advertise here

Search

‘ಪರಿಶ್ರಮ’ದ ಹೆಸರಲ್ಲಿ ಪ್ರದೀಪ್ ಈಶ್ವರ್ ರಾಜಕೀಯ ಪಾರುಪತ್ಯ? – ತೆರೆ ಮರೆಯ ಕರಾಳ ಸತ್ಯ ಬಯಲು!

pradeep eshwar

ರಾಜಕೀಯ ಅಖಾಡದಲ್ಲಿ ಮಾತಿನ ಚಕಮಕಿಯಿಂದಲೇ ಗುರುತಿಸಿಕೊಂಡಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (PRADEEP eSHWAR) ಈಗ ಸಂಕಷ್ಟದ ಸುಳಿಯಲ್ಲಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಆಶಾಕಿರಣ ಎಂದು ಬಿಂಬಿಸಿಕೊಂಡಿರುವ ಇವರ ‘ಪರಿಶ್ರಮ ನೀಟ್ ಅಕಾಡೆಮಿ’ ವಿರುದ್ಧ ಕೇಳಿಬರುತ್ತಿರುವ ಗಂಭೀರ ಆರೋಪಗಳು ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.

ಶಿಕ್ಷಣದ ಹೆಸರಲ್ಲಿ ಲೂಟಿ? – ಲಕ್ಷಾಂತರ ರೂಪಾಯಿ ಫೀಸ್!

ಉತ್ತರ ಕರ್ನಾಟಕದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡುತ್ತೇನೆ ಎಂದು ಹೇಳಿಕೊಳ್ಳುವ ಪ್ರದೀಪ್ ಈಶ್ವರ್, ವಾಸ್ತವದಲ್ಲಿ ಪ್ರತಿ ವಿದ್ಯಾರ್ಥಿಯಿಂದ 4 ರಿಂದ 4.5 ಲಕ್ಷ ರೂಪಾಯಿ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇತರ ಪ್ರಮುಖ ನೀಟ್ ಅಕಾಡೆಮಿಗಳಿಗಿಂತಲೂ ಇದು ದುಬಾರಿಯಾಗಿದ್ದು, ‘ಬಡವರ ಬಂಧು’ ಎಂಬ ಇಮೇಜ್ ಕೇವಲ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಮಾಧ್ಯಮಗಳ ಮೌನ ಮತ್ತು ರಾಜಕೀಯ ಪ್ರಭಾವ

ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಮುಖ್ಯವಾಹಿನಿ ಮಾಧ್ಯಮಗಳು ಏಕೆ ಮೌನವಾಗಿವೆ? ಇದಕ್ಕೆ ಪ್ರದೀಪ್ ಈಶ್ವರ್ ನೀಡುವ ಭಾರೀ ಮೊತ್ತದ ಜಾಹೀರಾತುಗಳೇ ಕಾರಣ ಎಂದು ಹೇಳಲಾಗುತ್ತಿದೆ. ಯಾರು ಪ್ರದೀಪ್‌ವಿರುದ್ಧ ಸುದ್ದಿಯನ್ನ ಮಾಡುತ್ತಾರೋ ಅವರಿಗೆ ಪರಿಶ್ರಮ ಅಕಾಡೆಮಿಯ ಹೆಸರಲ್ಲಿ ಜಾಹೀರಾತುಗಳನ್ನ ನೀಡಿ ಅವರ ಬಾಯಿ ಮುಚ್ಚಿಸುವ ಕೆಲಸ ಚೆನ್ನಾಗಿ ಮಾಡುತ್ತಿದ್ದಾರೆ. ಅವರು ನೀಡುವ ಎಂಜಲು ಕಾಸಿಗೆ ಮಾಧ್ಯಮ ಸಂಸ್ಥೆಗಳು ಬಿಕರಿಯಾಗಿವೆಯಾ ಎನ್ನುವ ಪ್ರಶ್ನೆ ಎಲ್ಲರಿಗೂ ಸಹಜವಾಗಿ ಕಾಡುವಂತಹದ್ದೆ.

