advertise here

Search

BBMP ಅಕ್ರಮ ಖಾತಾ ಹಗರಣಕ್ಕೆ ಮೆಗಾ ಟ್ವಿಸ್ಟ್…!! ಸಸ್ಪೆಂಡ್..ಇಬ್ಬರ ಅರೆಸ್ಟ್..?!


ಬೆಂಗಳೂರು: ಅಕ್ರಮ ಖಾತಾ ಪ್ರಕರಣದಲ್ಲಿ ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ್ನ್ನುವ ಸ್ಪೋಟಕ ಸುದ್ದಿ ಕೇಳಿಬರುತ್ತಿದೆ.

ಕೆಂಗೇರಿ ಉಪವಿಭಾಗದ ಕಂದಾಯ ವಿಭಾಗದ ಇಬ್ಬರು ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾ ರೆನ್ನುವ ಪ್ರಾಥಮಿಕ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ  ಲಭ್ಯವಾಗಿದೆ.

ಅಕ್ರಮ ಖಾತೆ ಹಗರಣ ನಡೆಯುತ್ತಿರುವು ದನ್ನು ಬಯಲಿಗೆಳೆದು ಅದರ ದಾಖಲೆಗಳು ಸಾರ್ವಜನಿಕವಾಗುವಂತೆ ಮಾಡಿದರೆನ್ನುವ ಆಪಾದನೆ ಹಿನ್ನಲೆಯ ಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದ ಸಿಬ್ಬಂದಿ ಮಧು ಎನ್ನುವವರು ನೀಡಿದ ದೂರಿನ ಮೇರೆಗೆ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗುತ್ತಿದೆ.

ಸಹಾಯಕ ಕಂದಾಯಾಧಿಕಾರಿ ದೇವರಾಜ್
ಸಹಾಯಕ ಕಂದಾಯಾಧಿಕಾರಿ ದೇವರಾಜ್
ಕಂದಾಯಾಧಿಕಾರಿ ಬಸವರಾಜ ಮಾಗಿ
ಕಂದಾಯಾಧಿಕಾರಿ ಬಸವರಾಜ ಮಾಗಿ

“ಬಿ” ಖಾತೆಗಳಿಗೆ ಅಕ್ರಮವಾಗಿ ಎ ಖಾತೆ ನೀಡಿ ಅಪಾರ ಮೊತ್ತದ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎನ್ನುವ ಸ್ಪೋಟಕ ಮಾಹಿತಿಯನ್ನು ಮಧು ಹೊರಗೆಡಹಿದ್ದರು.ಆ ಮಾಹಿತಿ ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಅವರಿಗೆ ಲಭ್ಯವಾದ ಹಿನ್ನಲೆಯಲ್ಲಿ ಅದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರ್ ಆರ್ ನಗರ ಜಂಟಿ ಆಯುಕ್ತ ಅಜಯ್ ಹಾಗೂ ವಿಶೇಷ ಆಯುಕ್ತರವರೆಗೂ ದೂರು ಸಲ್ಲಿಸಿದ್ದರು. ಅಕ್ರಮ ನಡೆದಿರುವ ಬಗ್ಗೆ ತಲೆಕೆಡಿಸಿಕೊಂಡು ಇದರಲ್ಲಿ ಶಾಮೀಲಾಗಿರುವ ತಮ್ಮ ಇಲಾಖೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕಿದ್ದುದು ಜಂಟಿ ಆಯುಕ್ತರಾಗಿ ಅಜಯ್ ಮಾಡಬೇಕಿದ್ದ ಕೆಲಸ.

ಉಪ ಆಯುಕ್ತ ಅಬ್ದುಲ್ ರಬ್
ಉಪ ಆಯುಕ್ತ ಅಬ್ದುಲ್ ರಬ್
ಆರ್ ಆರ್ ನಗರ ಜಂಟಿ ಆಯುಕ್ತ ಅಜಯ್
RR ನಗರ ಜಂಟಿ ಆಯುಕ್ತ ಅಜಯ್

ಅದರ ಬದಲಿಗೆ ದೂರು ಕೊಟ್ಟ ಮಂಜುನಾಥ್ ಹಾಗೂ ದಾಖಲೆ ಸೋರಿಕೆ ಮಾಡಿದರೆನ್ನುವ ಆಪಾದನೆಯಲ್ಲಿ ದೂರು ಕೊಟ್ಟ ದಿನವೇ ಅವರಿಬ್ಬರನ್ನು ಹೆದರಿಸುವ ರೀತಿಯಲ್ಲಿ ನಿಮ್ ಮೇಲೆ ಕೇಸ್ ಮಾಡಿಸ್ತೇನೆ ಎಂದು ಹೇಳಿದ್ದರೆನ್ನುವುದನ್ನು ಮಂಜುನಾಥ್ ಅವರು ಮಾದ್ಯಮಗಳ ಮುಂದೆ ಹೇಳಿದ್ದರು.ಅಲ್ಲದೇ ಮಧು ಕೂಡ ಇದೇ ವಿಷಯವನ್ನು ಮೇಲಾಧಿಕಾರಿಗಳಿಗೆ ವಿಚಾರಣೆ ವೇಳೆ ತಿಳಿಸಿದ್ದರಂತೆ.

