ಒಬ್ಬ ಪತ್ರಕರ್ತ, ಅದರಲ್ಲೂ ಚೆನ್ನಾಗಿ ಬೆಳೆಯಲು ಅವಕಾಶಗಳಿರುವಂಥ, ಹಾಗೆಯೇ ಕೆಲಸ ಮಾಡುವ ಸ್ಥಳಗಳಲ್ಲಿ ಅದೇ ಪ್ರತಿಭೆಯಿಂದ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸುವ ಯೋಗ್ಯತೆ ಇರುವ ಒಬ್ಬ ಪತ್ರಕರ್ತ ವಿಪರೀತ ಹಣದಾಸೆಗೆ ಬಲಿಬಿದ್ದು ಅಡ್ಡಹಾದಿ ತುಳಿದರೆ, ನೈತಿಕತೆ ಮತ್ತು ಸಿದ್ಧಾಂತವನ್ನು ಬಲಿಕೊಟ್ಟರೆ, ಆತನ ವೃತ್ತಿಜೀವನ ಹೇಗೆ ಹಳ್ಳ ಹಿಡಿಯುತ್ತದೆ ಎನ್ನುವುದಕ್ಕೆ ಈ ಪತ್ರಕರ್ತನಿಗಿಂತ ಅತ್ಯಂತ ಕೆಟ್ಟ ಉದಾಹರಣೆ-ನಿದರ್ಶನ ಮತ್ತೊಂದಿಲ್ಲವೇನೋ..?!
ಸುಭದ್ರ ಸಮಾಜ ಕಟ್ಟುವ ಹಾಗೂ ದೇಶ ನಿರ್ಮಿಸುವ ಬಹುದೊಡ್ಡ ಹಾಗೂ ನಿರ್ಣಾಯಕವಾದ ಜವಾಬ್ದಾರಿ ಹೊಂದಿರುವ ಮಾಧ್ಯಮ ಕ್ಷೇತ್ರದ ಒಳಹೊರಗನ್ನು ಇದ್ದದ್ದನ್ನು ಇದ್ದ ಹಾಗೆಯೇ ಬಿಂಬಿಸುವ ಕೆಲಸವನ್ನು ‘ಕನ್ನಡ ಫ್ಲ್ಯಾಶ್ ನ್ಯೂಸ್’ ಪಾರದರ್ಶಕವಾಗಿ ಮಾಡುತ್ತಿದೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಸುದ್ದಿಮಿತ್ರರಿಗೇ ಗೊತ್ತಿಲ್ಲದ ಎಷ್ಟೋ ಕಹಿ ಸತ್ಯಗಳನ್ನು ನಿರ್ಭೀತಿಯಿಂದ ಹೇಳುವ ಎದೆಗಾರಿಕೆಯಲ್ಲಿ ಕೆಲಸ ಮಾಡಿದ್ದೇವೆ ಎನ್ನುವ ಸಂತೃಪ್ತ ಭಾವ ನಮ್ಮದು. ಸುದ್ದಿ ಮಾಧ್ಯಮಗಳು ಒಳ್ಳೆಯ ಕೆಲಸ ಮಾಡಿದಾಗ ಮೆಚ್ಚಿದ್ದೇವೆ, ಬೆನ್ನುತಟ್ಟಿದ್ದೇವೆ, ಹಾದಿ ತಪ್ಪಿದಾಗ ಎಚ್ಚರಿಸಿದ್ದೇವೆ. ಸುದ್ದಿಮಿತ್ರರು ಜವಾಬ್ದಾರಿ ಮರೆತಾಗ ಮೈದಡವಿ ಬುದ್ಧಿ ಹೇಳಿದ್ದೇವೆ. ಸುದ್ದಿಸಂಸ್ಥೆಗಳು ಹಾಗೂ ಅವುಗಳ ಕೊಟ್ಟ ಹುದ್ದೆಯ ಹೊಣೆಗಾರಿಕೆಯನ್ನು ಆಯಕಟ್ಟಿನ ಹುದ್ದೆಗಳಲ್ಲಿರುವ “ಮುಖ್ಯಸ್ಥರು” ತಮ್ಮ ಸ್ವಾರ್ಥ-ಹಿತಾಸಕ್ತಿಗಳಿಗೆ ದುರ್ಬಳಕೆ ಮಾಡಿಕೊಂಡಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದೇವೆ. ನಿಮಗೆ ತಿಳಿದಿರಲಿ, ಸಮಾಜವನ್ನು ಸುಧಾರಿಸುವ ಮಾರ್ಗದಲ್ಲಿ ನಮ್ಮ ಹೆಜ್ಜೆಗಳು, ನಮ್ಮ ನಿರ್ಧಾರಗಳಷ್ಟೇ ದೃಢ ಹಾಗೂ ನಿಶ್ಚಲ ಮತ್ತು ನಿಶ್ಚಿತವಾಗಿವೆ.
