advertise here

Search

“ಧರ್ಮಪತ್ನಿ”ಯ ಕಂಪೆನಿ ವಿರುದ್ಧ “ಭ್ರಷ್ಟಾಚಾರ”ದ ಆರೋಪ..ಸುವರ್ಣನ್ಯೂಸ್‌ ಸಂಪಾದಕ ಅಜಿತ್‌ ಹನುಮಕ್ಕನವರ್‌  ಗೆ  “ಮುಜುಗರ”..!?


ಇದು ರಾಷ್ಟ್ರವಾದಿ ಪತ್ರಕರ್ತರೊಬ್ಬನ ಕುಟುಂಬಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯೊಂದಕ್ಕೆ ಸಂಬಂಧಿಸಿದ ಮುಂದುವರೆದ ಸ್ಟೋರಿ.ಜಗತ್ತಿನೆಲ್ಲಾ ಅಕ್ರಮ-ಅನ್ಯಾಯ-ಭ್ರಷ್ಟಾಚಾರಗಳ ಬಗ್ಗೆ ಗಟ್ಟಿದ್ವನಿಯಲ್ಲಿ ಪ್ರಶ್ನೆ ಮಾಡುವ ಆ ಪತ್ರಕರ್ತರೇ ಇವತ್ತು ಒಂದು ಕ್ಷಣ ಮುಜುಗರಕ್ಕೆ ಒಳಗಾಗುವಂತ ಬೆಳವಣಿಗೆ ಅವರ ಕುಟುಂಬದ ಸದಸ್ಯರಿಂದಲೇ ನಡೆದಿದೆ ಎನ್ನುವುದೇ ಸಧ್ಯಕ್ಕೆ ದೊಡ್ಡಮಟ್ಟದ ಸುದ್ದಿ.ಇದು ಅವರ ತೀರಾ ಖಾಸಗಿತನದ ವಿಚಾರವಾಗಿದ್ದರೆ ಕುಟುಂಬದ ವಿಷಯ ಎಂದು ಸುಮ್ಮನಿರಬಹು ದಿತ್ತೇನೋ..? ಆದರೆ ಇದು ನಮ್ಮ ತೆರಿಗೆ ಹಣದ ದುರುಪಯೋಗಕ್ಕೆ ನೇರಾನೇರ ಥಳಕು ಹಾಕ್ಕೊಂಡಿರುವುದರಿಂದ ಇದನ್ನು ಪ್ರಶ್ನೆ ಮಾಡಲೇಬೇಕಿದೆ.ಯಾರು ಏನೇ ಹೇಳಲಿ..ಏನೇ ಭಾವಿಸಲಿ..ಬದ್ಧತೆಯಿಂದ ಕೆಲಸಮಾಡುತ್ತಲೇ ಬಂದಿರುವ ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಈ ನಿಟ್ಟಿನಲ್ಲಿ ಪ್ರಶ್ನೆ ಮಾಡಲು ಹಿಂಜರಿಯುವುದಿಲ್ಲ.