ಅಕ್ರಮ ಸಂಬಂದ ದಾಖಲೆ ಕಲೆ ಹಾಕಿ ಆ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಬಿಬಿಎಂಪಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ಮಂಜುನಾಥ್
ಅಕ್ರಮ ಸಂಬಂದ ದಾಖಲೆ ಕಲೆ ಹಾಕಿ ಆ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಬಿಬಿಎಂಪಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ಮಂಜುನಾಥ್

ದೂರು ಕೊಟ್ಟ ಮಾರನೇ ದಿನವೇ ಮಧು ಹಾಗೂ ಮಂಜುನಾಥ್ ಅವರ ವಿರುದ್ಧ  ದೂರು ದಾಖಲಾಗಿತ್ತು.ಮಧು ಅವರನ್ನು ಎ-1 ಮಾಡಿ ಮಂಜುನಾಥ್ ಅವರನ್ನು ಎ-2 ಮಾಡಲಾಗಿತ್ತು.ಅಕ್ರಮ ಬಯಲಿಗೆಳೆದು ಬಿಬಿಎಂಪಿ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟ ತಪ್ಪಿಸಿ ಎಂದು ದೂರು ಕೊಟ್ಟವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದಂತದ್ದು ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿತ್ತು.

ALSO READ :  BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?

ಇದರ ಬೆನ್ನಲ್ಲೇ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಎನ್ ಆರ್ ರಮೇಶ್ ಅವರು ಅಕ್ರಮ ಖಾತಾ ಹಗರಣಕ್ಕೆ ಸಂಬಂಧಿಸಿ ದಂತೆ ಆರ್ ಆರ್ ನಗರ ಜಂಟಿ ಆಯುಕ್ತ ಅಜಯ್, ಉಪ ಆಯುಕ್ತ ಅಬ್ದುಲ್ ರಬ್ , ಕಂದಾಯಾಧಿಕಾರಿ( ಸಹಾಯಕ ಆಯುಕ್ತ) ಬಸವರಾಜ್ ಮಗಿ ಹಾಗೂ ಸಹ ಕಂದಾಯಾಧಿಕಾರಿ ದೇವರಾಜ್ ವಿರುದ್ದ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರುಇದರ ಬೆನ್ನಲ್ಲೇ ಮಂಜುನಾಥ್ ಅವರು ಕಂದಾ ಯ ವಿಆಭಾಗದ ವಿಶೇಷ ಆಯುಕ್ತ ಮುನಿಷ್ ಮೌದ್ಗಿಲ್ ಅವರನ್ನು ಮಾದ್ಯಮಗಳ ಜತೆ ಭೇಟಿ ಮಾಡಿ ತಮಗಾದ ನೋವು-ಅನ್ಯಾಯ-ದೌರ್ಜನ್ಯವನ್ನು ವಿವರಿಸಿದ್ದರು.

ಅಕ್ರಮ ಖಾತಾ ಹಗರಣ ಸಂಬಂಧ ನಾಲ್ವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಲೋಕಾಯಕ್ತಕ್ಕೆ ಸಲ್ಲಿಸಿದ ದೂರಿನ ಪ್ರತಿ
ಅಕ್ರಮ ಖಾತಾ ಹಗರಣ ಸಂಬಂಧ ನಾಲ್ವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಲೋಕಾಯಕ್ತಕ್ಕೆ ಸಲ್ಲಿಸಿದ ದೂರಿನ ಪ್ರತಿ

ಆ ತಕ್ಷಣಕ್ಕೆ ಕಾರ್ಯಪ್ರವೃತ್ತರಾದ  ಮುನಿಷ್ ಮೌದ್ಗಿಲ್ ಅವರು ವಲಯ ಆಯುಕ್ತರನ್ನು ಕರೆಯಿಸಿ ಮಾಹಿತಿ ತರಿಸಿಕೊಂಡರು.ಅಲ್ಲದೇ ಜಂಟಿ ಆಯುಕ್ತ ಅಜಯ್ ಅವರನ್ನು ಕರೆಯಿಸಿಕೊಂಡು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ.ಉಪ ಆಯುಕ್ತ ರಬ್ ಅವರಂತೂ ಮಾದ್ಯಮಗಳ ಪ್ರಶ್ನೆಗೆ ಕಕ್ಕಾಬಿಕ್ಕಿಯಾದರು.

