ಕಳೆದ ಒಂದು ವಾರದಿಂದಲೂ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಇಬ್ಬರು ಪತ್ರಕರ್ತರ ವಿಚಾರದಲ್ಲಿ ನಡೀತಲೇ ಇದೆ. ಅದು ಪತ್ರಕರ್ತ ಎಡಪಂಥೀಯ ಚಿಂತಕ ರಾ.ಚಿಂತನ್ ಮತ್ತು ಪತ್ರಕರ್ತೆ, ಬಲಪಂಥೀಯ ಕಟ್ಟರ್ ಪ್ರತಿಪಾದಕಿ ಮುಮ್ತಾಸ್ ನೆಲ್ಯಡ್ಕ ಎನ್ನುವ ಹೆಣ್ಣುಮಗಳ ನಡುವಿನ ಟಾಕ್ ವಾರ್..ಯಾವುದೋ ವಿಚಾರದಿಂದ ಆರಂಭವಾದ ಚರ್ಚೆ, ಪರಸ್ಪರರ ತೇಜೋವಧೆ- ವ್ಯಕ್ತಿತ್ವ ಹರಣ,ಕೆಸರೆರಚಾಟದಂಥ ತೀರಾ ಖಾಸಗಿ ವಿಚಾರಗಳ ಮಟ್ಟಕ್ಕೆ ಬಂದು ತಲುಪಿದೆ.ಈ ಸಂಘರ್ಷದಲ್ಲಿ ವ್ಯಕ್ತಿಗತವಾದ ಧರ್ಮದ ವಿಚಾರಗಳು ಚರ್ಚೆಯಾಗಲಾರಂಭಿಸಿವೆ.ಇಂಥಾ ಸೂಕ್ಷ್ಮವಾದ ವಿಚಾರಗಳಲ್ಲಿ ಇಂತದ್ದೊಂದು ವಿವಾದ ಅಗತ್ಯವಿತ್ತಾ..?ನೈತಿಕ ಮತ್ತು ಸೈದ್ದಾಂತಿಕ ಪತ್ರಿಕೋದ್ಯಮದ ದೃಷ್ಟಿಯಿಂದ ಇದು ಖಂಡಿತಾ ಬೇಕಿರಲಿಲ್ಲಎನ್ನೋದು ಜನಸಾಮಾನ್ಯರ ಅಭಿಪ್ರಾಯ.ಈ ವಿಚಾರದಲ್ಲಿ ಹೇಳಬೇಕಾ ದುದನ್ನು ಹೇಳದೆ ಸುಮ್ಮನಿರುವ ಜಾಯಮಾನ ಕನ್ನಡ ಫ್ಲ್ಯಾಶ್ ನ್ಯೂಸ್ ದ್ದಲ್ಲವೇ ಅಲ್ಲ… ರ.ಚಿಂತನ್ ಹಾಗೂ ಮುಮ್ತಾಜ್ ಇಬ್ಬರೂ ಪತ್ರಕರ್ತರಾಗಿರುವುದರಿಂದ ಈ ಬೆಳವಣಿಗೆ ಅವರ ಬಗ್ಗೆ ಸಾರ್ವಜನಿಕವಾಗಿ ಮೂಡಿಸುವಂತ ಅಭಿಪ್ರಾಯಗಳ ಹಿನ್ನಲೆಯಲ್ಲಿ ಎಚ್ಚರಿಸಬೇಕಾದ ಹೊಣೆಗಾರಿಕೆ ನಮ್ಮದಾಗಿರುವುದರಿಂದ ಹೇಳಿಯೇ ತೀರುತ್ತೇವೆ..