ಮಾದ್ಯಮಗಳಲ್ಲಿ ಕೆಲಸ ಮಾಡುವ ಭಾರತದ ಪ್ರತಿಯೊಬ್ಬ ಪತ್ರಕರ್ತ ಕೂಡ ರಾಷ್ಟ್ರವಾದಿ ಪತ್ರಕರ್ತನೇ…. ಅದನ್ನು ಪ್ರತ್ಯೇಕಿಸಿ ನೋಡುವುದು ಮೂರ್ಖತನದ ಪರಮಾವಧಿ. ಏಕೆಂದರೆ ರಾಷ್ಟ್ರವಾದಿ ಎನ್ನುವ ಹಣೆಪಟ್ಟಿಯನ್ನು ಪ್ರತ್ಯೇಕವಾಗಿ ನೀಡುವಂತದ್ದು ಎಷ್ಟು ಅಪಾಯ ಕಾರಿನೋ,ಅದನ್ನು ಆಧರಿಸಿ ಪತ್ರಕರ್ತನನ್ನು ಗುರುತಿಸುವುದು ಕೂಡ ಕಳವಳಕಾರಿನೇ. ಅದನ್ನು ಬದಿಗೊತ್ತಿ ನೋಡಿದರೂ ಕೆಲವರ ಹೆಸರಿನೊಂದಿಗೆ ಅದು ಥಳಕು ಹಾಕಿಕೊಂಡಿ ರುತ್ತೆ.ಈ ಸಾಲಿನಲ್ಲಿ ಗುರುತಿಸಿಕೊಳ್ಳುವ ಪತ್ರಕರ್ತರ ಸಾಲಿನಲ್ಲಿ ಸುವರ್ಣ ನ್ಯೂಸ್‌ನ ಸಂಪಾದಕ ಅಜಿತ್‌ ಹನುಮಕ್ಕನವರ್ ಕೂಡ ಒಬ್ಬರು.ಕೆಲವೊಂದು ವಿಚಾರಗಳಲ್ಲಿ ಅಜಿತ್‌ ಅವರನ್ನು ಒಪ್ಪಿಕೊಳ್ಳಲಿಕ್ಕಾಗದಿದ್ದರೂ ಇನ್ನುಳಿದ ವಿಚಾರಗಳಲ್ಲಿ ಅವರನ್ನು ಆ ರೀತಿ ಸಂಬೋಧಿಸುವುದು ಸೂಕ್ತ- ಸಕಾಲಿಕ ಎನಿಸುತ್ತದೆ.

ಹೀಗೆ ರಾಷ್ಟ್ರವಾದಿ ಪತ್ರಕರ್ತ ಎಂದು ಗುರುತಿಸಿಕೊಂಡಿರುವ ಅಜಿತ್‌ ಹನುಮಕ್ಕನವರ್‌ ಬಗ್ಗೆ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಈ ಹಿಂದೆ ಸುದ್ದಿ ಮಾಡಿದೆ.ಅವೆಲ್ಲವೂ ಸುದ್ದಿಮನೆಗೆ ಸಂಬಂಧಪಟ್ಟ ವಿಚಾರಗಳಾಗಿದ್ದವು.ಆದರೆ ಈ ಬಾರಿ ಅವರು ಸುದ್ದಿಗೆ ಸಂಬಂಧಪಡದಿದ್ದರೂ ತಮ್ಮ ಕುಟುಂಬದ ಸದಸ್ಯರೊಬ್ಬರ ಮೇಲೆ ಕೇಳಿಬಂದಿರುವ ಆಪಾದನೆ ಕಾರಣಕ್ಕೆ ಸುದ್ದಿಯಾ ಗುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಕಾರಣಕ್ಕೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಈ ಬಗ್ಗೆ ಅನಿವಾರ್ಯ ವಾಗಿ ಬರೆಯಲೇಬೇಕಿದೆ.

