ಕನ್ನಡದ ವಿವಿಧ ನ್ಯೂಸ್ ಚಾನೆಲ್ ಗಳ 12 ಕ್ಯಾಮೆರಾಮನ್ ಗಳಿಗೆ ನಾಳೆ ಪ್ರಶಸ್ತಿ ಪ್ರಧಾನ
ಬೆಂಗಳೂರು: ಕ್ಯಾಮೆರಾದ ಮುಂದೆ ರಿಪೋರ್ಟರ್ ಗಳನ್ನು ಸುಂದರವಾಗಿ ಆಕರ್ಷಕವಾಗಿ ಎಲ್ಲಕ್ಕಿಂತ ಪರಿಣಾಮಕಾರಿಯಾಗಿ ತೋರಿಸುವಂಥ ನಿರ್ಣಾಯಕ ಹಾಗು ಮಹತ್ವದ ಕೆಲಸ ಮಾಡುವಂಥವರು ನಮ್ಮ ನ್ಯೂಸ್ ಚಾನೆಲ್ ನ ಕ್ಯಾಮೆರಾಮನ್ ಗಳು.ಆದರೆ ದುರಾದೃಷ್ಟಕ್ಕೆ ರಿಪೋರ್ಟರ್ ಗಳನ್ನು ಗುರುತಿಸಿ ಸನ್ಮಾನಿಸುವ ಕೆಲಸ ನಡೆಯುತ್ತಲೇ ಇದೆ.ಆದ್ರೆ ಕ್ಯಾಮೆರಾಮನ್ ಗಳನ್ನು ಗುರುತಿಸುವವರೇ ಇಲ್ಲವಾಗಿದೆ.ಹಾಗಾಗಿ ಅವರಲ್ಲಿ ಪ್ರತಿಭೆ ಇದ್ದರೂ ಅದು ಕಾಡ ಬೆಳದಿಂಗಳಂತೆ ನಿಷ್ಪ್ರಯೋಜಕವಾಗುತ್ತಿದೆ.
ಆದರೆ ನ್ಯೂಸ್ ಚಾನೆಲ್ ಕ್ಯಾಮೆರಾಮನ್ ಗಳಲ್ಲಿರುವ ಅಂತದ್ದೊಂದು ಕೊರಗನ್ನು ನಿವಾರಿಸುವ ಮಹತ್ವದ ಕೆಲಸಕ್ಕೆ ಕೈ ಹಾಕಿದ್ದು ಬಿಬಿಎಂಪಿ ನೌಕರರು-ಅಧಿಕಾರಿಗಳ ಸಂಘ ಹಾಗೂ ಅದರ ರಾಜ್ಯಾಧ್ಯಕ್ಷ ಅಮೃತರಾಜ್.ಕಳೆದ ವರ್ಷದಿಂದಲೇ ಕನ್ನಡ ರಾಜ್ಯೋತ್ಸವದ ವಿಶೇಷ ಸನ್ನಿವೇಶದಲ್ಲಿ ಕ್ಯಾಮೆರಾಮನ್ ಗಳನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ.ಅಂದ್ಹಾಗೆ ಕ್ಯಾಮೆರಾಮನ್ ಗಳಿಗೆ ನೀಡಲಾಗುತ್ತಿರುವ ಪ್ರಶಸ್ತಿ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ.
