advertise here

Search

Deepavali bumper: KSRTC ಗೆ 18 ಕೋಟಿ ಗಳಿಕೆ, ಒಂದೇ ದಿನ ಸಾರ್ವಕಾಲಿಕ ದಾಖಲೆಯ ಟಿಕೆಟ್ ಬುಕ್ಕಿಂಗ್


ಬೆಂಗಳೂರು: ನಷ್ಟದ ಹೊರೆಗೆ ಸಿಲುಕಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KARNATAKA STATE ROAD TRANSPORT CORPORATION) ಗೆ ದೀಪಾವಳಿ ಹಬ್ಬ(DEEPAWALI FESTIAVL) ಸ್ವಲ್ಪ ಮಟ್ಟದ ಚೇತರಿಕೆ ನೀಡಿದೆ.ಇತ್ತೀಚಿನ ವರ್ಷಗಳಲ್ಲಿ ದಾಖಲೆ ಪ್ರಮಾಣದ ಎನ್ನಬಹುದಾದ(ಆದರೆ ಸಾರ್ವಕಾಲಿಕ ದಾಖಲೆಯಲ್ಲ) ಗಳಿಕೆಯನ್ನು ಕೆಎಸ್ ಆರ್ ಟಿಸಿ ಮಾಡಿದೆ. ಗಳಿಕೆಯಲ್ಲಷ್ಟೇ ಅಲ್ಲ, ಪ್ರಯಾಣಿಕರ ಸಂಖ್ಯೆ ಮತ್ತು ಅವತಾರ್ ನಲ್ಲಿ ಟಿಕೆಟ್ ಬುಕ್ಕಿಂಗ್ ನಲ್ಲೂ ಹೊಸ ವಿಕ್ರಮವನ್ನೇ ಸಾಧಿಸಿದೆ.

ದೀಪಾವಳಿ ಹಬ್ಬದಾಚರಣೆಯ ಹಿಂದೆ ಮುಂದಿನ ದಿನಗಳಲ್ಲಿ ಸಹಜವಾಗಿಯೇ ಸಾಲು ಸಾಲು ರಜೆಗಳು ಬರುವುದರಿಂದ ಪರ ಊರುಗಳಿಗೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ.ಆ ಹೋಲಿಕೆಯಲ್ಲಿ ಈ ಬಾರಿಯು ಅಂದರೆ ಕಳೆದ ಬುಧವಾರದಿಂದ ಸೋಮವಾರದವರೆಗಿನ ಬಸ್ ಸಂಚಾರದ ಅಂಕಿಅಂಶಗಳು ಹಾಗೂ ಗಳಿಕೆಯ ಅಂಶಗಳನ್ನು ಲೆಕ್ಕ ಹಾಕಿದಾಗ ಕೆಎಸ್ ಆರ್ ಟಿಸಿ ಮೂಲಗಳೇ ಹೇಳುವಂತೆ ಹಬ್ಬದ ದಿನಗಳಲ್ಲಾದ ಒಟ್ಟು ಗಳಿಕೆಯನ್ನು 18.68( EIGHTEEN CRORES SIXTY EIGHT LACKS) ಕೋಟಿ ಎಂದು ಹೇಳಿವೆ.ಇದು ಕೇವಲ ಸಮಾಧಾನ ಪಡುವುದಷ್ಟೇ ಅಲ್ಲ ಹೆಮ್ಮೆ ಪಡುವಂತ ಸಂಗತಿ.ಏಕೆಂದರೆ ಸಾರಿಗೆ ಜಾಲದ ವ್ಯವಸ್ಥೆ ಎಷ್ಟೇ ಬೆಳೆದಿದ್ದರೂ ಇವತ್ತಿಗೂ ಜನ ಕೆಎಸ್ ಆರ್ ಟಿಸಿಯಷ್ಟು ವಿಶ್ವಾಸಾರ್ಹ ಹಾಗು ಆರಾಮದಾಯಕ ವ್ಯವಸ್ಥೆ ಮತ್ತೊಂದಿಲ್ಲ ಎನ್ನುವ ಭಾವನೆ ಕಳೆದುಕೊಂಡಿಲ್ಲ ಎನ್ನುವುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ.

KSRTC ಅಧ್ಯಕ್ಷ ಗುಬ್ಬಿ ಶ್ರೀನಿವಾಸ್
KSRTC ಅಧ್ಯಕ್ಷ ಗುಬ್ಬಿ ಶ್ರೀನಿವಾಸ್
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಕಳೆದ ಬುಧವಾರದಿಂದಲೇ ಜನ ಬೆಂಗಳೂರನ್ನು ಹಬ್ಬದ ಕಾರಣಕ್ಕೆ ಬಿಡಲು ಆರಂಭಿಸಿದ್ದರು.ಅಲ್ಲಿಂದ ಬೆಂಗಳೂರಿಗೆ ವಾಪಸ್ಸಾದ ಸೋಮವಾರದವರೆಗಿನ ಒಟ್ಟಾರೆ ಅಂಕಿಅಂಶಗಳನ್ನು ಕ್ರೋಢೀಕರಿಸಿದರೆ ಈ ಹಬ್ಬದ ದಿನಗಳಲ್ಲಿ ಕೆಎಸ್ ಆರ್ ಟಿಸಿಗೆ ಒಟ್ಟು 18.68 ಕೋಟಿಯಷ್ಟು ಗಳಿಕೆಯಾಗಿದೆ.ಅಂದ್ಹಾಗೆ ಇದಿಷ್ಟು ಲಾಭವಲ್ಲ ಎನ್ನುವುದನ್ನೂ ಗಮನಿಸಬೇಕು.ಆದರೆ ಲಾಭದ ವಿಷಯ ಬಂದರೆ ಕೆಎಸ್ ಆರ್ ಟಿಸಿ ನಿಗಮಕ್ಕೆ ಬರೋಬ್ಬರಿ 5 ಕೋಟಿ ಆದಾಯ ಬಂದಿರಬಹುದೆಂದು ಹೇಳಲಾಗುತ್ತಿದೆ.ಇದು ಕೂಡ ಹೆಗ್ಗಳಿಕೆಯ ಸಂಗತಿ.

