ನಿರ್ದೇಶಕ ಸ್ಥಾನಕ್ಕೆ ಅಧೀಕೃತವಾಗಿ ರಾಜೀನಾಮೆ ಘೋಷಿಸಿದ “ಅರಮನೆ ಶಂಕರ್‌”

ಪೊಲಿಟಿಕಲ್‌ 360 ಚಾನೆಲ್‌ ನ ಸುದ್ದಿ ವಿಭಾಗದ ಮುಖ್ಯಸ್ಥ ಪುಟ್ಟಪ್ಪ
ಪೊಲಿಟಿಕಲ್‌ 360 ಚಾನೆಲ್‌ ನ ಸುದ್ದಿ ವಿಭಾಗದ ಮುಖ್ಯಸ್ಥ ಪುಟ್ಟಪ್ಪ


ಬೆಂಗಳೂರು: ಇದು ನಿಜಕ್ಕೂ ಖಂಡನೀಯ…ಹಾಗೆಯೇ ಅಮಾನವೀಯ ಕೂಡ….ಯಾರೇ ಪತ್ರಕರ್ತರು ಕೆಲಸವಿಲ್ಲದೆ ಅತಂತ್ರರಾಗುವುದನ್ನು ನೋಡಿದಾಗ ಬೇಸರವಾಗುತ್ತದೆ.ಈ “ಫೀಲ್ಡ್‌” ಇಷ್ಟೊಂದು ಅಭದ್ರನಾ..? ಅಸುರಕ್ಷಿತನಾ..? ಅತಂತ್ರನಾ.? ಎಂಬ ನೋವುಂಟಾಗುತ್ತದೆ.ಪತ್ರಕರ್ತ ತನ್ನ ಸ್ವಯಂಕೃತಾಪರಾಧದಿಂದ ಅತಂತ್ರವಾಗೋದಕ್ಕೂ, ಅವರನ್ನು ನಂಬಿಸಿ ನಡು ದಾರೀಲಿ ಒಂಟಿಯಾಗಿಸೋದಕ್ಕೂ ಭಾರೀ ವ್ಯತ್ಯಾಸವಿದೆ.. .”ಪೊಲಿಟಿಕಲ್‌-360” ಎನ್ನುವ ಚಾನೆಲ್‌ನ ಕಥೆಯೂ ಸೇಮ್‌ ಟು ಸೇಮ್..ಕಣ್ಬಿಡುವ ಮುನ್ನವೇ ಅದರ ಕತ್ತುಹಿಸುಕುವ ಕೆಲಸ ಆ ಚಾನೆಲ್‌ ಮುನ್ನೆಡೆಸುತ್ತೇನೆ ಎಂದು ಹೇಳಿಕೊಂಡು, 250 ಕ್ಕೂ ಹೆಚ್ಚು ಸಿಬ್ಬಂದಿ ಯನ್ನು ಒಮ್ಮಿಂದೊಮ್ಮೆಲೆ ಅತಂತ್ರಗೊಳಿಸಿದವರಿಂದ ನಡೆದಿದೆ.ಅತ್ತ ಬಾಕಿ ಬರಬೇಕಿರುವ ಸಂಬಳವೂ ಸಿಗದೆ,ಇತ್ತ  ಬೇರೆ ಉದ್ಯೋಗವೂ ಸಿಗದ ಅಮಾಯಕ-ನಿಷ್ಪಾಪಿ ಸಿಬ್ಬಂದಿಯ ಸ್ಥಿತಿ ತಬರನ ಕಥೆಯಂತಾಗಿದೆ.