ರ.ಚಿಂತನ್ ಹಾಗೂ ಮುಮ್ತಾಸ್ ನೆಲ್ಯಡ್ಕ ಇಬ್ಬರೂ ಡಿಜಿಟಲ್ ಫ್ಲಾಟ್ ಫಾರ್ಮ್ ಗಳಲ್ಲಿ, ತಮ್ಮ ವಿಚಾರ-ಸಿದ್ದಾಂತ ಗಳಿಂದ ಹೆಸರಾದವರು.ಇಬ್ಬರಿಗೂ ಅವರದೇ ಆದ ಫ್ಯಾನ್ ಫಾಲೋವರ್ಸ್ ಇದಾರೆ.ಅವರವರು ಅವರಿಗೆ ತೋಚಿದ್ದನ್ನು ಹೇಳುತ್ತಲೇ ಇರುತ್ತಾರೆ.ಒಟ್ಟಿನಲ್ಲಿ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯರು.ವ್ಯತ್ಯಾಸ ಒಂದೇ ರ.ಚಿಂತನ್ ಸ್ವತಂತ್ರ ಪತ್ರಿಕೋದ್ಯಮದಲ್ಲಿ ತೊಡಗಿಸಿ ಕೊಂಡಿದ್ದರೆ ಮುಮ್ತಾಸ್ ನೆಲ್ಯಡ್ಕ ಮಹೇಶ್ ಹೆಗಡೆ ಎನ್ನುವ ಕಟ್ಟರ್ ಬಲಪಂಥೀಯ ವ್ಯಕ್ತಿ ಮಾಲೀಕತ್ವದ ಟಿವಿ ವಿಕ್ರಮ ಎನ್ನುವ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ನಂಬರ್ ಒನ್ ನಿರೂಪಕಿ.
ರಾ.ಚಿಂತನ್ ಹಾಗೂ ಮುಮ್ತಾಸ್ ಎನ್ನುವ ಹೆಣ್ಣುಮಗಳ ನಡುವೆ ನಡೆಯುತ್ತಿರುವ ಟಾಕ್ ವಾರ್ ವಾಕರಿಕೆ ತರಿಸುವಷ್ಟರ ಮಟ್ಟಿಗೆ ಅತಿರೇಕಕ್ಕೆ ಹೋಗಿದೆ ಎನ್ನುವುದೇ ದುರಂತ.ಅವರನ್ನು ಬೆಂಬಲಿಸಿಕೊಂಡು, ಸಮರ್ಥಿಸಿಕೊಂಡು ಇನ್ನೊಂದಷ್ಟು ಜನ ರಿಯಾಕ್ಟ್ ಮಾಡ್ತಿರುವ ರೀತಿ ಆತಂಕ ಮೂಡಿಸುತ್ತದೆ.ಎಲ್ಲಿಗೆ ಹೋಗ್ತಿದೆ ಸಮಾಜ ಕೋಮು-ಜಾತಿ ಎನ್ನುವುದು ವ್ಯಕ್ತಿಯ ಮಾನಸಿಕತೆಯನ್ನು ಎಷ್ಟರ ಮಟ್ಟಿಗೆ ಆವರಿಸಿಕೊಂಡಿದೆ..ಅವನನ್ನು ಎಷ್ಟರ ಮಟ್ಟಿಗೆ ಸಂಕುಚಿತಗೊಳಿಸಿಬಿಟ್ಟಿದೆ ಎನ್ನಿಸುತ್ತೆ.ಹೀಗೆಯೇ ಮುಂದುವರೆದರೆ ಇದು ಎಲ್ಲಿಗೆ ಹೋಗಿ ತಲುಪುತ್ತೋ ಗೊತ್ತಾಗ್ತಿಲ್ಲ.ಇಂಥ ಸನ್ನಿವೇಶದಲ್ಲಿ ಇಬ್ಬರೂ ಎಲ್ಲೋ ಒಂದೆಡೆ ಆ ಸಾಮಾಜಿಕ ಹೊಣೆಗಾರಿಕೆ ಮರೆತಂತಿದೆಯಾ ಎನ್ನಿಸುತ್ತೆ.
