advertise here

Search

succese-inspirational story of a journalist”ಪತಕರ್ತ”ನ ಯಶೋಗಾಥೆ..ಅಂದಿನ ಯಶಸ್ವಿ “ಕ್ರೈಂ ರಿಪೋರ್ಟರ್‌” ,ಇವತ್ತು “ಶಾಲೆ”ಯ “ಮಾಲೀಕ”


ಬದುಕಿನಲ್ಲಿ ಎಲ್ಲಾ ಅವಕಾಶ-ವೇದಿಕೆ ಇದ್ದು ಯಶಸ್ಸು ಪಡೆಯೋದು ಸಾಧನೆಯೇ ಅಲ್ಲ..ಶೂನ್ಯದಿಂದ ಮಹತ್ತರವಾದುದನ್ನು ಗಳಿಸೋದು ಇದೆಯೆಲ್ಲಾ ಅದೇ ನಿಜವಾದ ಸಾಧನೆ-ಯಶಸ್ಸು ಎನ್ನುವುದು ಅನುಭಾವಿಗಳ ಮಾತು..ಎಲ್ಲಾ ಕ್ಷೇತ್ರಗಳಲ್ಲಿರುವಂತೆ ನಮ್ಮ ಪತ್ರಿಕೋದ್ಯಮದಲ್ಲೂ ( ಇನ್ನೊಬ್ಬರಿಗೆ ಬಹುಪರಾಖ್‌ ಹಾಕಿಕೊಂಡು,ಹೊಗಳುಭಟ್ಟರಾಗಿ ಸ್ಥಾನಮಾನ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಪತ್ರಿಕೋದ್ಯಮದಲ್ಲಿ ಇವತ್ತಿಗೆ ದೊಡ್ಡದಿದೆ ಬಿಡಿ…) ಅಂಥಾ ಸಾಧಕರು ಪರಿಶ್ರಮದ ಕಾರಣಕ್ಕೆ ಗಮನ ಸೆಳೆಯುತ್ತಾರೆ..ಇತರರಿಗೂ ಮಾದರಿಯಾಗುತ್ತಾರೆ..ಅಂಥವರ ಸಾಲಿನಲ್ಲಿ ನಿಲ್ಲುವಂತ ವ್ಯಕ್ತಿ ಪುಟ್ಟರಾಜ್..‌ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ದುಡಿದು ಉಪಜೀವನಕ್ಕೊಂದು ಪರ್ಯಾಯ ಹುಡುಕಿಕೊಂಡು ಎರಡನ್ನೂ ಸಮತೋಲನದಲ್ಲಿ ಸಂಭಾಳಿಸಿಕೊಂಡು ಅಂತಿಮವಾಗಿ ಆ ಪ್ರಯತ್ನದ್ಲಿ ಯಶಸ್ವಿಯಾದ ಪುಟ್ಟರಾಜ್‌ ಇವತ್ತು ರಾಜಧಾನಿ ಬೆಂಗಳೂರಿನಲ್ಲಿ ನೂರಾರು ಮಕ್ಕಳು ಓದುತ್ತಿರುವ ಶಾಲೆಯೊಂದನ್ನು ಕಟ್ಟಿ ಬೆಳೆಸುತ್ತಿದ್ದಾರೆ ಎಂದರೆ ಅದೇನು ಕಡಿಮೆ ಸಾಧನೆನಾ.? ಒಂದು ಕಾಲದ ಯಶಸ್ವಿ ಪತ್ರಕರ್ತ ಇವತ್ತಿಗೆ ಸಾಧಕನಾಗಿ ಬೆಳೆದಿರುವ ಪುಟ್ಟರಾಜ್‌ ಸ್ಟೋರಿ ಎಂಥವರಿಊ ಪ್ರೇರಣೆಯಾಗುವಂತದ್ದು..ಹಾಗಾಗಿಯೇ ಅವರ ಬಗ್ಗೆ ಈ ಒಂದು ಲೇಖನ.