ಇದನ್ನೆಲ್ಲಾ ಹೇಳೋಕೆ, ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ ನಾವು ಹೇಳ ಹೊರಟಿರುವ ಆ ಪತ್ರಕರ್ತ ಮತ್ತು ಆತನ ವಿಕೃತಿಯಿಂದಾದ ಯಡವಟ್ಟುಗಳು. ತುಂಬಾ ಆಳಕ್ಕಿಳಿದು ಆತನ ಬಗ್ಗೆ ಹೇಳಲ್ಲ. ಏಕೆಂದರೆ ಹಾಗೇನಾದರೂ ಆಳಕ್ಕಿಳಿದರೆ ಹೇಳಬೇಕಾಗುವಂತ ಸತ್ಯಗಳನ್ನು ಅರಗಿಸಿಕೊಳ್ಳುವುದು ಆತನಿಗೇ ಕಷ್ಟ ಮತ್ತು ಅಸಹನೀಯವಾಗಬಹುದು. ಪತ್ರಿಕೋದ್ಯಮ ತನ್ನ ನೈತಿಕತೆ ಮತ್ತು ಸಿದ್ಧಾಂತವನ್ನು ಬಹುತೇಕ ಕಳೆದುಕೊಂಡಿರುವ ಸಂದರ್ಭದಲ್ಲಿಯೂ ಒಂದಷ್ಟು ಮೌಲ್ಯಾದರ್ಶಗಳನ್ನು ಉಳಿಸಿಕೊಂಡು ಕೆಲಸ ಮಾಡುತ್ತಿರುವ ಒಂದಷ್ಟು ಮಾಧ್ಯಮ ಮಿತ್ರರು ಈ ಮಾಧ್ಯಮ ವೃತ್ತಿ ಬಗ್ಗೆನೇ ಸಂಪೂರ್ಣ ಜಿಗುಪ್ಸೆ ಹೊಂದಬಹುದು. ಹಾಗಾಗಿ ಆತನಿಗೆ ಸಂಬಂಧಿಸಿದ ಆ ಒಂದು ಸಂದರ್ಭವನ್ನಷ್ಟೇ ವಿವರಿಸುವ ಕೆಲಸ ಮಾಡುತ್ತೇವೆ. ಇದನ್ನು ಓದಿದ ಮೇಲೆ ಇವತ್ತಿನ ಕಾಲಘಟ್ಟದಲ್ಲಿ ಆತನ ಬಗ್ಗೆ ಬರೆಯಬೇಕಾದ ಅವಶ್ಯಕತೆ, ಅನಿವಾರ್ಯತೆ ಇತ್ತೋ ನಮಗೆ ಇಲ್ಲವೋ ಎನ್ನುವುದನ್ನು ನೀವೇ ಬರೆದು ತಿಳಿಸಿ.
ಇಷ್ಟೆಲ್ಲಾ ಹೇಳುತ್ತಿರುವುದು ಯಾರ ಬಗ್ಗೆ?