ರ.,ಚಿಂತನ್ ಈಗಾಗಲೇ ಬಹುತೇಕರಿಗೆ ಪತ್ರಕರ್ತನಾಗಿ ಪರಿಚಯ.ಬರಹ-ಮಾತು ಎರಡರಲ್ಲೂ ವೈಚಾರಿಕತೆ- ಎಡಪಂಥೀಯತೆ ಎದ್ದು ಕಾಣುತ್ತೆ.ಆದರೆ ಅವರ ವಿಷಯ ಚರ್ಚೆ ಆಗುತ್ತಿರುವುದು ಅವರ ತೀರಾ ಖಾಸಗಿಯಾಗಿ ಧರ್ಮದ ವಿಚಾರಕ್ಕೆ.ಆತ ಮೂಲತಃ ಮುಸ್ಲಿಂ..ಆತನ ಹೆಸರು ರವೂಫ್.ಅಪ್ಪನನ್ನೇ ಯಾಮಾರಿಸಿ ರ.ಚಿಂತನ್ ಎಂದು ಬದಲಾಯಿಸಿಕೊಂಡಿದ್ದಾನೆ ಇದು ತಪ್ಪು ಎನ್ನುವುದು ಅವರನ್ನು ವಿರೋಧಿಸುವವರ ಮಾತು.ನೆನಪಿರಲಿ, ಅವರ ಮೂಲ ಜಾತಿಯ ವಿಚಾರ ಈ ಹಿಂದೆಯೇ ಚರ್ಚೆಗೆ ಬಂದಿದ್ದಿದೆ.ಆದರೆ ಅದು ವಿವಾದವಾಗುವಂತ ಗಂಭೀರವಾದ ವಿಚಾರವೇನೂ ಆಗಿರಲಿಲ್ಲ.ಅಂದ್ಹಾಗೆ ಅವರು ಎಲ್ಲಿಯೂ ಬಹಿರಂಗವಾಗಿ ನಾನು ಹಿಂದು ಆಗಿ ಪರಿವರ್ತನೆ ಆಗಿದ್ದೇನೆ.ಮುಸ್ಲಿಂ ಧರ್ಮ ತೊರೆದಿದ್ದೇನೆ ಎಂದು ಹೇಳಿಕೊಂಡಿರಲೂ ಇಲ್ಲ..ಆದರೆ ಅವರ ಜಾತಿಯ ವಿಚಾರವನ್ನು ಟಿವಿ ವಿಕ್ರಮದ ಹೆಸರಾಂತ ನಿರೂಪಕಿ ಮುಮ್ತಾಜ್ ನೆಲ್ಯಡ್ಕ ಎನ್ನುವ ಹೆಣ್ಣುಮಗಳು ತೆಗೆದು ಅದನ್ನು ಜಗ್ಗಾಡಿದ್ದೇ ದೊಡ್ಡ ವಿವಾದ ಸೃಷ್ಟಿಸಿದೆ.ಆದರೆ ಇದಕ್ಕೆ ಹೆಚ್ಚು ವಿಚಲಿತವಾಗದ ರ.ಚಿಂತನ್ ತುಂಬಾ ತಣ್ಣಗೇನೆ ಆಕೆಗೆ ರಿಯಾಕ್ಟ್ ಮಾಡಿದ್ದಾರೆ.ಇದನ್ನು ವಿವಾದದ ವಿಷಯವೇ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.

ಆದರೆ ಈ ವಿಚಾರದಲ್ಲಿ ಮುಮ್ತಾಸ್ ಅಬ್ದುಲ್ ನೆಲ್ಯಡ್ಕ ಹೆಚ್ಚು ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿರುವುದು ಆಕೆ ವಿಚಾರವನ್ನು ಕೇವಲ ಒಂದು ಚೌಕಟ್ಟಿನಲ್ಲಿ ಮಾತ್ರ ಪ್ರತಿಪಾದಿಸುತ್ತಿರುವ ಕಾರಣಕ್ಕೆ.ಅದೆಲ್ಲಾ ಆಕೆಯ ಮಾತುಗಳಲ್ಲ..ಆಕೆಯ ಅಭಿಪ್ರಾಯಗಳಲ್ಲ.. ಆಕೆಯಿಂದ ಅದನ್ನು ಬಲವಂತವಾಗಿ ಹೇಳಿಸಲಾಗುತ್ತಿದೆ.ಆಕೆಯ ಬಗ್ಗೆ ಅನುಕಂಪೆ-ಸಹಾನುಭೂತಿಯಿದೆ.ಪೋಸ್ಟ್ ಕಾರ್ಡ್ ಮಹೇಶ್ ಹೆಗ್ಡೆ ಆ ಹುಡುಗಿಯನ್ನು ತನ್ನ ಸ್ವಾರ್ಥಕ್ಕೆ ದಾಳವಾಗಿ ಬಳಸಿಕೊಳ್ಳುತ್ತಿದ್ದಾರಾ ಎನ್ನುವ ಮಾತು ಅನೇಕರಿಂದ ವ್ಯಕ್ತವಾಗಿದೆ. ಅತ್ಯದ್ಭುತ ಸಾಧಕಿಯಾಗಿ ಬೆಳೆಯಬಲ್ಲ ಎಲ್ಲಾ ಶಕ್ತಿ-ಸಾಮರ್ಥ್ಯ-ಪ್ರತಿಭೆಯಿದ್ದರೂ ಒಂದು ಪಂಥ-ಇಸಂ-ಸಿದ್ದಾಂತಕ್ಕೆ ಸೀಮಿತವಾಗುತ್ತಿದ್ದಾಳಲ್ಲ ಎನ್ನುವ ಬೇಸರವನ್ನು ಕೂಡ ಹಲವರು ವ್ಯಕ್ತಪಡಿಸಿದ್ದಾರೆ.