.”ಪೊಲಿಟಿಕಲ್‌-360” ಕನ್ನಡ ನ್ಯೂಸ್‌ ಚಾನೆಲ್‌ ಆರಂಭಕ್ಕೆ ಮುನ್ನವೇ ಆರ್ಥಿಕ ಹಿಂಜರಿತಕ್ಕೆ ಸಿಲುಕಿ( ಸರಿಯಾದ ರೀತಿಯ ಆರ್ಥಿಕ ನಿರ್ವಹಣೆ ಚಾನೆಲ್‌ ನಡೆಸ್ತೀನಂಥ ಜವಾಬ್ದಾರಿ ಹೊತ್ತುಕೊಂಡವರಿಂದ ಆಗಿದಿದ್ದರೆ ಸಮಸ್ಯೆಯೇ ಬರುತ್ತಿರಲಿಲ್ಲವೇನೋ..?) ಬಾಗಿಲು ಹಾಕ್ಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಲೋಕಲ್‌ ನಿಂದ ಗ್ಲೋಬಲ್‌ ವರೆಗೆ ಎನ್ನುವ ಟ್ಯಾಗ್‌ ಲೈನ್‌ ನೊಂದಿಗೆ ಬರೊಕ್ಕೆ ಸಿದ್ದತೆ ಮಾಡಿಕೊಂಡಿದ್ದ ಚಾನೆಲ್ ಸಿಬ್ಬಂದಿಗೆ ಕೊಟ್ಟಿದ್ದು ಹೆಚ್ಚೆಂದರೆ 2-3 ತಿಂಗಳ ಸಂಬಳ ಅಷ್ಟೆ ಅಂತೆ.

ಯಾವ್ಯಾವುದೋ ಮೀಡಿಯಾದಲ್ಲಿ ಒಳ್ಳೆಯ ಸಂಬಳ ಪಡೆಯುತ್ತಿದ್ದ ಸಿಬ್ಬಂದಿಯೆಲ್ಲಾ ಇಲ್ಲಿಗೆ ಬಂದು “ಸೆಲ್ಪ್‌ ಸೂಸೈಡ್‌” ಮಾಡಿಕೊಂಡರೆನ್ನುವುದು ವಾಸ್ತವ.ಸಂಬಳವನ್ನೆ ನೆಚ್ಚಿಕೊಂಡು ಬದುಕುತ್ತಿದ್ಗ ಬಹುತೇಕ ಸಿಬ್ಬಂದಿ “ನಾಳೆಕೊಡ್ತೀನಿ..ವಾರಬಿಟ್ಟು ಕೊಡ್ತೇನೆ..” ಎನ್ನುವ ಆಡಳಿತ ಮಂಡಳಿಯ ಸವಕಲು ಉತ್ತರ ಕೇಳಿಸಿಕೊಂಡು ಸುಸ್ತಾಗಿ ಹೋಗಿದ್ದಾರೆ.ಚಾನೆಲ್‌ ನ ಸುದ್ದಿ ವಿಭಾಗದ ಮುಖ್ಯಸ್ಥ ಪುಟ್ಟಪ್ಪ ಗೆ ಮಾತ್ರ ಚಾನೆಲ್‌ ನಡುಸ್ತೀನೆನ್ನುವ ಆತ್ಮವಿಶ್ವಾಸ ಕಡಿಮೆಯೇ ಆಗಿಲ್ಲ.ಎಲ್ಲಾ ಬಿಟ್ಟುಹೋಗಲಿ ಪರ್ವಾಗಿಲ್ಲ,ನಂಬಿಗಸ್ಥರನ್ನು ಕರೆದುಕೊಂಡು ತಂಡ ಕಟ್ಟುತ್ತೇನೆ.ನನ್ನ ಕನಸಿನ ಚಾನೆಲ್‌ ನ್ನು ನಡೆಸಿಯೇ ತೀರುತ್ತೇನೆನ್ನುವ ನಂಬಿಕೆಯಲ್ಲೇ ದಿನ ಕಳೆಯುತ್ತಿದ್ದಾರೆ. ಪುಟ್ಟಪ್ಪನನ್ನು ನಂಬಿಕೊಂಡು ಕೇರ್‌ ಆಫ್‌ ಪುಟ್ಪಾತ್‌ ಆದೆವೆಂದು ಹತಾಷಗೊಂಡ ಸಿಬ್ಬಂದಿ ಹಿಡಿಶಾಪ ಹಾಕ್ಕೊಂಡು ಅಡ್ಡಾಡುತ್ತಿದ್ದಾರೆ.ಪಾಪ ಅವರ ಸ್ಥಿತಿ ಕಂಡಾಗ ಪುಟ್ಟಪ್ಪನ ಮೇಲೆ ಕೋಪದೊಂದಿಗೆ ಬೇಸರವೂ ಆಗುತ್ತದೆ.

