advertise here

Search

“ದಿ-ಎಂಡ್” …ತಮನ್ನಾ -ವಿಜಯ್ ವರ್ಮಾ ಪ್ರೇಮ ಸಂಬಂಧ..! ಉಳಿದಿರೋದು ‘ಸ್ನೇಹ ಮಾತ್ರವಂತೆ..!


ಬಾಲಿವುಡ್ ನಲ್ಲಿ ಸಧ್ಯ ತಮ್ಮ ವಿಚಾರಗಳಿಂದ ಹೆಚ್ಚು ಸುದ್ದಿಯಲ್ಲಿದ್ದ ಜೋಡಿ ಎಂದರೆ ಅದು  ಮಿಲ್ಕಿ ಬ್ಯೂಟಿ  ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ.ಇಬ್ಬರ ನಡುವಿದ್ದ ಬೆಸುಗೆ ಗಮನಿಸಿದ್ದವರು ಮದುವೆಯಾಗಲಿದ್ದಾರೆ ಎಂದೇ ಹೇಳುತ್ತಿದ್ದರು.ಇನ್ನು ಕೆಲವರಂತೂ ಈ ಜೋಡಿ ನೋಡಿ ಹೊಟ್ಟೆ ಉರಿದುಕೊಂಡಿದ್ದು ಉಂಟು.ಆದರೆ ಇದೀಗ ಬಾಲಿವುಡ್ ಅಂಗಳದಿಂದ ಹೊರಬಿದ್ದಿರುವ ಸುದ್ದಿ ಎಲ್ಲರನ್ನು ಶಾಕ್ ಗೀಡು ಮಾಡಿದೆ. ತಮನ್ನಾ-ವಿಜಯ್ ತಮ್ಮ ಸಂಬಂಧವನ್ನು ಕೊನೆಗಾಣಿಸಿಕೊಂಡಿದ್ದಾರೆ.ಅವರಿಬ್ಬರು ಇನ್ಮುಂದೆ ಪ್ರೇಮಿಗಳಲ್ಲ..ಕೇವಲ ಸ್ನೇಹಿತರು ಎಂದು ಅವರೇ ಡಿಕ್ಲೇರ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್ ನ ಕೆಲವು ಸುದ್ದಿ ಮೂಲಗಳ ಪ್ರಕಾರ ಇವರಿಬ್ಬರು ತಾವಿನ್ನೂ ಪ್ರೇಮಿಗಳಾಗಿ  ಮುಂದುವರೆಯಲು ಸಾಧ್ಯವಿಲ್ಲ.ಪರಸ್ಪರ ಗೌರವಿಸುವ ಸ್ನೇಹಿತರಾಗಿಯಷ್ಟೇ ಇರುತ್ತೇವೆ.ಇಬ್ಬರು ಇದಕ್ಕೆ ಸಹಮತ ವ್ಯಕ್ತಪಡಿಸಿಕೊಂಡಿದ್ದೇವೆ. ಇಬ್ಬರೂ ತಮ್ಮ ವೃತ್ತಿಜೀವನದ ಮೇಲೆ ಹೆಚ್ಚು ಗಮನ  ಕೇಂದ್ರೀಕರಿಸಿದ್ದೇವೆ. ಬಿಡುವಿಲ್ಲದ ವೇಳಾಪಟ್ಟಿಗಳಿಂದ ಇಬ್ಬರಿಗೂ ಸಮಯ ಕೊಡಲಿಕ್ಕೆ ಸಾಧ್ಯವಾಗುತ್ತಿಲ್ಲ.ಇದು ಮದುವೆಯಾದ ಮೇಲೆಯೂ ಮುಂದುವರೆದರೆ ಬೇರೆಯದೆ ಆಯಾಮ ಪಡೆದುಕೊಳ್ಳುವ ಸಾಧ್ಯತೆಗಳಿರುವುದರಿಂದ ನಮ್ಮಿಬ್ಬರ ನಡುವಿನ ಸಂಬಂಧ ಕೊನೆಗಾಣಿಸಿಕೊಳ್ಳಲು ನಿರ್ದರಿಸಿರುವುದಾಗಿ ಹೇಳಿಕೊಂಡಿದ್ದಾರಂತೆ.