ಅಂದಹಾಗೆ ಇವತ್ತು ಕನ್ನಡ ಫ್ಲ್ಯಾಶ್ ನ್ಯೂಸ್ ಹೇಳಹೊರಟಿರುವುದು ಪ್ರೀತಮ್ ಕೆಮ್ಮಾಯಿ ಎನ್ನುವ ಪತ್ರಕರ್ತನ ಬಗ್ಗೆ. ಕರಾವಳಿ ಮೂಲದ ಪ್ರೀತಮ್ ಓರ್ವ ಪ್ರತಿಭಾನ್ವಿತ, ಒಳ್ಳೆಯ ಕೆಲಸಗಾರ, ಪರಿಶ್ರಮಿ ಎನ್ನುವುದರಲ್ಲಿ ಅನುಮಾನವೇ ಇಲ್ಲ (ಗುಣಕ್ಕೆ ಮತ್ಸರವೇಕೆ..ಅಲ್ವಾ..!). ಸಣ್ಣ ವಯಸ್ಸಿನಲ್ಲೇ ಒಳ್ಳೆಯ ಚಾನೆಲ್‌ನಲ್ಲಿ ಕೆಲಸ ಮಾಡುವ ಅರ್ಹತೆ ಪಡೆದುಕೊಂಡಿದ್ದು ಅದೇ ಪ್ರತಿಭೆ ಕಾರಣಕ್ಕೆ ಎನ್ನುವುದು ಕೂಡ ಅಷ್ಟೇ ಸತ್ಯ. ಸುದ್ದಿ ಮನೆಯಲ್ಲಿ ಈತನೊಬ್ಬನಿದ್ದರೆ “ಆನೆಬಲ” ಎನ್ನುವಷ್ಟರ ಮಟ್ಟಿಗೆ ಕಸುವನ್ನು ಹೊಂದಿದ್ದಾತ. ಚಾನೆಲ್ ಅನ್ನು ಒನ್ ಮ್ಯಾನ್ ಆರ್ಮಿಯಾಗಿ ನಿರ್ವಹಿಸಬಲ್ಲಂತ ಕೆಪಾಸಿಟಿಯೂ ಆತನಿಗಿತ್ತು. ಆದರೆ ಆತನಿಗಿದ್ದ ಪ್ರತಿಭೆ ಜೊತೆ ಸಂಯಮ-ತಾಳ್ಮೆ-ವಿನಯವಂತಿಕೆ ಸೇರಿಕೊಂಡಿದ್ದಿದ್ದರೆ ಬಹುಷಃ: ಪ್ರೀತಮ್ ಎನ್ನುವ ಪತ್ರಕರ್ತ ಎಲ್ಲೋ ಹೋಗಿ ರೀಚ್ ಆಗಿಬಿಡುತ್ತಿದ್ದನೇನೋ..? ಆದರೆ ತನ್ನಿಂದಲೇ ಎಲ್ಲಾ ಎನ್ನುವ ಅಹಂ ಯಾವಾಗ ನೆತ್ತಿಗೇರಿತೋ ಆತನನ್ನು ಅಡ್ಡದಾರಿಗೆ ಕೊಂಡೊಯ್ಯಿತು. ದಿಢೀರ್ ಶ್ರೀಮಂತನಾಗುವ ಕೆಟ್ಟ ಖಯಾಲಿ ಆತನ ವೃತ್ತಿ ಜೀವನವನ್ನೇ ಹಳ್ಳ ಹಿಡಿಸಿಬಿಡ್ತು ಎನ್ನಿಸುತ್ತೆ.

ಈ ಪ್ರೀತಮ್ ಕೆಮ್ಮಾಯಿ, ಎಂಥಾ ಮಾನಗೇಡಿ, ಎಷ್ಟು ಪ್ರಳಯಾಂತಕ, ಯಾವ ಮಟ್ಟದ ಪರಮ ಅಸಹ್ಯದ ಪತ್ರಕರ್ತ ಎನ್ನುವುದನ್ನು ಒಂದು ಘಟನೆ ಇಟ್ಟುಕೊಂಡು ವಿವರಿಸುತ್ತೇವೆ ಕೇಳಿ (ಆತನ ಬಗ್ಗೆ ಹೇಳೋಕೆ ಸಾಕಷ್ಟಿದ್ದರೂ ಅದರ ಚರ್ಚೆಗೆ ಹೋಗುವುದಿಲ್ಲ, ಹೇಳುತ್ತಾ ಹೋದರೆ ಅದೇ ಎಷ್ಟೋ ಎಪಿಸೋಡ್‌ಗಳಷ್ಟಾಗಬಹುದು, ಇರಲಿ, ಕಾಲ ಬಂದಾಗ ವಿವರಿಸುತ್ತೇವೆ). ಮೊನ್ನೆ ಮೊನ್ನೆ ಅಂದರೆ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಆತ ಈ ಹಿಂದೆ ಕೆಲಸ ಮಾಡುತ್ತಿದ್ದ ಜನತಾ ಟಿವಿಯ ನಿರ್ದೇಶಕರಿಗೆ ರಾಜಾಜಿನಗರ ಪೊಲೀಸ್ ಠಾಣೆಯಿಂದ ಕರೆ ಬರುತ್ತೆ. ಸ್ಟೇಷನ್‌ಗೆ ಹೋದಾಗ ಅಲ್ಲಿನ ಸಿಬ್ಬಂದಿ ಪ್ರೀತಮ್ ಕೆಮ್ಮಾಯಿ ಎಂಬಾತ ನಿಮ್ಮ ಮೇಲೆ ಆತನ ಲ್ಯಾಪ್‌ಟಾಪ್ ಅಕ್ರಮವಾಗಿ ಹಿಡಿದಿಟ್ಟುಕೊಂಡಿರುವ ಬಗ್ಗೆ ದೂರನ್ನು ನೀಡಿರುವುದಾಗಿ ತಿಳಿಸುತ್ತಾರೆ. ನಿರ್ದೇಶಕರಿಗೆ ಆ ಆಪಾದನೆಯಿಂದ ಅಘಾತವಾಗಲಿ ಆಶ್ಚರ್ಯವಾಗಲಿ ಆಗಲಿಲ್ಲ. ಏಕೆಂದರೆ ಅದನ್ನು ಯಾವ ಕಾರಣಕ್ಕೆ ಕೊಡುತ್ತಿಲ್ಲ, ಹಾಗೆಯೇ ಯಾವ ಸನ್ನಿವೇಶದಲ್ಲಿ ಕೊಡಬೇಕು ಎನ್ನುವ ಸ್ಪಷ್ಟತೆ ಅವರಲ್ಲಿತ್ತು. ಈ ನಡುವೆ ಯಾವ ಕಾರಣಕ್ಕೆ ಲ್ಯಾಪ್‌ಟಾಪ್ ವಾಪಸ್ ಕೊಡದೆ ಇಟ್ಟುಕೊಂಡಿದ್ದಾರೆ ಎನ್ನುವುದನ್ನು ಆತ ಪೊಲೀಸರಿಗೆ ತಿಳಿಸಿರುವುದೇ ಇಲ್ಲ. ಆ ಕಾರಣಗಳನ್ನು ಪೊಲೀಸ್ ಅಧಿಕಾರಿಗಳ ಮುಂದೆ ಇಟ್ಟಾಗ ಅವರೇ ಶಾಕ್..!
ಅಸಲಿಗೆ ಏನಿದೆ ಆ ಲ್ಯಾಪ್‌ಟಾಪ್‌ನಲ್ಲಿ..
ರಾಜಾಜಿನಗರ ಪೊಲೀಸರಲ್ಲಿ ತನ್ನ ಲ್ಯಾಪ್‌ಟಾಪ್ ಕೊಡಿಸಿ ಸರ್ ಎಂದು ಅವಲತ್ತುಕೊಂಡ ಪ್ರೀತಮ್ ಕೆಮ್ಮಾಯಿಗೆ ಆ ಲ್ಯಾಪ್‌ಟಾಪ್‌ನಲ್ಲಿ ತನ್ನ ಮಾನ ಹೋಗುವ ವಿಡಿಯೋಗಳಿವೆ ಎನ್ನುವುದು ಗೊತ್ತಿತ್ತು. ಎಲ್ಲವನ್ನೂ ಖುಲ್ಲಂಖುಲ್ಲಾ ತಿಳಿಸಿಯೇ ಅದನ್ನು ಪೊಲೀಸರಿಗೇ ನೀಡಬೇಕೆನ್ನುವ ಉದ್ದೇಶ ಜನತಾ ಟಿವಿ ನಿರ್ದೇಶಕರದ್ದಾಗಿತ್ತು. ಬಹುಷಃ ಆತನಿಂದಲೇ ಈಗ ಅದನ್ನು ಪೊಲೀಸರಿಗೆ ತೋರಿಸುವ ಕಾಲ ಎದುರಾಗಿದೆ ಎನ್ನಿಸುತ್ತೆ. ಅಂದಹಾಗೆ ಆ ಲ್ಯಾಪ್‌ಟಾಪ್‌ನಲ್ಲಿ ಏನೇನಿದೆ ಎನ್ನುವುದರ ಬಗ್ಗೆ ನಾವೇ ಹೇಳ್ತೇವೆ ಕೇಳಿ.
