*3 ಬಾರಿ ಸೋತರೂ ಮತ್ತೊಂದು ಗೆಲುವಿನ ಅವಕಾಶದ ನಿರೀಕ್ಷೆಯಲ್ಲಿ ಜವರಾಯಿಗೌಡ..
*ಜವರಾಯಿಗೌಡರನ್ನೇ ಅಭ್ಯರ್ಥಿಯನ್ನಾಗಿಸಿ ದಳಪತಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ತಾರಾ..?
*ಜವರಾಯಿಗೌಡರಿಗಿಂತ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿದ್ದೇವೆ ಎಂದು ಶಾಕ್ ಕೊಡ್ತಾರಾ..?
*ಬಿಜೆಪಿ ಜವರಾಯಿಗೌಡ ಅವರನ್ನೇ ತಮ್ಮ ಮೈತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುತ್ತಾ..?
*ದಳಪತಿಗಳು ಕೈ ಕೊಟ್ರ ಜವರಾಯಿಗೌಡ ನಿಲುವೇನು..? ಬೇರೆ ಅಭ್ಯರ್ಥಿಯನ್ನು ಒಪ್ಪಿಕೊಳ್ತಾರಾ..?
ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ಪಕ್ಷದ ಸಿದ್ದಾಂತಕ್ಕೆ ವಿರುದ್ಧವಾಗಿ ಮತ ಚಲಾಯಿಸುತ್ತಿದ್ದಂತೆ ಆಯಾ ಕ್ಷೇತ್ರ ಗಳಲ್ಲಿ ಬೈ ಎಲೆಕ್ಷನ್ ಆಗೋದು ಪಕ್ಕಾ ಎನ್ನುವ ಮೆಸೇಜ್ ರವಾನೆಯಾಗಿದೆ. ಆ ಪೈಕಿ ಯಶವಂತಪುರ ಕ್ಷೇತ್ರದಲ್ಲಿ ಮೂರು ಚುನಾವಣೆಗಳಲ್ಲಿ ಎಸ್ ಟಿ ಸೋಮಶೇಖರ್ ಗೆ ಠಕ್ಕರ್ ಕೊಟ್ಟರೂ ಸೋಲನ್ನು ಕಾಣಬೇಕಾಗಿ ಬಂದ ಜೆಡಿಎಸ್ ನ ಜವರಾಯಿಗೌಡ ಮತ್ತೊಮ್ಮೆ ಹುರುಪಿನಲ್ಲಿ ಅದೃಷ್ಟಪರೀಕ್ಷೆಗೆ ಇಳಿಯೊಕ್ಕೆ ನಿರ್ದರಿಸಿದ್ದಾರಂತೆ. ಆದರೆ ಜವರಾಯಿಗೌಡರಿಗೆ ಸಮಸ್ಯೆ ಇರೋದು ಅವರದೇ ಪಕ್ಷದ “ದಳಪತಿ”ಗಳಿಂದಂತೆ.
ಅನುಕಂಪದ ಅಲೆಯಲ್ಲಿ ಚುನಾವಣೆಗೆ ಹೋದ್ರೆ ಜವರಾಯಿ ಗೌಡ ಗೆಲ್ಲೋದು ಬಹುತೇಕ ಕನ್ಫರ್ಮ್ ಎನ್ನುವಂತಿ ದ್ದರೂ ದಳಪತಿಗಳಾದ ದೇವೇಗೌಡ ಕುಮಾರಸ್ವಾಮಿ ಮನಸು ಮಾಡದೆ ಅದೆಲ್ಲಾ ಸಾಧ್ಯವಿಲ್ಲ. ದಳಪತಿಗಳ ತಲೆಯಲ್ಲಿ ಬೇರೆಯದೇ ಲೆಕ್ಕಾಚಾರ ನಡೆಯುತ್ತಿದ್ರೆ ಜವರಾಯಿಗೌಡರ ಸ್ಪರ್ದೆಗೆ ತೊಡಕು ಎದುರಾಗೋ ದು ಕನ್ಫರ್ಮ್. ಏಕೆಂದ್ರೆ ಜವರಾಯಿಗೌಡರಿಗಿಂತ ಸಮರ್ಥ ಅಭ್ಯರ್ಥಿಯ ಹುಡುಕಾಟವೂ ದಳಪತಿಗಳ ತಲೆಯಲ್ಲಿ ನಡೆಯುತ್ತಿರಬಹುದು..ಅವರ ಪೈಕಿ ಆ ಸಮರ್ಥ ಅಭ್ಯರ್ಥಿ ತಮ್ಮ ಕುಟುಂಬದ ಕುಡಿ ನಿಖಿಲ್ ಅವರೇ ಏಕಾಗಿರಬಾರದು..ಏಕೆಂದರೆ ನಿಖಿಲ್ ಗೆ ರಾಜಕೀಯ ನೆಲೆ ಬೇಕಿರುವುದರಿಂದ ಜವರಾಯಿಗೌಡ ಬದಲು ಯುವರಾಜನನ್ನೇಕೆ ಕಣಕ್ಕಿಳಿಸಬಾರದು ಎನ್ನುವ ಆಲೋಚನೆ ಮಾಡಿದ್ರೂ ಆಶ್ವರ್ಯಪಡಬೇಕಿಲ್ವಂತೆ.