2023 ರಲ್ಲಿ ಲಸ್ಟ್ ಸ್ಟೋರೀಸ್ 2 ವೆಬ್ ಸೀರಿಯಸ್ ನಲ್ಲಿ ಅವರಿಬ್ಬರ ನಡುವಿನ ಕೆಮಿಸ್ಟ್ರಿ ಬಗ್ಗೆ ಸಿಕ್ಕಾಪಟ್ಟೆ ಗುಲ್ಲು ಶುರುವಾಗಿತ್ತು.ಚಿತ್ರದಲ್ಲಿನ ಅವರಿಬ್ಬರ ಆಪ್ತತೆ ಕುರಿತು ದೊಡ್ಡ ಮಟ್ಟದ ಚರ್ಚೆಗಳು ಶುರುವಾಗಿದ್ದವು.ಆ ಚಿತ್ರದಲ್ಲಿ ಶುರುವಾದ ಸಂಬಂಧ ಮದುವೆಯಾಗುವ ಮಟ್ಟಕ್ಕೆ ತಲುಪಿತ್ತು.ವಿಜಯ್ ವರ್ಮಾ ಹೆಚ್ಚಿನ ಕಾಳಜಿ ಮಾಡಲು ಶುರುಮಾಡಿದ್ದರು ಎಂದು ತಮನ್ನಾ ಅವರೇ ಹೇಳಿಕೊಂಡಿದ್ದರು.ತಮ್ಮ ಭವಿಷ್ಯದ ಬದುಕಿನ ಬಗ್ಗೆಯೂ ಮಾದ್ಯಮಗಳ ಮುಂದೆ ಸಿಕ್ಕಾಗಲೆಲ್ಲಾ ಮಾತನಾಡಿಕೊಂಡಿದ್ದರು. ಬಾಲಿವುಡ್ ನ ಬ್ಯುಟಿಫುಲ್ ಪೇರ್ ಎಂದು ವಿಶ್ಲೇಷಿಸಲಾಗುತ್ತಿತ್ತು.ಆದರೆ ಇದೀಗ ಅವರಿಬ್ಬರು ಪರಸ್ಪರ ಸಹಮತದ ಮೂಲಕ ಬೇರೆಯಾಗಲು ನಿರ್ದರಿಸಿದ್ದಾರೆ ಎನ್ನಲಾಗಿದೆ.

ALSO READ :  ದಸರಾ ನಂದಿಧ್ವಜದ ಮಹಾದೇವಣ್ಣರನ್ನು ಮರೆತೇ ಬಿಡ್ತಾ ಸರ್ಕಾರ? ಜೀವನ್ಮರಣ ಹೋರಾಟದಲ್ಲಿ ಮಹದೇವಣ್ಣ

ಇಬ್ಬರು ತಮ್ಮದೆ ಆದ ಚಿತ್ರಗಳಲ್ಲಿ, ಶೆಡ್ಯೂಲ್ ಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಎನ್ನುವುದು ಸತ್ಯ.ಇಬ್ಬರು ಕೂಡ ತಮ್ಮ ವೃತ್ತಿಜೀವನದಲ್ಲಿ ಉತ್ತುಂಗದಲ್ಲಿದ್ದಾರೆ.ನಟನೆಗಿಂತ ತಮನ್ನಾ ಹೆಚ್ಚು ನೃತ್ಯ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.ವಿಜಯ್ ವರ್ಮಾ ಕೂಡ ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.ಪುರುಸೊತ್ತಿಲ್ಲದಷ್ಟು ಕಾರ್ಯಗಳಲ್ಲಿ ಇಬ್ಬರು ಬ್ಯುಸಿ ಇರುವುದರಿಂದ ಸಹಜವಾಗೇ ಭಿನ್ನಾಭಿಪ್ರಾಯ ಮೂಡುವ ಆತಂಕ ಇರುವುದರಿಂದ ಒಪ್ಪಿಗೆ ಮೂಲಕವೇ ದೂರವಾಗುತ್ತಿದ್ದಾರೆ..ಅವರಿಬ್ಬರ ಅಭಿಪ್ರಾಯಗಳನ್ನು ಗೌರವಿಸಬೇಕು ಎಂದು ಬಾಲಿವುಡ್ ಮಾತನಾಡುತ್ತಿದೆ.


Political News

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Scroll to Top