ಉದ್ಯಮಿ ಹಾಗೂ 360 ಚಾನೆಲ್‌ ಗೆ ಬಂಡವಾಳ ಹೂಡಿದ್ದ ಅರಮನೆ ಶಂಕರ್‌
ಉದ್ಯಮಿ ಹಾಗೂ 360 ಚಾನೆಲ್‌ ಗೆ ಬಂಡವಾಳ ಹೂಡಿದ್ದ ಅರಮನೆ ಶಂಕರ್‌

ಮಾಜಿ ಸಿಎಂ ಕುಮಾರಸ್ವಾಮಿ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರ ಒಡೆತನದ ಕಸ್ತೂರಿ ನ್ಯೂಸ್‌ ಆರ್ಥಿಕ ಹೊಡೆತಕ್ಕೆ ತತ್ತರಿಸಿ ಅದನ್ನವರು ಮುಚ್ಚಬೇಕೆನ್ನುವ ನಿರ್ದಾರ ಮಾಡಿಕೊಂಡ ಸನ್ನಿವೇಶದಿಂದ ಹಿಡಿದು ಅದನ್ನು ಯಾರ್ಯಾರು ಪರಭಾರೆ ಮಾಡಿಕೊಳ್ಳೋ ರೇಸ್‌ ನಲ್ಲಿದ್ದಾರೆ ಎನ್ನುವವರೆಗೂ ಇದೇ ಪುಟ್ಟಪ್ಪ,ಅರಮನೆ ಶಂಕರ್‌ ಕಸ್ತೂರಿಯನ್ನು .”ಪೊಲಿಟಿಕಲ್‌-360” ಚಾನೆಲ್‌ ನ್ನಾಗಿ ಪರಿವರ್ತಿಸಿ ನಡೆಸ್ತಾರೆನ್ನುವ ಸಂದರ್ಭದಿಂದ ಹಿಡಿದು ಚಾನೆಲ್‌ ಲಾಂಚ್‌ ಆಗುವುದೇ ಡೌಟ್‌ ಎನ್ನುವ ಸನ್ನಿವೇಶದವರೆಗಿನ ಎಲ್ಲಾ ಬೆಳವಣಿಗೆಗಳನ್ನು ಸಾಕ್ಷ್ಯ ಸಮೇತ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಸರಣಿ ವರದಿಯನ್ನು ಪ್ರಕಟಿಸಿತ್ತು.ಚಾನೆಲ್‌ ಮುಚ್ಚಬಾರದೆನ್ನುವ ಆಶಯದ ಜತೆಗೆ ಅಲ್ಲಿರುವ ಸಿಬ್ಬಂದಿ ಯಾರೂ ಬೀದಿಪಾಲಾಗಬಾರದು..ಅವರಿಗೆ ಬರಬೇಕಿರುವ ಬಾಕಿಯನ್ನೆಲ್ಲಾ ನೀಡುವ ಕೆಲಸ ಆಡಳಿತ ಮಂಡಳಿಯಿಂದ ಆಗಬೇಕೆನ್ನುವ ಕಳಕಳಿಯನ್ನು ವ್ಯಕ್ತಪಡಿಸಿತ್ತು.