ಬಿಜೆಪಿ ಮುಖಂಡ ಎನ್ ಆರ್ ರಮೇಶ್
ಬಿಜೆಪಿ ಮುಖಂಡ ಎನ್ ಆರ್ ರಮೇಶ್

ಈ ಎಲ್ಲಾ ಅಕ್ರಮಗಳ ಸಂಬಂಧ ರಚಿಸಲಾಗಿದ್ದ ಸಮಿತಿ ಮುಂದೆ ನಡೆದ ನೈಜ ಸಂಗತಿಗಳನ್ನು ಮಧು ವಿವರಿಸಿ ಅಕ್ರಮಕ್ಕೆ ಸಾಥ್ ಕೊಡುವಂತೆ ತಮ್ಮ ಮೇಲೆ ಮೇಲಾಧಿಕಾರಿಗಳು ತಂದ ಒತ್ತಡ ಹಾಗೂ ತನಗೆ ಒಡ್ಡಲಾದ ಆಮಿಷದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ.ಮೇಲಾಧಿಕಾರಿಗಳ ಆದೇಶ ಹಾಗೂ ಸೂಚನೆ ಮೇರೆಗ ಆರ್ ಆರ್ ನಗರ ಠಾಣೆಗೆ ದೂರು ಕೊಟ್ಟಿದ್ದಾರಂತೆ.ಅವರ ದೂರಿನ ಮೇರೆಗೆ ಇಬ್ಬರು ಅಧಿಕಾರಿಗಳನ್ನು ಅರೆಸ್ಟ್ ಮಾಡಲಾಗಿದೆಯಂತೆ.ದೇವರಾಜ್ ಅವರು ಈಗಾಗಲೇ ಸಸ್ಪೆಂಡ್ ಆಗಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.ಹಗರಣದಲ್ಲಿ ಶಾಮೀಲಾಗಿದ್ದಾರೆನ್ನಲಾಗಿರುವ ಹಾಗೂ ಸಧ್ಯಕ್ಕೆ ಅರೆಸ್ಟ್ ಆಗಿದ್ದಾರೆ್ನ್ನಲಾಗಿರುವ ಅಧಿಕಾರಿ ಅನಾರೋಗ್ಯದ ಸಮಸ್ಯೆ ಮುಂದೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದಾರಂತೆ.

ಬಿಬಿಎಂಪಿ ಮಟ್ಟಿಗೆ ಸಿಕ್ಕಾಪಟ್ಟೆ ಸದ್ದು ಮಾಡಿರುವ ಅಕ್ರಮ ಖಾತಾ ಹಗರಣದಲ್ಲಿ ಸಮರ್ಪಕವಾಗಿ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಆಪಾದನೆಗೆ ತುತ್ತಾಗಿರುವ ಅಜಯ್ ಬಗ್ಗೆಯೂ ಮೇಲಾಧಿಕಾರಿಗಳು ಗರಂ ಆಗಿದ್ದಾರಂತೆ.ಅಕ್ರಮದಲ್ಲಿ ಅವರು ಶಾಮೀಲಾಗಿರುವುದು ದೃಢಪಟ್ಟರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ಕೊಟ್ಟಿದ್ದಾರಂತೆ.ಅದೇನೇ ಆಗಲಿ ಮುನಿಷ್ ಮೌದ್ಗಿಲ್ ಮೇಲ್ಕಂಡ ಪ್ರಕರಣದಲ್ಲಿ  ಯಾವುದೇ ಹಿತಾಸಕ್ತಿಗೆ ಮಣಿಯದೆ,ಯಾವುದೇ ಒತ್ತಡಕ್ಕೆ ಒಳಗಾಗದೆ  ಕಠಿಣಾತೀಕಠಿಣ ಕ್ರಮ ಕೈಗೊಳ್ಳುವ ಮೂಲಕ ಮತ್ತೊಮ್ಮೆ ತಮ್ಮ ನಿಷ್ಟೆ-ದಕ್ಷತೆ ಹಾಗೂ ಪ್ರಾಮಾಣಿಕತೆ ಪ್ರದರ್ಶಿಸಿದ್ದಾರೆ.ಹ್ಯಾಟ್ಸ್ ಆಫ್ ಹಿಮ್.. 

 

 

ಅಕ್ರಮ ಖಾತಾ ಹಗರಣ ಸಂಬಂಧ ನಾಲ್ವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಲೋಕಾಯಕ್ತಕ್ಕೆ ಸಲ್ಲಿಸಿದ ದೂರಿನ ಪ್ರತಿ
ಅಕ್ರಮ ಖಾತಾ ಹಗರಣ ಸಂಬಂಧ ನಾಲ್ವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಲೋಕಾಯಕ್ತಕ್ಕೆ ಸಲ್ಲಿಸಿದ ದೂರಿನ ಪ್ರತಿ  
ಬಿಬಿಎಂಪಿ ನೌಕರ ಮಧು ಹಾಗೂ ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರು
ಬಿಬಿಎಂಪಿ ನೌಕರ ಮಧು ಹಾಗೂ ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರು


Political News

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?

Sahyadri science College alumni meet: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಮಹಾಸಮಾಗಮಕ್ಕೆ ಮುಹೂರ್ತ ಫಿಕ್ಸ್

Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ

Scroll to Top