advertise here

Search

ದೇವರಾಜು ಅರಸು ನಿಗಮದಲ್ಲಿ ಗಂಗಾ ಕಲ್ಯಾಣದ ಹೆಸರಲ್ಲಿ ₹600 ಕೋಟಿ ಲೂಟಿ!

ganga kalyan scam

ಬೆಂಗಳೂರು: ಬಡ ರೈತರ ಬಾಳಿಗೆ ಬೆಳಕಾಗಬೇಕಿದ್ದ ‘ಗಂಗಾ ಕಲ್ಯಾಣ ಯೋಜನೆʼ ಇಂದು ಭ್ರಷ್ಟ ಅಧಿಕಾರಿಗಳ ಪಾಲಿನ ‘ಅಕ್ಷಯ ಪಾತ್ರೆ’ಯಾಗಿ ಮಾರ್ಪಟ್ಟಿದೆ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ 2015 ರಿಂದ 2026ರ ದಶಕದ ಅವಧಿಯಲ್ಲಿ ನಡೆದಿದೆ ಎನ್ನಲಾದ ಬರೋಬ್ಬರಿ 500 ರಿಂದ 600 ಕೋಟಿ ರೂಪಾಯಿಗಳ ಬೃಹತ್ ಹಗರಣ ಈಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ವಿಷಯವಾಗಿದೆ.

ಏನಿದು ಗಂಗಾ ಕಲ್ಯಾಣ ಹಗರಣ?

ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಕೊಳವೆಬಾವಿ ಕೊರೆಸಿ, ಪಂಪ್‌ಸೆಟ್ ಅಳವಡಿಸಿ, ವಿದ್ಯುದ್ದೀಕರಣ (Electrification) ಮಾಡಿಕೊಡುತ್ತದೆ. ಆದರೆ, ದಾಖಲೆಗಳ ಪ್ರಕಾರ ರೈತರ ಹೊಲದಲ್ಲಿ ಮೋಟಾರ್ ಚಾಲ್ತಿಯಲ್ಲಿದೆ, ಆದರೆ ವಾಸ್ತವದಲ್ಲಿ ಅಲ್ಲಿ ವಿದ್ಯುತ್ ತಂತಿಯೇ ಎಳೆದಿಲ್ಲ! ಇದು ಈ ಹಗರಣದ ಕರಾಳ ಮುಖವಾಗಿದೆ.

ಅಕ್ರಮದ ಜಾಲ: ಎಸ್ಕಾಂ ಅಧಿಕಾರಿಗಳ ‘ಕೈ’ವಾಡ

ಈ ಹಗರಣ ಕೇವಲ ಒಂದು ನಿಗಮಕ್ಕೆ ಸೀಮಿತವಾಗಿಲ್ಲ. ರಾಜ್ಯದ ಪ್ರಮುಖ ಐದು ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ (BESCOM), ಮೆಸ್ಕಾಂ (MESCOM), ಚೆಸ್ಕಾಂ (CHESCOM), ಹೆಸ್ಕಾಂ (HESCOM) ಮತ್ತು ಗೆಸ್ಕಾಂ (GESCOM) ನ ಉನ್ನತ ಅಧಿಕಾರಿಗಳು ಈ ಲೂಟಿಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವಿದ್ಯುತ್ ಬಿಲ್ ಪಾವತಿ ಸೇರಿ 5 ಎಸ್ಕಾಂ ಆನ್‌ಲೈನ್ ಸೇವೆ 2 ದಿನ ಸ್ಥಗಿತ - Kannada News  | Escom Online services outage in Karnataka on July 25 to 27 | TV9 Kannada

ಸುಳ್ಳು ಬಿಲ್‌ಗಳ ಸೃಷ್ಟಿ: ಪ್ರತಿಯೊಂದು ಬೋರ್‌ವೆಲ್ ವಿದ್ಯುದ್ದೀಕರಣಕ್ಕೆ ಸರ್ಕಾರ ಸುಮಾರು ₹50,000 ಹಣವನ್ನು ನಿಗದಿಪಡಿಸುತ್ತದೆ.