ಆದ್ರೆ ದುರಂತ ನೋಡಿ, .”ಪೊಲಿಟಿಕಲ್‌-360” ಎನ್ನುವ ಹಡಗು ಒಂದರ ಹಿಂದೆ ಒಂದರಂತೆ ಎದುರಾಗಲಾರಂಭಿಸಿದ ಸಮಸ್ಯೆಗಳೆನ್ನುವ ಅಲೆಗಳಿಗೆ ಸಿಲುಕಿ ಜರ್ಝರಿತವಾಯಿತು. ಇವತ್ತಿಗೆ ಅದು ಸಂಪೂರ್ಣ ಮುಳುಗುತ್ತಿರುವ ಹಡಗಿನಂತಾಗಿದೆ.ಅದನ್ನು ರಕ್ಷಿಸೊಕ್ಕೆ ಹತ್ತಾರು ಕೋಟಿ ಆರ್ಥಿಕ ಪುನಶ್ಚೇತನದ ಅವಶ್ಯಕತೆ ಇದೆ.ಆದ್ರೆ ಆ ಆಕ್ಸಿಜನ್‌ ಕೊಡೋರ್ಯಾರು ಎನ್ನುವುದೇ ಪ್ರಶ್ನೆ.ಆದ್ರೆ ಇದೆಲ್ಲಕ್ಕೂ ಮುಖ್ಯ ಕಾರಣವಾಗಿ ಅಪರಾಧಿ ಸ್ಥಾನದಲ್ಲಿ ನಿಂತಿರುವುದೇ ಸಂಪಾದಕೀಯ ವಿಭಾಗದ ಮುಖ್ಯಸ್ಥ ಪುಟ್ಟಪ್ಪ.

ಚಾನೆಲ್‌ ಕಟ್ಟುವ ಉಮೇದಿನಲ್ಲಿ ಯಾವುದೇ ಪೂರ್ವಸಿದ್ದತೆಗಳಿಲ್ಲದೆ,ಕಷ್ಟ-ಸಂಕಷ್ಟ-ಎಡರು-ತೊಡರುಗಳ ಮಾಹಿತಿಯಿಲ್ಲ ದೆ,ಎದುರಾಗುವ ಸಾಲು ಸಾಲು ಸವಾಲುಗಳನ್ನು ಹೇಗೆ ಎದುರಿಸಬೇಕೆನ್ನುವ ಸ್ಪಷ್ಟ ಕಲ್ಪನೆಯಿಲ್ಲದೆ ದಿಢೀರ್‌ ಕಣಕ್ಕೆ ಧುಮುಕಿದ್ದೇ ಪುಟ್ಟಪ್ಪನ ದೊಡ್ಡ ಸಮಸ್ಯೆ ಎನಿಸ್ತದೆ.ಇದನ್ನೆಲ್ಲಾ ಗಮನಿಸುವವರಿಗೆ ಪುಟ್ಟಪ್ಪಂಗೆ ಚಾನೆಲ್‌ ಕಟ್ಟಿ ಬೆಳೆಸಿ ಯಶಸ್ವಿಯಾಗಬೇಕೆನ್ನುವ ಇರಾದೆಗಿಂತ, ಕನ್ನಡ ನ್ಯೂಸ್‌ ಚಾನೆಲ್‌ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಚಾನೆಲ್‌ ವೊಂದರ ಮುಖ್ಯಸ್ಥನಾದೆ ಎನ್ನುವ ದಾಖಲೆಗೆ ಭಾಜನನಾಗಬೇ ಕೆನ್ನುವ ಆಸೆಯಷ್ಟೇ ಇತ್ತಾ ಎನ್ನುವ ಅನುಮಾನ ಕಾಡದೆ ಇರೊಲ್ಲ.ಇಡೀ ಕನ್ನಡ ನ್ಯೂಸ್‌ ಚಾನೆಲ್‌ ವಲಯ ಮಾತನಾಡಿಕೊಳ್ಳುತ್ತಿರುವುದೇ ಹೀಗೆ.ಇದು ಮರ್ಮಾಘಾತ ಅಷ್ಟೇ ಅಲ್ಲ ಭಾರೀ ಅಪಮಾನಕರ ಕೂಡ.