ರಾಜ್ಯಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಬಿಜೆಪಿಗೆ ಇಬ್ಬರು ಕೈಕೊಟ್ಟಿದ್ದಾರೆ.ಆತ್ಮಸಾಕ್ಷ್ಇಯ ಮತವನ್ನು ಕಾಂಗ್ರೆಸ್ ಗೆ ಹಾಕುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಹಾಗೂ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಗೆ ವೋಟ್ ಮಾಡುವ ಮೂಲಕ ಪಕ್ಷದ ವರಿಷ್ಟರ ಕೆಂಗಣ್ಣಿಗೆ ಗುರಿಯಾಗಿ ದ್ದಾರೆ.ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎನ್ನುವ ಮೂಲಕ ಇಬ್ಬರನ್ನೂ ಉಚ್ಛಾಟಿಸುವ ಮುನ್ಸೂಚನೆ ನೀಡಿದ್ದಾರೆ..ಸೋ ಅಲ್ಲಿಗೆ ರಾಜ್ಯ ಶೀಘ್ರವೇ ಎರಡು ಕ್ಷೇತ್ರಗಳಲ್ಲಿ ಮರುಚುನಾವಣೆ ಎದುರಿಸುವ ಸನ್ನಿವೇಶ ನಿರ್ಮಾಣವಾಗಿದೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಕೈ ಸೇರುವ ಬೇರೆ ಪಕ್ಷಗಳ ಶಾಸಕರ ಪಟ್ಟಿ ಯಲ್ಲಿ ಮುಂಚೂಣಿಯಲ್ಲಿ ಕೇಳಿಬಂದಿದ್ದೇ ಎಸ್.ಟಿ,ಸೋಮೇಶೇಖರ್ ಹಾಗೂ ಶಿವ ರಾಮ್ ಹೆಬ್ಬಾರ್ ಹೆಸರು.ಅದು ಯಾವಾಗ ಎನ್ನುವುದು ಮಾತ್ರ ಗೊತ್ತಿರಲಿಲ್ಲ. ಆದರೆ ಎಲ್ಲವೂ ನಿರ್ದಾರವಾಗಿದೆ. ದಿನಾಂಕ ಮಾತ್ರ ನಿಕ್ಕಿಯಾಗಬೇಕಿದೆ ಎನ್ನುವು ದಕ್ಕೆ ರಾಜ್ಯಸಭೆ ಚುನಾವಣೆ ಮತದಾನದಲ್ಲಿ ನಡೆದ ಹೈಡ್ರಾಮ ಉತ್ತರ ನೀಡಿದೆ. ಎರಡೂ ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ಪಕ್ಕಾ ಎನ್ನುವ ಸಂದೇಶ ರವಾನೆಯಾದ ಮೇಲೆ ಇಬ್ಬರೂ ಶೀಘ್ರದಲ್ಲಿ ಕೈ ಸೇರುವುದು ಗ್ಯಾರಂಟಿ ಎನ್ನುವುದು ಖಾತ್ರಿಯಾದಂತಲ್ಲವೇ ..?