ಕಳೆದ ಮೂರ್ನಾಲ್ಕು ದಿನಗಳಿಂದಲೂ ಅಜಿತ್‌ ಹನುಮಕ್ಕನವರ್‌ ಅವರ ಧರ್ಮಪತ್ನಿ ಸಹನಾಭಟ್‌ ಅವರಿಗೆ ಸಂಬಂಧಿಸಿದ ಸುದ್ದಿಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅದು ಹಣಕಾಸಿನ ವಿಚಾರದಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅಶಿಸ್ತಿಗೆ ಸಂಬಂಧಿಸಿದ ವಿಚಾರ.ಅದರಲ್ಲಿ ಅಜಿತ್ ಅವರ ಪತ್ನಿ ಸಹನಾ ಅವರ ಪಾತ್ರವಿದೆ ಎನ್ನುವುದನ್ನು ಸಾರಿ ಹೇಳುವ ದಾಖಲೆಗಳು ಕೂಡ ಹರಿದಾಡುತ್ತಿವೆ.ಕನ್ನಡ ಫ್ಲ್ಯಾಶ್ ನ್ಯೂಸ್‌ಗೆ ಈ ಮಾಹಿತಿ ತುಂಬಾ ದಿನಗಳ ಹಿಂದೆಯೇ ಲಭ್ಯವಾಗಿತ್ತಾದರೂ ಅಜಿತ್ ಅವರ ಕುಟುಂಬದ ಖಾಸಗಿತನಕ್ಕೆ ಗೌರವಕ್ಕೆ ಬೆಲೆ ಕೊಟ್ಟು ಸುಮ್ಮನಾಗಿದ್ದೆವು.ಆದರೆ ದಾಖಲೆಗಳ ಸಮೇತ ಮಾಹಿತಿ ಹರಿದಾಡುತ್ತಿರುವುದರಿಂದ ಅನಿವಾರ್ಯವಾಗಿ ವರದಿ ಬರೆಯಬೇಕಾಗಿದೆ.ವರದಿಯ ಉದ್ದೇಶ ಅಜಿತ್ ಹನುಮಕ್ಕನವರ್‌ ಅವರ ತೇಜೋವಧೆಯಾಗಲಿ,ಅವರ ಕುಟುಂಬದ‍ ಘನತೆ ಕುಂದಿಸುವ ಉದ್ದೇಶವಂತೂ ಖಂಡಿತಾ ಇಲ್ಲ..ಅಂಥಾ ದರ್ದು ಕೂಡ ಕನ್ನಡ ಫ್ಲ್ಯಾಶ್‌ ನ್ಯೂಸ್‌ಗಿಲ್ಲ..ಸುದ್ದಿ ಹೇಳುವುದಷ್ಟೇ ನಮ್ಮ ಕೆಲಸ.ಅದನ್ನು ಮಾತ್ರ ಮಾಡುತ್ತಿದ್ದೇವೆ.

ಅಜಿತ್‌ ಹನುಮಕ್ಕನವರ್‌ ಅವರ ಶಾಮೀಲಾತಿ ಈ ಪ್ರಕರಣದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಧರ್ಮಪತ್ನಿ ಸಹನಾ ಭಟ್‌  ನಿರ್ದೇಶಕರಾಗಿದ್ದಾರೆನ್ನಲಾದ ‘RIGHT MEDIA TECH’ ಎನ್ನುವ ಸಂಸ್ಥೆಯು ಕೋಟ್ಯಾಂತರ ಅಕ್ರಮ ನಡೆಸಿರುವುದರ ಬಗ್ಗೆ ಮಾದ್ಯಮಗಳಲ್ಲಿ ಈಗಾಗಲೇ ವರದಿಯಾಗಿದೆ. ಅಜಿತ್‌ ಅವರ ನೈತಿಕತೆ ಮತ್ತು ಸೈದ್ದಾಂತಿಕತೆ ಎರಡೂ ಈ ಹಗರಣದ ಕಾರಣಕ್ಕೆ ಪ್ರಶ್ನೆಗೀಡಾಗುತ್ತಿದೆ.‌ ಅಂದ್ಹಾಗೆ ಅಜಿತ್‌ ಅವರ ಪತ್ನಿ ಸಹನಾ ಭಟ್‌( ಅವರು ಕೂಡ ಪತ್ರಕರ್ತೆಯಾಗಿ ಟಿವಿ 9 ಸೇರಿದಂತೆ ಮಾದ್ಯಮ ರಂಗದಲ್ಲಿ ಕೆಲಸ ಮಾಡಿದ್ದಾರೆ). ಪಾಲುದಾರರಾಗಿರುವ ‘RIGHT MEDIA TECH’ ಎಂಬ ಸಂಸ್ಥೆಯ ಬಗ್ಗೆ ಐಟಿ ಸರಬರಾಜು ಹಗರಣ ಕೇಳಿಬಂದಿದೆ. ಸರ್ಕಾರಿ ಇಲಾಖೆಗಳಿಗೆ ಐಟಿ ಉಪಕರಣ ಸರಬರಾಜು ಮಾಡುವ ಗುತ್ತಿಗೆ ಪಡೆದ  ‘RIGHT MEDIA TECH’ ಕಳಪೆ ಹಾಗೂ ಕಳಜೆ ದರ್ಜೆಯ ಉಪಕರಣ ಪೂರೈಸಿ ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಿದೆ ಎಂಬ  ಆಪಾದನೆ ಕೇಳಿಬಂದಿವೆ.ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು.ಸಹನಾಭಟ್‌ ಅವರ ಶಾಮೀಲಾತಿ ಎಷ್ಟರ ಪ್ರಮಾಣದಲ್ಲಿದೆ ಎನ್ನುವುದು ಬಹಿರಂಗವಾಗಬೇಕಿದೆ.ಇದರಲ್ಲಿ ಅಜಿತ್‌ ಹನುಮಕ್ಕನವರ್‌ ಅವರ ಪರೋಕ್ಷ ಸಹಕಾರವಿದ್ದರೆ ಅವರನ್ನೂ ವಿಚಾರಣೆಗೊಳಪಡಿಸಬೇಕೆನ್ನುವ ವಾದ ಕೂಡ ಕೇಳಿಬರುತ್ತಿದೆ.