ಅಂದ್ಗಾಗೆ ಮುಮ್ತಾಸ್ ನೆಲ್ಯಡ್ಕ ಎನ್ನುವ ಹೆಣ್ಣು ಮಗಳು ಟಿವಿ ವಿಕ್ರಮದಂತ ಕಟ್ಟರ್ ಬಲಪಂಥೀಯ ನಿಲುವುಳ್ಳ ವ್ಯಕ್ತಿ ಮಾಲೀಕತ್ವದ ಡಿಜಿಟಲ್ ಮಾದ್ಯಮದಲ್ಲಿ ಇರದೇ ಹೋಗಿದಿದ್ದರೆ,ಆಕೆಯ ವಿಚಾರಗಳು ವಸ್ತುನಿಷ್ಟವಾಗಿ-ನಿಷ್ಪಕ್ಷಪಾತ ವಾಗಿ ಇರುತ್ತಿದ್ದರೆ, ಇವತ್ತಿನ ಮಟ್ಟಿಗೆ ಪರಿಣಾಮಕಾರಿ ಸೋಶಿಯಲ್ ಇನ್ಳ್ಪ್ಲುಯೆನ್ಸರ್ ಆಗಿರುತ್ತಿದ್ದಳು ಎನ್ನುವುದು ಅನೇಕರ ಮಾತು.ಮಹೇಶ್ ಹೆಗ್ಡೆ ಎನ್ನುವ ಬಲಪಂಥೀಯ ವಿಚಾರಗಳ ಕಟ್ಟರ್ ಪ್ರತಿಪಾದಕನ ಜತೆ ಗುರುತಿಸಿಕೊಂಡಿ ರುವುದರಿಂದಲೇ ಆ ವರ್ಗವನ್ನು ಮೆಚ್ಚುವವರ ಪಾಲಿಗೆ ಇಷ್ಟದವಳಾಗಿ ಕಾಣಿಸ್ತಾಳೆ..ವಿರೋಧಿಸುವವರ ಕಣ್ಣಿಗೆ ಶತೃವಾಗಿ ಗೋಚರಿಸ್ತಿದಾಳೆ ಎನ್ನಿಸುತ್ತೆ.
ಎಲ್ಲರಿಗೂ ಗೊತ್ತಿರುವಂತೆ ಮುಮ್ತಾಸ್ ,ಪೋಸ್ಟ್ ಕಾರ್ಡ್ ಎನ್ನುವ ಡಿಜಿಟಲ್ ಫ್ಲಾಟ್ ಫಾರ್ಮ್ ನ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗ್ಡೆ ಎನ್ನುವವರ ವಿಕ್ರಮ್ ಟಿವಿಯಲ್ಲಿ ಮುಖ್ಯ ನಿರೂಪಕಿಯಾಗಿ ಕೆಲಸ ಮಾಡ್ತಿದಾಳೆ.ಉತ್ತಮ ವಾಗ್ಪಟು..ಅತ್ಯದ್ಭುತ ವಾಕ್ಚಾತುರ್ಯ ಆಕೆಯಲ್ಲಿದೆ.ಆಕೆ ಮಾತನಾಡುವುದನ್ನು ಗಮನಿಸಿದಾಗ ಆಳವಾದ ವಿಷಯ ಜ್ನಾನ ಇರುವಂತಿದೆ.ವಿಕ್ರಮ್ ಟಿವಿಯ ಟಿಆರ್ ಪಿ ಹೆಚ್ಚಲು ಕಾರಣವೇ ಈ ಹುಡುಗಿ ಎನ್ನುವುದರಲ್ಲಿ ಅನುಮಾವಿಲ್ಲ. ಟಿವಿ ವಿಕ್ರಮದಲ್ಲಿ ಎಷ್ಟೇ ಮಾದ್ಯಮಮಿತ್ರರು ಕೆಲಸ ಮಾಡಿದ್ರೂ ಅವರ ವಿಚಾರಗಳನ್ನು ವ್ಯಕ್ತಪಡಿಸಿದ್ರೂ ಮುಮ್ತಾಜ್ ರೇಂಜ್ ಗೆ ಬೆಳೆಯೋ ಮಾತು ಒತ್ತಟ್ಟಿಗಿರಿಲಿ,ಆಕೆಯ ಹತ್ತಿರವೂ ಸುಳಿಯಲಿಕ್ಕೆ ಸಾಧ್ಯವಾಗಿಲ್ಲ ಎನ್ನುವುದರಲ್ಲೇ ಆಕೆಯ ಕೆಪಾಸಿಟಿ ಅರ್ಥವಾಗುತ್ತದೆ.