ಪ್ರೀತಮ್ ಕೆಮ್ಮಾಯಿ ಜನತಾ ಟಿವಿಯಲ್ಲಿ ಕೆಲಸ ಮಾಡುತ್ತಿದ್ದಾಗ ತನ್ನ ಪಟಾಲಂ ಒಂದನ್ನು ಕಟ್ಟಿಕೊಂಡು ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಗೆ ತೆರಳಿ ರೇಡ್ ಮಾಡಿದ ವಿಡಿಯೋಗಳು ಲ್ಯಾಪ್‌ಟಾಪ್‌ನಲ್ಲಿವೆ. ಮೊದಲ ವಿಡಿಯೋದಲ್ಲಿ ಪ್ರತಿಷ್ಠಿತ ಅಧಿಕಾರಿಯೋ ಅಥವಾ ಪ್ರತಿಷ್ಠಿತ ವ್ಯಕ್ತಿಯೋ ವೇಶ್ಯಾವಾಟಿಕೆ ಅಡ್ಡೆಯೊಂದಕ್ಕೆ ತೆರಳಿ, ತನ್ನೆಲ್ಲಾ ಕೆಲಸ ಮುಗಿಸಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಈತನ ಪಟಾಲಂ ಆತನ ಮೇಲೆ ಅಟ್ಯಾಕ್ ಮಾಡುತ್ತದೆ. ನಾಚಿಕೆಯಿಂದ ಆತ ಮುಖ ಮುಚ್ಚಿಕೊಳ್ಳಲು ಯತ್ನಿಸಿದರೂ ಅವನ ಮುಖವನ್ನು ಬಲವಂತವಾಗಿ ಹಿಡಿದು ಕ್ಯಾಮೆರಾ ಕಣ್ಣಿಗೆ ಕಾಣುವಂತೆ ಮಾಡುತ್ತದೆ. ಅಲ್ಲಿದ್ದ ಹೆಣ್ಮಕ್ಕಳು ನಮ್ಮನ್ನು ಬಿಟ್ಟುಬಿಡಿ ಎಂದು ಗೋಗರೆದರೂ ಅವರ ಕಡೆ ಕ್ಯಾಮೆರಾವನ್ನು ಫೋಕಸ್ ಮಾಡುವ ಕೆಲಸ ಮಾಡುತ್ತದೆ. ವ್ಯಕ್ತಿಯ ಮೇಲೆ ಕೈ ಮಾಡುವ, ಹಲ್ಲೆಗೆ ಯತ್ನಿಸುವ ಅವಕಾಶವನ್ನು ಇವರಿಗೆ ನೀಡಿದವರು ಯಾರು ಎನ್ನುವುದೇ ಪ್ರಶ್ನೆ.

ಮತ್ತೊಂದು ಪ್ರಕರಣದಲ್ಲಿ ಇದೇ ಪ್ರೀತಮ್ ಕೆಮ್ಮಾಯಿ ವೇಶ್ಯಾವಾಟಿಕೆ ಅಡ್ಡೆಯಲ್ಲಿ ವ್ಯವಹಾರ ಕುದುರಿಸುತ್ತೀರುವ ಅಡಿಯೋ ಕೂಡಾ ಲಭ್ಯವಾಗಿದೆ. ಇದು ಜನತಾ ಟಿವಿ ನಿರ್ದೇಶಕರ ಕೈಗೆ ಸಿಕ್ಕು ಬಹಿರಂಗವಾದರೆ ತನ್ನ ಮಾನ ಹೋಗುತ್ತದೆ ಎನ್ನುವುದು ಗೊತ್ತು ಮಾಡಿಕೊಂಡೇ ಲ್ಯಾಪ್‌ಟಾಪ್ ಹಿಂದೆ ಬಿದ್ದನೆನ್ನಿಸುತ್ತೆ. ಆದರೆ ಪೊಲೀಸರಿಗೆ ಒಪ್ಪಿಸುವ ಆಲೋಚನೆ ನಿರ್ದೇಶಕರದಾಗಿತ್ತು. ಈಗ ಆತನೇ ಕಂಪ್ಲೇಂಟ್ ಕೊಡುವ ಮೂಲಕ ತನ್ನ ಬಂಡವಾಳ ಅವನೇ ಬಯಲು ಮಾಡಿಕೊಂಡಿದ್ದಾನೆ ಅಷ್ಟೆ..