ಈ ಎರಡು ಕ್ಷೇತ್ರಗಳ ಪೈಕಿ ಹೆಚ್ಚು ಕುತೂಹಲ ಕೆರಳಿಸಿರುವುದು ಯಶವಂತಪುರ ಕ್ಷೇತ್ರ.ರಾಜ್ಯದ ಅತೀ ದೊಡ್ಡ ವಿಧಾನಸಭಾ ಕ್ಷೇತ್ರಗಳಲ್ಲೊಂದು ಎನ್ನುವ ಹೆಗ್ಗಳಿಕೆ ಇದರದು.ಹಿಂದೆಲ್ಲಾ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು ಶೋಭಾ ಕರಂದ್ಲಾಜೆ ಗೆಲ್ಲುವ ಮೂಲಕ ಬಿಜೆಪಿ ಹಿಡಿತಕ್ಕೆ ತೆಗೆದುಕೊಂಡಿದ್ದು ಈಗ ಇತಿಹಾಸ.ಆದರೆ ಸೋಮಶೇಖರ್ ಕಾಂಗ್ರೆಸ್ ನಿಂದ ಸ್ಪರ್ದಿಸಿ ಮತ್ತೆ ಕೈ ಹಿಡಿತಕ್ಕೆ ತೆಗೆದುಕೊಂಡಿದ್ರು.ಆದರೆ ಬದಲಾದ ರಾಜಕೀಯ ವಿದ್ಯಾಮಾನಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸತತ ಗೆದ್ದು ಅದನ್ನು ಮತ್ತೆ ಬಿಜೆಪಿ ತೆಕ್ಕೆಗೆ ಸೇರಿಸಿದ್ದು ಈಗ ಇತಿಹಾಸ.
ಬೇರೆಲ್ಲಾ ಕ್ಷೇತ್ರಗಳ ಚುನಾವಣೆಯದ್ದೇ ಒಂದು ತೂಕವಾದ್ರೆ ಯಶವಂತಪುರ ಕ್ಷೇತ್ರದ ಚುನಾವಣೆಯದ್ದೇ ಒಂದು ತೂಕ ಎನ್ನುವ ಮಾತಿದೆ.ಇದು ಸತ್ಯ ಕೂಡ.ಏಕೆಂದ್ರೆ ಕ್ಷೇತ್ರದ ಹಿನ್ನಲೆ-ಭೌಗೋಳಿಕತೆ-ಮತದಾರರ ಮಾನಸಿಕತೆ ಹಾಗಿದೆ.ಜೆಡಿಎಸ್ ನ ಭದ್ರಕೋಟೆ ಎನ್ನುವ ಮಾತಿದ್ರೂ ಜೆಡಿಎಸ್ ನ ಅಭ್ಯರ್ಥಿ ಜವರಾಯಿಗೌಡ ಇಲ್ಲಿ ಗೆಲ್ಲೊಕ್ಕೆ ಆಗಲಿಲ್ಲ.ನೆಕ್ ಟು ನೆಕ್ ಫೈಟ್ ಕೊಟ್ರೂ ಗೆಲುವನ್ನು ದಕ್ಕಿಸಿಕೊಳ್ಳಲಾಗಲಿಲ್ಲ.ಕಾಂಗ್ರೆಸ್ ವಿಷಯದಲ್ಲೂ ಮತದಾರ ಸ್ಥಿರತೆ ಪ್ರದರ್ಶಿಸಲಾಗಲಿಲ್ಲ. ಸೋಮಶೇ ಖರ್ ಕಾಂಗ್ರೆಸ್ ಹಾಗೂ ಬಿಜೆಪಿ ಎರಡರಿಂದ ಸ್ಪರ್ದಿಸಿದ್ರೂ ಅವರನ್ನು ಗೆಲ್ಲಿಸುವ ಮೂಲಕ ತಮಗೆ ಪಕ್ಷಕ್ಕಿಂತ ವ್ಯಕ್ತಿ ನಿಷ್ಟೆನೇ ಮುಖ್ಯ ಎನ್ನುವುದನ್ನು ಪ್ರೂವ್ ಮಾಡಿದ್ರು.