ಜೀವನವೇ ಹಾಗೇ..ಅದು ಯಾವ ಕಾಲಘಟ್ಟದಲ್ಲಿ ಹೇಗೆ ತಿರುವುಗಳನ್ನು ಪಡೆಯುತ್ತೋ ಹೇಳೋಕೆ ಆಗಲ್ಲ.. ಪುಟ್ಟರಾಜ್‌ ಬದುಕು ಇದಕ್ಕೆ ಹೊರತಲ್ಲ. ಚಿಕ್ಕವಯಸ್ಸಿನಲ್ಲಿಯೇ ತನ್ನ ತಂದೆಯನ್ನ ಕಳೆದುಕೊಂಡು ತಾಯಿ‌ ಮಡಿಲು ಹಾಗೂ ಮಾವಂದಿರ ಆಶ್ರಯದಲ್ಲಿ ಬೆಳೆದು ಸ್ವಂತ ಪರಿಶ್ರಮ ಹಾಗೂ ಬುದ್ದಿಶಕ್ತಿಯಿಂದ ಇವತ್ತು ಶಾಲೆಯೊಂದರ ಸಂಸ್ಥಾಪಕನಾದುದ್ದನ್ನುಯಾವುದೇ ಸ್ಥೂರ್ತಿದಾಯಕ ಕಥೆಗಿಂತ ಕಡಿಮೆಯಿಲ್ಲ. ಅಂದ್ಹಾಗೆ ಎಂಎ ಬಿ.ಇಡಿ ಪಧವೀದರ ಪುಟ್ಟರಾಜು ಎಸ್, ಹುಟ್ಟಿದ್ದು ಒಂದೆಡೆಯಾದರೆ ಬೆಳೆದದ್ದು ನಾನಾ ಕಡೆ.. ಆದರೂ ಕಷ್ಟದ ದಿನದಲ್ಲೂ ಛಲ ಬಿಡದೆ ಶಿಕ್ಷಣ ಪೂರೈಸಿದರು.. ಶಿಕ್ಷಣ ಮುಗಿದ ಕೂಡಲೇ ಕಾಡುವ ನಿರುದ್ಯೋಗಕ್ಕೆ ಪರಿಹಾರವಾಗಿ ಸಿಕ್ಕಿದ್ದು ಹೌಸ್ ಕೀಪಿಂಗ್ ಕೆಲಸ. ಹೌಸ್‌ ಕೀಪಿಂಗ್‌ ಎಂದುಕೊಂಡು ಮೂಗುಮುರಿದಿದ್ದರೆ ಜೀವನಾನುಭವವೊಂದು ಅವರಿಗೆ ಸಿಕ್ಕುತ್ತಿರಲಿಲ್ಲವೇನೋ .

ಮದ್ದದ ದೊರೆ ವಿಜಯ್ ಮಲ್ಯರ ಕಟ್ಟಡದಲ್ಲಿದ್ದ ಸಂಸ್ಥೆಯೊಂದರಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡಲಾರಂಭಿಸಿದ್ರೂ ಇದು ನನ್ನ ಪಾಲಿನ ಕಪ್‌ ಆಫ್‌ ಟೀ ಅಲ್ಲ..ನಾನು ಮಾಡಬೇಕಿರುವುದೇ ಇನ್ನೇನೋ ಇದೆ ಎನ್ನುವ ಕೊರಗು,ತುಡಿತ, ತಹತಹ ಪುಟ್ಟರಾಜ್‌ ಮನಸಿನಲ್ಲಿ ಸದಾ ಕೊರೆಯತ್ತಲೇ ಇತ್ತು.ಹೆಚ್ಚು ದಿನ ಇದೇ ಹೌಸ್‌ ಕೀಪಿಂಗ್‌ ನಲ್ಲಿದ್ದರೆ ಬದುಕು ಬರ್ಬಾದ್‌ ಆಗಬಹುದೆಂದು ಎನಿಸಿದ ಕ್ಷಣದಿಂದಲೇ ಪರ್ಯಾಯದ ಹುಡುಕಾಟಕ್ಕೆ ಇಳಿದರು.ಆಗ ಅನ್ನಿಸಿದ್ದು ಕಡಿಮೆ ವೇತನವಿದ್ದರು ನೆಮ್ಮದಿ ಕೊಡುವಂಥ ಶಿಕ್ಷಕ ವೃತ್ತಿ.