ಮಾಧ್ಯಮಗಳ ವಿರುದ್ಧ ಯತ್ನಾಳ್‌ ಕಿಡಿ !

ಇದಕ್ಕೆ ಪೂರಕವಾಗಿ ರಾಜ್ಯ ರಾಜಕೀಯದ ‘ಫೈರ್ ಬ್ರಾಂಡ್’ ಎಂದೇ ಗುರುತಿಸಿಕೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರದೀಪ್ ಈಶ್ವರ್ ಮತ್ತು ಅವರ ಅಕ್ರಮ ಅಕಾಡೆಮಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ದಾವಣಗೆರೆ ಉಪಚುನಾವಣಾ ಪ್ರಚಾರದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರದೀಪ್ ಈಶ್ವರ್ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಅಕ್ರಮವನ್ನು ಬಯಲಿಗೆಳೆಯುತ್ತಾ ಮಾಧ್ಯಮಗಳಿಗೂ ತರಾಟೆಗೆ ತೆಗೆದುಕೊಂಡಿದ್ದಾರೆ. “ಯಾವುದೇ ಅಧಿಕೃತ ಪರವಾನಗಿ ಇಲ್ಲದೆ, ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಾ 15ಕ್ಕೂ ಹೆಚ್ಚು ಕೇಂದ್ರಗಳನ್ನು ನಡೆಸುತ್ತಿರುವ ವ್ಯಕ್ತಿಗೆ ಮಾಧ್ಯಮಗಳು ಅಷ್ಟೊಂದು ಪ್ರಾಮುಖ್ಯತೆ ಏಕೆ ನೀಡುತ್ತಿದ್ದೀರಿ?” ಈ ಅಕಾಡೆಮಿ ಕೇವಲ ಒಂದು ಬೋಗಸ್ ಟ್ಯೂಷನ್ ಸೆಂಟರ್ ಎಂದು ಯತ್ನಾಳ್ ಲೇವಡಿ ಮಾಡಿದ್ದಾರೆ.