ಆದ್ರೆ ಈ ಬಾರಿಯ ಚಿತ್ರಣ ಬೇರೆಯಾಗಿರಲಿದೆ ಎನ್ನುವುದು ಕನ್ಫರ್ಮ್. ಕಾಂಗ್ರೆಸ್ ನಿಂದ ಸೋಮಶೇಖರ್ ಹುರಿಯಾಳಾಗ ಲಿದ್ದರೂ ಅವರಿಗೆ ಜೆಡಿಎಸ್-ಬಿಜೆಪಿ ಮೈತ್ರಿಯ ಫೈಟ್ ಎದುರಿಸಬೇ ಕಿದೆ.ಕಳೆದ ಬಾರಿ ಜವರಾಯಿಗೌಡ ಜೆಡಿಎಸ್ ನಿಂದ ಸ್ಪರ್ದಿಸಿ ಕಡಿಮೆ ಮತಗಳ ಅಂತರ ದಿಂದ ಸೋತಿದ್ರು. ಬಿಜೆಪಿ ಈ ಬಾರಿ ಜೆಡಿಎಸ್ ಜತೆ ಮೈತ್ರಿ ಮಾಡಿ ಕೊಂಡಿರುವುದರಿಂದ ಜೆಡಿಎಸ್ ಮತಗಳ ಜತೆಗೆ ಬಿಜೆಪಿಯ ಸಾಲಿಡ್ ಮತಗಳೂ ತಮ್ಮ ಪಾಲಾಗ ಬಹುದೆನ್ನುವ ಲೆಕ್ಕಾಚಾರ ಸಧ್ಯ ಎರಡೂ ಪಕ್ಷಗಳಲ್ಲಿದೆ.
ಆದ್ರೆ ಲೆಕ್ಕಾಚಾರ ನಾವಂದುಕೊಂಡಂತೆಯೇ ಆಗಬೇಕೆಂದೇನಿಲ್ಲ. ಇದು ರಾಜಕೀಯ ಲೆಕ್ಕಾಚಾರ.ಯಾವ್ ಕ್ಷಣದಲ್ಲಿ ಏನ್ ಬೇಕಾದ್ರೂ ಆಗಬಹುದು.ಸಧ್ಯಕ್ಕೆ ಮೂರು ಬಾರಿ ಸೋತಿರುವ ಜವರಾಯಿಗೌಡ ಅವರನ್ನೇ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಬಹುದೆನ್ನು ವ ಮಾತುಗಳಿವೆ.ಆದರೆ ಅದಕ್ಕೆ ಬಿಜೆಪಿ ಒಪ್ಪದಿದ್ದರೆ ಅಲ್ಲಿ ಮತ್ತೆ ಬೇರೆಯದೇ ಲೆಕ್ಕಾಚಾರ ಶುರುವಾಗಬಹುದು.ಬಿಜೆಪಿ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆನ್ನುವ ಹಠಕ್ಕೆ ಬಿದ್ದು ದಳಪತಿಗಳನ್ನು ಮನವೊಲಿಸಲೂಬಹುದು. ಅಥವಾ ಇನ್ನೊಂದೆಡೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆನ್ನುವ ಹಠಕ್ಕೆ ಬಿದ್ದು ಬಿಜೆಪಿಯನ್ನು ಮನವೊಲಿಸಿದ್ರೂ ಅಭ್ಯರ್ಥಿಯೇ ಬೇರೆಯಾಗಬಹುದು.ಅಂದ್ರೆ ಜವರಾಯಿಗೌಡ ಬದಲು ಬೇರೆಯದೇ ಸ್ಟ್ರಾಂಗ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳ ನ್ನೂ ಅಲ್ಲಗೆಳೆಯುವಂತಿಲ್ಲ.
