advertise here

Search

ನಿರ್ಮಾಣ ಹಂತದ ಅಕ್ರಮ ಕಟ್ಟಡಗಳ ಸರ್ವೆ…1712 ಒತ್ತುವರಿ ಕಟ್ಟಡಗಳಿಗೆ ಕಾದಿದೆ ಡೆಮಾಲಿಷನ್ ಭೀತಿ


 

 

 

 

 

 

 

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸುತ್ತಿರುವವರಿಗೆ ಬಿಬಿಎಂಪಿ ಕೊನೆಯ ವಾರ್ನಿಂಗ್ ನೀಡಿದೆ.ಎಚ್ಚರಿಕೆ ಹೊರತಾಗಿಯೂ ಅಕ್ರಮ ಕಟ್ಟಡ ನಿರ್ಮಿಸುವುದನ್ನು ಮುಂದುವರೆ ಸಿದರೆ ಪರಿಣಾಮ ನೆಟ್ಟಗಿರೊಲ್ಲ ಎನ್ನುವ ಎಚ್ಚರಿಕೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ನೀಡಿದ್ದಾರೆ.ಅಕ್ರಮ ಕಟ್ಟಡಗಳ ಸರ್ವೆಯನ್ನು ಸೋಮವಾರದಿಂದಲೇ ಆರಂಭಿಸಲಾಗುತ್ತಿದ್ದು ಸರ್ವೆ ವೇಳೆ ಕಂಡುಬರುವ ಉಲ್ಲಂಘನೆಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ ಕೆಲಸ ಮಾಡುವುದಾಗಿ ತುಷಾರ ಗಿರಿನಾಥ್ ಸ್ಪಷ್ಟಪಡಿಸಿದ್ದಾರೆ.

ಬಾಬುಸಾಬ್ ಪಾಳ್ಯದ ಕಟ್ಟಡ ದುರಂತ ಬರೋಬ್ಬರಿ ಒಂಬತ್ತು ಅಮಾಯಕ-ನಿಷ್ಪಾಪಿ ಕಾರ್ಮಿಕರ ಜೀವಗಳನ್ನು ಬಲಿತೆಗೆದುಕೊಂಡ ಮೇಲೆ ಬಿಬಿಎಂಪಿ ಗಾಢ ನಿದ್ರೆಯಿಂದ ಎಚ್ಚೆತ್ತುಕೊಂಡಂತಿದೆ.ಡಿಸಿಎಂ ಡಿ.ಕೆ ಶಿವಕುಮಾರ್ ಬಿಬಿಎಂಪಿ ಆಡಳಿತವನ್ನು ಹಿಗ್ಗಾಮುಗ್ಗಾ ಜಾಡಿಸಿದ್ದರಿಂದ ಅಲರ್ಟ್ ಆದಂತಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಅಕ್ರಮ ಕಟ್ಟಡಗಳ ಮಾಲೀಕರ ವಿರುದ್ಧ ಸಮರ ಸಾರಿದಂತೆ ಕಾಣುತ್ತಿದೆ.ಇದರ ಭಾಗವಾಗಿಯೇ ನಿರ್ಮಾಣ ಹಂತದಲ್ಲಿರುವ ಎಲ್ಲಾ ಅಕ್ರಮ ಕಟ್ಟಡಗಳನ್ನು ಧರಾಶಹಿಗೊಳಿಸುವ ಕಠಿಣ ನಿರ್ದಾರಕ್ಕೆ ಬಂದಿದ್ದಾರೆ.ಈ ಹಿನ್ನಲೆಯಲ್ಲಿ ಕಟ್ಟಡಗಳನ್ನು ಪತ್ತೆ ಮಾಡುವ ಕಾರ್ಯಕ್ಕೆ ಸೋಮವಾರದಿಂದಲೇ ಚಾಲನೆ ನೀಡೊಕ್ಕೆ ನಿರ್ದರಿಸಿರುವುದಾಗಿ ಮಾದ್ಯಮಗಳಿಗೆ ತಿಳಿಸಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಮೊದಲು ನಿಲ್ಲಿಸುತ್ತೇವೆ.ಬಿ ಖಾತಾದ ಕಟ್ಟಡಗಳಿಗೂ ಇದು ಅನ್ವಯವಾಗಲಿದೆ.ಯಾವುದೇ ಮುಲಾಜಿಲ್ಲದೆ ಡೆಮಾಲಿಷನ್ ಆರ್ಡರ್ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ವೆ ಕಾರ್ಯಕ್ಕೆ 70 ಇದಕ್ಕಾಗಿ ಕಂದಾಯ ವಿಭಾಗದ 70 ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ.ಅವರು ಅಕ್ರಮ ಕಟ್ಟಡಗಳ ಫೋಟೋಗಳನ್ನು ತೆಗೆದು ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಿದ್ದಾರೆ.