ಮಾಧ್ಯಮಗಳು ಸಮಾಜದ ಕಣ್ಣಾಗುವ ಬದಲು ಅಕ್ರಮಗಳನ್ನು ಮುಚ್ಚಿ ಹಾಕುವವರಿಗೆ ಪ್ರಚಾರ ನೀಡುತ್ತಿವೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. “ಲಕ್ಷಾಂತರ ರೂಪಾಯಿ ಫೀಸ್ ವಸೂಲಿ ಮಾಡಿ ಬಡವರನ್ನು ಲೂಟಿ ಹೊಡೆಯುತ್ತಿರುವ ವ್ಯಕ್ತಿಯ ಹೇಳಿಕೆಗಳಿಗೆ ಮಣೆ ಹಾಕುವ ಬದಲು, ಅವರ ಅಕ್ರಮಗಳ ಬಗ್ಗೆ ಯಾಕೆ ವರದಿ ಮಾಡುತ್ತಿಲ್ಲ?” ಎಂದು ಮಾಧ್ಯಮದವರನ್ನು ನಾಚಿಕೆಯಾಗುವ ರೀತಿ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಸಚಿವ ಮಧು ಬಂಗಾರಪ್ಪ, ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿಗಳೊಂದಿಗಿನ ನಿಕಟ ಸಂಬಂಧವನ್ನು ಬಳಸಿ ತನಿಖೆಗಳಾಗದಂತೆ ತಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಪರಿಶ್ರಮ ಅಕಾಡೆಮಿ ನಡೆಸುತ್ತಿರುವಂತಹ ಅಕ್ರಮಗಳಿಗೆ ಸಂಬಂಧಪಟ್ಟಂತೆ ಆರಂಭದಿಂದಲೂ ದಾಖಲೆಗಳ ಸಮೇತ ಪಾಠಶಾಲೆ ಎನ್ನುವಂತಹ ಶೈಕ್ಷಣಿಕ ಸ್ವಯಂ ಸೇವಾ ಸಂಸ್ಥೆ ನಿರಂತರವಾದ ಹೋರಾಟವನ್ನು ಮಾಡುತ್ತಿದೆ. ಪರಿಶ್ರಮ ನೀಟ್‌ ಅಕಾಡೆಮಿಗೆ ದೊರೆತಿರುವ ನಿಜವಾದ ಪರ್ಮಿಷನ್‌ ಆದರೆ ಅವರು ಪರ್ಮಿಷನನ್ನು ಉಲ್ಲಂಘಿಸಿ ಮಾಡುತ್ತಿರುವ ಅಕ್ರಮಗಳೇನು ಎನ್ನುವುದರ ಬಗ್ಗೆ ಸಾಕಷ್ಟು ರೀತಿಯಾದಂತಹ ದಾಖಲೆಗಳನ್ನು ಕ್ರೂಢೀಕರಿಸಿ ಶಿಕ್ಷಣ ಸಚಿವರಾದಿಯಾಗಿ ಶಿಕ್ಷಣ ಇಲಾಖೆಯ ಪ್ರಮುಖರಿಗೆ ದೂರು ನೀಡಿದರು ಕೂಡ ಯಾವುದೇ ಕ್ರಮಗಳಾಗಿಲ್ಲ ಇದರ ಹಿಂದೆ ರಾಜಕೀಯ ಒತ್ತಡ ಇದೆ ಎನ್ನುವುದು ಸಾಬೀತಾಗುತ್ತದೆ. ಇನ್ನು ಈ ಬಗ್ಗೆ ಪಾಠಶಾಲೆ ಸಂಸ್ಥೆಯ ಸಂಚಾಲಕರಾಗಿರುವಂತ ಗಂಗಾಧರ್ ಅವರನ್ನು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಸಂಪರ್ಕಿಸಿದಾಗ ಪರಿಶ್ರಮದ ಸಾಕಷ್ಟು ಅಕ್ರಮಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಅವರು ನೀಡಿದರು. ಪಾಠಶಾಲೆ ಸಂಸ್ಥೆಯ ಸಂಚಾಲಕ ಗಂಗಾಧರ್ ಅವರು ಆಪಾದಿಸುವ ಪ್ರಕಾರ,

ALSO READ :  Deepavali bumper: KSRTC ಗೆ 18 ಕೋಟಿ ಗಳಿಕೆ, ಒಂದೇ ದಿನ ಸಾರ್ವಕಾಲಿಕ ದಾಖಲೆಯ ಟಿಕೆಟ್ ಬುಕ್ಕಿಂಗ್

 ‘ಪರಿಶ್ರಮ’ ಅಕಾಡೆಮಿಯ ವಿರುದ್ಧದ ಗಂಭೀರ ದೂರುಗಳು

ಶಿಕ್ಷಣ ಇಲಾಖೆ ಮತ್ತು ಬಿಬಿಎಂಪಿಗೆ ಸಲ್ಲಿಕೆಯಾಗಿರುವ ದೂರುಗಳ ಪ್ರಕಾರ, ಈ ಕೆಳಗಿನ ಅಕ್ರಮಗಳು ಕಂಡುಬಂದಿವೆ:

ಅನಧಿಕೃತ ಕೇಂದ್ರಗಳ ಕಾರ್ಯಾಚರಣೆ: ಅಕಾಡೆಮಿಯು ಕೇವಲ ಮಲ್ಲತ್ತಹಳ್ಳಿಯ ಒಂದು ಕೇಂದ್ರಕ್ಕೆ ಮಾತ್ರ ಅಧಿಕೃತ ಅನುಮತಿ ಹೊಂದಿದೆ. ಆದರೆ, ಉತ್ತರಲ್ಲಿ ರಸ್ತೆಯಲ್ಲಿ ಸುಮಾರು 8 ರಿಂದ 10 ಕಟ್ಟಡಗಳನ್ನು ಬಾಡಿಗೆಗೆ ಪಡೆದು, ಯಾವುದೇ ಪರವಾನಗಿ ಇಲ್ಲದೆ “ಪರಿಶ್ರಮ ಕಾಲೇಜು” ಎಂಬ ಬೋರ್ಡ್‌ಗಳನ್ನು ಹಾಕಿ ಕಾನೂನುಬಾಹಿರವಾಗಿ ನಡೆಸಲಾಗುತ್ತಿದೆ.