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಪ್ರಶಸ್ತಿಗೆ ನ್ಯೂಸ್ ಚಾನೆಲ್ ಕ್ಯಾಮೆರಾಮನ್ ಗಳ ವಿಭಾಗದಿಂದ 12 ಕ್ಯಾಮೆರಾಮನ್ ಗಳನ್ನು ಗುರುತಿಸಲಾಗಿದ್ದು ನಾಳೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಂಜೆ 5ಕ್ಕೆ ಅನೇಕ ಗಣ್ಯರ ಸಮ್ಮುಖದಲ್ಲಿ ಕ್ಯಾಮೆರಾಮನ್ ಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ಅಂದ್ಹಾಗೆ ಕಾರ್ಯಕ್ರಮದಲ್ಲಿ ಕ್ಯಾಮೆರಾಮನ್ ಗಳಾದ ಈರಣ್ಣ- ಬಿಟಿವಿ ನ್ಯೂಸ್ ,ಜಿ.ಎಚ್ ಶ್ರಿನಿವಾಸಲು-ನ್ಯೂಸ್ 18 ಕನ್ನಡ ,,ಶ್ರೀನಿವಾಸ್- ರಾಜ್ ನ್ಯೂಸ್, ಮಂಜುನಾಥ್-ರಿಪಬ್ಲಿಕ್ ನ್ಯೂಸ್,ರಘು ಯಜಮಾನ್-ಟಿವಿ 9 ಕನ್ನಡ ನ್ಯೂಸ್ ,ಚಂದ್ರು-ಟಿವಿ-5 ಕನ್ನಡ,ಎಸ್.ಚಂದ್ರಕಾಂತ್- ವಿಸ್ತಾರ ನ್ಯೂಸ್, ಬಿ.ವಿ. ರವಿಚಂದ್ರು- ವಿಸ್ತಾರ ನ್ಯೂಸ್, ವೆಂಕಟೇಶ್- ಸುವರ್ಣ ನ್ಯೂಸ್ , ಆವಿರಾಜ್- ನ್ಯೂಸ್ ಪಸ್ಟ್,ಮುನಿರಾಜ್ ಎಚ್. ಪಬ್ಲಿಕ್ ಟಿವಿ, ಗಂಗಾಧರ- ಪ್ರಜಾ ಟಿವಿ ಅವರನ್ನು ಸನ್ಮಾನಿಸಲಾಗುತ್ತಿದೆ. ಪುನೀತ್ ರಾಜ್ ಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಅವರು ಈ ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾಗುತ್ತಿರುವುದು ವಿಶೇಷ.
ತೆರೆಯ ಹಿಂದೆ ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿರುವ ಪ್ರಾಮಾಣಿಕ ನ್ಯೂಸ್ ಕ್ಯಾಮೆರಾಮನ್ ಮಿತ್ರರಿಗೆ ಹಾಗೂ ಅವರ ಕೆಲಸವನ್ನು ಗುರುತಿಸಿ ಸನ್ಮಾನಿಸುತ್ತಿರುವ ಬಿಬಿಎಂಪಿ ನೌಕರರು-ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಅಮೃತರಾಜ್ ಅವರನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಅಭಿನಂದಿಸುತ್ತದೆ.
ಪುನೀತ್ ರಾಜ್ ಕುಮಾರ್ ಪ್ರಶಸ್ತಿಗೆ ಭಾಜನವಾದ ನ್ಯೂಸ್ ಚಾನೆಲ್ ಕ್ಯಾಮೆರಾಮನ್ ಗಳ ಪಟ್ಟಿ
-ಜಿ.ಎಚ್ ಶ್ರಿನಿವಾಸಲು-ನ್ಯೂಸ್ 18 ಕನ್ನಡ ,
-ಶ್ರೀನಿವಾಸ್- ರಾಜ್ ನ್ಯೂಸ್
-ಮಂಜುನಾಥ್-ರಿಪಬ್ಲಿಕ್ ನ್ಯೂಸ್
-ರಘು ಯಜಮಾನ್-ಟಿವಿ 9 ಕನ್ನಡ ನ್ಯೂಸ್
– ಚಂದ್ರು-ಟಿವಿ-5 ಕನ್ನಡ
– ಎಸ್.ಚಂದ್ರಕಾಂತ್- ವಿಸ್ತಾರ ನ್ಯೂಸ್
– ಬಿ.ವಿ. ರವಿಚಂದ್ರು- ವಿಸ್ತಾರ ನ್ಯೂಸ್
-ವೆಂಕಟೇಶ್- ಸುವರ್ಣ ನ್ಯೂಸ್
– ಆವಿರಾಜ್- ನ್ಯೂಸ್ ಪಸ್ಟ್
– ಮುನಿರಾಜ್ ಎಚ್. ಪಬ್ಲಿಕ್ ಟಿವಿ
-ಗಂಗಾಧರ- ಪ್ರಜಾ ಟಿವಿ
– ಈರಣ್ಣ- ಬಿಟಿವಿ ನ್ಯೂಸ್