ಹಾಗಾದ್ರೆ ಜವರಾಯಿಗೌಡ ಬದಲಿಗೆ ಅದೇ ಪಕ್ಷ ದಿಂದ ಯಾರಾಗಬಹುದು ಅಭ್ಯರ್ಥಿ ಎನ್ನುವ ಪ್ರಶ್ನೆ ಸೃಷ್ಟಿಯಾದ್ರೆ ಸಧ್ಯಕ್ಕೆ ದಳಪತಿಗಳ ತಲೆಯ ಲ್ಲಿ ಸ್ಟ್ರಾಂಗ್ ಆಗಿ ಓಡಾಡುತ್ತಿರುವ ಹೆಸರು ನಿಖಿಲ್ ಕುಮಾರಸ್ವಾಮಿ….ಹೌದು ಹಾಗೊಂದು ಗಣಿತ ದಳಪತಿಗಳ ಮೆದುಳಿನಲ್ಲಿ ನಡೆಯಲಾರಂಭಿಸಿದೆ ಎನ್ನುವ ಮಾತುಗಳಿವೆ.ಜವರಾಯಿಗೌಡ ಸತತ ಮೂರು ಬಾರಿ ಗೆದ್ದಿದ್ದಾರೆ..ಅವರಿಗೆ ಅನುಕಂಪ ವಿದೆ.ಅದೇ ಈ ಬಾರಿ ಗೆಲುವಿಗೆ ಅಸ್ತ್ರವಾಗಬಹುದು ಎಂದು ಪಕ್ಷದ ಕಾರ್ಯಕರ್ತರು ಆಲೋಚನೆ ಮಾಡುತ್ತಿದ್ದರೆ ಮೂರು ಬಾರಿ ಸೋತವರನ್ನು ನಾಲ್ಕನೇ ಬಾರಿಯೂ ಸೋಲಿಸೋ ಸಾಧ್ಯತೆಗಳಿವೆ.ಅವರನ್ನು ಗೆಲ್ಲಿಸುತ್ತಾರೆ ಎನ್ನುವುದಕ್ಕೆ ಗ್ಯಾರಂಟಿಯೇನು..? ಯಶವಂತಪುರ ಕ್ಷೇತ್ರದ ಮರುಚುನಾವಣೆ ಜೆಡಿಎಸ್ ಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ.ಜವರಾಯಿಗೌಡ ಅವರನ್ನು ಕಣಕ್ಕಿಳಿಸಿ ಮತ್ತೊಮ್ಮೆ ಪ್ರಯೋಗ ಮಾಡೊಕ್ಕೆ ನಾವ್ ರೆಡಿಯಿಲ್ಲ..ಆ ರಿಸ್ಕ್ ತೆಗೆದುಕೊಳ್ಳೊಕ್ಕೆ ನಾವ್ ರೆಡಿಯಿಲ್ಲ..ಹಾಗಾಗಿ ನಿಖಿಲ್ ಅವರನ್ನು ಹೊಸಮುಖವನ್ನಾಗಿ ಪರಿಚಯಿಸಿ ಅವರನ್ನು ಗೆಲ್ಲಿಸಿಕೊಳ್ಳೊಕ್ಕೆ ದಳಪತಿಗಳು ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನುವ ಮಾತು ಪಕ್ಷದ ವಲಯದಲ್ಲೇ ಕೇಳಿಬಂದಿದೆ.
ಮಂಡ್ಯ ಎಂಪಿ ಎಲೆಕ್ಷನ್…ರಾಮನಗರ ಎಲೆಕ್ಷನ್ ನಲ್ಲಿ ದಳಪತಿಗಳ ಶ್ರೀರಕ್ಷೆ-ಅಭಯವಿದ್ದಾಗ್ಯೂ ನಿಖಿಲ್ ಸೋಲಲಿಲ್ಲವೇ..? ಅವರು ಯಾವುದಾದ್ರೂ ಎಲೆಕ್ಷನ್ ನಲ್ಲಿ ಗೆದ್ದಿದ್ದಾರಾ..? ಎರಡು ಬಾರಿ ಬೇರೆ ಬೇರೆ ಕ್ಷೇತ್ರಗಳಲ್ಲಿ ನಿಂತು ಸೋತವರು ಇಲ್ಲಿ ಮತ್ತೊಮ್ಮೆ ಸೋಲೊಲ್ಲ ಎನ್ನುವುದಕ್ಕೆ ಖಾತ್ರಿಯೇನು..? ಎಂದು ಕೇಳಿದ್ರೆ ಅದಕ್ಕೆ ಉತ್ತರವಿಲ್ಲ.