ಅಂದಹಾಗೆ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ಮಾಡೋಕೆ ಇವನಿಗೆ ಅವಕಾಶ ಕೊಟ್ಟವರು ಯಾರು..? ಅಲ್ಲಿ ಕ್ಯಾಮೆರಾ ಇಡುವ ಪರ್ಮಿಷನ್ ಕೊಟ್ಟವರು ಯಾರು..? ಹಾಗೆ ಸಿಕ್ಕಾಕೊಂಡವರ ಮೇಲೆ ಹಲ್ಲೆಗೆ ಯತ್ನಿಸೋಕೆ ಇವರಿಗೆ ಅನುಮತಿ ಕೊಟ್ಟವರು ಯಾರು..? ಇದನ್ನೆಲ್ಲಾ ನೋಡಿಕೊಳ್ಳಲು ಪೊಲೀಸ್ ಮತ್ತು ಕೋರ್ಟ್‌ಗಳಿಲ್ಲವೇ..? ಎನ್ನುವ ಪ್ರಶ್ನೆಗಳು ಲ್ಯಾಪ್‌ಟಾಪ್‌ನಲ್ಲಿ ಈತನ ಪಟಾಲಂ ವರ್ತನೆ ಗಮನಿಸಿದರೆ ಹುಟ್ಟಿಕೊಳ್ಳುತ್ತವೆ.. (ಆತನೇ ಇದನ್ನೆಲ್ಲಾ ತನ್ನ ಬಳಗವೇ ಮಾಡಿತೆಂದು ಒಪ್ಪಿಕೊಂಡಿರುವ ದೃಶ್ಯಗಳು (ಆಡಿಯೋ) ನಮ್ಮಲ್ಲಿವೆ, ಆದರೆ ಅವನ ಖೆಡ್ಡಾಕ್ಕೆ ಬಿದ್ದವರು ಯಾರೆನ್ನುವುದನ್ನು ಮಾತ್ರ ಬಾಯಿಬಿಟ್ಟಿಲ್ಲ, ಪೊಲೀಸರು ತನಿಖೆ ಮಾಡಿದರೆ ಅದೂ ಬಯಲಾಗಬಹುದೇನೋ..?!).
ಲ್ಯಾಪ್‌ಟಾಪ್ ರಹಸ್ಯ ಬಯಲಾಗಿದ್ದೇಗೆ..?!
ಕಳ್ಳ ಎಷ್ಟೇ ಬುದ್ಧಿವಂತನಿದ್ದರೂ ಒಂದಲ್ಲ ಒಂದು ಯಡವಟ್ಟು ಮಾಡಿಕೊಂಡು ಸಿಕ್ಕಾಕೊಳ್ಳುತ್ತಾನೆ ಎನ್ನುವುದು ಈ ಕೆಮ್ಮಾಯಿ ವಿಷಯದಲ್ಲೂ ನಿಜವಾಯ್ತು ನೋಡಿ. ಲಗ್ಗೆರೆ ಸೇರಿದಂತೆ ಅನೇಕ ಕಡೆ ಈತ ಮಾಡಿದ್ದಾನೆನ್ನಲಾದ ವೇಶ್ಯಾವಾಟಿಕೆ ಅಡ್ಡೆಗಳ ಮೇಲಿನ ದಾಳಿಯಂಥ ದೃಶ್ಯಗಳನ್ನು ತನ್ನ ಲ್ಯಾಪ್‌ಟಾಪ್‌ನಲ್ಲಿ ಅತ್ಯಂತ ಗೌಪ್ಯವಾಗಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಫೋಲ್ಡರ್ ಮಾಡಿ ಸೇವ್ ಮಾಡಿಡುತ್ತಿದ್ದ. ಕೆಲವೊಂದು ಸ್ಟೋರಿಗಳಲ್ಲಿ ಮಾಡಿದ ವಂಚನೆ, ನಿರ್ದೇಶಕರ ಗಮನಕ್ಕೆ ಬಂದ ಮೇಲೆ ಈತನನ್ನು ಹೊರದಬ್ಬಲಾಯಿತು. ಹಾಗೆ ಹೊರಬಂದವನೇ ನನ್ನ ಲ್ಯಾಪ್‌ಟಾಪ್ ಕೊಡಿ ಕೆಲಸವಿದೆ, ಅದರಲ್ಲಿ ನನ್ನ ಕುಟುಂಬಕ್ಕೆ ಸಂಬಂಧಪಟ್ಟ ಸಾಕಷ್ಟು ವಿಚಾರಗಳಿವೆ, ದಯವಿಟ್ಟು ಒಪ್ಪಿಸಿ ಎಂದು ಗೋಗರೆಯಲು ಆರಂಭಿಸಿದ. ಒಮ್ಮೆ ಮನವಿ ಮಾಡಿಕೊಂಡಿದ್ದರೆ ಓಕೆ. ಆದರೆ ದಿನಕ್ಕೆ ಹತ್ತಾರು ಬಾರಿ ಕರೆ ಮಾಡಿ ನೀವು ನನ್ನ ಮೇಲೆ ಏನ್ ಬೇಕಿದ್ರೂ ಆಕ್ಷನ್ ತೆಗೆದುಕೊಳ್ಳಿ ಪರ್ವಾಗಿಲ್ಲ, ಆದರೆ ಲ್ಯಾಪ್‌ಟಾಪ್‌ನ್ನು ಮಾತ್ರ ವಾಪಸ್ ಕೊಡಿ ಎಂದು ಅಂಗಲಾಚುತ್ತಿದ್ದರಿಂದ ಸಹಜವಾಗಿಯೇ ಅನುಮಾನ ಬಂದಿದೆ. ಅಂತದ್ದೇನಿದೆ ಆ ಲ್ಯಾಪ್‌ಟಾಪ್‌ನಲ್ಲಿ ಎನ್ನುವ ಅನುಮಾನದೊಂದಿಗೆ ಅದನ್ನು ಓಪನ್ ಮಾಡುತ್ತಿದ್ದಂಗೆ ಬ್ರಹ್ಮಾಂಡವೇ ಬಯಲಾಗಿದೆ. ಕೆಮ್ಮಾಯಿ ಯಾಕೆ ಆ ಲ್ಯಾಪ್‌ಟಾಪ್ ಹಿಂದೆ ಬಿದ್ದಿದ್ದಾನೆನ್ನುವುದಕ್ಕೆ ಆ ವಿಡಿಯೋಗಳೇ ಸಾಕ್ಷ್ಯ ಒದಗಿಸುವಂತಿದ್ದವು. ಅದನ್ನೆಲ್ಲಾ ಓಪನ್ ಮಾಡಿ ನೋಡಿದ ನಿರ್ದೇಶಕರಿಗೆ ಶಾಕ್ ಜತೆಗೆ ಹಣ ಮಾಡೋಕೆ ಈ ಕೆಮ್ಮಾಯಿ ಎನ್ನುವ ಪತ್ರಕರ್ತ ಹೀಗೆಲ್ಲಾ ಮಾಡಿದ್ನಾ..ಛೀ..ಥೂ ಎಂದು ಬೈಯ್ದುಕೊಂಡಿದ್ದಾರೆ..

ತನ್ನ ಹಳ್ಳವನ್ನು ತಾನೇ ತೋಡಿಕೊಂಡ ಪ್ರೀತಮ್!
ರಾಜಾಜಿನಗರ ಪೊಲೀಸರಿಗೆ ಘಟನೆಯ ಪೂರ್ಣ ಸತ್ಯವನ್ನು ಮುಚ್ಚಿಟ್ಟು, ಕೇವಲ ಲ್ಯಾಪ್‌ಟಾಪ್ ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆ, ವಾಪಸ್ ಕೊಡಿಸಿ ಎಂದು ಕೆಮ್ಮಾಯಿ ಕಥೆ ಕಟ್ಟಿರುವುದು ವಿಪರ್ಯಾಸ. ಬಹುಷಃ ಶೀಘ್ರವೇ ಅದನ್ನು ಜನತಾ ಟಿವಿ ನಿರ್ದೇಶಕರು ಪೊಲೀಸರಿಗೆ ಒಪ್ಪಿಸಲಿದ್ದಾರೆ. ಅದನ್ನು ನೋಡಿ ಪೊಲೀಸರೂ ಕೂಡ ಆತನಿಗೆ ಛೀಮಾರಿ ಹಾಕಿದ್ರೂ ಆಶ್ಚರ್ಯವಿಲ್ಲ. ಯಾವ ವ್ಯಕ್ತಿಗಳಿಂದ ಹಣ ಸುಲಿಗೆ ಮಾಡಲಾಗಿದೆಯೋ ಅದನ್ನು ಅವರಿಗೆ ವಾಪಸ್ ಕೊಡಿಸಿಬಿಡಿ ಎನ್ನುವ ಮನವಿಯನ್ನು ಪೊಲೀಸರಿಗೆ ನಿರ್ದೇಶಕರು ಮಾಡಿಕೊಂಡಿದ್ದಾರೆ. ಅಲ್ಲದೇ ಆತ ನೀಡಿರುವ ದೂರಿಗೆ ಪ್ರತಿಯಾಗಿ ಜನತಾ ಟಿವಿ ನಿರ್ದೇಶಕರು ಕೂಡ ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅದೇ ಠಾಣೆಗೆ ಮತ್ತೊಂದು ದೂರನ್ನು ಕೂಡ ಕೊಟ್ಟಿದ್ದಾರೆ.