ಪುಟ್ಟಪ್ಪನ ನಂಬಿ ಚಾನೆಲ್‌ ಬಂದವರೆಲ್ಲಾ ಇವತ್ತು ಅಕ್ಷರಶಃ ಅತಂತ್ರವಾಗಿದ್ದಾರೆ.ಒಳ್ಳೆಯ ಸಂಬಳ ಪಡೆಯುತ್ತಿದ್ದವರನ್ನು ಬಲವಂತವಾಗಿ ನಂಬಿಸಿ ಕರೆತಂದು ವಿಶ್ವಾಸಘಾತುಕತನ ಮಾಡಿದ್ದಾರೆಂದೇ ವಿಶ್ಲೇಷಿಸ ಲಾಗುತ್ತಿದೆ.ಶರತ್‌ ಶರ್ಮ ಕಲಗಾರು, ಸಂತೋಷ್‌ ಪಟೇಲ್‌ ಅವರಂಥ ಸೀನಿಯರ್ಸ್‌ ಗಳು ಸೆಲ್ಪ್‌ ಸೂಸೈಡ್‌ ಮಾಡಿಕೊಂಡ್ವಾ ಎಂದು ತಮ್ಮನ್ನೇ ಶಪಿಸಿಕೊಳ್ತಿದಾರೆ.ಇದು ದೊಡ್ಡಮೊತ್ತದ ಸಂಬಳದವರ ಕಥೆಯಾದ್ರೆ, ತಿಂಗಳ ಸಂಬಳದಲ್ಲೇ ಬದುಕನ್ನು ಕಟ್ಟಿಕೊಂಡ ಶೇಕಡಾ 90 ರಷ್ಟು ಸಿಬ್ಬಂದಿಯ ಕಥೆ ಹೇಳತೀರದಷ್ಟು ಅಸಹನೀಯವಾಗಿದೆ. ಬೆಂಗಳೂರಿನಂಥ ದುಬಾರಿ ಸಿಟಿಯಲ್ಲಿ 2-3 ತಿಂಗಳು ಸಂಬಳವಿಲ್ಲದೆ ಜೀವನ ನಡೆಸೊಕ್ಕೆ ಆಗೊಲ್ಲ ಎನ್ನುವ ಸತ್ಯ ಗೊತ್ತಿದ್ದರೂ ಅವರಿಗೆ ಸಂಬಳ ಬಾಕಿ ಉಳಿಸಿಕೊಂಡು ಡೇಟ್‌ ಮೇಲೆ ಡೇಟ್‌ ಕೊಟ್ಟಿಕೊಂಡು ಕಾಲಹರಣ ಮಾಡುತ್ತಿರುವುದು ನಿಜಕ್ಕೂ ಖಂಡನೀಯ ಅಷ್ಟೇ ಅಲ್ಲ ಅಮಾನವೀಯ ಕೂಡ.

ಪೊಲಿಟಿಕಲ್‌ 360 ಚಾನೆಲ್‌ ನಿರ್ದೇಶಕ ಸ್ಥಾನಕ್ಕೆ ಅರಮನೆ ಶಂಕರ್‌ ಅವರು ರಾಜೀನಾಮೆ
ಪೊಲಿಟಿಕಲ್‌ 360 ಚಾನೆಲ್‌ ನಿರ್ದೇಶಕ ಸ್ಥಾನಕ್ಕೆ ಅರಮನೆ ಶಂಕರ್‌  ರಾಜೀನಾಮೆ ಸಲ್ಲಿಸಿರುವ ಪ್ರತಿ