ಸುರಕ್ಷತಾ ನಿಯಮಗಳ ಉಲ್ಲಂಘನೆ: ಈ ಬಹುತೇಕ ಕೇಂದ್ರಗಳಲ್ಲಿ ಅಗ್ನಿಶಾಮಕ ದಳದ (Fire Safety) ಅನುಮತಿ ಇಲ್ಲ. ವಸತಿ ಕೇಂದ್ರಗಳಲ್ಲಿ (Residential Centers) ಇರಬೇಕಾದ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸುತ್ತಿಲ್ಲ.

ಶುಲ್ಕದ ಸುಲಿಗೆ: ಬಡವರಿಗೆ ರಿಯಾಯಿತಿ ನೀಡುವ ನೆಪದಲ್ಲಿ, ಪ್ರತಿ ವಿದ್ಯಾರ್ಥಿಯಿಂದ 4 ಲಕ್ಷದಿಂದ 4.5 ಲಕ್ಷ ರೂ. ವರೆಗೆ ಶುಲ್ಕ ಪಡೆಯಲಾಗುತ್ತಿದೆ. ಇದು ನಿಯಮಿತ ನೀಟ್ ಅಕಾಡೆಮಿಗಳಿಗಿಂತಲೂ ಅತಿ ಹೆಚ್ಚಾಗಿದೆ ಎಂಬುದು ಪೋಷಕರ ದೂರು.

ರಾಜಕೀಯ ರಕ್ಷಣೆ: ಈ ಅಕ್ರಮಗಳ ವಿರುದ್ಧ ಪಾಠಶಾಲೆ ಸಂಸ್ಥೆಯ ಸಂಚಾಲಕ ಗಂಗಾಧರ್‌ರವರು ನೀಡಿರುವ ಪುರಾವೆ, ಸಾಕ್ಷ್ಯಗಳನ್ನು ನೀಡಿದ್ದರೂ, ಶಾಸಕ ಸ್ಥಾನ ಮತ್ತು ಸರ್ಕಾರದ ಪ್ರಭಾವ ಬಳಸಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ತನಿಖೆ ನಡೆಯದಂತೆ ತಡೆಯಲಾಗುತ್ತಿದೆ ಎಂಬ ಆರೋಪವಿದೆ.

Courses - Parishrama NEET Academy

ಪರಿಶ್ರಮ ಅಕಾಡೆಮಿಯು ಮಲ್ಲತ್ತಹಳ್ಳಿಯಲ್ಲಿ ಮಾತ್ರ ಅಧಿಕೃತ ಅನುಮತಿ ಹೊಂದಿದೆ. ಆದರೆ, ಉತ್ತರಹಳ್ಳಿ ರಸ್ತೆಯ ಸುತ್ತಮುತ್ತ ಸುಮಾರು 8-10 ಕಡೆಗಳಲ್ಲಿ ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಟ್ಯೂಷನ್ ಸೆಂಟರ್‌ಗಳನ್ನು  ನಡೆಸಲಾಗುತ್ತಿದೆ. ಇದೇ ಅನುಮತಿಯನ್ನು ಬಳಸಿಕೊಂಡು ಕೆಂಗೇರಿಯಲ್ಲಿ 6 ಅಂತಸ್ತಿನ ಬೃಹತ್ ಪಿಯು ಕಾಲೇಜನ್ನು ಕಾನೂನುಬಾಹಿರವಾಗಿ ನಡೆಸಲಾಗುತ್ತಿದೆ.