ಅಜಿತ್‌ ಹನುಮಕ್ಕನವರ್‌ ಅವರ ನೇರ ಶಾಮೀಲಾತಿ ಈ ಪ್ರಕರಣದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಧರ್ಮಪತ್ನಿ ಸಹನಾ ಭಟ್‌  ನಿರ್ದೇಶಕರಾಗಿದ್ದಾರೆನ್ನಲಾದ ‘RIGHT MEDIA TECH’ ಎನ್ನುವ ಸಂಸ್ಥೆಯು ಕೋಟ್ಯಾಂತರ ಅಕ್ರಮ ನಡೆಸಿರುವುದರ ಬಗ್ಗೆ ಮಾದ್ಯಮಗಳಲ್ಲಿ ಈಗಾಗಲೇ ವರದಿಯಾಗಿದೆ. ಅಜಿತ್‌ ಅವರ ನೈತಿಕತೆ ಮತ್ತು ಸೈದ್ದಾಂತಿಕತೆ ಎರಡೂ ಈ ಹಗರಣದ ಕಾರಣಕ್ಕೆ ಪ್ರಶ್ನೆಗೀಡಾಗುತ್ತಿದೆ.‌ಅಂದ್ಹಾಗೆ ಅಜಿತ್‌ ಅವರ ಪತ್ನಿ ಸಹನಾ ಭಟ್‌( ಅವರು ಕೂಡ ಪತ್ರಕರ್ತೆಯಾಗಿ ಟಿವಿ 9 ಸೇರಿದಂತೆ ಮಾದ್ಯಮ ರಂಗದಲ್ಲಿ ಕೆಲಸ ಮಾಡಿದ್ದಾರೆ). ಪಾಲುದಾರರಾಗಿರುವ ‘RIGHT MEDIA TECH’ ಎಂಬ ಸಂಸ್ಥೆಯ ಬಗ್ಗೆ ಐಟಿ ಸರಬರಾಜು ಹಗರಣ ಕೇಳಿಬಂದಿದೆ. ಸರ್ಕಾರಿ ಇಲಾಖೆಗಳಿಗೆ ಐಟಿ ಉಪಕರಣ ಸರಬರಾಜು ಮಾಡುವ ಗುತ್ತಿಗೆ ಪಡೆದ  ‘RIGHT MEDIA TECH’ ಕಳಪೆ ಹಾಗೂ ಕಳಜೆ ದರ್ಜೆಯ ಉಪಕರಣ ಪೂರೈಸಿ ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಿದೆ ಎಂಬ  ಆಪಾದನೆ ಕೇಳಿಬಂದಿವೆ.ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು.ಸಹನಾಭಟ್‌ ಅವರ ಶಾಮೀಲಾತಿ ಎಷ್ಟರ ಪ್ರಮಾಣದಲ್ಲಿದೆ ಎನ್ನುವುದು ಬಹಿರಂಗವಾಗಬೇಕಿದೆ.ಇದರಲ್ಲಿ ಅಜಿತ್‌ ಹನುಮಕ್ಕನವರ್‌ ಅವರ ಪರೋಕ್ಷ ಸಹಕಾರವಿದ್ದರೆ ಅವರನ್ನೂ ವಿಚಾರಣೆಗೊಳಪಡಿಸಬೇಕೆನ್ನುವ ವಾದ ಕೂಡ ಕೇಳಿಬರುತ್ತಿದೆ.