ALSO READ :  ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ

ಹಬ್ಬದ ಹಿನ್ನಲೆಯಲ್ಲಿ ಕೆಎಸ್ ಆರ್ ಟಿಸಿ ಒಟ್ಟು 2 ಸಾವಿರ ಬಸ್ ಗಳನ್ನು ವ್ಯವಸ್ಥೆ ಮಾಡಿತ್ತು.ಪ್ರಯಾಣಿಕರಿಂದ(PASSENGERS) ತುಂಬಿ ತುಳುಕುತ್ತಿದ್ದ ಬಸ್ ಗಳು ಎಲ್ಲೆಡೆ ಕಾಣಸಿಗುತ್ತಿತ್ತು.ಕೆಎಸ್ ಆರ್ ಟಿಸಿ ಬಸ್ ಗಳಿಲ್ಲದೆ ಬಿಎಂಟಿಸಿ(BENGALURU METROPOLITAN TRANSPORT CORPORATION) ಬಸ್ ಗಳನ್ನು ಕೂಡ ಬಳಸಿಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.ಗರಿಷ್ಟ ಪ್ರಮಾಣದಲ್ಲಿ ಜನರು ಕೂಡ ಈ ಬಾರಿ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಸಂಚರಿಸಿರುವುದು ಕೂಡ ಸ್ಪಷ್ಟವಾಗಿದೆ ಎಂದು ಕೆಎಸ್ ಆರ್ ಟಿಸಿ ಮೂಲಗಳು ತಿಳಿಸಿವೆ.

ಕೇವಲ ಗಳಿಕೆಯಲ್ಲಷ್ಟೆ ಅಲ್ಲ, ಟಿಕೆಟ್ ಬುಕ್ಕಿಂಗ್ ನಲ್ಲೂ ಅಪ್ರತಿಮ ದಾಖಲೆಯೊಂದನ್ನು ಕೆಎಸ್ ಆರ್ ಟಿಸಿ ಬರೆದಿದೆ. ಅವತಾರ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಆರಂಭವಾದ ಇಷ್ಟು ವರ್ಷಗಳಲ್ಲಿ ಒಂದೇ ದಿನ ಇಷ್ಟೊಂದು ಪ್ರಮಾಣದ ಟಿಕೆಟ್ ಗಳು ಬುಕ್ಕಿಂಗ್ ಆಗಿರಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಟಿಕೆಟ್ ಬುಕ್ ಆಗಿರುವುದು ದಾಖಲೆಯೇ ಸರಿ.ಕೆಎಸ್ ಆರ್ ಟಿಸಿ ಮೂಲಗಳ ಪ್ರಕಾರ ನವೆಂಬರ್‌ 3 ರಂದು ಅವತಾರ್(AWATAR ADVANCE TICKET BOOKING)  ಅಡಿಯಲ್ಲಿ 85462 ಟಿಕೆಟ್ ಬುಕ್ಕಿಂಗ್ ಆಗಿವೆಯಂತೆ.ಕೆಎಸ್ ಆರ್ ಟಿಸಿ ಇತಿಹಾಸದಲ್ಲಿ ಒಂದೇ ದಿನ ಇಷ್ಟೊಂದು ಟಿಕೆಟ್ ಗಳು ಬುಕ್ಕಿಂಗ್ ಆದ ಇತಿಹಾಸವೇ ಇರಲಿಲ್ಲವಂತೆ.ಇದು ಕೂಡ ಒಂದು ಸಾರ್ವಕಾಲಿಕ ದಾಖಲೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಶಕ್ತಿ ಯೋಜನೆ (SHAKTHI SCHEME)ಅನುಷ್ಟಾನದ ಪರಿಣಾಮವಾಗಿ ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿರುವ ಕೆಎಸ್ ಆರ್ ಟಿಸಿಗೆ ದೀಪಾವಳಿಯ ಗಳಿಕೆ ಒಂದಷ್ಟು ಪ್ರಮಾಣದಲ್ಲಿ ನಗುವಿನ ಆಕ್ಸಿಜನ್ ನೀಡಿರುವುದಂತೂ ಸತ್ಯ.ಕೇವಲ ಕೆಎಸ್ ಆರ್ ಟಿಸಿಯಷ್ಟೇ ಅಲ್ಲ ಬಿಎಂಟಿಸಿ ಸೇರಿದಂತೆ ಇತರೆ ಮೂರು ನಿಗಮಗಳು ಕೂಡ ಹೆಚ್ಚಿನ ಗಳಿಕೆ ಮಾಡುವುದರ ಮೂಲಕ ನಗುವಿನ ಮಂದಹಾಸವನ್ನೇ ಬೀರಿದೆ.


Political News

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

Scroll to Top