ಪುಟ್ಟಪ್ಪ ಯಾವ್‌ ಆಲೋಚನೆಯನ್ನಿಟ್ಟುಕೊಂಡು ಚಾನೆಲ್‌ ನಡೆಸುವ ತೀರ್ಮಾನಕ್ಕೆ ಬಂದರೋ ಗೊತ್ತಿಲ್ಲ.ಕನ್ನಡಕ್ಕೊಂದೇ ಸ್ವಂತದ ಚಾನೆಲ್‌ ಎಂದೇ ಬಿಂಬಿಸಿಕೊಂಡಿದ್ದ ಕಸ್ತೂರಿಯ “ನ್ಯೂಸ್‌ 24” ಚಾನೆಲ್‌ ಹೆಸರನ್ನು ಬದಲಿಸೊಕ್ಕೆ ಹೊರಟಿದ್ದೇ ಅವರ ಮೊದಲ ತಪ್ಪು.”ಪೊಲಿಟಿಕಲ್‌-360” ಎನ್ನುವ ಹೆಸರಿನಲ್ಲಿ ಚಾನೆಲ್‌ ನಡೆಸೋದು ಸ್ವತಃ ಕುಮಾರಸ್ವಾಮಿ ಅವರಿಗೇ ಇಷ್ಟವಿರಲಿಲ್ಲವಂತೆ.ಆದ್ರೆ ಇದನ್ನು ಚಾನೆಲ್‌ ಗೆ ಬಂಡವಾಳ ಹೂಡಿದ ಉದ್ಯಮಿ ಅರಮನೆ ಶಂಕರ್‌ ಯಾಕೆ ಅರ್ಥ ಮಾಡಿಕೊಳ್ಳಲಿಲ್ಲವೋ ಗೊತ್ತಿಲ್ಲ.ಪುಟ್ಟಪ್ಪ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿದ್ದೇ ಅವರು ಮಾಡಿದ ಮೊದಲು ತಪ್ಪು ಎನ್ನುವುದು ಮೊದಲಿಂದಲೂ ಚಾನೆಲ್‌ ನ ಏಳುಬೀಳು ಗಮನಿಸ್ತಾ ಬಂದವರ ಆರೋಪ.

ಓರ್ವ ಉದ್ಯಮಿಯಾಗಿ ತಮ್ಮ ವ್ಯವಹಾರದಲ್ಲಿ ಒಂದು ಪೈಸೆ ಆಚೀಚೆ ವ್ಯತ್ಯಾಸವಾಗದಂತೆ ಎಚ್ಚರ ವಹಿಸ್ತಾ ಬಂದಿದ್ದ ಶಂಕರ್‌ ಚಾನೆಲ್‌ ವಿಚಾರದಲ್ಲಿ ಕೋಟ್ಯಾಂತರ ಬಂಡವಾಳ ಪೋಲಾಗುವುದನ್ನು ನೋಡಿಕೊಂಡು ಹೇಗೆ ಸುಮ್ಮನಾದ್ರೋ ಗೊತ್ತಿಲ್ಲ.ತಾವು ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೂ ಚಾನೆಲ್‌ ಕಟ್ಟೊಕ್ಕೆ ಮಾಡಲಾಗುತ್ತಿದ್ದ ಖರ್ಚು ವೆಚ್ಚದ ಲೆಕ್ಕದ ಮೇಲೆ ನಿಗಾಇಟ್ಟು ಪ್ರತಿಯೊಂದಕ್ಕೂ ಪ್ರಶ್ನೆ ಮಾಡಿದಿದ್ದರೆ ಇವತ್ತು ಪೊಲಿಟಿಕಲ್‌ ೩೬೦ ಗೆ ಬೀಗಮುದ್ರೆ ಜಡಿದುಕೊಳ್ಳುವಂಥ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವಂತೆ.