ತಡಮಾಡದೆ ಅದಕ್ಕೆ ಬೇಕಾದ ವ್ಯವಸ್ಥೆ ಹಾಗೂ ತಯಾರಿ ಮಾಡಿಕೊಂಡು ಬೆಂಗಳೂರಿನ ಶಾಲೆಯೊಂದರಲ್ಲಿ ಕನ್ನಡ ಶಿಕ್ಷಕನಾಗಿ ವೃತ್ತಿ ಆರಂಭಿಸಿದರು. ಆದರೆ ಪುಟ್ಟರಾಜ್‌ ಗೆ ಅಂದುಕೊಡಷ್ಟು ಶಿಕ್ಷಕ ವೃತ್ತಿ ಅನಾಯಾಸವಾಗಿರಲಿಲ್ಲ.ಏಕೆಂದರೆ ಅದು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಮಕ್ಕಳಿಗೆ ಕನ್ನಡ ಕಲಿಸೋದು ಸವಾಲಾಗಿತ್ತು.. ಆದರೆ ಮೊದಲು ಶಿಕ್ಷಕ ಮಕ್ಕಳಿಗೆ ಇಷ್ಟವಾದರೇ ಸಬ್ಜೆಕ್ಟ್ ಕೂಡ ಇಷ್ಟ ಆಗುತ್ತೆ ಅನ್ನೋದನ್ನ ನಂಬಿದ್ದರು. ಅದಕ್ಕಾಗಿ ಅನಾಯಾಸಕರವಾದ ಮಾರ್ಗ ಆಯ್ದುಕೊಂಡರು. ಮಕ್ಕಳಿಗೆ ಕಥೆಗಳನ್ನು ಹೇಳುವ ಮೂಲಕ ಹತ್ತಿರವಾದರು. ಸರಳ ಸುಲಭ ವ್ಯಾಕರಣಕ್ಕೆ ಆದ್ಯತೆ ಕೊಟ್ಟು ಕನ್ನಡದ ಅಚ್ಚುಮೆಚ್ಚಿನ ಶಿಕ್ಷಕರಾದರು. ಕಸ್ತೂರಿ ಬಾ ನಗರದ ಮಾರ್ಥಾಸ್ ಮತ್ತು ಸೌತ್ ಎಂಡ್ ಶಾಲೆಯಲ್ಲಿ ಉತ್ತಮ ಹೆಸರನ್ನು ಗಳಿಸಿದರು.

ಸದಾ ಹೊಸತನಕ್ಕೆ ತುಡಿಯುವುದು,ಅದರಲ್ಲೇ ಪ್ರಯೋಗ ಮಾಡುವುದು ಪುಟ್ಟರಾಜ್‌ ಅವರ ವಿಶೇಷತೆ ಆಗಿತ್ತು ಎನ್ನಿಸುತ್ತೆ..ಶಿಕ್ಷಕ ವೃತ್ತಿ ತೃಪ್ತಿಕೊಟ್ಟಿತ್ತಾದರೂ ಅದರಾಚೆ ಇನ್ನೇನನ್ನಾದ್ರೂ ಮಾಡಬೇಕೆನ್ನುವ ಆಕಾಂಕ್ಷೆ-ಅಭಿಲಾಷೆ ಅವರಲ್ಲಿತ್ತು.ಅದಕ್ಕೆ ನೆರವಾಗಿದ್ದು ಪತ್ರಿಕೋದ್ಯಮ. ಶಿಕ್ಷಕನಾಗಿದ್ದುದರಿಂದ ಇದು ಅವರಿಗೆ ಕ್ಲಿಷ್ಟಕರವಾಗೇನೂ ಪರಿಣಮಿಸಲಿಲ್ಲ. ಮಾತನಾಡುವುದು, ಬರೆಯುವುದು ಸಿದ್ದಿಸಿದ್ದರಿಂದ ಅದು ವರವಾಗಿ ವರವಾಯಿತು.ಆಗ ಎಂಟ್ರಿ ಕೊಟ್ಟಿದ್ದೇ ಕರ್ನಾಟಕದ ನಂಬರ್‌ ೧ ನ್ಯೂಸ್‌ ಚಾನೆಲ್‌ ಟಿವಿಗೆ ಕನ್ನಡಕ್ಕೆ . ಚಾನೆಲ್ ನ ಜೋಡೆತ್ತುಗಳಾದ. ರವಿಕುಮಾರ್ ಮತ್ತು ಮಾರುತಿಯವರು ಪುಟ್ಟರಾಜ್‌ ಪ್ರತಿಭೆ ಗುರುತಿಸಿ ಅಪರಾಧ ವಿಭಾಗದ ವರದಿಗಾರರನ್ನಾಗಿ ಕೆಲಸ ಮಾಡುವ ಅವಕಾಶ ನೀಡಿದ್ರು.. ಆಮೇಲೆ ಪುಟ್ಟರಾಜ್‌ ಹಿಂತುರುಗಿ ನೋಡಲೇ ಇಲ್ಲ.ಪ್ರೀತಿಯ ಮೇಷ್ಟ್ರು ಮಾಧ್ಯಮ ಲೋಕದಲ್ಲಿ ಪ್ರೀತಿಯ ಪುಟ್ಟಣ್ಣ ಆಗಿ ಬೆಳೆದುನಿಂತರು.

ALSO READ :  ಅಂತರರಾಷ್ಟ್ರೀಯ ವ್ಯಾಪಾರದ ಸುಧಾರಣೆಗೆ ಧ್ವಜವಾಹಕ: ಬೆಂಗಳೂರಿನಲ್ಲಿ 19ನೇ ಕಸ್ಟಮ್ಸ್ ಸಮಾಲೋಚನಾ ಗುಂಪು ಸಭೆ ಯಶಸ್ವಿಯಾಗಿ ನಡೆಯಿತು

ಹಿರಿಯರ ಕಿರಿಯರ ಸಮನ್ವಯಕನಾಗಿ.. ಪೊಲೀಸ್ ಮಿತ್ರನಾಗಿ ಶತ್ರುವಾಗಿ.. ಎಲ್ಲಾ ಬಗೆಯ ಸ್ಟೋರಿಗಳನ್ನು ಹೆಕ್ಕಿತೆಗೆಯುವ ಮಟ್ಟಕ್ಕೆ ಬೆಳೆದುನಿಂತರು. ಅದಾಗಲೇ ಈಟಿವಿ ಕನ್ನಡ 24×7 ಕಾರ್ಯಚರಣೆಗೆ ಸನ್ನದ್ದವಾಗಿರುವಾಗಲೇ ಮತ್ತೊಂದು ಆಫರ್ ಇವರಿಗೆ ತೆರೆದುಕೊಂಡಿತು. ಈಟಿವಿ ಕನ್ನಡದ ಹಿರಿಯ ವರದಿಗಾರನಾಗಿ ಸೇರ್ಪಡೆಗೊಂಡರು.ಅತ್ಯದ್ಭುತವಾದ ಕ್ರೈಂ ಸ್ಟೋರಿಗಳನ್ನು ಬರೆದರು.. ಈ ನಡುವೆ ಈಟಿವಿ ನ್ಯೂಸ್ 18 ಕನ್ನಡವಾದಗಲೂಕ್ರೈಂ ವಿಭಾಗದ ಅನಧಿಕೃತ ಹೆಡ್ ಆಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡರು. ಆದರ ವೈಯುಕ್ತಿಕ ಕಾರಣಗಳಿಗಾಗಿ ಸಂಸ್ಥೆ ತೊರೆಯಬೇಕಾಯಿತು. ಕೆಲಸ ಬಿಟ್ಟ ಮೇಲೆ ಸುಮ್ಮನಾಗದೆ ವಿಸ್ಡಂ ಇಂಗ್ಲೀಷ್ ಶಾಲೆಯನ್ನು ತೆರದು ಮಕ್ಕಳಿಗೆ ಶೈಕ್ಷಣಿಕ ಸೇವೆ ಸಲ್ಲಿಸುವ ಕಾರ್ಯ ಶುರುಮಾಡಿದರು.