ರೈತರೇ ಹಣ ಹಾಕಿದರೂ ಲೂಟಿ: ಅನೇಕ ರೈತರು ಸರ್ಕಾರದ ವಿಳಂಬ ನೀತಿಗೆ ಬೇಸತ್ತು ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಆದರೆ, ಭ್ರಷ್ಟ ಅಧಿಕಾರಿಗಳು “ನಾವೇ ವಿದ್ಯುತ್ ಸಂಪರ್ಕ ನೀಡಿದ್ದೇವೆ” ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಸರ್ಕಾರಿ ಖಜಾನೆಯಿಂದ ಕೋಟ್ಯಂತರ ರೂಪಾಯಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ.

ಗುತ್ತಿಗೆದಾರರಿಗೂ ವಂಚನೆ: ಪ್ರಾಮಾಣಿಕವಾಗಿ ಕೆಲಸ ಮಾಡಿದ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್‌ಗಳಿಗೆ ಹಣ ನೀಡದೆ, ಅಧಿಕಾರಿಗಳು ತಮ್ಮ ಆಪ್ತ ಕಾಂಟ್ರಾಕ್ಟರ್‌ಗಳ ಹೆಸರಿನಲ್ಲಿ ಹಣ ಬಿಡುಗಡೆ ಮಾಡಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ.

ರಾಜ್ಯದ ಮಹಾಲೆಕ್ಕ ಪರಿಶೋಧಕರ (CAG) ಇತ್ತೀಚಿನ ಆಡಿಟ್ ವರದಿಯಲ್ಲಿ ಈ ಅಕ್ರಮದ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಭೌತಿಕವಾಗಿ ಪರಿಶೀಲನೆ ನಡೆಸದೆಯೇ ಹಣ ಬಿಡುಗಡೆ ಮಾಡಿರುವುದು ಮತ್ತು ನಿಯಮಗಳನ್ನು ಗಾಳಿಗೆ ತೂರಿರುವುದು ವರದಿಯಲ್ಲಿ ಸಾಕ್ಷ್ಯ ಸಮೇತ ಬಹಿರಂಗವಾಗಿದೆ. ಈ ವರದಿಯು ಹಗರಣದ ಆಳ ಮತ್ತು ವಿಸ್ತಾರವನ್ನು ಎತ್ತಿ ತೋರಿಸುತ್ತಿದೆ.

ALSO READ :  "ಡಾಲಿ" ಧನಂಜಯ್ ಮದುವೆಯಲ್ಲಿ ಅಂಡರ್ ವರ್ಲ್ಡ್ ಡಾನ್ "ಸೈಲೆಂಟ್ ಸುನೀಲ" ಪ್ರತ್ಯಕ್ಷ

ಲೋಕಾಯುಕ್ತಕ್ಕೆ ದೂರು: ಜೆ.ಎಂ. ರಾಜಶೇಖರ್ ಹೋರಾಟಗಾರ

ಸಾಮಾಜಿಕ ಕಾರ್ಯಕರ್ತ ಜೆ.ಎಂ. ರಾಜಶೇಖರ್ ಅವರು ಈ ಹಗರಣದ ವಿರುದ್ಧ ಸಮರ ಸಾರಿದ್ದಾರೆ. ಲಭ್ಯವಿರುವ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಅವರು ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. “ಇದು ಕೇವಲ ಹಣದ ದುರುಪಯೋಗವಲ್ಲ, ಇದು ಬಡ ರೈತರ ಹಕ್ಕನ್ನು ಕಸಿದುಕೊಳ್ಳುವ ಕ್ರಿಮಿನಲ್ ಸಂಚು” ಎಂದು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೂರುದಾರ: ರಾಜಶೇಖರ್, ಸಾಮಾಜಿಕ ಕಾರ್ಯಕರ್ತ

ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರ ಗಮನಕ್ಕೆ ಈ ಎಲ್ಲಾ ಅಕ್ರಮಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿಗಳ ಕನಸಿನ ಯೋಜನೆಗೆ ಅಧಿಕಾರಿಗಳ ನೆಕ್ಸಸ್ ಹೇಗೆ ‘ಹಳ್ಳ’ ಹಿಡಿಸಿದೆ ಎಂಬುದು ಈಗ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ.

“ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿ, ರೈತರ ಹೆಸರಲ್ಲಿ ಕೋಟ್ಯಧಿಪತಿಗಳಾಗುತ್ತಿರುವ ಈ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತುಕ್ರಮ ಜರುಗಿಸುತ್ತದೆಯೇ? ಅಥವಾ ತನಿಖೆಯ ಹೆಸರಲ್ಲಿ ಪ್ರಕರಣವನ್ನು ಮೂಲೆಗುಂಪು ಮಾಡುತ್ತದೆಯೇ?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ | ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಈ ಬೃಹತ್ ಹಗರಣದ ತನಿಖೆ ಚುರುಕುಗೊಂಡರೆ ರಾಜ್ಯದ ಇಂಧನ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಲವು ‘ದೊಡ್ಡ ತಲೆ’ಗಳು ಉರುಳುವುದು ಖಚಿತ ಎಂದು ಮೂಲಗಳು ತಿಳಿಸಿವೆ.

ರೈತರ ಅಭಿವೃದ್ಧಿಯ ಬಗ್ಗೆ ಮಾತನಾಡುವ ಸರ್ಕಾರ, ತನ್ನದೇ ಮೂಗಿನ ಕೆಳಗೆ ನಡೆಯುತ್ತಿರುವ ಇಂತಹ ದೊಡ್ಡ ಹಗರಣಗಳನ್ನು ತಡೆಯುವಲ್ಲಿ ವಿಫಲವಾಗಿರುವುದು ಅತ್ಯಂತ ಖೇದನೀಯವಾಗಿದೆ. ಇಷ್ಟೆಲ್ಲ ನಡೆದರೂ ಸಚಿವರಾದ ಎಚ್‌ಸಿ ಮಹಾದೇವಪ್ಪನವರು ಏನು ನಿದ್ದೆ  ಮಾಡ್ತಾ ಇದ್ದಾರೆ? ಅಥವಾ ಅವರೂ ಕೂಡಾ ಈ ಹಗರಣದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎನ್ನಲಾಗ್ತಿದೆ ಇದು ನಿಜಾನಾ. ಇದು ಕೇವಲ ಹಣದ ಹಗರಣವಲ್ಲ, ಬದಲಾಗಿ ಸರ್ಕಾರದ ಮೇಲಿರುವ ಬಡ ರೈತರ ನಂಬಿಕೆಗೆ ಮಾಡಿದ ದ್ರೋಹವಾಗಿದೆ.


Political News

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

ದಾವಣಗೆರೆ ದಕ್ಷಿಣದಲ್ಲಿ ಜಮೀರ್ ಗೈರುಹಾಜರಿ: ಸಮರ್ಥ್ ಶಾಮನೂರು ಗೆಲುವಿಗೆ ಮುಸ್ಲಿಂ ಮತಗಳೇ ಅಡ್ಡಿ?

‘ಪರಿಶ್ರಮ’ದ ಹೆಸರಲ್ಲಿ ಪ್ರದೀಪ್ ಈಶ್ವರ್ ರಾಜಕೀಯ ಪಾರುಪತ್ಯ? – ತೆರೆ ಮರೆಯ ಕರಾಳ ಸತ್ಯ ಬಯಲು!

ವಿಶ್ವ ರಾಜಕಾರಣದಲ್ಲಿ ಹೊಸ ಸಮೀಕರಣ: ಟ್ರಂಪ್-ಮೋದಿ ಕಾಲ್‌ನಲ್ಲಿ ಎಲಾನ್ ಮಸ್ಕ್ ಎಂಟ್ರಿ!

Scroll to Top