ಕನ್ನಡದ ಹಿರಿಯ  ನಟಿ, ಪೊಷಕ ಕಲಾವಿದೆ ಡಾ.ಲೀಲಾವತಿ  ಇನ್ನಿಲ್ಲ.ನೆಲಮಂಗಲದ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.85 ವರ್ಷ ವಯಸ್ಸಿನ ಲೀಲಾವತಿ ಅವರು ಕೆಲ ತಿಂಗಳಿಂದ ತೀವ್ತ ಅನಾರೋಗ್ಯಕ್ಕೆ ಈಡಾಗಿದ್ದರು.ಅವರ  ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನಲೆಯಲ್ಲಿ ಅವರನ್ನು ನೆಲಮಂಗಲ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

1938 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಿಸಿದ್ದ ಲೀಲಾವತಿ ಅವರಿಗೆ 85 ವರ್ಷ ವಯಸ್ಸಾಗಿತ್ತು.ಕನ್ನಡ ತಮಿಳು ತೆಲುಗು ಮಲಯಾಳಂ ಸೇರಿದಂತೆ 600ಕ್ಕೂ ಹೆಚ್ಚುಚಲನಚಿತ್ರಗಳಲ್ಲಿ ಅವರು ನಟಿಸಿದ್ದರು.

ನೆಲಮಂಗಲದ ಸೋಲದೇವನಹಳ್ಳಿ ಮನೆಯಲ್ಲಿ ವ್ಯವಸ್ಥಿತವಾದ ಎಲ್ಲಾ ವ್ಯವಸ್ಥೆಗಳಾಗಿದ್ದ ಹೊರತಾಗ್ಯು ಲೀಲಾವತಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು.ವೈದ್ಯರು ಸಹ ರಿಸ್ಕ್‌ ತೆಗೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ತತ್‌ ಕ್ಷಣಕ್ಕೆ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ರು.ಅವರ ಸಲಹೆ ಮೇರೆಗೆ ಅವರನ್ನು ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಗ ಹಾಗೂ ನಟ ವಿನೋದ್‌ ರಾಜ್‌ ಅವರು ಅಮ್ಮನನ್ನು ಅಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಚಿಕಿತ್ಸೆ ನೀಡುವಲ್ಲಿ ನಿರತವಾಗಿದ್ದರು.ತೀವ್ರ ನಿಗಾಘಟಕದಲ್ಲಿದ್ದ ಅಮ್ಮನ ಆರೋಗ್ಯದ ಬಗ್ಗೆ ವೈದ್ಯರು ಇನ್ನು ಯಾವುದೇ ಸ್ಪಷ್ಟ ಹೇಳಿಕೆ ನೀಡಿರಲಿಲ್ಲ.ಆದ್ರೆ ಕೆಲ ನಿಮಿಷಗಳ ಹಿಂದೆ ವೈದ್ಯರು ಲೀಲಾವತಿ ಮೃತಪಟ್ಟಿರುವುದನ್ನು ದೃಢೀಕರಿಸಿದ್ರು.

85 ವರ್ಷದ ಲೀಲಾವತಿ ಅವರ ಆರೋಗ್ಯ ಅನೇಕ ದಿನಗಳಿಂದ ಏರುಪೇರಾಗಿತ್ತು.ಅವರ ಆರೈಕೆಯಲ್ಲಿ ಮಗ ವಿನೋದ್‌ ರಾಜ್ ತೊಡಗಿದ್ರು.ಅಮ್ಮನ ಆರೈಕೆಗೆ  ಮನೆಯಲ್ಲೇ ಮಿನಿ ಆಸ್ಪತ್ರೆ ತರಹದ ವ್ಯವಸ್ಥೆಯನ್ನು ಮಾಡಿದ್ರು.ಇಷ್ಟು ದಿನ ಮನೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ಲೀಲಾವತಿ ಅವರ ಆರೋಗ್ಯ ಸಂಜೆ ಮೇಲೆ ಏರುಪೇರಾಗಿತ್ತು. ತತ್‌ ಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು.ಇಡೀ ಕರ್ನಾಟಕ ಲೀಲಾವತಿ ಅವರ ನಿಧನಕ್ಕೆ ಮರುಗಿದೆ.ಕನ್ನಡ ಫ್ಲ್ಯಾಶ್‌ ನ್ಯೂಸ್‌ ತಂಡ ಕೂಡ ಅಮ್ಮನವರ ಅಗಲಿಕೆಗೆ ಕಂಬನಿ ಮಿಡಿದಿದೆ.

1938 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಿಸಿದ್ದ ಲೀಲಾವತಿ ಅವರಿಗೆ 85 ವರ್ಷ ವಯಸ್ಸಾಗಿತ್ತು.ಕನ್ನಡ ತಮಿಳು ತೆಲುಗು ಮಲಯಾಳಂ ಸೇರಿದಂತೆ 600ಕ್ಕೂ ಹೆಚ್ಚುಚಲನಚಿತ್ರಗಳಲ್ಲಿ ಅವರು ನಟಿಸಿದ್ದರು.

Spread the love

Leave a Reply

Your email address will not be published. Required fields are marked *