ALSO READ :  LIFE STORY OF ACTRESS DR.LEELAVATHI... "ಕಿತ್ತು ತಿನ್ನುವ ಬಡತನದಿಂದ ಅಭಿಜಾತ ಕಲಾವಿದೆವರೆಗೂ": ಯಾವ ಹೋರಾಟಕ್ಕೂ ಕಡಿಮೆ ಇರ್ಲಿಲ್ಲ ಲೀಲಾವತಿ "ಜೀವನಗಾಥೆ"

ರಾಜಧಾನಿಯಲ್ಲಿವೆ 700ಕ್ಕೂ ಹೆಚ್ಚು ಶಿಥಿಲ ಕಟ್ಟಡಗಳು: ಧರಾಶಹಿ ಹಂತದಲ್ಲಿ  ಸಾಕಷ್ಟು  ಶಿಥಿಲ ಕಟ್ಟಡಗಳು ಇರುವುದು ಗೊತ್ತಾಗಿದೆ.ಬಿಬಿಎಂಪಿನೇ ಸರ್ವೆ ಮಾಡಿದ ಪ್ರಕಾರ  ರಾಜಧಾನಿ ಬೆಂಗಳೂರಲ್ಲಿ 700 ಶಿಥಿಲಾವಸ್ಥೆ ಕಟ್ಟಡಗಳಿವೆ.ಅವುಗಳ ತೆರವಿಗೂ ಕಾರ್ಯಯೋಜನೆ ರೂಪಿಸಲಾಗಿದೆ.ಸಾಕಷ್ಟು ಕಟ್ಟಡಗಳು ಸರ್ಕಾರಿ ಸ್ವಾಮ್ಯದ್ದಾಗಿದ್ದು ಅವುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಸ್ಥಳಾಂತರ ಮಾಡಿ ಕಟ್ಟಡ ಗಳನ್ನು ಧರಾಶಹಿಗೊಳಿಸಲು ನಿರ್ದರಿಸಲಾಗಿದೆ.ಬಿಬಿಎಂಪಿ ಶಾಲೆಗಳು ಕೂಡ ಶಿಥಿಲಗೊಂಡಿದ್ದು ಅವುಗಳ ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ

1712 ಒತ್ತುವರಿ ಕಟ್ಟಡಗಳಿಗೆ ಕಾದಿದೆ ಗ್ರಹಚಾರ: ಕೆರೆ-ಕಾಲುವೆ- ಒತ್ತುವರಿ ಸಂಬಂಧ ಕಂದಾಯ ವಿಭಾಗದಿಂದ ಸರ್ವೆ ಮಾಡಲಾಗಿದೆ.ಈ ಪೈಕಿ  1712 ಕಟ್ಟಡಗಳನ್ನು ಮಾರ್ಕ್ ಮಾಡಲಾಗಿದೆ. ಆ ಪೈಕಿ 200 ರಷ್ಟು ಕಟ್ಟಡಗಳ ಒತ್ತುವರಿ ತೆರವು ಮಾಡಿದ್ದೇವೆ.ಉಳಿದ 1500 ಕಟ್ಟಡಗಳಿಗೆ ವಿಶೇಷ ಜಿಲ್ಲಾಧಿಕಾರಿಗಳು ನೊಟೀಸ್ ಜಾರಿ ಮಾಡಲಿದ್ದಾರೆ.ಒತ್ತುವರಿ ಮಾಡಲ್ಪಟ್ಟ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಗುವು ದು ಎಂದು ಹೇಳಿದ್ದಾರೆ.


Political News

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

Scroll to Top