ಚಾನೆಲ್‌ ಬಿಟ್ಟು ಶಾಲೆ ನಡೆಸಿಕೊಂಡು ಇದ್ದ ರೂ ಪುಟ್ಟರಾಜ್‌ ಅವರ ಪ್ರತಿಭೆ ಅನೇಕ ಚಾನೆಲ್‌ ಗಳಿಂದ ಅವರಿಗೆ ಮತ್ತೆ ಅವಕಾಶವನ್ನು ನೀಡಿದ್ವು.ಆ ಪೈಕಿ ಪವರ್ ಚಾನಲ್ ಇವರಿಗೆ ಆಫರ್ ನೀಡಿತು.. ಪವರ್ ಚಾನಲ್ ನಲ್ಲಿ ಕ್ರೈಂ ವಿಭಾಗದ ಮುಖ್ಯಸ್ಥನಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿದ್ರು.‌ ಅದಾದ ಬಳಿಕ ಕನ್ನಡದ ನಂಬರ್ 1 ಡಿಜಿಟಲ್ One India kannadaದಲ್ಲೂ ಕೆಲಸ ಮಾಡುವ ಅವಕಾಶ ದೊರೆಯಿತು. ಆದರೆ ಪತ್ರಿಕೋದ್ಯಮದ ಆಚೆಗೆ ಏನೋ ಸಾಧಿಸಬೇಕೆಂದುಕೊಂಡಿದ್ದ ಪುಟ್ಟರಾಜ್‌ ಗೆ ಶಾಲೆಯೇ ಅಲ್ಟಿಮೇಟ್‌ ಎನಿಸಿತು ಎನ್ನಿಸುತ್ತೆ, ತನ್ನ ಜೀವನವನ್ನೇ ಮುಡಿಪಿಟ್ಟು ಸ್ಥಾಪಿಸಿದ್ದ ಸಂಸ್ಥೆಯನ್ನೇ ಬೆಳೆಸುವ ನಿರ್ದಾರಕ್ಕೆ ಬಂದರು.ಅಷ್ಟರಲ್ಲಾಗೇ ಕೆಲವು ಕುತಂತ್ರಿಗಳು ಸೇರಿ ಇವರನ್ನೇ ಮುಳುಗಿಸೋ ಹೊಂಚುಹಾಕಿ ಕುಳಿತಿದ್ದರು..ಅದಕ್ಕೆ ಅವಕಾಶ ಕೊಡದೆ ರಾಯರ ಪರಮಭಕ್ತನಾದ ಪುಟ್ಟರಾಜ್‌ ಅವರ ಮೇಲೆ ಭಾರ ಹಾಕಿ ಶೃದ್ಧೆಯಿಂದ ಶಾಲೆ ನಡೆಸಿಕೊಂಡು ಹೋಗಲು ನಿರ್ದರಿಸಿದರು. ಇವರ ಈ ಕಾರ್ಯಕ್ಕೆ ಸಾಥ್‌ ಕೊಟ್ಟದ್ದು ಇವರ ಧರ್ಮಪತ್ನಿ ಶ್ರೀಮತಿ ನಿರ್ಮಲರ. ಪುಟ್ಟರಾಜುರವರ ಹೆಗಲಿಗೆ ಹೆಗಲುಕೊಟ್ಟು ದುಡಿಯಲು ನಿಂತರು. ಇದಕ್ಕಾಗಿ ಕೇಸ್ ಕೂಡ ಮೇಲೆ ಬಿತ್ತು. ಆದರೆ ಛಲ ಮುಂದಿರುವಾಗ ಹೆದರುವ ಮಾತ್ಯಾಕೆ ಎಂದು ಮುನ್ನುಗ್ಗಿದರು. ಇಂದು ವಿಸ್ಡಂ ಇಂಗ್ಲೀಷ್ ಶಾಲೆ , ಕಸ್ತೂರಿ ಬಾನಗರ, ರುದ್ರಪ್ಪಗಾರ್ಡನ್ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಾಮಾಜಿಕ‌ಮೌಲ್ಯ, ಸ್ಪರ್ಧಾತ್ಮಕ ಜಗತ್ತಿಗೆ ಅಣಿಯಾಗುವಂತೆ ಮಕ್ಕಳಿಗೆ ಜ್ಣಾನವನ್ನು ಧಾರೆ ಎರೆಯುತ್ತಿದೆ ಎನ್ನುವುದು ಹೆಮ್ಮೆಯ ವಿಷಯ.

ರಾಜಧಾನಿ ಬೆಂಗಳೂರಿನಲ್ಲಿ ಶಿಕ್ಷಣ ಎನ್ನುವುದು ವ್ಯಾಪಾರೀಕರಣವಾಗಿರುವ ಆತಂಕದ ಸನ್ನಿವೇಶದಲ್ಲಿ ಕಡಿಮೆ ದರದಲ್ಲಿ ಶಿಕ್ಷಣ ದೊರೆಯಬೇಕು..ಅದು ಸಮಾಜದ ಕಟ್ಟಕಡೆಯಲ್ಲಿ ಬದುಕುತ್ತಿರುವ,ಆರ್ಥಿಕವಾಗಿ ಹಿಮ ಗೆಳೆಯ ಪುಟ್ಟರಾಜು 2026 ಎರಡು ಮಹತ್ವದ ಹೆಜ್ಜೆಗಳನ್ನು ಇಡಲು ನಿರ್ಧರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸೋ ಒಂದು ಹೆಜ್ಜೆಯಾದರೇ ಮತ್ತೊಂದು ವೈಕಕ್ತಿಕವಾಗಿ ಮತ್ತೊಂದು ವೃತ್ತಿಬದುಕಿನ ಟರ್ನಿಂಗ್ ಪಾಯಿಂಟ್ ನಲ್ಲಿ ಇದ್ದಾರೆ. ಶುಭವಾಗಲೀ ಗೆಳೆಯ..


Political News

ಬಿಎಂಟಿಸಿ ಸಿಬ್ಬಂದಿಗೆ “ಹಬ್ಬದ ರಜೆ” ಯಲ್ಲಿ ಘೋರ ಅನ್ಯಾಯ..!?

BDA BIG SCAM: 524 ಕೋಟಿ ಬಿಡಿಎ ಅಕ್ರಮ:ತನಿಖೆಗೆ ಕ್ಯಾಪ್ಟನ್ ಮಣಿವಣ್ಣನ್ ರಿಂದ ಸಮಿತಿ ರಚನೆ, ಅಧಿಕಾರಿಗಳಿಗೆ “ಢವ ಢವ”..

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

Scroll to Top