಂದಿ ಕಥೆಯಲ್ಲ.ಮುಸ್ಲಿಂ ಅಥವಾ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದ ಸಿಬ್ಬಂದಿಯದು ಇದೇ ಗೋಳಿನ ಕಥೆ.ಅವರವರ ಹಬ್ಬಗಳನ್ನು ಆಚರಿಸಿಕೊಳ್ಳೊಕ್ಕೆ ಅವಕಾಶ ಕೊಡುವುದನ್ನು ಬಿಟ್ಟು ಅನ್ಯಧರ್ಮೀಯರ ಹಬ್ಬಗಳಂದು ರಜೆ ನೀಡುತ್ತಿರುವುದು ಸಿಬ್ಬಂದಿ ಸಮೂಹವನ್ನೇ ಕೆಂಡಾಮಂಡಲಗೊಳಿಸಿದೆ. ನಮ್ಮ ಹಬ್ಬಗಳಂದು ಡ್ಯೂಟಿ ಮಾಡುವಂತೆ ಹೇಳಿ ಬೇರೆಯವರ ಹಬ್ಬಗಳಂದು ರಜೆ ಕೊಟ್ಟರೆ ಅದರಿಂದ ಪ್ರಯೋಜನವೇನು ಎನ್ನುವುದು ಸಿಬ್ಬಂದಿಯ ಅಳಲಿನ ಪ್ರಶ್ನೆ.

ಹಿಂದೂ ಧರ್ಮದ ಸಿಬ್ಬಂದಿಗೆ ಮುಸ್ಲಿಂ,ಕ್ರಿಶ್ವಿಯನ್‌ ಹಬ್ಬಗಳಂದು ರಜೆ ಕೊಡಲಾಗ್ತಿದೆ. ಹಾಗೆಯೇ ಮುಸ್ಲಿಂರಿಗೆ ಹಿಂದೂ ಕ್ರಿಶ್ಚಿಯನ್‌ ಹಬ್ಬಗಳಲ್ಲಿ ರಜೆ ಕೊಡಲಾಗ್ತದೆ.ಹಾಗೆಯೇ ಕ್ರಿಶ್ಚಿಯನ್‌ ಸಿಬ್ಬಂದಿಗೆ ಹಿಂದೂ ಅಥವಾ ಮುಸ್ಲಿಂ ಧರ್ಮಿಯರ ಹಬ್ಬಗಳಂದು ರಜೆ ಕೊಡುವ ಕೆಟ್ಟ ವ್ಯವಸ್ಥೆ ಜಾರಿಯಲ್ಲಿದೆ.ಇದು ಎಲ್ಲಾ ಸಮುದಾಯದವರನ್ನು ವ್ಯಗ್ರಗೊಳಿಸಿದೆ.

ಅವರವರ ಹಬ್ಬಗಳಂದು ರಜೆ ಕೊಟ್ಟರೆ ಸಿಬ್ಬಂದಿಯ ಕೊರತೆ ಎದುರಾಗುತ್ತದೆ ಎನ್ನುವುದು ಬಿಎಂಟಿಸಿ ಆಡಳಿತದ ವಾದವಾಗಿರಬಹುದೆಂದೇ ಇಟ್ಟುಕೊಳ್ಳೋಣ.ಆದರೆ ಹಬ್ಬಗಳಂದು ಬಸ್‌ ಗಳ ಕಾರ್ಯಾಚರಣೆ ನಡೆಯುವುದೇ ಕಡಿಮೆ.ಅಬ್ಬಬ್ಬಾ ಎಂದ್ರೆ ಶೇಕಡಾ 50 ರಷ್ಟು ಬಸ್‌ ಗಳು ಕಾರ್ಯಾಚರಣೆ ಮಾಡುವುದು ಕಷ್ಟ..ಪರಿಸ್ತಿತಿ ಹೀಗಿರುವಾಗ ಸೇವೆಗೆ ಲಭ್ಯವಿರುವಷ್ಟು ಸಿಬ್ಬಂದಿಯನ್ನು ಉಳಿಸಿಕೊಂಡು ಉಳಿದವರಿಗೆ ರಜೆ ಕೊಟ್ಟರೆ ಅದರಿಂದ ಆಗುವ ಸಮಸ್ಯೆಯೇನು..? ಎಷ್ಟೋ ಬಾರಿ ಡ್ಯೂಟಿಗೆ ಬಂದು ಕೆಲಸವಿಲ್ಲದೆ ಸುಮ್ಮನೆ ಕೂತು ಸಂಜೆ ವೇಳೆ ಮನೆಗೆ ಹೋದ ಉದಾಹರಣೆಗಳಿವೆ ಎಂದು ಅನೇಕರು ಹೇಳಿದ್ದಾರೆ. ಇದೆಲ್ಲವನ್ನು ಗಮನಿಸಿದ್ರೆ ನಮ್ಮನ್ನು ಗೋಳೋಯ್ದುಕೊಳ್ಳಲೇಬೇಕೆಂದೇ ಈ ರೀತಿ ನಮ್ಮನ್ನು ಸತಾಯಿಸಲಾಗುತ್ತಿದೆ ಎನ್ನೋದು ಬಹುತೇಕ ಸಿಬ್ಬಂದಿಯ ಅಳಲು.