ಮುಮ್ತಾಸ್ ಎನ್ನುವ ಹೆಣ್ಣುಮಗಳ ಬೆಳವಣಿಗೆ ನಿಜಕ್ಕೂ ಅಚ್ಚರಿ ತರಿಸುತ್ತದೆ.ವಯಸ್ಸು ಇನ್ನೂ ಸಣ್ಣದು..ಈ ವಯಸ್ಸಿನಲ್ಲಿ ಆಕೆಗೆ ಸೂಕ್ತ ವ್ಯಕ್ತಿಗಳ ಮಾರ್ಗದರ್ಶನ ಸಿಗಬೇಕಿತ್ತು.ಸಮಾಜ ದೇಶ ಕಟ್ಟುವ ಸಮುದಾಯಗಳನ್ನು ಬೆಸೆಯುವಂತವರ ಸಂಗ-ಸಹವಾಸ ಸಿಗಬೇಕಿತ್ತು ಎನ್ನುವುದು ಹಲವರ ಉವಾಚ.. ಏಕೆಂದರೆ ಆಕೆ ಒಂದು ಸಮುದಾಯ-ವರ್ಗ ಹಾಗೂ ನಂಬಿಕೆ, ವಿಚಾರಗಳಿಗೆ ತನ್ನನ್ನು ಸೀಮಿತಗೊಳಿಸಿಕೊಂಡಿದ್ದಾಳೆ. ಬೇರೊಬ್ಬರು ಬರೆದುಕೊಟ್ಟಿದ್ದನ್ನು ಯಥಾವತ್ತಾಗಿ ಭಟ್ಟಿ ಇಳಿಸುವ -ಕಂಠಪಾಠ ಮಾಡಿದ ಗಿಣಿಯಂತೆ ಭಾಸವಾಗುತ್ತಾಳೆ.ಯಾರದೋ ಸೂತ್ರದಲ್ಲಿ ಆಡುತ್ತಿರುವ ಬೊಂಬೆಯಂತಾಗಿದ್ದಾಳೆ.
ಆಕೆಯನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರಾ ಎಂದೆನಿಸುತ್ತಿದೆ. ಅವರನ್ನು ಓಲೈಸುವ ಭರಾಟೆಯಲ್ಲಿ ಆಕೆ ತನ್ನ ಸ್ವಂತಿಕೆ ಕಳೆದುಕೊಳ್ಳುತ್ತಿದ್ದಾಳೆ..? ಹಿಂದುತ್ವವೇ ಶ್ರೇಷ್ಟ-ಆ ಧರ್ಮ ಬಿಟ್ಟರೆ ಜಗತ್ತಿನಲ್ಲಿ ಇನ್ನೊಂದು ಉತ್ತಮ ಧರ್ಮವಿಲ್ಲ ಎನ್ನುವುದನ್ನು ವಿಜ್ರಂಭಿಸುವ ಅತಿರೇಕದಲ್ಲಿ ಉಳಿದೆಲ್ಲಾ ಧರ್ಮಗಳನ್ನು ಆಕೆಯ ಮೂಲಕ ತುಚ್ಛೀಕರಿಸುವ ಕೆಲಸ ವ್ಯವಸ್ತಿತವಾಗಿ ನಡೆಯುತ್ತಿದೆ ಎನ್ನುವುದು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರ ಆತಂಕ.ಏಕೆಂದರೆ ಈಗಾಗಲೇ ಮುಸ್ಲಿಂ ಸಮುದಾಯದ ಕೆಲ ಮೂಲಭೂತವಾದಿಗಳು ಆಕೆ ವಿರುದ್ಧ ಕತ್ತಿ ಮಸೆಯುತ್ತಿವೆ ಎನ್ನುವ ಮಾತುಗಳಿವೆ.ಹಾಗಾಗಿ ಸ್ವಲ್ಪ ಎಚ್ಚರಿಕೆ ಹೆಜ್ಜೆಗಳನ್ನು ಇಡುವುದು ಸೂಕ್ತ ಎನ್ನುತ್ತಾರೆ ಓರ್ವ ಬೆಂಗಳೂರಿನ ಹಿರಿಯ ಪತ್ರಕರ್ತರು.