ಜವರಾಯಿಗೌಡ ಕ್ಷೇತ್ರದ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ಅವರಿಗೆ ಸೋಲಿನ ಅನುಕಂಪೆಯಿದೆ.ಜೆಡಿಎಸ್ ಜತೆಗೆ ಬಿಜೆಪಿ ಸೇರಿಕೊಂಡ್ರೆ ಗೆಲುವು ಅನಾಯಾಸವಾಗಬಹುದಲ್ವಾ ಎಂದು ಕೇಳಿದ್ರೆ ದಳಪತಿಗಳ ಮನಸಿನಲ್ಲಿ ನಿಖಿಲ್ ಅವರಿಗೆ ರಾಜಕೀಯ ಅಸ್ಥಿತ್ವ ಕಲ್ಪಿಸುವು ದೇ ಮುಖ್ಯ ಎನ್ನುವ ಆಲೋಚನೆಯಿದೆಯಂತೆ..ಅಲ್ರಿ..ಇಷ್ಟ್ ವರ್ಷ ಪಕ್ಷಕ್ಕಾಗಿ ದುಡಿದು ಚುನಾವಣೆಯಲ್ಲಿ ಎಲ್ಲವನ್ನು ಕಳೆದುಕೊಂಡ ಜವರಾಯಿಗೌಡರ ಕಥೆಯೇನು ಎಂದು ಕೇಳಿದ್ರೆ ನಿಖಿಲ್ ಗೆದ್ ಬಂದ್ರೆ ಜವರಾಯಿಗೌಡರಿಗೆ ಯಾವುದಾದ್ರೂ ಎಮ್ಮೆಲ್ಸಿ ಕೋಟಾದಲ್ಲಿ ಅಧಿಕಾರ ಕೊಟ್ಟರಾಯ್ತು ಎಂದು ಮಾತನಾಡಿಕೊಳ್ತಿದಾರಂತೆ.
ಸುಮಾರು 3,57,911 ಜನಸಂಖ್ಯೆ ಇರುವ ಯಶವಂತಪುರ ಕ್ಷೇತ್ರದಲ್ಲಿ ನಡೆಯಲಿರುವ ಮರುಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಗೆ ಸವಾಲು ಹಾಗೂ ಪ್ರತಿಷ್ಟೆಯ ವಿಷಯ.ಕಾಂಗ್ರೆಸ್ ನಿಂದ ಸೋಮಶೇಖರ್ ಸ್ಪರ್ದೆ ಬಹುತೇಕ ಫೈನಲ್ ಆಗಿದ್ರೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಚಾರದಲ್ಲಿ ಫೈನಲ್ ಆಗಿಲ್ಲ.ಜವರಾಯಿಗೌಡರಿಗೆ ಟಿಕೆಟ್ ಕೊಡಬೇಕೆ ನ್ನುವ ಬೇಡಿಕೆ ಇದ್ರೂ ದಳಪತಿಗಳಿನ್ನೂ ಡಿಸೈಡ್ ಮಾಡಿಲ್ಲ.
ನಿಖಿಲ್ ಹಾಗೂ ಜವರಾಯಿಗೌಡರಲ್ಲಿ ಯಾರನ್ನು ಫೈನಲ್ ಮಾಡಬೇಕೆನ್ನುವ ಪಜೀತಿಗೆ ಸಿಕ್ಕಾಕೊಂಡಿದ್ದಾರೆ.ಅದೆಲ್ಲಕ್ಕಿಂತ ಮುಖ್ಯವಾಗಿ ಜೆಡಿಎಸ್ ಗೆ ಆತಂಕವಿರುವುದು ತಮ್ಮ ಪಕ್ಷದ ಅಭ್ಯರ್ಥಿಗೇನೇ ಟಿಕೆಟ್ ಫೈನಲ್ ಮಾಡ್ತಾರಾ ಎನ್ನುವುದು..ಆದ್ರೆ ಒಂದಂತೂ ಸತ್ಯ,ಮೂರು ಬಾರಿ ಸೋತು ಸುಣ್ಣವಾಗಿದ್ರೂ ಮತ್ತೊಂದು ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿರುವ ಜವರಾಯಿಗೌಡರನ್ನು ಪಕ್ಷ ನಿರ್ಲಕ್ಷ್ಯಿಸಿದ್ರೆ ಅದು ಬೇರೆಯದೇ ಪರಿಣಾಮ ಬೀರುವ ಸಾಧ್ಯತೆಗಳಿರುವುದಂತೂ ಸತ್ಯ..