ಮತ್ತೆ ಟ್ಯೂಷನ್‌ ಸೆಂಟರ್‌ಗಳ ಮೇಲೆ ಕಾಲೇಜ್‌ ಎಂದು ಬೋರ್ಡ ಹಾಕಿಕೊಂಡು ಅಕ್ರಮ ಎಸಗುತ್ತಿದೆ. ಇದು ಒಂದು ಶೈಕ್ಷಣಿಕ ಅಕ್ರಮ ಎಂದೆ ಹೇಳಬಹುದು. ಹಾಗೆಯೇ ಕಾಲೇಜು ಎಂದರೆ ಅಲ್ಲಿ ಆಟದ ಮೈದಾನವಿರಲೇ ಬೇಕು. ಆದರೆ ಪ್ರದೀಪ್‌ ಈಶ್ವರ್‌ ನಡೆಸುತ್ತಿರುವ ಪರಿಶ್ರಮ ಕಾಲೇಜಿನಲ್ಲಿ ಯಾವುದೇ ಮೈದಾನವಿಲ್ಲ. ಅವರಿಗೆ ಕಾಲೇಜು ನಡೆಸಲು ಪರ್ಮಿಶನ್‌ ನೀಡಿದವರು ಯಾರು? ಈ ಕೇಂದ್ರಗಳಲ್ಲಿ:

BBMP ಮತ್ತು ಅಗ್ನಿಶಾಮಕ ದಳದ ಯಾವುದೇ ಸುರಕ್ಷತಾ ಪ್ರಮಾಣಪತ್ರಗಳಿಲ್ಲ. ಹಾಗೆಯೆ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮತ್ತು ವಸತಿ ಸೌಲಭ್ಯವಿರುವ ಈ ಕೇಂದ್ರಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆಯಿದೆ.

ಇದನ್ನೂ ಓದಿ | ಎಕ್ಸೆಲ್ ಕಾಲೇಜಿನಿಂದ ವಿಷವಾಯಿತಾ ಗುರುವಾಯನಕೆರೆ? ಮೀನುಗಳ ಮಾರಣಹೋಮಕ್ಕೆ ಯಾರು ಹೊಣೆ!

ದಾವಣಗೆರೆ ಉಪಚುನಾವಣೆ: ಸ್ವಪಕ್ಷಕ್ಕೇ ಮುಳುವಾಗಲಿರುವ ಪ್ರದೀಪ್ ಈಶ್ವರ್?

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಪ್ರದೀಪ್ ಈಶ್ವರ್, ಬಿಜೆಪಿ ನಾಯಕರ ವಿರುದ್ಧ ನಡೆಸುತ್ತಿರುವ ವಾಗ್ದಾಳಿಗಳು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶ್ಯಾಮನೂರು ಅವರಿಗೆ ತಿರುಗುಬಾಣವಾಗುವ ಸಾಧ್ಯತೆಯಿದೆ. ಮತದಾರರ ಗಮನ ಸೆಳೆಯುವ ಬದಲು ವಿವಾದಾತ್ಮಕ ಹೇಳಿಕೆಗಳ ಮೂಲಕ ಗೊಂದಲ ಸೃಷ್ಟಿಸುತ್ತಿರುವುದು ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.

ಶಿಕ್ಷಣ ಸಂಸ್ಥೆಯ ಅಕ್ರಮಗಳು ಮತ್ತು ರಾಜಕೀಯ ಅಬ್ಬರದ ನಡುವೆ ಸಿಲುಕಿರುವ ಪ್ರದೀಪ್ ಈಶ್ವರ್ ಅವರಿಗೆ ಈಗ ಅಗ್ನಿಪರೀಕ್ಷೆ ಎದುರಾಗಿದೆ. ಶಿಕ್ಷಣ ಇಲಾಖೆಯು ಈ ಕೂಡಲೇ ತನಿಖೆ ನಡೆಸಿ ವಿದ್ಯಾರ್ಥಿಗಳ ಹಿತರಕ್ಷಣೆ ಮಾಡುತ್ತದೆಯೇ ಅಥವಾ ರಾಜಕೀಯ ಪ್ರಭಾವಕ್ಕೆ ಮಣಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top