ಒಂದು ಪಂಥ-ಸಮುದಾಯ-ವರ್ಗದ ಪರವಾಗಿ ನಿಂತಿರುವುದೇ ಆಕೆಯನ್ನು ಅನುಮಾನದಿಂದ ನೋಡುವಂತಾಗಿದೆ ಯಂತೆ.ಆಕೆಯ ಸೈದ್ಧಾಂತಿಕತೆ,ಬದ್ಧತೆ ಪ್ರಶ್ನಿಸುವಂತೆ ಮಾಡಿದೆಯಂತೆ.ಹಿಂದುತ್ವ-ಆರ್ ಎಸ್ ಎಸ್-ಬಿಜೆಪಿ ಹಾಗೂ ಅದರ ಸಿದ್ದಾಂತಗಳನ್ನು ಹೊಗಳುವುದು,ಧೋರಣೆಯನ್ನು ಕಟುವಾಗಿ ಸಮರ್ಥಿಸಿಕೊಳ್ಳುವುದೇ ಆಕೆಯ ನಿತ್ಯದ ಕೆಲಸವಾಗ್ಹೋಗಿದೆಯಂತೆ.ಹಿಂದುತ್ವವನ್ನು ಹೊಗಳುವ ಭರಾಟೆಯಲ್ಲಿ ಇನ್ನೊಂದು ಸಮುದಾಯದ ನಂಬಿಕೆಯನ್ನೇ ತಪ್ಪು ಎಂದು ಟೀಕಿಸುತ್ತಿರುವುದು ಅಪಾಯಕಾರಿ ಎನಿಸುತ್ತದೆ.
ಹಿಂದುತ್ವವೇ ಸರಿ, ಉಳಿದೆಲ್ಲವೂ ಅಪ್ಪಟ ಸುಳ್ಳು ಎನ್ನುವುದೇ ಆಕೆಯ ವಿಚಾರಗಳಲ್ಲಿರುವಂತಿದೆ.ಎಲ್ಲಾ ಧರ್ಮಗಳು ಪ್ರತಿಪಾದಿಸುವುದು ಮಾನವ ಪ್ರೀತಿ ಹಾಗೂ ಸಮಾಜದೆಡೆಗಿನ ಕಳಕಳಿ ಎನ್ನುವುದನ್ನೇ ಆಕೆ ಮರೆತಂತಿದೆ.ಇದು ತಪ್ಪು.ಯಾವ ಧರ್ಮವೂ ಮನುಷ್ಯತ್ವಕ್ಕೆ ವಿರುದ್ಧವಾದುದನ್ನು ಪ್ರತಿಪಾದಿಸುವುದಿಲ್ಲ ಎನ್ನುವ ಸಣ್ಣ ಸೂಕ್ಷ್ಮವೂ ಈ ಬಿಸಿರಕ್ತದ ಹೆಣ್ಣುಮಗಳಿಗೆ ಗೊತ್ತಿಲ್ಲ ಎನಿಸುತ್ತದೆ.ಹಿಂದುತ್ವವನ್ನು ಅತಿಯಾಗಿ ಹೊಗಳುವುದರ ಜತೆಗೆ ಬೇರೆ ಧರ್ಮಗಳಲ್ಲಿರುವ ಒಂದಷ್ಟು ಸಮಾಜಮುಖ-ಮಾನವಪರ-ಜೀವಪರವಾದ ವಿಚಾರಗಳನ್ನು ಎತ್ತಿ ಹಿಡಿದಿದ್ದರೆ ಅದು ಸಂತುಲಿತವಾಗುತ್ತಿತ್ತು.ಕೇವಲ ಒಂದು ವರ್ಗ-ಪಂಥಕ್ಕೆ ಸೀಮಿತಗೊಳ್ಳದೆ ಎಲ್ಲರನ್ನು ಆಕೆ ಒಳಗೊಳ್ಳುತ್ತಿದ್ದಳೇನೋ ಎನ್ನಿಸುತ್ತದೆ.ಒಬ್ಬ ಪತ್ರಕರ್ತ ಮಾಡಬೇಕಿರುವುದು,ಆತನಿಂದ ದೇಶ-ಸಮಾಜ ನಿರೀಕ್ಷೆ ಮಾಡುವುದು ಇದನ್ನೇ ಅಲ್ವೇ..? ಮುಮ್ತಾಜ್ ಳಂತ ಪತ್ರಕರ್ತೆ ಇದನ್ನು ಅರ್ಥ ಮಾಡಿಕೊಂಡಿದಿದ್ದರೆ ಒಳ್ಳೆಯದಿತ್ತು ಎನಿಸುತ್ತದೆ.