ALSO READ :  ಕಿಲಾರಿ ಬೊಮ್ಮಯ್ಯ, ರಾಜಶೇಖರ, ರತ್ನಮ್ಮ ಸೇರಿ ಐವರು ಸಾಧಕರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ

ವಾಸ್ತವದ ನೆಲೆಗಟ್ಟಿನಲ್ಲಿ ‘RIGHT MEDIA TECH’  ಕಂಪೆನಿ ಸರಬರಾಜು ಮಾಡಲಾದ ಪ್ರತಿಯೊಂದು ಉಪಕರಣದಲ್ಲೂ ಲೂಟಿಯ ಕರಿನೆರಳು ಕಾಣಿಸುತ್ತಿದೆಯಂತೆ.ಇದನ್ನು ಪುಷ್ಟೀಕರಿಸುವ ಒಂದಷ್ಟು ಝಲಕ್‌ ಇಲ್ಲಿದೆ ನೋಡಿ:

ಮಾರುಕಟ್ಟೆಯಲ್ಲಿ ಒಂದು ಬಯೋಮೆಟ್ರಿಕ್ ಯೂನಿಟ್ ಬೆಲೆ ಸುಮಾರು ₹8,000 ದಿಂದ ₹9,000 ಇದೆ ಎಂದುಕೊಂಡ್ರೆ ‘RIGHT MEDIA TECH’ ಸಂಸ್ಥೆ  ಪ್ರತಿ ಯೂನಿಟ್‌ಗೆ ₹29,500 ಕೋಟ್‌ ಮಾಡಿದೆ.ಹೀಗೆ ಅಸಂ‍ಖ್ಯಾತ  ಬಯೋಮೆಟ್ರಿಕ್‌ ಯೂನಿಟ್‌ ಗಳನ್ನು ಪೂರೈಸಿದೆಯಂತೆ.ಸುಳ್ಳು ಕೋಟೇಷನ್‌ ಕೊಟ್ಟು ಕಂಪೆನಿ ಲೂಟಿ ಮಾಡಿರಬಹುದಾದ ಮೊತ್ತ ಅದೆಷ್ಟೋ ಕೋಟಿಗಳಂತೆ.ವಿಚಿತ್ರ ಎಂದರೆ ‘RIGHT MEDIA TECH’  ₹1.05 ಕೋಟಿ ಮೌಲ್ಯದ ಆರ್ಡರ್ ಅನ್ನು ಫೈಲ್ ನಂಬರ್ 190 ಮತ್ತು 191ರ  ಮೂಲಕ  ಗಿಟ್ಟಿಸಿಕೊಂಡಿದೆಯಂತೆ.ಇನ್ನು ₹1.64 ಕೋಟಿ ಮೌಲ್ಯದ UPS ಮತ್ತು ಬ್ಯಾಟರಿ ಪೂರೈಕೆ(ವಹಿವಾಟು ಫೈಲ್ ನಂಬರ್ 184 ಮತ್ತು 185)ಯಲ್ಲೂ  ಅಕ್ರಮ ನಡೆದಿದೆ ಎನ್ನಲಾಗಿದೆ.ಮಾರುಕಟ್ಟೆಯಲ್ಲಿ ₹90,000 ದಿಂದ ₹1,00,000 ವರೆಗೆ ಲಭ್ಯವಿರುವ UPS ಮತ್ತು ಬ್ಯಾಟರಿ ಸ್ಟ್ಯಾಂಡ್‌ಗಳನ್ನು ₹2,86,000 ರಂತೆ ಬಿಲ್ ಮಾಡಿ ಸಲ್ಲಿಸಿದೆ. ಹಾಗೆಯೇ ಮಾರುಕಟ್ಟೆ ಬೆಲೆ ಕೇವಲ ₹8,000 ರಿಂದ ₹9,000 ಇರುವ  “ಬಯೋಮೆಟ್ರಿಕ್ ಘಟಕಗಳನ್ನು ಪ್ರತಿ ಯೂನಿಟ್‌ಗೆ ₹29,500 ರಂತೆ ಶುಲ್ಕ ವಿಧಿಸಿ ಪೂರೈಸಲಾಗಿದೆಯಂತೆ.