ಚಾನೆಲ್‌ ಆರಂಭವಾಗದೆ,ಅದರಿಂದ ನಯಾಪೈಸೆ ಲಾಭವನ್ನೂ ನೋಡದ ಒಬ್ಬ ಮಾಲೀಕ,ಅನಾಮತ್ತು ಕೆಲ ತಿಂಗಳಲ್ಲಿ ೨-೩ ಕೋಟಿ ಆರ್ಥಿಕ ಹೊರೆ ಸಹಿಸಿಕೊಳ್ಳುವುದೆಂದರೆ ಅದು ಸಾಧ್ಯನಾ..? ಅರಮನೆ ಶಂಕರ್‌ ಎನ್ನುವ ಪಕ್ಕಾ ಬ್ಯುಸಿನೆಸ್‌ ಮ್ಯಾನ್‌ ಗೆ ಇದೊಂದು ಸಾಧ್ಯವಾಗದ ಮಾತಾಗಿತ್ತು.ಹಾಗಾಗಿನೇ ಎರಡ್ಮೂರು ಕೋಟಿ ಲಾಸ್‌ ಆದ್ರೂ ಪರ್ವಾಗಿಲ್ಲ.ಚಾನೆಲ್‌ ಸಹವಾಸ ಬೇಡವೆಂಬ ನಿರ್ದಾರಕ್ಕೆ ಬಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಮ್ಮ ಇಂಗಿತ ವ್ಯಕ್ತಪಡಿಸಿದ್ರು. ಕುಮಾರಸ್ವಾಮಿಗೂ ಇದು ಸರಿ ಎನಿಸಿ ತೋಚಿದಂಗೆ ಮಾಡು ಎಂದ್ರಂತೆ.ಆಮೇಲೇನೆ ಅರಮನೆ ಶಂಕರ್‌ ತಮ್ಮ ನಿರ್ದೇಶಕ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.ಅದರ ಪ್ರತಿ ಕೂಡ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ ಲಭ್ಯವಾಗಿದೆ. ಇದರ ನಡುವೆಯೂ ಅರಮನೆ ಶಂಕರ್‌ ಅವರದು ಎಂಥಾ ವಿಶಾಲಹೃದಯ ಎಂದ್ರೆ ಮೂರ್ನಾಲ್ಕು ತಿಂಗಳ ಸಂಬಳನ್ನು ತಮ್ಮ ದುಡಿಮೆ ಹಣದಿಂದಲೇ ಸಿಬ್ಬಂದಿಗೆ ನೀಡಿದ್ದಾರಂತೆ.

ಅರಮನೆ ಶಂಕರ್‌ ಅಧೀಕೃತ ನಿರ್ಗಮನದಿಂದ .”ಪೊಲಿಟಿಕಲ್‌-360” ಚಾನೆಲ್‌ ಗೆ ದಿಕ್ಕಿಲ್ಲದಂತಾಗಿದೆ. ಪುಟ್ಟಪ್ಪ ಮಾತ್ರ ಫೆಬ್ರವರಿ ಮೊದಲ ವಾರ ಎಲ್ಲರ ಬಾಕಿ ತೀರಿಸುವುದಾಗಿ ಹೇಳುವ ಮೂಲಕ ಚಾನೆಲ್‌ ನಡೆಸುವ ಆಸೆಯನ್ನು ಜೀವಂತವಾಗಿಟ್ಟಿದ್ದಾರೆ.ಆದ್ರೆ ಇದು ಕಷ್ಟವಷ್ಟೇ ಅಲ್ಲ ಅಸಾಧ್ಯ ಕೂಡ ಎನ್ನುವುದು ಕೂಡ ಪುಟ್ಟಪ್ಪಂಗೆ ಗೊತ್ತು.ಏಕೆಂದರೆ .”ಪೊಲಿಟಿಕಲ್‌-360” ಚಾನೆಲ್‌ ಆರಂಭಿಸಬೇಕಾದ್ರೆ ಕಡಿಮೆ ಎಂದ್ರೆ ೮-೧೦ ಕೋಟಿ ಬೇಕಂತೆ.ಇಷ್ಟೊಂದು ಹಣವನ್ನು ಪುಟ್ಟಪ್ಪ ಎಲ್ಲಿಂದ ತಂದು ಹಾಕುತ್ತಾರೆನ್ನುವುದು ಪ್ರಶ್ನೆ.ಸಧ್ಯಕ್ಕಂತೂ ಯಾರೊಬ್ಬರೂ ಇಷ್ಟೊಂದು ಬಂಡವಾಳ ಹೂಡೊಕ್ಕೆ ಮುಂದೆ ಬರುತ್ತಿಲ್ಲವಂತೆ.ಇಂಥಾ ಪರಿಸ್ತಿತಿಯಲ್ಲಿ ಪೊಲಿಟಿಕಲ್‌ ೩೬೦ ಚಾನೆಲ್‌ ಗೆ ನಿಜಕ್ಕೂ ಭವಿಷ್ಯ ಇದೆ ಎಂದು ಭಾವಿಸೋದ್ರಲ್ಲಿ ಅರ್ಥವಿದೆಯಾ..? ಪುಟ್ಟಪ್ಪನೇ ಹೇಳಬೇಕು.