ALSO READ :  ಕಲಬುರಗಿಯಲ್ಲಿ ಕಾರು-ಬೈಕ್-ಲಾರಿ ಸರಣಿ ಅಪಘಾತ: ನಾಲ್ವರ ದುರ್ಮರಣ

ನಾವು ನಮ್ಮ ಕುಟುಂಬದವರೊಂದಿಗೆ ಸೇರಿ ಹಬ್ಬ ಆಚರಿಸಿದ ನೆನಪೇ ಇಲ್ಲ ಸಾರ್..ಹಬ್ಬದ ದಿನಗಳಂದು ಇಡೀ ಕುಟುಂಬ ಹಬ್ಬ ಆಚರಿಸಲು ಸಿದ್ದತೆ ಮಾಡಿಕೊಂಡಿರುತ್ತೆ.ಆದರೆ ಅಲ್ಲಿ ಪ್ರಮುಖವಾಗಿ ನಾವೇ ಇರೊಲ್ಲದಂಥ ಸ್ಥಿತಿ ಇರುತ್ತೆ.ಬೇರೆಯವರೆಲ್ಲಾ ಹಬ್ಬ ಮಾಡಿಕೊಳ್ಳುತ್ತಿದ್ದರೆ ನಾವು ಡ್ಯೂಟಿಯಲ್ಲಿರುತ್ತೇವೆ.ನಮ್ಮ ಕುಟುಂಬದವರಿಗೆ ಹೇಗ್ಹಾಗಬೇಡ ಹೇಳಿ..ಯಾವ್‌ ಸುಖಕ್ಕೆ ಇಂಥಾ ಕೆಲಸ ಮಾಡ್ತೀರ ಹೇಳಿ ಎಂದು ಹೆಂಡ್ತಿ ಮಕ್ಕಳು ಬೈಯ್ತಾರೆ ಸಾರ್…ನಮ್ಮ ಹಬ್ಬಗಳನ್ನು ಆಚರಿಸಿಕೊಳ್ಳೊಕ್ಕೆ ನಮಗೆ ರಜೆ ಕೊಡದೆ ಬೇರೆಯವರ ಹಬ್ಬಗಳಂದು ರಜೆ ಕೊಡ್ತಾರಲ್ಲ..ಇವರಿಗೆ ನಿಜಕ್ಕೂ ಮನುಷ್ಯತ್ವ ಇದೆಯಾ ಸಾರ್.ಎಂದು ಬೇಸರದಿಂದ ಅನೇಕ ಡ್ರೈವರ್ಸ್-ಕಂಡಕ್ಟರ್ಸ್ ತಮ್ಮ ಅಳಲನ್ನು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಜತೆ ತೋಡಿಕೊಂಡಿದ್ದಾರೆ.