ಟೆಂಡರ್‌ ನಿಯಮಗಳಲ್ಲೂ ಸ್ಪಷ್ಟ ಉಲ್ಲಂಘನೆ: ಸರ್ಕಾರಿ ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಟೆಂಡರ್ ಕರೆಯುವುದು ಕಡ್ಡಾಯ. ಆದರೆ ಈ ಕಾನೂನುಗಳನ್ನು ಗಾಳಿಗೆ ತೂರಲು ‘ಆರ್ಡರ್ ಸ್ಪ್ಲಿಟಿಂಗ್’ (Order Splitting) ಎಂಬ ಕುತಂತ್ರವನ್ನು ಬಳಸಲಾಗಿದೆ. ಈ ಮೂಲಕ ಬೃಹತ್ ಮೊತ್ತದ ಆರ್ಡರ್‌ಗಳನ್ನು ಸಣ್ಣ ತುಣುಕುಗಳಾಗಿ ವಿಭಜಿಸಿ ಟೆಂಡರ್ ಇಲ್ಲದೆ ನೇರವಾಗಿ ಕೆಲಸ ಗಿಟ್ಟಿಸಲಾಗಿದೆ.ಹಾಗೆಯೇ  ಟೆಂಡರ್ ನಿಯಮಗಳಿಂದ ತಪ್ಪಿಸಿಕೊಳ್ಳಲು ₹3.68 ಕೋಟಿ ಮೌಲ್ಯದ ಕಂಪ್ಯೂಟರ್ ಸರಬರಾಜು ಆರ್ಡರ್ ನ್ನು  ( ಫೈಲ್ ನಂಬರ್ 100, 101, 102 ಮತ್ತು 128 ರ ಅಡಿಯಲ್ಲಿ) 4 ಪ್ರತ್ಯೇಕ ಭಾಗಗಳಾಗಿ ವಿಭಜಿಸಲಾಗಿದೆ. 85 ‘ಆಲ್-ಇನ್-ಒನ್’ ಕಂಪ್ಯೂಟರ್‌ಗಳಿಗಾಗಿ ತಲಾ ₹95,000 ರಂತೆ ಒಟ್ಟು  1.65 ಕೋಟಿ ಮೊತ್ತದ ಆರ್ಡರ್ ಅನ್ನು (ಫೈಲ್ ನಂಬರ್ 233 ಮತ್ತು 234 ರ ಅಡಿಯಲ್ಲಿ) ನೀಡಲಾಗಿದೆ. ₹9.14 ಕೋಟಿ ಮೌಲ್ಯದ ಇಂಟರ್ನೆಟ್ ವೈಫೈ ರೂಟರ್ ಮತ್ತು ಇತರ ನೆಟ್‌ವರ್ಕಿಂಗ್ ಉಪಕರಣಗಳನ್ನು ಬರೋಬ್ಬರಿ 11 ಆರ್ಡರ್‌ಗಳಾಗಿ (ಫೈಲ್ ನಂಬರ್ 352 ರಿಂದ 362) ವಿಂಗಡಿಸಲಾಗಿದೆ. ಇದರ ಜೊತೆಗೆ ₹1.51 ಕೋಟಿ ಮೌಲ್ಯದ LAN ಇನ್ಫ್ರಾಸ್ಟ್ರಕ್ಚರ್ ಕಾರ್ಯವನ್ನು ಫೈಲ್ ನಂಬರ್ 61 ಮತ್ತು 62 ರ ಮೂಲಕ ವಿಭಜಿಸಿ ಹಣ ಲೂಟಿ ಮಾಡಲಾಗಿದೆ ಎನ್ನುವ ಆಪಾದನೆ ಕೇಳಿಬಂದಿದೆ.ಇದೆಲ್ಲಕ್ಕಿಂತ ಹೆಚ್ಚಾಗಿ ಇಲಾಖೆಗೆ ಉಪಕರಣಗಳ ಸರಬರಾಜು ಪೂರ್ಣಗೊಂಡ ನಂತರ ಟೆಂಡರ್ ಕರೆಯಲಾಗಿದೆ. ಅಂದರೆ, ವ್ಯವಹಾರ ಮೊದಲೇ ಮುಗಿದು ಹಣ ಹಂಚಿಕೆಯಾದ ಮೇಲೆ ಕಾನೂನುಬದ್ಧತೆಯ ಮುಖವಾಡ ಧರಿಸಲು ಈ ನಾಟಕವಾಡಲಾಗಿದೆ. ದುರಂತ ಎಂದ್ರೆ ಈ ಯಾವ ಪರಿಕರಗಳ  ಸರಬರಾಜುಗಳಿಗೆ ಸಂಬಂಧಿಸಿದಂತೆ ಯಾವುದೇ ‘ಥರ್ಡ್-ಪಾರ್ಟಿ ಇನ್ಸ್ಪೆಕ್ಷನ್’ (Third-Party Inspection) ಮಾಡಲಾಗಿಲ್ಲವಂತೆ.ಹಗರಣ ನಡೆದಿರುವುದನ್ನು ಇದು ಬಲವಾಗಿ ಪುಷ್ಟೀಕರಿಸುತ್ತದೆಯಲ್ಲವೇ..?