ಇಸ್ಲಾಂ ಧರ್ಮದಲ್ಲಿರುವ ಕೆಲವೊಂದು ವಿಚಾರಗಳ ಬಗ್ಗೆ ಅಷ್ಟೊಂದು ಧೈರ್ಯವಾಗಿ-ಆತ್ಮವಿಶ್ವಾಸ ದಿಂದ-ಕರಾರುವಕ್ಕಾಗಿ ಮಾತನಾಡುತ್ತಾಳೆಂದರೆ, ಟೀಕಿಸುತ್ತಾಳೆಂದರೆ ಅದು ಸುಲಭದ ಮಾತಾ,,? ನೋ ಚಾನ್ಸ್.ಈ ಕಾರಣಕ್ಕೆ ಮುಮ್ತಾಜ್ ಎನ್ನುವ ಹೆಣ್ಣುಮಗಳ ಎಂಟೆದೆಯ ಧೈರ್ಯವನ್ನು ಮೆಚ್ಚಿ ಕೊಳ್ಳಲೇಬೇಕು.. ಸಮುದಾಯದಲ್ಲೇ ಇರುವ ಕಟ್ಟರ್ ಎನ್ನುವ ಒಂದಷ್ಟು ಮಂದಿಗೆ ಆಕೆ ಸದಾ ಟಾರ್ಗೆಟ್ ಆಗಿರಬಹುದೇನೋ..? ಹಲವರಿಂದ ಜೀವಬೆದರಿಕೆಯೂ ಆಕೆಗೆ ಇರಬಹು ದೇನೋ..? ಆದರೆ..ಆದರೆ..ಇದೇ ಬದ್ಧತೆ-ನಿಷ್ಟೂರತೆ ಮುಸ್ಲಿಂಮೇತರ ಧರ್ಮಗಳಲ್ಲಿಯೂ ಇರಬಹುದಾದ ಅಸಂಗತ-ಅಸಹ್ಯಗಳ ಬಗ್ಗೆಯೂ ಇದ್ದಿದ್ದರೆ ಆಕೆ ಫರ್ಪೆಕ್ಟ್ ಜರ್ನಲಿಸ್ಟ್ ಆಗಿರುತ್ತಿದ್ದಳೇನೋ..?
ಎಲ್ಲಾ ಧರ್ಮಗಳಲ್ಲಿ ಇರಬಹುದಾದ ಅಸಂಬದ್ಧತೆಗಳು ಹಿಂದೂ ಧರ್ಮದಲ್ಲಿಯೂ ಇದೆ ಎನ್ನುವುದನ್ನು ಗಟ್ಟಿದ್ವನಿಯಲ್ಲಿ ಹೇಳುವಂಥ ಧೈರ್ಯ ಪ್ರದರ್ಶಿಸಿದ್ದರೆ ಗ್ರೇಟ್ ಎನಿಸಿಕೊಂಡು ಬಿಡುತ್ತಿದ್ದಳೇನೋ..? ಹಿಂದೂ ಧರ್ಮ ಮಾತ್ರ ಶ್ರೇಷ್ಟ ಎಂದು ಪ್ರತಿಪಾದಿಸುವ ಭರಾಟೆಯಲ್ಲಿ ಬೇರೆ ಧರ್ಮಗಳನ್ನು ತುಚ್ಛವಾಗಿ ನೋಡುವ,ಅದರ ಬಗ್ಗೆ ಇನ್ನೊಬ್ಬರು ತನ್ನ ಮೇಲೆ ಹೇರುವ ವಿಚಾರಗಳನ್ನು ಬಹಿರಂಗವಾಗಿ ಅಭಿಪ್ರಾಯಿಸುವಂತೆ ಕಾಣುವುದರಿಂದಲೇ ಮುಮ್ತಾಜ್ ಎನ್ನುವ ಬೆಳೆವ ಸಿರಿ ಎಲ್ಲೋ ಕಳೆ-ಮುಳ್ಳು-ಪಾಪಸ್ ಕಳ್ಳಿಗಳ ನಡುವೆ ಸಿಕ್ಕಾಕೊಂಡು ನಲುಗುತ್ತಿದೆ ಎಂಬ ಅನುಮಾನ ಆಕೆಯ ಏಕಪಕ್ಷೀಯ ನಿಲುವು-ಧೋರಣೆ ಗಮನಿಸಿದಾಗ ಕಾಡುತ್ತದೆ.