ಸಧ್ಯಕ್ಕೆ ಪುಟ್ಟಪ್ಪ ಎಲ್ಲಾ 250 ಸಿಬ್ಬಂದಿಯ ದೃಷ್ಟಿಯಲ್ಲಿ ವಿಲನ್..ಇದಕ್ಕೆ ಕಾರಣ ಅವರು ಹೇಳುತ್ತಾ ಬಂದಿರುವ ಸುಳ್ಳುಗಳಂತೆ.ತಮ್ಮ ಬಳಿ ಅಳಲು ಹೇಳಿಕೊಂಡು ಬರುವ ಎಲ್ಲರಿಗೂ ಹಸಿ ಸುಳ್ಳು ಹೇಳಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಾ ಬಂದಿದ್ದಾರಂತೆ.ಪುಟ್ಟಪ್ಪ ಸಿಬ್ಬಂದಿಯ ದೃಷ್ಟಿಯಲ್ಲಿ ಹೇಗೆ ಆಗಿದ್ದಾರೆಂದ್ರೆ ಆತ ಬಾಯಿ ಬಿಟ್ಟರೆ ಬರೀ ಸುಳ್ಳು.ಮಹಾನ್‌ ಸುಳ್ಳುಗಾರ..ಸುಳ್ಳಿನ ಮಾತಿನಲ್ಲೇ ಮನೆ ಕಟ್ಟುತ್ತಾನೆ.ಯಾರು ಎಷ್ಟೇ ಸಿಟ್ಟಿನಲ್ಲಿ ಬಂದ್ರೂ ಅವರನ್ನು ತಮ್ಮ ಸುಳ್ಳಿನಿಂದಲೇ ಕರಗಿಸಿಬಿಡ್ತಾರೆ ಎನ್ನುವುದು ಸರ್ವೇಸಾಮಾನ್ಯವಾಗಿದೆ. ಚಾನೆಲ್‌ ವಿಚಾರದಲ್ಲಿ ಪುಟ್ಟಪ್ಪ ಸಾಂದರ್ಭಿಕವಾಗಿ ಸುಳ್ಳು ಹೇಳಿದ್ರೆ ಓ.ಕೆ ಆದ್ರೆ ಸುಳ್ಳು ಹೇಳುವುದನ್ನೇ ಜಾಯಮಾನವಾಗಿಸಿಕೊಂಡು ತಮ್ಮ ಜೀವನದೊಂದಿಗೆ ಚೆಲ್ಲಾಟ ಆಡುತ್ತಾರೆಂದ್ರೆ ಅದನ್ನು ಸಹಿಸಿಕೊಳ್ಳಲಿಕ್ಕೆ ಆಗುತ್ತಾ ಎಂದು ಪ್ರಶ್ನೆ ಮಾಡುವ ಸಿಬ್ಬಂದಿ, ನಮ್ಮ ಬದುಕುಗಳನ್ನು ಬೀದಿಗೆ ತಂದ ಪುಟ್ಟಪ್ಪ ಹಾಳಾಗಿ ಹೋಗಲಿ,ನಮ್ಮಂತೆ ಕಣ್ಣೀರು ಹಾಕುವಂತಾಗಲಿ ಎಂದು ಹಿಡಿಶಾಪ ಹಾಕ್ತಿದ್ದಾರಂತೆ.ಬೆಳೆಯೊಕ್ಕೆ ಸಾಕಷ್ಟು ಅವಕಾಶವಿರುವ ಪುಟ್ಟಪ್ಪನಂತ ಯುವಕನ ಸ್ತಿತಿ ಹೀಗಾಗಬಾರದಿತ್ತು ಎಂದೆನಿಸ್ತದೆ.

Spread the love

Leave a Reply

Your email address will not be published. Required fields are marked *