ಬಿಲ್‌ ಪಾವತಿಸದ್ದಕ್ಕೆ ಕಿಯೋನಿಕ್ಸ್‌ ವಿರುದ್ಧ  ಸುವರ್ಣ ಟಿವಿಯಲ್ಲಿ ನೆಗೆಟಿವ್‌ ನ್ಯೂಸ್‌ ಮಾಡಲಾಯ್ತಾ,.?: . ‘RIGHT MEDIA TECH’  ಸಂಸ್ಥೆಯ ಕಾನೂನುಬಾಹಿರ ಕೆಲಸಗಳಿಗೆ ಸಂಬಂಧಿಸಿದಂತೆ  ಬಿಲ್‌ಗಳನ್ನು ಪಾವತಿಸಲು (Keonics) ವ್ಯವಸ್ಥಾಪಕ ನಿರ್ದೇಶಕರು (MD) ನಿರಾಕರಿಸಿದ್ದರಂತೆ.ಆಗ ಸುವರ್ಣ ವಾಹಿನಿಯನ್ನೇ ಅಸ್ತ್ರವಾಗಿ ಬಳಸಿಕೊಂಡು ಕಿಯೋನಿಕ್ಸ್‌ ವಿರುದ್ಧ ಅಜಿತ್‌ ಸುದ್ದಿ ಮಾಡಿಸಿದ್ದರೆನ್ನುವ ಆಪಾದನೆಗಳಿವೆ.ಈ ರೀತಿ ನಡೆದಿದ್ದಲ್ಲಿ ಇದು ಮಾದ್ಯಮಶಕ್ತಿಯ ದುರುಪಯೋಗವಲ್ಲದೇ ಇನ್ನೇನಾದೀತು.? ಇನ್ನು ಅಜಿತ್ ಹನುಮಕ್ಕನವರ್‌ ಬಳಸುತ್ತಿರುವ ‘ಇನ್ನೋವಾ’ ಕಾರು ‘RIGHT MEDIA TECH’ ಸಂಸ್ಥೆಯ ಹೆಸರಿನಲ್ಲಿ ನೋಂದಣಿಯಾಗಿದೆ ಎನ್ನುವ ಮಾತುಗಳಿವೆ.ಸೈದ್ಧಾಂತಿಕವಾಗಿ ತಮ್ಮನ್ನು ಬದ್ಧತೆಯ ಪತ್ರಕರ್ತ ಎಂದು ಕರೆಯಿಸಿಕೊಳ್ಳುವ ಅಜಿತ್‌ ಹನುಮಕ್ಕನವರ್‌ ತನ್ನ ಧರ್ಮಪತ್ನಿಯ ಕಂಪೆನಿಯ ಅಕ್ರಮ-ಭ್ರಷ್ಟಾಚಾರ ಮುಚ್ಚಿ ಹಾಕೊಕ್ಕೆ ರಾಜೀವ್‌ ಚಂದ್ರಶೇಖರ್‌ ಅವರಂಥ ಸಂಭಾವಿತ ವ್ಯಕ್ತಿ ನಂಬಿಕೆ ನೀಡಿ ವಹಿಸಿಕೊಟ್ಟ ಸುವರ್ಣ ನ್ಯೂಸ್‌  ಎನ್ನುವ ಚಾನೆಲ್‌ ನ ಸಂಪಾದಕನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದು ಎಷ್ಟು ಸರಿ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ವಿಷಯ.ಸರ್ಕಾರದ ಮಟ್ಟದಲ್ಲೇ ಕೆಲಸ ಮಾಡುವ ಓರ್ವ ವಿಸ್ಲ್‌ ಬ್ಲೋವರ್ (Whistleblower) ಈಗಾಗಲೇ ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಎಲ್ಲಾ ದಾಖಲೆಗಳನ್ನು ಹೊರಹಾಕಿದ್ದಾರೆ ಎನ್ನುವ ಮಾತುಗಳಿವೆ.