ಮುಮ್ತಾಸ್ ಎನ್ನುವ ಹೆಣ್ಣುಮಗಳಿಗೆ ನಿಜಕ್ಕೂ ಉಜ್ವಲ ಭವಿಷ್ಯವಿದೆ.ಡಿಜಿಟಲ್ ಮೀಡಿಯಾದಿಂದ ಮುಖ್ಯವಾಹಿನಿ ಗೇನಾದ್ರೂ ಬಂದಿದ್ದೇ ಆದಲ್ಲಿ ಮಾದ್ಯಮ ಜಗತ್ತನೇ ಆಳಬಲ್ಲ ಅತ್ಯದ್ಭುತ ಆಂಕರ್ ಆಗಿ ಬೆಳೆಯಬಲ್ಲಳೆನಿಸುತ್ತದೆ. ಏಕೆಂದರೆ ಇವತ್ತು ಕನ್ನಡ ಪತ್ರಿಕೋದ್ಯಮಕ್ಕೆ ಇಂಥವರ ಅವಶ್ಯಕತೆ ತುಂಬಾ ಇದೆ.ಆದರೆ ಇದೆಲ್ಲಾ ಆಕೆ ವಿಚಾರ ಮಂಡನೆಯಲ್ಲಿ ನಿಷ್ಪಕ್ಷಪಾತವಾಗಿ ಇದ್ದಾಗ, ನಡೆದುಕೊಂಡಾಗ ಮಾತ್ರ ಸಾಧ್ಯ.ಇಲ್ಲವಾದಲ್ಲಿ ಇವತ್ತು ಪತ್ರಿಕೋದ್ಯಮದಲ್ಲಿರುವ ಎಡ-ಬಲ ಎನ್ನುವ ದರಿದ್ರ-ಅನಿಷ್ಟ ಪಂಥಗಳಲ್ಲಿ ಒಂದಕ್ಕೆ ಸೀಮಿತವಾಗಿ ಹೋಗ್ತಾಳೆ
ಒಬ್ಬ ಹೆಣ್ಣುಮಗಳಾಗಿ ಮುಮ್ತಾಸ್ ಅವರ ಬೆಳವಣಿಗೆ ಖುಷಿ ತರುತ್ತದೆ.ಆದರೆ ಆಕೆಯನ್ನು ಒಂದು ವರ್ಗ ವ್ಯವಸ್ಥಿತವಾಗಿ ತಮ್ಮ ಸ್ವಾರ್ಥಕ್ಕಷ್ಟೇ ಬಳಸಿಕೊಳ್ಳುತ್ತಿದೆಯಾ ಎನ್ನುವ ಶಂಕೆ ಕಾಡುವುದು ಸಹಜ.ಈ ರೀತಿ ಆಕೆಯ ಪ್ರತಿಭೆ ಹಾಗೂ ಸಾಮರ್ಥ್ಯ ಪೋಲಾಗುತ್ತಿರುವುದು ನಿಜಕ್ಕೂ ಬೇಸರದ ವಿಚಾರ.ಹೊಗಳುವವರ ಮಾತಿಗೆ ಮರುಳಾಗದೆ, ತೆಗಳುವವರ ಬಗ್ಗೆ ತಲೆಕೆಡಿಸಿಕೊಳ್ಳದೆ ಸ್ವಂತಿಕೆಯನ್ನುಳಿಸಿಕೊಂಡು ನಿಷ್ಪಕ್ಷಪಾತವಾಗಿ ತನ್ನನ್ನು ದುಡಿಸಿಕೊಂಡರೆ ಮುಮ್ತಾಜ್ ನೆಲ್ಯಡ್ಕ ಎನ್ನುವ ಹೆಣ್ಣುಮಗಳು ಮಾದ್ಯಮಕ್ಕೊಂದು ಶಕ್ತಿ, ಸಮಾಜಕ್ಕೊಂದು ಆಸ್ತಿ ಆಗೋದ್ರಲ್ಲಿ ಶಂಕೆಯೇ ಇಲ್ಲ.ಇದು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಅನಿಸಿಕೆ-ಅಭಿಪ್ರಾಯ.