ಪರಸ್ಪರರನ್ನು ಪೊಲೀಸರು ಕರೆಸಿದರೆ, ಜನತಾ ಟಿವಿ ನಿರ್ದೇಶಕರು ಲ್ಯಾಪ್‌ಟಾಪ್‌ನಲ್ಲಿ ಇರುವ ಬಂಡವಾಳ ಬಿಚ್ಚಿಟ್ಟರೆ ಕೆಮ್ಮಾಯಿಯ ಕರ್ಮಕಾಂಡ ಬಯಲಾಗದೆ ಇರಲ್ಲ. ಇದನ್ನೆಲ್ಲಾ ಗಮನಿಸಿದರೆ ಕೆಮ್ಮಾಯಿ ತನ್ನ ಹಳ್ಳವನ್ನು ತಾನೇ ತೋಡಿಕೊಂಡ ಎನ್ನಿಸುತ್ತೆ. ಒಳ್ಳೆಯ ಪತ್ರಕರ್ತನಾಗಿ ಬೆಳೆಯೋಕೆ ಎಲ್ಲಾ ರೀತಿಯ ಅವಕಾಶ, ಪ್ರತಿಭೆ ಇದ್ದಾಗ್ಯೂ ದಿಢೀರ್ ಹಣ ಮಾಡುವ ಆಸೆಗೆ ಪಟಾಲಂ ಒಂದನ್ನು ಕಟ್ಟಿಕೊಂಡು ಅಡ್ಡದಾರಿ ತುಳಿದು ವೃತ್ತಿ ಬದುಕನ್ನು ಹಾಳು ಮಾಡಿಕೊಂಡಿದ್ದು ಮಾತ್ರ ವಿಪರ್ಯಾಸ.
ಇದನ್ನೂ ಓದಿ | ಕೆಎಸ್‌ಪಿಸಿಬಿ ನೌಕರರ ಸಂಘದ ‘ರೆಸಾರ್ಟ್’ ಕರಾಮತ್ತು; ಅಕ್ರಮಗಳ ಸರಮಾಲೆ, ಸೂರಿ ಪಯಾಲ್ ಆಯ್ಕೆ ಅಸಿಂಧು!
ಎಲ್ಲಿಯೂ ಅವಕಾಶ ಸಿಗದ ಆತನಿಗೆ ಹಿರಿಯ ಪತ್ರಕರ್ತ ವೀರೇಶ್ ತಮ್ಮ ಸ್ಪೀಡ್ ನ್ಯೂಸ್‌ನಲ್ಲಿ ಕರೆದು ಕೆಲಸ ಕೊಟ್ಟಿದ್ದಾರೆ. ಅಲ್ಲೂ ತನ್ನ ಕರ್ಮಕಾಂಡವನ್ನು ಮುಂದುವರೆಸಿದ್ದೇ ಆದಲ್ಲಿ ಅದೇ ಅವನ ವೃತ್ತಿ ಬದುಕಿನ ದಿ ಎಂಡ್ ಆಗುವ ಅಪಾಯಗಳಂತೂ ಇದ್ದೇ ಇದೆ. ಏಕೆಂದರೆ ಜನತಾ ಟಿವಿ ನಿರ್ದೇಶಕರ ಹಾಗೆ ವೀರೇಶ ಸಾಫ್ಟ್ ನೇಚರ್ ಪತ್ರಕರ್ತ ಅಂತೂ ಅಲ್ಲವೇ ಅಲ್ಲ. ನಾವು ಕೇಳಿಪಟ್ಟಿರುವಂತೆ ಅವರನ್ನು ಯಾಮಾರಿಸೋದು ಅಷ್ಟು ಸುಲಭವಲ್ಲ. ಹಾಗೇನಾದರೂ ಮಾಡಿದ್ರೆ ಅಲ್ಲೇ ಡ್ರಾ..ಅಲ್ಲೇ ಬಹುಮಾನ.. ಈಗಾಗಲೇ ಇದರ ಮಾಹಿತಿನೂ ಅವರಿಗೆ ತಿಳಿದಿದೆ ಎನ್ನುವ ಕಾರಣಕ್ಕೆ ಅಲ್ಲಿಂದಲೂ ಕಾಲ್ಕೀಳುವ ಪ್ಲ್ಯಾನ್ ಮಾಡಿಕೊಂಡಿದ್ದಾನಂತೆ.. ಎಲ್ಲೇ ಹೋಗಲಿ ಕಚ್ಚೆ-ಕೈ ಬಾಯಿ ಶುದ್ಧವಾಗಿಟ್ಟುಕೊಳ್ಳಿರಲಿ. ಇಲ್ಲದಿದ್ದರೆ ಅದರ ಪರಿಣಾಮ ಒಳ್ಳೆಯದ್ದಂತೂ ಆಗಿರಲ್ಲ.. ಇದು ಆತನಿಗೆ ಅರ್ಥವಾದರೆ ಸಾಕಷ್ಟೇ..?!