ಅಜಿತ್‌ ಹನುಮಕ್ಕನವರ್‌  ಅವರ ಪಾತ್ರ ಈ ಅಕ್ರಮದಲ್ಲಿ ಇದೆ ಎನ್ನುವುದು ನಮ್ಮ ವಾದ ಅಲ್ಲವೇ ಅಲ್ಲ.. ಆದರೆ ಒಂದು ವೇಳೆ ಇರುವುದು ಸಾಬೀತಾದ್ರೆ ಅದು ಹೇಗೆ..ಎಷ್ಟು ಪ್ರಮಾಣದಲ್ಲಿ ಎನ್ನುವುದು ಗೊತ್ತಾಗಬೇಕು.ಒಂದು ವೇಳೆ ಅದೇ ಸತ್ಯವಾಗಿದ್ದಲ್ಲಿ ಎಲ್ಲರಂತೆ  ಅವರು ಕಾನೂನಿನ ನಿಯಾಮವಳಿಗೆ ಬಾಧ್ಯಸ್ಥರಾಗಬೇಕಾಗುತ್ತದೆ ಎನ್ನುವುದಷ್ಟೇ ನಮ್ಮ ಅನಿಸಿಕೆ.


Political News

ಬಿಎಂಟಿಸಿ ಸಿಬ್ಬಂದಿಗೆ “ಹಬ್ಬದ ರಜೆ” ಯಲ್ಲಿ ಘೋರ ಅನ್ಯಾಯ..!?

BDA BIG SCAM: 524 ಕೋಟಿ ಬಿಡಿಎ ಅಕ್ರಮ:ತನಿಖೆಗೆ ಕ್ಯಾಪ್ಟನ್ ಮಣಿವಣ್ಣನ್ ರಿಂದ ಸಮಿತಿ ರಚನೆ, ಅಧಿಕಾರಿಗಳಿಗೆ “ಢವ ಢವ”..

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

Scroll to Top