ಏಕೆ ಹೀಗೆ ಎಂದು ಬಿಎಂಟಿಸಿ ಅಧಿಕಾರಿಗಳನ್ನು ಕನ್ನಡ ಫ್ಲ್ಯಾಶ್‌ ನ್ಯೂಸ್‌ ವಿಚಾರಿಸಿತು.ಸರ್..‌ ಇದು ಈಗಿನ ವ್ಯವಸ್ಥೆಯಲ್ಲ..ಮೊದಲಿಂದ್ಲೂ ಇದೆ.ಹಬ್ಬಗಳಂದು ಅದೇ ಸಮುದಾಯಕ್ಕೆ ರಜೆ ಕೊಟ್ಟರೆ ಸಿಬ್ಬಂದಿ ಕೊರತೆ ಎದುರಾಗಬಹುದು ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗ್ತಿದೆ.ಹಾಗೆಂದು ಅದೇ ಫೈನಲ್‌ ಅಲ್ಲ. ಬಹುತೇಕ ಸನ್ನಿವೇಶಗಳಲ್ಲಿ ನಾವು ಸಿಬ್ಬಂದಿ ಕೇಳಿದ ದಿನ ರಜೆ ಕೊಡುತ್ತಲೇ ಇದ್ದೇವೆ.ಆಧ್ಯತೆ ರಜೆಯನ್ನು ಔಪಚಾರಿಕವಾಗಿ ವರ್ಷದ ಮೊದಲೇ ಆಯ್ಕೆ ಮಾಡಿಕೊಳ್ಳೊಕ್ಕೆ ಅವಕಾಶ ಕೊಡುತ್ತೇವೆ.ಸಿಬ್ಬಂದಿ ತಮಗೆ ಬೇಕಾದ ದಿನಗಳಂದು ರಜೆ ಕೇಳಿರುತ್ತಾರೆ.ಆದರೆ ಪರಿಸ್ತಿತಿ ನೋಡಿಕೊಂಡು ಹೀಗೊಂದು ವ್ಯವಸ್ಥೆ ಮಾಡಿದ್ದೇವೆ.ಹಾಗೆಂದು ಇದೇ ಫೈನಲ್ಲೂ ಅಲ್ಲ.ನಾವು ಕೂಡ ಅವರಿಗೆ ರಜೆ ತುರ್ತಾಗಿ ಬೇಕೆಂದರೆ ಅದನ್ನು ಮಂಜೂರು ಮಾಡುತ್ತೇವೆ ಎಂದು ಅಧಿಕಾರಿಗಳು ಉತ್ತರಿಸ್ತಾರೆ.

ಈ ಬಗ್ಗೆ ಕಾರ್ಮಿಕ  ಸಂಘಟನೆಯ ಮುಖಂಡ ಆನಂದ್‌ ಅವರನ್ನು ಸಂಪರ್ಕಿಸಿದ ಕನ್ನಡ ಫ್ಲ್ಯಾಶ್‌ ನ್ಯೂಸ್‌   ಸಂಪರ್ಕಿಸಿದಾಗ ಇದನ್ನು ನಾವು ಹಿಂದಿನಿಂದಲೂ ಖಂಡಿಸುತ್ತಾ ಬಂದಿದ್ದೇವೆ.ಆದರೆ ಸಾರ್ವಜನಿಕ ತುರ್ತು ಅಗತ್ಯ ಸೇವೆ ಎನ್ನುವ ನೆವ ಇಟ್ಟುಕೊಂಡು ವ್ಯವಸ್ಥೆ ಮುಂದುವರೆಸುತ್ತಾ ಬರಲಾಗಿದೆ.ಪಾಪ..ಸಿಬ್ಬಂದಿ ತಮ್ಮ ತಮ್ಮ ಹಬ್ಬಗಳನ್ನು ಕುಟುಂಬದೊಂದಿಗೆ ಆಚರಿಸಿಕೊಳ್ಳಲಿಕ್ಕೂ ಅಸಾಧ್ಯವಾಗಿರುವುದು ಖಂಡನಾರ್ಹ.ಇದೇನು ಬದಲಾವಣೆ ಆಗದಂಥ ಸಮಸ್ಯೆಯೇನೂ ಅಲ್ಲ..ಒಂದಷ್ಟು ಬದಲಾವಣೆ ಮಾಡಿಕೊಂಡ್ರೆ ವ್ಯವಸ್ಥೆನೂ ಸರಿಯಾಗುತ್ತೆ.

ಹಾಗೆಯೇ ಸಿಬ್ಬಂದಿನೂ ಕೂಡ ಖುಷಿ ಖುಷಿಯಿಂದ ತಮ್ಮ ಕುಟುಂಬಗಳ ಜತೆ ಹಬ್ಬವನ್ನು ಆಚರಿಸಿಕೊಳ್ಳಬಹುದು.ಆದರೆ ಸಿಬ್ಬಂದಿ ಖುಷಿಯಾಗಿರುವುದು ನಮ್ಮ ಆಡಳಿತಕ್ಕೇನೆ ಇಷ್ಟವಿಲ್ಲದಂತಿಲ್ಲ..ಹಾಗಾಗಿ ಬಿಎಂಟಿಸಿ ಸಿಬ್ಬಂದಿಗೆ ಅವರ ಹಕ್ಕಿನ ರಜೆಯನ್ನು ಕೊಡದೆ ಸತಾಯಿಸಲಾಗುತ್ತಿದೆ.ಸಿಬ್ಬಂದಿ ನೆಮ್ಮದಿ-ಸಂತೋಷ ಹಾಳು ಮಾಡಿ ಸಂಭ್ರಮಿಸುವ ಅನೇಕ  ವಿಕೃತ ಮನಸ್ಥಿತಿಯ ಅಧಿಕಾರಿಗಳು ನಮ್ಮಲ್ಲಿದ್ದಾರೆ.ಇದನ್ನು ಸಚಿವ ರಾಮಲಿಂಗಾರಡ್ಡಿ ಅವರು ಗಮನಿಸಿ ಇಷ್ಟೊತ್ತಿಗಾಗ್ಲೇ ಕ್ರಮ ಜಾರಿ ಮಾಡಬೇಕಿತ್ತು.ಆದರೆ ಅವರು ಸುಮ್ಮನಿರುವುದೇ ಅಚ್ಚರಿ-ಗಾಬರಿ ತಂದಿದೆ ಎನ್ನುತ್ತಾರೆ ಆನಂದ್.‌

ಬಿಎಂಟಿಸಿಯಲ್ಲಿ ಆಧ್ಯತೆ ರಜೆ ನೀಡುವ ವಿಚಾರದಲ್ಲಿ ಉಂಟಾಗಿರುವ ಈ ಗೊಂದಲ ಸಿಬ್ಬಂದಿ ನಡುವೆ ಆಕ್ರೋಶ ಮೂಡಿಸಿದೆ.ಅನೇಕ ಸಿಬ್ಬಂದಿ ಈಗಾಗಲೇ ಇದರಿಂದ ನಮಗೆ ತುಂಬಾ ನೋವಾಗಿದೆ.ಈ ವ್ಯವಸ್ಥೇ ಬದಲಿಸಿ ಪ್ಲೀಸ್‌ ಎಂದು ಪತ್ರ ಬರೆದು ಮನವಿ ಕೂಡ ಮಾಡಿಕೊಂಡಿದ್ದಾರೆ.ಕಾರ್ಮಿಕ ಸಂಘಟನೆಗಳು ಮುಂದಿನ ದಿನಗಳಲ್ಲಿ ಇದರ ವಿರುದ್ದ ಹೋರಾಡುವುದಾಗಿ ಎಚ್ಚರಿಸಿವೆ.

ಈ ವ್ಯವಸ್ಥೆ ಬದಲಾಗಬೇಕೆಂದರೆ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಕಿವಿ ಹಿಂಡಬೇಕಿದೆ. ಇರುವ ವ್ಯವಸ್ಥೆಯನ್ನೇ ಸರಿಪಡಿಸಿಕೊಂಡರೆ ಎಲ್ಲಾ ಧರ್ಮಿಯರಿಗೂ ಅವರವರ ಹಬ್ಬಗಳಂದು ರಜೆ ಪಡೆದು ಸಂಭ್ರಮಿಸುವ ಅವಕಾಶ ನಿರ್ಮಾಣವಾಗೋದು ಕಷ್ಟವೇನಲ್ಲ..ಇದರಿಂದಾಗಿ ಸಾರ್ವಜನಿಕರಿಗೂ ತೊಂದರೆ ಆಗಲಿಕ್ಕಿಲ್ಲವೇನೋ..ಸಚಿವ ರಾಮಲಿಂಗಾರೆಡ್ಡಿ ಆದಷ್ಟು ಬೇಗ ಈ ಬಗ್ಗೆ ಗಮನ ಹರಿಸಬೇಕಿದೆ.ಇಲ್ಲವಾದಲ್ಲಿ ಸಿಬ್ಬಂದಿ ಆಕ್ರೋಶ-ಅಸಮಾಧಾನ-ಬೇಸರ ಬೇರೆಯದೇ ಸ್ವರೂಪ ಪಡೆಯುವ ಆತಂಕವಿದೆ.


Political News

ಬಿಎಂಟಿಸಿ ಸಿಬ್ಬಂದಿಗೆ “ಹಬ್ಬದ ರಜೆ” ಯಲ್ಲಿ ಘೋರ ಅನ್ಯಾಯ..!?

BDA BIG SCAM: 524 ಕೋಟಿ ಬಿಡಿಎ ಅಕ್ರಮ:ತನಿಖೆಗೆ ಕ್ಯಾಪ್ಟನ್ ಮಣಿವಣ್ಣನ್ ರಿಂದ ಸಮಿತಿ ರಚನೆ, ಅಧಿಕಾರಿಗಳಿಗೆ “ಢವ ಢವ”..

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

Scroll to Top